ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.

ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ,ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು.ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ,ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು. ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ 'ಜಾನಪದ'ಎನ್ನಿಸಿಕೊಂಡಿದೆ.

ಜಾನಪದದ ಅರ್ಥ ಮತ್ತು ವ್ಯಾಖ್ಯಾನಗಳು

'ಜಾನಪದ' ಎನ್ನುವ ಪದ ಇಂಗ್ಲೀಷಿನಲ್ಲಿ Folklore ಎಂಬುದಕ್ಕೆ ಸಮಾನಾರ್ಥಕವಾಗಿ ಬಳಸಿರುವ ಕನ್ನಡ ಪದ. Folklore ಎನ್ನುವುದು Folk & Lore ಎಂಬ ಎರಡು ಪ್ರತ್ಯೇಕ ಅರ್ಥವನ್ನು ಉಳ್ಳ ಪದಗಳ ಸಯೋಗದಿಂದ ಕೂಡಿದೆ. Folk ಎನ್ನುವುದಕ್ಕೆ ಕನ್ನಡದಲ್ಲಿ ಜನಪದ ಎಂತಲೂ, Lore ಜ್ಞಾನ ಎಂತಲೂ ಇದೆ. ಜಾನಪದ ಜ್ಞಾನ ಈ ವಿಷಯಕ್ಕೆ ಡಾ. ಹಾ.ಮಾ. ನಾಯಕ ಅವರು ಜಾನಪದ ಎಂಬ ಶಬ್ದವನ್ನು ಬಳಸಿದ್ದಾರೆ. ಜನಪದ ಜ್ಞಾನವೇ ಜನಪದ ಎಂದು ಕರೆಯಬಹುದು. ಜನಪದರ ಸಾಹಿತ್ಯ, ಸಂಗೀತ, ನೃತ್ಯ, ಆಟ ಈ ಎಲ್ಲವನ್ನು ಒಳಗೊಂಡಿದ್ದೇ ಜಾನಪದವೆಂದು ಹೇಳಬಹುದು. ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಬಂದಿರುವ ಮೌಖಿಕ ಪರಂಪರೆಯಲ್ಲಿ ಸಂಬಂಧ ಜ್ಞಾನವೇ ಜಾನಪದ. ಜಾನಪದ ಎಂದರೇನು? ಎಂಬುದರ ಕುರಿತು ಭಾರತೀಯ ಪಾಶ್ಚಾತ್ಯ ಹಾಗೂ ವಿದೇಶಿ ವಿದ್ವಾಂಸರು ವ್ಯಾಖ್ಯಾನವನ್ನು ನೀಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

ಆಂಡ್ರೋಲಾಂಗ್

"ಜನಾಂಗಗಳ ಪಳೆಯುಳಿಕೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವ ವಿಜ್ಞಾನ, ಜನ ಜೀವನದಲ್ಲಿ ಇಂದಿಗೂ ಕಂಡು ಬರುವುದು. ಆದರೆ ಈ ಕಾಲದಲ್ಲಿ ಕತೆಗಳನ್ನು ನಂಬಿಕೆಗಳನ್ನು ವಿಚಾರಗಳನ್ನು ಕುರಿತು ವಿಜ್ಞಾನ ಅಧ್ಯಯನ ಮಾಡುತ್ತದೆ. ಸಮಾಜದ ಮುಂತಾದವುಗಳ ಮೊತ್ತವೇ ಜಾನಪದ.

ಎಡ್ವಿನ್ ಸಿಡ್ನಿ ಹಾರ್ಟಲ್ಯಾಂಡ್

"ಜಾನಪದ ಎನ್ನುವುದು ಸಂಪ್ರದಾಯದ ಪ್ರಜ್ಞೆ, ಅಂದರೆ ಪರಂಪರಾಗತ ಜ್ಞಾನವು ನೆನಪಿನ ರೂಪದಲ್ಲಿ ಕ್ರೀಯಾರೂಪದಲ್ಲಿ ಸಾಗಿಬರುವ ಪ್ರಕ್ರಿಯೆಯನ್ನು ಹಾರ್ಟಲ್ಯಾಂಡ್ ಸಂಪ್ರದಾಯ ಎಂದೇ ಗುರುತಿಸಿರುವರು.

ಇ ಡಬ್ಲ್ಯೂ ವೊಗೆಲಿನ್

ಮೌಖಿಕ ಸಂಪ್ರದಾಯದಲ್ಲಿ ಸಾಗಿಬಂದ ಯಾವುದೇ ಪರಂಪರಾನುಗತ ವಿಷಯವಾಗಿರುವ ಪದ್ಯ ಮತ್ತು ಗದ್ಯ ವಿಷಯವಾಗಿರಲಿ ಅದುವೇ ಜಾನಪದ ಎನ್ನುತ್ತೇವೆ. ಈತ ಜಾನಪದ ಮೂಲಗುಣ ಮೌಖಿಕ ಪ್ರಸರಣೆ loral transmission ಎಂದು ಸ್ಪಷ್ಟಪಡಿಸಿದ್ದಾರೆ.

ಬಾರ್ಬೆ ಮೇರಿಯಸ್

ಯಾವಾಗ ಹಿಂದಿನದಾದ ಜ್ಞಾನ ಅನುಭವ ಜಾಣ್ಮೆ ನೈಪುಣ್ಯ ಹವ್ಯಾಸಗಳು ಮತ್ತು ಅನುಸರಣಿಗಳು ಹಳೆಯ ತಲೆಮಾರಿನಿಂದ ಹೊಸ ತಲೆ ಮಾರಿಗೆ ಮಾತಿನ ಮೂಲಕ ಹಸ್ತಾಂತರಗೊಳಿಸುತ್ತವೆಯೋ ಇವು ಪುಸ್ತಕ ಅಚ್ಚು ವಿಷಯಗಳು ಆಗಿರುವುದಿಲ್ಲವೋ ಅಲ್ಲಿ ನಾವು ಜಾನಪದವನ್ನು ಕಾಣುತ್ತೇವೆ.

ಭಾರತೀಯ ವಿದ್ವಾಂಸರ ವ್ಯಾಖ್ಯಾನಗಳು

ಹಾ.ಮಾ.ನಾಯಕ

ಜಾನಪದ ಲಿಖಿತ ದಾಖಲೆಗಿಂತ ಜನತೆಯ ಗ್ರಂಥಸ್ಥವಲ್ಲದ ಸಾಂಪ್ರದಾಯಿಕ ಮೊತ್ತ. ಸಂಪ್ರದಾಯವನ್ನು ಕುರಿತಾದ ವಿಜ್ಞಾನ ಯಾವುದೇ ಸಮಾಜದ ವಾಚಿಕ ಪರಂಪರೆಗಳ ಕಲೆ ಮತ್ತು ನಂಬಿಕೆಗಳ ಮೊತ್ತ.

ಜೀ.ಶಂ.ಪರಮಶಿವಯ್ಯ

ನಾಗರಿಕತೆಗೂ ಮೂಲವಾದ ಶಿಷ್ಠ್ಯ ಸಂಸ್ಕ್ರತಿಯಿಂದ ದೂರವಾದ ಪರಂಪರಾನುಗತವಾದ ಬೆಳವಣಿಗೆಗಳು ಪಡೆದ ಜನಸಮುದಾಯದ ವಿಶಿಷ್ಟ ಸಂಸ್ಕೃತಿಯೇ ಜಾನಪದ.

ದೇ.ಜವರೇಗೌಡ

ಬಾಲ ಬಾಯಿಯಲ್ಲಿ ಬ್ರಹ್ಮಾಂಡವು ಅಡಗಿರುವಂತೆ ಜಾನಪದದಲ್ಲಿ ಎಲ್ಲವೂ ಅಡಗಿದೆ.

ಗೊ.ರು.ಚನ್ನಬಸವಪ್ಪ

ಜನತೆಯ ನಾಲಿಗೆಯ ತೂಗು ತೊಟ್ಟಿಲಿನ ಮೇಲೆ ನರ್ತಿಸುತ್ತಾ ಜನಸಾಮಾನ್ಯರ ಸರ್ವತೋಮುಖ ಅಭಿವ್ಯಕ್ತಿಯಾಗಿದೆ.

ಜಾನಪದ ಲಕ್ಷಣಗಳು

ಪರಂಪರಾಗತ ಅನುಭವ ಜ್ಞಾನವನ್ನು ಹೊಂದಿರುವ ಮೌಖಿಕ ಪರಂಪರೆಯ ಜಾನಪದದ ಪ್ರಮುಖ ಲಕ್ಷಣಗಳನ್ನು ಈ ಕೆಳಗಿನಂತೆ ಗುರುತಿಸಬುದು.

  1. ಕಂಠಸ್ಥ ಸಂಪ್ರದಾಯ
  2. ಸಾಮೂಹಿಕ ಪುನರ್ ಸೃಷ್ಠಿ
  3. ವ್ಯಾಪಕತೆ
  4. ಸಜೀವವಾದದ್ದು
  5. ಪರಂಪರೆಯಿಂದ ಕೂಡಿದ್ದು
  6. ಸರಳತೆ, ಸ್ಪಷ್ಟತೆ
  7. ಪರಿವರ್ತನಾ ಶೀಲತೆ
  8. ವಿಶ್ವ ಮಾಲಿಕತೆ
  9. ಜಾನಪದ ಸಂಸ್ಕ್ರತಿಯ ಒಂದು ಭಾಗ
  10. ಜಾನಪದ ಸರ್ವ ಸಾಮಾನ್ಯ ಬಳಕೆ
  11. ಎಲ್ಲರ ಸಾಮಾನ್ಯ ಒಪ್ಪಿಗೆಯಾಗಿದೆ
  12. ಜನಪ್ರಿಯ ಪರಂಪರೆಗಳ ಭಂಡಾರ

ಕಂಠಸ್ಥ ಸಂಪ್ರದಾಯ

ಜನಪದವು ಅನೇಕ ಲಕ್ಷಣಗಳಲ್ಲಿ ಕಂಠಸ್ಥ ಸಂಪ್ರದಾಯವು ಒಂದು ಪ್ರಮುಖವಾದದ್ದು. ಜಾನಪದವು ಗ್ರಂಥಸ್ಥ ಮೂಲವನ್ನು ಅವಲಂಬಿಸದೆ. ತಲತಲಾಂತರದಿಂದ ಕಿವಿಯಿಂದ ಕಿವಿಗೆ ಬಾಯಿಯಿಂದ ಬಾಯಿಗೆ ಹರಿದು ಬಂದಿದೆ. ವಿಶೇಷವಾಗಿ ಜಾನಪದವು ಅನಕ್ಷರಸ್ಥರ ಸಮಾಜವಾಗಿದೆ. ಹೀಗಾಗಿ ಕಂಠಸ್ಥ ಸಂಪ್ರದಾಯದ, ಪುರಾಣ, ಹಾಡು, ಐತಿಹ್ಯ, ಕಥೆ, ಗಾದೆ, ಒಗಟು, ನಂಬಿಕೆ, ಆಚರಣೆ, ಕಲೆ, ವೈಧ್ಯ, ಮಾಟ, ಮಂತ್ರ ಹೀಗೆ ಎಲ್ಲವು ನೆನಪಿಡುವುದರ ಮೂಲಕ ನೋಡಿ ಅನುಕರಿಸುವದರ ಮೂಲಕ ಹಿಂದಿನ ತಲೆಮಾರಿನಿಂದ ಕಿರಿಯ ತಲೆಮಾರಿಗೆ ಸಾಗಿ ಬರುತ್ತದೆ.

ಸಾಮೂಹಿಕ ಪುನರ್ ಸೃಷ್ಠಿ

ತಲೆಮಾರಿನಿಂದ ತಲೆಮಾರಿಗೆ ಅದು ಸಮುದಾಯದ ಸೃಷ್ಟಿಯಾಗಿ ಬರುವಾಗ ಅದರ ಮೂಲ ಕರ್ತೃ ಕಣ್ಮರೆಯಾಗಿ ಅದು ಸಮುದಾಯದ ಸ್ವತ್ತಾಗಿ ಉಳಿಯುತ್ತದೆ. ಅಂದರೆ ನಿರಂತರವಾಗಿ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಲೇ ಇರುತ್ತದೆ. ಇದರಿಂದಾಗಿ ಜನಪದ ಸಾಹಿತ್ಯದಲ್ಲಿ ದೃಷ್ಟಿ ಪ್ರಜ್ಞೆಗೆ ಯಾವುದೇ ಅವಕಾಶವಿಲ್ಲ.

ವ್ಯಾಪಕತೆ

ಬದುಕಿನ ಸೂಕ್ಷ್ಮ ಸಂಗತಿಗಳನ್ನು ಜಾನಪದ ಒಳಗೊಂಡಿರುತ್ತದೆ. ಜನತೆಯ ಸರ್ವತೋಕಮುಖ ಅಭವೃದ್ದಿ ಇಲ್ಲಿದೆ. ಜನಪದರ ಬದುಕಿನ ಸಾವಿರಾರು ಸಂಗತಿಗಳು ಜಾನಪದದಲ್ಲಿ ಹಾಸು ಹೊಕ್ಕಾಗಿ ಸೇರುತ್ತದೆ. ಪ್ರಾಯಶಃ ಜಾನಪದದಲ್ಲಿ ವ್ಯಾಪಕ ಮತ್ತು ವಿಶಾಲವಾದ್ದು ಮತೊಂದಿಲ್ಲ. ದೇವರಲ್ಲಿ ಭಕ್ತಿ ಪ್ರೇಮ ಮನೆಯ ಕುರಿತಾದ ಹೆಮ್ಮೆ ಬಂಜೆಯ ಬೇಸರ ತಾಯಿಯ ವಾತ್ಸಲ್ಯ ತವರಿನ ಹಂಬಲ ಹೀಗೆ ನೂರೆಂಟು ಬಗೆ ವಿಸ್ವಾಸಲೋಕದ ಚಿತ್ತಾರವೇ ಜಾನಪದವಾಗಿದೆ.

ಸಜೀವವಾದ್ದು

ಜಾನಪದ ಮೂಲತಃ ಪರಂಪರಾನುಗತವಾಗಿ ಬಂದ ಜ್ಞಾನ. ಇದು ಸಮಷ್ಟಿ ಕೃತವಾಗಿದೆ. ಎಲ್ಲಿಯವರಿಗೆ ಜಗತ್ತಿನಲ್ಲಿ ಸಾಮಾನ್ಯವರ್ಗ ಅಸ್ವಿತ್ತದಲ್ಲಿರುತ್ತದೆಯೋ ಅಲ್ಲಿಯವರಿಗೆ ಜಾನಪದ ತಾನೆ ತಾವಾಗಿ ಉಳಿದು ಬರುತ್ತದೆ. ಮನುಷ್ಯ ನಾಗರಿಕತೆಯಿಂದ ಮುಂದುವರೆದರೂ ಸಹ ಅವನ ಮೇಲೆ ಜಾನಪದ ಪ್ರಭಾವ ಸಾಕಷ್ಟಿರುತ್ತದೆ. ಇದು ಜೇವಂತ ಪಳಿಯುಳಿಕೆಯಾಗಬಲ್ಲದೆ, ಹೊರತೂ ನಶಿಸುವುದಿಲ್ಲ. ಯಾವುದಾದರೂ ರೂಪದಲ್ಲಿ ಮತ್ತೆ ಗರಿಗೆದರಿ ನಳನಳಿಸುತ್ತ ಜಾನಪದ ಒಂದಲ್ಲ ಒಂದು ರೀತಿಯಲ್ಲಿ ಉಸಿರಾಡುತ್ತಿದೆ.

ಪರಂಪರೆಯಿಂದ ಕೂಡಿದ್ದು

ಜನಪದ ಜ್ಞಾನ ಪರಂಪರಾನುಗತವಾಗಿ ಸಾಗಿ ಬಂದದ್ದು. ಜಾನಪದ ತನ್ನದೇ ಆವರಣದಲ್ಲಿ ಮೌಖಿಕ ಸಂಪ್ರದಾಯವನ್ನು ಅನುಸರಿಸಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ವಿಷಯಗಳ ವಸ್ತುಗಳು ಮೊತ್ತ. ಹಾಗೆ ಬರುವಾಗ ಬದಲಾವಣೆ ಬೆಳವಣಿಗೆಯನ್ನು ಪಡೆದು ಕೊಳ್ಳವಂತಹದ್ದು, ಕೆಳುವುದು ನೆನಪಿನಲ್ಲಿಟ್ಟುಕೊಳ್ಳುವುದು, ನೋಡುವುದು ಮತ್ತು ಅನುಸರಿಸುವುದು ಈ ಸಂಕೀರ್ಣ ಪರಂಪರೆಯಿಂದ ಕೂಡಿದ್ದಾಗಿದೆ.

ಸರಳತೆ, ಸ್ಪಷ್ಟತೆ

ಜಾನಪದ ಸಾಮಾನ್ಯವಾಗಿ ಅನಕ್ಷರ ಜ್ಞಾನವಾಗಿದೆ. ಇದು ಆಡುಮಾತಿನಲ್ಲಿ ಇರುವಂತಹದು. ಹೀಗಾಗಿ ಜಾನಪದ ಸರಳತೆ ಹಾಗೂ ಸ್ಪಷ್ಟತೆಯಿಂದ ಕೂಡಿದೆ. ತಮಗೆ ಅನಿಸಿದ ಭಾವನೆಗಳನ್ನು ನೇರವಾಗಿ ಬಿಚ್ಚು ಮನಸ್ಸಿನಿಂದ ಹೇಳುವ ಕಲೆಗಾರಿಕೆ ಜನಪದರಾಗಿದ್ದಾರೆ. ಜನಪದರ ಮಾತು ಸರಳವಾಗಿದ್ದರೂ ಸಹ ಅದರ ಅರ್ಥ ನಿಗೂಢತೆಯಿಂದ ಕೂಡಿರುತ್ತದೆ.

ಪರಿವರ್ತನಾ ಶೀಲತೆ

ಪರಂಪರಾನುಗತವಾಗಿ ಬಾಯಿಯಿಂದ ಬಾಯಿಗೆ ಸಾಗಿ ಬಂದ ಜನಪದ ಜ್ಞಾನವು ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡಿದೆ. ಆದರೆ ಜಾನಪದ ಎಷ್ಟೇ ರೂಪಾಂತರಗೊಂಡರೂ ಸಹ ಅದು ತನ್ನ ಮೂಲದ ಸೊಗಡನ್ನು ಮಾತ್ರ ತನ್ನಲಿಯೆ ಗರ್ಭೀಸಿಕೊಂಡು ಬಂದಿದೆ. ಒಂದು ಜಾನಪದ ಕಥೆಯೂ ಇಂದು ಭಾಷಾ ದೃಷ್ಟಿಯಿಂದ ಅಥವಾ ಪ್ರಾದೇಶಿಕ ದೃಷ್ಟಿಯಿಂದಲೂ ಬದಲಾವಣೆಯಾಗಿರಬಹುದು. ಆದರೆ ಅದರ ಮೂಲ ಆಶಯ ಒಂದೇ ಆಗಿರುವುದು.

ವಿಶ್ವ ಮಾಲಿಕತೆ

ಯಾವುದೇ ಕಾಲದಲ್ಲಿ ಯಾವುದೇ ಮಾತಿನಲ್ಲಿ ಮೈದೋರಿದರೂ ಕಾಲ, ದೇಶ ಆಭಾದಿತವಾಗಿ ನಿಲ್ಲುತ್ತದೆ. ಸ್ಪಷ್ಟರೂಪದ ಸೃಷ್ಟಿಕಾಯ‍ ವಿಧಾನ ಈ ವಿಶ್ವಮೌಲಿಕತೆಗೆ ಕಾರಣವಾಗಿದೆ.

ಜಾನಪದ ಸಂಸ್ಕ್ರತಿಯ ಒಂದು ಭಾಗ

ಸಂಸ್ಕೃತಿಯು ಎಲ್ಲಾ ಮಾನವಶಾಸ್ತ್ರಗಳಿಗೆ ಮೂಲ ಆಧಾರ. ಜಾನಪದ ಸಹ ಜನ ಸಂಸ್ಕೃತಿಯ ಒಂದು ಅಧ್ಯಯನವಾಗಿದೆ. ಇದು ಯಾವುದೇ ವರ್ಗ, ವರ್ಣ, ಜಾತಿಗೆ ಸೀಮಿತವಾದ ಸಂಸ್ಕೃತಿಯ ಒಂದು ಭಾಗ, ವರ್ಗ, ಜಾತಿ, ವರ್ಣಗಳಲ್ಲಿ ತಾತ್ಕಾಲಿಕವಾಗಿಯಾದರೂ ಬೇರೆಯಾಗುವ ಜನ ಸಂಸ್ಕೃತಿಯಲ್ಲಿ ಒಟ್ಟಿಗೆ ಸೇರುತ್ತಾರೆ.

ಜಾನಪದ ಸರ್ವ ಸಾಮಾನ್ಯ ಬಳಕೆ

ಜಾನಪದ ಎಲ್ಲ ವರ್ಗಗಳಲ್ಲಿ ಕಂಡು ಬಂದರೂ ಅದು ಯಾವುದೇ ವರ್ಗಕ್ಕೆ, ಜಾತಿಗೆ, ಸೀಮಿತವಾದುದಲ್ಲ ಅದು ಎಲ್ಲರ ಮಧ್ಯ ಸರ್ವ ಸಾಧಾರಣವಾಗಿ ಇರುವಂತಹದು. ಕೆಲವು ಸಾಂಧರ್ಭಿಕ ವ್ಯತ್ಯಾಸಗಳನ್ನು ಬಿಟ್ಟರೆ ಮಾನವರಲ್ಲಿ ಒಟ್ಟಾಗಿ ಅನುಸರಿಸುವ ಆಚರಿಸುವ, ನಡುವಳಿಕೆ ವಿಚಾರ ಆಚಾರಗಳಿವೆ. ಇವು ಜಾನಪದ ಒಳಗೊಂಡಿರುವ ಸರ್ವಸಾಮಾನ್ಯ ಅಂಶಗಳು ಹೀಗೆ ಜಾನಪದ ಸರ್ವಸಾಧಾರಣಾಗಿ ಎಲ್ಲರ ಬಳಕೆಯಾಗಿದೆ. ಹಾಗಗಿ

ಎಲ್ಲರ ಸಾಮಾನ್ಯ ಒಪ್ಪಿಗೆಯಾಗಿದೆ

ಜನಪದರ ನಡೆ, ನುಡಿ, ಆಚರಣೆ, ನಂಬಿಕೆ ಈ ಮೊದಲಾದ ಅಂಶಗಳು ಜಾನಪದದಲ್ಲಿ ಒಳಗೊಳ್ಳುತ್ತದೆ. ಇವುಗಳನ್ನು ಒಪ್ಪಕೊಂಡವರೇ ಜಾನಪದರು.

ಜಾನಪದ ಜನಪರ (ಜನಪ್ರಿಯ ಪರಂಪರೆಗಳ ಭಂಡಾರ)

ಪ್ರತಿಯೊಂದು ಜಾನಪದಕ್ಕೆ ತನ್ನದೆ ಆದ ತೇಜಸ್ಸು ಹಾಗೂ ಪ್ರತಿಭೆಯನ್ನು ಹೊಂದಿರುತ್ತದೆ. ಪ್ರತಿಯೊಂದು ಜಾನಪದವು ತನ್ನದೆ ಆದ ಧೋರಣೆಗಳನ್ನು ಚಿಂತನೆಗಳನ್ನು, ನಡುವಳಿಕೆಗಳ ಭಾಷೆ ಹೊಂದಿರುತ್ತದೆ. ಪ್ರತಿಯೊಂದು ಅಂಶವು ಒಂದೊಂದು ಸೃಷ್ಟಿಯು ಪ್ರತಿ ಸೃಷ್ಟಿಯು ಮಹತ್ವ ಪೂಣ‍ವಾದದ್ದು ಒಂದರ ಸೃಷ್ಟಿ ಮತ್ತೊಂದರ ಸೃಷ್ಟಿಗೆ ಕಡಿಮೆಯಲ್ಲ. ದಲಿತ ಜಾನಪದ ಸೃಷ್ಟಿ, ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗ ಇನ್ನಾವುದೇ ಜನಪದ ಸೃಷ್ಟಿ ಮತ್ತು ದೃಷ್ಟಿಯಿಂದಲೇ ಪ್ರತಿ ಜಾನಪದ ತನ್ನದೇ ಆದ ತೇಜಸ್ಸು ಮತ್ತು ಪ್ರತಿಭೆಯನ್ನು ಪಡೆದಿರುತ್ತದೆ.ಥಪಥಠೊಪಪೊಛೊಷೊಠಶೊಠೊಷಫೊಠೊಶಠಪೊಠೋಷಟೋಪಫೊಡೋಪೊಫೊಫಟೊಪಪೋಠೋಫಫೋಠಠೋಛೋಠಫೋಛೋಫಢೇ

ನೋಡಿ

ಉಲ್ಲೇಖ

ಕನ್ನಡ ಜಾನಪದ

ಕನ್ನಡ ಜಾನಪದ ಗೀತೆಗಳು Archived 2021-11-08 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ಜಾನಪದ&oldid=1202877" ಇಂದ ಪಡೆಯಲ್ಪಟ್ಟಿದೆ