ಮಳೆಯಲಿ ಜೊತೆಯಲಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಮಳೆಯಲಿ ಜೊತೆಯಲಿ ಇಂದ ಪುನರ್ನಿರ್ದೇಶಿತ)

ಮಳೆಯಲಿ ಜೊತೆಯಲಿ -೨೦೦೯ ರ ಕನ್ನಡ ಚಲನಚಿತ್ರವಾಗಿದ್ದು ಇದರಲ್ಲಿ ಗಣೇಶ್, ಅಂಜನಾ ಸುಖಾನಿ ಮತ್ತು ಯುವಿಕಾ ಚೌಧರಿ ನಟಿಸಿದ್ದಾರೆ . ಇದನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ, ಅವರೇ ಚಿತ್ರಕಥೆಯನ್ನು ಸಹ ಬರೆದಿದ್ದಾರೆ. ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ತಮ್ಮ ನಿರ್ಮಾಣ ಸಂಸ್ಥೆಯಾದ ಗೋಲ್ಡನ್ ಮೂವೀಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. [] []

ಕಥಾವಸ್ತು

ಬದಲಾಯಿಸಿ

ಶ್ರೀಮಂತ ಆದರೆ ಮೂಢನಂಬಿಕೆಯ ರಿಯಲ್ ಎಸ್ಟೇಟ್ ವ್ಯಾಪಾರಿಯ ಏಕೈಕ ಮಗ ಪ್ರೀತಂ. ವೆಂಕಟೇಶ್ ಅವನ ಆತ್ಮೀಯ ಗೆಳೆಯ. ಪ್ರೀತಂ ತನ್ನ ಪಿಯುಸಿಯಲ್ಲಿ ಉತ್ತೀರ್ಣನಾದಾಗ, ಅವನ ತಂದೆಯ ಜ್ಯೋತಿಷಿಗಳು ಮನೆಯ ಶಾಂತಿಗಾಗಿ, ಪ್ರೀತಮ್‌ಗೆ ಹೆಂಡತಿಯನ್ನು ಹುಡುಕಬೇಕು ಎಂದು ಅವನ ತಂದೆಗೆ ತಿಳಿಸುತ್ತಾರೆ. ಸಮಸ್ಯೆಯನ್ನು ತಪ್ಪಿಸಲು, ಪ್ರೀತಂ ಮತ್ತು ವೆಂಕಟೇಶ್ ಅವರು ಜ್ಯೋತಿಷಿಗೆ ಲಂಚ ಕೊಟ್ಟು ಸಕಲೇಶಪುರದಲ್ಲಿರುವ ಒಬ್ಬ ಅರ್ಹ ಹುಡುಗಿಯ ಕುರಿತು ಪ್ರೀತಮ್ ನ ತಂದೆಗೆ ಹೇಳಲು ಕೇಳಿಕೊಳ್ಳುತ್ತಾರೆ . ಆಕೆಯ ಸಂಗತಿಯಾದರೋ ಪೂರ್ತಿ ಇವರುಗಳ ಕಲ್ಪನೆಯೇ.

ಹೀಗಾಗಿ ಪ್ರೀತಮ್ ಸಕಲೇಶಪುರಕ್ಕೆ ಹೋಗಲು ಸಾಧ್ಯವಾಗುತ್ತದೆ, ಅಲ್ಲಿ ಅವನು ತಮ್ಮಯ್ಯ ಎಂಬ ಸೇನಾ ಕರ್ನಲ್ ಜೊತೆ ಇರುತ್ತಾನೆ. ಇಲ್ಲಿಯೇ ಅವನಿಗೆ ಹತ್ತಿರದ ಜಿಲ್ಲೆಯಲ್ಲಿ ವಾಸಿಸುವ ಅಂಜಲಿಯೊಂದಿಗೆ ಮತ್ತು ಸ್ವತಂತ್ರ ಮನೋಭಾವನೆಯ ಹುಡುಗಿಯೂ ಪುರುಷ ದ್ವೇಷಿಯೂ ಆಗಿರುವ ಸಂಧ್ಯಾ ಜತೆಗೆ ಪರಿಚಯ ಆಗುತ್ತದೆ. ಪ್ರೀತಮ್ ಗೆ ಲಕ್ಕಿ ಎಂಬ ಪುಟ್ಟ ಹುಡುಗಿ ಒಂದು ಸಲ ತಪ್ಪಾಗಿ ಅವನ ಸಂಖ್ಯೆಯನ್ನು ಡಯಲ್ ಮಾಡಿ ಅವನ "ಮೊಬೈಲ್ ಗೆಳತಿ" ಆದಳು. ಅವಳಿಂದ ಕೂಡ ಅನೇಕ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತಾನೆ, ಸಂಧ್ಯಾಗೆ ಪ್ರೀತಂ ಮರುಳಾಗುತ್ತಾನೆ.

ನಿಧಾನವಾಗಿ ಪ್ರೀತಮ್ ಅಂಜಲಿಯೊಂದಿಗೆ ಸ್ನೇಹಿತನಾಗುತ್ತಾನೆ. ಅಂಜಲಿಯು ತನ್ನ ಬಾಲ್ಯದ ಪ್ರೇಮಿಯಿಂದ ತೊರೆಯಲ್ಪಟ್ಟ ಮತ್ತು ಖಿನ್ನತೆಯ ಸ್ಥಿತಿಯಲ್ಲಿರುವ ಕಥೆಯನ್ನು ಕಲ್ಪಿಸಿ ಸಂಧ್ಯಾಳಿಗೆ ಹೇಳುತ್ತಾನೆ. ಅಂಜಲಿಯ ದುಃಖದಿಂದ ಹೊರಬರಲು ಸಹಾಯ ಮಾಡಲು ಸಂಧ್ಯಾ ಳು ಪ್ರೀತಮ್‌ನ ಗೆಳತಿಯಾಗುತ್ತಾಳೆ. ಕ್ರಮೇಣ ಮೂವರೂ ಸ್ನೇಹಿತರಾಗುತ್ತಾರೆ.

ಪ್ರೀತಮ್ ಅಂಜಲಿಯ ಹಲವಾರು ಗುಣಗಳನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾನೆ, ಅವಳು ಎಷ್ಟು ಒಳ್ಳೆಯವಳು ಎಂದು ನಿಧಾನವಾಗಿ ಕಂಡುಕೊಳ್ಳುತ್ತಾನೆ. ಕ್ರಮೇಣ, ಪ್ರೀತಮ್‌ ಅಂಜಲಿಯನ್ನು ಪ್ರೀತಿಸುತ್ತಾನೆ ಮತ್ತು ಸಂಧ್ಯಾ ಳು ಪ್ರೀತಂನನ್ನು ಇಷ್ಟಪಡುತ್ತಾಳೆ.

ಅಂಜಲಿಗೆ ಪ್ರೀತಮ್‌ನ ಪ್ರೀತಿಯ ಬಗ್ಗೆ ತಿಳಿದಾಗ, ಅವಳು ಸಕಲೇಶಪುರವನ್ನು ತೊರೆಯುತ್ತಾಳೆ. ಪ್ರೀತಂ ಹೃದಯ ಒಡೆದು ಹೋಗುತ್ತದೆ.

ಬೆಂಗಳೂರಿಗೆ ಆಗಮಿಸಿದ ಪ್ರೀತಮ್ ಮೊದಲು ಲಕ್ಕಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ , ಅವನು ಅವಳನ್ನು ಮತ್ತೆ ನೋಡಲು ಸಾಧ್ಯವಿಲ್ಲ ಎಂದು ಕಂಡುಕೊಳ್ಳುತ್ತಾನೆ. ನಂತರ ಅವನಿಗೆ ಅಂಜಲಿಯ ವೈದ್ಯರಿಂದ ಅಂಜಲಿಯು ಕ್ಯಾನ್ಸರ್ ರೋಗಿಯಾಗಿದ್ದು ಸಾಯುತ್ತಿರುವುದು ತಿಳಿದುಬರುತ್ತದೆ.

ಇದೆಲ್ಲದರ ಹೊರತಾಗಿಯೂ, ಅವನು ಅಂಜಲಿಯನ್ನು ಭೇಟಿಯಾಗುತ್ತಾನೆ ಮತ್ತು ಪ್ರೀತಿಪಾತ್ರರೊಂದಿಗಿನ ಮೂರು ನಿಮಿಷಗಳು ಪ್ರೀತಿಪಾತ್ರರಲ್ಲದವರೊಂದಿಗಿನ ನೂರು ವರ್ಷಗಳಿಗಿಂತ ಉತ್ತಮವೆಂದು ಮನವರಿಕೆ ಮಾಡುತ್ತಾನೆ, ಮತ್ತು ಪ್ರೀತಮ್ ಮತ್ತು ಅಂಜಲಿ ಒಂದಾಗುತ್ತಾರೆ.

ಪಾತ್ರವರ್ಗ

ಬದಲಾಯಿಸಿ

ನಿರ್ಮಾಣ

ಬದಲಾಯಿಸಿ

ನಿರ್ದೇಶಕ ಪ್ರೀತಂ ಗುಬ್ಬಿಯವರು ಸಕಲೇಶಪುರ ಮತ್ತು ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ಮಾಡಿದರು; ಕೆಲವು ಹಾಡುಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.

ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರೀತಂ ಗುಬ್ಬಿ ಅವರ ಕಥೆ ಮತ್ತು ಚಿತ್ರಕಥೆ, ಕೃಷ್ಣ ಅವರ ಚಿತ್ರೀಕರಣ, ವಿ.ಹರಿಕೃಷ್ಣ ಅವರ ಸಂಗೀತ, ದೀಪು ಎಸ್.ಕುಮಾರ್ ಅವರ ಸಂಕಲನ ಮತ್ತು ಮೋಹನ್ ಅವರ ಕಲಾ ನಿರ್ದೇಶನವಿದೆ. ದೇವಶೆಟ್ಟಿ ಮಹೇಶ್ ಸಂಭಾಷಣೆ ಬರೆದರೆ, ಕವಿರಾಜ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಸಿಹಿ ಕಹಿ ಚಂದ್ರು, ಸಿಹಿ ಕಹಿ ಗೀತಾ, ರಂಗಾಯಣ ರಘು, ಶರಣ್, ದತ್ತಣ್ಣ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. [] []

ಬಾಕ್ಸ್ ಆಫೀಸ್

ಬದಲಾಯಿಸಿ

ಚಿತ್ರ ಯಶಸ್ವಿಯಾಗಿ ೧೦೦ ದಿನ ಪೂರೈಸಿದೆ. 

ಪ್ರಶಸ್ತಿಗಳು

ಬದಲಾಯಿಸಿ

ಈ ಚಲನಚಿತ್ರವು ೫೭ ನೇ ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತು: []

  • ಅತ್ಯುತ್ತಮ ಚಿತ್ರ: ಮಳೆಯಲಿ ಜೊತೆಯಲಿ
  • ಅತ್ಯುತ್ತಮ ನಟ: ಗಣೇಶ್

ಚಿತ್ರಸಂಗೀತ

ಬದಲಾಯಿಸಿ

ಚಿತ್ರದ ಧ್ವನಿಮುದ್ರಿಕೆಯ ಬಿಡುಗಡೆಯನ್ನು ೧೪ ನವೆಂಬರ್ ೨೦೦೯ ರಂದು ಉದಯ ಟಿವಿಯಲ್ಲಿ ನೇರಪ್ರಸಾರ ಮಾಡಲಾಯಿತು. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಸಂ.ಹಾಡುಹಾಡುಗಾರರುಸಮಯ
1."ಹಾಳಾದ ಹಾಳಾದ ಹಾರ್ಟಲ್ಲಿ"ಗಣೇಶ್04:28
2."ನೀ ಸನಿಹಕೆ ಬಂದರೆ"ಸೋನು ನಿಗಮ್04:25
3."ಶುರುವಾಗಿದೆ"ಶಾನ್, ಶ್ರೇಯಾ ಘೋಶಾಲ್04:23
4."ಮಳೆಯಲಿ ಜೊತೆಯಲಿ (ಹೆಣ್ಣು)"ವಾಣಿ ಹರಿಕೃಷ್ಣ05:14
5."ಏನು ಹೇಳಬೇಕು"ಸೋನು ನಿಗಮ್, ಶ್ರೇಯಾ ಘೋಶಾಲ್05:02
6."ಮಳೆಯಲಿ ಜೊತೆಯಲಿ (ಗಂಡು)"ಸೋನು ನಿಗಮ್05:13
7."ಯಾರೇ ನಿನ್ನ ಮಮ್ಮಿ ಡ್ಯಾಡಿ"ಟಿಪ್ಪು, ಪ್ರಿಯಾ ಹಿಮೇಶ್04:14

ಚಲನಚಿತ್ರವು ಡಿವಿಡಿಯಲ್ಲಿ ೫.೧ ಚಾನೆಲ್ ಸರೌಂಡ್ ಸೌಂಡ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಮತ್ತು ವಿಸಿಡಿಯಲ್ಲಿ ಬಿಡುಗಡೆಯಾಯಿತು .

ಉಲ್ಲೇಖಗಳು

ಬದಲಾಯಿಸಿ
  1. "Maleyali Jotheyali shoots in Goa beach". One India. 28 Oct 2009. Archived from the original on 8 July 2012.
  2. ""Maleyali Jotheyali releasing on December 11"". Oneindia. 5 Dec 2009. Archived from the original on 13 ಜುಲೈ 2012. Retrieved 13 ನವೆಂಬರ್ 2021.{{cite web}}: CS1 maint: bot: original URL status unknown (link)
  3. "Maleyali Jotheyali to shoot songs in Bangalore". OneIndia. 29 April 2009. Archived from the original on 22 July 2011.
  4. "Official Movie Site". 15 January 2010. Archived from the original on 15 January 2010.
  5. "Ganesh, Radhika Pandit bag Filmfare Awards". One India. 10 July 2012. Archived from the original on 10 July 2012.