ಭಿಮ್

ಮ್(ಭಾರತ್ ಇಂಟರ್ಫೇಸ್ ಫಾರ್ ಮನಿ) ಎನ್ನುವುದು ಏಕೀಕೃತ ಪಾವತಿ ವ್ಯವಸ್ಥೆ ಆಧಾರಿತ ಭಾರತೀಯ ರಾಷ್ಟ್ರೀಯ ಪಾವತಿ ಸಂಸ

ಭಿಮ್(ಭಾರತ್ ಇಂಟರ್ಫೇಸ್ ಫಾರ್ ಮನಿ) ಎನ್ನುವುದು ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ(UPI) ಆಧಾರಿತವಾದ ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಒಂದು ಸ್ಮಾರ್ಟ್‌ಫೋನ್ ಕಿರು ತಂತ್ರಾಂಶ(ಆಪ್) ಅಗಿದೆ. ಈ ಆಪ್‌ನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದಿ. ೩೦.೧೦.೨೦೧೬ ರಂದು ನವದೆಹಲಿಯ ಟಲ್ಕೊಟರ ಸ್ಟೇಡಿಯಂನಲ್ಲಿ ಒಂದು ಡಿಜಿಧನ್ ಕಾರ್ಯಕ್ರಮದಲ್ಲಿ ಬಿಡುಗಡೆಮಾಡಿದರು. ಈ ತಂತ್ರಾಂಶ ಕ್ಕೆ ಶ್ರೀ ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ಭಿಮ್ ಆಪ್ ಭಾರತೀಯ ಬ್ಯಾಂಕ್ ನೋಟುಗಳ ಅನಾಣ್ಯೀಕರಣ ೨೦೧೬ ದ ಭಾಗವಾಗಿರುವುದಲ್ಲದೇ, ನೇರವಾಗಿ ಬ್ಯಾಂಕುಗಳ ಮೂಲಕ ಮತ್ತು ಹಣವಿಲ್ಲದ ವ್ಯವಹಾರದ ಕಡೆಗೆ ಈ-ಬಟಾವಡೆ(e-payments)ಯನ್ನು ಸುಗಮವಾಗಿ ನಡೆಸುವತ್ತ ಉದ್ದೇಶಿತವಾಗಿದೆ.[]

ಬಿಮ್ ಆಪ್ ಲೋಗೋ

ಭಿಮ್ ಕಿರುತಂತ್ರಾಂಶ(ಆಪ್)
ಅಭಿವೃದ್ಧಿಪಡಿಸಿದವರುಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ(ನ್ಯಾಷನಲ್ ಪೆಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ
ಮೊದಲು ಬಿಡುಗಡೆ೩೦ ಡಿಸೆಂಬರ್, ೨೦೧೬
ಗಣಕಯಂತ್ರದಲ್ಲಿGoogle Play (Available),
App Store (iOS) (Under Development)
ಲಭ್ಯವಿರುವ ಭಾಷೆ(ಗಳು)English, ಹಿಂದಿ, Bengali, ತಮಿಳು, ತೆಲುಗು, ಕನ್ನಡ, ಮಲೆಯಾಳಂ, ಒರಿಯ, ಗುಜರಾತಿ[]
ವಿಧಪಾವತಿ
ಅಧೀಕೃತ ಜಾಲತಾಣNPCI Portal


ಈ ಕಿರುತಂತ್ರಾಂಶ(ಆಪ್)ವು ತಕ್ಷಣದ ಪಾವತಿ ಸೇವೆ(Immediate Payment Service)ಮೂಲಸೌಕರ್ಯದ ಮೇಲೆ ಕಟ್ಟಲ್ಪಟ್ಟಿದ್ದು,ಈ ವೇದಿಕೆಯನ್ನು ಉಪಯೋಗಿಸುವ ಎಲ್ಲಾ ಭಾರತೀಯ ಬ್ಯಾಂಕ್‍ಗಳನ್ನು ಬೆಂಬಲಿಸುವುದು ಮತ್ತು ಬಳಕೆದಾರನ ಮತ್ತು ಇನ್ನೊಂದು ವ್ಯಕ್ತಿಯ ಯಾವುದೇ ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾಯಿಸಲು ಅನುಮತಿಸುತ್ತದೆ.[]ಇದನ್ನು ಎಲ್ಲಾ ಮೊಬೈಲ್‌ ಫೋನ್‌ (ಚರ ದೂರವಾಣಿ)ಗಳಲ್ಲಿ ಬಳಸಬಹುದು.[]

ಪ್ರಯೋಜನಗಳು

ಬದಲಾಯಿಸಿ

ಭಿಮ್ ಬಳಕೆದಾರರು ಇತರ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ(UPI)) ಯ ಪಾವತಿ ವಿಳಾಸಗಳಿಗೆ ಅಥವಾ ಸ್ಕ್ಯಾನ್ ಆದ ಕ್ಯುಆರ್ ಕೋಡ್(QR code) ಗಳಿಗೆ ಹಣ ಕಳುಹಿಸಲು ಅಥವಾ ಅವುಗಳಿಂದ ಸ್ವೀಕರಿಸಲು ಅವಕಾಶವಿದೆ. ಅದಲ್ಲದೆ,ಯುಪಿಐ(UPI) ಆಧಾರದ ಮೇಲೆ ಹೊಂದಿಲ್ಲದಿರುವ, ಐಎಫ್‍ಎಸ್‍ಸಿ(IFSC) ಅಥವಾ ಎಂ‍ಎಂ‍ಐ‍ಡಿ(MMID (ಮೊಬೈಲ್ ಮನಿ ಐಡೆಂಟಿಫೈಯರ್)) ಬ್ಯಾಂಕ್ ಖಾತೆಯಿರುವ ಬಳಕೆದಾರರು ಕೂಡ ಉಪಯೋಗಿಸಬಹುದು.[]

ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಪ್ರಸಕ್ತ ಹಣದ ಮೊತ್ತವನ್ನು ಪರಿಶೀಲಿಸಬಹುದು. ಯಾವುದೇ ಸಮಯದಲ್ಲಿ ಒಂದು ಬ್ಯಾಂಕ್ ಖಾತೆ ಮಾತ್ರ ಸಕ್ರಿಯವಾಗಿದ್ದರೂ, ಬಳಕೆದಾರರು ತಮಗೆ ಬೇಕೆನಿಸಿದ ಬ್ಯಾಂಕ್ ಖಾತೆಯನ್ನು ವ್ಯವಹಾರ ನಡೆಸಲು ಉಪಯೋಗಿಸಬಹುದು.

ಬಳಕೆದಾರರು ಸ್ಥಿರ ಮೊತ್ತಕ್ಕೆ ಕ್ಯುಆರ್ ಕೋಡ್(QR code)ನ್ನು ಸೃಷ್ಟಿಸುವುದು, ವ್ಯಾಪಾರಿ - ಮಾರಾಟಗಾರ - ಖರೀದಿದಾರ ವ್ಯವಹಾರದಲ್ಲಿ ಉಪಯೋಗವಾಗುವುದು. ಅದಲ್ಲದೆ, ಬಳಕೆದಾರರು ಒಂದಕ್ಕಿಂತ ಹೆಚ್ಚು ಪಾವತಿ ವಿಳಾಸ ಹೊಂದಬಹುದು.

ಬಿಮ್ ತಂತ್ರಾಂಶದಲ್ಲಿ, ೧೨ ಅಂಕಿಯ ಆಧಾರ್ ಸಂಖ್ಯೆಯನ್ನು ಪಾವತಿ ಗುರುತನ್ನಾಗಿ (ID) ಇಟ್ಟು ಕೊಂಡರೆ, ಯಾವುದೇ ಬಯೋಮೆಟ್ರಿಕ್ ದೃಢೀಕರಣ ಅಥವಾ ಬ್ಯಾಂಕ್ ನ ಜತೆಗೆ ಮೊದಲು ನೋಂದಣಿ ಅಥವಾ ಏಕೀಕೃತ ಪಾವತಿ ವ್ಯವಸ್ಥೆಯ (UPI) ಅಗತ್ಯವಿರುವುದಿಲ್ಲ.[]

ಕೇಂದ್ರ ಬಜೆಟ್ 2017 ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರದ ಭೀಮ್ ಅಪ್ಲಿಕೇಶನ್ ಬಳಕೆಯನ್ನು ಉತ್ತೇಜಿಸಲು ಎರಡು ಹೊಸ ಯೋಜನೆ ಆರಂಭಿಸುವುದಾಗಿ ಹೇಳಿದರು. ಇದರಲ್ಲಿ ಒಂದು, ವ್ಯಕ್ತಿಗಳಿಗೆ 'ಉಲ್ಲೇಖಿತ ಪಾವತಿ', ಮತ್ತು ಎರಡನೆಯದು, ಬಿಮ್‍ ನಿಂದ ಹಣ ಸ್ವೀಕರಿಸುವ ವ್ಯಾಪಾರಿಗಳಿಗೆ 'ನಗದು ವಾಪಾಸು'.[]

ಮನ್ನಣೆ

ಬದಲಾಯಿಸಿ

ಕೇಂದ್ರ ಬಜೆಟ್ 2017 ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಮ್‍ನ್ನು ಪ್ರಸ್ತುತ 125 ಲಕ್ಷ ಭಾರತೀಯ ಪೌರರು ಬಳಸಲಾಗುತ್ತಿದ್ದಾರೆ ಎಂದು ಹೇಳಿದರು.[]

ಇವುಗಳನ್ನೂ ಓದಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "People can now bank with thumb using BHIM app: PM Modi at Digi Dhan Mela". The Indian Express. Retrieved 31 ಡಿಸೆಂಬರ್ 2016.
  2. "BHIM app to add support for 7 regional languages by the end of this week: Report". Archived from the original on 2 ಫೆಬ್ರವರಿ 2017. Retrieved 4 ಫೆಬ್ರವರಿ 2017.
  3. "ಆರ್ಕೈವ್ ನಕಲು". Archived from the original on 19 ಫೆಬ್ರವರಿ 2017. Retrieved 4 ಫೆಬ್ರವರಿ 2017.
  4. "Modi launches app named after Ambedkar, says your thumb will act as your bank | india-news". Hindustan Times. Retrieved 31 ಡಿಸೆಂಬರ್ 2016.
  5. "BHIM UPI Official website". National Payments Corporation of India (NPCI). 12 ಜನವರಿ 2017. Archived from the original on 29 ಜನವರಿ 2019. Retrieved 12 ಜನವರಿ 2017.
  6. Integrating BHIM app with Aadhaar
  7. "Union Budget 2017: Govt announces two new incentives to promote BHIM app". The Indian Express. Retrieved 3 ಫೆಬ್ರವರಿ 2017.
  8. "Budget 2017: Jaitley says BHIM app now has 125 lakh downloads". Hindustan Times. Retrieved 3 ಫೆಬ್ರವರಿ 2017.


ಹೆಚ್ಚಿನ ಓದು

ಬದಲಾಯಿಸಿ
"https://kn.wikipedia.org/w/index.php?title=ಭಿಮ್&oldid=1181264" ಇಂದ ಪಡೆಯಲ್ಪಟ್ಟಿದೆ