'ಸಿಹಿಕಹಿ ಗೀತಾ, ಮತ್ತು ಸಿಹಿಕಹಿ ಚಂದ್ರು, ದಂಪತಿಗಳು [೧] ಸುಮಾರು ೬ ವರ್ಷಗಳಿಂದ ಸತತವಾಗಿ ಹಾಸ್ಯ ಧಾರಾವಾಹಿಗಳನ್ನು ಕಿರುತೆರೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. 'ಪಾಡುರಂಗ ವಿಠಲ'ದ ಟಿ.ಆರ್.ಪಿ.ಚೆನ್ನಾಗಿದೆ. ಇನ್ನೂ ಜನರಿಂದ ಬೇಡಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದಾಗಿ ಗೀತಾರವರ ಕೆಲಸ ಸ್ವಲ್ಪ ಕಡಿಮೆಯಾಗಿದೆ. ಆದರೆ ಸೀರಿಯಲ್ಸ್ ನಿರ್ಮಾಣಕಾರ್ಯದಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ. ಒಟ್ಟು ೮೦-೮೫ ಧಾರಾವಾಹಿಗಳಲ್ಲಿ ಅಭಿನಯಿಸಿದ ಶ್ರೇಯಸ್ಸಿದೆ. 'ಫೈನಲ್ ಕಟ್' ಮುಖ್ಯಸ್ಥರಾಗಿದ್ದಾರೆ.

ಚಿತ್ರ:22-navodaya-ugadi-sihi-kahi-chandru.jpg
'ಸಿಹಿಕಹಿ ಗೀತಾ ಮತ್ತು ಸಿಹಿಕಹಿ ಚಂದೃ'

ಜೀವನ ಬದಲಾಯಿಸಿ

ಗೀತಾರವರ, ಕಾಲೇಜ್ ವಿದ್ಯಾಭ್ಯಾಸ ಬೆಂಗಳೂರುನಲ್ಲಿ ನಡೆಯಿತು. ಮಾಗಡಿ ಸಮೀಪದ 'ಚಕ್ರಭಾವಿ'ಯಲ್ಲಿ ಜನಿಸಿದರು. ತಂದೆ, 'ಮಲ್ಲಿಕಾರ್ಜುನ ಶರ್ಮ', ತಾಯಿ, 'ವಿಜಯಮ್ಮ'. ಗೀತಾರವರ ಅಜ್ಜ ಆಯುರ್ವೇದ ಪಂಡಿತರಾಗಿದ್ದರು.

ಸಿಹಿ-ಕಹಿ, ಹೆಸರಿನ ಜೊತೆ ಸೇರಿದ ಬಗ್ಗೆ ಬದಲಾಯಿಸಿ

೧೯೮೬-೮೭ ರಲ್ಲಿ 'ಸಿಹಿಕಹಿ'ಎಂಬ ಟೆಲಿವಿಶನ್ ಧಾರಾವಾಹಿ ಮೊದಲಬಾರಿಗೆ ಆರಂಭವಾಯಿತು. ಗೀತಾ ಮತ್ತು ಅವರ ಪತಿ ಚಂದೃ ಒಟ್ಟಾಗಿ ಅಭಿನಯಿಸಿದ್ದರು. ಈ ಧಾರಾವಾಹಿ ವಾರಕ್ಕೊಮ್ಮೆಯಂತೆ ಸುಮಾರು ೨೦೦ ಕಂತುಗಳಲ್ಲಿ ಕಿರುತೆರೆ ಕಂಡಿತು. ಇದು ಹಿಂದಿ ಸೀರಿಯಲ್ 'ಹಮ್ಲೋಗ್' ತರಹ ಜನರಿಗೆ ತೋರಿತು. ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಥಾವಸ್ತುವನ್ನೊಳಗೊಂಡ ಕಥೆ ಜನರಿಗೆ ತುಂಬಾ ಹಿಡಿಸಿತು. ಕೊನೆಗೆ ಸಿಹಿ-ಹಹಿ ಸತಿ-ಪತಿಯರ ಹೆಸರಿನ ಜೊತೆ ಉಳಿಯಿತು. ದೂರದರ್ಶನ ಕೇಂದ್ರದ ಮೂಲಕ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಪ್ರಸಾರವಾದ ಮೊಟ್ಟಮೊದಲ ಧಾರಾವಾಹಿ ಅದಾಗಿತ್ತು.

ಹಾಸ್ಯ ಎಲ್ಲವರ್ಗದವರಿಗೂ ಮುದಕೊಡುತ್ತದೆ ಬದಲಾಯಿಸಿ

ಮಲಗುವ ಮೊದಲು ಮನಸ್ಸನ್ನು ಹಗುರಮಾದಿಕೊಂಡು ನಗುನಗುತ್ತಾ ವಿರಮಿಸುವ ಆಶೆ ಎಲ್ಲರಿಗೂ ಪ್ರಿಯ. [೨]ಕೊಲೆ ಸುಲಿಗೆ ಮೊದಲಾದ 'ಕ್ರೈಮ್ ಧಾರಾವಾಹಿ'ಗಳು ಮನಸ್ಸಿನ ಧೃತಿಗೆಡಿಸುತ್ತವೆ ಇನ್ನುವ ವಾದವಿದೆ.

ಪತಿ ಅಡುಗೆಯಲ್ಲೂ ಪ್ರಸಿದ್ಧರು ಬದಲಾಯಿಸಿ

ಹೋದೆಡೆಯಲ್ಲೆಲ್ಲಾ 'ಚಂದ್ರು' ಏನಾದರೊಂದು ಹೊಸರುಚಿಯನ್ನು ಕಲಿತು ಬರುತ್ತಾರೆ. ಅವನ್ನು ಕಿರುತೆರೆಯಮೇಲೆ ಪ್ರದರ್ಶಿಸಲು ಅವರಿಗೆ ಅತಿ ಆಸೆ. ಮನೆಯಲ್ಲೂ ಬಿಡುವಾದಾಗ ಅಡುಗೆಯನ್ನು ಮಾಡುವ ಚಟವನ್ನು ಇಟ್ಟುಕೊಂಡಿದ್ದಾರೆ.

ಚಂದೃ ಈಗ ಸ್ವಲ್ಪ ತೆಳ್ಳಗಾಗಿದ್ದಾರೆ ಬದಲಾಯಿಸಿ

'ರಿಯಾಲಿಟಿ ಶೋ'ಗಳಲ್ಲಿ ಡ್ಯಾನ್ಸ್ ಮಾಡಲು ಬೇಡಿಕೆಬಂದಾಗ ಯಶಸ್ವಿಯಾಗಿ ಅವರು ಮಾಡಿತೋರಿಸಿದ್ದಾರೆ. ಅದಕ್ಕಾಗಿ ತಮ್ಮತೂಕವನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯ ಬಂತು.

ಉಲ್ಲೇಖಗಳು ಬದಲಾಯಿಸಿ

  1. ಸಿಹಿ-ಕಹಿಯಲ್ಲಿ ಸಮಭಾಗಿಗಳು 'ಚಂದ್ರು ಮತ್ತು ಗೀತಾ'
  2. ನಾವು ತರಲೆ ಆಗಿದ್ರೆ ಹಾಸ್ಯ ಹುಟ್ಟುತ್ತೆ