ಭೂಮನ್ಯು ಹಿಂದೂ ಸಾಹಿತ್ಯದಲ್ಲಿ ಚಂದ್ರವಂಶವೆಂಬ ರಾಜವಂಶದ ರಾಜ. ಭೂಮನ್ಯುವು ಭರತನ ಮಗ ಹಾಗೆಯೇ ದುಷ್ಯಂತನ ಮೊಮ್ಮಗ. ಭೂಮನ್ಯುವಿನ ವಂಶವು ಮಹಾಭಾರತದಲ್ಲಿ ಕಾಣಿಸಿಕೊಂಡಿದೆ. []

ಭೂಮನ್ಯು
ಮಕ್ಕಳುದಿವಿರತ, ಸುಹೋತ್ರ, ಸುಹೋತ, ಸುಕವಿ, ಸುಯಜು ಮತ್ತು ಷಿಕ
ಗ್ರಂಥಗಳುಮಹಾಭಾರತ
ತಂದೆತಾಯಿಯರುಭರತ (ತಂದೆ), ಸುನಂದಾ (ತಾಯಿ)
ಪೂರ್ವಾಧಿಕಾರಿಭರತ
ಉತ್ತರಾಧಿಕಾರಿಸುಹೋತ್ರ

ದಂತಕಥೆ

ಬದಲಾಯಿಸಿ

ಮಹಾಭಾರತವು ಭೂಮನ್ಯುವಿನ ಜನ್ಮದ ಎರಡು ವಿಭಿನ್ನ ಮೂಲಗಳನ್ನು ನೀಡುತ್ತದೆ: ಮೊದಲ ದಂತಕಥೆಯು ಭರತನು ಕಾಶಿ ಸಾಮ್ರಾಜ್ಯದ ರಾಜ ಸರ್ವಸೇನನ ಮಗಳು ಸುನಂದಾಳನ್ನು ವಿವಾಹವಾದನು ಮತ್ತು ಅವಳಿಂದ ಭೂಮನ್ಯು ಎಂಬ ಮಗನನ್ನು ಪಡೆದನು ಎಂದು ಹೇಳುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ, ಭರದ್ವಾಜ ಋಷಿಯ ಸೂಚನೆಯ ಮೇರೆಗೆ ಭರತನು ಮಾಡಿದ ಯಜ್ಞದಿಂದ ಭೂಮನ್ಯು ಜನಿಸಿದನು. []

ಮಹಾಕಾವ್ಯದಲ್ಲಿ ಭೂಮನ್ಯು ಪ್ರಬುದ್ಧ ವಯಸನ್ನು ತಲುಪಿದ ನಂತರ ಅವನ ತಂದೆ ಭರತನು ಅವನ ರಾಜ್ಯದ ವ್ಯವಹಾರಗಳನ್ನು ಅವನಿಗೆ ವಹಿಸಿದನು. ಭೂಮನ್ಯು ಮತ್ತು ಹೆಂಡತಿ ಪುಷ್ಕರಿಣಿ ಇವರಿಗೆ ಆರು ಗಂಡು ಮಕ್ಕಳಿದ್ದರು. ಅವರೆಂದರೆ - ದಿವಿರತ, ಸುಹೋತ್ರ, ಸುಹೋತ, ಸುಕವಿ, ಸುಯಜು, ಮತ್ತು ಷಿಕ. [] ಭೂಮನ್ಯುವಿನ ನಂತರ ಅವನ ಮಗ ಸುಹೋತ್ರನು ಪಟ್ಟಾಭಿಷಿಕ್ತನಾದನು. []

ಉಲ್ಲೇಖಗಳು

ಬದಲಾಯಿಸಿ
  1. Ganguli, Kisari Mohan. "The Mahabharata of Krishna-Dwaipayana". Internet Sacred Text Archive. Vyasa.
  2. Bhúmanyu.
  3. www.wisdomlib.org (2012-06-29). "Bhumanyu, Bhūmanyu: 6 definitions". www.wisdomlib.org (in ಇಂಗ್ಲಿಷ್). Retrieved 2022-11-27.
  4. www.wisdomlib.org (2019-01-28). "Story of Suhotra". www.wisdomlib.org (in ಇಂಗ್ಲಿಷ್). Retrieved 2022-11-27.
"https://kn.wikipedia.org/w/index.php?title=ಭೂಮನ್ಯು&oldid=1229578" ಇಂದ ಪಡೆಯಲ್ಪಟ್ಟಿದೆ