ಮೇ ೨೦೧೫ ನೇಪಾಳ ಭೂಕಂಪ

೧೨ಮೇ ೨೦೧೫ ಸುಮಾರು ೧೨ː೩೫ಕ್ಕೆ ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಭೂಕಂಪ ನೇಪಾಳದ ಕೊಡರಿಯಿಂದ ೧೮ಕಿ.ಮೀ ಆಗ್ನೇಯ ಕಡೆಯಲ್ಲಿ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ನೆಡೆದ ಭೂಕಂಪದ ಉತ್ತರಾಘಾತವೆಂದು ಇದನ್ನು ಪರಿಗಣಿಸಲಾಗುತ್ತಿದೆ.[೨] ಭಾರತದ ಉತ್ತರ ಭಾಗದಲ್ಲಿರುವ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯಗಳಲ್ಲಿಯೂ ಕಂಪನ ಕಾಣಿಸಿಕೊಂಡಿತು.[೩]

ಮೇ ೨೦೧೫ ನೇಪಾಳ ಭೂಕಂಪ
ಮೇ ೨೦೧೫ ನೇಪಾಳ ಭೂಕಂಪ is located in Nepal
ಮೇ ೨೦೧೫ ನೇಪಾಳ ಭೂಕಂಪ
ಕಠ್ಮಂಡು
ಕಠ್ಮಂಡು
ದಿನಾಂಕ12 ಮೇ 2015 (2015-05-12)
ಉಂಟಾದ ಸಮಯ೧೨:೩೫:೧೯ ನೇಪಾಳದ ಸಮಯ
ಪ್ರಮಾಣ೭.೩ Mw[೧]
ಆಳ೧೮.೫ ಕಿ.ಮೀ (೧೧.೫ ಮೈ)
ಬಗೆಪಳಕು[೨]
ಹಾನಿಗೊಳಗಾದ ಪ್ರದೇಶಗಳು
ಸಾವು ನೋವುಗಳು೬೮ ಮರಣ
೧,೨೫೦+ ಗಾಯಾಳುಗಳು

ಕೆಲ ನಿಮಿಷಗಳ ನಂತರ, ರಿಕ್ಟರ್ ಮಾಪಕದಲ್ಲಿ ೬.೩ರಷ್ಟು ತೀವ್ರತೆಯ ಮತ್ತೊಂದು ಭೂಕಂಪವು ಕಠ್ಮಂಡುವಿನಿಂದ ಪೂರ್ವದಲ್ಲಿರುವ ರಾಮೆಚ್ಚಪ್ ನಲ್ಲಿ ಕಾಣಿಸಿತು. ಇದರ ಕಂಪನವು ಬಾಂಗ್ಲಾದೇಶ, ಚೀನಾ ಮತ್ತು ಭಾರತರಾಜಧಾನಿ ದೆಹಲಿಯೂ ಸೇರಿದಂತೆ ಉತ್ತರ ಭಾಗದ ಹಲವು ರಾಜ್ಯಗಳಲ್ಲಿ ಅನುಭವವಾಯಿತು.[೪]

ಸಾವುನೋವು ಬದಲಾಯಿಸಿ

ನೇಪಾಳದಲ್ಲಿ ಕನಿಷ್ಠ ೫೦ ಮಂದಿಯಾದರೂ ಮೃತಪಟ್ಟರೆ, ಸುಮಾರೂ ೧,೨೫೦ಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ.[೫][೬]ನೇಪಾಳದ ೭೫ ಜಿಲ್ಲೆಗಳಲ್ಲಿ ೩೨ಜಿಲ್ಲೆಗಳು ಭೂಕಂಪದಿಂದ ಪೀಡಿತವಾಗಿವೆ. ಎವರೆಷ್ಟ್ ಪರ್ವತದ ಸುತ್ತಮುತ್ತದ ಪ್ರದೇಶಗಳೂ ಹಾನಿಯಾಗಿವೆ.[೫]

ಭಾರದಲ್ಲಿಯೂ ಸುಮಾರು ೧೭ಜನ ಭೂಕಂಪದಿಂದ ಸಾವಿಗೀಡಾಗಿದ್ದಾರೆ. ಇವರಲ್ಲಿ ೧೬ಜನ ಉತ್ತರ ಪ್ರದೇಶದಲ್ಲಿ ಬಲಿಯಾದರೆ, ಒಬ್ಬರು ಬಿಹಾರದಲ್ಲಿ ಮೃತಪಟ್ಟಿದ್ದಾರೆ.[೬] ಹಾಗೂ ಟಿಬೆಟ್ ಪ್ರಾಂತದ ಚೀನದಲ್ಲಿಯೂ ಒಬ್ಬ ಮಹಿಳೆ ಮೃತಳಾಗಿದ್ದಾಳೆ.[೫]


ಸಾವುನೋವುಗಳು
ದೇಶ
ಮೃತಪಟ್ಟವರು
ಗಾಯಾಳುಗಳು
  ನೇಪಾಳ ೫೦
೧,೨೬೧
  ಭಾರತ ೧೭

  ಚೀನಾ
ಒಟ್ಟು
೬೮
೧,೨೬೧+


ರಕ್ಷಣಾ ಕಾರ್ಯಚರಣೆ ಮತ್ತು ಪರಿಹಾರ ಬದಲಾಯಿಸಿ

ನೇಪಾಳ ಸೇನೆ ತನ್ನ ಆಪರೇಶನ್ ಸಂಕಟ ಮೊಚನವನ್ನು ಭಾರತ ಸೈನ್ಯದ ಜೊತೆಗೂಡಿ ಮುಂದುವರೆಸಿ ಸುಮಾರು ಟನ್ ಗಟ್ಟಳೆ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುತ್ತಿದೆ.[೭]

ಉಲ್ಲೇಖಗಳು ಬದಲಾಯಿಸಿ

  1. "Nepal earthquake, magnitude 7.3, strikes near Everest". BBC News. Retrieved 12 May 2015.
  2. ೨.೦ ೨.೧ "M7.3 - 18km SE of Kodari, Nepal". USGS Earthquake Hazards Program.
  3. "7.3 Magnitude Earthquake hits North India including Bihar". news.biharprabha.com. 12 May 2015. Retrieved 12 May 2015.
  4. "Nepal Earthquake on 12 May 2015: Magnitude, Epicenter, Damages and Relief Operations". news.biharprabha.com. Ventuno/AFP. 12 May 2015. Retrieved 12 May 2015.
  5. ೫.೦ ೫.೧ ೫.೨ Greg Botelho; Jethro Mullen (12 May 2015). "At least 68 dead after another major quake centered in Nepal". CNN. Retrieved 12 May 2015.
  6. ೬.೦ ೬.೧ "LIVE: 42 killed, over 1000 injured in Nepal earthquake; toll in India rises to 17". The Indian Express. 12 May 2015. Retrieved 12 May 2015.
  7. "Operation Maitri by Indian Army continues after 12 May Earthquake". news.biharprabha.com. 12 May 2015. Retrieved 12 May 2015.