ಮುಟ್ಟು

(ಮುಟ್ಟಾಗುವಿಕೆ ಇಂದ ಪುನರ್ನಿರ್ದೇಶಿತ)

ಮುಟ್ಟು (ಋತುಕಾಲ, ರಜಸ್ಸು) ಎಂದರೆ ಗರ್ಭಾಶಯದ ಒಳಪದರದಿಂದ ಯೋನಿಯ ಮೂಲಕ (ಮೆನ್ಸೀಸ್ ಎಂದು ಕರೆಯಲ್ಪಡುವ) ರಕ್ತ ಮತ್ತು ಲೋಳೆ ಅಂಗಾಂಶದ ನಿಯಮಿತ ಸ್ರಾವ.[] ಸಾಮಾನ್ಯವಾಗಿ ಮೊದಲ ಋತುಕಾಲವು ಹನ್ನೆರಡು ಮತ್ತು ಹದಿನೈದು ವಯಸ್ಸಿನ ನಡುವೆ ಆರಂಭವಾಗುತ್ತದೆ, ಮತ್ತು ಕಾಲದ ಈ ಬಿಂದುವನ್ನು ಋತುಸ್ರಾವಾರಂಭ ಎಂದು ಕರೆಯಲಾಗುತ್ತದೆ. ಆದರೆ, ಸಾಂದರ್ಭಿಕವಾಗಿ ಋತುಕಾಲಗಳು ಎಂಟು ವರ್ಷದಷ್ಟು ಚಿಕ್ಕ ವಯಸ್ಸಿನಲ್ಲಿ ಆರಂಭವಾಗಬಹುದು ಮತ್ತು ಆದರೂ ಇದನ್ನು ಸಾಮಾನ್ಯ ಎಂದು ಪರಿಗಣಿಸಬಹುದು. ಮೊದಲ ಋತುಕಾಲದ ಸರಾಸರಿ ವಯಸ್ಸು ಸಾಮಾನ್ಯವಾಗಿ ಅಭಿವೃದ್ಧಿಶೀಲ ವಿಶ್ವದಲ್ಲಿ ನಂತರವಿರುತ್ತದೆ, ಮತ್ತು ಅಭಿವೃದ್ಧಿಹೊಂದಿದ ವಿಶ್ವದಲ್ಲಿ ಮುಂಚೆ ಇರುತ್ತದೆ.

ಸ್ತ್ರೀಯ ಗರ್ಭಕೋಶದಲ್ಲಿ ಸಾಮಾನ್ಯವಾಗಿ ತಿಂಗಳಿಗೊಮ್ಮೆ ಅಂಡಾಶಯದಿಂದ ಬಿಡುಗಡೆಯಾಗುಇ ಗರ್ಭಕೋಶಕ್ಕೆ ಬರುವ ಮಾನವ 'ಅಂಡಾಣು' ಮಾನವ ಅಂಡಾಣು ಸುಮಾರು 0.1 ಮಿಮೀ ವ್ಯಾಸದ್ದು.(ಮೊಟ್ಟೆ-ಕೋಶ) ರೇಖಾಚಿತ್ರ

ಮುಟ್ಟು ಎಂದರೇನು? ಏಕೆ?

ಬದಲಾಯಿಸಿ
 
ಅಂಡಾಣು -ಬಿಡುಗಡೆಯಾಗಿ ಗರ್ಭಕೋಶಕ್ಕೆ ಬರುವುದು.
  • ಋತುಚಕ್ರ
  • ಹೆಣ್ಣಿಗೆ ಪ್ರಾಯದಲ್ಲಿ ಗರ್ಭಾಶಯದಿಂದ ಆಗುವ ರಕ್ತಶ್ರಾವವೇ ಮುಟ್ಟು (ಹಿಂದೆ ಭಾರತದ ಅನೇಕ ಜನರಲ್ಲಿ ಅವರನ್ನು ಯಾರೂ ಮುಟ್ಟಬಾರದ ದಿನ); ಪ್ರಾಯದ ಹೆಣ್ಣಿಗೆ ಗರ್ಭಕೋಶದಲ್ಲಿ ಪ್ರತಿ ತೀಗಳೂ ಗರ್ಭ ನಿಂತು ಮಗು ಬೆಳೆಯಲು ತೆಳುವಾದ ಮಾಂಸದ ಚೀಲ ಗರ್ಭಕೋಶದಲ್ಲಿ ಋತು ಸಮಯದ ೮-೨೦ ರ ಮಧ್ಯದಿನಗಳಲ್ಲಿ ಬೆಳೆಯುವುದು. ಆ ಸಮಯದಲ್ಲಿ ಹೆಣ್ಣಿನ ಅಂಡಾಶಯದಿಂದ ಚಿಕ್ಕ ಅಂಡವು(ಮೊಟ್ಟೆ- ಸುಮಾರು ಸಾಸಿವೆಕಾಳಿನ ಕಾಲು ಭಾಗ ಗಾತ್ರ.೧ ಮಿ.ಮೀ.). ಅಂಡಾಣು ಮಾನವನ ದೇಹದ ಅತಿದೊಡ್ಡ ಕೋಶಗಳಲ್ಲಿ ಒಂದಾಗಿದೆ, ಸಾಮಾನ್ಯವಾಗಿ ಸೂಕ್ಷ್ಮದರ್ಶಕ ಅಥವಾ ಇತರ ವರ್ಧಕ ಸಾಧನದ ಸಹಾಯವಿಲ್ಲದೆ ಬರಿಗಣ್ಣಿಗೆ ಗೋಚರಿಸುತ್ತದೆ. ಮಾನವ ಅಂಡಾಣು ಸುಮಾರು 0.1 ಮಿಮೀ ವ್ಯಾಸವನ್ನು ಅಳೆಯುತ್ತದೆ. ಅದು ಮುಟ್ಟಾದ ೯- ೧೦ ದಿನಗಳ ನಂತರ ಬಂದು ಗರ್ಭಕೋಶದಲ್ಲಿ ಮೆತ್ತನೆಯ ಬೆಳೆದ ಪದರದಲ್ಲಿ ಗಂಡಿನ ವೀರ್ಯಾಣು ಪಡೆಯಲು ಕಾಯುವುದು. ಗಂಡಿನ ಸಂಪರ್ಕದಿಂದ ಆ ಸಮಯದಲ್ಲಿ ವೀರ್ಯಾಣು ಬರದಿದ್ದರೆ ಅದು ನಾಶವಾಗಿ ಬೆಳೆದ ಮಾಂಸದ ತೆಳು ಗರ್ಭಚೀಲ ಕಳಚಿ ಯೋನಿಯ ಮೂಲಕ ರಕ್ತಶ್ರಾವದಲ್ಲಿ ಹೊರಬರುವುದು. ಇದು ೨ ರಿಂದ ೭ದಿನ ಇರಬಹುದು. ಸಾಮನ್ಯವಾಗಿ ಆರೋಗ್ಯವಂತರಿಗೆ ಮೂರುದಿನ ರಕ್ತಶ್ರಾವ ಅಗುವುದು. ಹೆಣ್ಣಿನಲ್ಲಿ ಗರ್ಭನಿಲ್ಲುವ ವಿಫಲತೆಯೇ ತಿಂಗಳಿಗೊಮ್ಮೆ ಯೋನಿಯಲ್ಲಿ ರಕ್ತಸ್ರಾವವಾಗುವುದು. ಇದು ಪ್ರಕೃತಿಯ ವಂಶವೃದ್ದಿಯ ವ್ಯವಸ್ಥೆ.[]
 
ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆ; cervix- ಗರ್ಭಕಂಠ; ovary- ಅಂಡಾಶಯ;Uterus- ಗರ್ಭಾಶಯ(ಗರ್ಭಕೋಶ); Vagina- ಯೋನಿ

ಋತು ಚಕ್ರ

ಬದಲಾಯಿಸಿ
  • ಪುನರಾವರ್ತನೆ:

ಒಂದು ಋತುಶ್ರಾವದ (ರಕ್ತಶ್ರಾವದ) ಮೊದಲ ದಿನ ಮತ್ತು ಮುಂದಿನ ಋತುಕಾಲದ ಮೊದಲ ದಿನದ ನಡುವಿನ ಸಾಮಾನ್ಯ ಸಮಯಾವಧಿಯು ಯುವ ಸ್ತ್ರೀಯರಲ್ಲಿ ೨೮ ದಿನಗಳು. ಆದರೆ ಅದು ಕೆಲವರಲ್ಲಿ ೨೧ರಿಂದ ೪೫ ದಿನಗಳಿರುತ್ತದೆ, ಮತ್ತು ಯುವ ವಯಸ್ಕರಲ್ಲಿ ೨೧ ರಿಂದ ೩೧ ದಿನಗಳಿರುತ್ತದೆ (ಸರಾಸರಿಯಾಗಿ ೨೮ ದಿನ). ಅವವರ ದೇಹ ಪ್ರಕೃತಿಯನ್ನೂ ಅನುವಂಶೀಯತೆಯನ್ನೂ ಅನುಸರಿಸಿ ಸಾಮಾನ್ಯವಾಗಿ ರಕ್ತಸ್ರಾವವು ಮೂರುದಿನ ಇರುವುದು; ಕೆಲವರಲ್ಲಿ ಸುಮಾರು ೨ ರಿಂದ ೭ ದಿನಗಳವರೆಗೆ ಇರುತ್ತದೆ. ಮೂರುದಿನದ ಅಥವಾ ಅನಿಯಮಿತ ಮುಟ್ಟು ಶ್ರಾವ ಸಾಮಾನ್ಯವಾಗಿ ೪೫ ಮತ್ತು ೫೫ ವರ್ಷ ವಯಸ್ಸಿನ ನಡುವೆ ಸಂಭವಿಸುವ ಋತುಬಂಧದ ನಂತರ ಮುಟ್ಟು ಆಗುವುದು ನಿಲ್ಲುತ್ತದೆ. ಎಂದರೆ ಅಂಡಾಣುಗಳು ಬಿಡುಗಡೆಯಾಗಿ ಗರ್ಭಕೋಶಕ್ಕೆ ಬರುವುದಿಲ್ಲ ಮತ್ತು ಆನಂತರ ಹೆಣ್ಣು ಗರ್ಭವತಿಯಾಗುವುದಿಲ್ಲ. ಅಂಡಾಶಯದಲ್ಲಿ ಅಂಡಾಣುಗಳು ಖಾಲಿಯಾಗಿರುತ್ತವೆ ಅಥವಾ ತೀರಾಕಡಿಮೆಯಾಗಿರುತ್ತವೆ ಅಥವಾ/ಮತ್ತು ಶಾರೀರಿಕ ಮಟ್ಟದಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಹಾರ್ಮೋನುಗಳು ಅಂಡಾಶಯದಲ್ಲಿ ಉತ್ಪಾದನೆಯು ಕಡಿಮೆಯಾದ ಕಾರಣ ಋತುಬಂಧ ಸಂಭವಿಸುತ್ತದೆ. ಋತುಕಾಲಗಳು ಗರ್ಭಾವಸ್ಥೆಯ ಅವಧಿಯಲ್ಲಿಯೂ ನಿಲ್ಲುತ್ತವೆ ಮತ್ತು ಸಾಮಾನ್ಯವಾಗಿ ಮಗು ಜನನದ ನಂತರ ಸ್ತನ್ಯಪಾನದ ಆರಂಭಿಕ ೩- ೪ ತಿಂಗಳುಗಳ ಅವಧಿಯಲ್ಲಿ ಗರ್ಭಿಣಿಯಾದಾಗ ನಿಂತ ಋತುಶ್ರಾವ ಪುನರಾರಂಭವಾಗುವುದಿಲ್ಲ.(ಈ ಎಲ್ಲಾ ಲೆಕ್ಕಾಚಾರದ ವ್ಯವಸ್ಥೆಗಳು ಹೆಣ್ಣಿನಲ್ಲಿರುವ ಜೀವಕೋಶಗಳ (ರಕ್ತ ಕೋಶದ) ಒಳಗಿನ ಡಿ.ಎನ್.ಎ ಕ್ರೊಮೊಸೊಮುಗಳಲ್ಲಿಯೇ ಎಲ್ಲಾ ಪ್ರೊಗ್ರಾಂ ಮಾಡಲ್ಪಟ್ಟಿರುತ್ತವೆ.. [][]

ಆರಂಭದ ಸೂಚನೆ

ಬದಲಾಯಿಸಿ

ಶೇಕಡ ೮೦ ರಷ್ಟು ಮಹಿಳೆಯರು ಮುಟ್ಟಿನ ಮೊದಲು ಕೆಲವು ಲಕ್ಷಣಗಳನ್ನು ಹೊಂದಿರುವ ಬಗ್ಗೆ ವರದಿ ಮಾಡುತ್ತಾರೆ. ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳಲ್ಲಿ ಮೊಡವೆಗಳು, ಮೃದು ಸ್ತನಗಳು, ಊದಿಕೊಳ್ಳುವಿಕೆ, ಸುಸ್ತು ಎನಿಸುವುದು, ಕಿರಿಕಿರಿ/ಸಿಡುಕುತನ, ಮತ್ತು ಮಾನಸಿಕ ಸ್ಥಿತಿಯಲ್ಲಿನ ಬದಲಾವಣೆಗಳು ಸೇರಿವೆ. ಇವು ಸಾಮಾನ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡಬಹುದು. ಹಾಗಾಗಿ ಶೇಕಡ ೨೦ ರಿಂದ ೩೦ರಷ್ಟು ಮಹಿಳೆಯರಲ್ಲಿ ಇದು ಮುಟ್ಟಿನ ಮೊದಲಿನ ಲಕ್ಷಣವಾಗಿ ಅರ್ಹತೆ ಪಡೆಯುತ್ತದೆ. ಶೇಕಡ ೩ ರಿಂದ ೮ ರಷ್ಟು ಮಹಿಳೆಯರಲ್ಲಿ ಲಕ್ಷಣಗಳು ತೀವ್ರವಾಗಿರುತ್ತವೆ.

ಅಪವಾದಗಳು

ಬದಲಾಯಿಸಿ

ಋತುಕಾಲಗಳ ಅಭಾವವನ್ನು ೧೫ ವರ್ಷ ವಯಸ್ಸಿನೊಳಗೆ ಲಾಗುತ್ತದೆ. ಇದರಲ್ಲಿ ಋತುಕಾಲಗಳು ೧೫ ವರ್ಷ ವಯಸ್ಸಿನೊಳಗೆ ಸಂಭವಿಸುವುದೇ ಇಲ್ಲ. ೧೫ ವರ್ಷ ವಯಸ್ಸಿನೊಳಗೆ ಮುಟ್ಟಾಗದಿದ್ದರೆ ಅದನ್ನು ೧೫ ವರ್ಷ ವಯಸ್ಸಿನೊಳಗೆ ಅದನ್ನು 'ಮುಟ್ಟು ಕಟ್ಟು' ಎಂದು ಹೇಳುವುದಿಲ್ಲ. ಋತುಮತಿಯಾದ ನಂತರ ಕೆಲವೊಮ್ಮೆ ೯೦ ದಿನಗಳಲ್ಲಿ ಮುಟ್ಟು ಸಂಭವಿಸಿರುವುದಿಲ್ಲ, ಆಗ ಅದು 'ಮುಟ್ಟು ಕಟ್ಟು' ಸಮಸ್ಯೆ. ಋತುಚಕ್ರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಲ್ಲಿ ನೋವಿನ ಋತುಕಾಲಗಳು ಮತ್ತು ಅತಿರೇಕದ ರಕ್ತಸ್ರಾವ (ಉದಾಹರಣೆಗೆ ಋತುಕಾಲಗಳ ನಡುವೆ ರಕ್ತಸ್ರಾವ ಅಥವಾ ಭಾರೀ ರಕ್ತಸ್ರಾವ) ಸೇರಿವೆ.

ಹೊರ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Women's Gynecologic Health. Jones & Bartlett Publishers. 2011. p. 94. ISBN 9780763756376. Archived from the original on 26 ಜೂನ್ 2015. {{cite book}}: Unknown parameter |deadurl= ignored (help)
  2. [https://www.prajavani.net/news/article/2017/04/07/482582.html ಮುಟ್ಟಿನ ದಿನಗಳ ಬಗ್ಗೆ ಅರಿವಿರಲಿ... ಡಾ. ವೀಣಾ ಭಟ್‌;d: 08 ಏಪ್ರಿಲ್ 2017,]
  3. Eunice Kennedy Shriver National Institute of Child Health and Human Development. 28 June 2013. Archived from the original on 2 April 2015. Retrieved 8 March 2015
  4. Menopause


"https://kn.wikipedia.org/w/index.php?title=ಮುಟ್ಟು&oldid=1163612" ಇಂದ ಪಡೆಯಲ್ಪಟ್ಟಿದೆ