ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್

ಚುನಾವಣೆ ಶಾಯಿ ತಯಾರಕ ಕಂಪನಿ

ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಎಂಬುದು ಮೈಸೂರಿನಲ್ಲಿರುವ ಒಂದು ಕಂಪನಿ. ಚುನಾನಣೆಗಳಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿಯನ್ನು ಉತ್ಪಾದಿಸುವ ಭಾರತದ ಏಕೈಕ ಕಂಪನಿ. [] [] []

ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ (MPVL)
ಸ್ಥಾಪಕರುಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್
ಸ್ಥಾಪನೆ1937
ಗುರಿಭಾರತ ಮತ್ತು ಕೆಲವು ವಿದೇಶಿ ರಾಷ್ಟ್ರಗಳಲ್ಲಿ ಚುನಾವಣೆಗಾಗಿ ಬಳಸಲಾಗುವ ಅಳಿಸಲಾಗದ ಶಾಯಿ ತಯಾರಿಕೆ
ಒಡೆಯಕರ್ನಾಟಕ ಸರ್ಕಾರ
ಮೂಲ ಹೆಸರುಮೈಸೂರು ಲ್ಯಾಕ್ ಮತ್ತು ಪೇಂಟ್ಸ್ ಲಿಮಿಟೆಡ್
ಸ್ಥಳಮೈಸೂರು, ಕರ್ನಾಟಕ,  India
ಜಾಲತಾಣwww.mysorepaints.com
ಕಂಪನಿ ತಯಾರಿಸುವ ಇತರ ಉತ್ಪನ್ನಗಳು:

ಸಿಂಥಟಿಕ್ ಎನಾಮೆಲ್, ಪಾಲಿಯೂರಿಥೀನ್ ಪೇಯಿಂಟ್ಸ್, ಪ್ರೈಮರ್ಸ್, ಥಿನ್ನರ್ಸ್, ಸೀಲಿಂಗ್ ವ್ಯಾಕ್ಸ್, ಸ್ಟಿಫ್ ಪೇಸ್ಟ್, ಅಳಿಸಲಾಗದ ಶಾಯಿ,

ಅಳಿಸಲಾಗದ ಶಾಯಿ ಮಾರ್ಕರ್ ಪೆನ್ ಇತ್ಯಾದಿಗಳು

ಇತಿಹಾಸ

ಬದಲಾಯಿಸಿ

1937 ರಲ್ಲಿ ಕಾರ್ಖಾನೆಯನ್ನು ಅಂದಿನ ಮೈಸೂರು ಸಂಸ್ಥಾನಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು “ಮೈಸೂರು ಲ್ಯಾಕ್ ಫ್ಯಾಕ್ಟರಿ” ಎಂಬ ನಾಮಾಂಕಿತದಲ್ಲಿ ಸ್ಥಾಪಿಸಿದರು. ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸದಾಶಯದೊಂದಿಗೆ ಅಂದು ಅರಣ್ಯದಲ್ಲಿ ಹೇರಳವಾಗಿ ಸಿಗುತ್ತಿದ್ದ ‘ಅಂಟು’ ಎಂಬ ಕಚ್ಚಾಸಾಮಗ್ರಿಯಿಂದ ‘ಸೀಲಿಂಗ್ ವ್ಯಾಕ್ಸ್ ’ ತಯಾರಿಸಿ ಸ್ಥಳೀಯ ಸರ್ಕಾರಿ ಇಲಾಖೆಗಳಿಗೆ, ಖಜಾನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. 1947 ರಲ್ಲಿ ‘ಮೈಸೂರು ಲ್ಯಾಕ್ ಫ್ಯಾಕ್ಟರಿ’ ಯನ್ನು ಸರ್ಕಾರದ ಸ್ವಾಮ್ಯಕ್ಕೆ ಒಳಪಡಿಸಲಾಯಿತು. ಅಂದಿನಿಂದ ಇದರ ನಾಮಾಂಕಿತವನ್ನು "ಮೈಸೂರು ಲ್ಯಾಕ್ ಅಂಡ್ ವರ್ಕ್ಸ್ ಲಿಮಿಟೆಡ್" ಎಂದು ಮರು ನಾಮಕರಣ ಮಾಡಲಾಯಿತು. ಸಣ್ಣ ಪ್ರಮಾಣದಲ್ಲಿ ಬಣ್ಣದ ಉತ್ಪಾದನೆಯನ್ನು ಆರಂಭಿಸಲಾಯಿತು. ಮುಂದುವರೆದು, ಅರಣ್ಯದಲ್ಲಿ ಸಿಗುತ್ತಿದ್ದ ಅಂಟು (ಲ್ಯಾಕ್) ಎಂಬ ಸಾಮಗ್ರಿಯ ಲಭ್ಯತೆ ಕಡಿಮೆಯಾದ್ದರಿಂದ ಮತ್ತು ಸೀಲಿಂಗ್ ವ್ಯಾಕ್ಸ್ ಎಂಬ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿ, ವಾರ್ನಿಷ್ ಉತ್ಪಾದನೆಯ ಕಡೆ ಕಂಪನಿಯು ತೊಡಗಿಸಿಕೊಂಡ ಪ್ರಯುಕ್ತ 1989 ರಲ್ಲಿ ಕಂಪನಿಯ ಹೆಸರನ್ನು “ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್” ಎಂದು ಮತ್ತೆ ಮರು ನಾಮಕರಣ ಮಾಡಲಾಯಿತು. ಕರ್ನಾಟಕ ಸರ್ಕಾರವು ಈ ಕಂಪನಿಯಲ್ಲಿ ಶೇ 91.39ರಷ್ಟು ಈಕ್ವಿಟಿ ಬಂಡವಾಳವನ್ನು ತೊಡಗಿಸಿದ್ದು, ಉಳಿಕೆ ಬಂಡವಾಳವನ್ನು ಸಾರ್ವಜನಿಕರು ತೊಡಗಿಸಿರುತ್ತಾರೆ.


ಉತ್ಪನ್ನಗಳು

ಬದಲಾಯಿಸಿ

ಅಳಿಸಲಾಗದ ಶಾಯಿ

ಬದಲಾಯಿಸಿ
 
ತೋರುಬೆರಳಿಗೆ ಹಾಕಿರುವ ಚುನಾವಣಾ ಶಾಯಿ

1962 ರಿಂದ ದೇಶದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಸರಬರಾಜು ಮಾಡಲು ಆರಂಭಿಸಿತು. ಭಾರತದ ಚುನಾವಣಾ ಆಯೋಗ (ಇ.ಸಿ.ಐ) ನ್ಯಾಷನಲ್ ರಿಸರ್ಚ್ ಡೆವಲಪ್‍ಮೆಂಟ್ ಕಾರ್ಪೋರೇಷನ್ (ಎನ್.ಆರ್.ಡಿ.ಸಿ) ಹಾಗೂ ನ್ಯಾಷನಲ್ ಫಿಜಿಕಲ್ ಲ್ಯಾಬೋರೇಟರಿ (ಎನ್.ಪಿ.ಎಲ್) ಇವರ ಸಹಯೋಗದೊಡನೆ ಅಳಿಸಲಾಗದ ಶಾಯಿಯನ್ನು ದೇಶದ್ಯಾಂತ ಸರಬರಾಜು ಮಾಡಲಾಗುತ್ತಿದ್ದು, ದೇಶದ ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. 1978-79 ನೇ ಸಾಲಿನಲ್ಲಿ ಅಳಿಸಲಾಗದ ಶಾಯಿಯ ಮೊದಲ ರಫ್ತು ವಹಿವಾಟನ್ನು ಕಂಪನಿಯು ಆರಂಭಿಸಿತು. ಇಲ್ಲಿಯವರೆಗೆ ಪ್ರಪಂಚದ ಇಪ್ಪತ್ತೆಂಟು ರಾಷ್ಟ್ರಗಳಿಗೂ ಹೆಚ್ಚು ನಮ್ಮ ಉತ್ಪನ್ನ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಆ ಮೂಲಕ ರಾಷ್ಟ್ರಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಹರಿದು ಬರಲು ಕಂಪನಿಯೂ ಭಾಗಿಯಾಗಿರುವುದು ಸಂತಸದ ವಿಚಾರವಾಗಿದೆ. [] [] []

ಇತರ ಉತ್ಪನ್ನಗಳು

ಬದಲಾಯಿಸಿ

ರಾಸಾಯನಿಕ-ನಿರೋಧಕ ಬಣ್ಣಗಳು, ಎನಾಮೆಲ್ಗಳು, ಪ್ರೈಮರ್ಗಳು, ಡಿಡೆಮೆಪರ್ಗಳು, ಸೀಲಿಂಗ್ ಮೆಕ್ಸ್, ಪೋಸ್ಟೇಜ್ ಸ್ಟ್ಯಾಂಪ್ ರದ್ದುಗೊಳಿಸುವಿಕೆ ಮತ್ತು ಪಾಲಿಷ್ಗಳಂತಹ ಇತರ ಉತ್ಪನ್ನಗಳನ್ನು ಕಂಪನಿಯು ತಯಾರಿಸುತ್ತದೆ. [] ಕಂಪನಿಯಿಂದ ತಯಾರಿಸಲ್ಪಟ್ಟ ಸೀಲಿಂಗ್ ವಾ‍‍ಕ್ಸ್(ಮೇಣ) ಅನ್ನು ಭಾರತೀಯ ಅಂಚೆ ಬಳಸುತ್ತದೆ, ಮತ್ತು ಚುನಾವಣಾ ಆಯೋಗವು ಬ್ಯಾಲೆಟ್ ಪೆಟ್ಟಿಗೆಗಳನ್ನು ಮುಚ್ಚಲು ಸಹ ಈ ಮೇಣವನ್ನು ಬಳಸುತ್ತದೆ []

ಬಾಹ್ಯ ಕೊಂಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. R. Krishna Kumar (2004-03-17). "The business of `black-marking' voters". Online Edition of The Hindu, dated 2004-03-17. Chennai, India. Archived from the original on 2004-04-12. Retrieved 2007-09-17.
  2. ೨.೦ ೨.೧ "An 'indelible' contribution". Online Edition of The Hindu, dated 2007-09-11. Chennai, India. 2007-09-11. Archived from the original on 2007-09-14. Retrieved 2007-09-17.
  3. ೩.೦ ೩.೧ Sunil Raman (2004-10-12). "India link to Afghan ink stink". Online webpage of the BBC,dated 2004-10-12. Retrieved 2007-09-17.
  4. ೪.೦ ೪.೧ Jayaraman, Pavitra (13 August 2012). "1937 Mysore Paints and Varnish । The ink of democracy". LiveMint. Retrieved 17 April 2014.
  5. "Profile". Online Webpage of the Mysore Paints and Varnish Limited. Archived from the original on 2008-01-10. Retrieved 2007-09-17.