ಭುವನೇಶ್ವರಿಯು ಹಿಂದೂ ಧರ್ಮದಲ್ಲಿನ ಹತ್ತು ಮಹಾವಿದ್ಯಾ ದೇವತೆಗಳ ಪೈಕಿ ನಾಲ್ಕನೆಯವಳು, ಮತ್ತು ವಿಶ್ವದ ಸೃಷ್ಟಿಗೆ ಆಕಾರ ನೀಡುವಲ್ಲಿ ಭೌತಿಕ ಬ್ರಹ್ಮಾಂಡದ ಘಟಕಗಳಾಗಿ ದೇವಿಯ ಅಂಶವಾಗಿದ್ದಾಳೆ.

ಇವಳು ಆದಿ ಪರಾಶಕ್ತಿ ಅಥವಾ ಪಾರ್ವತಿ ಎಂದೂ ಪರಿಚಿತವಾಗಿದ್ದಾಳೆ, ಅಂದರೆ ಶಕ್ತಿಯ ಅತ್ಯಂತ ಮುಂಚಿನ ರೂಪಗಳಲ್ಲಿ ಒಬ್ಬಳು. ತ್ರ್ಯಂಬಕನಾಗಿ ಶಿವನು ಇವಳ ಸಂಗಾತಿಯಾಗಿದ್ದಾನೆ. ಭುವನೇಶ್ವರಿಯು ಕನ್ನಡ ನಾಡಿನ ಅಧಿದೇವತೆಯೂ ಆಗಿದ್ದಾಳೆ

ಪುರಾಣ ಕಥೆಗಳು ಬದಲಾಯಿಸಿ

ಇವಳ ಮೈಬಣ್ಣ ಕೆಂಪು. ಇವಳು ಮೂರು ಕಣ್ಣುಗಳು, ನಾಲ್ಕು ತೋಳುಗಳು, ಜಡೆ ಹೊಂದಿದ್ದು, ಕೆಂಪು ಆಭರಣಗಳನ್ನು ಧರಿಸಿರುತ್ತಾಳೆ. ಇವಳು ಕಮಲಗಳ ಹಾರವನ್ನು ಧರಿಸಿದ್ದು ಇವಳ ಮೈಗೆ ಕೆಂಪು ಚಂದನದ ಲೇಪವನ್ನು ಹಚ್ಚಲಾಗಿರುತ್ತದೆ. ಎಡಗೈಗಳಿಂದ ಇವಳು ತಿವಿಗೋಲು ಹಾಗೂ ಪಾಶವನ್ನು ಹಿಡಿದಿದ್ದು, ಇವಳ ಬಲಗೈಗಳು ಅಭಯ ಹಾಗೂ ವರದ ಮುದ್ರೆಗಳನ್ನು ಪ್ರದರ್ಶಿಸುತ್ತವೆ. ಇವಳು ಆಭರಣಭೂಷಿತೆಯಾಗಿದ್ದು ಶಿಖೆಯ ರತ್ನವಾಗಿ ಅರ್ಧಚಂದ್ರಾಕೃತಿಯ ಕಿರೀಟವನ್ನು ಧರಿಸಿರುತ್ತಾಳೆ.

ಹೆಚ್ಚಿನ ಓದಿಗೆ ಬದಲಾಯಿಸಿ

  • Tantric Yoga and the Wisdom Goddesses by David Frawley
  • Hindu Goddesses: Vision of the Divine Feminine in the Hindu Religious Traditions () by David Kinsley