ಮೊಹರೆ ಹನುಮಂತರಾವ್
ಮೊಹರೆ ಹನುಮಂತರಾಯರು ೧೮೯೨ ರ ನವೆಂಬರ ೧೨ರಂದು ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಜನಿಸಿದರು. ವಿಜಾಪುರದಲ್ಲಿಯೇ ಶಿಕ್ಷಣ ಪೂರೈಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೇಲುವಾಸ ಅನುಭವಿಸಿದರು. ವಿಜಾಪುರದಲ್ಲಿ ಪ್ರಕಟವಾಗುತ್ತಿದ್ದ "ಕರ್ನಾಟಕ ವೈಭವ" ವಾರಪತ್ರಿಕೆಯ ಉಪಸಂಪಾದಕ ಹಾಗು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬಳಿಕ, ೧೯೩೪ರಲ್ಲಿ , ಆಗ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಹಾಗು ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.ಕರ್ಣಾಟಕ ಸರ್ಕಾರವು ಮೊಹರೆ ಹನುಮನ್ಥರಾಯ ಪ್ರಶಸ್ಥಿಯನ್ನು ೨೦೧೨-೨೦೧೩ ಸಾಲಿನಲ್ಲಿ ಘೋಷಿಸಿದರು. ಕೆಲ ಕಾಲಾನಂತರ ಕರ್ಮವೀರ ವಾರಪತ್ರಿಕೆಯೂ ಸಹ ಪ್ರಾರಂಭವಾಯಿತು.೧೯೫೬ ಸಪ್ಟಂಬರದಲ್ಲಿ ಕನ್ನಡದ ಪ್ರಥಮ ಡೈಜೆಸ್ಟ ಕಸ್ತೂರಿ ಮಾಸಿಕವನ್ನು ಲೋಕಶಿಕ್ಷಣ ಟ್ರಸ್ಟ ಪರವಾಗಿ ಪ್ರಾರಂಭಿಸಿದರು.೧೯೫೮ರಲ್ಲಿ ಮೊಹರೆ ಹನುಮಂತರಾಯರು ನಿವೃತ್ತರಾದರು.
ಮೊಹರೆ ಹನುಮಂತರಾಯರು ೧೯೬೦ ಜುಲೈ ೨೭ರಂದು ನಿಧನರಾದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಮೋಹರೆ ಅವರು
ಮೊಹರೆ ಅವರು ಅಸ್ಪೃಶ್ಯತೆ ಯನ್ನು ವಿರೋಧಿಸಿದರು, ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದರು ದೇಶ ಸೇವಕರಾದ ಮೊಹರೆ ಹನುಮಂತರಯರು ಪತ್ರಿಕಾ ಜಗತ್ತಿಗೊಂದು ಬೆಳಕು