ಮುಂಬೈ ಷೇರುಪೇಟೆ

ಭಾರತದ ಮುಂಬೈನಲ್ಲಿರುವ ಷೇರುಪೇಟೆ

ಮುಂಬಯಿ ಷೇರುಪೇಟೆ ನಿಯಮಿತವು (ಮುಂಚೆ, ಬಂಡವಾಳಪತ್ರ ವಿನಿಮಯ ಕೇಂದ್ರ, ಮುಂಬಯಿ; ಜನಜನಿತವಾಗಿ ಬಿಎಸ್ಇ ಎಂದು ಕರೆಯಲಾದ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿದೆ, ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು ಭಾರತಮುಂಬಯಿದಲಾಲ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ ಡಾಲರ್‌ಗಳಷ್ಟಿತ್ತು, ಹಾಗಾಗಿ ಅದು ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ ಹೆಗ್ಗಳಿಕೆ ಪಡೆಯಿತು. ಮುಂಬಯಿ ಷೇರುಪೇಟೆ ಬೆಳಿಗ್ಗೆ ೯.೦೦ ಘಂಟೆಯಿಂದ ಮಧ್ಯಾನ್ಹ ೩.೩೦ ರ ವರೆಗೆ ವಾರದಲ್ಲಿ ಐದು ದಿನ (ಶನಿವಾರ,ರವಿವಾರ ಹೊರತುಪಡಿಸಿ) ಕಾರ್ಯ ನಿರ್ವಹಿಸುತ್ತದೆ.[೧]

ಉಲ್ಲೇಖಹಳುಸಂಪಾದಿಸಿ