ಮನೋವಿಜ್ಞಾನದ ಅಥವಾ ಮನೋಶಾಸ್ತ್ರದ ಸಿದ್ಧಾಂತಗಳನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯ ಮಾನಸಿಕ ಸಮಸ್ಯೆಗಳನ್ನು ನಿವಾರಿಸುವ ವಿಧಾನಗಳಿಗೆ ಸೈಕೋಥೆರಪಿ ಅಥವಾ ಮನೋಚಿಕಿತ್ಸೆ ಅಥವಾ ಮಾನಸಿಕ ಚಿಕಿತ್ಸೆ ಎಂದು ಹೆಸರು. ಈ ವಿಧಾನಗಳ ತರಬೇತಿಯನ್ನು ಪಡೆದು, ಅವುಗಳನ್ನು ವೃತ್ತಿಯಲ್ಲಿ ಉಪಯೋಗಿಸುವವರನ್ನು ಥೆರಪಿಸ್ಟ್ ಅಥವಾ ಮನೋಚಿಕಿತ್ಸಕ ಎನ್ನುತ್ತಾರೆ. ವ್ಯಕ್ತಿಯ ಮಾನಸಿಕ, ಭಾವಾತ್ಮಕ ಸಮಸ್ಯೆಗಳನ್ನು ನಿವಾರಿಸಿ ಆತನ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದು ಮನೋಚಿಕಿತ್ಸೆಯ ಮೂಲೋದ್ದೇಶಗಳಲ್ಲೊಂದು. ಆತನ ತೊಂದರೆ ಉಂಟುಮಾಡುವ ವರ್ತನೆಗಳು, ನಂಬಿಕೆಗಳು, ಭಾವನೆಗಳು, ಯೋಚನೆಗಳನ್ನು ಸರಿಪಡಿಸುವುದು, ಸಂಬಂಧಗಳನ್ನು ಸುಧಾರಿಸುವುದು ಮತ್ತು ಆತನ ಸಾಮಾಜಿಕ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು ಮನೋಚಿಕಿತ್ಸೆಯ ಗುರಿಗಳು. ಇಂದು ನೂರಾರು ಮನೋಚಿಕಿತ್ಸಾ ವಿಧಾನಗಳಿವೆ. ಇದರಲ್ಲಿ ಹಲವು ಚಿಕಿತ್ಸೆಗಳ ನಡುವೆ ಚಿಕ್ಕ ಪುಟ್ಟ ವ್ಯತ್ಯಾಸಗಳಿದ್ದರೆ, ಕೆಲವು ಚಿಕಿತ್ಸೆಗಳು ಮನೋವಿಜ್ಞಾನದ ಬೇರೆಯದೇ ಸಿದ್ಧಾಂತಗಳನ್ನು ಆಧರಿಸಿವೆ. ಭಾಗಶಃ ಚಿಕಿತ್ಸೆಗಳಲ್ಲಿ ಥೆರಪಿಸ್ಟ್ ಮತ್ತು ಸಮಸ್ಯೆ ಇರುವ ವ್ಯಕ್ತಿಯ ನಡುವೆ ಭೇಟಿಯಿದ್ದರೆ, ಕೆಲವು ಚಿಕಿತ್ಸೆಗಳನ್ನು ಗುಂಪುಗಳಲ್ಲಿ ನಡೆಸಲಾಗುತ್ತದೆ. ಇನ್ನು ಕೆಲವು ಕುಟುಂಬಗಳನ್ನು ಒಳಗೊಂಡಿರುತ್ತವೆ. ಥೆರಪಿಸ್ಟ್‌ಗಳು ಮನೋವೈದ್ಯಕೀಯ ವೃತ್ತಿಯವರಿರಬಹುದು ಅಥವಾ ಬೇರೆ ಯಾವುದೇ ವೃತ್ತಿಯಲ್ಲಿದ್ದು ಮನೋಚಿಕಿತ್ಸೆಯ ತರಬೇತಿ ಪಡೆದಿರಬಹುದು. ಆಯಾ ದೇಶ, ರಾಜ್ಯಗಳ ಕಾನೂನಿನ ರೀತ್ಯಾ ಮನೋಚಿಕಿತ್ಸೆಯು ಕಾನೂನಿನ ನಿಯಂತ್ರಣದಲ್ಲಿರಬಹುದು ಅಥವಾ ಇಲ್ಲದೇ ಇರಬಹುದು.

ಇತಿಹಾಸಸಂಪಾದಿಸಿ

ಸಾವಿರಾರು ವರ್ಷಗಳಿಂದ ವೈದ್ಯರು, ದಾರ್ಶನಿಕರು, ಸಾಧು-ಸಂತರು ಮತ್ತು ಇನ್ನೂ ಮುಂತಾದ ಜನರು ಮಾನಸಿಕ ವಿಧಾನಗಳನ್ನು ಬಳಸಿ ಸಮಸ್ಯೆಗಳನ್ನು ಗುಣಪಡಿಸುತ್ತಿದ್ದರು. ಇದರಿಂದ ಮನೋಚಿಕಿತ್ಸೆಯು ಸಾವಿರಾರು ವರ್ಷ ಹಳೆಯದು ಎನ್ನಬಹುದು.[೧][೨]
೧೯ನೇ ಶತಮಾನದ ಹೊತ್ತಿಗೆ ಪಶ್ಚಿಮದೇಶಗಳಲ್ಲಿ ಮೋರಲ್ ಟ್ರೀಟ್‍ಮೆಂಟ್ (moral treatment, ಇಲ್ಲಿ moral ಎಂದರೆ ಮಾನಸಿಕ ಎಂದರ್ಥ) ಎಂಬ ಚಳವಳಿಯು ಪ್ರಾರಂಭವಾಯಿತು. ಇದು ನಿರ್ಭೇದನಾ ಚಿಕಿತ್ಸಾ ವಿಧಾನಗಳ ಮೇಲೆ ಅವಲಂಬಿತವಾಗಿತ್ತು.[೩] ಫ಼್ರಾನ್ಸ್‌ ಮೆಸ್‍ಮರ್ ಎಂಬುವನಿಂದ ಮೆಸ್ಮರಿಸಮ್ (mesmerism) ಎಂಬ ಇನ್ನೊಂದು ಆಂದೋಲನವು ಪ್ರಾರಂಭವಾಯಿತು. ನಂತರ ಇದು "ಕ್ರಿಯಾತ್ಮಕ ಮನೋವಿಜ್ಞಾನ", "ಮನೋವೈದ್ಯಶಾಸ್ತ್ರ" ಹಾಗೂ ವಶೀಕರಣದ ಸಿದ್ಧಾಂತಗಳ ಮೇಲೆ ಬಹಳವಾದ ಪ್ರಭಾವ ಬೀರಿತು.[೪][೫] ೧೮೫೩ರಲ್ಲಿ ವಾಲ್ಟರ್ ಕೂಪರ್ ಡೆಂಡಿಯು ರೋಗಿಗಳ ದೈಹಿಕ ತೊಂದರೆಗಳನ್ನು ಅವರ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರಿ ಸರಿಪಡಿಸಬಹುದೆಂದು ಹೇಳಿದನು. ಈ ಚಿಕಿತ್ಸಾ ವಿಧಾನಕ್ಕೆ "psycho-therapeia" ಎಂದನು.[೬][೭] ವಶೀಕರಣದ ಮೂಲಕ ಮನಸ್ಸನ್ನು ಬಳಸಿ ದೇಹವನ್ನು ಗುಣಪಡಿಸುವ ಅರ್ಥದಲ್ಲಿ "ಸೈಕೋಥೆರಪಿ" ಪರಿಕಲ್ಪನೆಯನ್ನು "ನ್ಯಾನ್ಸಿ ಶಾಲೆಯ" (Nancy) ಹಿಪ್ಪೋಲೈಟ್ ಬರ್ನ್‍ಹೈಮ್ ಮತ್ತು ಸಹೋದ್ಯೋಗಿಗಳು ಬೆಳೆಸಿದರು. 1889ರ ಚಾರ್ಲ್ಸ್ ಲ್ಲಾಯ್ಡ್ ಟಕಿಯ "Psycho-therapeutics, or Treatment by Hypnotism and Suggestion " ಎಂಬ ಪುಸ್ತಕವು ನ್ಯಾನ್ಸಿ ಶಾಲೆಯ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿತು.[೮] 1889ರಲ್ಲಿ "Clinique de Psycho-thrapeutique Suggestive" ಎಂದು ಒಂದು ಚಿಕಿತ್ಸಾಲಯವು ಮೊದಲಬಾರಿಗೆ ಹೆಸರಿನಲ್ಲಿ ಬಳಸಿಕೊಂಡಿತು. 1896ರಲದಲ್ಲಿ ಜರ್ಮನಿಯ "Zeitschrift für Hypnotismus, Suggestionstherapie, Suggestionslehre und verwandte psychologische Forschungen" ಪತ್ರಿಕೆಯು ತನ್ನ ಹೆಸರನ್ನು "Zeitschrift für Hypnotismus, Psychotherapie sowie andere psychophysiologische und psychopathologische Forschungen" ಎಂದು ಬದಲಾಯಿಸಿತು. ಇದು ಪ್ರಾಯಶಃ ಮೊದಲಬಾರಿಗೆ ಒಂದು ಪತ್ರಿಕೆಯು ಸೈಕೋಥೆರಪಿ ಶಬ್ದವನ್ನು ಬಳಸಿದ್ದಿರಬೇಕು. ಹೀಗೆ ಪ್ರಾರಂಭದಲ್ಲಿ ಮಾನಸಿಕವಾದ ಅಥವಾ ವಶೀಕರಣದ ಪ್ರಭಾವದಿಂದ ಅಥವಾ ಸಲಹೆಯ ಮೂಲಕ ರೋಗಗಳನ್ನು ಗುಣಪಡಿಸುವುದಕ್ಕೆ ಸೈಕೋಥೆರಪಿ ಅಥವಾ ಮನೋಚಿಕಿತ್ಸೆ ಎಂದರ್ಥವಿತ್ತು. ಸಿಗ್ಮಂಡ್ ಫ್ರಾಯ್ಡನು ನ್ಯಾನ್ಸಿ ಶಾಲೆಯನ್ನು ಭೇಟಿಮಾಡಿದ ನಂತರ ತನ್ನ ನರವಿಜ್ಞಾನದ ವೃತ್ತಿಯಲ್ಲಿ ವಶೀಕರಣವನ್ನು ಬಳಸುತ್ತಿದ್ದನು. ನಂತರದ ದಿನಗಳಲ್ಲಿ ತನ್ನ ಗುರುವಾದ ಜೋಸೆಫ್ ಬ್ರಾಯರ್‍ನ ಕೃತಿಯಿಂದ ಪ್ರಭಾವಿತನಾಗಿ ತನ್ನ ಚಿಕಿತ್ಸೆಯ ಗಮನವನ್ನು ಬದಲಾಯಿಸಿದನು. ಬಾಲ್ಯದ ಅನುಭವಗಳಿಂದ ಮತ್ತು ಸುಪ್ತ ಮನಸ್ಸಿನಿಂದ (Unconscious mind) ಉಂಟಾದ ಮಾನಸಿಕ ಕಾರಣಗಳುಳ್ಳ ಪರಿಸ್ಥಿತಿಗಳ ಮೇಲೆ ಗಮನ ಹರಿಸತೊಡಗಿದ. ನಂತರ free association, ಸ್ವಪ್ನ ವ್ಯಾಖ್ಯಾನ (dream interpretation), ವರ್ಗಾವಣೆ (transference), ಎಂಬ ತಂತ್ರಗಳನ್ನು, ಇದ್(id), ಇಗೊ(ego) ಮತ್ತು ಸೂಪರ್ ಇಗೊ (superego) ಇವುಗಳ ವಿಶ್ಲೇಷಣೆಯನ್ನೂ ಬೆಳೆಸಿದನು. ಅವನು ಬಳಸಿದ ಮನೋವಿಶ್ಲೇಷಣೆ (psychoanalysis) ಎಂಬ ಪದದಿಂದ ಸೈಕೋಥೆರಪಿಯ ಪಿತಾಮಹ ಎಂಬ ಬಿರುದು ಪ್ರಾಪ್ತವಾಯಿತು. ಈ ಪದವನ್ನು ಅವನು ವಿಸ್ತಾರವಾದ ಸಿದ್ಧಾಂತಗಳು ಮತ್ತು ತಂತ್ರಗಳಿಗೆ ಅನ್ವಯಿಸಿದುದು ಅವನನ್ನು "ಸೈಕೋಥೆರಪಿಯ ಪಿತಾಮಹ" ಎಂದು ಕರೆಯುವಲ್ಲಿ ಬಹುಮುಖ್ಯವಾಯಿತು. Alfred Adler, Carl Jung, Karen Horney, Anna Freud, Otto Rank, Erik Erikson, Melanie Klein and Heinz Kohut, ಮುಂತಾದ ಫ್ರಾಯ್ಡನ ಹಿಂಬಾಲಕ ಸಿದ್ಧಾಂತಿಗಳು ಅವನ ತಳಹದಿಯ ಮೇಲೆ ತಮ್ಮದೇ ಮನೋಚಿಕಿತ್ಸೆಯ ವಿಧಾನಗಳನ್ನು ಬೆಳೆಸಿದರು. ಇವೆಲ್ಲವುಗಳನ್ನು ಒಟ್ಟುಗೂಡಿಸಿ ಸೈಕೋಡೈನಾಮಿಕ್ (psychodynamic) ವಿಧಾನಗಳೆಂದು ವರ್ಗೀಕರಿಸಲಾಯಿತು. ತನ್ನ ಹಾಗು ತನ್ನೊಂದಿಗಿನ ಬಾಹ್ಯಸಂಬಂಧಗಳ ಮೇಲೆ ಚೇತನದ ಅರಿವು ಮತ್ತು ಸುಪ್ತಪ್ರಜ್ಞೆಯ ಪ್ರಭಾವವಿರುವ ಯಾವುದನ್ನೂ ಸೈಕೋಡೈನಾಮಿಕ್ ಎನ್ನಬಹುದು. ಮನೋವಿಶ್ಲೇಷಣೆಯ ವಿಧಾನದಲ್ಲಿ ಹಲವು ವರ್ಷಗಳಲ್ಲಿ ನೂರಾರು ಭೇಟಿಗಳು ಅಗುತ್ತಿದ್ದವು. 1920ರಲ್ಲಿ ವರ್ತನಾಶಾಸ್ತ್ರವು (Behaviorism) ಅಭಿವೃದ್ಧಿಗೊಂಡಿತು ಮತ್ತು ವರ್ತನಾ ಬದಲಾವಣೆಯು (Behavior modification) ಒಂದು ಚಿಕಿತ್ಸೆಯಾಗಿ 1950-60ರಲ್ಲಿ ಜನಪ್ರಿಯವಾಯಿತು. ಈ ಚಿಕಿತ್ಸೆಯ ಬೆಳವಣಿಗೆಯಲ್ಲಿ ದಕ್ಷಿಣ ಆಫ್ರಿಕಾದ ಜೋಸೆಫ್ ವೋಲ್ಪೆ, ಬ್ರಿಟನ್ನಿನ ಎಮ್.ಬಿ.ಶಿಪಿರೊ ಮತ್ತು ಹಾನ್ಸ್ ಐಸೆಂಕ್[೯], ಅಮೆರಿಕೆಯ ಜಾನ್.ಬಿ.ವಾಟ್ಸನ್ ಮತ್ತು ಬಿ.ಎಫ್.ಸ್ಕಿನ್ನರ್ ಇವರುಗಳ ಕೊಡುಗೆ ಉಲ್ಲೇಖನೀಯ. operant conditioning, classical conditioning ಮತ್ತು socila learning theory ಇವುಗಳ ತತ್ವಗಳನ್ನಾಧರಿಸಿ ಗಮನಿಸಬಹುದಾದ ಸಮಸ್ಯೆಯ ಲಕ್ಷಣಗಳಲ್ಲಿ ಬದಲಾವಣೆಯನ್ನು ತರುವುದು ವರ್ತನಾ ಚಿಕಿತ್ಸೆಯ (Behavioral therapy) ವಿಧಾನ. ಯುರೋಪಿನ ಅಸ್ತಿತ್ವವಾದದಿಂದ (existential philosophy) ಪ್ರಭಾವಿತಗೊಂಡು ರೋಗಿ-ಚಿಕಿತ್ಸಕ ಸಂಬಂಧವು ಚಿಕಿತ್ಸಾ ವಿಚಾರಣೆಯ ಪ್ರಮುಖ ಭಾಗವಾಯಿತು. ೧೯೫೦ರ ದಶಕದಲ್ಲಿ ಕಾರ್ಲ್ ರೋಜರ್ಸ್‌ನು ಈ ವಿಚಾರಸರಣಿಯನ್ನು ಸೈಕೋಥೆರಪಿಯಲ್ಲಿ ಪ್ರಾರಂಭಿಸಿದನು. ಅಬ್ರಹಾಂ ಮಾಸ್ಲೋವ್‍ನ ಕೃತಿಗಳಿಂದ ಆಧಾರಿತನಾಗಿ ಅವನು person-centered psychotherapyಯನ್ನು ಮುಖ್ಯವಾಹಿನಿಯ ಗಮನಕ್ಕೆ ತಂದನು. ನಿರ್ಬಂಧವಿಲ್ಲದ ಧನಾತ್ಮಕ ಮನ್ನಣೆ (unconditional positive regard), ಸಮಾನತೆ(??)(congruence) ಮತ್ತು ಪರಾನುಭೂತಿಯ ಅರಿವು (empathic understanding) ಇವುಗಳನ್ನು ತನ್ನ ಚಿಕಿತ್ಸನಿಂದ ಥೆರಪಿ ಬಯಸುವ ವ್ಯಕ್ತಿಯು ಕರಾರಿನಂತೆ ಪಡೆಯಬೇಕೆಂಬುದು ಈ ಕ್ರಮದ ಪ್ರಧಾನ ಅವಶ್ಯಕತೆ. ಇಂತಹ ಪ್ರತಿಕ್ರಿಯೆಯಿಂದ ವ್ಯಕ್ತಿಯು ಸಂಪೂರ್ಣವಾಗಿ ಅನುಭವಿಸಿ ತನ್ನ ಭಾವನೆಗಳನ್ನು ಪ್ರಕಟಗೊಳಿಸಬಲ್ಲನು. ಹಾಗೆಯೇ ತನ್ನ ಸಾಮರ್ಥ್ಯಕ್ಕೆ ತಕ್ಕಹಾಗೆ ಬೆಳೆಯಬಲ್ಲನು. ಈ ಪಂಥವನ್ನು ಇತರರು ಇನ್ನೂ ಬೆಳೆಸಿದರು. ಉದಾಹರಣೆಗೆ, ಫ಼್ರಿಟ್ಸ್ ಮತ್ತು ಲಾರಾ ಪರ್ಲ್ಸ್‌ರ ಗೆಸ್ಟಾಲ್ಟ್ ಥೆರಪಿ (Gestalt Therapy), ಮಾರ್ಷಲ್ ರೊಸೆನ್‍ಬರ್ಗ್‍ರ ಅಹಿಂಸಾ ಸಂವಾದ (Nonviolent communication) ಮತ್ತು ಎರಿಕ್ ಬರ್ನ್‍ರ ಟ್ರಾನ್ಸ್ಯಾಕ್ಶನಲ್ ಅನಾಲಿಸಿಸ್ (Transactional Analysis). ಮುಂದೆ ಈ ಪಂಥಗಳು ಮಾನವತಾವಾದಿ ಸೈಕೋಥೆರಪಿಯೆಂದು (humanistic psychotherapy) ಕರೆಸಿಕೊಂಡವು. ೧೯೫೦ರ ದಶಕದಲ್ಲಿ ಆಲ್ಬರ್ಟ್ ಎಲ್ಲಿಸ್‍ನು Rational Emotive Behavior Therapy (REBT) ಯನ್ನು ಹುಟ್ಟುಹಾಕಿದನು. ಹಲವು ವರ್ಷಗಳ ನಂತರ ಆರೋನ್.ಟಿ.ಬೆಕ್‍ನು (Aaron T. Beck) ಸ್ವತಂತ್ರವಾಗಿ cognitive therapy ಎಂಬ ಕ್ರಮವನ್ನು ಅಭಿವೃದ್ದಿಪಡಿಸಿದನು. ಸೈಕೋಡೈನಾಮಿಕ್ ಅಥವಾ ಮಾನವತಾವಾದಿ ಪಂಥಗಳ ದೀರ್ಘಾವಧಿಯ, ಒಳನ್ನೋಟವನ್ನಾಧಾರಿತ ರೀತಿಗಳಿಗೆ ಹೋಲಿಸಿದರೆ ಈ ಎರಡೂ ಪಂಥಗಳು ಅಲ್ಪಾವಧಿಯ, ವ್ಯವಸ್ಥಿತವಾದ ಮತ್ತು ವರ್ತಮಾನವನ್ನು ಕೇಂದ್ರೀಕರಿಸಿದ ತಂತ್ರಗಳನ್ನು ಒಳಗೊಂಡಿದ್ದವು. ವ್ಯಕ್ತಿಯ ನಂಬಿಕೆಗಳನ್ನು ಗುರುತಿಸಿ, ಅವನ್ನು ಬದಲಾಯಿಸುವುದು ಈ ತಂತ್ರಗಳ ಗುರಿಗಳಲ್ಲೊಂದು. ೧೯೭೦ರ ಹೊತ್ತಿಗೆ Cognitive Behavioral Therapy ಎಂಬ ಶೀರ್ಷಿಕೆಯಡಿ cognitive ಮತ್ತು behavioral ಥೆರಪಿಗಳನ್ನು ಒಂದು ಗುಂಪುಮಾಡಿ ಒಗ್ಗೂಡಿಸಲಾಯಿತು. CBTಯಲ್ಲಿನ ಅನೇಕ ಪಥಗಳು ವ್ಯಕ್ತಿಯ ಮೂಲನಂಬಿಕೆಗಳನ್ನು ಮತ್ತು ನಿಷ್ಕ್ರಿಯಗೊಳಿಸುವ ರಚನೆಗಳನ್ನು ಗುರುತಿಸಿ, ಬದಲಾಯಿಸುವತ್ತ ಗುರಿಯಿಟ್ಟಿವೆ. ಈ ಪಥಗಳು ಅನೇಕ ಬಗೆಯ ಅಸ್ವಸ್ಥತೆಗಳನ್ನು ನಿವಾರಿಸುವುದಕ್ಕೆ ಪ್ರಧಾನ ಚಿಕಿತ್ಸೆಯಾಗಿ ವ್ಯಾಪಕ ಮನ್ನಣೆಯನ್ನು ಪಡೆದವು. ಆಧುನಿಕೋತ್ತರ ಸೈಕೋಥೆರಪಿಗಳು (ಉದಾ: Narrative Therapy, Coherence Therapy) ಮಾನಸಿಕ ಆರೋಗ್ಯ, ಅನಾರೋಗ್ಯಗಳನ್ನು ಆರೋಪಿಸದೆ, ವ್ಯಕ್ತಿಯು ಸಾಮಾಜಿಕ ನೆಲೆಗಟ್ಟಿನಲ್ಲಿ ಯಾವುದನ್ನು ರೂಪಿಸಿಕೊಳ್ಳುತ್ತಾನೋ ಅದನ್ನೇ ಥೆರಪಿಯ ಗುರಿ ಎಂದು ವ್ಯಾಖ್ಯಾನಿಸಿದವು. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಬೆಳೆದ ಅನೇಕ ಪಂಥಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಿದೆ - Systems Therapy, Transpersonal psychology, Feminist therapy, Brief therapy, Somatic Psychology, Expressive therapy, Positive psychology ಮತ್ತು Human Givens approach.

ಸೈಕೋಥೆರಪಿಯ ಬಗೆಗಳುಸಂಪಾದಿಸಿ

ಪಕ್ಷಿನೋಟಸಂಪಾದಿಸಿ

ಇಂದು ನೂರಾರು ಸೈಕೋಥೆರಪಿಯ ಚಿಕಿತ್ಸಾ ವಿಧಾನಗಳಿವೆ. ೧೯೮೦ರ ಹೊತ್ತಿಗೆ ೨೫೦ಕ್ಕಿಂತ ಹೆಚ್ಚು ಚಿಕಿತ್ಸೆಗಳಿದ್ದವು.[೧೦] ೧೯೯೬ರ ಹೊತ್ತಿಗೆ ೪೫೦ಕ್ಕಿಂತ ಹೆಚ್ಚು ವಿಧಾನಗಳಿದ್ದವು.[೧೧] ೨೧ನೇ ಶತಮಾನದ ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ಹೆಸರಿಸಲ್ಪಡಬಹುದಾದ ಸೈಕೋಥೆರಪಿ ಚಿಕಿತ್ಸೆಗಳಿವೆ. ಇದರಲ್ಲಿ ಹಲವು ಚಿಕಿತ್ಸೆಗಳ ನಡುವೆ ಚಿಕ್ಕ ಪುಟ್ಟ ವ್ಯತ್ಯಾಸಗಳಿದ್ದರೆ, ಕೆಲವು ಚಿಕಿತ್ಸೆಗಳು ಮನೋವಿಜ್ಞಾನದ ಬೇರೆಯದೇ ಸಿದ್ಧಾಂತಗಳನ್ನು ಆಧರಿಸಿವೆ.[೧೨][೧೩]
ಅನುಭವಸ್ಥ ಥೆರಪಿಸ್ಟ್‌ಗಳು ಯಾವುದೇ ಒಂದು ಪಂಥವನ್ನು ಅದರ ಶುದ್ಧರೂಪದಲ್ಲಿ ಬಳಸಿ ಥೆರಪಿ ಮಾಡುವುದಿಲ್ಲ. ಬದಲಾಗಿ, ಹಲವು ಪಂಥಗಳಿಂದ ವಿವಿಧ ತಂತ್ರಗಳನ್ನು ಉಪಯೋಗಿಸುತ್ತಾರೆ.[೧೪][೧೫] ಸದ್ಯದ ಒಂದು ನಿರ್ದಿಷ್ಟ ಸಮಸ್ಯೆ ಮತ್ತು ಪರಿಹಾರ ಕೇಂದ್ರೀಕೃತ ವಿಧಾನಗಳಿಗೆ ಒತ್ತು ಕೊಡುವ ಚಿಕಿತ್ಸೆಯ ಪಥಗಳು Brief Therapy ಎಂಬ ಶೀರ್ಷಿಕೆಯಡಿ ಕಂಡುಬರುತ್ತವೆ.
ಚಿಕಿತ್ಸೆಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಿಸಬಹುದು. ವೈದ್ಯಕೀಯ ಪರಿಕಲ್ಪನೆ ಮತ್ತು ಮಾನವತಾವಾದಿ ಪರಿಕಲ್ಪನೆಯೆಂದು ವ್ಯಕ್ತಿಯನ್ನು ಪರಿಗಣಿಸುವ ರೀತಿಯ ಮೇಲೆ ವರ್ಗೀಕರಿಸಬಹುದು. ವೈದ್ಯಕೀಯ ಪರಿಕಲ್ಪನೆಯಲ್ಲಿ ವ್ಯಕ್ತಿಯು ಅಸ್ವಸ್ಥನೆಂದು ತಿಳಿದು ಅವನನ್ನು ಆರೋಗ್ಯಕರನನ್ನಾಗಿಸಲು ಥೆರಪಿಸ್ಟನು ತನ್ನೆಲ್ಲಾ ಕೌಶಲ್ಯಗಳನ್ನು ಬಳಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧವಾಗಿ ಮಾನವತಾವಾದಿ ಪರಿಕಲ್ಪನೆಯಲ್ಲಿ ವ್ಯಕ್ತಿಯ ಸ್ಥಿತಿಯನ್ನು ರೋಗಲಕ್ಷಣಮುಕ್ತವಾಗಿರಿಸಲು ಶ್ರಮಿಸುತ್ತಾರೆ. ಇಲ್ಲಿ ಥೆರಪಿಸ್ಟ್ ಕೇವಲ ಸಹಾಯಕನಾಗಿ ವ್ಯಕ್ತಿಯ ಆನುಭಾವಿಕ ಕಲಿಕೆಗೆ ಯುಕ್ತವಾದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾನೆ. ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ ತನ್ನನ್ನು ತಾನು ಅರಿತುಕೊಳ್ಳಲು ಸಹಾಯ ಮಾಡುತ್ತಾನೆ.
ದಾಂಪತ್ಯ ಚಿಕಿತ್ಸೆ ಮತ್ತು ಕೌಟುಂಬಿಕ ಚಿಕಿತ್ಸೆಗಳನ್ನೊಳಗೊಂಡ ಥೆರಪಿ ಗ್ರೂಪ್ ಹಾಗೂ ವೈಯಕ್ತಿಕವಾದ ಭೇಟಿಗಳೆಂದು ವರ್ಗೀಕರಿಸಬಹುದು.
ಚಿಕಿತ್ಸೆಯ ತತ್ವಗಳನ್ನಾಧರಿಸಿ ಈ ಕೆಳಗಿನ ವರ್ಗೀಕರಣವನ್ನು ಮಾಡಬಹುದು:[೧೬]

 • ವ್ಯಕ್ತಿಯ ಹಿನ್ನೆಲೆಗೆ ಒತ್ತುಕೊಡುವ ಪಂಥಗಳು
 • ಭಾವನೆಗಳು ಮತ್ತು ಸಂವೇದನೆಗಳಿಗೆ ಪ್ರಾಧಾನ್ಯವಿರುವ ಪಂಥಗಳು
 • ಆಲೋಚನೆಗೆ ಒತ್ತುಕೊಡುವ ಪಂಥಗಳು
 • ಕಾರ್ಯಗಳಿಗೆ ಒತ್ತುಕೊಡುವ ಪಂಥಗಳು
 • ಏಕೀಕರಣಗೊಂಡ (Integrated) ಮತ್ತು ಸಾರಸಂಗ್ರಹಿ (Eclectic) ಪಂಥಗಳು

ಮಾನವತಾವಾದಿ (Humanistic)ಸಂಪಾದಿಸಿ

ಈ ಚಿಕಿತ್ಸಾ ವಿಧಾನಗಳನ್ನು ಆನುಭಾವಿಕವೆಂದೂ ಕರೆಯುತ್ತಾರೆ. ವರ್ತನಾಶಾಸ್ತ್ರ ಮತ್ತು ಮನೋವಿಶ್ಲೇಷಣೆಗಳಿಗೆ ಪ್ರತಿಕ್ರಿಯೆಯಾಗಿ, ಮಾನವತಾಶಾಸ್ತ್ರವನ್ನಾಧಾರಿತವಾಗಿ ಈ ಚಿಕಿತ್ಸೆಗಳು ಹೊರಹೊಮ್ಮಿದವು. ವೈಯಕ್ತಿಕ ಅವಶ್ಯಕತೆಗಳು ಮತ್ತು ಮನುಷ್ಯನ ಅಭಿವೃದ್ಧಿಯೆ ಈ ಚಿಕಿತ್ಸೆಗಳ ಮೂಲೋದ್ದೇಶ. ಇದು ಮೂಲತಃ ಅಸ್ತಿತ್ವವಾದವನ್ನು ಆಧರಿಸಿದೆ.
ವ್ಯಕ್ತಿ ಕೇಂದ್ರೀಕೃತ ಥೆರಪಿಯಲ್ಲಿ ಮುಕ್ತತೆ, ಪರಾನುಭೂತಿ ಮತ್ತು ನಿರ್ಬಂಧವಿಲ್ಲದ ಧನಾತ್ಮಕ ಮನ್ನಣೆ ಇವು ಬಹುಮುಖ್ಯ. ಇದರಿಂದ ವ್ಯಕ್ತಿಯು ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.
ಗೆಸ್ಟಾಲ್ಟ್ ಥೆರಪಿಯು ಜೀವನದ ಸನ್ನಿವೇಶಗಳಲ್ಲಿ ಅರಿವನ್ನು ಮೂಡಿಸುವ ಥೆರಪಿಯ ಒಂದು ಆನುಭಾವಿಕ ಬಗೆ.

ಒಳನೋಟವನ್ನಾಧಾರಿತ (insight-oriented)ಸಂಪಾದಿಸಿ

ಸುಪ್ತಮನಸ್ಸಿನ ಪ್ರಕ್ರಿಯೆಗಳ ಅಂತರಾರ್ಥವನ್ನು ನಿರೂಪಿಸುವುದನ್ನು ಅಥವಾ ಬಹಿರಂಗಪಡಿಸಿವುದನ್ನು ಕೇಂದ್ರೀಕರಿಸುವ ಕ್ರಮಗಳೇ ಒಳನೋಟವನ್ನಾಧಾರಿತ ಥೆರಪಿಗಳು. ಈ ಥೆರಪಿಗಳ ವಿಚಾರಮಾಡುವಾಗ ಸಾಮಾನ್ಯವಾಗಿ ಸೈಕೋಡೈನಾಮಿಕ್ ಥೆರಪಿಯನ್ನು ಉಲ್ಲೇಖಿಸುತ್ತಾರೆ. ಮುಕ್ತ ಸಂವಾದಗಳು (free associations), ಭ್ರಮೆಗಳು ಮತ್ತು ಕನಸುಗಳನ್ನೊಳಗೊಂಡ ರೋಗಿಯ ಆಲೋಚನೆಗಳ ವಾಚನವನ್ನು ಈ ಥೆರಪಿಗಳು ಉತ್ತೇಜಿಸುತ್ತವೆ. ಇವುಗಳಿಂದ ವಿಶ್ಲೇಷಕನು ರೋಗಿಯ ಲಕ್ಷಣಗಳನ್ನು ಮತ್ತು ಸಮಸ್ಯೆಗಳನ್ನುಂಟುಮಾಡುವ ಹಿಂದಿನ ಮತ್ತು ಇಂದಿನ ಸುಪ್ತಮನಸ್ಸಿನಲ್ಲಿರುವ ಸಂಘರ್ಷಗಳ ಸ್ವರೂಪವನ್ನು ನಿರೂಪಿಸುತ್ತಾನೆ.

ಸಂಜ್ಞಾನಾತ್ಮಕ ವರ್ತನಾಶಾಸ್ತ್ರ (Cognitive-behavioral)ಸಂಪಾದಿಸಿ

ವ್ಯಕ್ತಿಯ ಭಾವನಾ ಪ್ರತಿಕ್ರಿಯೆಗಳು, ಅರಿವು ಮತ್ತು ಇತರರೊಡನೆಯ ಪರಸ್ಪರ ಪ್ರತಿಕ್ರಿಯೆಗಳನ್ನು ಸುಧಾರಿಸುವುದಕ್ಕೋಸ್ಕರ ಆತನ ಅನುಚಿತ ವರ್ತನೆಗಳ ಮಾದರಿಯನ್ನು ಬದಲಾಯಿಸಲು ವರ್ತನಾ ಥೆರಪಿಗಳು ವರ್ತನಾತಂತ್ರಗಳನ್ನು ಉಪಯೋಗಿಸುತ್ತವೆ. ವರ್ತನಾ ಥೆರಪಿಗಳು ಸ್ವಭಾವದಿಂದ ಅನುಭವಜನ್ಯ(empirical), ಸಂದರ್ಭೋಚಿತ (contextual), ಉದ್ದೇಶ ಸಾಧಕ (functional), ಸಂಭವನೀಯ (probabilistic), ಏಕತತ್ವವಾದಿ (monistic) ಮತ್ತು ಸಂಬಂಧಾತ್ಮಕವಾಗಿರುತ್ತವೆ (relational). ಭಾವನೆಗಳನ್ನು ಮತ್ತು ವರ್ತನೆಗಳನ್ನು ಸುಧಾರಿಸಲು Cognitive ಥೆರಪಿಯು ಆಲೋಚನೆಗಳನ್ನು ಬದಲಾಯಿಸುವುದನ್ನು ಕೇಂದ್ರೀಕರಿಸುತ್ತದೆ. Cognitive behavioral ಥೆರಪಿಯು ಮೇಲಿನ ಎರಡೂ ಪಂಥಗಳನ್ನು ಒಂದುಗೂಡಿಸುತ್ತದೆ. ವ್ಯಕ್ತಿಗಳ ಅರಿವು, ಭಾವನೆಗಳು ಮತ್ತು ವರ್ತನೆಗಳನ್ನು ರಚಿಸುವುದು ಮತ್ತು ಮರುರಚಿಸುವುದನ್ನು ಕೇಂದ್ರೀಕರಿಸುತ್ತದೆ.

ನೋಡಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. Ancient Classical Roots of Psychology Laura Rehwalt in History of Science, Electrum Magazine, March 2, 2013
 2. Modern Psychology and Ancient Wisdom: Psychological Healing Practices from the World's Religious Traditions Sharon G. Mijares, Routledge, 14 Jan 2014 ISBN 1317788001
 3. The Psychotherapy that was Moral Treatment Carlson, E. & Dain, N. The American Journal of Psychiatry, Volume 117 Issue 6, December 1960, pp. 519-524
 4. Ellenberger, H. F. (1970). The discovery of the unconscious: The history and evolution of dynamic psychiatry. New York: Basic Books.
 5. Gielen, U. P., & Raymond, J. (2015). The curious birth of psychological healing in the Western World (1775-1825): From Gaßner to Mesmer to Puységur. In G. Rich & U. P. Gielen (Eds.), Pathfinders in international psychology (pp. 25-51). Charlotte, NC: Information Age Publishing.
 6. Care of the Psyche: A History of Psychological Healing Stanley W. Jackson. Yale University Press, 1999]
 7. The Oxford Handbook of the History of Medicine Mark Jackson, OUP Oxford, 25 Aug 2011. Pg527
 8. Tuckey, C. Lloyd Psycho-therapeutics, or, Treatment by sleep and suggestion Balliere, Tindall, and Cox. London: 1889
 9. Eysenck, Hans (1952). "The effects of psychotherapy: An evaluation". Journal of Consulting Psychology. 16 (5 319–24): 319–24. doi:10.1037/h0063633. PMID 13000035.
 10. Herink, Richie, ed. (1980). The Psychotherapy Handbook. The A-Z Handbook to More Than 250 Psychotherapies as Used Today. New American Library. ISBN 9780452005259.{{cite book}}: CS1 maint: ref duplicates default (link)[page needed]
 11. Maclennan, Nigel (1996). Counselling For Managers. Gower. ISBN 0566080923.{{cite book}}: CS1 maint: ref duplicates default (link)[page needed]
 12. Twenty-First Century Psychotherapies: Contemporary Approaches to Theory and Practice Jay L. Lebow, John Wiley & Sons, 2012. Introduction. Citing Garfield 2006
 13. Feltham, Colin (1997). Which psychotherapy? Leading Exponents Explain Their Differences. ISBN 0803974795.
 14. Strupp, Hans; Binder, Jeffrey (1984). Psychotherapy in a New Key. New York: Basic Books. ISBN 9780465067473.[page needed]
 15. Roth, Anthony; Fonagy, Peter (2005) [1996]. What Works for Whom? A Critical Review of Psychotherapy Research (rev. ed.). Guilford Press. ISBN 9781572306509.[page needed]
 16. Seligman, Linda; Reichenberg, Lourie W: Theories of Counseling and Psychotherapy