ಮಾಚಿಪತ್ರೆ
ಕಾಮನ್ ಮುಗ್ವಾರ್ಟ್ ಹೆಸರಿನ ಔಷದೀಯ ಗಿಡಮೂಲಿಕೆ
ಮಾಚಿಪತ್ರೆ
ಬದಲಾಯಿಸಿವೈಜ್ಞಾನಿಕ ಹೆಸರು:ಆರ್ಟಿಮೀಸಿಯಾ ವಲ್ಗ್ಯಾರಿಸ್[೧]
ಇತರೆ ಹೆಸರುಗಳು
ಬದಲಾಯಿಸಿಮಗ್ವರ್ಟ್[೨], ನದಿಮುಖದ ಮಗ್ವರ್ಟ್, ಫೆಲೋನ್ ಮೂಲಿಕೆ, ಕ್ರಿಸಾಂಥಮಂ ವೀಡ್, ಕಾಡು ಮಗ್ವರ್ಟ್, ನಾವಿಕನ ತಂಬಾಕು, ನಾಟಿ ಮ್ಯಾನ್, ಓಲ್ಡ್ ಮ್ಯಾನ್, ಸೇಂಟ್ ಜಾನ್ಸ್ ಪ್ಲಾಂಟ್.
ದೈಹಿಕ ರಚನೆ
ಬದಲಾಯಿಸಿ- ಮಾಚಿಪತ್ರೆ ಸಸ್ಯವು ಕನಿಷ್ಠ 1-2 ಮೀ ಉದ್ದದ ಮರದ ಮೂಲವನ್ನು ಅವಲಂಬಿಸಿರುತ್ತದೆ.
- 5-20 ಸೆಂ.ಮೀ ಉದ್ದ, ಗಾಢ ಹಸಿರು, ಕೆಂಪು ಇಲ್ಲವೇ ನೇರಳೆ ಛಾಯೆ ಇಲ್ಲವೇ ಕೆಳಭಾಗದಲ್ಲಿ ಬಿಳಿಯ ರೋಮವನ್ನು ಹೊಂದಿರುತ್ತವೆ.
- ಸಣ್ಣ ಹೂವುಗಳು ಕೆಂಪು ಹಾಗೂ ಗಾಢ ಹಳದಿ ದಳಗಳಿಂದ ಕೂಡಿರುತ್ತವೆ. ಹೂಗಳನ್ನು ಸಾಮಾನ್ಯವಾಗಿ ಆಗಸ್ಟ್ -ಅಕ್ಟೋಬರ್‍ನಲ್ಲಿ ಕಾಣಬಹುದು.
ವೈದ್ಯಕೀಯ ಉಪಯುಕ್ತತೆ
ಬದಲಾಯಿಸಿ- ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಔಷಧಿಗಳಲ್ಲಿ.
- ಮುಟ್ಟಿನ ಸಮಸ್ಯೆ
- ಇದರ ಎಲೆಗಳನ್ನು ಹಸಿವು ವರ್ಧಕ, ಮೂತ್ರವರ್ಧಕ, ನಿದ್ರಾಜನಕ ಎನ್ನಲಾಗುತ್ತದೆ.
- ಎಲೆ ಹಾಗೂ ಹೂವಿ[೩]ನ ಮೇಲ್ಭಾಗದ ದ್ರಾವಣವನ್ನು ಸಂಧಿವಾತ, ಗರ್ಭಾಶಯದ ಕ್ರಿಯಾತ್ಮಕ ಸ್ರಾವ, ಅಸ್ತಮಾ[೪] ಹಾಗೂ ಮೆದುಳಿನ ರೋಗಗಳಿಗೆ ಬಳಸಲಾಗುತ್ತದೆ.
- ಎಲೆಗಳನ್ನು ಕಾಲುನೋವಿನ ಚಿಕಿತ್ಸೆಗೂ ಬಳಸಲಾಗುತ್ತದೆ.
ಇತರೆ ಉಪಯೋಗಗಳು
ಬದಲಾಯಿಸಿ- ತಾಜಾ ಅಥವಾ ಒಣಗಿದ ಸಸ್ಯವನ್ನು ಕೀಟನಾಶಕವಾಗಿ ಬಳಸಲಾಗುತ್ತದೆ.
- ಸುವಾಸನೆಗಾಗಿ ಹಾಗೂ ಕಹಿಗಾಗಿ ಉಪಯೋಗಿಸಲಾಗುತ್ತದೆ.
- ಹುದುಗಿಸಿ, ಪಾನೀಯವಾಗಿ ಸೇವಿಸಲಾಗುತ್ತದೆ.
ಪ್ರತಿಬಂಧಕ
ಬದಲಾಯಿಸಿ- ಗರ್ಭವತಿಯರು ಇದನ್ನು ಸೇವಿಸುವುದರಿಂದ ಗರ್ಭಪಾತ ಸಂಭವಿಸಬಹುದು
- ಇದರ ದೀರ್ಘಕಾಲಿಕ ಬಳಕೆ ನರಮಂಡಲಕ್ಕೆ ಪರಿಣಾಮ ಬೀರಬಹುದು