ಮಗುವಿನ ಬೆಳವಣಿಗೆಯ ಹಂತಗಳು

ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ನಾಲ್ಕು ಮುಖ್ಯ ಭಾಗಗಳಿವೆ,

  • ಯೋನಿ (ಗರ್ಭಕೊಳವೆ)
  • ಗರ್ಭಕೋಶ
  • ೨ ಅಂಡಾಶಯಗಳು
  • ೨ ಫಲೋಪಿಯನ್ ಕೊಳವೆ

ಈ ರೀತಿಯಾಗಿ ೪ ಅಂಡಾಶಯಗಳು ಹಲವಾರು ಮೊಟ್ಟೆಗಳನ್ನು ಹೊಂದಿರುತ್ತವೆ. ೧೦-೧೮ ವಯಸ್ಸಿನೊಳಗೆ ಈ ಅಂಡಗಳು ಬೆಳೆದು ಹಣ್ಣಾಗತೊಡಗುತ್ತವೆ. ಪ್ರತಿ ತಿಂಗಳು ಈ ಫಲೋಪಿಯನ್ ಕೊಳವೆಗಳ ಮೂಲಕ ಗಭ್ಯಯ ತಲುಪುವಂತೆ ಈ ಅಂಡಾಶಯಗಳು ಅಂಡಾಣುವನ್ನು ಬಿಡುಗಡೆ ಮಾಡುತ್ತವೆ. ಇದಕ್ಕೆ ಅಂಡೋತ್ಪತ್ತಿ ಎನ್ನುತ್ತಾರೆ. ಮಹಿಳೆಯರಲ್ಲಿ ಮೊಟ್ಟೆಗಳಿರುವಂತೆ ಪುರುಷರಲ್ಲಿ ವಿರ್ಯಾಣು ಇರುತ್ತದೆ. ಮಾಸಿಕ ಋತುಸ್ರಾವ ೨೫-೩೦ ದಿನಗಳಿಗೊಮ್ಮೆ ಆಗುತ್ತದೆ. ಇದು ಮಹಿಳೆಯರಿಂದ ಮಹಿಳೆಗೆ ವ್ಯತ್ಯಾಸವಾಗುತ್ತದೆ. ಪ್ರತಿ ತಿಂಗಳು ಅಂಡಾಣು ಬಿಡುಗಡೆಯಾದಂತೆ ರಕ್ತ ಮತ್ತು ಲೋಳೆಯ ಒಂದು ಪದರ ಗರ್ಭದಲ್ಲಿ ತಯಾರಾಗುತ್ತದೆ. ಕಾಲ ಕಳೆದಂತೆ, ಈ ಪದರ ದಪ್ಪವಾಗುತ್ತಾ ಹೋಗುತ್ತದೆ ಈ ಅಂಡಾಣು ಬಿಡುಗಡೆ ಆಗುವ ಸಂದರ್ಭದಲ್ಲಿ ಗಂಡ-ಹೆಂಡತಿ ಸಂಭೋಗಿಸಿದರೆ ಮಕ್ಕಳಾಗುವ ಸಂಭವ ಹೆಚ್ಚು, ಒಮ್ಮೆ ಆಕೆ ಗರ್ಭಧರಿಸಿದರೆ ಈ ಪದರದ ಮೂಲಕ ಬೆಳೆಯುವ ಭ್ರೂಣಕ್ಕೆ ಆಹಾರ ದೊರೆಯುತ್ತದೆ. ಆಕೆ ಏನಾದರೂ ಗರ್ಭ ಧರಿಸದಿದ್ದಲ್ಲಿ ಈ ಪದರ ಗರ್ಭದಿಂದ ಕಳಚಿಕೊಳ್ಳುತ್ತದೆ. ಇದರಿಂದಲೇ ಪ್ರತಿ ತಿಂಗಳು ಗರ್ಭಾಶಯವು ಮೊಟ್ಟೆಯೊಂದಿಗೆ ಈ ಪದರವನ್ನು ಹೊರಗೆ ಬಿಡುವುದು. ಇದನ್ನು ನಾವು ಮಾಸಿಕ ಋತುಸ್ರಾವ ಎನ್ನುತ್ತೆವೆ. ಹೀಗೆ ಪ್ರತಿಯೊಬ್ಬ ಮಹಿಳೆಯ ದೇಹದಲ್ಲಿ ವ್ಯವಸ್ಥಿತವಾದ ಸಂತಾನೊತ್ಪತ್ತಿ ವ್ಯವಸ್ಥೆಯು ರೂಪುಗೊಂಡಿರುತ್ತದೆ.

ಮಹಿಳೆಯರ ಗರ್ಭಧಾರಣೆಯ ಕ್ರಿಯೆ

ಬದಲಾಯಿಸಿ

ಪ್ರತಿ ೩೦ ದಿನಗಳಲ್ಲಿ ಒಮ್ಮೆ ಮುಟ್ಟಾಗುವ ಸಂದರ್ಭದಲ್ಲಿ ೧೧ ರಿಂದ ೧೮ ನೇ ದಿನಗಳಲ್ಲಿ ಗರ್ಭದರಿಸುವ ಸಾಧ್ಯತೆಗಳಿವೆ. ಈ ದಿನಗಳಲ್ಲಿ ಸಂಭೋಗಿಸಿದರೆ ಸಾವಿರಾರು ಲಕ್ಷಾಣುಗಟ್ಟಲೆ ಇರುವ ವೀರ್ಯಾಣು ಹೆಣ್ಣಿನ ಯೋನಿಯೊಳಗೆ ಹೋಗುತ್ತವೆ. ಇವು ಬಹು ವೇಗವಾಗಿ ಚಲಿಸುವುದರಿಂದ ಮೊಟ್ಟೆಯತ್ತ ಧಾವಿಸುತ್ತವೆ. ಇವುಗಳಲ್ಲಿ ಕೇವಲ ಒಂದೇ ಒಂದು ವೀರ್ಯಾಣು ಮೊಟ್ಟೆಯೊಂದಿಗೆ ಸೇರಿಕೊಳ್ಳುತ್ತವೆ ಇದನ್ನು ಫಲಬರಿತ ಎನ್ನಲಾಗುತ್ತದೆ. ಈ ಏಕಾಣು ಜೀವಿಯ ವಿಭಾಗ ಫಲಭರಿತ ಅಂಡಾಣುವಿನ ವಿಭಜನೆ ಭ್ರೂಣದ ಗೊಡೆಯನ್ನು ಅಂಟಿಕೊಳ್ಳುವ ಮುನ್ನವೆ ನಡೆಯುತ್ತದೆ. ಒಂಬತ್ತು ತಿಂಗಳ ಕೊನೆಯಲ್ಲಿ ಪೂರ್ಣಾಕಾರದ ಮಗುವಿನ ರೂಪ ತಾಳುತ್ತದೆ. ಗರ್ಭಿಣಿಯರು ಗರ್ಭ ಧರಿಸಿದ್ದಾರೆಯೇ ಇಲ್ಲವೇ ಎಂಬ ಪರೀಕ್ಷೆಯಲ್ಲಿ ಗರ್ಭದ ಸಾದಾರಣ ಪರೀಕ್ಷೆಯನ್ನು ಮಾಡುವಾಗ ರಕ್ತಸಾರವನ್ನು ಮೂತ್ರದೊಂದಿಗೆ ಮಿಶ್ರ ಮಾಡುತ್ತರೆ ಇದು ದ್ರವವಾಗಿಯೇ ಇದ್ದಲ್ಲಿ ಗರ್ಭಧಾರಣೆಯಾಗಿದೆ ಎಂದು ಘನೀಕೃತವಾಗಿದ್ದಲ್ಲಿ ಗರ್ಭ ನಿಂತಿಲ್ಲವೆಂದು ತಿಳಿಯಲಾಗುತ್ತದೆ. ಪ್ರಸವ ಪೂರ್ವ ಸ್ತ್ರೀಯರಲ್ಲಿ ದೈಹಿಕವಾಗಿ ಆಗುವ ಬದಲಾವಣೆಗಳು

  • ಮೊದಲಿಗೆ ಮೊಟ್ಟೆ ಮತ್ತು ವೀರ್ಯ ಫಲೋಪಿಯನ್ ಕೊಳವೆಯಲ್ಲಿ ಮಿಲನವಾಗುವುದರಿಂದ ಗರ್ಭಧರಿಸುವುದು ಇದೇ ಹಂತದಲ್ಲಿ ಮಗು ಹೆಣ್ಣೊ ಅಥವಾ ಗಂಡೊ ಎಂದು ನಿಶ್ಚಯವಾಗುತ್ತದೆ.
  • ಮೊದಲ ಮೂರು ತಿಂಗಳಲ್ಲಿ ಕಿಬ್ಬೊಟ್ಟೆ ಹಿಂದೆ ಭ್ರೂಣ ಬೆಳೆಯುವುದರಿಂದ ಗರ್ಭ ನಿಲ್ಲುವುದೊ ಇಲ್ಲವೆ ಎಂದು ತಿಳಿಯುವುದಿಲ್ಲ.
  • ಗರ್ಭಿಣಿಯಾದಾಗ ಅನೇಕ ಬದಲಾವಣೆಗಳಾಗುತ್ತವೆ. ಸ್ತನಗಳು ದಪ್ಪವಾಗುವುದು, ಸ್ತನದ ತೊಟ್ಟು ಕಪ್ಪಾಗುವುದು, ಹೊಟ್ಟೆಯ ಸುತ್ತಳತೆ ಸಹ ಜಾಸ್ತಿಯಾಗಿ, ಹೊಟ್ಟೆಯ ಮೇಲೆ ಬಿಳಿ ಬಣ್ಣದ ಗೆರೆಗಳು ಉಂಟಾಗುತ್ತವೆ ಒಮ್ಮೊಮ್ಮೆ ಹೊಟ್ಟೆಯ ಕಡಿತವು ಉಂಟಾಗಬಹುದು.
  • ಗರ್ಭಿಣಿ ಸ್ತ್ರೀಯರಿಗೆ ಯಾವ ಬಗೆಯ ತೊಂದರೆಯಿಲ್ಲದೆ ನೆಮ್ಮದಿಯಿಂದ ಇದ್ದಲ್ಲಿ ಪ್ರತಿ ತಿಂಗಳೂ ಒಂದರಿಂದ ಒಂದುವರೆ ಇಂಚು ಮಗು ಬೆಳೆಯುವುದು.
  • ೫ನೇ ತಿಂಗಳಷ್ಟರಲ್ಲಿ ಮಗು ಹೊಕ್ಕಳಿನ ಸಮೀಪ ಬರುವುದು ೭ ನೇ ತಿಂಗಳಲ್ಲಿ ಮಗು ೩ ಇಂಚಿನಷ್ಟು ಬೆಳೆಯುವುದು ಒಂದು ಪಕ್ಷ ಹೊಟ್ಟೆಯೇನಾದರೂ ಚಿಕ್ಕದಾಗಿದ್ದಲ್ಲಿ ಸ್ವಲ್ಪ ಅಪಾಯಕಾರಿ.
  • ೫ ನೇ ತಿಂಗಳಷ್ಟರಲ್ಲಿ ಮಗು ಹೊಕ್ಕಳ ಪ್ರದೇಶಕ್ಕೆ ಬರದಿದ್ದಲ್ಲಿ ಮತ್ತು ೩ ಇಂಚಿನಷ್ಟು ಪ್ರತಿ ತಿಂಗಳು ಬೆಳೆಯದಿದ್ದಲ್ಲಿ ತುಸು ಅಪಾಯಕಾರಿ.

ಹೀಗೆ ಪ್ರಸವ ಪೂರ್ವ ಮಹಿಳೆಯಲ್ಲಿ ದೈಹಿಕವಾಗಿ ಅನೇಕ ರೀತಿಯ ಬದಲಾವಣೆಗಳು ಕಂಡುಬರುತ್ತವೆ ಈ ಸಂದರ್ಭದಲ್ಲಿ ಸ್ತ್ರೀಯರು ಆಯಾಸವಾಗುವುದು ಮುಖ, ಕೈ ಕಾಲು, ಬಾವು ಬರುವುದು, ಹಸಿವಾಗದೇ ಇರುವುದು ಇನ್ನೂ ಅನೇಕ ಸಮಸ್ಯೆಗಳನ್ನು ಪ್ರಸವ ಪೂರ್ವ ಸಂದರ್ಭದಲ್ಲಿ ಕೆಲವು ಮಹಿಳೆಯರು ಅನುಭವಿಸುತ್ತಾರೆ. ಮಹಿಳೆಯಿಂದ ಮಹಿಳೆಗೆ ದೈಹಿಕ ಬದಲಾವಣೆಗಳಲ್ಲಾಗುವ ಏರು-ಪೇರುಗಳು ಬಿನ್ನವಾಗಿ ಕಂಡುಬರುತ್ತವೆ. ಚಿಕ್ಕ ವಯಸ್ಸಿನ ಹೆಣ್ಣುಮಗಳು ಗರ್ಭದರಿಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ಪ್ರಸವ ಪೂರ್ವ ಮಹಿಳೆಯರ ಗರ್ಭದಲ್ಲಿ ಮಗುವಿನ ಬೆಳವಣಿಗೆಯ ಹಂತಗಳು

ಬದಲಾಯಿಸಿ

ಗರ್ಭಿಣಿ ಸ್ತ್ರೀಯರ ಗರ್ಭದಲ್ಲಿ ಪ್ರಸವ ಪೂರ್ವ ಸ್ಥಿತಿಯಲ್ಲಿ ಮಗುವಿನ ಬೆಳವಣಿಗೆಯು ೯ ಹಂತಗಳಲ್ಲಿ ಅಂದರೆ, ನವ ಮಾಸಗಳವರೆಗೂ ನಡೆಯುತ್ತದೆ. ಆದರೆ ಕೇಲವು ಸಂದರ್ಭಗಳಲ್ಲಿ ೭ ತಿಂಗಳಲ್ಲಿ ಮಗುವಿನ ಜನನ ಸಂಭವಿಸಬಹುದು. ಈ ರೀತಿಯ ಸನ್ನಿವೇಶಗಳಲ್ಲಿ ಕೇಲವು ಸುರಕ್ಷಿತ ಹೇರಿಗೆಗಳು ಸಹ ಕಂಡು ಬರುತ್ತವೆ. ಇನ್ನೂ ಕೇಲವು ಸನ್ನಿವೇಶಗಳಲ್ಲಿ ಶಿಶುಮರಣವು ಸಹ ಸಂಭವಿಸುತ್ತವೆ. ನವ ಮಾಸಗಳಲ್ಲಿ ಮಗುವಿನ ಬೆಳವಣಿಗೆಯ ಹಂತಗಳು ಈ ಕೆಳಗಿನಂತಿವೆ. ಮತ್ತು ಗರ್ಭಿಣಿ ಸ್ತ್ರೀಯ ಆರೋಗ್ಯದಲ್ಲಿ ಉಂಟಾಗುವ ಏರು-ಪೇರುಗಳನ್ನು ಸಹ ಕಾನಬಹುದು.

  • ಮೊದಲನೇಯ ತಿಂಗಳು

ಬೀಜವು ಮೊಳಕೆಯೊಡೆಯುವ ಹಾಗೆ ಫಲಭರಿತ ಅಂಡಾಶಯದ ಉಂಡೆಯಲ್ಲಿನ ಜೀವಾಣುಗಳು ಮೊಳಕೆಯೊಡೆಯುತ್ತವೆ. ಮದಲನೇ ತಿಂಗಳಲ್ಲಿ ಗರ್ಭಕೊಶ ವಿಕಸನಗೊಳ್ಳುತ್ತದೆ. ಮಗುವಿನ ಕಣ್ಣಿನ ಗೂಡು ರಚನೆಯಾಗುತ್ತದೆ. ಅದಕ್ಕೆ ಹರಿದಾಡುವ ಜಂತುವಿನಂತಹ ತಲೆ ಮತ್ತು ಬಾಲಗಳಿರುತ್ತವೆ. ಅದರ ಕೈಕಾಲುಗಳು ಸ್ಪಷ್ಟವಾಗಿ ಮೊಳಕೆಯೊಡೆದಿರುತ್ತದೆ. ಅದು ಸಣ್ಣಗೆ ಸನಿಕೆಯ ಆಕಾರದಲ್ಲಿರುತ್ತದೆ.

  • ಎರಡನೇಯ ತಿಂಗಳು

ಎರಡನೇಯ ತಿಂಗಳ ವೇಳೆಗೆ ಕೈ ಕಾಲಿನ ಬೆರಳುಗಳು ಆಕಾರ ಪಡೆಯುತ್ತಾ ಬರುತ್ತವೆ. ಮತ್ತು ಹಿಂಗಾಲು- ಮುಷ್ಟಿಗಳು ರೂಪುಗೊಳ್ಳುತ್ತವೆ. ಮಗು ತೇಲಾಡಲು ಪ್ರಾರಂಭಿಸುತ್ತದೆ. ತಲೆ ಗೋಳಾಕಾರವಾಗಿರುತ್ತದೆ. ಕೇಲವು ಹೆಂಗಸರಿಗೆ ತುಂಬಾ ವಾಂತಿಯಾಗುತ್ತದೆ ಮತ್ತು ಯಾವುದೇ ಆಹಾರವನ್ನು ತಿನ್ನಲು ಕುಡಿಯಲು ಸಾಧ್ಯವಾಗುವುದಿಲ್ಲ. ಇದು ೩ ತೊಂಗಳ ನಂತರವು ಮುಂದುವರೆದರೆ ವೈದ್ಯರನ್ನು ನೋಡುವುದು ಉತ್ತಮ ಅವರು ಕೊಡುವ ಔಷದಿಗಳಿಂದ ಮಗು ಬೆಳೆಯಲು ಸಹಾಯವಾಗುವುದಲ್ಲದೆ, ತಾಯಿ ನಿಶ್ಯಕ್ತಳಾಗುವುದನ್ನು ಮತ್ತು ಸಹಜ ಗರ್ಭಪಾತವಾಗುವುದನ್ನು ತಪ್ಪಿಸಬಹುದು. ಭಾರವಾದ ಕೆಲಸ ಮಾಡುವುದರಿಂದ ಕೇಲವರಿಗೆ ಗರ್ಭ ಧರಿಸಿದ ಮೊದಲ ೩ ತಿಂಗಳಲ್ಲಿ ಯೋನಿಯ ಮೂಲಕ ರಕ್ತ ಹೋಗುತ್ತಿರುತ್ತದೆ. ಹಾಗಾದಲ್ಲಿ ಸಂಪೂರ್ಣ ವಿಶ್ರಾಂತಿ ಮಾಡಬೇಕು. ಇನ್ನೂ ಮುಓದುವರೆದರೆ ವೈದ್ಯರನ್ನು ಕಾಣಬೇಕು.

  • ಮೂರನೇ ತಿಂಗಳು

ಈ ವೇಳೆಗೆ ಮಗುವಿನ ಹೃದಯ ಬಡಿತ ಪ್ರಾರಂಭವಾಗುತ್ತದೆ. ತಲೆಯ ಮತ್ತು ಕಣ್ಣುಹುಬ್ಬಿನ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ. ಈಗಾಗಲೇ ರಚನೆಯಾಗಿರುವ ತಟ್ಟಿ (ಕಸ) ಹೊಕ್ಕಳು ಕುಡಿಯ ಮೂಲಕ ಅದಕ್ಕೆ ಆಹಾರವನ್ನು ಒದಗಿಸುತ್ತವೆ. ಮಗುವಿನ ಉಸಿರಾಟ ಪ್ರಾರಂಭವಾಗುತ್ತದೆ. ಅದು ತಟ್ಟೆಯ (ಕಸ) ಒಳಗಡೆ ಇರುವ ಆಮ್ನಿಯೊಟಿಕ್ ರಸವನ್ನು ಕುಡಿಯಲು ಶುರುಮಾಡಿ ಮೂತ್ರ ವಿಸರ್ಜನೆ ಮಾಡಹತ್ತುತ್ತವೆ. ಈವೇಳೆಗೆ ಸಾಮಾನ್ಯವಾಗಿ ವಾಂತಿ ಬರುವುದು ಕಡಿಮೆಯಾಗುತ್ತದೆ. ಇಲ್ಲವೇ ನಿಂತೇ ಹೋಗುತ್ತದೆ ಕೆಳಹೊಟ್ಟೆಯನ್ನು ಮುಟ್ಟಿಕೊಂಡು ಭ್ರೂಣ ಇರುವುದನ್ನು ಕಂಡುಕೊಳ್ಳಬಹುದು.

  • ನಾಲ್ಕನೇ ತಿಂಗಳು

ಮಗುವಿನ ಹಲ್ಲುಗಳು ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ಅಂಟಿನಂತಹ ರಕ್ಷಣಾ ವಸ್ತುವೊಂದು ಚರ್ಮದ ಮೇಲೆ ಉಂಟಾಗುತ್ತದೆ. ಭ್ರೂಣದ ಲಿಂಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಬಾಗದೇ ಇರುವಂತೆ, ಭಾರವನ್ನು ಎತ್ತದಂತೆ ಎಚ್ಚರಿಕೆ ವಹಿಸಬೆಕಾಗುತ್ತದೆ.

  • ಐದನೇಯ ತಿಂಗಳು

ಭ್ರೂಣವು ಈಗ ಸಂಪೂರ್ಣ ಮನುಷ್ಯಕೃತಿಗೆ ಬೆಳೆದಿರುತ್ತದೆ. ಅದರ ಒಳ ಆಂಗಗಳು ಹೆಚ್ಚು ಬಲವಾಗತೊಡಗುತ್ತದೆ ಆದರೆ ಅದರ ಶ್ವಾಸಕೋಶ ಮಾತ್ರ ಗರ್ಭಕೋಶದ ಹೋರಗಡೆ ಬದುಕುಳಿಯಬಲ್ಲಷ್ಟು, ಬೆಳೆದಿರುವುದಿಲ್ಲ ಮಗುವು ಹೊರಳಾಡುವುದರಿಂದ ಕೈ ಕಾಲುಗಳನ್ನು ಬಡೆಯುವುದರಿಂದ ತಾಯಿಗೆ ಮಗುವಿನ ಚಲನೆಯ ಅನುಭವವಾಗುತ್ತದೆ. ಸೈತೋಸೋಡಿನ ಮೂಲಕ ಮಗುವಿನ ಹೃದಯ ಬಡಿತವನ್ನು ಕೇಳಲು ಸಾಧ್ಯವಾಗುತ್ತದೆ.

  • ಆರನೇಯ ತಿಂಗಳು

ಕಣ್ಣಿನ ರೆಪ್ಪೆಗಳು ಬೇರೆ ಬೇರೆಯಾಗುತ್ತವೆ. ಮಗು ಈಗ ಅರ್ಧ ಕೆ.ಜಿ ತೂಕವಿರುತ್ತದೆ. ಕೆಳಹೊಟ್ಟೆಯ ಮೇಲೆ ಕೈಯಾಡಿಸಿ ಮಗುವಿನ ತಲೆ ಮತ್ತು ಕಾಲುಗಳು ಭಾಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ಗರ್ಭಕೋಶ ಹೊಕ್ಕಳಿನ ಭಾಗವನ್ನು ಮೀರಿ ಬೆಳೆಯುತ್ತದೆ ಬೆನ್ನಿನ ಸ್ನಾಯುಗಳು ಹಿರಿದು ಕೊಳ್ಳುವುದರಿಂದ ಕೆಲ ಹೆಂಗಸರಿಗೆ, ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

  • ಏಳನೇಯ ತಿಂಗಳು

ಮಗು ಈಗ ಸಂಪೂರ್ಣ ಬೆಳದಿರುತ್ತದೆ. ಆದರೆ ಬಸುರಿನ ಕೊನೇ ವಾರಗಳಲ್ಲಿ ಚರ್ಮದ ಕೆಳಗಡೆ ಸಂಗ್ರಹಗೊಳ್ಳುವ ಕೊಬ್ಬಿನ ಅಂಶ ಮಾತ್ರ ಸಂಗ್ರಹವಾಗಿರುವುದಿಲ್ಲ. ಮಗುವಿನ ಚಲನ ತೀವ್ರಗೊಳ್ಳುತ್ತದೆ. ಅದಕ್ಕೆ ಕಣ್ಣು ತೆರೆಯಲು ಸಾಧ್ಯವಾಗುತ್ತದೆ. ಅದಕ್ಕೀಗ ಉಸಿರಾಡಲು ಸಾಧ್ಯವಾಗುತ್ತದೆ ಸಣ್ಣಗೆ ಅಳುತ್ತದೆ. ಆದರೆ ಕೈ ಕಾಲುಗಳನ್ನು ಮಾತ್ರ ರಭಸದಿಂದ ಬಡಿಯುತ್ತದೆ. ಗರ್ಭಿಣಿ ಹೆಂಗಸಿನ ಗರ್ಭಕೋಶ ದೊಡ್ಡದಾಗುತ್ತಾ ಹೋಗುವುದರಿಂದ ಅವಳ ಒಳಗಿನ ಇತರ ಅಂಗಗಳು ಕಿವಿಚಿದಂತಾಗಿ ಪದೇ ಪದೇ ಮೂತ್ರಕ್ಕೆ ಹೋಗಬೇಕಾಗುತ್ತದೆ. ಹಾಗೂ ತುಂಬಾ ಬಗ್ಗುವುದನ್ನು ಕಡಿಮೆ ಮಾಡಬೇಕು ಇದರಿಂದ ಮಗುವಿನ ಚಲನೆಗೆ ಕಷ್ಟವಾಗುತ್ತದೆ.

  • ಎಂಟನೇಯ ತಿಂಗಳು

ಈಗ ಮಗು ಜೋರಾದ ಸದ್ದನ್ನು ಕೇಳಬಲ್ಲದು ಮತ್ತು ತನ್ನ ಕೈ ಕಾಲುಗಳ ಚಲನೆಯನ್ನು ತೀವ್ರಗೋಳಿಸುವುದರ ಮೂಲಕ ಪ್ರತಿಕ್ರೀಯಿಸುತ್ತದೆ. ನೀವು ಬಿಸಿಲಿನಲ್ಲಿದ್ದರೆ, ನಿಮ್ಮ ಹೊಟ್ಟೆಯ ಮುಖಾಂತರ ಅದು ಬೆಳಕನ್ನು ಕಂಡುಕೊಳ್ಳಬಲ್ಲದು. ಮಗು ಈಗ ತನ್ನ ಸ್ಥಾನವನ್ನು ಬದಲಿಸಿ, ಒಂದು ನಿರ್ಧಿಷ್ಟ ಸ್ಥಾನಕ್ಕೆ ಅಂಟಿಕೊಳ್ಳುತ್ತದೆ. ಹುಟ್ಟುವ ಸಮಯದವರೆಗೂ ಅದು ಇದೇ ಸ್ಥಾನದಲ್ಲಿರುತ್ತದೆ. ಈ ಹಂತದಲ್ಲಿ ಹೆರಿಗೆಯಾಗಿ ಮಗುವಿನ ತೂಕ ಎರಡು ಕೆ.ಜಿ. ಗಿಂತಾ ಜಾಸ್ತಿ ಇಲ್ಲದಿದ್ದರೆ, ಮಗು ಉಳಿಯುವ ಸಾಧ್ಯತೆಗಳು ಕಡಿಮೆ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಈ ತಿಂಗಳಲ್ಲಿ ಮಗುವಿನ ತಲೆ ಕೆಳಮುಖವಾಗಿದೆಯೂ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಹೊಟ್ಟೆಯ ಕೆಳಭಾಗವನ್ನು ಎಚ್ಚರಿಕೆಯಿಂದ ಮುಟ್ಟಿ ನೋಡಿಕೊಳ್ಳುವುದರ ಮೂಲಕ ಇದನ್ನು ಕಂಡುಕೊಳ್ಳಬಹುದು ತಲೆ ಕೆಳಮುಖವಾಗಿಲ್ಲ ಎಂದು ಭಾಸವಾದಲ್ಲಿ ವೈದ್ಯರನ್ನು ಕಾಣಬೇಕಾಗುತ್ತದೆ.

  • ಒಂಬತ್ತನೇಯ ತಿಂಗಳು

ಮಗು ಈಗ ಹೊರಗಿನ ಪ್ರಪಂಚವನ್ನು ಎದುರಿಸಲು ಸಿದ್ದವಾಗಿರುತ್ತದೆ. ಮಗು ಸಂಪೂರ್ಣ ಬೆಳದಿದ್ದು, ತೂಕದಲ್ಲಿ ಹೆಚ್ಚಾಗಿರುತ್ತದೆ. ಈ ಹಂತದಲ್ಲಿ ಅನೇಕ ತಾಯಂದಿರು ಆರಾಮವಾಗಿದ್ದರೆ, ಹಲವರಿಗೆ ತುಂಬಾ ಆರಾಮವೆನಿಸದೇ ಹೋಗುತ್ತದೆ ಮುಖ್ಯವಾಗಿ ಮಲಗಿಕೊಳ್ಳಲು. ತಾಯಿಗೆ ಸರಿಯಾದ ಪ್ರಮಾಣದ ಪೌಷ್ಠಿಕ ಆಹಾರ ಸಿಗದೇ ಹೋಗಿದ್ದಲ್ಲಿ ಈ ಹಂತದಲ್ಲೂ ಮಗು ತೂಕ ಕಮ್ಮಿ ಇದ್ದು, ಬಲಹೀನವಾಗಿರುತ್ತದೆ. ಇಂತಹ ಮಕ್ಕಳು ಬದುಕುಳಿಯುವ ಸಾಧ್ಯತೆ ಕಡಿಮೆ.


ಉಲ್ಲೇಖ

ಬದಲಾಯಿಸಿ