ಭೀಮಾ ದೇವಿ ದೇವಾಲಯ ತಾಣದ ಸಂಗ್ರಹಾಲಯ

ತನ್ನ ಕಾಮಪ್ರಚೋದಕ ಶಿಲ್ಪಕಲೆಗಳಿಗೆ ಉತ್ತರ ಭಾರತದ ಖಜುರಾಹೊ ಎಂಬ ಅಡ್ಡಹೆಸರು ಪಡೆದಿರುವ ಭೀಮಾ ದೇವಿ ದೇವಾಲಯ ಸಂಕೀರ್ಣವು ಭಾರತದ ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಪಿಂಜೋರ್ ಪಟ್ಟಣದಲ್ಲಿದ್ದು ಕ್ರಿ.ಶ 8 ರಿಂದ 11 ನೇ ಶತಮಾನದ ನಡುವಿನದ್ದೆಂದು ಕಾಲನಿರ್ಧಾರ ಮಾಡಲಾಗಿರುವ ಒಂದು ಪ್ರಾಚೀನ ಹಿಂದೂ ದೇವಾಲಯದ ಪುನಃಸ್ಥಾಪಿತ ಅವಶೇಷಗಳನ್ನು ಒಳಗೊಂಡಿದೆ. ಜೊತೆಗೆ ಪಕ್ಕದಲ್ಲಿ 17 ನೇ ಶತಮಾನದ ಪಿಂಜೋರ್ ಉದ್ಯಾನವನಗಳು (ಮುಘಲ್ ಉದ್ಯಾನಗಳ ಒಂದು ರೂಪಾಂತರ) ಇವೆ.[][][] ಹಳೆಯ ದೇವಾಲಯವನ್ನು ಇಸ್ಲಾಮೀ ಆಕ್ರಮಣಕಾರರು ನಾಶಪಡಿಸಿದರು ಮತ್ತು ಈಗಿನ ಕ್ರಿ.ಶ. 8-11 ನೇ ಶತಮಾನದ ದೇವಾಲಯವನ್ನು ಸಂಭಾವ್ಯವಾಗಿ ಅದೇ ಸ್ಥಳದಲ್ಲಿ ಹಳೆಯ ಹೆಸರಿನಲ್ಲಿ ನಿರ್ಮಿಸಲಾಗಿದೆ, ಮತ್ತು ಹತ್ತಿರದ ಪ್ರಾಚೀನ ಮೆಟ್ಟಿಲುಬಾವಿಯಲ್ಲಿ ಈಗಲೂ ಹಳೆಯ ಹಿಂದೂ ಸ್ತಂಭಗಳಿವೆ.[] ಭೀಮಾದೇವಿ ಬೌದ್ಧ ತಾಂತ್ರಿಕ ದೇವತೆಯಿಂದ ಹುಟ್ಟಿಕೊಂಡ ಶಕ್ತಿ ಸಂಪ್ರದಾಯಕ್ಕೆ ಸೇರಿದವಳು. ಇದಲ್ಲದೆ, ದೇವಿ ಮಾಹಾತ್ಮ್ಯದಲ್ಲಿ, ಹಿಮಾಚಲ ಪ್ರದೇಶದ ಪಶ್ಚಿಮ ಹಿಮಾಲಯದಲ್ಲಿ (ಪಿಂಜೋರ್ ಪ್ರದೇಶವು ಹಿಮಾಚಲ ಹಿಮಾಲಯಕ್ಕೆ ಹೊಂದಿಕೊಂಡಿದೆ), ಭೀಮಾದೇವಿ ಭೀಮಾರೂಪ ( ಭೀಮನ ರೂಪ) ದ ಅಗಾಧ ರೂಪದಲ್ಲಿ ಕಾಣಿಸಿಕೊಂಡಳು ಮತ್ತು ಋಷಿಮುನಿಗಳಿಗೆ ರಕ್ಷಣೆ ನೀಡಿದಳು ಎಂದು ಹೇಳಲಾಗಿದೆ.[]

ಭೀಮಾ ದೇವಿ ದೇವಾಲಯವನ್ನು ಗುರ್ಜರ-ಪ್ರತಿಹಾರರ ಆಳ್ವಿಕೆಯ ಅವಧಿಯಲ್ಲಿ ಕೆತ್ತಲಾಗಿದೆ. ಇರುವ ಬಹುತೇಕ ಶಿಲ್ಪಗಳು ಮತ್ತು ವಾಸ್ತುಕಲೆಯನ್ನು ಮೊಘಲ್ ಅವಧಿಯಲ್ಲಿ ಔರಂಗಜೇಬ್‍ನ ಕೆಳಗೆ ನಾಶಮಾಡಲಾಯಿತು. ಇವು ಗುರ್ಜರ-ಪ್ರತಿಹಾರರ ಕಾಲದ್ದಾಗಿವೆ.[] ಅಗೆದು ತೆಗೆದ ಆವಿಷ್ಕಾರಗಳು 100 ಕ್ಕೂ ಹೆಚ್ಚು ಪುರಾವಸ್ತು ಶೋಧನಾ ಶಿಲ್ಪಗಳನ್ನು ಒಳಗೊಂಡಿವೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Bhima Devi Temple". Government of Haryana Tourism Department. Archived from the original on 25 September 2010. Retrieved 2009-08-29.
  2. "Haryana CM asks to develop Bhima Devi temple". Punjab Newsline. 2007-07-05. Archived from the original on 26 May 2009. Retrieved 2009-08-29.
  3. "Bhima Devi Museum Opens to Public on 13th July". Press release by Government of Haryana, Tourism Department. Retrieved 2009-08-29.
  4. Haryana Gazateer, Revennue Dept of Haryana, Capter-V.
  5. Hāṇḍā, Omacanda (2001). Temple architecture of the western Himalaya: wooden temples. Indus Publishing. p. 237. ISBN 978-81-7387-115-3. Retrieved 2009-08-29. {{cite book}}: |work= ignored (help)
  6. Archaeological Survey of India (1978). Indian archaeology, a review. Archaeological Survey of India. p. 113.