ಡಿ.ಎನ್.ಎ (ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ)(ಡಿ.ಎನ್.ಎ ಎಂಬ ವಂಶವಾಹಿ) ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ.

ಡಿ.ಎನ್.ಎ ಆಕಾರ
ಕ್ರೋಮೋಸೋಮ್ಸ್

ಡಿಎನ್ಎ ವಿಸ್ತರಣ ರೂಪ ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ[೧]. ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡುಹಿಡಿದಿದ ವಿಜ್ಞಾನಿಗಳು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್. ಇವರಿಗೆ ೧೯೫೬ನಲ್ಲಿ ನೊಬೆಲ್ ಪುರಸ್ಕಾರ ದೊರೆತಿದೆ. ಡಿ.ಎನ್.ಎ ಎಲ್ಲಾ ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಕ್ಕೆ ತಕ್ಕ ಸೂಚನೆಯನ್ನು ನೀಡುತ್ತದೆ. ಡಿ.ಎನ್.ಎ ಡಬಲ್ ಸ್ಟ್ರಾನ್ಡ್ ಹೆಲಿಕ್ಸ್ ಆಕಾರವನ್ನು ಹೊಂದಿರುತ್ತದೆ. ನ್ಯೂಕ್ಲಿಯೋಟೈಡ್ಗಳು ಪುಟ್ಟ ಘಟಕಗಳಿಂದ ಮಾಡಲಾಗಿರುವ ಎರಡು ಉದ್ದ ಜೈವಿಕ-ಪಾಲಿಮರ್ ಎಳೆಗಳು ನ್ಯೂಕ್ಲಿಯೊಟೈಡ್ ಇದರ ಬೆಂಬಲ. ಪ್ರತಿ ನ್ಯೂಕ್ಲಿಯೊಟೈಡ್ ನ್ಯೂಕ್ಲಿಯೋಬೇಸುಗಳ ಸಂಯೋಜನೆ ಪಡೆದಿದೆ. ನಾಲ್ಕು ನ್ಯೂಕ್ಲಿಯೋಬೇಸ್ ಗಳ ಹೆಸರು ಗುವಾನೈನ್, ಸೈಟೋಸಿನ್, ಆಡಿನೈನ್ ಮತ್ತು ಥ್ತೈಮಿನ್. ಡೀ-ಒಕ್ಸಿ ರೈಬೊಸ್ ಶುಗರ್ ಹಾಗು ಫೋಸ್ಫೇಟುಗಳ ಪರ್ಯಾಯದೊಂದಿಗೆ ನಾಲ್ಕು ನ್ಯೂಕ್ಲಿಯೋಬೇಸ್ ಗಳು ಸೇರಿ ಡಿಎನ್ಎಯ ಬೆನ್ನೆಲುಬಾಗಿದೆ. ಡಿಎನ್ ಪ್ರತಿ ಜೀವಿಗಳಲು ಜೀವನದ ಆನುವಂಶಿಕ ವಸ್ಥುವಾಗಿದೆ. ಡಿಎನ್ಎಯ ಎರಡು ಎಳೆಗಳು ಒಂದೇ ರೀತಿಯ ಮಾಹಿತಿಯನ್ನು ಹೊಂದಿದೆ. ಇದರ ಎರಡು ಎಳೆಗಳು ಬೇರ್ಪಡುವಾಗ ಅದರಲ್ಲಿರುವ ಜೈವಿಕ ಮಾಹಿತಿಯು ಸಹ ನಕಲುಗೊಳ್ಳುತ್ತದೆ. ಇದರ ಎರಡು ಎಳೆಗಳು ವಿರುದ್ದ ದಿಕ್ಕಿನಲ್ಲಿ ಇರುವುದರಿಂದ ಇದು ವಿರೋದಿ ಸಮಾಂತರ ಎಂದು ಕರೆಯಲಾಗಿದೆ. ಪ್ರತಿ ಎಳೆಗಳಿನ ದಿಕ್ಕಿಗೂ ೩‘ ಹಾಗು ೫‘ ಎಂಬ ಹೆಸರು ಕೊಡಲಾಗಿದೆ. ಇದರ ಹೆಚ್ಚು ಭಾಗವು ನಾನ್-ಕೋಡಿಂಗ್ ಆಗಿದೆ. ಈ ಕೋಡನ್ನು ಉಪಯೋಗಿಸಿ ಆರ್.ಎನ್.ಎ ಎಂಬ ನ್ಯೂಕ್ಲಿಕ್ ಆಸಿಡನ್ನು ನಿರ್ಮಿಸಿ ಅದರ ಮುಖಾಂತರ ಪ್ರೋಟೀನುಗಳು ನಿರ್ಮಿತಗೊಳ್ಳುವುದು. ಜೀವ ಕೋಶಗಳಲ್ಲಿ ಇವು ಉದ್ದ ಆಕಾರವನ್ನು ಹೊಂದಿದೆ. ಇದಕ್ಕೆ ಕ್ರೋಮೋಸೋಮುಗಳೆಂದು ಕರೆಯಬಹುದು. ಜೀವಕೋಶಗಳ ಭಾಗದ ನಂತರವು ಅದರಲ್ಲಿರುವ ಕ್ಕ್ರೋಮೋಸೋಮುಗಳ ಸಂಖ್ಯೆ ಸಮಾನವಾಗಿರುತ್ತದೆ. ಯೂಕಾರ್ಯೋಟುಗಳಲ್ಲಿ ಡಿ.ಎನ್.ಎ ಅದರ ನ್ಯೂಕ್ಳಿಯಸ್ ಹಾಗು ಅಂಗಕಳಾದ ಮೈಟೋಕೋಂಡ್ರಿಯ ಹಾಗು ಕ್ಳೋರೋಪ್ಳಾಸ್ಟುಗಳಲ್ಲಿ ಅಡಗಿಸಲಾಗಿದೆ. ಪ್ರೋಕಾರ್ಯೋಟುಗಳಲ್ಲಿ ಇದು ಸೈಟೋಪ್ಳಾಸಮಿನಲ್ಲಿ ಇರುವುದು.

ಡಿ.ಎನ್.ಎ ಯ ವಿವರಸಂಪಾದಿಸಿ

 • ಡಿ ಎನ್ ಎಯ ಎರಡು ಏಳೆಗಳ ನಡುವೆ ಇರುವ ಅಕ್ಷದ ಸುತ್ತು ಸುತ್ತಲಾಗಿದೆ .
 • ಜೀವಕೋಶಗಳಲ್ಲಿ ಇವು ಎರಡು ಎಳೆಗಳ ಅಣುಗಳಾಗಿ ಕಂಡು ಬರುತ್ತದೆ.
 • ನ್ಯೂಕ್ಲಿಯೋಬೇಸ್ ಡಿ-ಓಕ್ಸಿ ರೈಬೊಸ್ ಶುಗರ್ ಒಂದಿಗೆ ಸೇರಿ ನ್ಯುಕ್ಲಿಯೋಸೈಡ್ ಆಗುತ್ತದೆ.
 • ಈ ನ್ಯುಕ್ಲಿಯೋಸೈಡ್ ಫಾಸ್ಫೇಟ್ ಅಣುವಿನೊಂದಿಗೆ ಸೇರಿ ನ್ಯೂಕ್ಲಿಯೋಟೈಡ್ ಆಗುತ್ತದೆ.
 • ಇದರಲ್ಲಿ ೨ ಡಿ-ಓಕ್ಸಿ ರೈಬೊಸ್ ನ್ಯುಕ್ಲಿಯೋಸೈಡ್ ಇರುತ್ತದೆ. ಆ ಶುಗರ್ ಪೆನ್ಟೋಸ್ ಶುಗರ್ ಆಗಿರುತ್ತದೆ.
 • ಈ ಡಿ-ಓಕ್ಸಿ ರೈಬೊಸ್ , ಒಂದು ಕೊನೆಯಲ್ಲಿ ೫‘ ಫಾಸ್ಫೇಟ್ ಅಣು ಹಾಗು ಮತೊಂದು ಕೊನೆಯಲ್ಲಿ ೩‘ ಓಹೆಚ್ ಮೂಖ್ಯ ಅಣುಗಳನ್ನು ಹೊಂದಿದೆ.
 • • ಎರಡು ಶುಗರ್ ಅಣುಗಳೂ ಫಾಸ್ಫೋಡೈಎಸ್ ಟರ್ ಬಾಂಡ್ ಗಳಿಂದ ಒಗ್ಗೂಡಿದೆ.
 • • ಡಿ ಎನ್ ಎಯಲ್ಲಿ ಮೈನರ್ ಗ್ರೂವ್ ಹಾಗೂ ಮೇಜರ್ ಗ್ರೂವ್ ಇರುತ್ತದೆ.
 • • ಎರಡು ನ್ಯೂಕ್ಲಿಯೋಬೇಸುಗಳ ನಡುವಿನ ಅಂತರ ೩.೪ ಆಂಗ್-ಸ್ಟೋಂಘ್
 • • ಡಿ.ಎನ್.ಎಯಲಿ ಎರಡು ಪಡೆಗಳು ಪ್ರಾಥಮಿಕ ಸ್ಥಿರವಾಗಿದೆ; ೧- ನ್ಯೂಕ್ಲಿಯೋಟೈಡ್ಗಳ ನಡುವೆ ಹೈಡ್ರೋಜೆನ್ ಬಂಧವನು ಹಾಗು ,೨- ಬೇಸ್ ಪೇರಿಸಿ ಪರಸ್ಪರ ಆರೊಮ್ಯಾಟಿಕ್ ನ್ಯೂಕ್ಲಿಯೋಬೇಸ್ಗಲಲಿ ಈ ಶಕ್ತಿಯನುಕಾನ ಬಹುದು.
 • • ನ್ಯೂಕ್ಲಿಯೋಬೇಸ್ ಗಳನ್ನು ಎರಡು ರೀತಿಯಾಗಿ ವರ್ಗೀಕರಿಸಲಾಗಿದೆ : ಪ್ಯೂರಿನ್ಗಳು - ಗುವಾನೈನ್, ಆಡಿನೈನ್ ಹಾಗು ಪಿರಮಿಡಿನ್ಗಳು – ಸೈಟೋಸಿನ್, ಥ್ತೈಮಿನ್.
 • • ಎಳೆಗಳು ಸಮ್ಮಿತೀಯವಾಗಿ ಪರಸ್ಪರ ಸಂಬಂಧಿಸಿದಂತೆ ಇರುವ ಕಾರಣ,ಇದರ ತೋಡುಗಳು ಅಸಮಾನವಾದ ಗಾತ್ರವನು ಹೋಂದಿದೆ. ಮೇಜರ್ ಗ್ರೂವ್ ಮತ್ತು
 • • ಮೇಜರ್ ಗ್ರೂವಿನ ಅಗಲ ೨೨ ಆಂಗ್-ಸ್ಟೋಂಘ್ ಹಾಗು ಮೈನರ್ ಗ್ರೂವಿನ ಅಗಲ ೧೨ ಆಂಗ್-ಸ್ಟೋಂಘ್.
 • • ಸೆನ್ಸ್ ಮತ್ತು ಆಂಟಿಸೆನ್ಸ್ ಎರಡೂ ಸರಣಿಗಳು ಡಿ.ಎನ್.ಎಯ ಓಂದೇ ಎಳೆಯ ವಿವಿಧ ಭಾಗಗಳಲ್ಲಿ ಇರಬಹುದು .
 • • ಡಿ.ಎನ್.ಎ ಸೂಪರ್ಕಾಯ್ಲ್ ಪ್ರಕ್ರಿಯೆಲಿ, ಡಿ.ಎನ್.ಎಯನು ಒಂದು ಹಗ್ಗದ ರೀತಿಯಲ್ಲಿ ತಿರುಚಿದ ಮಾಡಬಹುದು.
 • • ಡಿ.ಎನ್.ಎನು ಹೆಲಿಕ್ಸ್ ದಿಕ್ಕಿನಲ್ಲಿ ಸುತ್ತಿದಾಗ, ಬೇಸ್ ಒಟ್ಟಿಗೆ ಹೆಚ್ಚು ಬಿಗಿಯಾಗಿ ನಡೆಸಲಾಗುತ್ತದೆ ಇದನು ಧನಾತ್ಮಕ ಸೂಪರ್ಕಾಯ್ಲ್ ಅಥವಾ ಪೊಸಿಟ್ವ್ ಸೂಪರ್ಕಾಯ್ಲ್ ಎಂದು ಕರಯಲಾಗಿದೆ.
 • • ಡಿ.ಎನ್.ಎನು ಹೆಲಿಕ್ಸಯಿನ ವಿರುದ ದಿಕ್ಕಿನಲ್ಲಿ ಸುತ್ತಿದಾಗ, ನೆಗಟಿವ್ವ್ ಸೂಪರ್ಕಾಯ್ಲ್ ಎನ್ನಲಾಗಿದೆ.

ಡಿಎನ್‌ಎ ಎಂದರೆಸಂಪಾದಿಸಿ

ಡಿಎನ್‌ಎ ಎಂದರೆ ಏನು?

 • ನಮ್ಮ ಶರೀರದಲ್ಲಿ ಅಂದಾಜು ಒಂದು ಕೋಟಿ ಶತಕೋಟಿ (ಹತ್ತು ಸಾವಿರ ಟ್ರಿಲಿಯನ್) ಜೀವಕೋಶಗಳಿವೆ. ಆ ಒಂದೊಂದರ ಮಧ್ಯೆ ಒಂದೊಂದು ಬೀಜಕೇಂದ್ರ ಇದೆ. ಅದರಲ್ಲಿ ಸುರುಳಿ ಸುತ್ತಿಕೊಂಡಂತೆ ೪೬ (೨೩ ಜೋಡಿ)ತಂತುಗಳಿದ್ದು ಅವಕ್ಕೆ ‘ವರ್ಣತಂತು’ ಎನ್ನುತ್ತಾರೆ. ಅವುಗಳಲ್ಲಿ ೨೩ ಅಮ್ಮನ ಕಡೆಯಿಂದ ಬಂದಿದ್ದು ಇನ್ನುಳಿದ ೨೩ ಅಪ್ಪನ ಕಡೆಯಿಂದ ಬಂದಿದ್ದು. ಆ ಒಂದೊಂದು ವರ್ಣತಂತುವಿನಲ್ಲೂ ಕಂಡುಬರುವ ಅತ್ಯಂತ ಚಮತ್ಕಾರಿಕ ವಸ್ತುವೇ ಡಿಎನ್‌ಎ. ತಿರುಪಣಿ ಏಣಿಯಂತೆ ಕಾಣುವ ಅದನ್ನು ಜಗ್ಗಿ ಎಳೆದರೆ ಎರಡು ಮೀಟರ್ ಉದ್ದವಾಗುತ್ತದೆ. ನಿಮ್ಮ ಶರೀರದಲ್ಲಿರುವ ಎಲ್ಲ ಜೋಡಿ ಪಟ್ಟಿಯನ್ನು ಸೇರಿಸಿದರೆ ಅದು ಅಂದಾಜು ಎರಡು ಕೋಟಿ ಕಿಲೊಮೀಟರ್ ಉದ್ದದ್ದಾಗುತ್ತದೆ. ಅದರ ಏಕೈಕ ಉದ್ದೇಶ ಏನೆಂದರೆ ಇನ್ನಷ್ಟು ಡಿಎನ್‌ಎಗಳನ್ನು ಸೃಷ್ಟಿ ಮಾಡು¬ವುದು.
 • ಇಡೀ ಜಗತ್ತಿನಲ್ಲಿ ಒಂದು ಜೀವಿಯ ಡಿಎನ್‌ಎ ಇದ್ದ ಹಾಗೆ ಇನ್ನೊಂದು ಜೀವಿಯದು ಇರಲು ಸಾಧ್ಯವಿಲ್ಲ. ಏಕೆಂದರೆ ಪ್ರತಿ ಡಿಎನ್‌ಎ ತಿರುಪಣಿ ಏಣಿಯ ಪಾವಟಿಗೆಗಳೂ ಎ-–ಸಿ–-ಟಿ–-ಜಿ ಎಂಬ ನಾಲ್ಕು ಕೆಮಿಕಲ್ ಅಕ್ಷರಗಳಿಂದ ರೂಪಿತವಾಗಿವೆ. ಮನುಷ್ಯನ ಒಂದೊಂದು ಡಿಎನ್‌ಎಯಲ್ಲಿ ೩೨೦ ಕೋಟಿ ಕೆಮಿಕಲ್ ಅಕ್ಷರಗಳ ಮಾಲೆ ಇರುತ್ತದೆ. ಸುದೀರ್ಘ ಗ್ರಂಥವೊಂದರ ಅಕ್ಷರಗಳು, ಪದಗಳು, ವಾಕ್ಯಗಳು, ಪುಟಗಳು, ಅಧ್ಯಾಯಗಳ ಹಾಗೆ ಅವೆಲ್ಲ ಸೇರಿ ಆಯಾ ವ್ಯಕ್ತಿಯ ಚಹರೆಯ ವರ್ಣನೆ ಮಾಡುತ್ತವೆ. ಅದರಲ್ಲಿ ನಮ್ಮದಷ್ಟೇ ಅಲ್ಲ, ತಮ್ಮ ತಾಯಿ ತಂದೆಯರ ಪೂರ್ವಜರ ಹಾಗೂ ಅವರ ಪೂರ್ವಜರ ಲಕ್ಷಣಗಳ ವರ್ಣನೆ ಕೂಡ ಇರುತ್ತದೆ.ಅದನ್ನೇ ಅದು ಮರುಸೃಷ್ಟಿ ಮಾಡುತ್ತ ಹೋಗುವುದು.
 • ಮಾನವ ಡಿಎನ್‌ಎಯ ೩೨೦ ಕೋಟಿ ಅಡ್ಡಪಟ್ಟಿಗಳಲ್ಲಿ ಶೇ ೩ರಷ್ಟು ಮಾತ್ರ ನಿರ್ದಿಷ್ಟ ಸ್ವರೂಪದ, ನಿರ್ದಿಷ್ಟ ಕೆಲಸ ಮಾಡುವ ಗುಣಾಣು (ಜೀನ್)ಗಳೆನಿಸಿವೆ. ಇನ್ನುಳಿದ ೯೭ ಭಾಗಗಳ ಅಡ್ಡಪಟ್ಟಿಗಳು ಏಕಿವೆ ಎಂಬುದೇ ಗೊತ್ತಿಲ್ಲ. ಅದಕ್ಕೆ ‘ಜಂಕ್ ಡಿಎನ್‌ಎ’ ಅಂದರೆ ನಿರುಪಯುಕ್ತ ಸರಪಳಿ ಎಂತಲೇ ಕರೆಯುತ್ತಾರೆ. ಯಾತಕ್ಕೂ ಪ್ರಯೋಜನ ಇಲ್ಲದ ಇವನ್ನೇ ವಿಧಿ ವಿಜ್ಞಾನಿಗಳು ಅಪರಾಧ ಪತ್ತೆಗೆ ಬಳಸುತ್ತಾರೆ.[೨]

ಪರ್ಯಾಯ ಡಿ.ಎನ್.ಎ ವಿನ್ಯಾಸಗಳುಸಂಪಾದಿಸಿ

 • ಡಿಎನ್ಎ ಹಲವಾರು ರಚನೆಗಳಿಗೆ ಅಸ್ತಿತ್ವದಲ್ಲಿದೆ ಅವು ಎ - ಡಿ.ಎನ್.ಎ, ಬಿ - ಡಿ.ಎನ್.ಎ ಹಾಗು ಸಿ - ಡಿ.ಎನ್.ಎ. ಕೇವಲ ಬಿ –ಡಿ.ಎನ್.ಎ ಮತ್ತು Z-ಡಿಎನ್ಎ ನೇರವಾಗಿ ಕ್ರಿಯಾತ್ಮಕ ಜೀವಿಗಳಲ್ಲಿ ಗಮನಿಸಲಾಗಿದೆ. ಬಿ –ಡಿ.ಎನ್.ಎ ಸುಸ್ಪಷ್ಟವಾಗಿ ರಚನೆಯಾಗದಿದ್ದರು, ಡಿ ಎನ್ ಎಯ ಕುಟುಂಬಕ್ಕೆ ಹೋಲಿಸುವಂತೆ ತನ ರಚನೆಯನು ಹೊಂದಿದೆ. ಬಿ-ಡಿಎನ್ಎ ಹೋಲಿಸಿದರೆ, ಎ-ಡಿಎನ್ಎ ರೂಪ, ವಿಶಾಲ ಬಲಗೈ ಸುರುಳಿ, ಆಳವಿಲ್ಲದ, ವಿಶಾಲ ಸಣ್ಣ ತೋಡು ಮತ್ತು ಸಂಕುಚಿತ, ಆಳವಾದ ಪ್ರಮುಖ ತೋಡುಗಳನೊಂದಿದೆ. ಎ ರೂಪವು ಅಶರೀರಶಾಸ್ತ್ರದ ಪರಿಭಾಷೆಯ ಅಡಿಯಲ್ಲಿ ಸಂಭವಿಸುತ್ತದೆ.
 • ಉದ್ದ ಕ್ರೋಮೋಸೋಮುಗಳ ತುದಿಯಲಿ ವಿಶೇಷವಾದ ಡಿಎನ್ಎಗಳನ್ನು ಕಾಣಬಹುದು ಇವುಗಳಿಗೆ ಟೆಲೋಮಿರ್ಯ ಎಂದು ಹೆಸರು. ಇವುಗಳ ಮುಖ್ಯ ಕಾರ್ಣ ಕೋಶವನು ಕ್ರೋಮೋಸೋಮುಗಳಾಗಿ ರೆಪ್ಲೆಕ್‍ಟ್ ಮಾಡುವುದು. ಡಿಎನ್ಎಗಳ ಅನೇಕ ಪರಿವರ್ತನೆಗಳು, ಡಿಎನ್ಎ ಅನುಕ್ರಮ ಬದಲಾಗುವ ಎಲ್ಲವೂ ಹಾನಿಗೊಳಗಾಗಬಹುದು. ಸಾಮಾನ್ಯವಾಗಿ ಯೂಕ್ಯಾರಿಯೋಟ್ಗಳಲ್ಲಿ ರೇಖಾತ್ಮಕ ಕ್ರೋಮೋಸೋಮುಗಳನ್ನು ಕಾಣಬಹುದು ಹಾಗು ಪ್ರೋಕ್ಯಾರಿಯೋಟ್ಗಳಲ್ಲಿ ವೃತ್ತಾಕಾರದ ಕ್ರೋಮೋಸೋಮುಗಳನ್ನು ಕಾಣಬಹುದು.[೩]

ಪ್ರತಿಕೃತಿಸಂಪಾದಿಸಿ

ಅಣುಕೋಶ ವಿಭಜನೆ ಬೆಳೆಯಲು ಜೀವಿಗಲಿಗೆ ಅಗತ್ಯ. ಡಿ.ಎನ್.ಎ ಎರಡು ಎಳೆಗಲು ಸುಲಬವಾದ ಯಾಂತ್ರಿಕವನು ಡಿ.ಎನ್.ಎಯ ಪ್ರತಿಕೃತಿಗೆ ಒದಗಿಸುತ್ತದೆ. ಡಿ.ಎನ್.ಎ ಪೊಲಿಮರ್ರೈಸ್ ಎಂಬ ಕಿಣ್ವ ೩’ ರಿಂದ ೫’ ದಿಕ್ಕಿನಲಿ ಮಾತ್ರ ಸ್ಟ್ರ್ಯಾಂಡ್ ವಿಸ್ತರಿಸಬಹು. ಈ ರೀತಿಯಲ್ಲಿ, ಹಳೆಯ ಘಟಕ ಆಧಾರವು ಅಪ್ಪಣೆಯನ್ನು ಮೇಲೆ ಬೇಸ್ ಹೊಸ ಎಳೆಯನ್ನು ಮೇಲೆ ಕಾಣಿಸಿಕೊಳ್ಳುವ, ಮತ್ತು ಜೀವಕೋಶದ ಡಿಎನ್ಎ ಐಸಿಟಿ ಯ ಒಂದು ಪರಿಪೂರ್ಣ ಪ್ರತಿಯನ್ನು ಅಂತ್ಯಗೊಳ್ಳುತ್ತದೆ.

ಹೆಚ್ಚಿನ ಮಾಹಿತಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. http://www.basicbiology.net/micro/genetics/dna
 2. (ನಾಗೇಶ್ ಹೆಗಡೆ-04/12/2014/ಪ್ರಜಾವಾಣಿ)
 3. ಮಾನ ಹರಾಜು, ಈಗ ನೊಬೆಲ್ ಪದಕ ಹರಾಜು;ನಾಗೇಶ ಹೆಗಡೆ;d: 04 ಡಿಸೆಂಬರ್ 2014,
"https://kn.wikipedia.org/w/index.php?title=ಡಿ.ಎನ್.ಎ&oldid=1014778" ಇಂದ ಪಡೆಯಲ್ಪಟ್ಟಿದೆ