ಮೆಹರ್ ಚಂದ್ ಮಹಾಜನ್ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು. ಮೂಲತಃ ಪಂಜಾಬಿನವರು. ಕೇಂದ್ರ ಸರ್ಕಾರ ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸಲು ಅಕ್ಟೋಬರ್ ೨೫, ೧೯೬೬ ರಂದು ರಚಿಸಿದ ಏಕ ಸದಸ್ಯ ಆಯೋಗಕ್ಕೆ ನೇತೃತ್ವ ವಹಿಸಿದವರು ಮಹಾಜನ್. ನವೆಂಬರ್ ೧೫, ೧೯೬೬ರಿಂದ ಮಹಾಜನ್ ಕಾರ್ಯ ಆರಂಭಿಸಿದರು. ಕರ್ನಾಟಕ - ಮಹಾರಾಷ್ಟ್ರ - ಕೇರಳ ನಡುವಿನ ಗಡಿ ವಿವಾದ ಈ ಆಯೋಗ ಆಗಸ್ಟ್ ೨೫, ೧೯೬೭ರಂದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿತು. ಮಹಾರಾಷ್ಟ್ರದ ಒತ್ತಾಸೆಯಿಂದಲೇ ಮಹಾಜನ ಆಯೋಗ ರಚನೆ ಆಯಿತು. ಆದರೂ ಆಯೋಗದ ಶಿಫಾರಸ್ಸಿನಂತೆ ಬೆಳಗಾವಿ ನಗರ ತನಗೆ ಸಿಗುವುದಿಲ್ಲ ಎಂದು ಗೊತ್ತಾದಾಗ ಮಹಾರಾಷ್ಟ್ರ ಮಹಾಜನ ಆಯೋಗದ ವರದಿಯನ್ನು ತಿರಸ್ಕರಿಸಿತು. ಗಡಿ ವಿವಾದವನ್ನು ಆರಂಭಿಸಿತು.

ಮಹಾಜನ ವರದಿ ಜಾರಿಗೆ ಬಂದರೆ ಕರ್ನಾಟಕಕ್ಕೆ ಆಗುವ ಲಾಭಸಂಪಾದಿಸಿ

೧. ದಕ್ಷಿಣ ಸೊಲ್ಲಾಪುರದ ೬೫ ಹಳ್ಳಿ
೨. ಇಡೀ ಅಕ್ಕಲಕೋಟೆ ತಾಲೂಕು
೩. ಜತ್ತ ತಾಲೂಕಿನ ೪೪ ಹಳ್ಳಿ
೪. ಗಡಹಿಂಗ್ಲಜ ತಾಲೂಕಿನ ೧೫ ಹಳ್ಳಿ
೫. ಕೇರಳದ ಚಂದ್ರಗಿರಿ ನದಿಯ ಉತ್ತರಭಾಗ (ಕಾಸರಗೋಡು ಸೇರಿದಂತೆ)

ಮಹಾಜನ ವರದಿ ಜಾರಿಗೆ ಬಂದರೆ ಕರ್ನಾಟಕಕ್ಕೆ ಆಗುವ ನಷ್ಟಸಂಪಾದಿಸಿ

೧. ಬೆಳಗಾವಿ ತಾಲೂಕಿನ ೬೨ ಹಳ್ಳಿ
೨. ಖಾನಾಪುರ ತಾಲೂಕಿನ ೧೫೨ ಹಳ್ಳಿ
೩. ಚಿಕ್ಕೋಡಿಯ ನಿಪ್ಪಾಣಿ ಸೇರಿದಂತೆ ೪೧ ಹಳ್ಳಿ
೪. ಹುಕ್ಕೇರಿ ತಾಲೂಕಿನ ೯ ಹಳ್ಳಿ
೫. ಇತಿಹಾಸ ಪ್ರಸಿದ್ಧ ನಂದಗಡ
೬. ರಕ್ಕಸಕೊಪ್ಪ ಜಲಾಶಯ