ಕಾಬಾ (ಅರೇಬಿಕ್: الكعبة) ಮೆಕ್ಕಾ, ಸೌದಿ ಅರೇಬಿಯದಲ್ಲಿರುವ ಒಂದು ಕಟ್ಟಡ. ಇದು ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರ. ಈ ಕಟ್ಟಡದ ಸುತ್ತ ಮಸ್ಜಿದ್ ಅಲ್-ಹರಾಮ್ ಎಂಬ ಮಸೀದಿಯನ್ನು ಕಟ್ಟಲಾಗಿದೆ. ಪ್ರಪಂಚದ ಎಲಾ ಮುಸ್ಲಿಮರು ಪ್ರಾರ್ಥಿಸುವಾಗ ಕಾಬಾದ ದಿಕ್ಕಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಕಾಬಾವನ್ನು ಸುತ್ತುವರೆದಿರುವ ಯಾತ್ರಿಕರು

ಮಸ್ಜಿದ್ ಅಲ್ ಹರಮ್, ಮುಸ್ಲಿಮರ ಪವಿತ್ರ ಸ್ಥಳವಾಗಿದೆ, ಇದು ಕಹ್ಬದ ಸುತ್ತ ಮುತ್ತಲಿನ ಪರಿಸರ. ಮುಸ್ಲಿಮರು ಕಹ್ಬಕ್ಕೆ ಮುಖ ಮಾಡಿ ನಮಾಝ್ ನಿರ್ವಹಿಸಬೇಕು, ಜಗತ್ತಿನ ಎಲ್ಲಿ ಇದ್ದರೂ. ಹಜ್ಜ್ ಮತ್ತು ಉಮ್ರಃ ಮಾಡಬೇಕಾದರೆ ಕಹ್ಬದ ಸುತ್ತ ತಿರುಗಬೇಕು, ಇದಕ್ಕೆ ತವಾಫ್ ಎನ್ನುತ್ತಾರೆ. ಹಜ್ಜ್'ನ ದಿನದಲ್ಲಿ, ಸುಮಾರು ೬ ಮಿಲಿಯನ್ ಹಜ್ಜ್ ಯಾತ್ರಿಗಳು ಕಹ್ಬಾದ ಪರಿಸರದಲ್ಲಿ ಸೇರುತ್ತಾರೆ.


ಆರಾಧನೆಗೆಂದು ನಿರ್ಮಿಸಲ್ಪಟ್ಟ ಪ್ರಪ್ರಥಮ ಭವನ

ಬದಲಾಯಿಸಿ

ಕ‌ಅಬಾ ಭವನವು ಏಕದೇವನಾದ ಅಲ್ಲಾಹನ ಆರಾಧನೆಗೆಂದು ನಿರ್ಮಿಸಲ್ಪಟ್ಟ ಪ್ರಪ್ರಥಮ ಭವನವಾಗಿದೆ(ಮಸೀದಿಯಾಗಿದೆ). ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಕ‌ಅಬಾ ಭವನವನ್ನು ಅಲ್ಲೇ ಸುತ್ತಮುತ್ತಲ ಪ್ರದೇಶದಲ್ಲಿರುವ ಬೆಟ್ಟಗುಡ್ಡಗಳ ಕಲ್ಲುಗಳಿಂದ ಅಲ್ಲಾಹನು ನಿಶ್ಚಯಿಸಿದ ಸ್ಥಳದಲ್ಲಿ ಹಝ್ರತ್ ಇಬ್ರಾಹಿಂ(ಅ) ಮತ್ತು ಅವರ ಪುತ್ರ ಹಝ್ರತ್ ಇಸ್ಮಾಯಿಲ್(ಅ)ಅವರು ಕಟ್ಟಿದ್ದರು. ಜಗತ್ತಿನಲ್ಲಿರುವ ಕೋಟಿಗಟ್ಟಲೆ ಮುಸಲ್ಮಾನರು ದಿನಂಪ್ರತಿ ಐದು ಬಾರಿ ಈ ಕ‌ಅಬಾ ಭವನಕ್ಕೆ ಅಭಿಮುಖವಾಗಿ ನಮಾಝ್ ನಿರ್ವಹಿಸುತ್ತಾರೆ.


ಕ‌ಅಬಾವನ್ನು ನಾಶ ಮಾಡಲು ಬಂದ ಅಬ್ರಹ ಚಕ್ರವರ್ತಿ

ಬದಲಾಯಿಸಿ

ಪ್ರವಾದಿ ಮಹಮ್ಮದ್(ಸ.ಅ)ರ ಜನನದ ಹಿಂದೆ ಅಬ್ರಹ ಎಂಬ ರೋಮನ್ ಅರಸನು ಕ‌ಅಬಾ ಭವನವನ್ನು ನಾಶ ಪಡಿಸಲು ಬಂದಿದ್ದ. ಆ ಸಂದರ್ಭದಲ್ಲಿ ಮಕ್ಕಾ ವಾಸಿಗಳಿಗೆ ಅಬ್ರಹನೊಂದಿಗೆ ಹೋರಾಡಿ ಕ‌ಅಬಾ ಭವನವನ್ನು ಸಂರಕ್ಷಿಸುವ ಧೈರ್ಯವಾಗಲಿ ಶಕ್ತಿಯಾಗಲಿ ಇರಲಿಲ್ಲ. ಅಬ್ರಹನ ಅತಿ ದೊಡ್ಡ ಸೇನೆಯ ಮೇಲೆ ಅಲ್ಲಾಹನು ಹಕ್ಕಿಗಳ ಮೂಲಕ ಹರಳು ಕಲ್ಲುಗಳನ್ನು ಸುರಿಸಿದನು. ಆ ಹರಳುಕಲ್ಲುಗಳು ಅವರ ಮೇಲೆ ಬಿದ್ದ ಕೂಡಲೆ ಅವರು ಕೊಳೆತು ಅವರ ಅಂಗಾಂಗ ಬೇರ್ಪಡಲು ಪ್ರಾರಂಬಿಸಿತು. ಹೀಗೆ ಅಬ್ರಹನ ಸೇನೆ ಸರ್ವನಾಶವಾಯಿತು. ಈ ಘಟನೆಯನ್ನು ಕುರ್ ಆನಿನ 105ನೇ ಅಧ್ಯಾಯ ಅಲ್-ಫೀಲ್ ನಲ್ಲಿ ಅಲ್ಲಾಹನು ವಿವರಿಸಿದ್ದಾನೆ. ಕ‌ಅಬಾ ಭವನವನ್ನು ಯಾರಿಗೂ ನಾಶ ಪಡಿಸಲು ಸಾಧ್ಯವಿಲ್ಲ. ಆ ಭವನಕ್ಕೆ ಯಾರ ರಕ್ಷೆಯ ಅಗತ್ಯವೂ ಇಲ್ಲ ಸ್ವತಃ ಅಲ್ಲಾಹನೇ ಅದರ ಸಂರಕ್ಷಣೆ ಮಾಡುವನು.


ಕ‌ಅಬಾ ಭವನವನ್ನು ನೋಡಿ ಪ್ರಾರ್ಥಿಸಿದರೆ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ ಮತ್ತು ಅಲ್ಲಾಹನ ಅನುಗ್ರಹ ಸುರಿಯುತ್ತದೆ ಎಂದು ಹದೀಸ್ ಗಳಿಂದ ಉಲ್ಲೇಖಿತವಾಗಿದೆ. ಈ ಭವನದ ತವಾಫ್(ಪ್ರದಕ್ಷಿಣೆ) ಮಾಡಲು ಅಲ್ಲಾಹನು ಕಲ್ಪಿಸಿದ್ದಾನೆ. ಈ ಪ್ರದಕ್ಷಿಣೆಯೂ ಕೂಡ ಅಲ್ಲಾಹನ ಆರಾಧನೆಯೇ ಆಗಿದೆ. ಮುಸ್ಲಿಮರು ಕ‌ಅಬಾ ಭವನವನ್ನಾಗಲಿ, ಹಜರುಲ್ ಅಸ್ವದ್ ಶಿಲೆಯನ್ನಾಗಲಿ ಆರಾಧಿಸುತ್ತಿಲ್ಲ. ಆರಾಧನೆಗೆ ಅರ್ಹನಾದವನು ಅಲ್ಲಾಹು ಮಾತ್ರ. ಅವನ ಹೊರತು ರಕ್ಷಕ ಮಿತ್ರರಾರೂ ಇಲ್ಲ. ಅವನೇ ಸಕಲ ಸೃಷ್ಟಿಗಳ ಸೃಷ್ಟಿಕರ್ತ.


ಅಬೂಹುರೈರಾ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು: ನನ್ನ ಈ ಮಸೀದಿಯಲ್ಲಿ ನಿರ್ವಹಿಸಿದರೆ ಒಂದು ನಾಮಾಝ್'ಗಿಂತ ಸಾವಿರಪಟ್ಟು ಪುಣ್ಯದಾಯಕವಾಗಿದೆ. ಆದರೆ ಮಸ್ಜಿದುಲ್ ಹರಾಮ್ ಅದಕ್ಕೆ ಹೊರತಾಗಿದೆ.

[ಸಹೀಹ್ ಬುಖಾರಿ: 27, ಮಕ್ಕಾ-ಮದೀನಾದ ಮಸೀದಿಗಳಲ್ಲಿ ನಾಮಾಝ್]