ಗುರುರಾಜ ಎಸ್. ನಾಯಕ್

ಶ್ರೀ. ಗುರುರಾಜ ಎಸ್.ನಾಯಕ್,[] ಮುಂಬಯಿನ ಮಾಟುಂಗಾದಲ್ಲಿರುವ ಹಾಲೀ 'ಕನ್ನಡಸಂಘ,' ದ ಅಧ್ಯಕ್ಷರಾಗಿ ಕೆಲಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ತಮ್ಮನ್ನು ಸಂಪೂರ್ಣವಾಗಿ ಸಂಘದ ಶ್ರೇಯೋಭಿವೃದ್ಧಿಗೆ ತೊಡಗಿಸಿಕೊಂಡು ಎಲ್ಲ ತರಹದ ಕಾರ್ಯಗಳನ್ನೂ ನಡೆಸುತ್ತಾಬಂದಿದ್ದಾರೆ.

'ಕನ್ನಡ ಸಂಘದ ಅಧ್ಯಕ್ಷರು'

ವೃತ್ತಿ ಜೀವನ

ಬದಲಾಯಿಸಿ

ಮೂಲತಃ ಉಡುಪಿ ಪರಿಸರದ ’ಪೆರ್ಣಂಕಿಲ,’ ಗ್ರಾಮದ ನಿವಾಸಿ ನಾಯಕರು,[]’ರಾಷ್ಟ್ರೀಕೃತ ಬ್ಯಾಂಕು’, ’ಸೆಂಚ್ಯುರಿ ರೆಯಾನ್’, ’ಕ್ಯಾಲಿಕೋ ಕೆಮಿಕಲ್ಸ್', ಗಳಲ್ಲಿ ವಿವಿಧ ವಿಭಾಗಗಳಲ್ಲಿ ಅನುಭವಪಡೆದು, ೧೯೭೩ ರಿಂದ, ’ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಸಮೂಹ,’ ಕ್ಕೆ ಸೇರಿ, ವಿವಿಧ ಭಾಗಗಳಲ್ಲಿ ಕೆಲಸಮಾಡಿರುತ್ತಾರೆ. ಮುಂಬಯಿನ ಅನೇಕ ಕನ್ನಡ ಸಂಘಗಳಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ’ಉದ್ಯೋಗಿಗಳ ಸಹಕಾರಿ ಮಳಿಗೆಯ ಕಾರ್ಯಾಧ್ಯಕ್ಷ,’ ರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ೫೭ ವರ್ಷಗಳ ಇತಿಹಾಸದಲ್ಲಿ ಕನ್ನಡಿಗನೊಬ್ಬನಿಗೆ ಸಂದ ಗೌರವವಿದು.

ಸಾಮಾಜ ಸೇವಕ

ಬದಲಾಯಿಸಿ
ಚಿತ್ರ:62688 16.jpg
'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡುತ್ತಿರುವುದು'

ವಿನಯ ಶೀಲರಾದ ನಾಯಕ್, ಮಾತಾಡುವುದೇ ಅತಿ-ಕಡಿಮೆ ; ಆದರೆ ತಾವು ವಹಿಸಿಕೊಂಡ ಯಾವುದೇ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ಇದುವರೆವಿಗೆ ನಿಭಾಯಿಸುತ್ತಾ ಬಂದಿದ್ದಾರೆ. ಮಾಟುಂಗಾ ದಲ್ಲಿರುವ ’ಕನ್ನಡ ಸಂಘ,’ ದ ಅಧ್ಯಕ್ಷರಾಗಿರುವ ಗುರುರಾಜರು, ಸಂಘದ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಬೆಳೆದು ಈಗ ಸಂಘದ ’ಅತ್ಯಂತ ಸಮರ್ಥ ಸಮಾಜ ಸೇವಕ,’ ಹಾಗೂ ’ಸಂಘಟಕ,’ ರಾಗಿ ಬಹು ಎತ್ತರಕ್ಕೆ ಬೆಳೆದಿದ್ದಾರೆ. ಮುಂಬಯಿನಗರದ, ಮುಖ್ಯ ಕನ್ನಡದೈನಿಕ ಪತ್ರಿಕೆಗಳಾದ, 'ಕರ್ನಾಟಕ ಮಲ್ಲ,' ಮತ್ತು 'ಉದಯವಾಣಿ,' ಗಳಿಗೆ ಲೇಖನಗಳನ್ನೂ, ವರದಿಗಳನ್ನೂ ಬರೆಯುವ ಪರಿಪಾಠವಿಟ್ಟುಕೊಂಡಿದ್ದಾರೆ.

'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ'

ಬದಲಾಯಿಸಿ

ಶ್ರೀ. ಗುರುರಾಜ ನಾಯಕ್[] ಕಾರ್ಯಾವಧಿಯಲ್ಲೇ 'ಮುಂಬಯಿ ಕನ್ನಡಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ'ದ ಆಯೋಜನೆಮಾಡುವ ಅವಕಾಶ ಅವರಿಗೆ ಪ್ರಾಪ್ತವಾಯಿತು.] [] ನಾಯಕ್, ಬಿ. ನಾಗಭೂಷಣ, ಮತ್ತು ಸಮಿತಿಯ ಅಧಿಕಾರಿಗಳೆಲ್ಲಾ ಶ್ರದ್ಧೆಯಿಂದ ದುಡಿದು ಈ ಸಮಾರಂಭವನ್ನು ಯಶಸ್ವಿಗೊಳಿಸಿದರು. ಮುಂಬಯಿ ಕನ್ನಡಿಗರಿಗೆಲ್ಲಾ ಇದೊಂದು ಹೆಮ್ಮೆಯ ಸಮಾರಂಭವಾಗಿತ್ತು.[] ೨೦೧೨ ರ,ಮಾರ್ಚ್, ೧೭ ಮತ್ತು ೧೮ ರಂದು ಜರುಗಿದ ಎರಡು ದಿನಗಳ ಕಾರ್ಯಕ್ರಮದಲ್ಲಿ, ಮೊದಲನೆಯ ದಿನ, 'ರಾಗ ಸಂಗಮ' ಸಂಸ್ಥೆಯ, ಗಣೇಶ್ ಎರ್ಮಾಳ್ ಮತ್ತು ವೃಂದದವರಿಂದ 'ಭಕ್ತಿ ಸಂಗೀತ','ಸೃಜನ ಮಹಿಳಾ ತಂಡ'ದವರಿಂದ 'ವಿಚಾರ ಸಂಕಿರಣ' ಹಾಗೂ 'ಸಂವಾದ'ವಿತ್ತು. ಶ್ರೀಮತಿ.ಮಿತ್ರಾವೆಂಕಟರಾಜ್ ರಚಿಸಿದ, 'ಮಾಯಕದ ಸತ್ಯ' ವೆಂಬ ಕಥಾ ಸಂಕಲನದ ಪುಸ್ತಕ ಬಿಡುಗಡೆಯಾಯಿತು. 'ಕನ್ನಡ ಸಂಘದ ಸ್ಮರಣ ಸಂಚಿಕೆ' ಯ ಬಿಡುಗಡೆಯ ಕಾರ್ಯಕ್ರಮ, ಅಮೃತಧಾರೆ ೨೦೧೨ ಯ ಬಿಡುಗಡೆಯನ್ನು ಮಾಡಲಾಯಿತು. ೧೦ ವರ್ಷಗಳ ಸಮಯ ದುಡಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಮುಂಬಯಿನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗೌರವಿಸಲಾಯಿತು. 'ಅರುಣೋದಯ ಕಲಾನಿಕೇತನ, ಚೆಂಬೂರ್' ಕಲಾವಿದರು ಪ್ರಸ್ತುತಪಡಿಸಿದ 'ನೃತ್ಯವೈಭವ' ವೆಂಬ ಸಾಂಸ್ಕೃತಿಕ ಕಾರ್ಯಕ್ರಮವಿತ್ತು.

ಜನನ, ಬಾಲ್ಯ, ಹಾಗೂ ವಿದ್ಯಾಭ್ಯಾಸ

ಬದಲಾಯಿಸಿ

'ಗುರುರಾಜರು,' ನವೆಂಬರ್,[] ೩೦, ೧೯೪೮ ರಲ್ಲಿ ಊಡುಪಿಯ ’ಪೆರ್ಣಂಕಿಲ’ ದಲ್ಲಿ ಜನಿಸಿದರು. ಮೊದಲಿನಿಂದಲೂ ಅತಿ-ಪರಿಶ್ರಮಜೀವಿಯಾಗಿ ಬೆಳೆದ ಗುರುರಾಜರು, ’ಮೂಡುಬೆಳ್ಳೆ.’ ಯಿಂದ, ಮಾಧ್ಯಮಿಕ ಶಿಕ್ಷಣವನ್ನೂ, ’ಹಿರಿಯಡ್ಕ,’ ದಿಂದ ಉಚ್ಚ-ಮಾಧ್ಯಮಿಕ ಓದನ್ನೂ, ನಂತರ, ಬಿ.ಎ ಪದವಿಗೆ, ಮೈಸೂರು ವಿಶ್ವ ವಿದ್ಯಾಲಯದ ಅಂಚೆ-ತೆರಪಿನ ಶಿಕ್ಷಣ ವಿಧಾನವನ್ನು ಬಳಸಿಕೊಂಡರು. ಮುಂಬಯಿನ ’ಪೊದ್ದಾರ್ ಕಾಲೇಜ್,’ ನಿಂದ, ’ಜೆ.ಸಿ.ಡಿ,’ ಮುಗಿಸಿದರು.

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ

ಸನ್ಮಾನ

ಬದಲಾಯಿಸಿ
  • 'ಹವ್ಯಕ ಸಂಘ',
  • 'ಶ್ರೀರಾಮ ಚಂದ್ರಾಪುರ ಮಠ'
  • 'ಕಲ್ಯಾಣ್ ಕರ್ನಾಟಕ ಸಂಘ',
  • 'ಕಲ್ಯಾಣ್ ಕನ್ನಡಿಗರ ಸಾಂಸ್ಕೃತಿಕ ಕೇಂದ್ರ,'

ಪರಿವಾರ

ಬದಲಾಯಿಸಿ

ಗುರುರಾಜ ಎಸ್. ನಾಯಕ್ ರವರ ಸುಖೀ ಕುಟುಂಬದ ಸದಸ್ಯರಲ್ಲಿ, ಅವರ ಪತ್ನಿ, ’ಜ್ಯೋತಿ. ಜಿ. ನಾಯಕ್', ಜೀವವಿಮಾ ಕಂಪೆನಿಯ ಪ್ರತಿನಿಧಿಯಾಗಿದ್ದಾರೆ. ಮಗಳು, ’ಶ್ವೇತಾ ನಾಯಕ್', 'ಬಿ.ಕಾಂ,’ಎಂ.ಬಿ.ಎ,’ ಪದವೀಧರೆ. ಖಾಸಗೀ ಕಂಪೆನಿಯೊಂದರಲ್ಲಿ ನೌಕರಿಮಾಡುತ್ತಿರುವ ಶ್ವೇತಾ, ಈಗ ವಿವಾಹವಾಗಿ, ಮುಂಬಯಿನ ಉಪನಗರದಲ್ಲಿ ವಾಸವಾಗಿದ್ದಾರೆ.

ಚಿಕ್ಕವಯಸ್ಸಿನಲ್ಲಿಯೇ ನಿವೃತ್ತಿ

ಬದಲಾಯಿಸಿ

'ಟೈಮ್ಸ್ ಆಫ್ ಇಂಡಿಯಾ ವೃತ್ತ ಪತ್ರಿಕೆ'ಯ ಮೇಲಧಿಕಾರಿಗಳು, ನಾಯಕ್ ರವರನ್ನು ಮುಂಬಯಿನಿಂದ ದೂರ ಪ್ರದೇಶವೊಂದಕ್ಕೆ ವರ್ಗ ಮಾಡುವ ನಿರ್ಧಾರ ಕೈಗೊಂಡ ಕಾರಣದಿಂದ ಆಗಸ್ಟ್, ೨೦೦೫ ರಲ್ಲಿ ಇನ್ನೂ ವಯಸ್ಸಿರುವಾಗಲೇ ಯೋಚಿಸದೆ, 'ಸ್ವಯಂ-ನಿವೃತ್ತಿ'ಯನ್ನು ಘೋಷಿಸಿದರು.

ಸಂಘಟನಾ ಸಾಮರ್ಥ್ಯ

ಬದಲಾಯಿಸಿ

ಸ್ವಯಂ ಸೇವಕರಾಗಿ

ಬದಲಾಯಿಸಿ
  • 'ಜಿ.ಎಸ್.ಬಿ ಸಭಾ' ಮಾಟುಂಗಾ,
  • 'ಜಿ.ಎಸ್.ಬಿ ಮಂಡಲ', ಡೊಂಬಿವಿಲಿ,
  • 'ಜಿ.ಎಸ್.ಬಿ ಸೇವಾಮಂಡಳ' ಸಾಯನ್, 'ವಾಲ್ಕೇಶ್ವರ ಕಾಶಿ-ಮಠ,'
  • 'ಪರ್ತಗಾಳಿ ಗೋಕರ್ಣ ಜೀವೋತ್ತಮ ಮಠ', ವಡಾಲ (ಮುಂಬಯಿ ಶಾಖೆ)

ಉಲ್ಲೇಖಗಳು

ಬದಲಾಯಿಸಿ
  1. "mega medira news, August 7th, 2011, ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ : ನಾಗತಿಹಳ್ಳಿ". Archived from the original on 2016-03-05. Retrieved 2015-02-23.
  2. ಪ್ರಜಾವಾಣಿ, 'ಮುಂಬಯಿಯಲ್ಲಿ ಕನ್ನಡ ಕಲಿಕಾ ತರಗತಿ ಆರಂಭ', 08/05/2013[ಶಾಶ್ವತವಾಗಿ ಮಡಿದ ಕೊಂಡಿ]
  3. prajavani, 'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ'[ಶಾಶ್ವತವಾಗಿ ಮಡಿದ ಕೊಂಡಿ]
  4. "'ಗಲ್ಫ್ ಕನ್ನಡಿಗ,'ಮುಂಬಯಿ ಕನ್ನಡ ಸಂಘದ ಅಮೃತ ಮಹೋತ್ಸವ ಸಮಾರೋಪ'-ಡಾ| ದಯಾನಂದ ಪೈ, 2012-03-19". Archived from the original on 2016-03-04. Retrieved 2015-02-07.
  5. "sampada, ಮುಂಬಯಿನಲ್ಲಿ ೮ ನೆಯ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ-೨೦೧೧ August 7, 2011". Archived from the original on ಆಗಸ್ಟ್ 11, 2011. Retrieved ಫೆಬ್ರವರಿ 23, 2015.
  6. vartabharati, ಗುರುರಾಜ ಎಸ್.ನಾಯಕ್,'[ಶಾಶ್ವತವಾಗಿ ಮಡಿದ ಕೊಂಡಿ]