ಪೂರ್ವ

(ಮೂಡಣ ಇಂದ ಪುನರ್ನಿರ್ದೇಶಿತ)

ಪೂರ್ವವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದಾಗಿದೆ. ಇದು ಪಶ್ಚಿಮ ದಿಕ್ಕಿಗೆ ವಿರುದ್ಧದಲ್ಲಿರುವ ದಿಕ್ಕಾಗಿದೆ.

ವ್ಯುತ್ಪತ್ತಿ

ಬದಲಾಯಿಸಿ

ಇತರ ಭಾಷೆಗಳಲ್ಲಿಯು ಪೂರ್ವವು ಸೂರ್ಯನು ಉದಯಿಸುವ ದಿಕ್ಕು ಎಂಬ ಅಂಶದಿಂದ ರೂಪುಗೊಂಡಿದೆ: ಇದನ್ನು ಇಂಗ್ಲೀಷ್‍ನಲ್ಲಿ ಇಸ್ಟ್ ಎಂದು ಕರಯುತ್ತಾರೆ. ಪ್ರೊಟೊ-ಜರ್ಮಾನಿಕ್‍ದಲ್ಲಿ *ಆಸ್-ಟು- ಅಥವಾ * ಆಸ್ಟ್ರಾ ಎಂದು ಕರೆಯುತ್ತಾರೆ. ಅಂದರೆ: - "ಪೂರ್ವ", "ಸೂರ್ಯೋದಯದ ಕಡೆಗೆ". ಪ್ರೋಟೋ-ಇಂಡೋ-ಯುರೋಪ್‍ದಲ್ಲಿ *ಆಸ್ ಅಂದರೆ - "ಶೈನ್," ಅಥವಾ "ಡಾನ್".[] ಹಳೆಯ ಹೈ ಜರ್ಮನ್‍ನಲ್ಲಿ *ಓಸ್ಟಾರ್ - "ಪೂರ್ವಕ್ಕೆ".[] ಲ್ಯಾಟಿನ್ ಓರಿಯನ್ಸ್ ಅಲ್ಲಿ 'ಪೂರ್ವ, ಸೂರ್ಯೋದಯ' ಎಂದು ಕರಯುತ್ತಾರೆ.

ಪೂರ್ವವನ್ನು ಕೆಲವೊಮ್ಮೆ ಎಂದು ಸಂಕ್ಷಿಪ್ತಗೊಳಿಸಲಾಗುತ್ತದೆ.

ನ್ಯಾವಿಗೇಷನ್

ಬದಲಾಯಿಸಿ

ಸಂಪ್ರದಾಯದಂತೆ, ನಕ್ಷೆಯ ಬಲಭಾಗವು ಪೂರ್ವವಾಗಿದೆ. ದಿಕ್ಸೂಚಿಯ ಬಳಕೆಯಿಂದ ಸಮಾವೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಹಿಮ್ಮುಖವಾಗಿ ತಿರುಗುವ ಶುಕ್ರ ಮತ್ತು ಯುರೇನಸ್‌ನಂತಹ ಗ್ರಹಗಳ ನಕ್ಷೆಗಳಲ್ಲಿ ಎಡಭಾಗವು ಪೂರ್ವದಲ್ಲಿದೆ.

ದಿಕ್ಸೂಚಿಯನ್ನು ಬಳಸಿಕೊಂಡು ಪೂರ್ವಕ್ಕೆ ಹೋಗಲು, ಒಬ್ಬರು ೯೦° ನ ಬೇರಿಂಗ್ ಅನ್ನು ಹೊಂದಿಸುತ್ತಾರೆ.

ಸಾಂಸ್ಕೃತಿಕ

ಬದಲಾಯಿಸಿ

ಪೂರ್ವವು ಭೂಮಿಯು ತನ್ನ ಅಕ್ಷದ ಸುತ್ತ ತಿರುಗಿಸುವ ದಿಕ್ಕು ಹಾಗೂ ಪೂರ್ವವು ಸೂರ್ಯನು ಉದಯಿಸುವ ದಿಕ್ಕು. ಪೂರ್ವದ ಕಡೆಗೆ ಪ್ರಾರ್ಥನೆ ಮಾಡುವ ಅಭ್ಯಾಸವು ಕ್ರಿಶ್ಚಿಯನ್ ಧರ್ಮದಲ್ಲಿದೆ. ಕ್ರಿಶ್ಚಿಯನ್ ಚರ್ಚ್‌ಗಳು ಸಾಂಪ್ರದಾಯಿಕವಾಗಿ ಪೂರ್ವದ ಕಡೆಗೆ ಆಧಾರಿತವಾಗಿರುತ್ತದೆ.[][] ಧಾರ್ಮಿಕವಾಗಿ ಪೂರ್ವದಲ್ಲಿ ಬಲಿಪೀಠವನ್ನು ಹೊಂದಿರುವ ಈ ಸಂಪ್ರದಾಯವು ಚರ್ಚ್ ದೃಷ್ಟಿಕೋನದ ಪ್ರಾರ್ಥನೆ ಪೂರ್ವ ಮತ್ತು ಪಶ್ಚಿಮದ ಒಂದು ಭಾಗವಾಗಿದೆ.

ಏಷ್ಯಾದ ಖಂಡದಲ್ಲಿ ಇದನ್ನು ದೂರದ ಪೂರ್ವ, ಮಧ್ಯಪ್ರಾಚ್ಯ ಮತ್ತು ಸಮೀಪದ ಪೂರ್ವ ಎಂದು ವಿಂಗಡಿಸಲಾಗಿದೆ.[]

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "east". Online Etymology Dictionary. Retrieved 3 December 2013.
  2. "east". Merriam-Webster. Retrieved 3 December 2013.
  3. "Orientation of Churches". Catholic Encyclopedia. Retrieved 3 December 2013.
  4. Peters, Bosco (30 April 2012). "Architectural Design Guidelines 1". Liturgy.co.nz. Retrieved 3 December 2013.
  5. Benedictus, Leo (12 May 2017). "Blowing in the wind: why do so many cities have poor east ends?". The Guardian. Retrieved 2 October 2019.
"https://kn.wikipedia.org/w/index.php?title=ಪೂರ್ವ&oldid=1227892" ಇಂದ ಪಡೆಯಲ್ಪಟ್ಟಿದೆ