ಮಹೇಂದ್ರ ಕಪೂರ್
ಮಹೇಂದ್ರ ಕಪೂರ್ ಭಾರತೀಯ ಹಿನ್ನೆಲೆ ಗಾಯಕ.ಐದು ದಶಕಗಳ ವೃತ್ರಿ ಜೀವನದಲ್ಲಿ ಇವರ ಸಂಗೀತ ಸಂಗ್ರಹವು ಅಪಾರ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ 2500 ಗೀತೆಗಳು ವಿಸ್ತರಿಸಲ್ಪಟ್ಟಿತು. ಅದರಲ್ಲಿ ಜನಪ್ರಿಯವಾದ ಹಾಡುಗಳಾದ ‘ಚಲೋ ಇಕ್ ಬಾರ್ ಫಿರ್ ಸೆ ಅಜ್ನಾಬಿ ಬಾನ್ ಜಾಯೆನ್ ಹಮ್ ಡೊನೊ ( ಗುಮಾ) ,ಮತ್ತು ನೀಲೆ ಗಗನ್ ಕೆ ಟೇಲ್ ‘(ಹಮರಾಜ್). ನಂತರ ಇವರ ಹೆಸರು ಮನೋಜ್ ಕುಮಾರ್ ಚಿತ್ರದ ಅಪ್ಕಾರ್ನ ಮತ್ತು ಮೇರೆ ದೇಶ್ ಕಿ ದೇಶಭಕ್ತಿಯ ಹಾಡುಗಳೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದ್ದರು. 1972 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಮನೋಜ್ ಕುಮಾರ್ ಅವರ ಬಹುತೇಕ ಚಲನಚಿತ್ರಗಳಲ್ಲಿ ದೇಶಭಕ್ತಿಯನ್ನು ಸಾರುವ ಸಂಗೀತ ಪ್ರಕಾರದ ಹಾಡುಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಇಂತಹ ಹಾಡುಗಳಿಂದಲೇ ಮಹೇಂದ್ರ ಕಪೂರ್ ಅವರು ಅತ್ಯಂತ ಗಮನಾರ್ಹವಾಗಿದ್ದಾರೆ. ಮಹೇಂದ್ರಕಪೂರ್ (9 ಜನವರಿ 1934 - 27 ಸೆಪ್ಟೆಂಬರ್ 2008)
ಜೀವನಚರಿತ್ರೆ
ಬದಲಾಯಿಸಿಮಹೇಂದ್ರ ಕಪೂರ್ ಅವರು ಅಮೃತಸರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಗಾಯಕ ಮೊಹಮ್ಮದ್ ರಫಿರಿಂದ ಸ್ಪೂರ್ತಿ ಪಡೆದರು. ಶಾಸ್ತ್ರೀಯ ಸಂಗೀತಗಾರರ ಅಡಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಬಿಸಿದರು.ಹುಸನ್ಲಾಲ್, ಪ. ಜಗನ್ನಾಥಬುವಾ, ಉಸ್ತಾದ್ನಿಯಾಜ್ಅಹ್ಮದ್ಖಾನ್, ಉಸ್ತಾದ್ ಅಬ್ದುಲ್ರೆಹಮಾನ್ಖಾನ್ಮತ್ತುಪಟ್ಟಲ್ಸಿಡಾಸ್, ಶರ್ಮಾಕಪೂರ್‍ರವರು ತಮ್ಮದೇ ಆದ ಶೈಲಿಯನ್ನು ಸೃಷ್ಟಿಸಿದರು. ಅಲ್ಲದೇ ಮೆಟ್ರೋಮರ್ಫಿಆಲ್-ಇಂಡಿಯಾದಲ್ಲಿ ಹಾಡುವಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗೆದ್ದುಕೊಂಡರು, 1958 ರಲ್ಲಿ ವಿ.ಶಾಂತಾರಾಮನ್ ನವರಾಂಗ್ನಲ್ಲಿ ಹಿನ್ನೆಲೆ ಗಾಯಕನಾಗಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದರು. ಆಶಾ ಹೈ ಚಂದ್ರಮಾ ರಾತ್ ಆದಿಯನ್ನು ಹಾಡಿದರು. ಸಂಗೀತ ನಿರ್ದೇಶನದ ರಾಮಚಂದ್ರ ಬಿ.ಪಿ. ಚೋಪ್ರಾ ಅವರ ರಚನೆಯ ದುಲ್ ಕಾ ಫೂಲ್, ಗುಮರಾ, ವಕ್, ಹಮರಾಜ್, ದಂಡ್, ನಿಕಾಹ್‍ಗಳಲ್ಲಿ ಕಪೂರ್ ಗಮನಾರ್ಹ ಗೀತೆಗಳು. ಕಪೂರ್ ಬಹಳ ದೊಡ್ಡ ಗಾಯನವನ್ನು ಹೊಂದಿದ್ದರು. ಇವರನ್ನು ವೈಬ್ರಂಟ್ ವಾಯ್ಸ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಅಲ್ಲದೇ ಇಂಗ್ಲಿಷ್‍ನಲ್ಲಿ ಸಂಗೀತ ಧ್ವನಿಮುದ್ರಣ ಮಾಡಿದ ಮೊದಲ ಭಾರತೀಯ ಹಿನ್ನೆಲೆ ಗಾಯಕ. ಪಾಕಿಸ್ತಾನದ ಮುಸಾರತ್ನೊಂದಿಗೆ ತಮ್ಮ ಹಾಡುಗಳನ್ನು ಹಿಂದಿಯಲ್ಲಿ ಹಾಡಿಸಿದ್ದರು. ಇದರಿಂದ ಪಾಪ್ ಆಲ್ಬಮ್ ಎಂ-3 ಗೆ ಕಾರಣವಾಯಿತು. ಇವರು ಕೆವಲ ಚಲನ ಚಿತ್ರಗಳಿಗೆ ಮಾತ್ರವಲ್ಲದೇ ಆಲ್ಬಮ್ ಸಾಂಗ್ ನ್ನು ಕೂಡ ಹಾಡಿದ್ದರೆ. ಇವರ ಆಲ್ಬಮ್ ಹಾಡುಗಳಾದ ಚೋರಿ ಚೋರಿ ಚಲೋ, ಒ ಮೇರಿ ಚಾಂಪಿ ಕಿ ದಾಲಿ ಮುಂತಾದುವುಗಳು. ಈ ಹಾಡುಗಳು ಮನೋಜ್ ಕಪೂರ್‍ನ ಸಿನಿಮಾಗಳಲ್ಲಿ ಜನಪ್ರಿಯವಾಗಿವೆ. ಮಹೇಂದ್ರ ಕಪೂರ್ ಮೊಹಮ್ಮದ್ ರಫಿ ಅವರೊಂದಿಗೆ ಯುಗಳಗೀತೆಯನ್ನು ಹಾಡಿದ್ದರು. ಈ ಹಾಡನ್ನು 1967 ರಲ್ಲಿ ಆದ್ಮಿ ಚಿತ್ರದಿಂದ ಕೈಸಿ ಹಸೀನ್ ಆಜ್ ಬಹರೋನ್ ಕಿ ರಾತ್ ಗೆ ಮಾಡಿದ್ದರು. ಈ ಹಾಡನ್ನು ರಫಿ ಮತ್ತು ತಲಾತ್ ಮೆಹಮೂದ್ ಹಾಡ್ಡಿದ್ದ ಯುಗಳಗೀತೆಯೊಂದಿಗೆ ದಾಖಲಿಸಲಾಗಿದೆ. ಮತ್ತು ಮಹೇಂದ್ರಕಪೂರ್‍ರದೋಹಾಗಳು, ಮಂತ್ರಗಳು, ಚೋಪಯಯಾನ್‍ನ್ನು 1988 ರಟಿವಿಸರಣಿಮಹಾಭಾರತದಶೀರ್ಷಿಕೆಹಾಡುಗಳನ್ನಾಗಿಸಹಹಾಡಿದ್ದರು. ಮೊಹಮ್ಮದ್ ರಫಿ, ಆದ್ಮಿತ ತಲಾತ್, ಮೆಹಮೂದ್ಮನೋಜ್ ಕುಮಾರ್, ಕಪೂರ್ ಹೀಗೆ ಹಲವಾರು ಜನ ಭಾರತೀಯ ಬಾಷೆಗಳಲ್ಲಿ ಹಾಡಿದ್ದಾರೆ. ಕಪೂರ್ ಅವರು ಹಿಂದಿಯಲ್ಲಿ ಮಾತ್ರವಲ್ಲದೇ ಮರಾಠಿ, ಗುಜರಾತಿ, ಭೋಜ್ಪುರಿ, ಭಾಷೆಯಲ್ಲಿ ಕೂಡ ಹಾಡಿದ್ದರೆ. ಮರಾಠಿಯಲ್ಲಿ ಹಾಡಿದ ಹಾಡುಗಳು ದಾದಾ ಕೊಂಡೈಯ ಧ್ವನಿಯಾಗಿ ಜನಮನ್ನಣೆ ಗಳಿಸಿದ್ದರು. ಮಹೇಂದ್ರಕಪೂರ್‍ರು ಮೊಹಮ್ಮದ ರಫಿ, ಕಿಶೋರ್ ಕುಮಾರ್, ಮುಖೇಶ್ ಅವರು ಬಾಲಿವುಡ್ ನ ಗಾಯಕರ ಮುಖ್ಯವೇದಿಕೆಯಾಗಿದ್ದಾಗ ಗೋಲ್ಡನ್ಯು ಗಾಯಕರಾಗಿದ್ದರು. ದಿಲೀಪ್ ಕುಮಾರ್, ಶಮ್ಮಿಕಪೂರ್, ರಾಜ್ ಕಪೂರ್, ದೇವ್ಆನಂದ್, ಶಾಹ್ಸಿಕಪೂರ್, ಬಿಸ್ವಾಜೀತ್, ರಾಜ್ ಕಪೂರ್, ಧರ್ಮೇಂದ್ರ, ಅಮಿತಾಭ್‍ಬಚ್ಚನ್ ಮುಂತಾದಯ ನಾಯಕರುಗಳಿಗೆ ತಮ್ಮ ಧ್ವನಿಯನ್ನು ನೀಡಿದಬಾಲಿವುಡ್‍ನ ಅತ್ಯಂತ ಜನಪ್ರಿಯಗಾಯಕರಾಗಿದ್ದರು. ಕಪೂರ್ ವಿವಾಹವಾದರು ಮೂರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಅವರ ಮಗ ರೋಹನ್ ಕಪೂರ್ 1980 ರ ದಶಕದಲ್ಲಿ ಯಾಶ್ ಚೋಪ್ರಾ ಅವರ ಪಾಸ್ಥೆ(1985) ಮತ್ತು ಲವ್ 86 (1986), ಮತ್ತು ಪ್ರಕಾಶ್ ಮೆಹ್ರಾದ ಇಮಾಂದಾರ್ ಮೊದಲಾದ ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದ ನಟ. ಮತ್ತು ಗಾಯಕ ಕೂಡ ಆಗಿದ್ದರು. ಕಪೂರ್‍ರು 27 ಸೆಪ್ಟೆಂಬರ್ 2008 ರಂದು ಹೃದಯಾಘಾತದಿಂದ ಮೃತಪಟ್ಟರು. ಪತ್ನಿ, ಮಕ್ಕಳು, ಅಳಿಯಂದಿರು, ಮತ್ತು ಮೊಮ್ಮಕ್ಕಳನ್ನು ಅಗಲಿದರು.
ಗಮನಾರ್ಹ ಹಾಡುಗಳು
ಬದಲಾಯಿಸಿಹಿಂದಿ
- ನೀಲೆ ಗಗನ್ ಕೆ ಟೇಲ್ - ಹಮರಾಜ್ (1967)
- ಚಲೋ ಏಕ್ ಬಾರ್ – ಗುಮ್ರಾ ( 1967)
- ಕಿಸ ಪಾಥರ್ ಕಿ ಮೂರತ್ ಸೆ -ಹಮರಾಜ್ ( 1967)
- ಲಖೋನ್ ಹೈ ಯಾಹನ್ ದಿಲ್ವಾಲೆ – ಕಿಸ್ಮತ್ (1968)
- ಮೇರೆ ದೇಶ್ ಕಿ ಧಾರ್ತಿ – ಅಪ್ಕಾರ್ (1967)
- ಇಕ್ವಾರಾ ಬೋಲೆ – ಯಾದ್ಗರ್ (1970)
- ಔರ್ ನಹಿನ್ ಬಾಸ್ ಔರ್ ನಹಿನ್ -ರೋಟಿ ಕಪಾಡ ಔರ್ ಮಕಾನ್ (1974)
- ಮಹಾಭಾರತದ ಶಿರ್ಷಿಕೆ ಗೀತೆ –(1998)
- ವಿಷ್ಣು ಪುರಾಣ್ ಶಿರ್ಷಿಕೆ ಗೀತೆ-(2002) ಮುಂತಾದವುಗಳು.
ಪ್ರಶಸ್ತಿಗಳು
ಬದಲಾಯಿಸಿ- 1997- ಪದ್ಮಶ್ರೀ ಪಶಸ್ತಿ
- 1968- ಅತ್ಯತ್ತಮ ಹಿನ್ನೆಲೆ ಗಾಯಕ ರಾಷ್ಟೀಯ ಚಲನ ಚಿತ್ರ ಪ್ರಶಸ್ತಿ– ಮೇರೆ ದೇಶ್ ಕಿ ಧಾರ್ತಿ ಚಿತ್ರಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕನಾಗಿ ಫಿಲ್ಮ್ ಫೇರ್ ಪ್ರಶಸ್ತಿ
- 1964 – ಚಲೋ ಏಕ್ ಬಾರ್
- 1968- ನೀಲೆ ಗಗನ್ ಕೆ ಟೇಲ್
- 1968- ಮೇರೆ ದೇಶ್ ಕಿ ಧಾರ್ತಿ
- 1975- ಔರ್ ನಹಿ ಬಸ್ ಔರ್ ನಹಿ
- 1967- ಮಿಯಾನ್ ಟ್ಯಾನ್ಸೆನ್ ಪ್ರಶಸ್ತಿ- ಸತಿ ನರಿ ತುಮ್ ನ್ಯಾಚೊ ರಾಸ್ ಬಾರ್ಸೆ
- 2000- ಬಾಲಿವುಡ್ ಸಂಗೀತ ಪ್ರಶಸ್ತಿಗಳು-
ನ್ಯೂಯಾರ್ಕ- ಲೈಪ್ ಟೈಮ್ ಅಚೀವ್‍ಮೆಂಟ್ ಪ್ರಶಸ್ತಿ
ಬದಲಾಯಿಸಿ- 2002- ಲತಾ ಮಂಗೇಶ್ವರ ಪುರಸ್ಕಾರ -ರಾಜ್ಯ ಪ್ರಶಸ್ತಿ
- 2008- ದಾದಾ ಸಾಹೇಬ್ ಫಾಲ್ಕಕಾಡೆಮಿ ಪ್ರಶಸ್ತಿ- ಫಾಲ್ಕೆ ಗೋಲ್ಡನ್ ವಾಯ್ಸ ಸಿಂಗರ್ ಪ್ರಶಸ್ತಿ
- 2008 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ಇದು ಇವರ ಜೀವಮಾನದ ಸಾಧನೆ ದೊರೆತ ಬಿರುದುಗಳು.
ಉಲ್ಲೇಖಗಳು
ಬದಲಾಯಿಸಿ
- ↑ https://timesofindia.indiatimes.com/city/mumbai/Mere-desh-ki-dharti-will-always-be-with-us-/articleshow/3535648.cms?referral=PM
- ↑ http://archive.indianexpress.com/news/singer-mahendra-kapoor-dies-of-heart-attack/366869 Archived 2016-02-03 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://www.imdb.com/?ref_=nv_home