ಮಂಗಳೂರು ವಿಮಾನ ಅಪಘಾತ ೨೦೧೦

ಮಂಗಳೂರು ವಿಮಾನ ಅಪಘಾತ ೨೦೧೦ರ ಮೇ ೨೨ರಂದು ನಡೆದ ದುರ್ಘಟನೆಯಾಗಿದೆ. ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ೮೧೨ ವಿಮಾನ, ಮಂಗಳೂರಿನ ಬಜ್ಪೆಯಲ್ಲಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ, ಪೈಲೆಟ್‍ನ ನಿಯಂತ್ರಣ ತಪ್ಪಿ ರನ್‌ವೇ ಕೊನೆಯಲ್ಲಿದ್ದ ನಿಯಂತ್ರಣ ಗೋಪುರಗಳಿಗೆ ಡಿಕ್ಕಿ ಹೊಡೆದು ಎರಡು ಹೋಳಾಗಿ ರನ್‌ವೇ ಕೊನೆಯಲ್ಲಿದ್ದ ಸುಮಾರು ೧೨೦ ಅಡಿ ಆಳದ ಕಮರಿಗೆ ಉರುಳಿ ಬೆಂಕಿಗೆ ಆಹುತಿಯಾಯಿತು. ವಿಮಾನದಲ್ಲಿದ್ದ ಒಟ್ಟು ೧೬೬ ಪ್ರಯಾಣಿಕರಲ್ಲಿ (ವಿಮಾನದ ಇಬ್ಬರು ಪೈಲೆಟ್ ಮತ್ತು ೪ ಮಂದಿ ಪರಿಚಾರಕರು) ೧೫೨ ಮಂದಿ ಅಸುನೀಗಿದರು ಮತ್ತು ೮ ಮಂದಿ ಬದುಕಿ ಉಳಿದರು. ಈ ಅಪಘಾತ ಭಾರತದಲ್ಲಿ ಇದುವರೆಗೆ ಸಂಭವಿಸಿದ ೧೧ ಭೀಕರ ಅಪಘಾತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ವಿಮಾನ ಮತ್ತು ಸಿಬ್ಬಂದಿ ಬದಲಾಯಿಸಿ

 
ಅಪಘಾತವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

ಅಪಘಾತವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಬೋಯಿಂಗ್ ಸಂಸ್ಥೆ ತಯಾರಿಸಿದ ಬೋಯಿಂಗ್ ೭೩೭-೮೦೦ಎನ್‍ಜಿ(ಎಸ್‌ಎಫ್‌ಪಿ) ಮಾದರಿಯದ್ದಾಗಿದ್ದು, ಕಡಿಮೆ ಉದ್ದದ ರನ್‌ವೇಯಲ್ಲಿ ಕಾರ್ಯಾಚರಿಸಲು ಅನುಕೂಲವಾದ ಮಧ್ಯಮಗಾತ್ರದ ವಿಮಾನವಾಗಿದೆ. ಏರ್ ಇಂಡಿಯಾ ಸಂಸ್ಥೆ ಈ ವಿಮಾನವನ್ನು ೨೦೦೮ರ ಜನವರಿಯಲ್ಲಿ ಬೋಯಿಂಗ್ ಸಂಸ್ಥೆಯಿಂದ ಖರೀದಿಸಿತ್ತು.

ಪ್ರಧಾನ ಪೈಲೆಟ್ ಕ್ಯಾಪ್ಟನ್ ಝ್ಲಾಟ್ಕೋ ಗ್ಲೂಸಿಕಾ ಮತ್ತು ಸಹ ಪೈಲಟ್ ಹರ್ಬಿಂದರ್ ಸಿಂಘ್ ಅಹ್ಲುವಾಲಿಯಾ ಮತ್ತು ೪ ಮಂದಿ ಪರಿಚಾರಕರು ಈ ವಿಮಾನದಲ್ಲಿದ್ದರು. ೫೫ ವರ್ಷ ವಯಸಿನ ಗ್ಲೂಸಿಕಾ ಬ್ರಿಟಿಷ್ ಸರ್ಬಿಯಾ ಮೂಲದವರಾಗಿದ್ದು ಒಟ್ಟು ೧೦,೦೦೦ ಗಂಟೆಗಳ ಹಾರಾಟ ಅನುಭವವನ್ನು ಹೊಂದಿದ್ದರು. ಭಾರತ ಮೂಲದ ೪೦ ವರ್ಷ ವಯಸಿನ ಅಹ್ಲುವಾಲಿಯಾ ಜೆಟ್ ಏರ್‌ವೇಸ್ ಸಂಸ್ಥೆಯ ಮಾಜಿ ಸಿಬ್ಬಂದಿಯಾಗಿದ್ದು ೨೦೦೯ರಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಸೇರಿದ್ದರು. ಇವರು ಒಟ್ಟು ೩೬೨೦ ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು.

ನಿಲ್ದಾಣ ಮತ್ತು ಅಪಘಾತ ಬದಲಾಯಿಸಿ

ರಕ್ಷಣಾ ಕಾರ್ಯಾಚರಣೆ ಬದಲಾಯಿಸಿ

ತನಿಖೆ ಮತ್ತು ಪರಿಹಾರ ಬದಲಾಯಿಸಿ

ಉಲ್ಲೇಖ ಬದಲಾಯಿಸಿ