ಮುಂಬಯಿ ಕನ್ನಡ ಸಂಘ

(ಮುಂಬಯಿ ಕನ್ನಡ ಸಂಘ, ಮುಂಬಯಿ ಇಂದ ಪುನರ್ನಿರ್ದೇಶಿತ)

ಮುಂಬಯಿ ಕನ್ನಡ ಸಂಘ, ಸನ್, ೧೯೩೬ ರ 'ಯುಗಾದಿ ಹಬ್ಬ' ದ ದಿನದಂದು ಸ್ಥಾಪಿಸಲ್ಪಟ್ಟಿತು. ಮುಂಬಯಿ ಕನ್ನಡ ಸಂಘ ದ ಉದ್ಘಾಟನೆ ಮುಂಬಯಿನಗರದ ಈಗಿನ ಪ್ರಭಾದೇವಿಯೆಂದು ಕರೆಯಲ್ಪಡುವ ವರ್ಲಿಯ 'ನೀಲಕಂಠೇಶ್ವರ ಸ್ವಾಮಿ ದೇವಾಲಯ'ದಲ್ಲಿ 'ಕೀರ್ತನ ಕೇಸರಿ ಬೈಲೂರು ಕೇಶವ ದಾಸ'ರಿಂದ ವಿಧಿವತ್ತಾಗಿ ಮಾಡಲಾಯಿತು. ಹಾಗೆ ಜನ್ಮತಾಳಿದ ಸಂಘವು ವರ್ಷವರ್ಷವೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮಾಟುಂಗಾ ಪೂರ್ವದ ಈಗಿನ ಪರಿಸರಕ್ಕೆ ಬಂದು ಸೇರಿತು.

'ಮಾಟುಂಗಾದ ಭಾವುದಾಜಿ ರಸ್ತೆಯಲ್ಲಿರುವ, ಮುಂಬಯಿ ಕನ್ನಡ ಸಂಘ'

ಕನ್ನಡ ಶಾಲೆಯ ಆರಂಭ

ಬದಲಾಯಿಸಿ

ಮುಂಬಯಿನಗರದಲ್ಲಿ ಬಂದು ನೆಲೆಸಿದ ಕನ್ನಡಿಗರಿಗೆ ಕನ್ನಡ ಕಲಿಕೆಯ ಜವಾಬ್ದಾರಿಯನ್ನು ಕನ್ನಡ ಸಂಘವನ್ನು ಹುಟ್ಟುಹಾಕಿದ ಸ್ಥಾಪಕ ಸದಸ್ಯರು ಪ್ರಾರಂಭಿಸಿದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ, 'ಕನ್ನಡ ಶಾಲೆ'ಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದು, ಈಗಿರುವ ರಾಷ್ಟ್ರೀಯ ಕನ್ನಡ ಶಾಲೆಯ ಉದಯವಾಯಿತು. ಮುಂಬಯಿನ ಉಪನಗರದಲ್ಲೊಂದಾದ ವಡಾಲದಲ್ಲಿರುವ ಶಾಲೆಯಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳ ಸಂಖ್ಯೆ ೩೦೦ ಕ್ಕೂ ಹೆಚ್ಚು. ಹಾಗೆ ಬೆಳೆದ ಶಾಲೆ ಇಂದು ಸ್ನಾತಕೋತ್ತರ ಪದವಿಯನ್ನು ಪ್ರದಾನಮಾಡುವ ಕಾಲೇಜ್ ಆಗಿ ಬೆಳೆದುಬಂದಿದೆ.

ಕನ್ನಡ ಪುಸ್ತಕಾಲಯ

ಬದಲಾಯಿಸಿ

ಕನ್ನಡ ಸಂಘದಲ್ಲಿ ಸುಮಾರು ೧,೪೦೦ ಮಿಗಿಲಾದ ಮೌಲಿಕ ಪುಸ್ತಕಗಳು ಓದಲು ಸದಸ್ಯರಿಗೆ ಲಭ್ಯವಿದೆ. ಚಿಕ್ಕದಾದರೂ ಚೊಕ್ಕವಾಗಿರುವ ಪುಸ್ತಕಾಲಯದಲ್ಲಿ ನಮ್ಮ ಕನ್ನಡ ನಾಡಿನ ಹೆಸರಾಂತ ಸಾಹಿತಿಗಳ ಭಾವಚಿತ್ರಗಳನ್ನು ಅಂದವಾಗಿ ಜೋಡಿಸಲಾಗಿದೆ. ಕನ್ನಡ ದೈನಿಕ ವಾರಪತ್ರಿಕೆಗಳು, ಮಾಸಪತ್ರಿಕೆಗಳನ್ನು ಇಲ್ಲಿ ಓದಬಹುದು. 'ಗಣೇಶೋತ್ಸವ', 'ದತ್ತಿ ಉಪನ್ಯಾಸ', 'ಮಕ್ಕಳ ದಿನಾಚರಣೆ', 'ನಾಡಹಬ್ಬ', 'ಪುರುಂದರ ದಾಸರ ಆರಾಧನೆ'ಯಂತಹ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಕನ್ನಡ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಪಸರಿಸುವಲ್ಲಿ ದುಡಿಯುತ್ತಿದೆ. ಮುಂಬಯಿನ ಕನ್ನಡೇತರಿಗೆ ಕನ್ನಡ ಕಲಿಸುವ ಅಭಿಯಾನ ಸುಮಾರು ೧೨ ವರ್ಷಗಳಿಂದ ಸತತವಾಗಿ ನಡೆದುಕೊಂಡು ಬಂದಿದೆ. ಪ್ರತಿವರ್ಷ ಸುಮಾರು ೪೦-೫೦ ಮಂದಿ ಕನ್ನಡಿಗರು ಮತ್ತು ಕನ್ನಡೇತರು ಈ ಸೌಲಭ್ಯವನ್ನು ಪಡೆದು 'ಪ್ರಮಾಣಪತ್ರ'ಗಳನ್ನು ಗಳಿಸುತ್ತಿದ್ದಾರೆ. ಕರ್ನಾಟಕಕ್ಕೆ ಹೋದಾಗ ಈ 'ಸರ್ಟಿಫಿಕೇಟ್' ನಿಂದ ಹಲವು ಸೌಲಭ್ಯಗಳು ದೊರೆಯುತ್ತಿವೆ.

  • ೩೦-೦೩-೧೯೬೧ ರಲ್ಲಿ, ಕನ್ನಡ 'ಸಂಘದ ಬೆಳ್ಳಿ ಹಬ್ಬ' ಜರುಗಿತು.
  • ೨೯-೧೨-೧೯೮೬ ರಲ್ಲಿ 'ಬಂಗಾರದ ಹಬ್ಬ' ಜರುಗಿತು.
  • ೦೭-೦೧-೧೯೯೯ ರಲ್ಲಿ 'ವಜ್ರ ಮಹೋತ್ಸವ,' ಜರುಗಿತು.

ಸಂದರ್ಶಕರ ಸವಿ ನುಡಿಗಳ ಕಿರು ಹೊತ್ತಿಗೆ

ಬದಲಾಯಿಸಿ

ಕನ್ನಡ ನಾಡಿನ ಒಬ್ಬ ಅತ್ಯಂತ ಮೇಧಾವಿ, ವೈದ್ಯೆ, ಹಾಗೂ ಒಳ್ಳೆಯ ಪ್ರಭಾವೀ ಬರವಣಿಗೆ ಹೆಸರಾದ, ಡಾ ಅನುಪಮಾ ನಿರಂಜನರ ಶುಭಹಾರೈಕೆಗಳಿಂದ ಆರಂಭವಾಗಿ, ವಿ. ಸೀ, ಅ.ನ.ಕೃ, ಶಿವರಾಮಕಾರಂತ್, ದ.ರಾ.ಬೆಂದ್ರೆ, ಕೆ.ಎನ್.ದೊರೈಸ್ವಾಮಿ, ಕೀರ್ತಿನಾಥ ಕುರ್ತುಕೋಟಿ ಮೊದಲಾದ ಖ್ಯಾತನಾಮರುಗಳ ಸಹಿತ, ಕೊನೆಯಲ್ಲಿ, ಮುಂಗಾರುಮಳೆ ಖ್ಯಾತಿಯ, ಕವಿ, ಜಯಂತಕಾಯ್ಕಿಣಿಯವರ ಶುಭಾಷಯದ ಹಸ್ತಾಕ್ಷರಗಳಿಂದ ಮುಕ್ತಾಯ ಹಾಡುವ ಈ ಕಿರುಹೊತ್ತಿಗೆ, ಮುಂಬಯಿನ ಮತ್ತು ರಾಷ್ಟ್ರದ ಕನ್ನಡಭಾಷಾಭಿಮಾನಿಗಳ ಪ್ರೀತಿ, ಸೌಹಾರ್ದಗಳಿಗೆ ಕೈಹಿಡಿದ ಕನ್ನಡಿಯಾಗಿದೆ. ಕನ್ನಡ ಸಂಘದ ಮಾಜೀ ಕಾರ್ಯದರ್ಶಿಗಳಾದ, 'ಎಚ್.ಎ.ಲಕ್ಷ್ಮಣರಾವ್,' ಮತ್ತು 'ಡಾ.ಕೆ.ಎಸ್.ರಾಜು'ರವರ ಈ ಅನಿಸಿಕೆಗಳ ಪುಸ್ತಕರೂಪದ ಕೆಲಸವನ್ನು ಕಾರ್ಯರೂಪಕ್ಕೆ ತರಲು ಬೇಕಾದಧನಸಹಾಯವನ್ನು ಒದಗಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಡಾ.ಜಿ.ಎನ್.ಉಪಾದ್ಯ, ಮತ್ತು ಮುಂಬಯಿನ ಖ್ಯಾತ ಕವಿಯಿತ್ರಿ, ಸಾಹಿತಿ, ಡಾ. ಶ್ರೀಮತಿ ಸುನೀತ ಎಂ ಶೆಟ್ಟಿ ಸೂಕ್ತ ಸಲಹೆಗಳನ್ನು ಕೊಡುವುದರ ಜೊತೆಗೆ ಮಾರ್ಗದರ್ಶನ ಮಾಡಿದ್ದಾರೆ.

 
ಸಂಘದ ಮಹಿಳಾ ಸದಸ್ಯರ ವಿಭಾಗ 'ಸ್ಮೇಹ ಮಿಲನ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ'

ಬದಲಾಯಿಸಿ

'ಅಮೃತ ಮಹೋತ್ಸವ'ದ ಉದ್ಘಾಟನೆಯನ್ನು ಮಾಜಿ ಜಸ್ಟಿಸ್, ಬಿ. ಎನ್. ಶ್ರೀಕೃಷ್ಣರವರು ೨೨-೦೮-೨೦೧೦ ರಲ್ಲಿ ನೆರೆವೇರಿಸಿದರು. ಅಂದಿನಿಂದ ಸತತವಾಗಿ ಒಂದು ವರ್ಷ, ಪ್ರತಿ ತಿಂಗಳೂ ಕನ್ನಡಪರ ಕಾರ್ಯಕ್ರಮಗಳಾದ, ಸಾಹಿತ್ಯೋತ್ಸವ, ಸಂಗೀತ ನೃತ್ಯೋತ್ಸವ, ನಾಟಕೋತ್ಸವ, ಯಕ್ಷಗಾನ, ಪ್ರತಿಭಾಪುರಸ್ಕಾರ ಕಾರ್ಯಕ್ರಮಗಳನ್ನು ಕನ್ನಡ ಸಂಘವು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಸಂಘದ ಕಾರ್ಯಕ್ರಮಗಳನ್ನು ಕಂಡು ಅಥವಾ ಕೇಳಿ ಮೆಚ್ಚುಗೆ ಸೂಚಿಸಿದ ಕನ್ನಡದ ದಿಗ್ಗಜರಲ್ಲಿ ಪ್ರಮುಖರು :

  • ಶ್ರೀ. ಅನಕೃ
  • ಶ್ರೀ. ತರಾಸು,
  • ಶ್ರೀ. ದರಾಬೇಂದ್ರೆ,
  • ಪ್ರಾಧ್ಯಾಪಕ, ಶ್ರೀ. ವಿ.ಸೀ
  • ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಡಾ.ಕೀರ್ತಿನಾಥ ಕುರ್ತುಕೋಟಿ
  • ಡಾ.ಕೆ.ಶಿವರಾಮ ಕಾರಂತ,
  • ಡಾ.ಎಸ್.ಎಲ್.ಬೈರಪ್ಪ
  • ಶ್ರೀ ಜಯಚಾಮರಾಜೇಂದ್ರ ವೊಡಿಯರ್,
  • ಶ್ರೀ.ಎಸ್.ನಿಜಲಿಂಗಪ್ಪ
  • ಕೆ.ಹನುಮಂತಯ್ಯ
  • ಎಚ್.ಸಿ.ದಾಸಪ್ಪ
  • ಜನಾರ್ಧನ ಪೂಜಾರಿ

ಮುಂತಾದವರು ಮುಂಬಯಿ ಕನ್ನಡ ಸಂಘದ ಕಾರ್ಯ ಚಟುವಟಿಕೆಗಳನ್ನು ಕೇಳಿ ನೋಡಿ ತಮ್ಮ ಸಂತಸವನ್ನು ಅಭಿವ್ಯಕ್ತಿಪಡಿಸಿದ್ದಾರೆ. ಈ ಪುಸ್ತಕ ಒಂದು ಅಪರೂಪದ ದಾಖಲೆಯರೂಪದಲ್ಲಿ 'ಸಂಘದ ಅಮೃತ ಮಹೋತ್ಸವ ಸಮಾರಂಭ'ದ ಸಮಯದಲ್ಲಿ ಬಿಡುಗಡೆಮಾಡಲಾಯಿತು. ಸಮಾರೋಪ ಸಮಾರಂಭದ ದಿನದಂದು, ವಿಶೇಷ ಅತಿಥಿಗಳಾದ ಡಾ.ಪಿ.ದಯಾನಂದ ಪೈರವರ ಹಸ್ತದಿಂದ, ಅಮೃತ ಧಾರೆ ಎಂಬ 'ಸ್ಮರಣ ಸಂಚಿಕೆ'ಯನ್ನು ಬಿಡುಗಡೆಮಾಡಲಾಯಿತು.

ಕಿರು ಸಭಾಗೃಹದ ನಿರ್ಮಾಣ ಕಾರ್ಯ

ಬದಲಾಯಿಸಿ

'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸ'ವದ ಸವಿನೆನಪಿನಲ್ಲಿ ಸಂಘವು ತನ್ನದೇ ಆದ ಒಂದು 'ಕಿರು ಸಭಾಗೃಹ'ದ ನಿರ್ಮಾಣದ ಹಂಬಲವಿದ್ದು, ಸಂಘದ ಸದಸ್ಯರ, ದಾನಿಗಳ ಸಾರ್ವಜನಿಕರ ಮತ್ತು ಕರ್ನಾಟಕ ಸರಕಾರದ ಸಹಾಯದಿಂದ ಸಂಭವವಾಗಲಿದೆ. ಸಂಘದ ಆರಂಭದ ದಿನಗಳಲ್ಲಿ 'ಸಾಹಿತ್ಯ ಕೂಟ'ವೆಂಬ ಕಾರ್ಯಕ್ರಮ ಪ್ರತಿತಿಂಗಳೂ ಜರುಗುತ್ತಿದ್ದು, ಅದರಲ್ಲಿ ಮುಂಬಯಿನ ಶ್ರೇಷ್ಠ ಸಾಹಿತಿಗಳಾದ, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಡಾ.ಬಿ.ಎ.ಸನದಿ, ಡಾ. ಜಿ.ಡಿ.ಜೋಶಿ, ಡಾ. ಸುನೀತಾ ಎಂ. ಶೆಟ್ಟಿ, ಜಯಂತ ಕಾಯ್ಕಿಣಿ ಮುಂತಾದವರು, ಭಾಗವಹಿಸುತ್ತಿದ್ದರು. ಸೃಜನಾ ಎಂಬ ಮುಂಬಯಿನ ಕನ್ನಡ ಲೇಖಕಿಯರ ಬಳಗದ ಹುಟ್ಟು ಬೆಳವಣಿಗೆ ಕನ್ನಡ ಸಂಘದ ವತಿಯಿಂದ ಶುರುವಾಯಿತು.[]

ಕನ್ನಡ ಸಂಘದ ಪದಾಧಿಕಾರಿಗಳು

ಬದಲಾಯಿಸಿ

(ಸ್ಥಾಪನೆಯಾದ ದಿನದಿಂದ, ಮಾರ್ಚ್, ೨೦೧೨ ರವರೆಗೆ)

ಅಧ್ಯಕ್ಷರುಗಳು :

  • ಎಮ್.ಆರ್.ಗೋಪಾಲಾಚಾರ್ಯ,
  • ಬಿ.ಎಸ್.ಗುಟ್ಟಲ್,
  • ಎಸ್.ಆರ್.ರಾಘವನ್,
  • ಜೆ.ಎನ್.ಐಯರ್,
  • ಹೆಚ್.ಎಸ್.ಶ್ರೀನಿವಾಸಾಚಾರ್,
  • ಎಮ್.ಎ.ರಾವ್,
  • ಕೆ.ಸುಬ್ಬರೊಯನ್,
  • ಬಿ.ರುದ್ರಮೂರ್ತಿ,
  • ಸಿ.ಚಕ್ರಪಾಣಿ,
  • ಜಿ.ವಿ.ರಾವ್,
  • ಬಿ.ಎಸ್.ರಾವ್,
  • ಬಿ.ಎಸ್.ಬಲ್ಲಾಳ್,
  • ಎಸ್.ಆರ್.ರಾಮಸ್ವಾಮಿ,
  • ಡಾ.ಎನ್.ತೇಜಪ್ಪ
  • ಡಾ.ಜಿ.ಡಿ.ಜೋಶಿ,
  • ಗುರುರಾಜ ಎಸ್. ನಾಯಕ್

ಉಪಾಧ್ಯಕ್ಷರು : ಆರ್.ವಿ.ಮೂರ್ತಿ,ಬಿ.ಎಚ್.ಶ್ರೀಕಂಠಯ್ಯ,ಬಿ.ಎನ್.ಎನ್.ಸ್ವಾಮಿ,ಹೆಚ್.ಕೆ.ಗುಂಡೂರಾವ್,ಬಿ.ಎಸ್.ಗುಟ್ಟಲ್, ಕೆ.ಜಿ.ಕಾಮತ್,ಸಿ.ಕೆ.ಶಂಕರನಾರಯಣ ರಾವ್, ಹೆಚ್.ಎಸ್.ಶ್ರೀನಿವಾಸಾಚಾರ್,ಹೆಚ್.ಎಸ್.ಭಟ್,ಎಮ್.ವಿ.ಸುಬ್ಬರಾವ್,ಡಾ.ಎಸ್.ಕೆ.ಹಾವನೂರ್,ಆರ್.ಎನ್.ವೆಂಕಟರಾಮಯ್ಯ,ಕೆ.ಎಸ್.ಸೀತಾರಾಮಯ್ಯ, ವೈ.ವಿ.ನಾಗಭೂಷಣರಾವ್,ಸುಬ್ಬರೋಯನ್,ಎ.ಎಸ್.ಕೆ.ರಾವ್, ಐ.ಎಸ್. ಧುಂಡ್ ಶೈ, ಮಂಗಳಾ.ಆರ್.ಸ್ವಾಮಿ, ಆರ್.ವಿ.ಸತ್ಯನಾರಾಯಣ ರಾವ್,* ಡಾ.ಎನ್.ತೇಜಪ್ಪ, ಜಿ.ರೊಡೊಗ್ಯೂಸ್,ಶ್ರೀಮತಿ.ಹೆಚ್.ಕೆ.ರಮಾದೇವಿ,ಡಾ.ಜಿ.ಡಿ.ಜೋಶಿ,ಎಸ್.ವಿ.ಮೋಹನ್,ಎನ್.ಪಿ.ಸುವರ್ಣ,ಡಾ.ಕೆ.ರಘುನಾಥ್,ಚಂದ್ರಶೇಖರ್ ರಾವ್, ಸುಗುಣಾ.ವಿ.ಶೆಟ್ಟಿ,ವಿ.ವಿ.ಬಾಲಿಗರ್,ಮೀರಾ ಆರ್.ರಾವ್,ಹೆಚ್.ಎಸ್.ಆಡೂರ್,

ಗೌ.ಕಾರ್ಯದರ್ಶಿಗಳು:

ವಿ.ಎನ್.ಪರಾಂಡೆ,ಕೆ.ಜಿ.ಕಾಮತ್,ಆರ್.ವಿ.ಪ್ರಭು,ಹೆಚ್.ಕೆ.ಗುಂಡೂರಾವ್,ಆರ್.ವಿ.ಸತ್ಯನಾರಾಯಣ,ಎಲ್.ಎಸ್.ಹನುಮಾನ್,ಸಿ.ಪಿ.ಶಂಕರ ರಾಮು,ಎಮ್.ಕೆ.ಶ್ರೀನಿವಾಸನ್,ಎಮ್.ಜಿ.ಪ್ರಭು,ಹೆಚ್.ಎ.ಲಕ್ಷ್ಮಣ ರಾವ್,ಟಿ.ಎಸ್.ವೆಂಕಟೇಶ್,ಜಿ.ವಿ.ರಂಗಸ್ವಾಮಿ,ಎ.ಎಸ್.ಶೇಶಕುಮಾರ್,ಕೆ.ಸುಬ್ಬರೊಯನ್, ಬಿ. ನಾಗಭೂಷಣ, ಜಿ.ಕೆ.ಮಾಧವರಾವ್,ಸಿ.ಜೆ.ಜಹಗೀರ್ದಾರ್,ಪಿ.ಶೇಶಗಿರಿ ರಾವ್,ವಿ.ಎಸ್.ಕಲ್ಕೋಟಿ,ಸಿ.ಪಿ.ರಾವ್,ಎಮ್.ಆರ್.ಭಟ್,ಎಸ್.ವಿ.ಮೋಹನ್,ಕೆ.ದಶರಥ ರಾವ್,ವಿ.ಜನಾರ್ಧನ್ ರಾವ್,ಹೆಚ್.ಎನ್.ಮೆರ್ಟ,ಉಪೇಂದ್ರ ಭಟ್,ಎಮ್.ಟಿ.ಮೆಸ್ಟ,ಎಸ್.ಎಮ್.ಉಡುಪ,ಕೆ.ಎಸ್.ಎಸ್.ಉಪಾಧ್ಯಾಯ,ಪಿ.ಕೆ.ಜೈರಾಮ್,ಚಂದ್ರಶೇಖರ್ ರಾವ್,ಹೆಚ್.ಎಮ್.ಗೋಪಾಲಕೃಷ್ಣ,ಜಿ.ಡಿ.ಪೈ,ಜಿ.ಎಸ್.ನಾಯಕ್,ಗಾಯತ್ರಿ ರಾಮು,ಸಂಧ್ಯಾ ಎ.ಪ್ರಭು.

ಗೌ.ಕೋಶಾಧಿಕಾರಿಗಳು:

ಡಿ.ಎಸ್.ಶಾಸ್ತ್ರಿ,ಎಮ್.ಯು.ನಾಯಕ್,ಎಮ್.ಕೆ.ಶ್ರೀನಿವಾಸನ್,ಎಲ್.ಎಸ್.ಹನುಮಾನ್,ಸಿ.ಎಸ್.ವಾಸುದೆವಮೂರ್ತಿ,ಎ.ಎಸ್.ಗೋಪೀನಾಥರಾವ್, ಎಮ್.ಜಿ.ಪ್ರಭು,ಬಿ.ನಾಗಭೂಷಣ್, ಕೆ.ಆರ್. ಕೃಷ್ಣನ್,ಎಸ್.ಆರ್.ಶಾಸ್ರಿ,ಪಿ.ಶೇಶಗಿರಿ ರಾವ್,ಕೆ.ಸುಬ್ಬರೊಯನ್,ಸಿ.ಎಸ್.ಆರ್,ಶಸ್ತ್ರಿ,ಎಚ್.ವಿ.ಶ್ರೀನಿವಾಸಮೂರ್ತಿ,ಡಿ.ಆರ್.ರೇವನ್ಕರ್,ಗೋವರ್ಧನ್ ಹೆಗ್ಡೆ,ಎಮ್.ಎಸ್.ನಾಗರಾಜರಾವ್,ಎಸ್.ಎಮ್.ಉಡುಪ,ಜಿ.ಎಸ್.ನಾಯಕ್,ಜಿ.ಡಿ.ಪೈ,ವಿ.ಎಸ್.ಪುರುಶೋತ್ತಮ್,ರಾಜೇಂದ್ರ ಗಡಿಯಾರ್,ಜಿ.ಆರ್.ವಿಟ್ಠಲ್,

ಗೌ.ಲೈಬ್ರರಿ ಅಧಿಕಾರಿಗಳು :

ಬಿ.ರಾಮಚಂದ್ರನಾಯಕ್,ಎಸ್.ಆರ್.ಶೆನಾಯ್,ಕೆ.ಎನ್.ಸರಲಯ,ವಿ.ಎಮ್.ಕಬ್ಬೂರ್,ಎ.ಬಿ.ಗುಡೂರ್,ಎಮ್.ವಿ.ಭಂಡಾರಿ,ಎನ್.ಆರ್.ಪ್ರಸನ್ನ,ವೈ.ಎನ್.ಡೇವಿಡ್,ಆರ್.ಗುಂಡೂ ರಾವ್,ಬಿ.ಕೆ.ಕುಲಕರ್ಣಿ,ಟಿ.ಎಸ್.ವೆಂಕಟೇಶ್,ವಿ.ಶ್ರೀನಿವಾಸ ಮೂರ್ತಿ,ಡಿ.ಆರ್.ರೇವಣ್ಕರ್,ಗೋವರ್ಧನ್ ಹೆಗ್ಡೆ,ಎಮ್.ಎಸ್.ನಾಗರಾಜ ರಾವ್,ಎಮ್.ಜಿ.ಪ್ರಭು,ಶಂಕರ್ ಶೆಟ್ಟಿ,ಎಸ್.ಸಿ.ಶೇಖರ್,ಬಿ.ವಿ.ಪ್ರಭಾಕರ,ಕೆ.ಆರ್.ಕ್ರಿಷ್ಣನ್,ಎನ್.ಎಸ್.ವಿಶ್ವನಾಥ್,ಕೆ.ಎಸ್.ಪೂಜಾರಿ,ಬಿ.ಎನ್.ಶ್ರೀನಿವಾಸಮೂರ್ತಿ,ಮಂಗಳಾ ಆರ್.ಸ್ವಾಮಿ,ಹೆಚ್.ಎಸ್.ನಾಗರಾಜ ಶರ್ಮ,ಬಿ.ಎಸ್.ರಾಮದಾಸ್, ಮೀರಾ ಎಮ್, ಶೆನೊಯ್,ಜಿ.ರೊಡ್ರಿಗೋಝ್, ಲಕ್ಷ್ಮಿಎಸ್.ರಾವ್, ಮೀರಾ ಆ.ರಾವ್,ಮೋಹಿನಿ, ಬಿ.ರಾವ್,ಸುಗುಣ ವಿ.ಶೆಟ್ಟಿ, ಶೇಖರ್ ಕಾಂಚನ್, ಕೆ.ನಾಗರಾಜ್ ಶೆನೊಯ್.

ಮುಂಬಯಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿ

ಬದಲಾಯಿಸಿ

ಗೌ.ಪೋಶಕರು:

ಎಮ್.ವಿ.ಕಿಣಿ (ಅಡ್ವೊಕೇಟ್)

ಅಧ್ಯಕ್ಷರು :

ಗುರುರಾಜ್ ಎಸ್.ನಾಯಕ್

ಉಪಾಧ್ಯಕ್ಷರು:

ಎಚ್.ಎಸ್.ಆಡೂರ್

ಗೌ.ಕಾರ್ಯದರ್ಶಿ :'

ಬಿ. ನಾಗಭೂಷಣ

ಗೌ.ಜಂಟಿ ಕಾರ್ಯದರ್ಶಿ :

ಸಂಧ್ಯಾ ಎ.ಪ್ರಭು :

ಕೋಶಾಧಿಕಾರಿ :

ರಾಜೇಂದ್ರ ಎ. ಗಡಿಯಾರ್

ಪುಸ್ತಕಾಧಿಕಾರಿ :

ಕೆ.ನಾಗರಾಜ ಶೆನೊಯ್

ಸದಸ್ಯರು :

ಶೇಖರ್ ಕಾಂಚನ್, ಬಿ.ಗಿರಿಧರ್ ಪೈ, ಪದ್ಮನಾಭ ಸಿದ್ಧಕಟ್ಟೆ, ರಜನಿ.ವಿ.ಪೈ, ಸುಗುಣ ವಿ.ಶೆಟ್ಟಿ, ಬಾಬುರಾಯ ಎಮ್.ಪ್ರಭು, ಯೋಗೇಶ್ ಬಿ.ಶೆನೊಯ್

ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ[] ಕಾರ್ಯಕಾರಿ ಸಮಿತಿ

ಬದಲಾಯಿಸಿ

ಸಲಹೆಕಾರರು :

  • ಜಸ್ಟಿಸ್ ಬಿ.ಎನ್.ಶ್ರೀಕೃಷ್ಣ
  • ಪಂ.ಎಮ್.ವಿದ್ಯಾಸಿನ್ಹಾಚಾರ್ಯ

ಚೇರ್ಮನ್ :

  • ಎನ್.ಸತೀಶ್ ನಾಯಕ್

ಉಪ ಚೇರ್ಮನ್ :

ಸದಸ್ಯರು : ಎಮ್.ಯು.ಕಿಣಿ, ಡಾ.ಸುನಿತ ಎಮ್.ಶೆಟ್ಟಿ, ಡಾ. ಜಿ.ಡಿ.ಜೋಶಿ, ವಿ.ವಿ.ಬಳಿಗಾರ್,ಎಮ್.ಬಿ.ಕುಕಿಯನ್, ಎಮ್.ಬಿ.ರಾಮಚಂದ್ರ,ಕೆ.ಎನ್.ಕೀರ್ತಿ, ಎಮ್. ಎ. ಎನ್. ಪ್ರಸಾದ್, ಮಮತಾವ್,ಈಶ್ವರ ಅಲೆವೂರ್, ಚಂದ್ರಶೇಖರ ರಾವ್, ಬಿ. ಎಸ್. ಕುರ್ಕಾಲ್, ಹೆಚ್.ಆರ್.ಲಕ್ಷ್ಮೀವೆಂಕಟೇಶ್, ಜಯ.ಸಿ.ಸುವರ್ಣ, ಎಸ್.ವಿ.ಮೋಹನ್, ಪಿ.ಕೆ.ಸಲಿಯಾನ್, ಎಮ್.ವಿ.ಜೈರಾಮ್,ಸುಗುಣಾ.ಕೆ.ಕಾಮತ್, ವಿ.ಎಸ್.ಕಲ್ಕೊಟಿ, ಪಿ.ಸುಬ್ರಾಯ ಶಾನ್ ಭಾಗ್,.ಡಾ. ಎಸ್.ಕೆ.ಭವಾನಿ, ಡಾ.ಭರತ್ ಕುಮಾರ್ ಪೊಲಿಪು, ಜಿ.ಡಿ.ಪೈ, ವೆಂಕಟೇಶ ಎ.ಪೈ, ಡಾ. ಡಾ. ಜಿ. ಎನ್. ಉಪಾಧ್ಯ

  • 'ಅಮೃತ ಧಾರೆ', 'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ'ದ ದಿನ ಬಿಡುಗಡೆಯಾದ 'ಸ್ಮರಣ ಸಂಚಿಕೆ'ಯಿಂದ ಆಯ್ದ ಸಂಗತಿಗಳು.

೮೦ ನೇ ವಾರ್ಷಿಕೋತ್ಸವ

ಬದಲಾಯಿಸಿ

ಮುಂಬಯಿ ಕನ್ನಡ ಸಂಘದ ೮೦ ನೆಯ ವಾರ್ಷಿಕೋತ್ಸವ ವರ್ಷ ೨೦೧೭ ರ ಆಕ್ಟೋಬರ್ ೩ ರಂದು ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಜರುಗಿತು. []

ಉಲ್ಲೇಖಗಳು

ಬದಲಾಯಿಸಿ
  1. ಸೃಜನಾ ಮುಂಬಯಿನ ಲೇಖಕಿಯರ ಬಳಗ
  2. ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ, ಪ್ರಜಾವಾಣಿ ಪತ್ರಿಕೆ, ಸೋಮವಾರ, ಸೆಪ್ಟೆಂಬರ್, ೫, ೨೦೧೦[ಶಾಶ್ವತವಾಗಿ ಮಡಿದ ಕೊಂಡಿ]
  3. ಸಮಾಜಸೇವಕ, ವಡಾಲ ಜಿಲ್ಲೆಯಲ್ಲಿರುವ ಎನ್.ಕೆ.ಇ.ಎಸ್.ಸಂಸ್ಥೆಯ ಟ್ರಸ್ಟಿಗಳಲ್ಲೊಬ್ಬರಾದ ಶ್ರೀ. ಕೆ.ಮಂಜುನಾಥಯ್ಯನವರು, ಕನ್ನಡ ಸಂಘದ ಪದಾಧಿಕಾರಿಗಳ, ಹಾಗೂ ಗಣ್ಯರ ಜೊತೆಯಲ್ಲಿ ದೀಪ ಪ್ರಜ್ವಲನ ಮಾಡುವ ಮೂಲಕ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದಯವಾಣಿ ದಿನಪತ್ರಿಕೆ, ಪು.೧೦, ಆಕ್ಟೋಬರ್, ೧೭,೨೦೧೭[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು

ಬದಲಾಯಿಸಿ