ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972
ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972 – ಇದು ಮೈಸೂರು ರಾಜ್ಯದ ಐದನೆಯ ವಿಧಾನಸಭೆಗೆ ಚುನಾವಣೆಗಳು (ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಮರುಹೆಸರಿಸಲಾಯಿತು). 1969ರ ಕಾಂಗ್ರೆಸ್ ವಿಭಜನೆಯ ನಂತರದ ರಾಜ್ಯದ ಮೊದಲ ವಿಧಾನಸಭೆ ಚುನಾವಣೆ. ಈ ವಿಭಜನೆಗೂ ತುಸು ಮುಂಚಿನಿಂದ (29 ಮೇ 1968ರಿಂದ) ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ರು ಕಾಂಗ್ರೆಸ್ (ಒ) ಅಥವಾ ಸಂಸ್ಥಾ ಕಾಂಗ್ರೆಸ್ ಸೇರಿದರೆ ಡಿ. ದೇವರಾಜ ಅರಸ್‌ರನ್ನೂ ಒಳಗೊಂಡು ಇತರರು ಇಂದಿರಾ ಗಾಂಧಿ ಬಣದ ಕಾಂಗ್ರೆಸ್‌ಗೆ ಸೇರಿದರು. ವಿಭಜನೆಯ ನಂತರ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂದಿರಾ ಬಣ ಗೆಲುವು ಪಡೆಯಿತು ಮತ್ತು ದೇವರಾಜ ಅರಸ್ ಮುಖ್ಯಮಂತ್ರಿಯಾದರು. ವಿಧಾನಸಭೆಯು 24 ಮಾರ್ಚ್ 1972 ರಿಂದ 8 ಜೂನ್ 31 ಡಿಸೆಂಬರ್ 1977ರ ವರೆಗೂ ಆಸ್ತಿತ್ವದಲ್ಲಿದ್ದು ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ಕಾಂಗ್ರೆಸ್‌ನ ಕೆ. ಎಸ್. ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು.
1967← | → 1978 | |
216 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ | ||
ಬಹುಮತ ಪಡೆದ ಪಕ್ಷ | ಪ್ರಮುಖ ವಿರೋಧ ಪಕ್ಷ | |
ನಾಯಕ | ಡಿ. ದೇವರಾಜ ಅರಸ್ | |
ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) | ಕಾಂಗ್ರೆಸ್ (ಒ) |
ಈಗ ಗೆದ್ದ ಸ್ಥಾನಗಳು | 165 | 24 |
ಹಿಂದಿನ ಮುಖ್ಯಮಂತ್ರಿ | ಚುನಾಯಿತ ಮುಖ್ಯಮಂತ್ರಿ | |
ವೀರೇಂದ್ರ ಪಾಟೀಲ್ ಕಾಂಗ್ರೆಸ್ (ಒ)* |
ಡಿ. ದೇವರಾಜ ಅರಸ್ ಕಾಂಗ್ರೆಸ್* | |
* ಎಲೆಕ್ಶನ್ ಕಮಿಶನ್ ಬಳಸಿದ ಹೆಸರು |
ಪಲಿತಾಂಶ
ಬದಲಾಯಿಸಿಪಕ್ಷಗಳು | ಸ್ಪರ್ದಿಸಿದ ಸ್ಥಾನಗಳು |
ಗೆಲುವು | ಠೇವಣಿ ನಷ್ಟ | ಒಟ್ಟಾರೆ ಮತಗಳು | ಶೇಕಡವಾರು ಮತಗಳು |
---|---|---|---|---|---|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 212 | 165 | 0 | 46,98,824 | 52.17 |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಒ) | 176 | 24 | 32 | 23,61,308 | 26.22 |
ಸಂಯುಕ್ತ ಸಮಾಜವಾದಿ ಪಕ್ಷ | 29 | 3 | 19 | 1,52,556 | 1.69 |
ಭಾರತೀಯ ಕಮ್ಯುನಿಷ್ಟ್ ಪಕ್ಷ | 4 | 3 | 0 | 88,978 | 0.99 |
ಜನತಾ ಪಕ್ಷ | 2 | 1 | 0 | 14,390 | 0.16 |
ಭಾರತೀಯ ಜನ ಸಂಘ | 102 | 0 | 80 | 3,87,498 | 4.30 |
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) | 17 | 0 | 13 | 92,508 | 1.03 |
ಇತರ ಪಕ್ಷಗಳು | 28 | 0 | 26 | 1,17,553 | 0.93 |
ಪಕ್ಷೇತರರು | 250 | 20 | 189 | 11,59,383 | 12.87 |
ಮೊತ್ತ | 820 | 216 | 359 | 90,07,006 | 100.00 |
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ. |
ಆಧಾರಗಳು
ಬದಲಾಯಿಸಿ- Karnataka Legislative Assembly election, 1978 Retrieved on 2016-12-03
- Karnataka Legislative Assembly Retrieved on 2016-12-03
ಉಲ್ಲೇಖ
ಬದಲಾಯಿಸಿ- ↑ STATISTICAL REPORT ON GENERAL ELECTION, 1972 TO THE LEGISLATIVE ASSEMBLY OF MYSORE ELECTION Archived 2016-10-19 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 12, Retrieved on 2016-12-02