ಜಾನಪದ ಸಾಹಿತ್ಯದ ಒಂದು ಪ್ರಕಾರವಾಗಿರುವ ಮಾಯಮ್ಮನ ಕುಣಿತವು ವಿಶೇಷವಾಗಿ ತುಮಕೂರು ಜಿಲ್ಲೆಯ ಸಿಧ್ದರಾಮೇಶ್ವರ ಜಾತ್ರೆಯ ಸಂಧರ್ಭದಲ್ಲಿ ಕಡ್ದಾಯವೆಂಬಂತೆ ಪ್ರದರ್ಶನಗೊಳ್ಳುತ್ತದೆ. ವೀರಶೈವರ ಹೊರತಾಗಿ ಬೇರೆ ಯಾರೂ ಮಾಯಮ್ಮನ ಕುಣಿತವನ್ನು ಪ್ರದರ್ಶಿಸುವುದಿಲ್ಲ ಎಂದು ತಿಳಿಯುತ್ತದೆ. ಈ ಕುಣಿತವನ್ನು ಕುಣಿಯುವುದು ಒಬ್ಬರೆ. ಅವರಿಗೆ ಪೂರಕವಾಗಿ ಎರದು ನಗಾರಿ, ಎರಡು ಕರಡೆ, ಒಂದು ದಿಮ್ಮು, ಎರಡು ಮೌರಿ, ಎರಡು ಕಹಳೆ ಮತ್ತು ಶ್ರುತಿ, ಇವಿಷ್ಟು ವಾದ್ಯಗಳಿರುತ್ತವೆ.

ಮಾಯಮ್ಮ

ಬದಲಾಯಿಸಿ

ಆರು ಅಡಿ ಉದ್ದದ ಮರದ ಕೊಂತ ಅಥವಾ ಮರದ ತುಂಡಿಗೆ ಸೀರೆ ಉಡಿಸಿ ಡಾಬು ತೊಡಿಸುವರು. ತಲೆ ಮಾತ್ರ ಬೆಳ್ಳಿಯದ್ದಗಿದ್ದು ತಲೆ ಕೂದಲಿಗೆ ಟೋಪನ್ ರೀತಿಯ ಜಡೆ ಹಾಕುತ್ತಾರೆ. ಹೆಗಲಿಗೆ ನೇತು ಹಾಕಿರುವ 'ನವಾರ'ದಲ್ಲಿ (ಪಟ್ನ) ಕೊಂತವನ್ನು ಸಿಕ್ಕಿಸಿಕೊಂದಡು ಮಾಯಮ್ಮನ ಈ ಕಡ್ಡಿ ಗೊಂಬೆಯ ತಲೆಯನ್ನು ಎಡ-ಬಲಕ್ಕೆ ಬೀಸುತ್ತಾ ಕುಣಿಸುತ್ತಾರೆ. ಈ ಕುಣಿತದಲ್ಲಿ ನಿರ್ದಿಷ್ಟ ವ್ಯಕ್ತಿಗಳೇ ಇರಬೇಕೆಂಬ ನಿಯಮವಿಲ್ಲ. ಕುಣಿತ ಗೊತ್ತಿರುವ ಯಾರು ಬೇಕಾದರೂ ಕುಣಿಸಬಹುದು.

ಈ ಕುಣಿತವು ಹೇಗೆ ಅಸ್ತಿತ್ವಕ್ಕೆ ಬಂತು ಎಂಬ ಪ್ರಶ್ನೆಗೆ ಇದಕ್ಕೆ ಸಂಬಂದಿಸಿದ ಪುರಾಣವು ಉತ್ತರ ನೀಡುತ್ತದೆ.""ಶ್ರೀ ಸಿಧ್ಧರಾಮೇಶ್ವರರು ಅಧೋಮುಖರಾಗಿ ತಪಸ್ಸು ಆಚರಿಸುತ್ತಿದ್ದಾಗ ಅವರ ತಪಸ್ಸಿಗೆ ಭಂಗ ತರಬೇಕೆಂದು ಮಾಯೆಯು ಹಲವಾರು ಸಲ ಪ್ರಯತ್ನಿಸಿ ವಿಫಲಗೊಂದಳಓತೆ. ಸಿಟ್ಟುಗೊಂಡ ಮಾಯೆ ಕದೆಯ ಪ್ರಯತ್ನವಾಗಿ ಸಿಧ್ಧರಾಮೆಶ್ವರರಿಗೆ ವಿಷ ಹಾಕಿದಳಂತೆ, ಪವಾಡ ಪುರುಷನಾದ ಸಿಧ್ಧರಾಮೇಶ್ವರು ಆ ವಿಷವನ್ನು ನಂಜುಂಡನಂತೆ ಅರಗಿಸಿಕೊಂಡರಂತೆ, ತನಗೆ ವಿಷವನ್ನು ಉಣಿಸಿದ ಮಾಯೆಯ ಬಗ್ಗೆ ತಿಳಿದ ಸಿಧ್ಧರಾಮೆಶ್ವರ ಕೋಪಗೊಂಡು "ನೀನು ಇನ್ನು ಮುಂದೆ ನೀನು ನನ್ನ ಮುಂದೆ ಕುಣಿಯುತ್ತಾ ಇರಬೇಕೆಂದೂ ಕುಣಿಯುವುದೇ ನಿನ್ನ ವೃತ್ತಿ" ಎಂದು ಶಾಪವಿತ್ತರಂತೆ. ಅದಕ್ಕಾಗಿ ಅಂದಿನಂತೆ ಇಂದಿನವರೆಗೆ ಮಾಯೆಯ ಕುಣಿತ ಅಥವಾ ಮಾಯಮ್ಮನ ಕುಣಿತ ನಡೆದು ಕೊಂಡುತ್ತಾ ಬಂದಿದೆ ಎಂದು ಜನ ನಂಬಿದ್ದಾರೆ.

ಮುಕ್ತಾಯ

ಬದಲಾಯಿಸಿ

ಈ ಕುಣಿತವು ಸಿಧ್ಧರಾಮೇಶ್ವರ ಉತ್ಸವ ಹಾಗೂ ಜಾತ್ರೆಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತದೆ ಹಾಗೂ ಜನರು ಈ ನೃತ್ಯವಿಲ್ಲದೆ ಸಿಧ್ಧರಾಮೇಶ್ವರ ಉತ್ಸವವಿಲ್ಲ ಎಂದು ನಂಬಿದ್ದಾರೆ. ಯುವಕರು ಮಾಯಮ್ಮನ ಉತ್ಸವದ ದಿನಗಳಲ್ಲಿ ಮಾರಿಯಮ್ಮನ ಕೊಂತ ಉತ್ಸವಕ್ಕಾಗಿ ಬಹಳ ಉತ್ಸುಕರಾಗಿ ಇರುತ್ತಾರೆ.

ಈ ನೃತ್ಯ ಪ್ರಕಾರವನ್ನು ಜನರು ದಕ್ಷಿಣ ಕನ್ನಡ ದೆಂದು ಭಾವಿಸಿದ್ದಾರೆ, ಆದರೆ ಆ ಕುಣಿತವು ಬೇರೆಯಾಗಿದ್ದುಇದಕ್ಕೂ ಅದಕ್ಕೂ ಯಾವುದೇ ಸಾಮ್ಯತೆಗಳು ಇಲ್ಲ.ಇದು ತುಮಕೂರು ಜಿಲ್ಲೆಯಲ್ಲಿ ಕಂಡುಬರುವ ವಿಶೇಷ ಕಲೆಯಾಗಿದೆ.