ಕರ್ನಾಟಕ ಮಲ್ಲ ಮುಂಬಯಿನಿಂದ ನೇರವಾಗಿ ಪ್ರಕಾಶಿತಗೊಳ್ಳುತ್ತಿರುವ ಕನ್ನಡ ದಿನ ಪತ್ರಿಕೆಗಳಲ್ಲೊಂದು. []

ಪತ್ರಿಕೆಯ ಸ್ಥಾಪಕ

ಬದಲಾಯಿಸಿ

ಕರ್ನಾಟಕ ಮಲ್ಲ ಹಾಗೂ ಇತರ ಭಾಷಾ ಪತ್ರಿಕೆಗಳಾದ ತಮಿಳ್ ಟೈಮ್ಸ್ ಮೊದಲಾದ ಪತ್ರಿಕೆಗಳನ್ನು ಸ್ಥಾಪಿಸಿದವರು, ಅನಂತ ಮುರುಳೀಧರ ಶಿಂಗೋಟಿಯವರು. ಮರಾಠಿಗರಾದರೂ, ಭಾಷಾಸಾಮರಸ್ಯವನ್ನು ಸ್ಥಾಪಿಸಲು ಮಹಾರಾಷ್ಟ್ರದಲ್ಲಿ ಕನ್ನಡ ದಿನಪತ್ರಿಕೆಗಳನ್ನೂ ಸ್ಥಾಪಿಸಿದರು. ಅವರು ಪುಣೆಯ ಜುನ್ನಾರ್ ತಾಲ್ಲೂಕಿನ ಉಂಬ್ರಾಜ್ಎಂಬ ಗ್ರಾಮದಲ್ಲಿ ೧೯೩೮ ರ ಮಾರ್ಚ್ ೭ ನೆಯ ತಾರೀಖು ಜನಿಸಿದರು. ಅವರು ಓದಿದ್ದು ೪ ನೆಯ ತರಗತಿಯವರೆಗೆ. ಶಿಂಗೋಟಿಯವರು ಜೀವನೋಪಾಯಕ್ಕೆ ಮುಂಬಯಿನಗರಕ್ಕೆ ಬಂದರು. ಮೊದಲು ಹಣ್ಣುಗಳನ್ನು ಮಾರುವ ಕೆಲಸವನ್ನು ಮಾಡುತ್ತಿದ್ದರು. ನಂತರ ಅವರ ಗಮನ 'ಪತ್ರಿಕಾವಿತರಣೆಯಕಾರ್ಯ'ದ ಕಡೆಗೆ ಹೋಯಿತು. ೧೯೯೪ ರಲ್ಲಿ ಅವರು 'ಚೌಪೇರ್' ಎಂಬ ಮರಾಠಿ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ನಂತರ ಕ್ರಮವಾಗಿ ಕರ್ನಾಟಕ ಮಲ್ಲ, ಯಶೋಭೂಮಿ, ತಮಿಳ್ ಟೈಮ್ಸ್, ಹಾಗೂ ಪುಣ್ಯನಗರಿ, ಪತ್ರಿಕೆಗಳನ್ನು ಪ್ರಾರಂಭಿಸಿದರು. 'ಅನಂತ ಮುರುಳೀಧರ ಶಿಂಗೋಟಿ'ಯವರನ್ನು ಅವರ ಗೆಳೆಯರು ಪ್ರೀತಿಯಿಂದ ಬಾಬಾ ಎಂದು ಸಂಬೋಧಿಸುತ್ತಿದ್ದರು. ಶಿಂಗೋಟಿಯವರು ತಮ್ಮ ಹುಟ್ಟೂರಿನಲ್ಲಿ ೬ ಆಗಸ್ಟ್ ೨೦೨೦ ರಂದು ನಿಧನರಾದರು. ಮುರುಳೀಧರ್ ಶಿಂಗೋಟಿಯವರ ಅಂತ್ಯಕ್ರಿಯೆಗಳು ಅವರ ಹುಟ್ಟೂರಿನಲ್ಲಿ ಜರುಗಿದವು.

ಇ-ಪತ್ರಿಕೆ

ಬದಲಾಯಿಸಿ

ಈಗ ಕರ್ನಾಟಕ ಮಲ್ಲ ದಿನಪತ್ರಿಕೆಯ ಇ- ಪತ್ರಿಕೆಯ [] ಆವೃತ್ತಿಯೂ ಪ್ರಕಟವಾಗುತ್ತಿದೆ.

ಪತ್ರಿಕೆಯ ವಿಶೇಷತೆ

ಬದಲಾಯಿಸಿ

'ಕರ್ನಾಟಕ ಮಲ್ಲ' ಮುಂಬಯಿಯ ಜನಜೀವನ, ಕ್ರೀಡೆ, ರಾಜಕೀಯ, ಸ್ಥಳೀಯ ವಾರ್ತೆಗಳು, ಮತ್ತು ನಿಯಮಿತ ಅಂಕಣಗಳನ್ನು ಹೊಂದಿದೆ. ಪ್ರಿಯತಮ, ಡಾ.ಜಿ.ವಿ.ಕುಲಕರ್ಣೆಯವರ, [] ವಿಶೇಷ ಅಂಕಣಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಮುಂಬಯಿ ಕನ್ನಡಿಗರ ಮೊದಲ ಕನ್ನಡ ಪತ್ರಿಕೆಯಾದ 'ಕರ್ನಾಟಕ ಮಲ್ಲ'ದ ಮೊದಲ ಸಂಚಿಕೆಯ, ಮೊದಲ ಪುಟದಲ್ಲಿ ಘೋಷಿಸಿದಂತೆ, ಇಂದಿಗೂ ಮುಂಬಯಿ ಕನ್ನಡಿಗರ ಯಾವತ್ತೂ ಚಟುವಟಿಕೆಗಳಮುಖವಾಣಿಯಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದೆ. ಮುಂಬಯಿ ನಗರದ ಸಮಸ್ಯೆಗಳನ್ನು ಸಮರ್ಥವಾಗಿ ಬಿಂಬಿಸುತ್ತಿದೆ. ಅದಲ್ಲದೆ ಮುಂಬೈನಗರದಲ್ಲಿ ನೆಲೆಸಿರುವ ಕನ್ನಡನಾಡಿನ ಹಲವಾರು ಸ್ಥಳಗಳಿಂದ ಬಂದು ನೆಲೆಸಿರುವ ಕನ್ನಡಿಗರ ದನಿಯನ್ನು ಒಗ್ಗೂಡಿಸುವ ಕಾರ್ಯವನ್ನು, ಪತ್ರಿಕೆಯ ಇಂದಿನ ಪ್ರಧಾನ ಸಂಪಾದಕರಾದ, 'ಚಂದ್ರಶೇಖರ ಪಾಲೆತ್ತಾಡಿ' ಮತ್ತು ಉಪಸಂಪಾಕ,ಶ್ರೀನಿವಾಸ ಜೋಕಟ್ಟೆ ಮುಂತಾದವರ ಮುಂದಾಳತ್ವದಲ್ಲಿ ಮಾಡುತ್ತಾ ಬಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. ಕರ್ನಾಟಕ ಮಲ್ಲ ದಿನಪತ್ರಿಕೆಯ ಸಂಸ್ಥಾಪಕ ಮುರುಳೀಧರ್ ಶಿಂಗೋಟಿ ನಿಧನ,ಪ್ರಜಾವಾಣಿ,ಭಾನುವಾರ, ೨೧,ನವೆಂಬರ್,೨೦೨೧
  2. ಇ-ಪತ್ರಿಕೆ, ಕರ್ನಾಟಕ ಮಲ್ಲ
  3. 'ಒನ್ ಇಂಡಿಯ(ಕನ್ನಡ)'ವಾಚಕರಲ್ಲಿ ಅಂಕಣಕಾರರ ಅರಿಕೆ-ಮನೋಗತ! ಅಂಕಣಕಾರ : ಡಾ|'ಜೀವಿ' ಕುಲಕರ್ಣಿ, ಮುಂಬಯಿ, July 6, 2012