ಮಾನ್ಸಿ ಜೋಶಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ಬಲಗೈ ಮದ್ಯಮ ವೇಗದ ಬೌಲರ್ . ದೇಶಿ ಕ್ರಿಕೆಟ್‍ನಲ್ಲಿ ಹರಿಯಾಣ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ.[]

ಆರಂಭಿಕ ಜೀವನ

ಬದಲಾಯಿಸಿ

ಮಾನ್ಸಿ ಜೋಶಿ ರವರು ಅಗಸ್ಟ್ ೧೮, ೧೯೯೩ರಂದು ಪಂಜಾಬ್‍ನಲ್ಲಿ ಜನಿಸಿದರು. ಇವರು ಸಚಿನ್ ತೆಂಡೂಲ್ಕರ್‌ರಿಂದ ಬಹಳ ಸ್ಪೋರ್ತಿಯನ್ನು ಪಡೆದಿದ್ದು, ಇದೇ ಕಾರಣಕ್ಕೆ ಇವರ ಜೆರ್ಸಿ ಸಂಖ್ಯೆ ೧೦ ಅಯ್ಕೆ ಮಾಡಿಕೊಂಡಿದ್ದಾರೆ. ಹರಿಯಾಣ ಕ್ರಿಕೆಟ್ ಅಸೋಸಿಯೇಷನ್‍ನಿಂದ ಇವರು ಮಹಿಳಾ ರಾಜ್ಯದ ತಂಡದ ೧೯ ವಯೋಮಿತಿ ತಂಡದಲ್ಲಿ ಆಯ್ಕೆಯಾದರು. ತನ್ನ ತರಬೇತುದಾರ ವೀರೇಂದ್ರ ಸಿಂಗ್ ರೌಟೆಲಾ ರವರ ಮಾರ್ಗದರ್ಶನ ಮತ್ತು ಇವರ ತಂದೆ-ತಾಯಿಯರ ಬೆಂಬಲದೊಂದಿಗೆ ಇವರು ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು. ಇವರ ಜೀವನದಲ್ಲಿ ಹಲವಾರು ಸವಾಲುಗಳು ಬಂದರು, ತಮ್ಮ ಆಟದ ಮೇಲೆ ತಮ್ಮ ಗಮನವಟ್ಟುಕೊಂಡು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ನಟ ರಾಜೇಶ್ ಖನ್ನಾ ರವರ ಅಭಿಮಾನಿಯಾಗಿದ್ದು, ಗಾಯಕ ಕಿಶೋರ್ ಕುಮಾರ್ ಅವರ ಹಾಡುಗಳನ್ನು ಕೇಳುವುದು ಇವರ ಹವ್ಯಾಸ. ಇವರು ಕಾರ್ಟೂನ್‍ನಲ್ಲಿಯೂ ಆಸಕ್ತಿ ಹೊಂದಿದ್ದಾರೆ.[][][]

ವೃತ್ತಿ ಜೀವನ

ಬದಲಾಯಿಸಿ

ಪ್ರಥಮ ದರ್ಜೆ ಕ್ರಿಕೆಟ್

ಬದಲಾಯಿಸಿ

ದೇಶಿ ಕ್ರಿಕೆಟ್‍ನಲ್ಲಿ ಹರಿಯಾಣ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ. ಇವರು ಮೊದಲಿಗೆ ೧೯ರ ವಯೋಮಿತಿ ತಂಡದಿಂದ ಆಯ್ಕೆಗೊಂಡು ನಂತರ ಹಿರಿಯರ ತಂಡದಕ್ಕೆ ಆಯ್ಕೆಯಾದರು.[]


ಅಂತರರಾಷ್ಟ್ರೀಯ ಕ್ರಿಕೆಟ್

ಬದಲಾಯಿಸಿ

ನವಂಬರ್ ೨೬, ೨೦೧೬ರಲ್ಲಿ ಬ್ಯಾಂಕಾಕ್‌ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ೦೧ನೇ ಟಿ-೨೦ ಪಂದ್ಯದ ಮೂಲಕ ಮಾನ್ಸಿ ಜೋಶಿ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[]ನಂತರ ಫೆಬ್ರವರಿ ೧೦, ೨೦೧೭ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಐರ್ಲೆಂಡ್ ತಂಡದ ವಿರುದ್ದ ನಡೆದ ಸರಣಿಯ ೧೧ನೇ ಏಕದಿನ ಪಂದ್ಯದ ಮಾನ್ಸಿ ಜೋಶಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[]

ಪಂದ್ಯಗಳು

ಬದಲಾಯಿಸಿ
  • ಏಕದಿನ ಕ್ರಿಕೆಟ್ : ೧೦ ಪಂದ್ಯಗಳು[]
  • ಟಿ-೨೦ ಕ್ರಿಕೆಟ್ : ೦೫ ಪಂದ್ಯಗಳು

ವಿಕೇಟ್‍ಗಳು

ಬದಲಾಯಿಸಿ
  • ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೧೨
  • ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೩

ಉಲ್ಲೇಖಗಳು

ಬದಲಾಯಿಸಿ
  1. http://www.bcci.tv/player/4334/Mansi-Joshi
  2. https://www.hindustantimes.com/punjab/ht-youth-forum-2017-cricketer-mansi-joshi-among-top-30-under-30/story-rXQoEeP3eOV645uVtznfxN.html
  3. https://www.cricbuzz.com/profiles/11888/mansi-joshi
  4. http://www.bcci.tv/player/4334/Mansi-Joshi
  5. https://femalecricket.com/female-cricket-blogs/717-female-cricket-interviews-indian-national-player-mansi-joshi.html
  6. http://www.espncricinfo.com/series/8659/scorecard/1065333/bangladesh-women-vs-india-women-1st-match-asian-cricket-council-womens-twenty20-asia-cup-2016-17
  7. http://www.espncricinfo.com/series/8621/scorecard/1073411/india-women-vs-ireland-women-11th-match-group-a-icc-womens-world-cup-qualifier-2016-17
  8. http://www.espncricinfo.com/india/content/player/960815.html