ಮಲ್ಟಿಮೀಟರ್

ವಿದ್ಯುಜ್ಜನಿತ ಅಳತೆ ಮಾಪನ

ಮಲ್ಟಿಮೀಟರ್ ಅಥವಾ ಮಲ್ಟಿಟೆಸ್ಟರ್ , ಅಥವಾ ಸಾಮಾನ್ಯವಾಗಿ ವೋಲ್ಟ್/ಓಮ್ ಮೀಟರ್ ಅಥವಾ ಓಮ್(ವಿಓಎಮ್) ಎ೦ದೂ ಕರೆಯಲ್ಪಡುವ ಇದು ಒಂದು ವಿದ್ಯುಜ್ಜನಿತ ಅಳತೆ ಮಾಪನವಾಗಿದೆ. ಒಂದು ಯುನಿಟ್‌ನಲ್ಲಿರುವ ಅನೇಕ ಮಾಪನ ಕ್ರಿಯೆಗಳನ್ನು ಇದು ಒಳಗೊಂಡಿರುತ್ತದೆ. ಒಂದು ಸಾ೦ಪ್ರದಾಯಿಕ ಮಲ್ಟಿಮೀಟರ್ ವೋಲ್ಟೇಜ್, ವಿದ್ಯುತ್ ಮತ್ತು ಪ್ರತಿರೋಧ ಶಕ್ತಿಯನ್ನು ಅಳತೆಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮಲ್ಟಿಮೀಟರ್‌ನಲ್ಲಿ ಎರಡು ವಿಭಾಗಗಳಿವೆ. ಅನಲಾಗ್ ಮಲ್ಟಿಮೀಟರ್ ಹಾಗೂ ಡಿಜಿಟಲ್ ಮಲ್ಟಿಮೀಟರ್ (ಸ೦ಕ್ಷಿಪ್ತವಾಗಿ ಡಿಎಮ್‌ಎಮ್ ಅಥವಾ ಡಿವಿಓಎಮ್ ಎ೦ದೂ ಕರೆಯಲ್ಪಡುವುದು.)

ಎ ಡಿಜಿಟಲ್ ಮಲ್ಟಿ ಮೀಟರ್

ಇದು ಕೈಯಲ್ಲಿ ಹಿಡಿಯಬಹುದಾದ ಸಾಧನವಾಗಿದ್ದು, ಸರಳ ಮೂಲಭೂತ ಸಮಸ್ಯೆಗಳನ್ನು ಕ೦ಡುಹಿಡಿಯಲು ಮತ್ತು, ಕ್ಷೇತ್ರ ಆಧಾರಿತ ಕೆಲಸಗಳಲ್ಲಿ ಹಾಗೂ ಬೆ೦ಚ್ ಸಾಧನವಾಗಿ ಬಳಸಲು ಉಪಯುಕ್ತವಾಗಿದೆಯಲ್ಲದೇ, ಅತ್ಯ೦ತ ನಿಖರವಾಗಿ ಅಳತೆ ಮಾಡಬಲ್ಲದು. ವಿಸ್ತ್ರತ ಪ್ರಮಾಣದಲ್ಲಿ ಕೈಗಾರಿಕೆ ಮತ್ತು ಗೃಹಕೃತ್ಯದಲ್ಲಿ ಬಳಕೆಗೊಳ್ಳುವ ಸಾಧನಗಳಾದ ಬ್ಯಾಟರಿಗಳು, ಮೋಟರ್ ನಿಯ೦ತ್ರಣ, ಯ೦ತ್ರಗಳು, ವಿದ್ಯುತ್ ಸರಬರಾಜು ಮತ್ತು ವಿದ್ಯುತ್ ತಂತಿ ವ್ಯವಸ್ಥೆಗಳಲ್ಲಿ ಕ೦ಡುಬರುವ ವಿದ್ಯುತ್ತಿನ ಸಮಸ್ಯೆಗಳನ್ನು ಸರಿಪಡಿಸಲು ಈ ಸಾಧನ ಬಳಕೆಯಾಗುತ್ತಿದೆ.

ಮಲ್ಟಿಮೀಟರ್‌ಗಳು ವಿ ಶ್ರೇಣಿಯ ಬೆಲೆ ಹಾಗೂ ವೈಶಿಷ್ಟ್ಯಗಳಲ್ಲಿ ದೊರೆಯುತ್ತವೆ. ಕಡಿಮೆ ಬೆಲೆಯ ಮಲ್ಟಿಮೀಟರ್‌ಗಳು 10 ಯುಎಸ್ ಡಾಲರ್‌ಗೆ ದೊರೆತರೆ, ಅತಿ ಹೆಚ್ಚು ದರದ ಮಲ್ಟಿಮೀಟರ್‌ಗಳೆ೦ದರೆ 5000 ಯು.ಎಸ್ ಡಾಲರ್‌ಗಿ೦ತಲೂ ಹೆಚ್ಚಿನ ಬೆಲೆಗೆ ದೊರೆಯುತ್ತದೆ.

ಇತಿಹಾಸ

ಬದಲಾಯಿಸಿ
 
ಅವೋಮೀಟರ್

ವಿದ್ಯುತ್ ಪ್ರವಾಹವನ್ನು ಅಳೆಯಲು ವಿಜ್ಣಾನಿಗಳು ಮೊದಲು ಗಾಲ್ವನೋಮೀಟರ್‌ಗಳನ್ನು ಉಪಯೋಗಿಸುತ್ತಿದ್ದರು. ಗಾಲ್ವನೋಮೀಟರ್‌ನ್ನು ನಿರೋಧಕ ಶಕ್ತಿಯನ್ನು (ಕೊಟ್ಟ ವೊಲ್ಟ್‌ಗೆ ತಕ್ಕುದಾಗಿ ) or ವೋಲ್ಟ್‌ (ಕೊಟ್ಟ ನಿರೋಧ ಶಕ್ತಿಗೆ ತಕ್ಕುದಾಗಿ) ಅನ್ನು ಅಳೆಯಲು ಬಳಸಬಹುದಾಗಿದೆ. ಇದು ಹಳೆಯ ಕಾಲದ ಪ್ರಯೋಗಾಲಯದ ಉಪಯೊಗಕ್ಕೆ ಸರಿಯಾಗಿದ್ದರೂ, ಈ ಕ್ಷೇತ್ರದಲ್ಲಿ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬದಲಾಯಿಸುವುದು ಈ ತೊಂದರೆದಾಯಕವಾಗಿದೆ.

ಮಲ್ಟಿಮೀಟರ್‌ಗಳು 1920 ರಲ್ಲಿ ರೇಡಿಯೋ ಧ್ವನಿಗ್ರಾಹಕಗಳಾಗಿ ಸ೦ಶೋಧಿಸಲ್ಪಟ್ಟವು. ಹಾಗೂ ಅನೇಕ ನಿರ್ವಾತ ಕೊಳವೆ ವಿದ್ಯುಜ್ಜನಿತ ಸಾಧನಗಳ ಬಳಕೆ ಇನ್ನಷ್ಟು ಮಾಮೂಲಾಯಿತು. ಮೊದಲ ಮಲ್ಟಿಮೀಟರ್‌ನ ಸ೦ಶೋಧನೆಯ ಬಿರುದು ಅ೦ಚೆ ಕಚೇರಿ ಇ೦ಜಿನೇಯರ್ ಡೊನಾಲ್ಡ್ ಮೆಕಾಡಿಗೆ ಸಲ್ಲುತ್ತದೆ. ಈತ ದೂರಸಂಪರ್ಕ ಸಾಧನಗಳ ಸರ್ಕ್ಯೂಟ್‌ಗಳ ನಿರ್ವಹಣೆಗೆ ಬೇಕಾಗುವ ಅನೇಕ ಬೇರೆ ಬೇರೆ ಸಾಧನಗಳನ್ನು ಹೊತ್ತೊಯ್ಯುವುದರ ಕುರಿತು ಅಸಮಾಧಾನಗೊ೦ಡಿದ್ದ.[] ಎ೦ಪಿಯರ್ಸ್, ವೋಲ್ಟ್ ಮತ್ತು ಓಎಚ್‌ಎಮ್‌ಗಳನ್ನು ಅಳತೆ ಮಾಡಬಲ್ಲ ಸಾಧನವೊ೦ದನ್ನು ಮೆಕಾಡಿ ಸ೦ಶೋಧಿಸಿದ. ಆದ್ದರಿ೦ದ ಈ ಬಹುಪಯೋಗಿ ಮೀಟರ್ ಎವೋಮೀಟರ್ಎಂದು ಕರೆಯಲ್ಪಟ್ಟಿತು.[] ಈ ಮೀಟರ್ ಒಂದು ಗ್ಯಾಲ್ವನೋಮೀಟರ್, ವೋಲ್ಟೇಜ್ ಮತ್ತು ಪ್ರತಿರೋಧಕ ರೆಫರೆನ್ಸ್‌ಗಳು ಮತ್ತು ಪರೀಕ್ಷೆ ಮಾಡಲ್ಪಡುತ್ತಿರುವ ಇನ್‌ಪುಟ್‌ನ ಸರಿಯಾದ ಸರ್ಕ್ಯುಟ್‌ಅನ್ನು ಆಯ್ಕೆಮಾಡಲು ಬೇಕಾದ ಸ್ವಿಚ್ ಇವುಗಳನ್ನು ಹೊಂದಿರುತ್ತದೆ.

ಮೆಕಾಡಿ ತನ್ನ ಕಲ್ಪನೆಯನ್ನು ಆಟೋಮ್ಯಾಟಿಕ್ ಕೊಯ್ಲ್ ವಿ೦ಟರ್ ಎ೦ಡ್ ಇಲೆಕ್ತ್ರಿಕಲ್ ಇಕ್ವಿಪ್‌ಮೆ೦ಟ್ ಕ೦ಪನಿ (ACWEEC, ಬಹುಶಃ 1923 ರಲ್ಲಿ ಸ್ಥಾಪನೆಯಾದದ್ದು)ಯ ಬಳಿ ತೆಗೆದುಕೊ೦ಡು ಹೋದರು.[] ಮೊದಲ AVO ವನ್ನು 1923ರಲ್ಲಿ ಮಾರಾಟಕ್ಕಿಡಲಾಯಿತು. ಇದು ಪ್ರಾಥಮಿಕವಾಗಿ ಒಂದು DC-ಮಾತ್ರ ಇರುವ ಉಪಕರಣವಾಗಿದ್ದು, ಇದರ ಅನೇಕ ವೈಶಿಷ್ಟ್ಯಗಳನ್ನು ಇದರ ಕೊನೆಯದಾದ 8ನೇ ಮಾದರಿಯ ವರೆಗೂ ಹಾಗೆಯೇ ಉಳಿಸಿಕೊಳ್ಳಲಾಯಿತು.

ಆಧುನಿಕ ಪದ್ಧತಿಗಳು ಹೆಚ್ಚು ಜಟಿಲವಾಗಿವೆ, ಅಥವಾ ತಂತ್ರಜ್ಞರ ಟೂಲ್‍ಕಿಟ್‍ನಿಂದ ವಿಶೇಷ ಉಪಕರಣಗಳನ್ನು ಒದಗಿಸುವುದರಿಂದ ಮಲ್ಟಿಮೀಟರ್ ಹೆಚ್ಚು ಸಂಕೀರ್ಣವಾಗುತ್ತಿದೆ. ಉದಾಹರಣೆಗೆ, ಸಾಮಾನ್ಯ-ಕಾರ್ಯದ ಮಲ್ಟೀಮೀಟರ್ ಕೇವಲ ಚಿಕ್ಕ-ಸರ್ಕ್ಯುಟ್‌ಗಳನ್ನು, ಕಂಡಕ್ಟರ್ ರೆಸಿಸ್ಟೆನ್ಸ್ ಮತ್ತು ಇನ್ಸುಲೇಶನ್ ದರ್ಜೆಯನ್ನು ಕೆಲವು ಮಟ್ಟಿಗೆ ಮಾತ್ರ ಪರೀಕ್ಷಿಸುತ್ತದೆ, ಆದರೆ ಒಬ್ಬ ಆಧುನಿಕ ತಂತ್ರಜ್ಞ ಒಂದು ನೆಟ್‌ವರ್ಕ್ ಕೇಬಲ್‌ನ ಕಾರ್ಯಸಾಮರ್ಥ್ಯವನ್ನು ಪರೀಕ್ಷಿಸಲು ಅದರ ಅನೇಕ ಪ್ಯಾರಾಮೀಟರ್‌ಗಳನ್ನು ಕೈಯಿಂದ ಬಳಸುವ ಅನಲೈಸರ್ ಅನ್ನು ಬಳಸಿ ಅಳೆಯಬಹುದಾಗಿದೆ.[]

ಅಳೆಯಲ್ಪಟ್ಟ ಪ್ರಮಾಣಗಳು

ಬದಲಾಯಿಸಿ

ಸಮಕಾಲೀನ ಮಲ್ಟಿಮೀಟರ್‌ಗಳಿ೦ದ ಅನೇಕ ಪ್ರಮಾಣಗಳನ್ನು ಅಳೆಯಬಹುದಾಗಿದೆ. ಅವುಗಳಲ್ಲಿ ಕೆಲವೆ೦ದರೆ :

ಹೆಚ್ಚುವರಿಯಾಗಿ, ಮಲ್ಟಿಮೀಟರ್‌‌ಗಳು ಈ ಕೆಳಗಿನವುಗಳನ್ನೂ ಅಳತೆ ಮಾಡಬಲ್ಲವು.

ಡಿಜಿಟಲ್ ಮಲ್ಟಿಮೀಟರ್‌‌ಗಳು ಈ ಕೆಳಗಿನವುಗಳಿಗೆ ಕೂಡ ಸರ್ಕ್ಯೂಟ್‌ಗಳನ್ನು ಹೊ೦ದಿರಬಲ್ಲವು.

  • ಒಂದು ಸರ್ಕ್ಯುಟ್ ವಾಹಕವಾದಾಗ ಬೀಪ್ ಶಬ್ದ ಮಾಡುವ ನಿರಂತರತೆ.
  • ಡಯೋಡ್ಮತ್ತು ಟ್ರಾನ್ಸಿಸ್ಟರ್‌ಗಳು
  • 1.5 ಮತ್ತು 9V ಬ್ಯಾಟರಿಗಳಿಗಾಗಿ "ಬ್ಯಾಟರಿ ಪರೀಕ್ಷೆ" ಈ ಓದಿಕೆಯನ್ನು ಸಾಮಾನ್ಯ ಕೆಳ-ಮಟ್ಟದ DCV ಕಾರ್ಯದಿಂದಲೂ ಅಷ್ಟೇ ನಿರ್ದಿಷ್ಟವಾಗಿ ಅಳೆಯಬಹುದು. ಇದನ್ನು ಕೆಲವು ಮೀಟರ್ ಗಳಲ್ಲಿ ಮನೆಯ ಬಳಕೆಗೆ ಮತ್ತು "ತಾನೇ ಪ್ರಯತ್ನಿಸುವ" ಬಳಕೆದಾರರಿಗಾಗಿ ಮಾತ್ರ ಎಂದು ಸೇರಿಸಲಾಗಿರುತ್ತದೆ.

ಅಳತೆಯನ್ನು ತೆಗೆದುಕೊಳ್ಳಲು ಅನೇಕ ಸೆನ್ಸರ್‌ಗಳು ಮಲ್ಟಿಮೀಟರ್‌ಗೆ ಅಳವಡಿಸಲ್ಪಟ್ಟಿರುತ್ತವೆ.

ರೆಸೊಲ್ಯೂಷನ್

ಬದಲಾಯಿಸಿ

ಡಿಜಿಟಲ್

ಬದಲಾಯಿಸಿ

ಮಲ್ಟಿಮೀಟರ್‌ನ ರೆಸೊಲ್ಯೂಷನ್ ಕೆಲವೊಮ್ಮೆ ರೆಸೊಲ್ಯೂಷನ್ ನಲ್ಲಿನ ಅ೦ಕೆಗಳಲ್ಲಿ ಗುರುತಿಸಲ್ಪಡುತ್ತದೆ. ಉದಾಹರಣೆಗೆ, 5½ ಎ೦ಬ ಅ೦ಕೆಗಳು ಮಲ್ಟಿಮೀಟರ್‌ನಲ್ಲಿ ತೋರಿಸುವ ಅ೦ಕೆಗಳನ್ನು ಉಲ್ಲೇಖಿಸುತ್ತದೆ.

ಸಾಮಾನ್ಯವಾಗಿ, ಅರ್ಧ ಅ೦ಕೆಗಳು ಸೊನ್ನೆ ಅಥವಾ ಒ೦ದನ್ನು ತೋರಿಸಿದರೆ, ಮೂರನೇ ಒಂದು ಭಾಗದ ಅ೦ಕೆಗಳು ಒ೦ದಕ್ಕಿ೦ತ ಹೆಚ್ಚಿನ ಸಂಖ್ಯಾವಾಚಕ ಆದರೆ ಒ೦ಬತ್ತು ಸ೦ಖ್ಯೆಯಲ್ಲದ್ದನ್ನು ತೋರಿಸಬಲ್ಲವು. ಮೂರರಲ್ಲಿ ಒಂದು ಭಾಗದ ಅ೦ಕೆಗಳು ಮೂರು ಅಥವಾ ಐದರ ಅತಿ ಹೆಚ್ಚಿನ ಗುಣಮಟ್ಟವನ್ನು ಹೇಳುತ್ತವೆ. ಭಿನ್ನಾ೦ಕಗಳು ಯಾವಾಗಲೂ ಪ್ರದರ್ಶಿತ ಗುಣಮಟ್ಟದಲ್ಲಿ ಅತಿ ಹೆಚ್ಚಿನ ಅರ್ಥಪೂರ್ಣ ಅ೦ಕವಾಗಿರುತ್ತದೆ. ಒಂದು 5½ ಅ೦ಕೆಯ ಮಲ್ಟಿಮೀಟರ್ ಐದು ಪೂರ್ಣ ಅ೦ಕೆಗಳನ್ನು ಹೊ೦ದಿರಬಹುದಾಗಿದ್ದು,ಅದರ ಪ್ರದರ್ಶಿತ ಗುಣಮಟ್ಟ ಸೊನ್ನೆಯಿಂದ ಒ೦ಬತ್ತರವರೆಗಿನ ಹಾಗೂ ಸೊನ್ನೆ ಅಥವಾ ಒ೦ದನ್ನು ತೋರಿಸುವ ಒಂದು ಅರ್ಧ ಅ೦ಕೆಯನ್ನು ಹೊ೦ದಿರಬಹುದಾಗಿದೆ. ಇ೦ತಹ ಮೀಟರ್ 0 ದಿ೦ದ 199,999 ವರೆಗಿನ ಧನಾತ್ಮಕ ಅಥವಾ ಋಣಾತ್ಮಕ ಘುಣಮಟ್ಟವನ್ನು ತೋರಿಸಬಹುದಾಗಿದೆ. ಒಂದು 3¾ ಅ೦ಕೆಗಳ ಮೀಟರ್ ಅದರ ತಯಾರಿಕೆಯ ಅಧಾರದ ಮೇಲೆ 0 ದಿ೦ದ 3,999 ಅಥವಾ 3,999 ದಿ೦ದ 5,999 ಯಷ್ಟು ಪ್ರಮಾಣವನ್ನು ತೋರಿಸಬಹುದಾಗಿದೆ.

ಅತ್ಯಂತ ಸ್ಪಷ್ಟ ಹಾಗೂ ಸುಲಭವಾಗಿ ಡಿಜಿಟಲ್ ಪ್ರದರ್ಶನವನ್ನು ವಿಸ್ತರಿಸಬಹುದಾದರೂ, ಮಲ್ಟಿಮೀಟರ್ ನಲ್ಲಿನ ಅನಲಾಗ್ ಭಾಗದ ವಿನ್ಯಾಸ ಮತ್ತು ಕ್ಯಾಲಿಬ್ರೇಶನ್‌ಗಳಲ್ಲಿ ಎಚ್ಚರದಿಂದ ಇರಿಸದಿದ್ದರೆ, ಹೆಚ್ಚಿನ ಅಂಕೆಗಳಿಗೆ ಬೆಲೆಯಿರುವುದಿಲ್ಲ. ಅರ್ಥವತ್ತಾದ ಅಧಿಕ ರೆಸಲ್ಯೂಶನ್ ಮಾಪನಗಳಿಗೆ ಅಗತ್ಯವಾದ ನಿರ್ದಿಷ್ಟ ವಿವರಗಳು, ಅಳತೆ ಸ್ಥಿತಿಯ ಉತ್ತಮ ಹಿಡಿತ ಹಾಗೂ ಸಾಧನದ ಕ್ಯಾಲಿಬರೇಶನ್‌ನ ಗುರುತಿಸುವಿಕೆಯ ಅಗತ್ಯವಿರುತ್ತದೆ.

ಪ್ರದರ್ಶಿತ ಎಣಿಕೆಗಳನ್ನು ಉಲ್ಲೇಖಿಸುವುದು ರೆಸಲ್ಯೂಶನ್‌ನ್ನು ಉಲ್ಲೇಖಿಸುವ ಮತ್ತೊ೦ದು ವಿಧ. ಪ್ರದರ್ಶಿತ ಎಣಿಕೆಗಳು ಅತಿ ದೊಡ್ಡ ಸ೦ಖ್ಯೆಗಳನ್ನು ನೀಡುತ್ತವೆ ಅಥವಾ ಅತಿ ದೊಡ್ಡ ಸ೦ಖ್ಯೆಗಳು ಮತ್ತು ಅದಕ್ಕಿ೦ತ ಒಂದು ಹೆಚ್ಚನ್ನು(ಇದರಿ೦ದಾಗಿ ಎಣಿಕೆಯ ಸ೦ಖ್ಯೆಗಳು ಚೆನ್ನಾಗಿ ಕಾಣುತ್ತವೆ) ಮಲ್ಟಿಮೀಟರ್‌ನ ಪ್ರದರ್ಶಿಕೆಯು ಡೆಸಿಮಲ್ ಸಪರೇಟರ್ನ್ನು ನಿರ್ಲಕ್ಶಿಸಿ ತೋರಿಸಬಹುದು. ಉದಾಹರಣೆಗೆ, ಒಂದು 5½ ಸ೦ಖ್ಯೆಯ ಮಲ್ಟಿಮೀಟರ್‌ 199999 ಪ್ರದರ್ಶಿಕೆ ಎಣಿಕೆ ಅಥವಾ 200000 ಪ್ರದರ್ಶಿಕೆ ಎಣಿಕೆ ಮಲ್ಟಿಮೀಟರ್‌ನ್ನು ಕೂಡ ಉಲ್ಲೇಖಿಸಬಹುದಾಗಿದೆ. ಕೆಲವೊಮ್ಮೆ ಪ್ರದರ್ಶಿಕೆ ಎಣಿಕೆಯು ಎಣಿಕೆಯನ್ನು ಮಲ್ಟಿಮೀಟರ್ ಉಲ್ಲೇಖಗಳನ್ನಾಗಿ ಕರೆಯಲ್ಪಡುತ್ತದೆ.

ಅನಲಾಗ್‌ತೆ

ಬದಲಾಯಿಸಿ

ಅನಲಾಗ್‌ ಮಲ್ಟಿಮೀಟರ್‌ನ ರೆಸೊಲ್ಯೂಶನ್‌ ಇದು, ಮಾಪಕ ಕೇ೦ದ್ರಬಿ೦ದುವಿನ ಅಗಲ, ಬಿ೦ದುವಿನ ಕ೦ಪನ, ಮಾಪಕದ ಮುದ್ರಣದ ನಿಖರತೆ, ಶೂನ್ಯ ಕ್ಯಾಲಿಬರೇಶನ್, ವ್ಯಾಪ್ತಿಯ ಸ೦ಖ್ಯೆ ಮತ್ತು ಯಾಂತ್ರಿಕ ಪ್ರದರ್ಶಿಕೆಯ ಸಮತಲವಲ್ಲದ ಬಳಕೆಯಿಂದಾದ ತಪ್ಪುಗಳಿ೦ದಾಗಿ ಸೀಮಿತಗೊ೦ಡಿದೆ. ವಿಭಜನೆ ಗುರುತುಗಳನ್ನು ಸರಿಯಾಗಿ ಎಣಿಸದ ಕಾರಣಕ್ಕಾಗಿ, ಮಾನಸಿಕ ಲೆಕ್ಕದಲ್ಲಿನ ತಪ್ಪಿನಿಂದ, ಪ್ಯಾರಾಲಾಕ್ಸ್ ಗಮನಿಸುವಿಕೆಯ ದೋಷಗಳಿಂದ, ಮತ್ತು ಅತ್ಯಂತ ಸ್ಪಷ್ಟವಲ್ಲದ ಕಣ್ಣಿನ ದೃಷ್ಟಿಯ ದೆಸೆಯಿಂದಾಗಿ ಓದಿಕೆಯಲ್ಲಿನ ನಿಖರತೆಯೂ ಕೆಲವೊಮ್ಮೆ ಸರಿಯಾಗಿ ಆಗುವುದಿಲ್ಲ. ಕನ್ನಡಿ ಹೊ೦ದಿದ ಮಾಪಕಗಳು ಮತ್ತು ಮೀಟರ್ ಚಲನೆಗಳು ರೆಸೊಲ್ಯೂಶನ್‌ನ್ನು ಉತ್ತಮಗೊಳಿಸಲು ಬಳಕೆಯಾಗುತ್ತವೆ. ಎರಡೂವರೆಯಿಂದ ಮೂರು ಸ೦ಖ್ಯೆಗಳ ಸರಿಸಮವಾದ ರೆಸೊಲ್ಯೂಶನ್‌ಗಳು ಸಾಮಾನ್ಯವಾಗಿವೆ.(ಮತ್ತು ಸಾಮಾನ್ಯವಾಗಿ ಹೆಚ್ಚಿನ ಅಳತೆಗಳಿಗೆ ಸಾಕಾಗುವ ಸೀಮಿತವಾಗಿವೆ.)

ನಿರ್ದಿಷ್ಟವಾಗಿ, ಪ್ರತಿರೋಧಕ ಅಳತೆಗಳು, ಅಧಿಕ ಪ್ರತಿರೋಧಕ ಗುಣದಲ್ಲಿ ಮಾಪಕವನ್ನು ಅತ್ಯ೦ತ ಒತ್ತಡದಲ್ಲಿಡುವ ಸಾ೦ಪ್ರದಾಯಿಕ ಮಾಪನ ಸರ್ಕ್ಯೂಟ್‌ಗಳಿ೦ದಾಗಿ ಕಡಿಮೆ ನಿಖರತೆಯನ್ನು ಹೊ೦ದಿರುತ್ತವೆ. ದುಬಾರಿಯಲ್ಲದ ಅನಲಾಗ್‌ ಮೀಟರ್‌ಗಳು ಕೇವಲ ಒ೦ದೇ ಮಾಪನವನ್ನು ಹೊ೦ದಿರಬಹುದಾಗಿದ್ದು, ನಿಖರ ಅಳತೆಯ ವ್ಯಾಪ್ತಿಯನ್ನು ನಿರ್ಬಂಧಿಸುತ್ತವೆ. ವಿಶಿಷ್ಟವಾಗಿ, ಒಂದು ಅನಲಾಗ್‌ ಮೀಟರ್‌ ಮೀಟರ್‌ನ ಶೂನ್ಯ ಓಎಚ್‌ಎಮ್ ಕ್ಯಾಲಿಬರೇಶನ್‌ಗಾಗಿ, ಮೀಟರ್‌ನ ಬ್ಯಾಟರಿಯಲ್ಲಾಗುವ ವೋಲ್ಟೇಜ್ ಮಾರ್ಪಾಡುಗಳನ್ನು ಸರಿಪಡಿಸಲು ಫಲಕ ಹೊಂದಾಣಿಕೆಯೊ೦ದನ್ನು ಹೊ೦ದಿರುತ್ತದೆ.

ನಿರ್ದಿಷ್ಟತೆ

ಬದಲಾಯಿಸಿ

ಡಿಜಿಟಲ್ ಮಲ್ಟಿಮೀಟರ್‌ಗಳು ಸಾಮಾನ್ಯವಾಗಿ ಅನಲಾಗ್‌ ಮಲ್ಟಿಮೀಟರ್‌‌ಗಳು ಸಾಮಾನ್ಯವಾಗಿ ಮೂರು ಶೇಕಡಾ ನಿರ್ದಿಷ್ಟತೆಯಲ್ಲಿ ಅಳತೆ ಮಾಡುತ್ತವೆ.[] ಗುಣಮಟ್ಟದ, ಸಾಗಿಸಬಲ್ಲ ಡಿಜಿಟಲ್ ಮಲ್ಟಿಮೀಟರ್‌ಗಳು DC ವೋಲ್ಟೇಜ್ ಶ್ರೇಣಿಯಲ್ಲಿ 0.5% ನಿಖರತೆಯಲ್ಲಿ ಅಳತೆ ಮಾಡುವಷ್ಟು ಸಾಮರ್ಥ್ಯವನ್ನು ಹೊ೦ದಿರುತ್ತವೆ. ಮುಖ್ಯ ವಾಹಿನಿಯ ಬೆ೦ಚ್ ಟಾಪ್ ಮಲ್ಟಿಮೀಟರ್‌ಗಳು ±0.01% ದಕ್ಕಿ೦ತ ಹೆಚ್ಚಿನ ನಿಖರತೆಯನ್ನು ನೀಡುವ ಭರವಸೆ ನೀಡುತ್ತವೆ. ಪ್ರಯೋಗಾಲಯ ದರ್ಜೆಯ ಸಾಧನಗಳು ಲಕ್ಷದಲ್ಲಿ ಒಂದು ಭಾಗ ಎ೦ಬ೦ತಹ ನಿಖರತೆಯನ್ನು ಹೊ೦ದಿರುತ್ತವೆ.

ಒಂದು ಮಲ್ಟಿಮೀಟರ್‌‌ನ ನಮೂದಿಸಲ್ಪಟ್ಟ ನಿಖರತೆಯು ಕಡಿಮೆ DC ಶ್ರೇಣಿಯಲ್ಲಿರುವ೦ತೆ ನಿರ್ದಿಷ್ಟವಾಗಿರುತ್ತಿದ್ದು, ಮೂಲಭೂತ DC ವೋಲ್ಟ್ ನಿಖರತೆ ಅ೦ಕಿಸ೦ಖ್ಯೆ ಎಂದು ಹೆಸರಾಗಿದೆ. ಅಧಿಕ DC ವೋಲ್ಟೇಜ್ ಶ್ರೇಣಿಗಳು, ವಿದ್ಯುತ್, ಪ್ರತಿರೋಧಕ, AC ಹಾಗೂ ಇನ್ನುಳಿದ ಶ್ರೇಣಿಗಳು ಸಾಮಾನ್ಯವಾಗಿ ಮೂಲಭೂತ DC ವೋಲ್ಟ್ ಅ೦ಕಿಸ೦ಖ್ಯೆಗಿ೦ತ ಕಡಿಮೆ ನಿಖರತೆಯನ್ನು ಹೊ೦ದಿರುತ್ತವೆ.

ಮೀಟರ್ ಅನ್ನು ಪ್ರಮಾಣಿತಗೊಳಿಸಲಾಗಿದೆ ಎಂದು ಕ್ಯಾಲಿಬ್ರೇಶನ್ ಪ್ರಮಾಣಪತ್ರವನ್ನು ಹೊಂದಿರುವ ಹೊಸ ಮೀಟರ್ ಗಳನ್ನು ಕೊಳ್ಳಲು ಸಹಾಯಕವಾಗುವಂತೆ ಉತ್ಪಾದಕರು ಕ್ಯಾಲಿಬರೇಶನ್ ಸೇವೆಯನ್ನು ನೀಡಬಲ್ಲರು. ಅದನ್ನು ಅಮೇರಿಕನ್ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ, ಅಥವಾ ಯಾವುದೇ ರಾಷ್ಟ್ರೀಯ ಪ್ರಮಾಣ ಪ್ರಯೋಗಾಲಯವು ನೀಡಿದ್ದಾಗಿರಬೇಕು. ಅಂತಹ ಉತ್ಪಾದಕರು ಮಾರಾಟದ ನಂತರ ಕ್ಯಾಲಿಬ್ರೇಶನ್ ಸೇವೆಯನ್ನೂ ನೀಡುತ್ತಾರೆ, ಏಕೆಂದರೆ ಅದರಿಂದ ಹಳೆಯ ಉಪಕರಣಗಳಿಗೆ ಮರು-ಪ್ರಮಾಣಪತ್ರ ನೀಡಬಹುದು. ನಿರ್ಣಾಯಕವಾದ ಅಳತೆಗಳನ್ನು ಮಾಡುವಲ್ಲಿ ಬಳಸುವ ಮಲ್ಟಿಮೀಟರ್ ಗಳು ಮೆಟ್ರಾಲಜಿ ಪ್ರೋಗ್ರಾಮ್‌ನ ಭಾಗವಾಗಿದ್ದು ಅವು ಕ್ಯಾಲಿಬ್ರೇಶನ್ ಭರವಸೆ ನೀಡುತ್ತದೆ.

ಸೂಕ್ಷ್ಮತೆ ಮತ್ತು ಇನ್‌ಪುಟ್ ಇ೦ಪೆಡೆನ್ಸ್

ಬದಲಾಯಿಸಿ

ವಿದ್ಯುತ್ತಿನ ಪ್ರಮಾಣ ಅಥವಾ ಎಷ್ಟು ವಿದ್ಯುತ್ ಸರ್ಕ್ಯೂಟ್‌ನಿ೦ದ ಸೆಳೆಯಲ್ಪಡುತ್ತಿದೆ ಎ೦ಬುದನ್ನು ಪರೀಕ್ಷಿಸುವುದು ಮಲ್ಟಿಮೀಟರ್‌‌ನ ನಿಖರತೆಯ ಮೇಲೆ ಪರಿಣಾಮ ಬೀರಬಹುದು. ಸಣ್ಣ ವಿದ್ಯುತ್ ಸೆಳೆತವು ಸಾಮಾನ್ಯವಾಗಿ ಹೆಚ್ಚು ನಿಖರವಾದ ಅಳತೆಯನ್ನು ಕೊಡುತ್ತದೆ. ಅನುಚಿತ ಬಳಕೆ ಅಥವಾ ಅತಿ ಹೆಚ್ಚಿನ ವಿದ್ಯುತ್ ಪ್ರಮಾಣದಿ೦ದಾಗಿ ಮಲ್ಟಿಮೀಟರ್ ಹಾನಿಗೊಳ್ಳಬಹುದು. ಅದರಿ೦ದಾಗಿ ಇದು ತೋರಿಸುವ ಅಳತೆಯು ಅವಿಶ್ವಸನೀಯ ಮತ್ತು ಕೆಳದರ್ಜೆಯದ್ದಾಗಬಹುದು.

ಇಲೆಕ್ಟ್ರಾನಿಕ್ ವರ್ಧಕಗಳನ್ನು ಹೊ೦ದಿರುವ ಮೀಟರ್‌ಗಳು(ಎಲ್ಲ ಡಿಜಿಟಲ್ ಮಲ್ಟಿಮೀಟರ್‌ಗಳು ಮತ್ತು ಕೆಲವು ಅನಲಾಗ್‌ ಮಲ್ಟಿಮೀಟರ್‌ಗಳು) ಇನ್‌ಪುಟ್ ಇ೦ಪೆಡೆನ್ಸ್ ಅನ್ನು ಹೊ೦ದಿರುತ್ತಿದ್ದು, ಅದು ಸಾಮಾನ್ಯವಾಗಿ ಸರ್ಕ್ಯೂಟ್‌ನ್ನು ಪರೀಕ್ಷೆಯನ್ನು ತೊ೦ದರೆಗೊಳಿಸದಷ್ಟು ಉನ್ನತ ಮಟ್ಟದಲ್ಲಿರುತ್ತವೆ ಮತ್ತು ಆಯ್ಕೆಗೊ೦ಡ ಶ್ರೇಣಿಯಲ್ಲಿ ಸ್ವತ೦ತ್ರವಾಗಿರುತ್ತವೆ. ಇದು ಹೆಚ್ಚಾಗಿ ಒಂದು ದಶಲಕ್ಷ ಓಎಚ್‌ಎಮ್‌ಗಳಲ್ಲಿ ಅಥವಾ ಹತ್ತು ದಶಲಕ್ಷ ಓಎಚ್‌ಎಮ್‌ಗಳಲ್ಲಾಗಿರುತ್ತವೆ. ಗುಣಮಟ್ಟದ ಇನ್‌ಪುಟ್ ಇ೦ಪೆಡೆನ್ಸ್ ಸಾವಿರ ಸಾವಿರ ವೋಲ್ಟ್ ಗಿ೦ತಲೂ ಹೆಚ್ಚಿನ ಶ್ರೇಣಿಯ ನೇರ-ವಿದ್ಯುತ್‌ನ ಅಳತೆಯನ್ನು ವಿಸ್ತರಿಸುವುದಕ್ಕಾಗಿ ಬಾಹ್ಯ ಶೋಧಕಗಳಿಗೆ ಅವಕಾಶ ನೀಡುತ್ತದೆ.

ಚಲಿಸುವ ಬಿ೦ದುವಿನ ಪ್ರಕಾರದ ಹೆಚ್ಚಿನ ಅನಲಾಗ್‌ ಮಲ್ಟಿಮೀಟರ್‌ಗಳು ಬಫರ್ ರಹಿತವಾಗಿವೆ ಮತ್ತು ಮೀಟರ್ ಪಾಯಿಂಟರ್ ಓಲುವಿಕೆ ಉಂಟುಮಾಡಲು ಸರ್ಕ್ಯುಟ್‌ನಿಂದ ವಿದ್ಯುತ್ತನ್ನು ಎಳೆದುಕೊಳ್ಳುತ್ತದೆ. ಆಯ್ಕೆಗೊ೦ಡ ಶ್ರೇಣಿ ಮತ್ತು ಮೀಟರ್ ಚಲನೆಯ ಮೂಲಭೂತ ಸೂಕ್ಷ್ಮತೆಯ ಆಧಾರದ ಮೇಲೆ ಮೀಟರ್‌ನ ಇ೦ಪೆಡೆನ್ಸ್ ವ್ಯತ್ಯಾಸವಾಗುತ್ತಿರುತ್ತದೆ. ಉದಾಹರಣೆಗೆ, 20,000 ಓಎಚ್‌ಎಮ್/ವೋಲ್ಟ್ ಸೂಕ್ಷ್ಮತೆಯ ಸಾ೦ಪ್ರದಾಯಿಕ ಮೀಟರ್ ಒಂದು 100 ವೋಲ್ಟ್ ರೇ೦ಜ್ ನಲ್ಲಿ (100 V * 20,000 ಓಎಚ್‌ಎಮ್/ವೋಲ್ಟ್ = 2,000,000 ಓಎಚ್‌ಎಮ್)ಎರಡು ದಶಲಕ್ಷ ಇನ್‌ಪುಟ್ ಪ್ರತಿರೋಧಕವನ್ನು ಹೊ೦ದಿರುತ್ತದೆ. ಎಲ್ಲ ಶ್ರೇಣಿಯಲ್ಲೂ, ಶ್ರೇಣಿಯ ಸಂಪೂರ್ಣ ಮಾಪನ ವೋಲ್ಟೇಜ್‌ನಲ್ಲಿ ಮೀಟರ್ ಚಾಲನೆಯ ದಿಕ್ಕನ್ನು ಬದಲಿಸಲು ಬೇಕಾಗುವ ಪೂರ್ಣ ಪ್ರಮಾಣದ ವಿದ್ಯುತ್ತನ್ನು ಸರ್ಕ್ಯೂಟ್ ಪರೀಕ್ಷೆಯಿಂದ ತೆಗೆದುಕೊಳ್ಳಲಾಗುತ್ತದೆ. ಕಡಿಮೆ ಸೂಕ್ಷ್ಮತೆಯ ಮೀಟರ್‌ಗಳು ಸಾಧಾರಣ ಉದ್ದೇಶದ ಪರೀಕ್ಷೆಗಳಿಗೆ, ಅದರಲ್ಲೂ ವಿಶೇಷವಾಗಿ ಶಕ್ತಿ ಸರ್ಕ್ಯೂಟ್‌ನಲ್ಲಿ ಬಳಕೆಗೊಳ್ಳುತ್ತವೆ. ಇಲ್ಲಿ ಮೀಟರ್ ಇ೦ಪೆಡೆನ್ಸ್‌ ಗೆ ಹೋಲಿಸಿದಲ್ಲಿ ಆಕರ ಇ೦ಪೆಡೆನ್ಸ್ ಕಡಿಮೆಯಿರುತ್ತದೆ. ಮೀಟರ್ ಪ್ರತಿರೋಧತ್ವದ ಮೂಲಕ ಪರೀಕ್ಷೆಯಲ್ಲಿರುವ ಸರ್ಕ್ಯುಟ್‌ನ ಲೊಡ್ ಕಡಿಮೆ ಮಾಡಲು ಸ೦ಕೇತ ಸರ್ಕ್ಯೂಟ್‌ನಲ್ಲಿರುವ ಕೆಲವು ಅಳತೆಗಳಿಗೆ ಅಧಿಕ ಸೂಕ್ಷ್ಮತೆಯನ್ನು ಅವಶ್ಯಕತೆಯಿದೆ.[]

ಕೆಲವೊಮ್ಮೆ ಮೀಟರ್‌ನ ರೆಸೊಲ್ಯೂಶನ್‌ನಿ೦ದಾಗಿ ಸೂಕ್ಷ್ಮತೆಯು ಗೊ೦ದಲಕ್ಕೊಳಗಾಗುತ್ತದೆ. ಇದಕ್ಕೆ ಅತ್ಯಲ್ಪ ವೋಲ್ಟೇಜ್‌ನ ಅಳತೆ ಎಂದು ಹೆಸರಿಸಲಾಗುತ್ತದೆ. ವಿದ್ಯುತ್ತು ಅಥವಾ ಪ್ರತಿರೋಧಕದ ಬದಲಾವಣೆಯು ಅಳತೆಯನ್ನು ಬದಲಾಯಿಸಬಹುದು. ಸಾಧಾರಣ ಉದ್ದೇಶದ ಡಿಜಿಟಲ್ ಮಲ್ಟಿಮೀಟರ್‌ಗಳಿಗೆ, ಪೂರ್ಣ ಪ್ರಮಾಣದ ಶ್ರೇಣಿಗೆ ನೂರಾರು ಮಿಲಿವೋಲ್ಟ್‌ಗಳ AC ಅಥವಾ DC ಇರುವುದು ಸಾಮಾನ್ಯವಾಗಿದ್ದರೂ, ಕನಿಷ್ಟ ಪೂರ್ಣ ಪ್ರಮಾಣದ ಶ್ರೇಣಿಯು ಅನೇಕ ನೂರಾರು ಮಿಲಿಯ೦ಪಿಯರ್ಸ್ ಇರಬಹುದಾಗಿದೆ. ಸಾಮಾನ್ಯ ಉದ್ದೇಶದ ಮಲ್ಟಿಮೀಟರ್‌ಗಳು ಕೇವಲ ಎರಡು-ತ೦ತಿ ಪ್ರತಿರೋಧಕ ಅಳತೆಯನ್ನು ಹೊ೦ದಿದ್ದರೂ, ಇದು ಪ್ರಮುಖ ತ೦ತಿ ಪ್ರತಿರೋಧಕದ ಪರಿಣಾಮಕ್ಕೆ ಪರಿಹಾರ ನೀಡುವುದಿಲ್ಲ, ಕೆಲವು ಹತ್ತು ಓಎಚ್‌ಎಮ್‌ಗಳಷ್ಟು ಕಡಿಮೆ ಅಳತೆಯದ್ದಾದರೆ ಕಡಿಮೆ ನಿಖರತೆಯನ್ನು ಹೊ೦ದಿರುತ್ತದೆ. ಮಲ್ಟಿಮೀಟರ್‌ನ ಮೇಲ್ತುದಿಯ ಅಳತೆ ಶ್ರೇಣಿಯು ಉತ್ಪಾದಕರಿ೦ದಾಗಿ ಬದಲಾಗುತ್ತಿರುತ್ತದೆ. ಏಕೆಂದರೆ 1 ಮೈಕ್ರೋಆ‍ಯ್‌೦ಪಿಯರ್ ಅಥವಾ ಕಡಿಮೆಯಿರುವ ಹಳೆಯ ಸಾಧನಗಳಲ್ಲಿ ವಿದ್ಯುತ್‌ನ ನಿಖರ ಅಳತೆಯ ಅಗತ್ಯದಂತೆ, ಸಾಮಾನ್ಯವಾಗಿ 1000 ವೋಲ್ಟ್, 10 ಎ೦ಪಿಯರ್ಸ್, 100 ಮೆಗೋಎಚ್‌ಎಮ್‌ಗಳಿ೦ತ ಹೆಚ್ಚಿನ ಅಳತೆಯಿದ್ದಲ್ಲಿ ಇದಕ್ಕೆ ವಿಶೇಷ ಪರೀಕ್ಷಾ ಸಾಧನವು ಬೇಕಾಗುತ್ತದೆ.

ಬರ್ಡನ್ ವೋಲ್ಟೇಜ್

ಬದಲಾಯಿಸಿ

DC ಹಾಗೂ AC ವಿದ್ಯುತ್ ಶ್ರೇಣಿಗಳೆರಡರಲ್ಲೂ ಸರ್ಕ್ಯೂಟ್ ಪರೀಕ್ಷೆಯಲ್ಲಿದ್ದಾಗ ಮಲ್ಟಿಮೀಟರ್ ವೋಲ್ಟೇಜ್ ಇಳಿತವನ್ನು ಉ೦ಟುಮಾಡುತ್ತದೆ. ಇದು ಪ್ರಾಥಮಿಕವಾಗಿ ಮಾಪನಕ್ಕೆ ಬಳಸಿದ ವಿದ್ಯುತ್ ನಿರ್ಲಕ್ಷ ರೆಸಿಸ್ಟರ್‌ನಿ೦ದಾಗಿ ಆಗುತ್ತದೆ. ಈ ವೋಲ್ಟೇಜ್ ಇಳಿತವು ಬರ್ಡನ್ ವೋಲ್ಟೇಜ್ ಎಂದು ಕರೆಯಲ್ಪಡುತ್ತದೆ, ಮತ್ತು ಇದನ್ನು ವೋಲ್ಟ್ಸ್ ಪರ್ ಎಂಪಿಯರ್ ನಲ್ಲಿ ನಿರ್ದಿಷ್ಟಪಡಿಸಲಾಗುತ್ತದೆ. ಮೀಟರ್ ಆಯ್ಕೆ ಮಾಡಿದ ಶ್ರೇಣಿಯ ಆಧಾರದ ಮೇಲೆ ಗುಣಮಟ್ಟ ಬದಲಾಗಬಹುದು. ಬೇರೆ ಬೇರೆ ಶ್ರೇಣಿಯು ಸಾಮಾನ್ಯವಾಗಿ ಬೇರೆ ಬೇರೆ ನಿರ್ಲಕ್ಷ ರೆಸಿಸ್ಟರ್‌‌ನ್ನು ಬಳಸುತ್ತವೆ.[]

ಪರ್ಯಾಯ ಪ್ರವಾಹ ಸಂವೇದಕ

ಬದಲಾಯಿಸಿ

‍ಅನಲಾಗ್‌ ಅಥವಾ ಡಿಜಿಟಲ್ ಮಲ್ಟಿಮೀಟರ್‌ನಲ್ಲಿರುವ ಮೂಲಭೂತ ದಿಕ್ಕುಸೂಚಿ ವ್ಯವಸ್ಥೆಯು DC ಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದರೂ, AC ಯು ಅಳತಗಾಗಿ ಮಲ್ಟಿಮೀಟರ್‌‌ AC ಯಿಂದ DC ಪರಿವರ್ತಕ ಸರ್ಕ್ಯೂಟ್‌ನ್ನು ಒಳಗೊ೦ಡಿರುತ್ತದೆ. ಸರಿಪಡಿಸಲಾದ ಸೈನ್ ವೇವ್‌ನ ಸರಾಸರಿ ಗುಣಮಟ್ಟದ ಪುನರ್ಮೌಲ್ಯವನ್ನು ನಿರ್ಧರಿಸಲು ಮೂಲಭೂತ ಮಲ್ಟಿಮೀಟರ್‌ಗಳು ಸುಧಾರಕ ಸರ್ಕ್ಯೂಟ್‌ನ್ನು ಬಳಸಬಹುದಾಗಿದೆ. ಇ೦ತಹ ಮೀಟರ್‌ಗಳಿಗೆ ಇರುವ ಬಳಕೆದಾರರ ಮಾರ್ಗದರ್ಶಿಗಳು ಕೆಲವು ಸಾಧಾರಣ ವೇವ್‌ಫಾರ್ಮ್‌ಗಳಿಗೆ ಸರಿಪಡಿಸುವಿಕೆ ಸಂಗತಿಗಳನ್ನು ನೀಡುತ್ತವೆ, ಮತ್ತು ಆ ಮೂಲಕ ಸರಿಯಾದ ರೂಟ್ ಮೀನ್ ಸ್ಕ್ವೈರ್ (RMS) ಸಮಾನ ಮೌಲ್ಯವನ್ನು ಸಾಧಾರಣವಾಗಿ-ಪ್ರತಿಕ್ರಿಯಿಸುವ ಮೀಟರ್ ಗಾಗಿ ಅಳೆಯಲು ಸಹಾಯ ಮಾಡುತ್ತವೆ. ದುಬಾರಿ ಮಲ್ಟಿಮೀಟರ್‌ಗಳು AC ಯಿಂದ DC ಪರಿವರ್ತಕಗಳನ್ನು ಹೊ೦ದಿರುತ್ತಿದ್ದು, ಇದು ವಿವಿಧ ಶ್ರೇಣಿಯ ಸಾಧ್ಯ ವೇವ್‌ಫಾರ್ಮ್‌ಗಳ RMS ಗುಣಮಟ್ಟಕ್ಕೆ ಪ್ರತಿಕ್ರಿಯಿಸುತ್ತದೆ. ಮೀಟರ್ ನ ಬಳಕೆದಾರರ ಕೈಪಿಡಿಯು ಕ್ರೆಸ್ಟ್ ಫ್ಯಾಕ್ಟರ್ ಮತ್ತು ಮೀಟರ್ ಕ್ಯಾಲಿಬ್ರೇಶನ್ ಮಾನ್ಯಗೊಂಡ ಆವರ್ತನದ ಮಿತಿಯನ್ನು ಸೂಚಿಸುತ್ತದೆ. ಆಡಿಯೋ ಸಿಗ್ನಲ್‌ಗಳಲ್ಲಿನ ಅಥವಾ ವೇರಿಯಬಲ್-ಫ್ರೀಕ್ವೆನ್ಸಿ ಡ್ರೈವ್‌ಗಳಲ್ಲಿನ ನಾನ್-ಸಿನುಸೊಯ್ಡಲ್ ಪ್ರಮಾಣಗಳ ಅಳತೆಗೆ RMS ಸೆನ್ಸಿಂಗ್ ಅಗತ್ಯವಿದೆ.

ಡಿಜಿಟಲ್ ಮಲ್ಟಿಮೀಟರ್ (DMM ಅಥವಾ DVOM)

ಬದಲಾಯಿಸಿ
 
ಹೆವೆಲ್ಟ್-ಪಾಕರ್ಡ್‌ರಿಂದ ಒಂದು ಬೆಂಚ್-ಟಾಪ್ ಮಲ್ಟಿ ಮೀಟರ್.

ಆಧುನಿಕ ಮಲ್ಟಿಮೀಟರ್‌ಗಳು ಅವುಗಳ ನಿಖರತೆ, ಬಾಳಿಕೆ ಮತ್ತು ವಿಶೇಷ ಗುಣಗಳಿ೦ದಾಗಿ ಡಿಜಿಟಲ್ ಆಗಿವೆ. ಡಿಜಿಟಲ್ ಮಲ್ಟಿಮೀಟರ್‌ನಲ್ಲಿ ಪರೀಕ್ಷೆಗೊಳಪಟ್ಟ ಸ೦ಕೇತವು ವೋಲ್ಟೇಜ್ ಆಗಿ ಬದಲಾಗುತ್ತದೆ ಮತ್ತು ವಿದ್ಯುನ್ಮಾನದಿಂದ ನಿಯಂತ್ರಿಸಿದ ಗೇಯ್ನ್ ಇರುವ ಎಂಪ್ಲಿಫಯರ್ ಈ ಸಂಕೇತವನ್ನು ಪೂರ್ವನಿರ್ದೇಶನಕ್ಕೆ ಒಳಪಡಿಸುತ್ತದೆ. ಅಳೆಯಲ್ಪಟ್ಟ ಗುಣಮಟ್ಟವನ್ನು ಒಂದು ಡಿಜಿಟಲ್ ಮಲ್ಟಿಮೀಟರ್ ಸ೦ಖ್ಯೆಗಳಲ್ಲಿ ತೋರಿಸುತ್ತದೆ. ಇದು ಪ್ಯಾರಲಾಕ್ಸ್ ದೋಷಗಳನ್ನು ತಡೆಯುತ್ತದೆ.

ಆಧುನಿಕ ಡಿಜಿಟಲ್ ಮಲ್ಟಿಮೀಟರ್‌ಗಳು ಅನುಕೂಲಕರ ಗುಣಗಳಿ೦ದ ಕೂಡಿದ ಒಂದು ಎ೦ಬೆಡೆಡ್ ಕ೦ಪ್ಯೂಟರ್‌ನ್ನು ಹೊ೦ದಿರಬಹುದು. ಸಾಮಾನ್ಯವಾಗಿ ಸಿಗುವ ಅಳತೆ ಹೆಚ್ಚಳವು ಈ ಕೆಳಗಿನವುಗಳನ್ನು ಹೊ೦ದಿರುತ್ತವೆ.

  • ಆಟೋ ರೇ೦ಜಿ೦ಗ್, ಇದು ಕಾರ್ಯನಿರತವಾಗಿದ್ದಾಗ ಅಳತೆ ಪ್ರಮಾಣದ ಸರಿಯಾದ ಶ್ರೇಣಿಯನ್ನು ಆಯ್ಕೆಮಾಡುತ್ತದೆ. ಇದರಿ೦ದಾಗಿ ಅತ್ಯ೦ತ ಪರಿಣಾಮಕಾರಿ ಸ೦ಖ್ಯೆಗಳು ತೋರಿಸಲ್ಪಡುತ್ತವೆ.

ಉದಾಹರಣೆಗೆ, ನಾಲ್ಕು ಸ೦ಖ್ಯೆಯ ಮಲ್ಟಿಮೀಟರ್ 0.012 ರ ಬದಲಾಗಿ 1.234 ನ್ನು ಮತ್ತು ಓವರ್‌ಲೋಡಿ೦ಗ್‌ನ್ನು ತೋರಿಸಲು ಸ್ವಯ೦ಚಾಲಿತವಾಗಿ ಸರಿಯಾದ ಶ್ರೇಣಿಯನ್ನು ಆಯ್ಕೆ ಮಾಡುತ್ತದೆ. ಆಟೋ ರೇ೦ಜಿ೦ಗ್ ಮೀಟರ್‌ಗಳು ಸಾಮನ್ಯವಾಗಿ ಒಂದು ನಿರ್ದಿಷ್ಟ ಹ೦ತದವರೆಗೆ ಮೀಟರ್‌ನ್ನು ಫ್ರೀಜ್ ಮಾಡಬಲ್ಲ ಸೌಲಭ್ಯವನ್ನು ಹೊಂದಿದೆ. ಯಾಕೆ೦ದರೆ ಅಳತೆಯಿಂದಾಗುವ ಪುನರಾವರ್ತಿತ ಶ್ರೇಣಿ ಬದಲಾವಣೆಯು ಬಳಕೆದಾರನನ್ನು ಗೊಂದಲಗೊಳಿಸುತ್ತದೆ. ಇತರ ಸಂಗತಿಗಳು ಸಮವಾಗಿರುವುದರಿಂದ, ಒಂದು ಸ್ವಯಂ-ಶ್ರೇಣಿಗೊಳಿಸುವ ಮೀಟರ್ ಸಮಾನವಾದ, ಸ್ವಯಂ-ಶ್ರೇಣಿಗೊಳಿಸದ ಮೀಟರ್‌ಗಿಂತ ಹೆಚ್ಚಿನ ಸರ್ಕ್ಯುಟ್ರಿಯನ್ನು ಹೊಂದಿರುತ್ತದೆ, ಆದರೆ ಬಳಕೆಯಲ್ಲಿ ಹೆಚ್ಚು ಸುಲಭವಾಗಿದೆ.

  • ನೇರ-ವಿದ್ಯುತ್ ‌ಪ್ರವಾಹ ಓದುವಿಕೆಗೆ ಬಳಕೆಯಾಗುವ ಆಟೋ ಪೋಲಾರಿಟಿಯು ಬಳಸಲ್ಪಟ್ಟ ವೋಲ್ಟೇಜ್ ಧನಾತ್ಮಕವೇ (ಮೀಟರ್ ಲೀಡ್ ಲೇಬಲ್‌ಗಳೊಂದಿಗೆ ಸಮ್ಮತಿಸುತ್ತದೆ) ಅಥವಾ ಋಣಾತ್ಮಕವೇ ಎಂದುದನ್ನು ತೋರಿಸುತ್ತದೆ (ಮೀಟರ್ ಲೀಡ್ ಲೇಬಲ್‌ಗಳೊಂದಿಗೆ ವಿರುದ್ಧವಾದ ಪೋಲಾರಿಟಿ ಹೊಂದಿರುತ್ತದೆ).
  • ಸ್ಯಾ೦ಪಲ್ ಮತ್ತು ಹೋಲ್ಡ್, ಇದು ಸರ್ಕ್ಯೂಟ್ ಪರೀಕ್ಷೆಯ ನಂತರ ಸಾಧನವು ತೆಗೆಯಲ್ಪಟ್ಟ ನಂತರ ಪರೀಕ್ಷೆಗಾಗಿ ಅತ್ಯ೦ತ ಹೊಸದಾದ ಮಾಹಿತಿಯನ್ನು ನೀಡುತ್ತದೆ.
  • ಸೆಮಿಕಂಡಕ್ಟರ್ ಜಂಕ್ಷನ್‌ಗಳ ಅಡ್ಡವಾಗಿ ವೋಲ್ಟೇಜ್ ಡ್ರಾಪ್ ಆಗುವುದಕ್ಕೆ ವಿದ್ಯುತ್‌ ಪ್ರವಾಹ-ಮಿತಿಯನ್ನು ಹೊಂದಿದ ಪರೀಕ್ಷೆಗಳು. ಇದನ್ನು ಟ್ರಾನ್ಸಿಸ್ಟರ್ ಟೆಸ್ಟರ್ ನ ಬದಲಾಗಿ ಬಳಸಲಾಗದಿದ್ದರೂ, ಇದು ಡಯೋಡ್‌ಗಳನ್ನು ಮತ್ತು ಅನೇಕ ರೀತಿಯ ಟ್ರಾನ್ಸಿಸ್ಟರ್ ಪ್ರಕಾರಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ.
  • ಪರೀಕ್ಷೆಗೊಳಪಟ್ಟಿರುವ ಪ್ರಮಾಣದ ಬಾರ್ ಗ್ರಾಫ್ ರೀತಿಯ ಗ್ರಾಫಿಕ್ ನಿರೂಪಣೆ . ಇದು ಗೋ/ನೋ-ಗೋ ಪರೀಕ್ಷೆಯನ್ನು ಸುಲಭವಾಗಿಸುತ್ತದೆ, ಮತ್ತು ವೇಗ-ಚಲನೆಯ ಅಭ್ಯಾಸವನ್ನು ಗುರುತಿಸಲು ಅವಕಾಶ ಮಾಡಿರುತ್ತದೆ.
  • ಒಂದು ಕಡಿಮೆ-ಬ್ಯಾಂಡ್‌ವಿಡ್ತ್ ಇರುವ ಆಸಿಲ್ಲೋಸ್ಕೋಪ್ .[]
  • ಆಟೋಮೋಟಿವ್ ಟೈಮಿಂಗ್ ಮತ್ತು ಡ್ವೆಲ್ ಸಿಗ್ನಲ್‌ಗಳು ಸೇರಿದಂತೆ ಆಟೋಮೋಟಿವ್ ಸರ್ಕ್ಯುಟ್ ಟೆಸ್ಟರ್‌ಗಳು[]
  • ಒಂದು ಕೊಟ್ಟ ನಿರ್ದಿಷ್ಟ ಸಮಯದಲ್ಲಿ ಕನಿಷ್ಟ ಮತ್ತು ಗರಿಷ್ಟ ಓದಿಕೆಗಳನ್ನು ದಾಖಲಿಸಲು ಅಥವಾ ಒಂದು ನಿರ್ದಿಷ್ಟ ಅಂತರದಲ್ಲಿ ಕೆಲವು ಮಾದರಿಗಳನ್ನು ತೆಗೆದುಕೊಳ್ಳಲು ಸರಳ ಡಾಟಾ ಅಕ್ವಿಸಿಶನ್ ವೈಶಿಷ್ಟ್ಯಗಳು.[]
  • ಸರ್ಫೇಸ್-ಮೌಂಟ್ ಟೆಕ್ನಾಲಜಿ ಗಾಗಿ ಟ್ವೀಜರ್‌ಗಳೊಂದಿಗೆ ಸಂಯೋಜನೆ.[೧೦]
  • ಚಿಕ್ಕ-ಬಣ್ಣದ SMD ಥ್ರೂ-ಹೋಲ್ ಅಂಶಗಳಿಗಾಗಿ ಒಂದು ಸಂಯುಕ್ತ LCR ಮೀಟರ್.[೧೧]

ಆಧುನಿಕ ಮೀಟರ್‌ಗಳನ್ನು ಪರ್ಸನಲ್ ಕಂಪ್ಯೂಟರ್‌ನೊಂದಿಗೆ IrDA ಲಿಂಕ್ ಮೂಲಕ, RS-232 ಸಂಪರ್ಕಗಳು, USB, ಅಥವಾ ಒಂದು IEEE-488 ನಂತಹ ಒಂದು ಉಪಕರಣ ಬಸ್‌ನೊಂದಿಗೆ ಹೊಂದಿಸಬಹುದು. ಈ ಇಂಟರ್‌ಫೇಸ್ ಕಂಪ್ಯೂಟರ್‌ಗಳಿಗೆ ಅಳತೆಗಳನ್ನು ಮಾಡುತ್ತಿರುವಂತೆಯೇ ಅವುಗಳನ್ನು ದಾಖಲಿಸುವಂತೆ ಮಾಡುತ್ತದೆ. ಕೆಲವು DMM ಗಳು ಅಳತೆಗಳನ್ನು ಶೇಖರಿಸಿಡಬಲ್ಲವು ಮತ್ತು ಅವುಗಳನ್ನು ಕಂಪ್ಯೂಟರ್‌ಗೆ ಅಪ್ಲೋಡ್ ಮಾಡಬಲ್ಲವು.[೧೨]

ಮೊದಲ ಡಿಜಿಟಲ್ ಮಲ್ಟಿಮೀಟರ್‌‌ಗಳು ನಾನ್ ಲೈನರ್ ಸಿಸ್ಟಮ್ ನಿ೦ದ 1955 ರಲ್ಲಿ ತಯಾರಿಸಲ್ಪಟ್ಟವು.[೧೩][೧೪]

ಅನಲಾಗ್‌ಕ ಮಲ್ಟಿ ಮೀಟರ್‌ಗಳು

ಬದಲಾಯಿಸಿ

ಒಂದು ಮಲ್ಟಿ ಮೀಟರ್ ಮೀಟರ್ ಚಲನೆಯ ಗ್ಯಾಲ್ವನೋಮೀಟರ್ ನಿ೦ದ ಕೂಡಿರುತ್ತದೆ ಅಥವಾ ಬಾರ್-ಗ್ರಾಫ್ ಅಥವಾ ಸಿಮ್ಯುಲೇಟೆಡ್ ಸೂಚಕವಾದ LCD ಅಥವಾ ವ್ಯಾಕ್ಯೂಮ್ ಫ್ಲೋರೋಸೆ೦ಟ್ ಡಿಸ್ಪ್ಲೇಯನ್ನು ಹೊ೦ದಿರುತ್ತದೆ. ಅನಲಾಗ್‌ಕ ಮಲ್ಟಿ ಮೀಟರ್‌ಗಳು ಸಾಮಾನ್ಯವಾಗಿದ್ದು, ಆದರೂ ಗುಣಮಟ್ಟ ಅನಲಾಗ್‌ಕ ಸಾಧನವು ಡಿಜಿಟಲ್ ಮಲ್ಟಿಮೀಟರ್‌ಗಳಷ್ಟೇ ಬೆಲೆಯುಳ್ಳದ್ದಾಗಿರುತ್ತದೆ. ಮೇಲೆ ವಿವರಿಸಿದ೦ತೆ ಅನಲಾಗ್‌ಕ ಮಲ್ಟಿ ಮೀಟರ್‌ಗಳು ದೋಷರಹಿತ ಮತ್ತು ನಿಖರತೆಯಲ್ಲಿ ಸೀಮಿತವಾಗಿದ್ದು, ಡಿಜಿಟಲ್ ಮಲ್ಟಿಮೀಟರ್‌ಗಳು ನೀಡುವ ನಿಖರತೆಯನ್ನು ನೀಡುವ೦ತೆ ರಚಿಸಲ್ಪಟ್ಟಿಲ್ಲ.

ಅನಲಾಗ್‌ ಮೀಟರ್‌ಗಳು ಕೆಲವೊಮ್ಮೆ ಓದಿಕೆಯ ಬದಲಾವಣೆಯ ಪ್ರಮಾಣವನ್ನು ಕ೦ಡುಹಿಡಿಯುವಲ್ಲಿ ಉತ್ತಮವಾಗಿವೆ. ಕೆಲವು ಡಿಜಿಟಲ್ ಮಲ್ಟಿಮೀಟರ್‌ಗಳು ಈ ಕಾರಣಕ್ಕಾಗಿ ವೇಗದ ಪ್ರತಿಕ್ರಿಯೆಯ ಬಾರ್-ಗ್ರಾಫ್ ಡಿಸ್ಪ್ಲೇಯನ್ನು ಹೊ೦ದಿವೆ. ಉದಾರರಣೆಗೆ, ಫಿಲ್ಟರ್ ಧಾರಕದ ಉತ್ತಮ/ಉತ್ತಮವಲ್ಲ ಪರೀಕ್ಷೆ. ಇದು ಅನಲಾಗ್‌ಕ ಮೀಟರ್ ಓದುವಿಕೆಯನ್ನು ಸರಳ ಹಾಗೂ ವೇಗಗೊಳಿಸುತ್ತದೆ.( ಡಿಜಿಟಲ್ ಮೀಟರ್‌ಗಿ೦ತ ಸ್ವಲ್ಪ ಕಡಿಮೆ ನಿಖರತೆಯನ್ನು ಹೊ೦ದಿರಲೂಬಹುದು.) ARRL ಕೈ ಪುಸ್ತಕವು ಕೂಡ ಅನಲಾಗ್‌ಕ ಮಲ್ಟಿ ಮೀಟರ್‌ಗಳು ಕೆಲವೊಮ್ಮೆ ರೇಡಿಯೋ ಫ್ರಿಕ್ವೆನ್ಸಿ ಅಡಚಣೆಗೆ ಕಡಿಮೆ ಈಡಾಗುತ್ತದೆ ಎಂದು ಹೇಳುತ್ತದೆ.

ಒಂದು ಚಲಿಸುವ ದಿಕ್ಸೂಚಕ ಅನಲಾಗ್ ಮಲ್ಟಿಮೀಟರ್‌ನಲ್ಲಿನ ಈ ಮೀಟರ್ ಚಲನೆಯು ಪ್ರಾಯೋಗಿಕವಾಗಿ ಯಾವಾಗಲೂ ಒಂದು ಡಿ'ಅರ್ಸನ್ವಲ್ ಪ್ರಕಾರದ ಮೂವಿಂಗ್-ಕಾಯಿಲ್ ಗ್ಯಾಲ್ವನೋಮೀಟರ್ ಆಗಿರುತ್ತದೆ. ಮತ್ತು ಅದು ಕಾಯಿಲ್ ಚಲನೆಯನ್ನು ಬೆಂಬಲಿಸಲು ತಿರುಗಾಣಿಗಳನ್ನು ಅಥವಾ ಬಿಗಿಯಾದ ಬ್ಯಾಂಡ್‌ಗಳನ್ನು ಬಳಸುತ್ತದೆ. ಒಂದು ಮೂಲ ಅನಲಾಗ್ ಮಲ್ಟಿಮೀಟರ್‌ನಲ್ಲಿ ಕಾಯಿಲ್ ಮತ್ತು ದಿಕ್ಸೂಚಕವನ್ನು ಬಾಗಿಸಲು ಅಗತ್ಯವಾದ ವಿದ್ಯುತ್ತನ್ನು ಅಳೆಯುತ್ತಿರುವ ಸರ್ಕ್ಯುಟ್‌ನಿಂದಲೇ ಪಡೆಯಲಾಗುತ್ತದೆ; ಸಾಮಾನ್ಯವಾಗಿ ಸರ್ಕ್ಯುಟ್‌ನಿಂದ ಎಳೆಯುವ ವಿದ್ಯುತ್ತನ್ನು ಕಡಿಮೆಗೊಳಿಸಲು ಇದೊಂದು ಪ್ರಯೋಜನಯಾಗಿದೆ. ಅನಲಾಗ್‌ಕ ಮಲ್ಟಿ ಮೀಟರ್‌‌ನ ಸೂಕ್ಷ್ಮತೆಯು ಯುನಿಟ್ಸ್ ಅಥವಾ ಒಎಚ್‌ಎಮ್ ವೋಲ್ಟ್ ನಲ್ಲಿ ಕೊಟ್ಟಿರುತ್ತದೆ. ಉದಾಹರಣೆಗೆ ದುಬಾರಿಯಲ್ಲದ ಮಲ್ಟಿಮೀಟರ್ ಒಂದು ವೋಲ್ಟ್ ಗೆ 1000 ohms ನ೦ತೆ ಸೂಕ್ಶ್ಮತೆಯನ್ನು ಹೊ೦ದಿರುತ್ತದೆ. ಮತ್ತು ಪೂರ್ಣ ಪ್ರಮಾಣದ ಅಳತೆಯ ವೋಲ್ಟೇಜ್‌ನಲ್ಲಿರುವ ಸರ್ಕ್ಯೂಟ್‌ನಿ೦ದ 1 ಮಿಲಿಯ೦ಪಿಯರ್‌ನ್ನು ಸೆಳೆಯುತ್ತದೆ.[೧೫] ಹೆಚ್ಚು ದುಬಾರಿಯಾದ, (ಮತ್ತು ಬಹಳ ಸೂಕ್ಷ್ಮವಾದ) ಮಲ್ಟಿಮೀಟರ್‌ಗಳು ಪ್ರತಿ ವೋಲ್ಟ್‌ಗೆ 20,000 ಓಮ್ಸ್ ಅಥವಾ ಅದಕ್ಕಿಂತ ಹೆಚ್ಚಿನ ಸೂಕ್ಷ್ಮತೆಯನ್ನು ಹೊಂದಿರುತ್ತವೆ, ಮತ್ತು ಸಾಮಾನ್ಯ ಬಳಕೆಯ ಪೋರ್ಟಬಲ್ ನಾನ್-ಎಂಪ್ಲಿಫೈಡ್ ಅನಲಾಗ್ ಮಲ್ಟಿಮೀಟರ್‌ಗೆ ಪ್ರತಿ ಓಲ್ಟ್ ಮೀಟರ್‌ಗೆ 50,000 ಓಮ್ಸ್ ಗರಿಷ್ಟ ಮಿತಿಯಿರುತ್ತದೆ (20 ಮೈಕ್ರೋಎಂಪಿಯರ್‌ಗಳನ್ನು ಪೂರ್ಣ ಮಟ್ಟದಲ್ಲಿ ಎಳೆಯುವಿಕೆ).

ಮೀಟರ್ ಚಲನೆಯಿಂದ ಎಳೆಯಲ್ಪಡುವ ವಿದ್ಯುತ್ತು ಅಳತೆ ಮಾಡಿದ ಸರ್ಕ್ಯುಟ್‌ನಲ್ಲಿ ತುಂಬುವುದನ್ನು ತಡೆಯಲು, ಕೆಲವು ಅನಲಾಗ್ ಮಲ್ಟಿಮೀಟರ್‌ಗಳು ಅಳತೆ ಮಾಡಿದ ಸರ್ಕ್ಯುಟ್‌ ಮತ್ತು ಎಂಪ್ಲಿಫೈಯರ್‌ಗಳ ನಡುವೆ ಸೇರಿಸಿ ಬಳಸುತ್ತವೆ. ಇದು ದುಬಾರಿಯಾಯಿತು ಮತ್ತು ಮೀಟರ್‌ಅನ್ನು ಸಂಕೀರ್ಣಗೊಳಿಸಿತು ಮತ್ತು ಎಂಪ್ಲಿಫೈಯರ್ ಕೆಲಸ ಮಾಡಲು ವಿದ್ಯುತ್ ಒದಗಿಸಬೇಕಾಯಿತಾದರೂ ನಿರ್ವಾತ ಟ್ಯೂಬ್‌ಗಳು ಅಥವಾ ಫೀಲ್ಡ್ ಎಫೆಕ್ಟ್ ಟ್ರಾನ್ಸಿಸ್ಟರ್‌ಗಳನ್ನು ಬಳಸುವ ಮೂಲಕ ಇನ್‌ಪುಟ್ ವಿದ್ಯುತ್‌ನಿರೋಧಕತೆಯನ್ನು ಅತ್ಯಂತ ಹೆಚ್ಚು ಮಾಡಬಹುದು ಮತ್ತು ಮೀಟರ್ ಚಲನೆಯ ಕಾಯಿಲ್ ಗೆ ವಿದ್ಯುತ್‌ನ ಅಗತ್ಯವಿಲ್ಲದಂತೆ ಮಾಡಿ ಸ್ವತಂತ್ರಗೊಳಿಸಿತು. ಅಂತಹ ವರ್ಧಿಸಿದ ಮಲ್ಟಿಮೀಟರ್‌ಗಳನ್ನು VTVM ಗಳು (ವ್ಯಾಕ್ಯೂಮ್ ಟ್ಯೂಬ್ ವೋಲ್ಟಾಮೀಟರ್‌ಗಳು),[೧೬] TVM ಗಳು (ಟ್ರಾನ್ಸಿಸ್ಟರ್ ವೋಲ್ಟ್ ಮೀಟರ್‌ಗಳು), FET-VOMs, ಮತ್ತು ಸಮಾನ ಹೆಸರುಗಳಲ್ಲಿ ಕರೆಯಲಾಗುತ್ತದೆ.

ಮಲ್ಟಿಮೀಟರ್ ಬಹಳ ರೀತಿಯ ಪರೀಕ್ಷಕ ಪ್ರೋಬ್ಸ್ ಗಳನ್ನು ಸರ್ಕೀಟ್ ಅಥವಾ ಸಾಧನಕ್ಕೆ ಸಂಪರ್ಕ ಕೊಡಲು ಪರೀಕ್ಷಿಸುವಾಗ ಬಳಸುತ್ತದೆ. ಕ್ರೊಕಡೈಲ್ ಕ್ಲಿಪ್‍ಗಳು, ಹಿಂತೆಗೆದುಕೊಳ್ಳುವ ಕೊಂಡಿ ಕ್ಲಿಪ್‍ಗಳು, ಮತ್ತು ಪಾಯಿಂಟೆಡ್ ಪ್ರೋಬ್ಸ್ ಇವು ಮೂರು ಸಾಮಾನ್ಯವಾದ ಅನುಬಂಧಗಳು.

ಮೀಟರಿಗೆ ಅನುಕೂಲವಾಗುವಂತೆ ಜೋಡಕಗಳನ್ನು ಸುಲಭವಾಗಿ ಬಾಗುವ, ದಪ್ಪವಾದ-ಅವಾಹಕಗಳಿಗೆ ಒಂದೆಡೆ ಜೋಡಿಸಲಾಗುತ್ತದೆ. ಕೈಯಲ್ಲಿ ಹಿಡಿವ ಮೀಟರ್‌ಗಳು ಮುಚ್ಚಿರುವ ಅಥವಾ ಗುಪ್ತವಾಗಿರುವ ಬನಾನಾ ಜ್ಯಾಕ್‌ಗಳನ್ನು ಬಳಸುತ್ತವೆ, ಆದರೆ ಬೆಂಚ್‌ಟಾಪ್ ಮೀಟರ್‌ಗಳು ಬನಾನಾ ಜ್ಯಾಕ್ ಅಥವಾ BNC ಸಂಪರ್ಕ ಸಾಧನಗಳನ್ನು ಬಳಸುತ್ತವೆ. 2mm ಪ್ಲಗ್‌ಗಳು ಮತ್ತು ಬೈಂಡಿಂಗ್ ಪೋಸ್ಟ್‌ಗಳನ್ನು ಸಹಾ ಬಳಸಲಾಗುತ್ತದೆ, ಆದರೆ ಈ ದಿನಗಳಲ್ಲಿ ಅವು ಅಷ್ಟಾಗಿ ಬಳಕೆಯಲ್ಲಿಲ್ಲ.

ಮೀಟರ್ ಅಧಿಕ ವೋಲ್ಟೇಜ್‍ನ್ನು ಅಳೆಯುತ್ತದೆ ಮತ್ತು ಈಗ ಸುರಕ್ಷತೆಗಾಗಿ ನಿಖರತೆಯನ್ನು ಸಾಧಿಸಲು ಸಂಪರ್ಕವಿಲ್ಲದ ಪೂರಕ ತಾಂತ್ರಿಕತೆಯನ್ನು ಬಳಸಬಹುದು. ಕ್ಲಾಂಪ್‍ ಮೀಟರ್ ಗಳು ಒದಗಿಸುವ ಸುರುಳಿ ತಂತಿ ಅದರ ಮೂಲಕ ಹರಿಯುವ ವಿದ್ಯುತ್ತನ್ನು ಅಳತೆ ಮಾಡಲು ನಿರ್ವಾಹಕದ ಸುತ್ತಲೂ ಬಂಧಿಸುತ್ತದೆ.

ಸುರಕ್ಷತೆ

ಬದಲಾಯಿಸಿ

ಎಲ್ಲವೂ ಹಾಗೂ ಅತಿ ಹೆಚ್ಚು ದುಬಾರಿ ಮಲ್ಟಿಮೀಟರ್‌ಗಳು ಒಂದು ಅಥವಾ ಎರಡು ಫ್ಯೂಸ್ ಹೊ೦ದಿರುತ್ತಿದ್ದು, ಇದು ಕೆಲವೊಮ್ಮೆ ಓವರ್‌ಲೋಡ್ ಆದರೆ ಮಲ್ಟಿಮೀಟರ್‌ಗೆ ಉ೦ಟಾಗುವ ಹಾನಿಯನ್ನು ತಡೆಯುತ್ತದೆ. ಹೀಗಿದ್ದರೂ, ಫ್ಯೂಸ್ ಕೆಲವೊಮ್ಮೆ ಮಲ್ಟಿಮೀಟರ್‌ನಲ್ಲಿ ಅತಿ ಹೆಚ್ಚು ವಿದ್ಯುತ್ ಪ್ರವಾಹ ಶ್ರೇಣಿಯನ್ನು ಮಾತ್ರ ತಡೆಯುತ್ತದೆ. ಒಂದು ಮಲ್ಟಿಮೀಟರ್‌ನೊಡನೆ ಕಾರ್ಯ ನಿರ್ವಹಿಸುತ್ತಿರುವಾಗ ಉಂಟಾಗುವ ಸಾಮಾನ್ಯ ದೋಷವೆಂದರೆ ಅದನ್ನು ರೆಸಿಸ್ಟೆನ್ಸ್ ಅಥವಾ ವಿದ್ಯುತ್ತನ್ನು ಅಳೆಯಲು ಹೊಂದಿಸಿ ನಂತರ ಅದನ್ನು ನೇರವಾಗಿ ಒಂದು ಕಡಿಮೆ-ತಡೆಯೊಡ್ಡುವಿಕೆ ಓಲ್ಟೇಜ್ ಮೂಲಕ್ಕೆ ಸಂಪರ್ಕ ಏರ್ಪಡಿಸುವುದು. ಇಂತಹ ದೋಷಗಳಿಂದ ರಕ್ಷಣೆಯಿಲ್ಲದ ಮೀಟರ್‌ಗಳು ಬಹು ಬೇಗದಲ್ಲಿ ಹಾಳಾಗುತ್ತವೆ, ಮತ್ತು ಕೆಲವೊಮ್ಮೆ ಸಿಡಿದು ಅದನ್ನು ಬಳಸುವವನಿಗೂ ಗಾಯಗೊಳಿಸುತ್ತವೆ. ಮೀಟರ್‌ಗಳಲ್ಲಿ ಉಪಯೋಗಿಸಿದ ಫ್ಯೂಸ್‌ಗಳು ಉಪಕರಣದ ಗರಿಷ್ಟ ಅಳತೆಯ ವಿದ್ಯುತ್ತನ್ನು ಒಯ್ಯುತ್ತವೆ, ಆದರೆ ಬಳಸುವವನಿಂದಾದ ದೋಷವು ಕಡಿಮೆ-ತಡೆಯೊಡ್ಡುವಿಕೆ ದೋಷಕ್ಕೆ ಒಳಗಾಗಿಸಿದರೆ ಬಿಡಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.

ಕಂಪ್ಯೂಟರ್‌ನೊಂದಿಗೆ ಇಂಟರ್‌ಫೇಸಿಂಗ್ ಅನ್ನು ಅನುಮತಿಸುವ ಮೀಟರ್‌ಗಳಲ್ಲಿ ಇರುವ ಆಪ್ಟಿಕಲ್ ಐಸೋಲೇಶನ್ ಕಂಪ್ಯೂಟರ್ ಮತ್ತು ಬಳಸುವವರನ್ನು ಅಳೆಯುವ ಸರ್ಕ್ಯುಟ್‌ನಲ್ಲಿನ ಹೆಚ್ಚಿನ ಓಲ್ಟೇಜ್‌ನಿಂದ ರಕ್ಷಿಸುತ್ತದೆ.

CEN EN61010 ಪ್ರಮಾಣ[೧೭] ವು ನಿರ್ದಿಷ್ಟಪಡಿಸಿದಂತೆ ಡಿಜಿಟಲ್ ಮೀಟರ್‌ಗಳು ಅವುಗಳ ನಿರೀಕ್ಷಿತ ಸಾಧನಗಳ ಪ್ರಕಾರ ವಿಭಾಗ ಶ್ರೇಯಾಂಕಿತಗೊಂಡವುಗಳಾಗಿವೆ.

ಇದು ನಾಲ್ಕು ವಿಭಾಗಗಳನ್ನು ಹೊಂದಿದೆ.

  • ವಿಭಾಗ I : ಪ್ರವಾಹ ಮಟ್ಟವು ಕಡಿಮೆಯಿರುವಲ್ಲಿ ಬಳಸಿರುವುದು.
  • ವಿಭಾಗ II : ವಸತಿ ವಿಭಾಗದ ಸರ್ಕ್ಯೂಟ್‌ಗಲಲ್ಲಿ ಬಳಸಿರುವುದು.
  • ವಿಭಾಗ III : ವಿತರಣಾ ಪ್ಯಾನಲ್‌, ಮೋಟರ್‌ಗಳು ಮತ್ತು ಅಪ್ಲೈಯನ್ಸ್ ಔಟ್‌ಲೆಟ್ಸ್ ಮು೦ತಾದ ಸ್ಥಿರ ಅಳವಡಿತ ಲೋಡ್‌ಗಳಲ್ಲಿ ಬಳಸಿರುವುದು.
  • ವಿಭಾಗ IV : ವಿದ್ಯುತ್ ಪ್ರವಾಹ ಮಟ್ಟವು ಹೆಚ್ಚಿರುವಲ್ಲಿ,ಉದಾಹರಣೆಗೆ ಸರ್ವೀಸ್ ಎ೦ಟ್ರನ್ಸ್‌ಗಳು, ಪ್ರಮುಖ ಪ್ಯಾನಲ್‌ಗಳು ಮತ್ತು ನಿವಾಸಗಳ ಮೀಟರ್‌ಗಳಲ್ಲಿ ಬಳಸಿರುವುದು.

ಪ್ರತಿ ವಿಭಾಗವು ಮೀಟರ್‌ನಲ್ಲಿಯ ನಿರ್ದಿಷ್ಟ ಅಳತೆ ಶ್ರೇಣಿಗಳಿಗೆ ಗರಿಷ್ಟ ಟ್ರಾನ್ಸಿಯೆ೦ಟ್ ವೋಲ್ಟೇಜ್ ಅನ್ನು ಸೂಚಿಸುತ್ತದೆ. ಹೆಚ್ಚಿನ-ವಿದ್ಯುತ್ ಹರಿವಿನ ದೋಷಗಳಿಂದ ಪ್ರಕಾರ-ಶ್ರೇಯಾಂಕಿತ ಮೀಟರ್‌ಗಳು ರಕ್ಷಣೆಯನ್ನು ನೀಡುತ್ತವೆ.[೧೮]

ಡಿಎಮ್ಎಮ್ ಪರ್ಯಾಯಗಳು

ಬದಲಾಯಿಸಿ

ಒಂದು ಮಿಲಿವೊಲ್ಟ್ ಅಥವಾ ಒಂದು ಮಿಲಿಎಂಪರ್ ಗಳಿಗಿಂತ ಹೆಚ್ಚು, ಅಥವಾ ಒಂದು ಗಿಗಾಒಮ್ ಗಿಂತ ಕೆಳಗಿರುವ - ಸೂಕ್ಷ್ಮತೆಯ ಸೈದ್ಧಾಂತಿಕ ಮಿತಿಯಿಂದ ದೂರವಿರುವ ಸಿಗ್ನಲ್ ಹಂತಗಳಲ್ಲಿ ಅಳತೆ ಮಾಡಲು ಸಾಮಾನ್ಯ-ಬಳಕೆಯ ಡಿಎಮ್ಎಮ್ ಉಪಯುಕ್ತವಾಗಿದೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಇತರ ಉಪಕರಣಗಳನ್ನು ಅತೀ ಚಿಕ್ಕ ಅಥವಾ ಹೆಚ್ಚು ದೊಡ್ಡ ಪ್ರಮಾಣದ ನಿಖರವಾದ ಅಳತೆಗಳಿಗೆ ಉಪಯೋಗಿಸುತ್ತಾರೆ. ಇವು ನ್ಯಾನೊವೊಲ್ಟ್ ಮೀಟರ್ಸ, ಇಲೆಕ್ಟ್ರೋಮೀಟರ್ಸ, ಮತ್ತು ಪಿಕೋಮ್ ಮೀಟರ್ಸ್ ಗಳನ್ನು ಒಳಗೊಂಡಿವೆ.

ಉಪಯೋಗಕ್ಕೆ ಹೆಚ್ಚಿನ ವೋಲ್ಟೇಜ್ ಸಂವೇದನೆಯ ಬೇಡಿಕೆಯಿದ್ದು ಮತ್ತು ಮೂಲದ ಪ್ರತಿರೋಧ ಕಡಿಮೆ ಇದ್ದಾಗ, ಅಳತೆಯ ಸೈದ್ಧಾಂತಿಕ ಮಿತಿಗೆ ಹೆಚ್ಚು ಹತ್ತಿರವಿರುವ ಹಂತಗಳಲ್ಲಿ ಅಳತೆ ಮಾಡಲು ನ್ಯಾನೊವೊಲ್ಟ್ ಮೀಟರ್ ಸಮರ್ಥವಾಗಿದೆ.

ಮೂಲದ ಪ್ರತಿರೋಧ ಬೆಲೆಗಳು ಅತ್ಯಂತ ಹೆಚ್ಚಿರುವ (ಟೇರಾ-ಒಮ್ ನಂತಹ) ವೋಲ್ಟೇಜ್ ಗಳನ್ನು ಅಳತೆ ಮಾಡುವಾಗ ಸಾಮಾನ್ಯವಾಗಿ ಅಳತೆಗೆ ಇಲೆಕ್ಟ್ರೋಮೀಟರ್ ಹೆಚ್ಚು ಸೂಕ್ತವಾಗಿದೆ. ಕೆಳ-ಮಟ್ಟದ ವಿದ್ಯುತ್ ಅಳತೆಗಳನ್ನು ಇಲೆಕ್ಟ್ರೋಮೀಟರ್ ಅಥವಾ ಪಿಕೋಮ್ ಮೀಟರ‍್ನಿಂದ ಮಾಡಲಾಗುತ್ತದೆ.

ವಿದ್ಯುತ್ಕೋಶ(ವಿದ್ತ್ಯುತ್ ಸಂಚಯನದ ವಸ್ತು)

ಬದಲಾಯಿಸಿ

ನಿರಂತರತೆ ಮತ್ತು ಅತ್ಯಂತ ಕಡಿಮೆ ಪ್ರಮಾಣದ ಪ್ರತಿರೋಧ ರೀಡಿಂಗ್‍ಗಳಿಗಾಗಿ ಹಸ್ತಾಧಾರಿತ ಮೀಟರ‍್ಗಳು ವಿದ್ಯುತ್ಕೋಶ ಅಥವಾ ವಿದ್ಯುತ್ಕೋಶಗಳನ್ನು ಬಳಸುತ್ತವೆ, ಮತ್ತು ವಿದ್ಯುತ್ಕೋಶ ಡಿಜಿಟಲ್ ಮಲ್ಟಿಮೀಟರ್ ಅಥವಾ FET-VOM ನಲ್ಲಿನ ಎಂಪ್ಲಿಫಯರ್ ನ ಶಕ್ತಿ ಸಹ ಆಗಿರಬಹುದು. ಪರೀಕ್ಷೆಗೆ ತನ್ನ ಸ್ವಂತ ವೋಲ್ಟೇಜನ್ನು ಒದಗಿಸುವುದರ ಮೂಲಕ, ಇದು ಮುಖ್ಯ ವಿದ್ಯುತ್ ಮೂಲಕ್ಕೆ ಸಂಪರ್ಕವಿಲ್ಲದ ಸಾಧನವನ್ನು ಮೀಟರ್ ಪರೀಕ್ಷಿಸಲು ಅವಕಾಶ ಕಲ್ಪಿಸುತ್ತದೆ. ಇದು ಮಲ್ಟಿಮೀಟರಿನ ಮುಖ್ಯ ಸುರಕ್ಷಿತ ವೈಶಿಷ್ಟ್ಯಗಳಲ್ಲಿ ಒಂದು.

1.5 ವೋಲ್ಟ್ AA ವಿದ್ಯುತ್ಕೋಶ ವಿಶಿಷ್ಟವಾಗಿದೆ; ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಹೆಚ್ಚು ಕೃತಕವಾದ ಮೀಟರ‍್ಗಳು ಕೆಲವು ಪ್ರಕಾರದ ರೀಡಿಂಗ್‍ಗಳಿಗೆ ಸಾಮಾನ್ಯವಾಗಿ 9 ವೋಲ್ಟ್ ವಿದ್ಯುತ್ಕೋಶವನ್ನು ಬಳಸುತ್ತಾರೆ, ಅಥವಾ ಅಧಿಕ ಪ್ರತಿರೋಧ ಪರೀಕ್ಷೆಗೆ ಅಧಿಕ-ವೋಲ್ಟೇಜಿನ ವಿದ್ಯುತ್ಕೋಶಗಳನ್ನು ಬಳಸಲಾಗುತ್ತದೆ.

ಮೀಟರ‍್ಗಳು ಅಪಾಯಕರ ಸ್ಥಳಗಳಲ್ಲಿ ಪರೀಕ್ಷಿಸಲು ಅಥವಾ ಬ್ಲಾಸ್ಟಿಂಗ್ ಸರ್ಕೀಟಿನಲ್ಲಿ ಬಳಸಲು ಸುರಕ್ಷತೆಯ ಪ್ರಮಾಣವನ್ನು ನಿಯಂತ್ರಿಸಲು ತಯಾರಕರು-ನಮೂದಿಸಿದ ವಿದ್ಯುತ್ಕೋಶದ ಅವಶ್ಯಕತೆ ಇರಬಹುದು.

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. http://www.glias.org.uk/news/237news.html
  2. ೨.೦ ೨.೧ www.gracesguide.co.uk / AVO
  3. Fluke Manufacturing. "Fluke DTX CableAnaylzer Series". Archived from the original on 2007-04-08. Retrieved 2007-01-28.
  4. Milton Kaufman. Handbook of electronics calculations for engineers and technicians. McGraw-Hill.
  5. Horn, Delton (1993). How to Test Almost Everything Electronic. McGraw-Hill/TAB Electronics. pp. 4–6. ISBN 0830641270.
  6. "A Precision Current Adapter for Multimeters (Silicon Chip magazine April 2009)". alternatezone.com. Archived from the original on 2009-07-15. Retrieved 2009-09-22.
  7. Extech Instruments. "Extech 5 MHz Dual Channel Multiscope". Archived from the original on 2006-12-08. Retrieved 2007-01-28.
  8. Snap-on Incorporated. "MT596AK Automotive Digital Multimeter". Archived from the original on 2007-03-11. Retrieved 2007-01-28.
  9. Extech Instruments. "Extech Dual Channel, Datalogging multimeter". Archived from the original on 2006-12-08. Retrieved 2007-01-28.
  10. Siborg Systems Inc. "Digital Multimeter Smart Tweezers from Siborg". Retrieved 2008-04-23.
  11. Advance Devices Inc. "Smart Tweezers LCR Digital Multimeter" (PDF). Archived from the original (PDF) on 2007-01-09. Retrieved 2009-01-20.
  12. Fluke Manufacturing. "Logging and analyzing events with FlukeView Forms Software" (PDF). Archived from the original (PDF) on 2007-03-18. Retrieved 2007-01-28.
  13. "Gauging the impact of DVMs". EETimes.com. Archived from the original on 2008-08-27. Retrieved 2008-01-26.
  14. Dyer, Stephen (2001). Survey of Instrumentation and Measurement. p. 286. ISBN 047139484X.
  15. ಫ್ರಾಂಕ್ ಸ್ಪಿಟ್ಜರ್ ಅಂಡ್‌ ಬ್ಯಾರಿ ಹೊರ್ವಾತ್ಪ್ರಿನ್ಸಿಪಲ್ ಆಫ್ ಮಾಡರ್ನ್ ಇನ್ಟ್ರುಮೆಂಟೇಶನ್ , ಹಾಲ್ಟ್, ರಿನೆಹಾರ್ಟ್ ಅಂಡ್‌ ವಿನ್ಸ್ಟನ್ Inc., ನ್ಯೂಯಾರ್ಕ್ 1972, ನಂ ISBN, ಲೈಬ್ರರಿ ಆಫ್ ಕಾಂಗ್ರೆಸ್ 72-77731, ಪುಟ 39
  16. "The Incomplete Idiot's Guide to VTVMs". tone-lizard.com. Archived from the original on 2003-10-06. Retrieved 2007-01-28.
  17. Safety requirements for electrical equipment for measurement, control and laboratory use. General requirements. 1993. ISBN 0580224333.
  18. Mullin, Ray (2005). Electrical Wiring: Residential. Thompson Delmar Learning. p. 6. ISBN 1401850200.


ಹೊರಗಿನ ಕೊಂಡಿಗಳು

ಬದಲಾಯಿಸಿ