ಮೈಸೂರು ಮಂಜುನಾಥ್ ಭಾರತ ದೇಶದ ಪ್ರಖ್ಯಾತ ಶಾಸ್ತ್ರೀಯ ವಯೊಲಿನ್ ವಾದಕರು ಹಾಗು ಮೈಸೂರು ಸಹೋದರರ ಒಬ್ಬರು.

ನೆದೆರ್ಲ್ಯಾಂಡ್ಸ್ನಲ್ಲಿ ನುಡಿಸುತ್ತಿರುವ ಮಂಜುನಾಥ್

ಮೈಸೂರಿನಲ್ಲಿ ಜನಿಸಿ ತಮ್ಮ ತಂದೆ ಪ್ರೊ.ಮಹದೇವಪ್ಪರವರ ಬಳಿ ವಯೊಲಿನ್ ವಾದನವನ್ನು ಕಲಿತರು. ೮ ವರ್ಷದವರಾಗಿದ್ದಾಗಲೇ ಮಂಜುನಾಥರವರು ತಮ್ಮ ಮೊದಲ ಕಛೇರಿಯನ್ನು ಕೊಟ್ಟರು. ಇಡೀ ವಿಶ್ವದಲ್ಲಿ ಖ್ಯಾತಿಯನ್ನುಪಡೆದರು. ರಾಯಲ್ ಮ್ಯೂಸಿಕ್ ಹಾಲ್ ಇಂದ ಸಿಡ್ನೀ ಒಪೆರಾ ಹೌಸ್, ಶಿಕಾಗೊನ ವರ್ಲ್ದ್ ಮೂಸಿಕ್ ಫ಼ೆಸ್ಟಿವಲ್ ನಿಂದ ಸಿಂಗಾಪುರ್ ನ ಎಸ್ಪ್ಲನೆಡ್ ಥಿಯೇಟರ್, ಮೆಲ್ಬೋರ್ನ್ನಿನ ಫ಼ೆಡರೇಶನ್ ಸ್ಕೇರ್, ಆಮೇರಿಕಾದ ಸ್ಯಾಂಟಾ ಫ಼ೆ ಮ್ಯೂಸಿಕ್ ಫ಼ೆಸ್ಟಿವಲ್ ನಿಂದ ಆರೆಗಾನ್ ನ ಕಾಮನ್ ಥ್ರೆಡ್ ಫ಼ೆಸ್ಟಿವಲ್ಹೋವರೆಗೆ ಭಾರತೀಯ ಸಂಗಿತ ತೆಗೆದು ಕೊಂಡು ಹೋದ ಮಹಾನ್ ಸಂಗೀತಗಾರರು ಇವರು. ಭಾರತ ರತ್ನ ಪಂಡಿತ್ ರವಿಶಂಕರ್ ಅವರಿಂದಲೇ " ಮ್ಯೆಸೂರಿನ ಸಂಗೀತ ರಾಜಕುಮಾರ' ಎಂದು ಹೊಗಳಿಸಿಕೊಂಡ ಅದ್ಭುತ ವಯೊಲಿನ್ ವಾದಕ ! ವಿಶ್ವದ ಅಸಂಖ್ಯಾತ ಪ್ರತಿಷ್ಟಿತ ವೇದಿಕೆಗಳಲ್ಲಿ, ಹೆಸರಾಂತ ಸಂಗೀತ ಸಮ್ಮೆಳನ ಗಳಲ್ಲಿ,ಸಂಗೀತ ಸಮಾರೊಹ್ ಗಳಲ್ಲಿ ಹಾಗೂ ಪ್ರಸಿದ್ದ ವಿಶ್ವ ವಿದ್ಯಾನಿಲಯ ಗಳಲ್ಲಿ ತಮ್ಮ ವಯೊಲಿನ್ ವಾದನ ದಿಂದ ಲಕ್ಶಾಂತರ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿದ ಅಸಮಾನ್ಯ ವಿದ್ವಾಂಸ !

ಪಾಂಡಿತ್ಯ

ಬದಲಾಯಿಸಿ

ಮಂಜುನಾಥರವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಗೀತದ ವಿಷಯದಲ್ಲಿ ಪಿಎಚ್.ಡಿಯನ್ನು ಪಡೆದರು.ಮೊದಲನೇ ಸ್ಥಾನದ ಜತೆ ನಾಲ್ಕು ಚಿನ್ನದ ಪದಕಗಳನ್ನು ಪಡೆದರು.ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿದ್ದಾರೆ. ಪಂಡಿತ್ ವಿಶ್ವಮೋಹನ ಭಟ್, ರೋನು ಮಜೂಂದಾರ್, ತೇಜೇಂದ್ರ ಮಜೂಂದಾರ್, ಬಾಲಮುರಳಿಕೃಷ್ಣರವರ ಜತೆ ನಡೆಸಿದ ಜುಗಲ್ಬಂದಿಗಳು ವಿಶ್ವಖ್ಯಾತಿಯನ್ನು ಪಡೆದಿವೆ. ಅಣ್ಣ ಮೈಸೂರು ನಾಗರಾಜ್ ರೊಂದಿಗೆ ಕೂಡಿ ಹಲವಾರು ಬಾರಿ ವಿಶ್ವ ಪರ್ಯಟನೆ ಮಾಡಿ, ಜಂಟಿಯಾಗಿ ಅಲ್ಲದೆ, ಇತರ ಜಗತ್ಪ್ರಸಿದ್ಧ ಸಂಗೀತಗಾರರೊಂದಿಗೆ (ಭಾರತೀಯ ಮತ್ತು ವಿದೇಶಿ), ಸಂಗೀತ ಕಚೇರಿ ಗಳನ್ನು ನೀಡಿದ್ದಾರೆ. ಉತ್ತರಾದಿ-ಮತ್ತು ದಕ್ಷಿಣಾದಿ ಜುಗಲ್ ಬಂದಿಗಳಲ್ಲಿ ಭಾಗವಹಿಸಿದ್ದಾರೆ. ಮೇಲೆ ತಿಳಿಸಿದಂತೆ ತಮ್ಮ ಎಳೆಯ ವಯಸ್ಸಿನಿಂದ ಕಛೇರಿಗಳನ್ನು ನಡೆಸಿಕೊಡುತ್ತಿರುವುದರಿಂದ ಇವರು ನಡೆಸಿಕೊಟ್ಟ ಕಾರ್ಯಕ್ರಮಗಳು ಸಹಸ್ರಾರು. ಅವುಗಳಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ವಿಶೇಷವಾಗಿ ಹೆಸರಿಸಬಹುದು. ರಾಯಲ್ ಆಲ್ಬರ್ಟ್ ಹಾಲ್, ಲಂಡನ್

  • ಕಾಮನ್ ಥ್ರೆಡ್ ಫೆಸ್ಟಿವಲ್, ಓರೆಗಾನ್, ಯು ಯಸ್ ಏ
  • ಆಲ್ ಯುರೋಪಿಯನ್ ಕಲ್ಚರಲ್ ಫೆಸ್ಟಿವಲ್, ಯುಕೆ ಸಿಡ್ನಿ ಒಪೆರಾ ಹೌಸ್, ಆಸ್ಟ್ರೇಲಿಯಾ ಫೆಸ್ಟಿವಲ್ ಆಫ್ ಇಂಡಿಯಾ ಲಂಡನ್, ಯುಕೆ ರೋಯಲ್ ಛಾರಿಟಿ ಕಾನ್ಸರ್ಟ್, ಕೌಲಾಲಂಪುರ್ (ಮಲೇಷಿಯಾದ ರಾಜರೆದುರು) ಫೇಡರೇಶನ್ ಸ್ಕ್ವೇರ್, ಮೆಲ್ಬರ್ನ್ ನಮೀಬಿಯಾದ ಅಧ್ಯಕ್ಷ ಡಾ| ಸ್ಯಾಂ ನುಜಾಮೋ ರಿಗಾಗಿ ವಿಶೇಷ ಕಾರ್ಯಕ್ರಮ ಮತ್ತು ಈ ಕೆಳಗಿನ ಕೇಂದ್ರಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು

    • ಪುಟ್ರಾ ವರ್ಲ್ಡ್ ಟ್ರೇಡ್ ಸೆಂಟರ್, ಕೌಲಾಲಂಪುರ್
    • ಥಿಯೇಟರ್ ಡ ಲ ವಿಲ್ಲಾ, ಪ್ಯಾರಿಸ್ ಶೈಕ್ಷಣಿಕ ತರಬೇತಿ ಮತ್ತು ಕಛೇರಿಗಳು, ಡೆಲಾವೇರ್ ಯುನಿವರ್ಸಿಟಿ ಯುನಿವರ್ಸಿಟಿ ಆಫ್ ವೆಲ್ಸಿಯಾನ್ ಯುನಿವರ್ಸಿಟಿ ಆಫ್ ಅಯೋವಾ ಯುನಿವರ್ಸಿಟಿ ಆಫ್ ಶಿಕಾಗೋ ಯುನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್ ಯುನಿವರ್ಸಿಟಿ ಆಫ್ ಒಸಾಕಾ ಯುನಿವರ್ಸಿಟಿ ಆಫ್ ನಾರ್ಥ್ ಕೆರೋಲಿನಾ
    • ಟೆಕ್ಸಾಸ್ ಎ & ಎಮ್ ಯುನಿವರ್ಸಿಟಿ
    • ಕಛೇರಿ ನೀಡಿರುವ ದೇಶಗಳು

      ಬದಲಾಯಿಸಿ
    1. ಭಾರತ,
    2. ಅಮೆರಿಕಾ,
    3. ಕೆನಡಾ,
    4. ಇಂಗ್ಲೆಂಡ್,
    5. ಫ್ರಾನ್ಸ್,
    6. ಜಪಾನ್,
    7. ಜರ್ಮನಿ,
    8. ಆಸ್ಟ್ರಿಯ,
    9. ಹಾಂಗ್ ಕಾಂಗ್,
    10. ಸಿಂಗಾಪುರ,
    11. ಮಲೇಶಿಯ,
    12. ಫಿಲಿಫೀನ್ಸ್,
    13. ಸ್ವಿಟ್ಜರ್ಲ್ಯಾಂಡ್,
    14. ಸ್ಲೊವೇನಿಯ,
    15. ಆಸ್ಟ್ರೇಲಿಯ,
    16. ನೂಜ಼ಿಲಾಂಡ್ ,
    17. ರಷ್ಯಾ,
    18. ಅರಬ್ ದೇಶಗಳು ಮತ್ತು ಇತರ ದೇಶಗಳು.

    ಪ್ರಶಸ್ತಿ ಪುರಸ್ಕಾರಗಳು

    ಬದಲಾಯಿಸಿ

    ಚಿಕ್ಕಂದಿನಿಂದಲು ಪ್ರಶಸ್ತಿಗಳನ್ನು ಪಡೆದರು.

    1. ರಾಜ್ಯೋತ್ಸವ ಪ್ರಶಸ್ತಿಯನ್ನು ಅತೀ ಚಿಕ್ಕವರಾದಾವರಲ್ಲಿ ಒಬ್ಬರಾಗಿ ಸ್ವೀಕರಿಸಿದರು.
    2. ಆರ್ಯಭಟ್ಟ ಪ್ರಶಸ್ತಿ,
    3. ಸಂಗೀತ ಸಾಮ್ರಾಟ್,
    4. ಸಂಗೀತ ರತ್ನ,
    5. ಸಂಗೀತ ವಿದ್ವಾನ್ಮಣಿ,
    6. ಗಾನವಾರಿಧಿ,
    7. ತಂತಿವಾದ್ಯ
    8. ಶಿರೋಮಣಿ,
    9. ಚೌಡಯ್ಯ
    10. ನ್ಯಾಷಿನಲ್ ಪ್ರಶಸ್ತಿ
    11. ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನರು ಇವರಾಗಿದ್ದಾರೆ. ಹೀಗೆಯೇ ಪುರಸ್ಕಾರಗಳು ಇವರನ್ನು ಹುಡುಕಿ ಬಂದಿವೆ.