ಮೇಜರ್ ಮನೀಶ್ ಪೀತಾಂಬರೆ ಅವರು ಭಾರತೀಯ ಸೇನೆಯ ಅಧಿಕಾರಿ. ಅವರು ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಪಡೆದಿದ್ದಾರೆ.

ಮೇಜರ್

ಮನೀಶ್ ಪೀತಾಂಬರೆ

ಮೇಜರ್ ಮನೀಶ್ ಪಿತಾಂಬರೆ
ಜನನ೧೯೭೫
ಮರಣನವೆಂಬರ್‌ ೨೭, ೨೦೦೬
ಬಿಜ್‌ಬೆಹರಾ, ಜಮ್ಮು ಮತ್ತು ಕಾಶ್ಮೀರ, ಭಾರತ
ವ್ಯಾಪ್ತಿಪ್ರದೇಶಭಾರತ ಭಾರತ
ಶಾಖೆ ಭಾರತೀಯ ಭೂಸೇನೆ
ಸೇವಾವಧಿ೧೯೯೬–೨೦೦೬
ಶ್ರೇಣಿ(ದರ್ಜೆ) ಮೇಜರ್
ಘಟಕಪಾರಾಚ್ಯೂಟ್‌ ರೆಜಿಮೆಂಟ್ ೩ ನೇ ಬೆಟಾಲಿಯನ್
ಪ್ರಶಸ್ತಿ(ಗಳು) ಕೀರ್ತಿ ಚಕ್ರ

ಶಿಕ್ಷಣ

ಬದಲಾಯಿಸಿ

ಹತ್ತನೇ ತರಗತಿಯಲ್ಲಿ ಸುಮಾರು ೯೦% ಅಂಕಗಳೊಂದಿಗೆ ತೇರ್ಗಡೆಯಾದ ಪೀತಾಂಬರೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಸರ್ವೀಸಸ್ ಪ್ರಿಪರೇಟರಿ ಇನ್‌ಸ್ಟಿಟ್ಯೂಟ್‌ಗೆ (ಎಸ್. ಪಿ. ಐ) ಸೇರಿದರು. ನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್. ಡಿ. ಎ.) ತಯಾರಿ ನಡೆಸಿದರು. [] ಅವರು ಪುಣೆಯಲ್ಲಿರುವ ಎನ್‌ಡಿಎ ಸೇರುವ ಆಶಯವನ್ನು ಹೊಂದಿದ್ದರು ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಗೆ (ಐಎಂಎ) ಸೇರಿದರು. ಅವರು ೧೯೬೬ ರಲ್ಲಿ[] ಭಾರತೀಯ ಸೇನೆಗೆ ನೇಮಕಗೊಂಡರು ಮತ್ತು ತಮ್ಮ ೩೧ನೇ ವರ್ಷ ವಯಸ್ಸಿನಲ್ಲಿಯೇ ಮೇಜರ್ ಆಗಿದ್ದರು.

ಮಿಲಿಟರಿ ವೃತ್ತಿ

ಬದಲಾಯಿಸಿ

ಜುಲೈ ೧೧, ೨೦೦೬ರ ಮುಂಬೈ ರೈಲು ಬಾಂಬ್ ಸ್ಫೋಟದ ಶಂಕಿತನಾದ ಅಲ್-ಬದ್ರ್ ಉಗ್ರಗಾಮಿ ತೌಫಿಕ್ ಅಕ್ಮಲ್ ಅನ್ನು ಪತ್ತೆಹಚ್ಚಿದ ತಂಡದ ಭಾಗವಾಗಿ ಪೀತಾಂಬರೆ ಇದ್ದರು. []

೨೦೦೬ರಲ್ಲಿ ಪೀತಾಂಬರೆ ಅವರು ಪ್ಯಾರಾಚೂಟ್ ರೆಜಿಮೆಂಟ್‌ ೩ ನೇ ಬೆಟಾಲಿಯನ್‌ನೊಂದಿಗೆ ಸೇವೆ ಸಲ್ಲಿಸುತ್ತಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕೌಂಟರ್‌ ಇನ್ಸರ್ಜೆನ್ಸಿ ಕಾರ್ಯಾಚರಣೆಯಲ್ಲಿದ್ದರು. ನವೆಂಬರ್ ೨೭ ೨೦೦೬ರಂದು, ದಕ್ಷಿಣ ಕಾಶ್ಮೀರದ ಬಿಜ್‌ಬೆಹರಾದಲ್ಲಿ ರಾತ್ರಿಯ ಗುಂಡಿನ ಕಾಳಗದಲ್ಲಿ ಪಿತಾಂಬರೆ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್‌ನ ಉನ್ನತ ಕಮಾಂಡರ್‌ಗಳಲ್ಲಿ ಒಬ್ಬನಾದ ಸುಹೇಲ್ ಫೈಜಲ್‌ನನ್ನು ಗುಂಡಿಕ್ಕಿ ಕೊಂದರು. [] ನಂತರ ಅವರು ಅದೇ ಕಾಳಗದಲ್ಲಿ ಕೊಲ್ಲಲ್ಪಟ್ಟರು. []

ಜನವರಿ ೨೦೦೭ರಲ್ಲಿ, ಪೀತಾಂಬರೆ ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ನೀಡಲಾಯಿತು. []

ವೈಯಕ್ತಿಕ ಜೀವನ

ಬದಲಾಯಿಸಿ

ಪೀತಾಂಬರೆ ೨೦೦೩ ರಲ್ಲಿ ಮುಗ್ದಾ ಅವರನ್ನು ವಿವಾಹವಾದರು ಮತ್ತು ಈ ದಂಪತಿಗೆ ೨೦೦೫ರಲ್ಲಿ ಯುಕ್ತಾ ಎಂಬ ಮಗಳು ಜನಿಸಿದಳು.[]

ಉಲ್ಲೇಖಗಳು

ಬದಲಾಯಿಸಿ
  1. Dhuri, Shailesh (28 November 2006). "An obituary for Major Manish Pitambare". Rediff News, India. Retrieved 2009-08-10.
  2. Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.
  3. Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.
  4. Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.
  5. Ahmad, Mukhtar (28 November 2006). "Army major, Hizb terrorist killed in Kashmir encounter". Rediff India Abroad. Retrieved 2009-08-10.
  6. "Western Command GOC-in-C to receive award". Indian Express Newspapers (Mumbai) Ltd. 26 January 2007. Retrieved 2009-08-10.[ಮಡಿದ ಕೊಂಡಿ]
  7. Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.Rangnekar, Prashant (30 November 2006). "SMS to Thane, death on duty in J&K". The Indian Express Limited. Retrieved 2009-08-10.