ಮದ್ದೂರು ವಡೆ ದಕ್ಷಿಣ ಭಾರತದ ಒಂದು ಖಾರದ ಪನಿಯಾಣ ಬಗೆಯ ಲಘು ಆಹಾರ. ಈ ಖಾದ್ಯವು ತನ್ನ ಹೆಸರನ್ನು ಕರ್ನಾಟಕಮಂಡ್ಯ ಜಿಲ್ಲೆಮದ್ದೂರು ಪಟ್ಟಣದಿಂದ ಪಡೆದುಕೊಂಡಿದೆ. ಇದನ್ನು ಅಕ್ಕಿ ಹಿಟ್ಟು, ರವೆ ಮತ್ತು ಮೈದಾವನ್ನು ಚೂರು ಮಾಡಿದ ಈರುಳ್ಳಿ, ಕರಿಬೇವು, ಕೊಬ್ಬರಿ ಮತ್ತು ಇಂಗಿನೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಈ ಮದ್ದೂರು ವಡೆಯು ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.ಈ ಮದ್ದೂರು ವಡೆಯು ಹೆಚ್ಚು ರುಚಿಕರ ಮತ್ತು ಮೃದುವಾಗಿರುತ್ತದೆ. ಮದ್ದೂರು ಕೆಫೆಯಲ್ಲಿ ತಯಾರಿಸುವ ಮದ್ದೂರು ವಡೆಯು ಹೆಚ್ಚು ರುಚಿಕರವಾಗಿರುತ್ತದೆ.ಮೊದಲು ಇದರ ಬೆಲೆಯು ಐದು ರುಪಾಯಿ ಇತ್ತು ಈಗ ಇದರ ಬೆಲೆ ಹತ್ತು ರುಪಾಯಿಗೆ ಹೆಚ್ಚಳವಾಗಿದೆ. ಇದು ಬೆಂಗಳೂರು, ಕೆಂಗೇರಿ, ಬಿಡದಿ,ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರ,ಶ್ರೀರಂಗಪಟ್ಟಣ, ಮೈಸೂರು ಎಲ್ಲಾ ಕಡೆ ದೊರೆಯುತ್ತದೆ.[] ಮದ್ದೂರು ವಡೆ ಮಾಡುವ ವಿಧಾನ

ಉಲ್ಲೇಖಗಳು

ಬದಲಾಯಿಸಿ
  1. "ಗರಂ ಗರಂ ಮದ್ದೂರು ವಡೆ ನೀವೇ ಮಾಡಿ". kannada.boldsky.com/.