ಡಾ.ಎನ್.ತೇಜಪ್ಪ ನವರು, ಮುಂಬಯಿನ ಮಾಟುಂಗಾ ಜಿಲ್ಲೆಯಲ್ಲಿರುವ 'ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ', ಮುಂಬಯಿ (CIRCOT)ನಲ್ಲಿ ರಸಾಯನ ಶಾಸ್ತ್ರವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸಮಾಡುತ್ತಿದ್ದರು. ಅತ್ಯಂತ ಶ್ರದ್ದ್ಧೆ ಮತ್ತು ಕಾರ್ಯಕುಶಲರಾದ ತೇಜಪ್ಪನವರು, ಒಮ್ಮೆ ದಕ್ಷಿಣ ಕನ್ನಡದ ತಮ್ಮ ಸ್ವಗ್ರಾಮಕ್ಕೆ ಹೋದಾಗ, 'ಹೃದಯಾಘಾತ'ದಿಂದ ಅಲ್ಲೆಯೇ ಕೊನೆಯುಸುರೆಳೆದರು. ತಮ್ಮ 'ವೈಜ್ಞಾನಿಕ ಪ್ರಬಂಧ'ಗಳನ್ನು ದೇಶದ ಸುಪ್ರಸಿದ್ಧ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು.