ಒಂದು ಅಸ್ತಿಯನ್ನು ಬಳಸಿಕೊಳ್ಳಲು ಬಳಕೆದಾರನೊಬ್ಬ (ಲೀಸಿ) ಅದರ ಯಜಮಾನನಿಗೆ ಆತನ ಸ್ವತ್ತಿಗೆ ತಕ್ಕ ಬೆಲೆಯನ್ನು ಪಾವತಿಸಿ ಆ ಆಸ್ತಿಯನ್ನು ಬಳಸಿಕೊಳ್ಳುವುದನ್ನು ಭೋಗ್ಯ ಎನ್ನುವರು.[] ಭೋಗ್ಯ ಪತ್ರ ಎನ್ನುವುದು ಒಂದು ಬಾಡಿಗೆ ಒಪ್ಪಂದ ವಾಗಿದ್ದು, ಇದರಲ್ಲಿ ಆಸ್ತಿಯು ಒಬ್ಬನ ಗೊತ್ತು ಪಡಿಸಿದ ಸ್ವತ್ತಾಗಿರುತ್ತದೆ.[] ಅಸ್ಪಷ್ಟ ಆಸ್ತಿ ಯ ಭೋಗ್ಯಪತ್ರಗಳು , ಕಂಪ್ಯೂಟರ್ ಪ್ರೋಗ್ರಾಮ್ ಬಳಕೆ (ಇದು ಪರವಾನಗಿಯಂತಿದ್ದರೂ, ಭಿನ್ನ ಅವಕಾಶಗಳನ್ನು ಹೊಂದಿದೆ) ಅಥವಾ ರೇಡಿಯೋ ಆವರ್ತಕದ ಉಪಯೋಗ (ಸೆಲ್ ಫೋನ್ ನಂತಹ ಗುತ್ತಿಗೆಗಳು)ವನ್ನು ಒಳಗೊಂಡಿದೆ. ಬಾಡಿಗೆದಾರನು ಗೊತ್ತುಪಡಿಸಿದ ಬಾಡಿಗೆ ಮೊತ್ತವನ್ನು ಸಂಪೂರ್ಣವಾಗಿ ನೀಡಿದಾಗ ಅದನ್ನು ಒಟ್ಟಾರೆ ಭೋಗ್ಯ ಪತ್ರ ಎನ್ನುವರು. ಇಲ್ಲಿ ಜಮೀನುದಾರನು ಹುಲ್ಲುಕತ್ತರಿಸುವ ಯಂತ್ರ, ಬಟ್ಟೆ ತೊಳೆಯುವ ಯಂತ್ರದಿಂದ ಹಿಡಿದು ಕೈಚೀಲ ಮತ್ತು ಆಭರಣಗಳವರೆಗೆ ತನ್ನ ಎಲ್ಲಾ ಆಸ್ತಿಗೆ ನಿರಂತರವಾದ ವೆಚ್ಚವನ್ನು ತೆರುತ್ತಾನೆ.[]

ಬಳಕೆದಾರ ಅಥವಾ ಮಾಲಿಕನಿಂದ ಒಂದು ಭೋಗ್ಯಪತ್ರ ಸಂಪೂರ್ಣವಾಗಿ ಅಂತ್ಯಗೊಂಡರೆ ಅದನ್ನು ರದ್ದು ಪಡಿಸಬಹುದಾದ ಭೋಗ್ಯಪತ್ರ ಎನ್ನುವರು. ಒಂದು ಭೋಗ್ಯಪತ್ರವನ್ನು ಈ ರೀತಿಯಲ್ಲಿ ಅಂತ್ಯಗೊಳಿಸಲು ಅಸಾಧ್ಯವಾದಲ್ಲಿ ಅದನ್ನು ರದ್ದುಪಡಿಸಲಾಗದ ಭೋಗ್ಯಪತ್ರ ಎನ್ನಲಾಗುವುದು. ಸಾಮಾನ್ಯವಾಗಿ ಹೇಳುವುದಾದರೆ, "ಲೀಸ್" ಎಂಬ ಪದವು ರದ್ದುಪಡಿಸಲಾಗದ ಕರಾರು ಎಂಬ ಅರ್ಥವನ್ನು ಕೊಡುತ್ತದೆ. ಆದರೆ "ಬಾಡಿಗೆ ಒಪ್ಪಂದ"ವು ರದ್ದುಪಡಿಸಬಹುದಾದ ಕರಾರನ್ನು ಸೂಚಿಸುತ್ತದೆ.

ಭೋಗ್ಯಪತ್ರವು ಬಳಕೆದಾರ ಮತ್ತು ಮಾಲಿಕನ ಜವಾಬ್ದಾರಿಗಳು ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲವು ನಿರ್ಧಿಷ್ಟ ಅವಕಾಶಗಳನ್ನು ನೀಡುತ್ತದೆ. ಸ್ಥಳೀಯ ನಿಯಮಾವಳಿಗಳು ಸ್ವಯಂ ಚಾಲಿತ ಅವಕಾಶಗಳನ್ನೂ ಒದಗಿಸುತ್ತದೆ. ಒಟ್ಟಾರೆ ಹೇಳುವುದಾದರೆ, ಒಂದು ನಿಗದಿತ ಶುಲ್ಕವನ್ನು ಮಾಲಿಕನಿಗೆ ನೀಡುವುದರಿಂದ ಬಳಕೆದಾರನು (ಹಿಡುವಳಿದಾರ ) ಸ್ವತ್ತನ್ನು ತನ್ನದಾಗಿಸಿಕೊಂಡು, ಭೋಗ್ಯಪತ್ರದ ಆಸ್ತಿಯನ್ನು (ಬಾಡಿಗೆ ಯನ್ನು) ತನ್ನ ಮಾಲಿಕನ ಹೊರತುಪಡಿಸಿ, ಎಲ್ಲಾ ಸ್ವತ್ತನ್ನೂ ಬಳಸಿಕೊಳ್ಳುವ ಹಕ್ಕನ್ನು ಪಡೆಯುತ್ತಾನೆ. ಅತ್ಯಂತ ಸಾಮಾನ್ಯವಾದ ವಾಸ್ತವ ಸ್ವತ್ತಿನ ಭೋಗ್ಯಪತ್ರ ಎಂದರೆ ಜಮೀನುದಾರ ಮತ್ತು ಹಿಡುವಳಿದಾರನ ಮಧ್ಯೆ ಕಂಡುಬರುವ ವಸತಿ ಬಾಡಿಗೆ ಒಪ್ಪಂದ.[] ಹಿಡುವಳಿದಾರ ಮತ್ತು ಜಮೀನುದಾರನ ನಡುವಿನ ಸಂಬಂಧವನ್ನು ಹಿಡುವಳಿ (ಟೆನಾನ್ಸಿ) ಎನ್ನುವರು. ಕೆಲವು ವೇಳೆ ಹಿಡುವಳಿದಾರನಿಗೆ ಇರುವ ಆಸ್ತಿಯ ಮೇಲಿನ ಹಕ್ಕನ್ನು ಭೋಗ್ಯಪತ್ರ ಹಕ್ಕು ಎಂದೂ ಕರೆಯಲಾಗುತ್ತದೆ. ಭೋಗ್ಯಪತ್ರವು ಒಂದು ನಿಗಧಿತ ಅವಧಿಯವರೆಗೆ (ಇದನ್ನು ಭೋಗ್ಯಪತ್ರದ ಅವಧಿ ಎನ್ನುವರು) ಇರಬಹುದು, ಆದರೆ (ಭೋಗ್ಯಪತ್ರದ ಅವಧಿಗೆ ಅನುಗುಣವಾಗಿ) ಬೇಗನೆ ಅಂತ್ಯಗೊಳ್ಳಲೂ ಬಹುದು.

ಭೋಗ್ಯಪತ್ರವನ್ನು ಒಂದು ಪರವಾನಗಿ ಗೆ ಹೋಲಿಸಬಹುದಾಗಿದ್ದು, ಇದನ್ನು ಹೊಂದಿದ ವ್ಯಕ್ತಿಯು (ಪರವಾನಗಿದಾರ ) ಆಸ್ತಿಯನ್ನು ಉಪಭೋಗಿಸಬಹುದು, ಆದರೆ ಇದು ಆಸ್ತಿಯ ಮಾಲಿಕ (ಪರವಾನಗಿ ಕೊಡುವವ )ನ ಇಚ್ಛೆಯನ್ನು ಅವಲಂಬಿಸಿದ್ದು ತನಗೆ ಬೇಕಾದಾಗ ಅದನ್ನು ಅಂತ್ಯಗೊಳಿಸಬಹುದು. ಪರವಾನಗಿದಾರ/ಪರವಾನಗಿ ಕೊಡುವವನ ಸಂಬಂಧವನ್ನು ತನ್ನ ವಾಹನವನ್ನು ನಿಲುಗಡೆಯಲ್ಲಿ ನಿಲ್ಲಿಸುವ ಒಬ್ಬ ವ್ಯಕ್ತಿ ಹಾಗೂ ಆ ನಿಲಗಡೆಯ ಮಾಲಿಕನ ಮಧ್ಯೆ ಇರುವ ಸಂಬಂಧಕ್ಕೆ ಹೋಲಿಸಬಹುದು.

ಪರವಾನಗಿಯು ಒಂದು ಬೇಸ್‌ಬಾಲ್ ಆಟದ ಟಿಕೆಟ್‌ನ ರೂಪದಲ್ಲಿರುತ್ತದೆ. ವ್ಯತಾಸವೆಂದರೆ, ಆಸ್ತಿಯ ಹೊಣೆಗಾರಿಕೆ, ಪಾವತಿಯಿಲ್ಲದ ಅಥವಾ ದುರ್ವತನೆಯನ್ನು ಹೊರತುಪಡಿಸಿ ಸಂಚಿತ ಪಾವತಿಗಳ ಮೂಲಕ ಮುಂದುವರೆದಲ್ಲಿ ಅದನ್ನು ಭೋಗ್ಯಪತ್ರ ಎನ್ನಬಹುದು. ಒಂದು ಸಾರಿ ಒಬ್ಬರ ಸ್ವತ್ತನ್ನು ಪಡೆದು ಅದನ್ನು ಅನುಭವಿಸುವುದು ಪರವಾನಗಿ ಎಂದಾಗಬಹುದು. ಭೋಗ್ಯಪತ್ರ ಮತ್ತು ಪರವಾನಗಿಯ ನಡುವೆ ಇರುವ ಅರೆ ವ್ಯತ್ಯಾಸವೆಂದರೆ ಭೋಗ್ಯಪತ್ರವು ತನ್ನ ಅವಧಿಯ ಮತ್ತು ನಿರ್ಧಿಷ್ಟವಾದ ಅಂತಿಮದಿನಕ್ಕೆ ನಿರಂತರವಾದ ನಿಯತಕಾಲಿಕ ಪಾವತಿಗಳನ್ನು ಮಾಡುತ್ತದೆ. ಒಂದು ಕರಾರು ಪತ್ರಕ್ಕೆ ಅಂತಿಮದಿನ ನಿಗಧಿಯಾದೇ ಇದ್ದಲ್ಲಿ ಅದನ್ನು ಶಾಶ್ವತ ಪರವಾನಗಿ ಎನ್ನಬಹುದೇ ವಿನಾಃ ಭೋಗ್ಯ ಎನ್ನಲು ಸಾಧ್ಯವಿಲ್ಲ.

ಸಹಜ ಸನ್ನಿವೇಶಗಳಲ್ಲಿ, ಸ್ವತ್ತಿನ ಮಾಲಿಕನು ತನ್ನ ಆಸ್ತಿಯನ್ನು ನಿಗದಿತ ಕಾಲದವರೆಗೆ ಒಬ್ಬ ಹಿಡುವಳಿದಾರನಿಗೆ ವಹಿಸಿಕೊಡುವುದು ಅಥವಾ ವ್ಯವಹಾರ ನಡೆಸುವುದನ್ನು ಒಳಗೊಂಡಂತೆ ತನ್ನ ಸ್ವತ್ತ ನ್ನು ಕಾನೂನು ಬದ್ದವಾಗಿ ಇಷ್ಟ ಬಂದಂತೆ ಬಳಸಿಕೊಳ್ಳಲು ಸ್ವತಂತ್ರವನ್ನು ಹೊಂದಿರುತ್ತಾನೆ. ಒಂದು ವೇಳೆ ಒಬ್ಬ ಮಾಲಿಕನು ತನ್ನ ಆಸ್ತಿಯನ್ನು ಒಬ್ಬ ವ್ಯಕ್ತಿಗೆ (ಹಿಡುವಳಿದಾರನಿಗೆ) ಒಪ್ಪಿಸಿಕೊಟ್ಟಲ್ಲಿ , ಕಾನೂನುಬದ್ದವಾಗಿ ಆ ಹಿಡುವಳಿದಾರನು ಆಸ್ತಿಯನ್ನು ಅನುಭೊಗಿಸುವಾಗ ಯಾವುದೇ ರೀತಿಯಲ್ಲಿ ಅಡಚಣೆಪಡಿಸಿದಲ್ಲಿ ಅದು ಕಾನೂನು ಸಮ್ಮತವೆನಿಸುವುದಿಲ್ಲ.

ಇದೇ ನಿಯಮಗಳು ಪದ ಬಳಕೆಯಲ್ಲಿ ಭಿನ್ನ ಅರ್ಥವನ್ನು ಕೊಟ್ಟರೂ, ಸ್ಥಿರ ಆಸ್ತಿ ಮತ್ತು ಚರಾಸ್ತಿ, ಗಳಿಗೆ ಅನ್ವಯಿಸುತ್ತವೆ. ಒಬ್ಬ ಹಿಡುವಳಿದಾರನು ತನ್ನ ಆಸ್ತಿಯನ್ನು ಎರಡನೇ ಹಿಡುವಳಿದಾರನಿಗೆ ಭೋಗ್ಯಪತ್ರದ ಮೂಲಕ ಕೊಟ್ಟಾಗಲೂ, ಇದೇ ನಿಯಮಗಳು ಅಧೀನ- ಭೋಗ್ಯಪತ್ರಕ್ಕೆ ಅನ್ವಯಿಸುತ್ತವೆ. ಕೆಲವು ಸಮಯಗಳಲ್ಲಿ "ಅಧಿಕಾರಿ ಭೋಗ್ಯ ಪತ್ರ" ಎಂದೆನಿಸುವ ಮುಖ್ಯ ಭೋಗ್ಯಪತ್ರವು ಅಧೀನ ಭೋಗ್ಯಪತ್ರದ ಹಕ್ಕನ್ನು ನಿಷೇಧಿಸುತ್ತದೆ.

ಇತಿಹಾಸ

ಬದಲಾಯಿಸಿ

ಶತಮಾನಗಳಿಂದಲೂ ಭೋಗ್ಯಪತ್ರಗಳು ನಮ್ಮ ಅನೇಕ ಬೇಡಿಕೆಗಳನ್ನು ಪೂರೈಸುತ್ತಾ ಬಂದಿವೆ.ಆದ್ದರಿಂದ ಕಾನೂನು ಬದ್ದ ನಿಯಮಗಳನ್ನು ಆಯಾಕಾಲದ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಉದ್ದೇಶಗಳಿಗೆ ತಕ್ಕಂತೆ ಬದಲಾಯಿಸುತ್ತಾ ಬರಲಾಗಿದೆ. ಉದಾಹರಣೆಗೆ, 18ನೇ ಶತಮಾನದ ಕೊನೆಯವರೆಗೆ ಭೋಗ್ಯಪತ್ರಗಳನ್ನು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ನಂತರ 19ನೇ ಶತಮಾನದ ಆರಂಭದಲ್ಲಿ ಕೈಗಾರಿಕೋದ್ಯಮ ದೇಶಗಳಲ್ಲಿ ನಗರಗಳು ಬೆಳೆಯಲು ಪ್ರಾರಂಭಿಸಿದಾಗ ಭೋಗ್ಯಪತ್ರಗಳು ನಗರ ಪ್ರದೇಶಗಳ ಭೂಸ್ವಾಧೀನಕ್ಕೆ ಅತಿ ಪ್ರಾಮುಖ್ಯ ವೆನಿಸಿದವು.

ಸಹಜ ನ್ಯಾಯವ್ಯಾಪ್ತಿಯಲ್ಲಿ ಬರುವ ಜಮೀನುದಾರ ಮತ್ತು ಹಿಡುವಳಿದಾರನ ನೂತನ ಕಾಯಿದೆಯು ಸಹಜ ಕಾನೂನಿನ ಮೇಲೆ ಇರುವ ಪರಿಣಾಮವನ್ನು ಉಳಿಸಿಕೊಳ್ಳುತ್ತದೆ, 19ನೇ ಶತಮಾನದಲ್ಲಿ ಲಯೆಜ್-ಫೇರ್ ಸಿದ್ದಾಂತವು ಗುತ್ತಿಗೆಯ ನಿಯಮ ಮತ್ತು ಆಸ್ತಿಯ ನಿಯಮದ ಮೇಲೆ ಪ್ರಾಬಲ್ಯ ಬೀರಿತ್ತು ಉಪಭೋಗವಾದದ ಬೆಳವಣಿಗೆಯೊಂದಿಗೆ ಉಪಭೋಗ ರಕ್ಷಣಾ ಶಾಸನವು ಗುತ್ತಿಗೆ ಭಾಗಿಗಳ ನಡುವೆ ಸಮಾನವಾದ ಕರಾರು ಅಧಿಕಾರವನ್ನು ಸಹಜ ನಿಯಮಗಳ ಅಡಿಯಲ್ಲಿ ಅಂಗೀಕರಿಸುತ್ತದೆ, ಆದರೆ ಇದರಲ್ಲಿ ನಿಖರತೆ ಇಲ್ಲದೇ ಇದ್ದಲ್ಲಿ ಈ ಕಲ್ಪನೆಗಳು ತೊಂದರೆಗೆ ಸಿಲುಕಿಕೊಳ್ಳುತ್ತವೆ. ಪರಿಣಾಮವಾಗಿ ಸುಧಾರಕರು, ವಸತಿ ಹಿಡುವಳಿಯ ನಿಯಮಗಳಿಗೆ ಹಿಡುವಳಿದಾರನ ರಕ್ಷಣೆಯ ದೃಷ್ಟಿಯಿಂದ ಸೂಕ್ತ ಬೆಲೆ ನಿಗಧಿಪಡಿಸುವುದಕ್ಕೆ ಹೆಚ್ಚು ಒತ್ತು ಕೊಟ್ಟರು. ಹಿಡುವಳಿದಾರನ ರಕ್ಷಣೆಗೆ ಇಂದು ಸಾಕಷ್ಟು ಶಾಸನಗಳಿವೆ.

ಸಾಮಾನ್ಯ ಪದಗಳು

ಬದಲಾಯಿಸಿ

ಒಂದು ಭೋಗ್ಯಪತ್ರವು ಕಾನೂನುಬದ್ದವಾದ ಒಪ್ಪಂದವಾಗಿದ್ದು, ತನ್ಮೂಲಕ ನ್ಯಾಯವ್ಯಾಪ್ತಿಯಲ್ಲಿ ಅನ್ವಯವಾಗುವ ಕರಾರು ಕಾಯಿದೆಯಡಿಯಲ್ಲಿ ಎಲ್ಲಾ ಭಾಗಿದಾರರಿಂದಲೂ ಜಾರಿಗೊಳಿಸಬಹುದಾಗಿದೆ. ಆದರೆ, ಇದು ಭೂನಿವೇಶನ ಸ್ವಂತಿಕೆ ಹಕ್ಕುಗಳ ಅನುಕೂಲಗಳನ್ನು ಪ್ರತಿಬಿಂಬಿಸುವುದರಿಂದ, ಇದನ್ನು ಒಂದು ರೀತಿಯ ಕಾರ್ಯ ಗುಣಮಟ್ಟಗಳನ್ನು ಒಳಗೊಂಡ ಮಿಶ್ರತಳಿ ಎನ್ನಬಹುದು. ಕೆಲವು ನಿರ್ಧಿಷ್ಟ ವಿಧದ ಭೋಗ್ಯಗಳು, ಭೋಗ್ಯದ ಆಸ್ತಿಯನ್ನು ಅವಲಂಬಿಸಿ ಕೆಲವು ನಿರ್ಧಿಷ್ಟ ಅಧಿನಿಯಮಗಳನ್ನು ಹೊಂದಿರಬೇಕಾಗಬಹುದು ಮತ್ತು ಅಥವಾ ಭಾಗಿಗಳ ವಸತಿ ಅಥವಾ ಒಪ್ಪಂದ ಮಾಡಿಕೊಂಡಿರುವ ನ್ಯಾಯ ವ್ಯಾಪ್ತಿಯನ್ನೂ ಅವಲಂಬಿಸಿರುತ್ತದೆ.

ಭೋಗ್ಯದಲ್ಲಿ ಒಳಗೊಂಡ ಸಾಮಾನ್ಯ ಅಂಶಗಳು:

  • ಒಪ್ಪಂದದಲ್ಲಿ ಬರುವ ಹೆಸರುಗಳು.
  • ಪ್ರಾರಂಭದ ದಿನಾಂಕ ಮತ್ತು ಒಪ್ಪಂದದ ಕಾಲಾವಧಿ.
  • ಭೋಗ್ಯಕ್ಕೆ ಒಳಗಾಗುವಂತಹ ನಿರ್ಧಿಷ್ಟ ವಸ್ತುವಿನ ಗುರುತುಗಳು (ರಸ್ತೆ ವಿಳಾಸ, ವಿ‌ಐಎನ್, ಅಥವಾ ನಿರ್ಮಾಣ/ಮಾದರಿ, ಕ್ರಮ ಸಂಖ್ಯೆ).
  • ನವೀಕರಣ ಅಥವಾ ನವೀಕರಿಸದೆ ಇರುವುದಕ್ಕೆ ಕರಾರುಗಳನ್ನು ಒದಗಿಸುತ್ತದೆ
  • ಈ ವಸ್ತುವನ್ನು ಬಳಸಲು ಕೆಲವು ನಿರ್ಧಿಷ್ಟ ನಿಬಂಧನೆಗಳನ್ನು ಹೊಂದಿರುತ್ತದೆ (ನಗದು ಹಣ, ಅಥವಾ ನಿಗದಿತ ಪಾವತಿಗಳು).
  • ಭದ್ರತಾ ಠೇವಣಿಗೆ ಮತ್ತು ಅದನ್ನು ಹಿಂತಿರುಗಿ ಪಡೆಯಲು ಅವಕಾಶ.
  • ಕರಾರುಗಳ ನಿಗದಿತ ಪಟ್ಟಿಯನ್ನು ಹೊಂದಿರಬೇಕು
  • ಇತರೆ ನಿಗದಿತ ಕರಾರುಗಳಿಗೆ ಕಕ್ಷಿದಾರರು ಹೊಣೆಯಾಗುತ್ತಾರೆ
    • ವಿಮೆ ಮತ್ತು ನಷ್ಟದ ಪೂರೈಕೆ
    • ಸೀಮಿತ ಬಳಕೆ
    • ನಿರ್ವಹಣೆಗೆ ಯಾವ ಕಕ್ಷಿಗಾರ ಹೊಣೆ

ಎಲ್ಲಾ ವಿಧವಾದ ಚರಾಸ್ತಿ (ಉದಾ: ಕಾರು, ಪೀಟೋಪಕರಣಗಳು) ಅಥವಾ ಸ್ಥಿರಾಸ್ತಿಗಳನ್ನೂ (ಕಚ್ಚಾ ಭೂಮಿ, ಏಕ ಕುಟುಂಬ ವಸತಿಮತ್ತು ವ್ಯಾಪಾರದ ಸ್ವತ್ತು (ಸಗಟುಮತ್ತು ಚಿಲ್ಲರೆ ವ್ಯಪಾರ)) ಭೋಗ್ಯಪತ್ರದ ಮೂಲಕ ಕೊಡಬಹುದಾಗಿದೆ. ಭೋಗ್ಯಪತ್ರದ ಕಾರಣದಿಂದಾಗಿ, ಮಾಲಿಕನು (ಲೆಸ್ಸರ್) ಈ ಮೇಲೆ ತಿಳಿಸಿದ ತನ್ನ ಸ್ವತ್ತನ್ನು ಉಪಭೋಗಿಗೆ ಬಳಸಲು ಮಾನ್ಯತೆ ನೀಡಿರುತ್ತಾನೆ.

ಹಿಡುವಳಿಗಳ ವಿಧಗಳು

ಬದಲಾಯಿಸಿ

ನಿಗಧಿತ ಕಲಾವಧಿಯ ಹಿಡುವಳಿ ಅಥವಾ ವರ್ಷಗಳವರೆಗಿನ ಹಿಡುವಳಿ

ಬದಲಾಯಿಸಿ

ಒಂದು ನಿಗಧಿತ ಕಲಾವಧಿ ಹಿಡುವಳಿ ಅಥವಾ ವರ್ಷಗಳ ವರೆಗಿನ ಹಿಡುವಳಿ ಕೆಲವು ನಿರ್ಧಿಷ್ಟ ಕಾಲಾವಧಿಯವರಗೆ ಮುಂದುವರೆಯುತ್ತದೆ. ಇದಕ್ಕೆ ಒಂದು ನಿರ್ಧಿಷ್ಟವಾದ ಆರಂಭ ಮತ್ತು ಅಂತಿಮ ದಿನವಿರುತ್ತದೆ. "ವರ್ಷಗಳ ವರೆಗಿನ ಹಿಡುವಳಿ" ಎಂಬ ಹೆಸರಿನ ಹೊರತಾಗಿಯೂ ಅಂತಹ ಒಂದು ಹಿಡುವಳಿಯು ಯಾವುದೇ ಅವಧಿಯವರೆಗೂ ಮುಂದುವರೆಯಬಹುದು- ಒಂದು ವಾರ ಅವಧಿಯ ಹಿಡುವಳಿಯನ್ನೂ ವರ್ಷಗಳ ವರೆಗಿನ ಹಿಡುವಳಿ ಎನ್ನುವರು. ಸಂಪ್ರದಾಯಬದ್ದ ಕಾನೂನಿನ ಅಡಿಯಲ್ಲಿ ಅವಧಿಯು ನಿಶ್ಚಿತವಾಗಿ ಇರಬೇಕೆಂದೇನೂ ಇಲ್ಲ, ಆದರೆ ಕೆಲವು ಸನ್ನಿವೇಶದನ್ವಯ ಇದನ್ನು ನಿಬಂಧನೆಗೆ ಒಳಪಡಿಸಬಹುದು (ಉದಾ: ಬೆಳೆಯು ಕೊಯ್ಲಿಗೆ ಸಿದ್ದವಾಗುವ ತನಕ ಅಥವಾ ಯುದ್ಧ ಮುಗಿಯುವ ತನಕ)

ಹಲವಾರು ಕಾನೂನು ವ್ಯಾಪ್ತಿಗಳಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಸಾಧ್ಯತೆಗಳಿವೆ.[]

ಒಂದು ನಿಗಧಿತ ಕಾಲಾವಧಿಯ ಹಿಡುವಳಿಯು ಆ ಅವಧಿಯು ಮುಗಿದ ತಕ್ಷಣವೇ ತನ್ನಷ್ಟಕ್ಕೆ ತಾನೇ ಕೊನೆಗೊಳ್ಳುತ್ತದೆ. ಹಿಡುವಳಿದಾರನ ವಿಷಯದಲ್ಲಿ ನಡೆಯ ಬೇಕಾದ ಒಂದು ಸನ್ನಿವೇಶವು ಕಾಣಿಸಿಕೊಂಡಾಗ ಆ ಅವಧಿಯು ಕೊನೆಗೊಳ್ಳುತ್ತದೆ.

ಆಸ್ತಿಯ ಮೇಲಿನ ಒಂದು ವಾಯಿದೆಯ ಹಿಡುವಳಿ ಭೋಗ್ಯದ ಅಂತ್ಯದ ನಂತರವೂ ಇದ್ದಲ್ಲಿ, ಅವನು/ಅವಳು ಮೌನ ಒಪ್ಪಿಗೆಯೊಂದಿಗೆ ಹಿಡುವಳಿದಾರನಾಗಬಹುದು. ಏಕೆಂದರೆ ಮಾಲಿಕನು ಅವನನ್ನು ಅಥವಾ ಅವಳನ್ನು ತೆಗೆದು ಹಾಕುವುದರ ಬದಲಾಗಿ ಹಿಡುವಳಿದಾರನನ್ನಾಗಿ ಸಹಿಸಿಕೊಂಡಿರುತ್ತಾನೆ (ಅಥವಾ ತೆಗೆದುಕೊಂಡಿರುತ್ತಾನೆ)

ಇಂತಹ ಹಿಡುವಳಿಯನ್ನು ಸಾಮನ್ಯವಾಗಿ "ಇಚ್ಛಾ ಪೂರ್ವಕ" ಎನ್ನುವರು, ಎಂದರೆ ಹಿಡುವಳಿದಾರ ಅಥವಾ ಜಮೀನುದಾರ, ಸೂಕ್ತ ಕಾನೂನು ಬದ್ದ ಮುನ್ಸೂಚನೆಯ ಮೂಲಕ ಯಾವುದೇ ಸಮಯದಲ್ಲಿ ಇದನ್ನು ಅಂತ್ಯಗೊಳಿಸಬಹುದು.

ನಿಯತಕಾಲಿಕ ಹಿಡುವಳಿ

ಬದಲಾಯಿಸಿ

ನಿಯತಕಾಲಿಕ ಹಿಡುವಳಿ ಎಂದರೆ, ಇದು ಒಂದು ವಾರ್ಷಿಕ, ತಿಂಗಳಿನ ಅಥವಾ ವಾರದ ಹಿಡುವಳಿಯಾಗಿದ್ದು, ಬಾಡಿಗೆ ಪಾವತಿಯ ಅವಧಿಯು ಸ್ಥಿರಾಸ್ತಿಯ ಕಾಲಮಾನವನ್ನು ನಿಗಧಿ ಪಡಿಸುತ್ತದೆ. ಕಟ್ಟಳೆಗಳ ಸುಳ್ಳು ನಿರೂಪಣಾ ಕಾಯಿದೆಯನ್ನು ಉಲ್ಲಂಘಿಸುವ ಒಂದು ಮೌಖಿಕ ಹಿಡುವಳಿಯು (ನ್ಯಾಯ ವ್ಯಾಪ್ತಿಯನ್ನು ಅವಲಂಬಿಸಿ-ಒಂದು ಭೋಗ್ಯವನ್ನು ಒಂದು ವರ್ಷ ಅಥವಾ ಹೆಚ್ಚಿನ ಅವಧಿಗೆ ಲಿಖಿತ ರೂಪದಲ್ಲಿಲ್ಲದ ಒಪ್ಪಂದ ಮಾಡಿಕೊಳ್ಳುವುದು) ವಾಸ್ತವವಾಗಿ ನಿಯತಕಾಲಿಕ ಹಿಡುವಳಿಯ ರಚನೆಗೆ ಕಾರಣವಾಗುತ್ತದೆ. ಇದು ಭೋಗ್ಯ ಹಾಕಲ್ಪಟ್ಟ ಸೊತ್ತುಗಳು ಯಾವ ವ್ಯಾಪ್ತಿಯಲ್ಲಿ ಬರುತ್ತವೆ ಎಂಬ ಕಾಯಿದೆಯನ್ನು ಅವಲಂಬಿಸಿದೆ. ಹಲವಾರು ಕಾನೂನು ವ್ಯಾಪ್ತಿಗಳಲ್ಲಿ, ಭಾಗಿದಾರರು ಭಿನ್ನ ಒಪ್ಪಂದಗಳನ್ನು ಸ್ಪಷ್ಟವಾಗಿ ತಿಳಿಸದೇ ಇದ್ದಾಗ ಮತ್ತು ಸ್ಥಳೀಯ ಅಥವಾ ವಾಣಿಜ್ಯ ಸಂಪ್ರದಾಯಗಳಡಿಯಲ್ಲಿ ತಿಂಗಳ ಹಿಡುವಳಿಯನ್ನು ಯಾರೂ ಅಂಗೀಕರಿಸದೇ ಇದ್ದಾಗ ಅದನ್ನು "ತಪ್ಪಾದ" ಹಿಡುವಳಿ ಎಂದು ಭಾವಿಸಲಾಗುತ್ತದೆ.

ಮಾಲಿಕ ಅಥವಾ ಹಿಡುವಳಿದಾರ ನಿಯತಕಾಲಿಕ ಹಿಡುವಳಿಯನ್ನು ಆ ಅವಧಿ ಸಮೀಪಿಸಿದಾಗ ಅಥವಾ ಅವಧಿ ಮುಗಿದಾಗ ಕಾನೂನಿನ ಅಥವಾ ನ್ಯಾಯವ್ಯಾಪ್ತಿಯ ಕಾಯಿದೆಯಡಿಯಲ್ಲಿ ಸೂಕ್ತ ಮುನ್ಸೂಚನೆ ನೀಡುವುದರ ಮೂಲಕ ಅದನ್ನು ಅಂತ್ಯಗೊಳಿಸಬಹುದು. ಅವಧಿ ಮುಗಿಯುವುದಕ್ಕಿಂತ ಮುಂಚೆ, ಭೋಗ್ಯದ ಕರಾರಿನಂತೆ ಉಳಿದ ತಿಂಗಳುಗಳ ಪಾವತಿಯನ್ನು ಮಾಡದೇ ಮಾಲಿಕನಾಗಲೀ ಅಥವಾ ಹಿಡುವಳಿದಾರನಾಗಲೀ ನಿಯತಕಾಲಿಕ ಹಿಡುವಳಿಯನ್ನು ಅಂತ್ಯಗೊಳಿಸುವಂತಿಲ್ಲ. ಪ್ರತಿ ವರ್ಷ ತನ್ನ ಹಿಡುವಳಿಯನ್ನು ಅಂತ್ಯಗೊಳಿಸಲು ಇಷ್ಟಪಟ್ಟಲ್ಲಿ ಯಾವುದೇ ಭಾಗಿದಾರನು ಮುನ್ಸೂಚನೆಯನ್ನು ಕೊಡಲೇಬೇಕಾಗುತ್ತದೆ.ಮತ್ತು ನೋಟೀಸ್‌ನ ಮೊತ್ತವನ್ನು ಭೋಗ್ಯಪತ್ರ ಅಥವಾ ರಾಜ್ಯಸ್ವ ಕಾಯಿದೆ ನಿಗಧಿಪಡಿಸುತ್ತದೆ. ಮುನ್ಸೂಚನೆಯು ಸಾಮಾನ್ಯವಾಗಿ, ಕನಿಷ್ಟ ಒಂದು ತಿಂಗಳು ಇರುತ್ತದೆ. ಇದು ವಿಶೇಷವಾಗಿ ಪ್ರತಿ ವರ್ಷದ ನಿಯತಕಾಲಿಕ ಹಿಡುವಳಿಗೆ ಅನ್ವಯಿಸುತ್ತದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗಳು ಇದ್ದಲ್ಲಿ ಹಿಡುವಳಿ ಅವಧಿಗೆ ಸಮನಾದ ನೋಟೀಸ್ ನ್ನು ನೀಡಲಾಗುವುದು- ಉದಾಹರಣೆಗೆ , ಒಂದು ತಿಂಗಳಿನ ಹಿಡುವಳಿಯನ್ನು ಅಂತ್ಯಗೊಳಿಸಲು ಮಾಲಿಕನು ಒಂದು ತಿಂಗಳಿನ ನೋಟೀಸ್‌ನ್ನು ಕೊಡಬೇಕಾಗುತ್ತದೆ.

ಹೇಗೂ, ಹಲವಾರು ಕಾನೂನು ಪರಿಧಿಗಳು ಈ ಮುನ್ಸೂಚನಾ ಅವಧಿಯನ್ನು ಹೆಚ್ಚಿಸಿವೆ ಮತ್ತು ಕೆಲವು ಜಮೀನುದಾರರು ಇದನ್ನು ಕ್ಷಿಪ್ರಗತಿಯಲ್ಲಿ ಬಳಸದಂತೆ ಅವಧಿಯನ್ನು ಕಡಿಮೆ ಮಾಡಿವೆ. ಬಾಡಿಗೆ ನಿಯಂತ್ರಣಾ ಕಾಯಿದೆಗಳಿರುವ ವ್ಯಾಪ್ತಿಗಳಲ್ಲಿ, ಒಬ್ಬ ಮಾಲಿಕನ ವಸತಿ ಹಿಡುವಳಿ ಕಡಿಮೆ ಮಾಡುವ ಅಧಿಕಾರವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಉದಾಹರಣೆಗೆ, ಕ್ಯಾಲಿಫೋರ್ನಿಯಾದಲ್ಲಿ ಲಾಸ್ ಎಂಜಲೀಸ್, ಸಂತಾಮೋನಿಕಾ, ವೆಸ್ಟ್ ಹಾಲಿವುಡ್, ಸಾನ್ ಫ್ರಾನ್ಸಿಸ್ಕೋ ಮತ್ತು ಓಕ್‌ಲ್ಯಾಂಡ್ ನಗರಗಳಲ್ಲಿ, "ಬಾಡಿಗೆಯ ದೃಢ ಕಾನೂನು"ಗಳಿದ್ದು ನಿಯತಕಾಲಿಕ ಹಿಡುವಳಿಗಳನ್ನು ಅಂತ್ಯಗೊಳಿಸಲು ಇರಬೇಕಾದ ಮಾಲಿಕರ ಸಾಮಾರ್ಥ್ಯಕ್ಕೆ ಕೆಲವು ಇತಿಮಿಗಳನ್ನು ನಿಗಧಿಪಡಿಸಿದೆ.

ಮುನ್ಸೂಚನೆಯು, ಹಿಡುವಳಿಯು ಅಂತ್ಯಗೊಳ್ಳುವ ದಿನಾಂಕವು ಜಾರಿಗೆ ಬರುವುದನ್ನು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ. ಕೆಲವು ನ್ಯಾಯ ವ್ಯಾಪ್ತಿಗಳಲ್ಲಿ ಇದು ಪಾವತಿಯ ಕಡೆಯ ದಿನ ವಾಗಿರುವುದು ಕಡ್ಡಾಯ ವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತಿಂಗಳಿನ ಹಿಡುವಳಿಯು ಒಂದು ತಿಂಗಳ 15ರಂದು ಪ್ರಾರಂಭವಾದಲ್ಲಿ, ನ್ಯಾಯವ್ಯಾಪ್ತಿಯಲ್ಲಿ ಮುಂದಿನ ತಿಂಗಳಿನ 20 ನೇ ತಾರೀಖು ಹಿಡುವಳಿಯ ಕೊನೆಯ ದಿನ ವಾಗಲು ಸಾಧ್ಯವಿಲ್ಲ. ಇದು ಒಂದು ತಿಂಗಳಿಗಿಂತ ಹೆಚ್ಚಿನ ಮುನ್ಸೂಚನೆಯನ್ನು ಹೊಂದಿದ್ದರೂ ಅನ್ವಯವಾಗುವುದಿಲ್ಲ.

ಇಚ್ಛಾ ಪೂರ್ವಕ ಹಿಡುವಳಿ

ಬದಲಾಯಿಸಿ

ಮಾಲಿಕನು ಅಥವಾ ಹಿಡುವಳಿದಾರನು ಒಂದು ಸೂಕ್ತವಾದ ಕಾರಣದ ಮುನ್ಸೂಚನೆಯ ಮೂಲಕ ಹಿಡುವಳಿಯನ್ನು ಯಾವುದೇ ವೇಳೆಯಲ್ಲಿ ಅಂತ್ಯಗೊಳಿಸುವುದಕ್ಕೆ "ಇಚ್ಛಾ ಪೂರ್ವಕ ಹಿಡುವಳಿ " ಎನ್ನುವರು. ನಿಯತಕಾಲಿಕ ಹಿಡುವಳಿಯಂತೆ ,ಇದು ಕಾಲಕ್ಕೆ ಸೀಮಿತವಾಗಿರುವುದಿಲ್ಲ. ಇದು ಬಹಳ ವರ್ಷಗಳವರಗೆ ಮುಂದುವರೆಯಬಹುದು. ಆದರೆ ಈ ಒಪ್ಪಂದವು ಯಾವುದೇ ಕಾಲದಲ್ಲಿ ಮಾಲಿಕ ಅಥವಾ ಉಪಭೋಗಿಯಿಂದ ಯಾವುದೇ ಕಾರಣಕ್ಕಾಗಿ ಅಥವಾ ಕಾರಣವಿಲ್ಲದೇ ಅಂತ್ಯಗೊಳ್ಳಬಹುದು. ದೇಶದ ಕಾನೂನು ನಿಭಂದನೆಯಂತೆ, ಜಮೀನುದಾರ/ ಹಿಡುವಳಿದಾರ ನಿಯಮದಂತೆ ಯಾವಾಗಲೂ ಸೂಕ್ತ ಮುನ್ಸೂಚನೆ ನೀಡಬೇಕಾಗುತ್ತದೆ. ಒಂದು ವೇಳೆ ಔಪಚಾರಿಕ ಭೋಗ್ಯವು ಇಲ್ಲದೇ ಹೋದಪಕ್ಷದಲ್ಲಿ ಇಚ್ಛಾ ಪೂರ್ವಕ ಹಿಡುವಳಿಯು ಅಸ್ತಿತ್ವಕ್ಕೆ ಬರುತ್ತದೆ. ಹಿಡುವಳಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವ ಸನ್ನಿವೇಶಗಳು ಬಹಳ ವಿರಳ. ಆಧುನಿಕ ಸಾಂಪ್ರದಾಯಿಕ ಕಾನೂನು, ಅಡಿಯಲ್ಲಿ, ಪರಿಹಾರ ರಹಿತ ಹಿಡುವಳಿಯು ಬಹಳ ವಿರಳವಾಗಿ ಕಂಡುಬರುತ್ತದೆ. ಇದು ಭಾಗಶಃ ಹಿಡುವಳಿಯು ಬಾಡಿಗೆ ಉದ್ದೇಶಕ್ಕಾಗಿ ಅಲ್ಲ ಎಂಬುದನ್ನು ಎಲ್ಲಾ ಭಾಗಿದಾರರೂ ಸಂಪುರ್ಣವಾಗಿ ಒಪ್ಪಿಕೊಂಡರೆ, ಅಥವಾ ಯವುದೇ ಔಪಚಾರಿಕ ಒಪ್ಪಂದವಿಲ್ಲದೆ ಒಬ್ಬ ಕುಟುಂಬ ಸದಸ್ಯನು ಮನೆಯಲ್ಲಿ ವಾಸಮಾಡಲು ಒಪ್ಪಿಕೊಂಡಲ್ಲಿ (ಹೆಸರಿಗೆ ಮಾತ್ರ ಪರಿಗಣಿಸಬೇಕಾಗಬಹುದು) ಮಾತ್ರ ಇಂತಹ ಸನ್ನಿವೇಶಗಳು ಕಾಣಿಸಿಕೊಳ್ಳುತ್ತವೆ.

ಬಹಳಷ್ಟು ನಿಗಧಿತ ಕಲಾವಧಿಯ ವಸತಿ ಹಿಡುವಳಿಗಳಲ್ಲಿ, ಲಿಖಿತ ಭೋಗ್ಯಪತ್ರವಿಲ್ಲದಿದ್ದರೂ, ಹಿಡುವಳಿದಾರನನ್ನು ಸೂಕ್ತ ಕಾರಣವಿಲ್ಲದೇ ತೆಗೆದು ಹಾಕುವಂತಿಲ್ಲ. (ಹೇಗೂ, ಸುಳ್ಳು ನಿರೂಪಣಾ ಕಾಯಿದೆಯಡಿಯಲ್ಲಿ 12ಗಿಂತ ಹೆಚ್ಚಿನ ಭೋಗ್ಯ ಪತ್ರಗಳು ಇದ್ದಲ್ಲಿ, 12 ಗಿಂತ ಹೆಚ್ಚಿನ ಮೌಖಿಕ ಭೋಗ್ಯಪತ್ರಗಳನ್ನು ಜಾರಿಗೊಳಿಸುವಂತಿಲ್ಲ.) ಹಲವಾರು ವಸತಿಭೋಗ್ಯಪತ್ರಗಳನ್ನು 30ದಿನಗಳ ಮುನ್ಸೂಚನೆಯ ಒಳಗಾಗಿ "ಇಚ್ಛಾ" ಹಿಡುವಳಿಯಾಗಿ ಪರಿವರ್ತಿಸಬಹುದು. ಇದಕ್ಕೆ ಪರ್ಯಾಯವಾಗಿ, ಇಚ್ಛಾ ಪೂರ್ವಕವಾದ ಹಿಡುವಳಿಯು (ನಿರ್ಧಿಷ್ಟ ಕಾಲಮಿತಿ ಇಲ್ಲದ) ತಾತ್ಕಲಿಕ ಅವಧಿಯವರೆಗೆ ಅಸ್ತಿತ್ವದಲ್ಲಿರಬಹುದು. ಇದರಲ್ಲಿ ಹಿಡುವಳಿದಾರನು ಆಸ್ತಿಯ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಇಷ್ಟಪಟ್ಟಲ್ಲಿ ಮತ್ತು ಮಾಲಿಕನು ಇದಕ್ಕೆ ಒಪ್ಪದಲ್ಲಿ, ಹೊಸ ಭೋಗ್ಯದ ಮತ್ತು ಬದಲಾವಣೆಗಳಿಗೆ ಸಾಕಷ್ಟು ಕಾಲವಕಾಶ ದೊರೆಯುವುದಿಲ್ಲ. ಇಂತಹ ಸನ್ನಿವೇಶದಲ್ಲಿ, ಇಷ್ಟಾನುಸಾರದ ಹಿಡುವಳಿಯು ಹೊಸ ಭೋಗ್ಯ ಪತ್ರದ ಬದಲಾವಣೆ ಮತ್ತು ಸಹಿಯೊಂದಿಗೆ ಕೂಡಲೇ ಅಂತ್ಯಗೊಳ್ಳುತ್ತದೆ. ಸೂಕ್ತ ಕಾಲಾವಧಿಯಲ್ಲಿ ಹೊಸ ಭೋಗ್ಯಪತ್ರದ ಒಪ್ಪಂದಕ್ಕೆ ಭಾಗಿದಾರರು ವಿಫಲವಾದಲ್ಲಿ ಅವರ ಒಪ್ಪಿಗೆಯಂತೆ, ಹಿಡುವಳಿದಾರನು ವಟಾರವನ್ನು ಖಾಲಿ ಮಾಡಬೇಕಾಗುತ್ತದೆ.

ಒಂದು ಭೋಗ್ಯವು ಮಾಲಿಕನ ಸಂಪೂರ್ಣ ಅಧಿಕಾರದಲ್ಲಿದ್ದರೆ, ನ್ಯಾಯವ್ಯಪ್ತಿಯ ಕಾಯಿದೆಯು ಕಾರ್ಯಾಚರಣೆಯ ಕಾಯಿದೆಯ, ಮೂಲಕ ಹಿಡುವಳಿದಾರನಿಗೆ ಅವನ ಇಚ್ಚೆಯಂತೆ ಭೊಗ್ಯವನ್ನು ಅಂತ್ಯಗೊಳಿಸುವ ಒಂದು ಪರ್ಯಾಯ ಹಕ್ಕನ್ನು ನೀಡಿದೆ. ಹೇಗೂ, ಒಂದು ಭೋಗ್ಯವು ಒಬ್ಬ ಹಿಡುವಳಿದಾರನ ಇಚ್ಛೆಗೆ ಅನುಸಾರವಾಗಿ ಇರುತ್ತದೆ (ಉದಾ: "ಎಲ್ಲಿಯವರೆಗೂ ಈ ಭೂಮಿಯ ಮೇಲೆ ಹಿಡುವಳಿದಾರನು ಬದುಕಲು ಇಷ್ಟ ಪಡುವನೋ ಅಲ್ಲಿಯವರೆಗೂ) ಎಂಬುದು ಸಾಮನ್ಯವಾಗಿ ಮಾಲಿಕನು ಭೋಗ್ಯವನ್ನು ಅಂತ್ಯಗೊಳಿಸಬಹುದು ಎಂಬ ಅರ್ಥವನ್ನು ಕೊಡುವುದಿಲ್ಲ: ಬದಲಾಗಿ ಅಂತಹ ಭಾಷೆಯು ಹಿಡುವಳಿದಾರನಿಗೆ ಜೀವನ ಪರ್ಯಂತ ಆಸ್ತಿ ಅಥವಾ ಸರಳ ಶುಲ್ಕದ ಮಾನ್ಯತೆಯ ಅರ್ಥವನ್ನು ನೀಡಬಹುದು.

ಒಂದು ಹಿಡುವಳಿಯು ಕಾನೂನು ಬದ್ದವಾಗಿ ಈ ಕೆಳಕಂಡ ಸಂದರ್ಭಗಳಲ್ಲಿ ಮುರಿದು ಬೀಳುತ್ತದೆ:

  • ಹಿಡುವಳಿದರನು ಆಸ್ತಿಯನ್ನು ನಷ್ಟ ಪಡಿಸಿದರೆ;
  • ಹಿಡುವಳಿದಾರನು ಹಿಡುವಳಿಯ ಮೇಲೆ ಪರಬಾರೆ ಮಾಡಲು ಪ್ರಯತ್ನಿಸಿದರೆ;
  • ಹಿಡುವಳಿದಾರನು ಆಸ್ತಿಯನ್ನು ಅಪರಾಧ ಕ್ರಿಯೆಗಳಿಗೆ ಬಳಸಿಕೊಂಡರೆ.
  • ಜಮೀನುದಾರನು ಅವನ/ಅವಳ ಆಸ್ತಿಯ ಮೇಲಿನ ಹಕ್ಕನ್ನು ವರ್ಗಾಯಿಸಿದರೆ;
  • ಜಮೀನುದಾರನು ತನ್ನ ಸ್ವತ್ತನ್ನು ಮತ್ತೊಬ್ಬ ವ್ಯಕ್ತಿಗೆ ಭೋಗ್ಯ ವಾಗಿ ಕೊಟ್ಟರೆ;
  • ಹಿಡುವಳಿದಾರ ಅಥವಾ ಜಮೀನುದಾರ ಮರಣ ಹೊಂದಿದಲ್ಲಿ.

ಈ ನಿಯಮಗಳ ವಿಶಿಷ್ಟತೆಗಳು ಕಾನೂನಿಂದ ಕಾನೂನಿಗೆ ಬದಲಾಗುತ್ತವೆ.

ಒಂದು ಹಿಡುವಳಿಯೊಂದಿಗೆ ಮಾಲಿಕ ಅಥವಾ ಹಿಡುವಳಿದಾರನು ಸರಿಯಾದ ಸ್ಥಿರತೆ ಕಪಾಡಿಕೊಂಡು ಬರದೇ ಇದ್ದಲ್ಲಿ, ಕಾನೂನು ಬದ್ದವಾಗಿ ಅಂತಹ ಹಿಡುವಳಿಯನ್ನು ಅಂತ್ಯಗೊಳಿಸಲಾಗುತ್ತದೆ. ಉದಹರಣೆಗೆ, ಜಮೀನುದಾರನು ಬೀಗವನ್ನು ಬದಲಾಯಿಸುವುದು ಹಿಡುವಳಿಯ ಅಂತ್ಯವನ್ನು ಸೂಚಿಸುತ್ತದೆ, ಏಕೆಂದರೆ ಹಿಡುವಳಿದಾರನು ತನ್ನ ವಟಾರವನ್ನು ಖಾಲಿ ಮಾಡಿರುತ್ತಾನೆ. ಹೇಗೂ, ಕ್ಯಾಲಿಫೊರ್ನಿಯಾದಂತಹ ಕೆಲವು ನ್ಯಾಯ ವ್ಯಾಪ್ತಿಗಗಳಲ್ಲಿ, ಒಬ್ಬ ಜಮೀನುದಾರನು, ಬೀಗವನ್ನು ಬದಲಾಯಿಸುವ, ಹಿಡುವಳಿಯನ್ನು ಅಂತ್ಯಗೊಳಿಸುವ ವಿಶೇಷವಾಗಿ ವಸತಿ ಹಿಡುವಳಿ ಮುಂತಾದ "ಸ್ವಸಹಾಯಕ" ಪರಿಹರೋಪಾಯಗಳನ್ನು ನಿಷೇಧಿಸುತ್ತದೆ. ಇದು ಒಂದು "ರಚನಾತ್ಮಕ ನಿರ್ಗಮನ" ವನ್ನು ಉಂಟುಮಾಡುವುದಲ್ಲದೇ, ಜಮೀನುದಾರನನ್ನು ನಾಗರೀಕ ಮತ್ತು ಅಪರಾಧಿ ಹೊಣೆಗಾರಿಕೆಗೆ ಜವಾಬ್ದಾರನನ್ನಾಗಿ ಮಾಡುತ್ತದೆ.

ಒಪ್ಪಿಗೆಯ ಹಿಡುವಳಿ

ಬದಲಾಯಿಸಿ

ಒಬ್ಬ ಹಿಡುವಳಿದಾರನು ಆಸ್ತಿಯ ಜವಾಬ್ದಾರಿಯಲ್ಲಿ ವಾಯಿದೆಯ ನಂತರವೂ ಮುಂದುವರೆದು, ಜಮೀನುದಾರನು ಹಿಡುವಳಿದರನಿಗೆ ಅದನ್ನು ಬಿಟ್ಟುಕೊಡುವಂತೆ ಕ್ರಮ ತೆಗೆದುಕೊಳ್ಳುವವರೆಗೂ ಇದ್ದರೆ ಅಂತಹ ಹಿಡುವಳಿಯನ್ನು ಒಪ್ಪಿಗೆಯ ಹಿಡುವಳಿ (ಕೆಲವು ಸಮಯದಲ್ಲಿ ಇದನ್ನು ವಾಯಿದೆ ಹಿಡುವಳಿ ಎಂದೂ ಕರೆಯುವರು).

ಈ ಹಂತದಲ್ಲಿ ಹಿಡುವಳಿದಾರನು ತಾಂತ್ರಿಕವಾಗಿ ಅತಿಕ್ರಮ ಪ್ರವೇಶದಾರಿಯಾದರೂ, ಈ ವಿಧವಾದ ಆಸ್ತಿಯು ನೈಜ್ಯ ಸ್ಥಿರಾಸ್ತಿ ಎನಿಸಿಕೊಳ್ಳುವುದಿಲ್ಲ, ಅಧಿಕಾರಿಗಳು ಇದನ್ನು ಬಾಡಿಗೆಯ ಸಲುವಾಗಿ ಹಿಡುವಳಿದಾರನಿಗೆ ಮಾನ್ಯತೆ ಕೊಟ್ಟಿರುತ್ತಾರೆ. ಜಮೀನುದಾರನು ಅಂತಹ ಹಿಡುವಳಿದಾರನನ್ನು ಯಾವುದೇ ಮುನ್ಸೂಚನೆಯಿಲ್ಲದೆ ಹೊರಹಾಕಬಹುದು.

ಜಮೀನುದಾರನು ಹಿಡುವಳಿದಾರನಮೇಲೆ ಹೊಸ ಭೋಗ್ಯವನ್ನು ಹೇರಬಹುದು. ವಸತಿ ಹಿಡುವಳಿಗೆ, ಇದು ತಿಂಗಳಿನಿಂದ ತಿಂಗಳಿಗೆ ಆಗುವ ಹೊಸ ಹಿಡುವಳಿಯಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚಿನ ವಾಣಿಜ್ಯ ಹಿಡುವಳಿಯ ಸಲುವಾಗಿ, ಹೊಸ ವಾರ್ಷಿಕ ಹಿಡುವಳಿ, ಇಲ್ಲದೇ ಹೋದಲ್ಲಿ ಮೂಲ ಹಿಡುವಳಿಯ ವಾಯಿದೆಯ ಮುನ್ನ ಅಷ್ಟೇ ಕಾಲಾವಧಿಯ ಹಿಡುವಳಿಯನ್ನು ಮಾಡಿಕೊಳ್ಳಬಹುದು. ಈ ಎರಡೂ ಸಂದರ್ಭಗಳಲ್ಲಿ, ಜಮೀನುದಾರನು, ಮೂಲವಾಯಿದೆಗಿಂತ ಮುನ್ನ ಎಷ್ಟು ಅವಧಿಯವರೆಗೆ ಹಿಡುವಳಿದಾರನು ಇರುತ್ತಾನೋ ಅಲ್ಲಿಯವರೆಗೆ ಬಾಡಿಗೆಯನ್ನು ಹೆಚ್ಚಿಸುವ ಅಧಿಕಾರವನ್ನು ಹೊಂದಿರುತ್ತಾನೆ.

ಪರಿಪಾಲನೆಗಳು

ಬದಲಾಯಿಸಿ

ಒಂದು ಭೊಗ್ಯಪತ್ರಕ್ಕೆ ಬೇಕಾದ ಔಪಚಾರಿಕ ಅಗತ್ಯತೆಗಳನ್ನು ಕಾನೂನು ನಿರ್ಧರಿಸುತ್ತದೆಮತ್ತು ಸ್ಥಿರಾಸ್ತಿಯು ಎಲ್ಲಿದೆ ಎಂಬುದರ ಬಗ್ಗೆ ಕಾನೂನಿನ ಪದ್ದತಿಯು ನಿರ್ಧರಿಸುತ್ತದೆ. ಚರಾಸ್ತಿಯಾದಲ್ಲಿ, ಬಾಡಿಗೆ ಕರಾರನ್ನು ಕಾನೂನು ಮತ್ತು ನ್ಯಾಯ ವ್ಯಾಪ್ತಿಯ ಪದ್ದತಿಗಳು ನಿರ್ಧರಿಸುತ್ತವೆ.[]

ಸುಳ್ಳು ಕಾಯಿದೆಗಳನ್ನು ತಪ್ಪಿಸುವ ಸಲುವಾಗಿ ಒಂದು ವರ್ಷದ ಅವಧಿಗಿಂತ ಹೆಚ್ಚಿನ ಅವಧಿಯ ಹಿಡುವಳಿಗೆ ಲಿಖಿತ ಆದೇಶದ ಅವಶ್ಯಕತೆ ಇರುತ್ತದೆ.

ಪರಿಭಾಷೆಗಳು

ಬದಲಾಯಿಸಿ

ಭೋಗ್ಯದ ಅವಧಿಯನ್ನು, ನಿಯತ ಕಾಲಿಕ ಅಥವಾ ಅನಿರ್ಧಿಷ್ಟ ಅವಧಿಯವರೆಗೆ ನಿಗಧಿಪಡಿಸಬಹುದು. ಇದು ಒಂದು ನಿಗಧಿತ ಕಾಲಾವಧಿಗೆ ಆಗಿದ್ದಲ್ಲಿ, ವಾಯಿದೆಯು ಮುಗಿದ ತಕ್ಷಣವೇ ಅವಧಿಯು ಕೊನೆಗೊಳ್ಳುತ್ತೆದೆ. ಮತ್ತು ಕಾನೂನು ಅವಶ್ಯಕತೆಗಳ ಅನುಪಸ್ಥಿತಿಯಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಕಾಲಾವಧಿಯು ನಿಬಂಧನೆಗೆ ಒಳಪಟ್ಟಿದ್ದು, ಒಂದು ನಿರ್ಧಿಷ್ಟ ಘಟನಾವಳಿಯವರೆಗೂ ಇದು ಅಸ್ತಿತ್ವದಲ್ಲಿರುತ್ತದೆ. ಉದಾಹರಣೆಗೆ ಒಬ್ಬ ನಿರ್ದಿಷ್ಟ ವ್ಯಕ್ತಿಯ ಸಾವಿನವರೆಗೆ. ತನ್ನಿಂದತಾನೇ ವಾರಕ್ಕೆ ಅಥವಾ ತಿಂಗಳಿನ ಆಧಾರದ ಮೇಲೆ ನವೀಕರಣಗೊಳ್ಳುವ ಹಿಡುವಳಿಯನ್ನು ನಿಯತಕಾಲಿಕ ಹಿಡುವಳಿ ಎನ್ನಾಗುತ್ತದೆ. ಒಂದು ಇಚ್ಛಾ ಪೂರ್ವಕ ಹಿಡುವಳಿಯು ಇಬ್ಬರು ಭಾಗಿದಾರರೂ ಮುಂದುವರಿಸುವ ತನಕ ಅಸ್ತಿತ್ವದಲ್ಲಿರುತ್ತದೆ ಮತ್ತು ದಂಡರಹಿತವಾಗಿ ಯಾವುದೇ ಭಾಗಿಯು ಇದನ್ನು ಅಂತ್ಯಗೊಳಿಸಬಹುದಾಗಿದೆ.

ಭೋಗ್ಯವನ್ನು "ಹೊಣೆಗಾರಿಕೆಯ" ಆಧಾರದ ಮೇಲೆ ವಿಸ್ತರಿಸುವುದು ಸಾಮಾನ್ಯ ಸಂಗತಿಯಾಗಿದೆ. ಇದನ್ನು ತಿಂಗಳಿನ ಹಿಡುವಳಿ ಆಧಾರದ ಮೇಲೆ ನಿಯತಕಾಲಿಕ ಹಿಡುವಳಿಯಾಗಿ ಪರಿವರ್ತಿಸಲಾಗುತ್ತದೆ. ಒಬ್ಬ ಹಿಡುವಳಿದಾರನು, ತನ್ನ ಹಿಡುವಳಿಯನ್ನು ಮಾಲಿಕನಿಗೆ ಸ್ಪಷ್ಟವಾಗಿ ಅಥವಾ ವಿಚಾರಯುತವಾಗಿ ಬಿಟ್ಟುಕೊಡುವ ಸಾಧ್ಯತೆಗಳೂ ಇವೆ. ಈ ವಿಧಾನವನ್ನು ಭೋಗ್ಯಪತ್ರದ "ಸಮರ್ಪಣೆ" ಎನ್ನುವರು.

ಬಾಡಿಗೆ

ಬದಲಾಯಿಸಿ

ಬಾಡಿಗೆ ಎನ್ನುವುದು ಕೆಲವು ಸಾಮಾನ್ಯ ನ್ಯಾಯ ವ್ಯಾಪ್ತಿಗೆ ಒಳಪಟ್ಟಿದ್ದು, ನಾಗರೀಕ ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ. ಇಂಗ್ಲೆಂಡಿನ ಆಶ್ ಬರ್ನ್ ಅನ್‌ಸ್ಟಾಲ್ಟ್ ಮತ್ತು ಅರ್ನಾಲ್ಡ್ ನ ಒಂದು ಪ್ರಕರಣದಲ್ಲಿ ಭೋಗ್ಯವು ಒಂದು ಬಾಡಿಗೆಯ ರೂಪವಾಗಬೇಕಿಲ್ಲ ಎಂದು ವಾದ ನಡೆಸಲಾಯಿತು, ಆದರೆ ನ್ಯಾಯಾಲಯವು ಕಾನೂನು ಬದ್ದ ಸಂಬಂಧವನ್ನು ಸೃಷ್ಟಿಸಲು ಬಾಡಿಗೆ ಕೊಟ್ಟಿರುವುದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದೇ ಇದ್ದರಿಂದ ಅದನ್ನು ಒಂದು ಪರವಾನಗಿ ಎಂದು ಪರಿಗಣಿಸಿತು. ಬಾಡಿಗೆ ಹಣವನ್ನು ವಾಣಿಜ್ಯ ಹಣವನ್ನಾಗಿ ಪರಿಗಣಿಸುವ ಅಗತ್ಯ ಇರುವುದಿಲ್ಲ. ಇದಕ್ಕೆ "ಪೆಪ್ಪರ್ ಕಾರ್ನ್" ಅಥವಾ ಒಂದು ಹೆಸರಿಗೆ ಮಾತ್ರದ ಮೊತ್ತವು ಸಾಕಾಗುತ್ತದೆ.

ಕಾರು ಬಾಡಿಗೆ

ಬದಲಾಯಿಸಿ

ಈ ಮೇಲ್ಕಂಡವುಗಳ ಜೊತೆಗೆ, ಕಾರು ಬಾಡಿಗೆಯ ಒಪ್ಪಂದವು ಒಬ್ಬ ಬಾಡಿಗೆದಾರನು ಕಾರನ್ನು ಹೇಗೆ ಬಳಸಿಕೊಳ್ಳುತ್ತಾನೆ ಮತ್ತು ಯಾವ ಸ್ಥಿತಿಯಲ್ಲಿ ಅದನ್ನು ಹಿಂದಿರುಗಿಸಬೇಕು ಎಂಬುದರ ಬಗ್ಗೆ ಹಲವಾರು ನಿರ್ಬಂಧಗಳನ್ನು ಒಳಗೊಂಡಿದೆ.

ಉದಾಹರಣೆಗೆ, ನಿರ್ಧಿಷ್ಟ ಅನುಮತಿಯಿಲ್ಲದೆ ಕೆಲವು ಬಾಡಿಗೆದಾರರು ಕಾರನ್ನು ರಸ್ತೆಯಿಂದ ಹೊರಕ್ಕೆ ಓಡಿಸುವುದು, ಅಥವಾ ದೇಶದಿಂದ ಹೊರಕ್ಕೆ ತೆಗೆದುಕೊಂಡು ಹೋಗುವುದು ಅಥವಾ ಬಂಡಿಯನ್ನು ಎಳೆಯುವುದು ಮುಂತಾದ ಕಾರ್ಯಗಳನ್ನು ನಡೆಸುವಂತಿಲ್ಲ. ನ್ಯೂಜಿಲ್ಯಾಂಡ್ ನಲ್ಲಿ ನದಿಯ ದಂಡೆಯ ಬಳಿ ತೊಂಬತ್ತು ಮೈಲಿಗಿಂತಲೂ ಹೆಚ್ಚಾಗಿ ಕಾರನ್ನು ಓಡಿಸುವುದಿಲ್ಲ ಎಂಬ ವಚನಕ್ಕೆ ನೀವು ಲಿಖಿತ ಮೂಲಕ ಬದ್ದರಾಗಬೇಕಾಗುತ್ತದೆ.( ಭಯಂಕರವಾದ ಅಲೆಗಳ ಕಾರ‍ಣದಿಂದ)

ಅಲ್ಲಿ ಖಂಡಿತವಾಗಿ ಚಾಲಕ ಪರವಾನಗಿ ತೋರಿಸುವ ಅವಶ್ಯಕತೆ ಇರುತ್ತದೆ. ಅಷ್ಟೇ ಅಲ್ಲದೆ ಕರಾರಿಗೆ ಒಪ್ಪಿಕೊಂಡ ಚಾಲಕರು ಮಾತ್ರ ಅಧಿಕೃತವಾಗಿ ವಾಹನಗಳನ್ನು ಓಡಿಸಲು ಅನುಮತಿ ಪಡೆದಿರುತ್ತಾರೆ. ಇದು, ಬಾಡಿಗೆದಾರನು ಬಾಡಿಗೆ ಸುರಕ್ಷಾ ಪಾಲಿಸಿಯನ್ನು ಈಗಾಗಲೇ ಪಡೆಯದೇ ಇದ್ದಲ್ಲಿ ಆಟೋ ವಿಮೆ (ಮೋಟಾರು ವಿಮೆ,UK)ಯನ್ನು ಖರೀದಿಸುವ ಅವಕಾಶವನ್ನು ಒಳಗೊಂಡಿದೆ - ಇದು ಬಹುಮುಖಿ ಚಾಲಕರ ಇನ್ನೊಂದು ಪ್ರಮುಖ ಪರಿಗಣನೆಯಾಗಿದೆ. ಕಾರನ್ನು ಸರಿಯಾದ ಸ್ಥಿತಿಯಲ್ಲಿ ಹಿಂದಿರುಗಿಸದೇ ಇದ್ದಲ್ಲಿ ಕೆಲವು ಏಜೆನ್ಸಿಗಳು ಬಾಂಡ್ ಪತ್ರವನ್ನು ಕೇಳುತ್ತವೆ. ಇದು ಕೆಲವು ಸಮಯಗಳಲ್ಲಿ ಕ್ರೆಡಿಟ್ ಕಾರ್ಡ್ ದೃಢೀಕರಣದ ಮೂಲಕವೂ ಕಾರನ್ನು ಒಪ್ಪಂದದ ಪ್ರಕಾರ ಪಡೆಯಲಾಗುತ್ತದೆ. ಬಾಡಿಗೆಯ ಅವಧಿಯಲ್ಲಿ ವಾಹನದ ಮೇಲೆ ಬರಬಹುದಾದ ಯಾವುದೇ ವಾಹನ ನಿಲುಗಡೆ ಅಥವಾ ವಾಹನ ಸಂಚಾರ ನಿಯಮಗಳ ಉಲ್ಲಂಘನೆಗಳ ಬಗ್ಗೆ ಅವನ/ ಅಥವಾ ಅವಳ ಜವಾಬ್ದಾರಿಯ ಬಗ್ಗೆ ಬಾಡಿಗೆದಾರನಿಗೆ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೆ, ಕಳ್ಳತನ, ಅಪಘಾತ, ಮುರಿಬೀಳುವಿಕೆ ಮತ್ತು ವಾಹನಗಳನ್ನು ಎಳೆಯುವುದರ ಬಗ್ಗೆಯೂ ಸಲಹೆ ನೀಡಲಾಗುತ್ತದೆ.

ಇನ್ನೂ ಕೆಲವು ಅಂಶಗಳೆಂದರೆ, ವಿಳಂಬ ವಾಪಸಾತಿಗೆ ವಿಧಿಸಲಾಗುವ ಶುಲ್ಕ, ಭಿನ್ನವಾದ ಸ್ಥಳಗಳಲ್ಲಿ ಬಿಡುವುದು ಅಥವಾ ವಾಪಸಾತಿಗೆ ಮುನ್ನ ಪೆಟ್ರೋಲ್‌ನ್ನು ಹಾಕಿಸದೇ ಇರುವುದು ಮುಂತಾದವುಗಳನ್ನು ಒಳಗೊಂಡಿದೆ.

ಅಂತಿಮವಾಗಿ, ಕಾಯ್ದಿರಿಸುವಿಕೆಯ ಮರುಪಾವತಿಸಲಾಗದ ಖಾತೆಗೆ ಅವಕಾಶಗಳು, ಪ್ರಾರಂಭ ಅವಧಿಯ ಪಾವತಿಗಳು (ಸೋಡಿಗಳು, ರಶೀದಿಗಳು ಇತ್ಯಾದಿ) ವಿಸ್ತರಿತ ಕಲಾವಧಿಗಳು ಮತ್ತು ಯವುದೇ ಹಾನಿ ಅಥವಾ ವಾಪಾಸ್ಸಾತಿಗೆ ಮುನ್ನ ಪಡೆಯುವ ಇತರ ಶುಲ್ಕಗಳನ್ನು ಒಳಗೊಂಡಿವೆ.

ಭೂ ನಿವೇಶನ ಬಾಡಿಗೆ

ಬದಲಾಯಿಸಿ

ಒಂದು ಬಾಡಿಗೆ ಒಪ್ಪಂದ ವಿಶೇಷವಾಗಿ ಭೂನಿವೇಶನವನ್ನು ಬಾಡಿಗೆಗೆ ಕೊಟ್ಟಾಗ ಅದನ್ನು ಭೋಗ್ಯಪತ್ರ ಎನ್ನುವರು. ಈ ಬಾಡಿಗೆಯ ಮೂಲಭೂತಗಳೊಂದಿಗೆ (ಯಾರು, ಏನು, ಯಾವಾಗ, ಎಷ್ಟು), ಒಬ್ಬ ಭೂನಿವೇಶನದ ಬಾಡಿಗೆದಾರನು ಇದರ ಬಗ್ಗೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು. ಒಂದು ಭೂನಿವೇಶನವನ್ನು ವಸತಿ, ವಾಹನಗಳನ್ನು ನಿಲ್ಲಿಸಲು, ಸಂಗ್ರಹ, ಕೃಷಿ, ಸಂಸ್ಥೆ ಅಥವಾ ಸರ್ಕಾರಿ ಉಪಯೊಗ ಅಥವಾ ಇತರ ಕಾರಣಗಳಿಗೆ ಬಾಡಿಗೆ ಕೊಡಬಹುದು.

  • ಯಾರು:ಗುತ್ತಿಯಲ್ಲಿ ಪಾಲ್ಗೊಳ್ಳುವ ಭಾಗೀದಾರರು ತಮ್ಮನ್ನು ಮಾಲಿಕನಾಗಿ (ಕೆಲವೊಮ್ಮೆ ಯಜಮಾನ ಅಥವಾ ಜಮೀನುದಾರ) ಎಂದು ಕರೆಯಲಾಗುವುದು) ಮತ್ತು ಉಪಭೋಗಿಯಾಗಿ (ಕೆಲವೊಮ್ಮೆ ಬಾಡಿಗೆದಾರ ಅಥವಾ ಹಿಡುವಳಿದಾರ) ಗುತ್ತಿಗೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಒಂದು ಮನೆಯ ಭೋಗ್ಯಪತ್ರವು, ಬಾಡಿಗೆದಾರನು ಒಂಟಿಯಾಗಿರುವನೇ, ಕುಟುಂಬ ಮಕ್ಕಳು, ಜೊತೆಗಾರ ಮತ್ತು ಸಂದರ್ಶಕರ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ನೀಡುತ್ತದೆ. ಬಾಡಿಗೆ ಹಣವು ಪ್ರತಿಯೊಂದು ಹಕ್ಕು ಮತ್ತು ಒಪ್ಪಂದಗಳನ್ನು ರೂಪಿಸಬಹುದು. ಉದಾಹರಣೆಗೆ, ಜಮೀನುದಾರ ಇಲ್ಲದೆ ಒಬ್ಬ ಅಪರಿಚಿತನಿಗೆ ವಕ್ಕಲಿಗೆ ಕೊಡುವುದಕ್ಕೆ ಅನುಮತಿ ನೀಡಲಾಗುವುದಿಲ್ಲ. ಇದು ಬಾಡಿಗೆದಾರನು ತನ್ನ ಪ್ರೀತಿ ಪಾತ್ರರರನ್ನು ಇಟ್ಟುಕೊಳ್ಳಬೇಕೆ ಅಥವಾ ಬೇಡವೇ ಎಂಬುದಕ್ಕೂ ಅನ್ವಯಿಸುತ್ತದೆ. ಮತ್ತೊಂದು ಕಡೆ, ಕೆಲವು ತುರ್ತು ಸನ್ನಿವೇಶಗಳನ್ನು ಹೊರತುಪಡಿಸಿ ಮಾಲಿಕನು ಒಳನುಗ್ಗುವುದರ ವಿರುದ್ಧ ಬಾಡಿಗೆದಾರನು ತನ್ನದೇ ಆದ ನಿರ್ಧಿಷ್ಟ ಹಕ್ಕುಗಳನ್ನು ಹೊಂದಿರುತ್ತಾನೆ. ಒಬ್ಬ ಬಾಡಿಗೆದಾರನು ಆಸ್ತಿಯ ಸಂಪೂರ್ಣ ಒಡೆತನವನ್ನು ಹೊಂದಿದ್ದು, ಮಾಲಿಕನು ಸೂಕ್ತ ಮುನ್ಸೂಚನೆ ಮತ್ತು ಹಕ್ಕು (ಉದಾ:24ಗಂಟೆಗಳ ಮುನ್ಸೂಚನೆ, ಹಗಲುವೇಳೆ ಬರುವುದು, ಮೊದಲು ಬಾಗಿಲು ತಟ್ಟುವುದು, ತುರ್ತು ರಿಪೇರಿಗಳು, ಬೆಂಕಿ ಅನಾಹುತ, ಪ್ರವಾಹ ಇತ್ಯಾದಿ) ಇಲ್ಲದೆ ಪ್ರವೇಶಿಸಿದಲ್ಲಿ ಬಾಡಿಗೆದಾರನ ಹಕ್ಕುಗಳನ್ನು ಅತಿಕ್ರಮಿಸಿದಂತಾಗುತ್ತದೆ.
  • ಏನು: ಒಂದು ಭೂನಿವೇಶನವು , ಸಂಪೂರ್ಣ ಅಥವಾ ಸ್ಥಿರಾಸ್ತಿಯ ಹೆಚ್ಚು ಕಡಿಮೆ ಯಾವುದೇ ಭಾಗವಾದ ಮಹಡಿ, ಮನೆ, ಕಟ್ಟಡ, ವ್ಯಾಪಾರ ಕಛೇರಿ ಅಥವಾ ಕೋಣೆಗಳು, ಭೂಮಿ, ಒಕ್ಕಲು ಜಮೀನು, ಅಥವಾ ಒಂದು ವಾಹನವನ್ನು ನಿಲ್ಲಿಸಲು ಹೊರಗೆ ಅಥವಾ ವಸ್ತುಗಳನ್ನು ಸಂಗ್ರಹಿಸಲು ಇರುವ ಸ್ಥಳಗಳನ್ನು ಹೊಂದಿರುತ್ತದೆ. ಬಾಡಿಗೆ ಸ್ಥಳಗಳು ಬರೀ ನಿರ್ಧಿಷ್ಟ ಕೋಣೆಗಳನ್ನು ಮಾತ್ರವೇ ಒಳಗೊಂಡಿರದೆ, ಸಹಜ ಸ್ಥಳಗಳಾದ ವಾಹನಗಳನ್ನು ನಿಲ್ಲಿಸುವ ಬೀದಿಯ ಸ್ಥಳ, ನೆಲಮಾಳಿಗೆ ಅಥವಾ ಉಪ್ಪರಿಗೆ, ಬಟ್ಟೆ ಒಗೆಯುವ ಅನುಕೂಲಗಳು, ಕೊಳ, ಬಾಲ್ಕನಿ, ಮೇಲಂತಸ್ತು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಆವರಣಗಳ ಪ್ರಸ್ತುತ ಪರಿಸ್ಥಿಯ ಸಂಪೂರ್ಣವಾದ ವಿವರಗಳು, ಅವುಗಳನ್ನು ಒಪ್ಪಿಸುವಾಗ ತಾಳೆ ನೋಡಲು ಅನೂಕಲ ಮಾಡಿಕೊಡುತ್ತವೆ.
  • ಯಾವಾಗ: ಬಾಡಿಗೆಯ ಅವಧಿ ಒಂದು ರಾತ್ರಿ (ಉದಾ; ಒಂದು ಹೋಟೆಲ್ ರೂಮ್), ಒಂದು ವಾರ, ತಿಂಗಳು ಅಥವಾ ಒಂದು ವರ್ಷವಿದ್ದಾಗ. ಯಾವುದೇ ಬಾಡಿಗೆಯನ್ನು ನಿರ್ಧಿಷ್ಟ ವರ್ಷಗಳ ಅವಧಿಗಿಂತ ಹೆಚ್ಚು ವಿಸ್ತರಿಸಲು (ಉದಾ: ಏಳು ವರ್ಷಗಳು) ಬೇಕಾದ ನೋಂದಣಿಗೆ ಕಾನೂನು ಬದ್ದವಾದ ಅವಕಾಶಗಳಿವೆ. ಇದು ಹೊಸ ಮಾಲಿಕನ ಮೇಲೆ ಹೆಚ್ಚಿನ ಒತ್ತನು ಹಾಕಲು ಅವಕಾಶ ನೀಡುತ್ತದೆ.
ಒಂದು ಮಾದರಿ ಬಾಡಿಗೆ ಮೊತ್ತವೆಂದರೆ, ಅದು ವರ್ಷಕ್ಕೆ ಅಥವಾ ತಿಂಗಳಿಗೆ ಮತ್ತು ಧೀರ್ಘ ಕಾಲದ ಬಾಡಿಗೆದಾರರಿಗೆ ಮೊತ್ತವು ಭಿನ್ನವಾಗಿರುತ್ತದೆ. (ಎಕೆಂದರೆ ವಹಿವಾಟಿನ ಮೊತ್ತ ಕಡಿಮೆ ಇರುತ್ತದೆ) ಧೀರ್ಘ ಕಾಲಾವಧಿಯ ಭೋಗ್ಯವನ್ನು ವಾಯಿದೆಗಿಂತ ಮುಂಚೆ ಬಿಡುವುದು ದಂಡಪಾವತಿಗೆ ಅಥವಾ ಕರಾರು ಅವಧಿಯ ಸಂಪೂರ್ಣ ಮೊತ್ತದ ಪಾವತಿಗೆ ಕಾರಣವಾಗುತ್ತದೆ (ಒಂದು ವೇಳೆ ಮಾಲಿಕನು ಸೂಕ್ತ ಹಿಡುವಳಿದಾರನನ್ನು ಕಂಡುಕೊಳ್ಳಲು ವಿಫಲವಾದಲ್ಲಿ) ಒಬ್ಬ ಹಿಡುವಳಿದಾರನು ತನ್ನ ಅವಧಿಗೆ ಮೀರಿ ವರ್ಷಗಟ್ಟಲೆ (ಒಂದು ಅಥವಾ ಹೆಚ್ಚು) ಇದ್ದರೆ, ನಂತರ ಭಾಗಿದಾರರು ಭೋಗ್ಯವನ್ನು ತನ್ನಿಂದ ತಾನೇ ನವೀಕರಣಗೊಳ್ಳಲು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಹಿಂದಿನ ವಾರ್ಷಿಕ ಹಿಡುವಳಿಯ ತಿಂಗಳಿನ ದರದಲ್ಲಿ ಇಚ್ಚಾಪೂರ್ವಕ ಹಿಡುವಳಿಯಾಗಿ (ಪ್ರತಿ ತಿಂಗಳು) ಪರಿವರ್ತಿಸಬಹುದು. ಒಬ್ಬ ಹಿಡುವಳಿದಾರನು ತನ್ನ ವಟಾರವನ್ನು ಬಿಡುವಂತೆ ಸೂಚನೆಯನ್ನು ಕೊಡಲ್ಪಟ್ಟರೆ ಮತ್ತು ಆತನು ಅದಕ್ಕೆ ಒಪ್ಪದೇ ಹೋದರೆ ಜಮೀನುದಾರನು ನಂತರ ಆತನನ್ನು ಕಾನೂನು ಸಮ್ಮತವಾಗಿ ಹೊರಹಕುವ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ಹಲವಾರು ಸ್ಥಳಗಳಲ್ಲಿ ಸಹಜವಾಗಿ ನಡೆಯುವ, ಬೀಗಗಳನ್ನು ಬದಲಾಯಿಸುವುದು ಅಥವಾ ಒಬ್ಬನ ವಸ್ತುಗಳನ್ನು ಹೊರಹಾಕುವುದು, ಬಲವಂತವಾಗಿ ಹೊರಕ್ಕೆ ತಳ್ಳುವುದು, ನ್ಯಾಯಲಯದ ಆದೇಶವಿಲ್ಲದೆ ಹೊರ ತಳ್ಳುವುದು ಮುಂತಾದವು ಕಾನೂನಿಗೆ ವಿರುದ್ಧವಾದವುಗಳಾಗಿವೆ.

ಇಂತಹ ಕಾನೂನು ಉಲ್ಲಂಘನೆಗಳಿಗೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಕಠಿಣವಾದ ದಂಡಗಳನ್ನು (ತ್ರಿವಳಿ ದಂಡಗಳುಮತ್ತು ಅಟಾರ್ನಿ ಶುಲ್ಕಗಳು) ವಿಧಿಸಲಾಗುತ್ತದೆ.

  • ಎಷ್ಟು ಬಾಡಿಗೆಯನ್ನು ತಿಂಗಳಿಗೆ, ವರ್ಷಕ್ಕೆ ಅಥವಾ ಮುಂಗಡವಾಗಿ ಅಥವಾ ಒಪ್ಪಂದಂತೆ ಪಾವತಿಸಬಹುದು. ಹಿಡುವಳಿದಾರನ ಇಚ್ಛೆಯಂತೆ ಒಂದು ಮಾದರಿ ಒಪ್ಪಂದವೆಂದರೆ" ಮೊದಲ ಮತ್ತು ಕಡೆಯ ತಿಂಗಳಿನ ಬಾಡಿಗೆ" ಇದರೊಂದಿಗೆ ರಕ್ಷಣಾ ಖಾತೆಯನ್ನು ತೆರೆಯುವುದು. " ಕಡೆಯ ತಿಂಗಳಿನ ಬಾಡಿಗೆ"ಯೆಂದರೆ ಜಮೀನುದಾರನು ಇನ್ನೂ ತಾನು ಪಡೆಯಬೇಕಿದ್ದ ಬಾಡಿಗೆ ಎಂದು ಅರ್ಥ.

ಹಿಡುವಳಿದಾರನ ಒಡೆತನದ ಸುರಕ್ಷಾ ಠೇವಣಿಯನ್ನು ಒಂದು ಎಸ್ಕ್ರೋ ಠೇವಣಿಯಾಗಿ ನಡೆಸಲಾಗುತ್ತದೆ. ಆದರೆ ಸೊತ್ತುಗಳನ್ನು ಸುಸ್ಥಿಯಲ್ಲಿ ಹಿಂದಿರುಗಿಸುವವರೆಗೂ (ಸವಕಳಿಯ ವಸ್ತುಗಳನ್ನು ಹೊರತುಪಡಿಸಿ) ಮಾಲಿಕನ ಅಧೀನದಲ್ಲಿರುತ್ತದೆ. ಕೆಲವು ರಾಷ್ಟ್ರಗಳಲ್ಲಿ ಮಾಲಿಕನು ಸುರಕ್ಷಾ ಠೇವಣಿಯಿರುವ ಹಿಡುವಳಿದಾರನ ಹೆಸರು ಮತ್ತು ಬ್ಯಾಂಕ್ ಖಾತೆಯನ್ನು ಪಡೆದು, ಹಿಡುವಳಿದಾರನಿಗೆ ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತಾನೆ. ಇತರ ಕಾಯಿದೆಗಳ ಪ್ರಕಾರ, ಮಾಲಿಕನು ಹಿಂದೆ ಹಾನಿಗೊಳಗಾದ ಆಸ್ತಿಯ ಪಟ್ಟಿಯನ್ನು ಕೊಡಬೇಕಾಗುತ್ತದೆ ಅಥವಾ ಸುರಕ್ಷಾ ಖಾತೆಯನ್ನು ತಕ್ಷಣಾವೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. (ಏಕೆಂದರೆ ಹಿಂದಿನ ಹಿಡುವಳಿದಾರನು ಜವಾಬ್ದಾರನು ಎನ್ನುವುದಕ್ಕೆ ಬೇರೆ ವಿಧಾನ ಇರುವುದಿಲ್ಲ)

ಅನೇಕ ಬಹುಮಹಡಿ ಕಟ್ಟಡಗಳನ್ನು ಬಾಡಿಗೆಗೆ ಅಥವಾ ಭೋಗ್ಯಕ್ಕೆ ಕೊಡುವಾಗ, ಒಬ್ಬ ಬಾಡಿಗೆದಾರನು ( “ಲಿಸ್ಸೀ" ಎಂದೂ ಕರೆಯಲಾಗುವುದು) ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಬಾಡಿಗೆದಾರರ ವಿಮೆಗೆ ಸಾಕ್ಷಿಯನ್ನು ಒದಗಿಸಬೇಕಾಗುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಶೇಷವಾಗಿ ಬಾಡಿಗೆದಾರರಿಗೆ HO-4 ಎಂಬ ವಿಶಿಷ್ಟವಾದ ಮನೆಮಾಲಿಕರ ವಿಮೆ ಯ ಸೌಲಭ್ಯವಿದೆ. ಇದನ್ನು ಸಾಮಾನ್ಯವಾಗಿ ಬಾಡಿಗೆದರನ ವಿಮೆ ಅಥವಾ ಬಾಡಿಗೆದಾರನ ರಕ್ಷಣೆ ಎಂದು ಕರೆಯಲಾಗುವುದು. ಕಾಂಡೊಮಿನಿಮಮ್ ಸುರಕ್ಷತೆ ಎಂದು ಕರೆಯಬಹುದಾದ HO-6 ಪಾಲಿಸಿಯು, ಬಾಡಿಗೆದಾರನ ವಿಮಾ ಅಂಶಗಳಾದ ಮಹಡಿ ಮತ್ತು ಬ್ಲಾಂಕೆಟ್ ಪಾಲಿಸಿಯಲ್ಲಿ ನಿಖರವಾಗಿ ಗುರುತಿಸಲಾಗದ ಇತರ ಅಂಶಗಳನ್ನು ಹೊಂದಿದೆ. ಈ ಪಾಲಿಸಿಯು ಅಪಘಾತ ಮತ್ತು ಉದ್ದೇಶಪೂರ್ವಕ ಗಾಯಗಳು ಹಾಗೂ ಮನೆಯ ಮುಂದೆ ಸುಮಾರು 150' ದೂರದಲ್ಲಿ ಹೋಗುವ ಪಾದಾಚಾರಿಗಳಿಗೂ ಸುರಕ್ಷತೆಯನ್ನು ಕೊಡುತ್ತದೆ. ಬಾಡಿಗೆದಾರನ ಪಾಲಿಸಿಯಾದ "ನೇಮ್ಡ್ ಪೆರಿಲ್" ಸುರಕ್ಷತೆಯನ್ನು ನೀಡುತ್ತದೆ. ಇದರ ಅರ್ಥ ನೀವು ಯಾವುದಕ್ಕೆ ವಿಮದಾರರಾಗಿದ್ದೀರಿ ಎಂಬುದಕ್ಕೆ ಸ್ಪಷ್ಟೀಕರಣ ನೀಡುತ್ತದೆ. ಸಾಮಾನ್ಯವಾಗಿ ವ್ಯಾಪ್ತಿ ಯಲ್ಲಿರುವ ಕೆಲವು ವಲಯಗಳೆಂದರೆ:

  • ಬೆಂಕಿ ಅಥವಾ ಮಿಂಚು
  • ಬಿರುಗಾಳಿ
  • ಹೊಗೆ
  • ವಿಧ್ವಂಸಕತನ ಅಥವಾ ದುರುದ್ದೇಶಪೂರಿತ ಕಿಡಿಗೇಡಿತನ
  • ಕಳವು
  • ನೀರಿನ ಅನಿರೀಕ್ಷಿತ ಬಿಡುಗಡೆ []

ಇದರ ಜೊತೆಗೆ ಇನ್ನು ಕೆಲವು ಘಟನೆಗಳು ಸೇರಿವೆ ಅಡಚಣೆಗಳು, ವಿಮಾನ, ಸ್ಪೋಟನ, ಹೊಗೆ, ಆಲಿಕಲ್ಲುಗಳು, ಬೀಳುವ ವಸ್ತುಗಳು, ಜ್ವಾಲಾಮುಖಿ, ಹಿಮ, ಹಿಮಮಳೆ, ಮತ್ತು ಸುತ್ತುವರೆದಿರುವ ಮಂಜುಗಡ್ಡೆಯ ತೂಕ.[]

ಭೂಮಿ ಭೋಗ್ಯ

ಬದಲಾಯಿಸಿ

ಭೂಮಿ ಭೋಗ್ಯ ಅಥವಾ ನೆಲ ಭೋಗ್ಯವೆಂದರೆ , ಹಿಡುವಳಿದಾರನು ಆ ಭೂಮಿಗೆ ಬಾಡಿಗೆಯನ್ನು ಕೊಟ್ಟು ಅದನ್ನು ಬಳಸುತ್ತಾನೆ, ಆದರೆ ಅಲ್ಲಿರುವ ತಾತ್ಕಾಲಿಕ ಅಥವಾ ಶಾಶ್ವತ ಕಟ್ಟಡಗಳು ಮತ್ತು ಇತರ ವಸ್ತುಗಳ ಮೇಲೆ ಒಡೆತನವನ್ನು ಹೊಂದಿರುತ್ತಾನೆ.

ಉಪಭೋಗ್ಯ

ಬದಲಾಯಿಸಿ

ಭೂನಿವೇಶನ ಕಾಯಿದೆಯಲ್ಲಿ ಉಪಭೋಗ್ಯ (ಅಥವಾ ಔಪಚಾರಿಕವಾಗಿ, ಒಳ ವಕ್ಕಣಿಕೆ) ಎಂಬ ಹೆಸರನ್ನು ಒಂದು ಭೋಗ್ಯದಲ್ಲಿ ಬಳಕೆದಾರನು ಮುರನೇ ವ್ಯಕ್ತಿಗೆ ಪರಭಾರೆಯನ್ನು ಕೊಡುವ ಒಪ್ಪಂದವನ್ನು ಮಾಡಿಕೊಳ್ಳುವುದರ ಮೂಲಕ ಹಳೆಯ ಬಳಕೆದಾರನನ್ನು ಉಪ-ಮಾಲಿಕನನ್ನಾಗಿ ಮಾಡಲಾಗುತ್ತದೆ ಮತ್ತು ನೂತನ ಉಪಮಾಲಿಕ ಅಥವಾ ಉಪಹಿಡುವಳಿದಾರ ಅಸ್ತಿತ್ವಕ್ಕೆ ಬರುತ್ತಾನೆ. ಅಂದರೆ ನೀವು ಒಂದೇ ಸಮಯದಲ್ಲಿ ಬಾಡಿಗೆಯನ್ನು ಕೊಡುತ್ತಾ ಮತ್ತು ಬಾಡಿಗೆಯನ್ನು ಸ್ವೀಕರಿಸುತ್ತಾ ಇದ್ದೀರಿ ಎಂದು ಅರ್ಥ. ಉದಾಹರಣೆಗೆ, ಒಂದು ಕಛೇರಿಯ ಮಾಲಿಕನು ತನ್ನ ಇಡೀ ಕಟ್ಟಡವನ್ನು ಒಂದು ಆಡಳಿತ ಮಂಡಳಿಗೆ ಬೋಗ್ಯ ಕೊಡಬಹುದು. ಈ ಕಂಪನಿಯು ನಂತರ ಕಟ್ಟಡದ ಕೆಲವು ಭಾಗಗಳನ್ನು ಇತರರಿಗೆ ಉಪಬೋಗ್ಯವಾಗಿ ಕೊಡಬಹುದು. ವ್ಯವಸ್ಥಾಪಕ ಮಂಡಳಿಯು ಒಬ್ಬ ವ್ಯಕ್ತಿಗೆ ಉಪಬೋಗ್ಯದ ಪತ್ರದ ಮುಖಾಂತರ ಒಂದು ಆಸ್ತಿಯನ್ನು ಒಳ ವಕ್ಕಣಿಕೆ ರೂಪದಲ್ಲಿ ನೀಡಬಹುದು. ಇಂತಹ ಸನ್ನಿವೇಶದಲ್ಲಿ ವ್ಯವಸ್ಥಾಪಕ ಕಂಪನಿಯು (ಇದಕ್ಕೆ ಮೊದಲು ಮೂಲ ಭೋಗ್ಯಪತ್ರದಲ್ಲಿ ಉಪಭೋಗಿಯಾಗಿದ್ದವನು) ಉಪ-ಮಾಲಿಕನಾಗುತ್ತಾನೆ ಮತ್ತು ಏಕ ವ್ಯಕ್ತಿ ಹಿಡುವಳಿದಾರರು ಉಪಹಿಡುವಳಿದಾರ ಅಥವಾ ಉಪ-ಬಾಡಿಗೆದಾರರಾಗುತ್ತಾರೆ.

ಉಪ-ಬಳಕೆದಾರನು, ಮೂಲ ಬಳಕೆದಾರನ ಆಸ್ತಿಯ ಯಾವುದೇ ನಷ್ಟ ಮತ್ತು ಬಾಡಿಗೆ ಪಾವತಿಗೆ ಸಂಪೂರ್ಣ ಹೊಣೆಗಾರನಾಗಿರುತ್ತಾನೆ. ಕೆಲವು ಸಂದರ್ಭಗಳಲ್ಲಿ , ಮೂಲ ಬಳಕೆದಾರನು ಎರಡನೆ ಬಳೆಕೆದಾರನಿಂದ ತಾನು ಪಾವತಿಸುತ್ತಿದ್ದ ಬಾಡಿಗೆಗಿಂತ ಕಡಿಮೆ ಬಾಡಿಗೆಯನ್ನು ಮೊತ್ತವನ್ನು ಪಡೆಯುವುದರ ಮುಲಕ ತನ್ನ ಮೂಲ ಬಾಡಿಗೆಯ ಭಾಗಶಃ ಮೊತ್ತಾವನ್ನು ಕೈಬಿಡಬಹುದು. ಕೆಲವು ಸಮಯಗಳಲ್ಲಿ ಉಪಭೋಗ್ಯದ ಕರಾರಿನಲ್ಲಿ ಉಪ-ಹಿಡುವಳಿದರನಿಂದ ಮೂಲ ಬಾಡಿಗೆಗಿಂತ ಹೆಚ್ಚಿನ ಹಣವನ್ನು ಪಡೆಯುವುದು ಕಾನೂನು ಬಾಹಿರವೆನಿಸುತ್ತದೆ. (ಉದಾಹರಣೆಗೆ, ಬಾಡಿಗೆ ನಿಯಂತ್ರಣ ಕಾಯಿದೆ ಮೂಲಕ ಬಾಡಿಗೆ ಹಣವನ್ನು ನಿಯಂತ್ರಿಸುವುದು)

ಎರಡನೇ ಭೊಗ್ಯ ಪತ್ರವು ಕಾರಿನ ಬಾಡಿಗೆ ಹಣದಂತೆ ಇತರ ವಾಹನಗಳಿಗೂ ಅನ್ವಯಿಸುತ್ತದೆ. ಒಂದು ವಾಹನ ಉಪ-ಭೋಗ್ಯಪತ್ರದಲ್ಲಿ, ಒಬ್ಬ ಉಪಭೊಗಿಯುಅಥವಾ ವಾಹನದ ಮಾಲಿಕನು ಮೂರನೇ ವ್ಯಕ್ತಿಗೆ ಭೋಗ್ಯಪತ್ರವನ್ನು, ಒಂದು ನಿರ್ಧಿಷ್ಟ ದಿನಗಳವರೆಗೆ ಗುತ್ತಿಗೆ ಒಪ್ಪಂದದ ಮೂಲಕ ಪರಭಾರೆಗೆ ಒಪ್ಪಿಸಬಹುದು

ಇಂತಹ ಒಪ್ಪಂದವು ಅಷ್ಟೊಂದು ಜನಪ್ರಿಯತೆಯನ್ನು ಹೊಂದದೇ ಇದ್ದರೂ, ಕೈಗರಿಕಾ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಮತ್ತು ಸ್ಥಳಿಯರಿಗೆ ಇದು ಒಂದು ಕಡಿಮೆ ಖರ್ಚಿನ ಪರ್ಯಾಯವಾಗಿರುವುದರಿಂದ ಈ ಒಲವು ಹೆಚ್ಚಾಗಿ ಬೆಳೆಯುತ್ತಿದೆ.

ಮುಖ್ಯ ಭೋಗ್ಯ

ಬದಲಾಯಿಸಿ

ಒಬ್ಬ ಹಿಡುವಳಿದಾರ ಮತ್ತು ಜಮೀನುದಾರನ ಮಧ್ಯೆ ನಡೆಯುವ ಭೋಗ್ಯದ ಮೂಲಕ ಸಂಪೂರ್ಣ ಕರಾರು ಜವಾಬ್ದಾರಿಯನ್ನು ಒಬ್ಬ ಗೊತ್ತುಪಡಿಸಿದ ಮುಖ್ಯ ಹಿಡುವಳಿದಾರನಿಗೆ ಒಪ್ಪಿಸಿಕೊಡುವುದನ್ನು ಮುಖ್ಯ ಭೋಗ್ಯ ಎನ್ನಲಾಗುವುದು.

ಈ ವಿಧದ ಭೋಗ್ಯಪತ್ರವು ಸಾಮಾನ್ಯವಾಗಿ ಹಲವಾರು ಹಿಡುವಳಿದಾರ ಮತ್ತು ಉಪಭೋಗ್ಯಗಳಿಗೆ ಸಂಬಂಧಿಸಿದ್ದು, ಉಪಭೋಗ್ಯಗಳಿಗಿಂತ ಹೆಚ್ಚಿನ ಅವಧಿಗಳಿಗೆ ಇದು ಅನ್ವಯಿಸುತ್ತದೆ.[]

ಇವನ್ನೂ ನೋಡಿ

ಬದಲಾಯಿಸಿ
  • ಭೋಗ್ಯಪತ್ರ
  • ಭೋಗ್ಯಪತ್ರ ಆಸ್ತಿ
  • ಬಾಡಿಗೆ ನೀಡುವುದು
  • ಭೋಗ್ಯಪತ್ರದ ನ್ಯಾಯಬದ್ಧ ಮೌಲ್ಯಮಾಪನ
  • ವಿವರಪೂರ್ಣ (ಕಾನೂನು)
  • ಬಾಡಿಗೆ ಒಪ್ಪಂದ (ವೈಯಕ್ತಿಕ ಮತ್ತು ಸ್ಥಿರಾಸ್ಥಿ ಬಾಡಿಗೆಗೆ)
  • ಭೋಗ್ಯ ನೀಡುವುದು
  • ಹಣಕಾಸು ಭೋಗ್ಯ
  • ಕಾರ್ಯನಡೆಸುವ ಭೋಗ್ಯ
  • ಸನ್ನೆ ಬಳಕೆಯ ಭೋಗ್ಯ
  • ವಾಹನ ಭೋಗ್ಯ

ಉಲ್ಲೇಖಗಳು

ಬದಲಾಯಿಸಿ
  1. ಸ್ಟಿಕ್ನೇ ಅಂಡ್ ವೆಯ್ಲ್ 2007 ಪು. 791 (ಗ್ಲಾಸರಿ ಆಫ್ ಫೈನಾನ್ಷಿಯಲ್ ಅಕೌಂಟಿಂಗ್: ಅನ್ ಇಂಟ್ರೊಡಕ್ಷನ್ ಟು ಕಾನ್ಸೆಪ್ಟ್ಸ್, ಮೆಥಡ್ಸ್ ಅಂಡ್ ಯೂಸ್ 12e).
  2. 34 ಆಮ್. ಜುರ್. 2ಡಿ ಫೆಡರಲ್ ಟ್ಯಾಕ್ಸೇಷನ್ ¶ 16762 ವಿಭಾಗ 467 ರೆಂಟಲ್ ಅಗ್ರಿಮೆಂಟ್ಸ್ ಡಿಫೈನ್ಡ್:
  3. "ಇಫ್ ಯು ವಾಂಟ್ ಇಟ್, ರೆಂಟ್ ಇಟ್ ... ಫ್ರಂ ಎ 'ಮಸ್ಟ್ ಹ್ಯಾವ್' ಹ್ಯಾಂಡ್‌ಬ್ಯಾಗ್ ಟು ಅನ್ ಆಸ್ಟನ್ ಮಾರ್ಟಿನ್", ದಿ ಅಬ್ಸವರ್ , 2009-01-04. 2006-09-12ರಂದು ಮರುಸಂಪಾದಿಸಿದ್ದು.
  4. Sullivan, Arthur (2003). Economics: Principles in action. Upper Saddle River, New Jersey 07458: Prentice Hall. p. 523. ISBN 0-13-063085-3. Archived from the original on 2016-12-20. Retrieved 2021-03-01. {{cite book}}: Unknown parameter |coauthors= ignored (|author= suggested) (help)CS1 maint: location (link)
  5. ಇಂಗ್ಲೆಂಡ್ ಅಂಡ್ ವೇಲ್ಸ್ ದಿ ಲಾ ಆಫ್ ಪ್ರಾಪರ್ಟಿ ಆಕ್ಟ್ 1925 s149(6)
  6. ಭೋಗ್ಯಕ್ಕೆ ನಿಶ್ಚಿತ ಉದಾಹರಣೆಗಳು: http://www.documatica-forms.com/usa/residential-rental-lease/more-info.php
  7. "ಅಬೌಟ್ ರೆಂಟರ್ಸ್ ಇನ್ಷುರೆನ್ಸ್", ”ಗೀಕೊ” 3 ಮೇ 2008ರಂದು ಮರುಸಂಪಾದಿಸಲಾಗಿದೆ.
  8. ^ Wiening, Eric (2002). Personal Insurance (1st ed.). Malvern, Pennsylvania: American Institute for Chartered Property Casualty Underwriters/Insurance Institute of America. ISBN 0-89463-108-X. {{cite book}}: Cite has empty unknown parameters: |origmonth=, |month=, |chapterurl=, and |origdate= (help); Unknown parameter |coauthors= ignored (|author= suggested) (help)
  9. "Real Estate Glossary Business Dictionary Definition Head Lease". www.bizoptions.com. Archived from the original on 2010-09-25. Retrieved 2010-08-05.

ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಭೋಗ್ಯ&oldid=1233656" ಇಂದ ಪಡೆಯಲ್ಪಟ್ಟಿದೆ