ಭಾರತೀಯ ಪೆಟ್ರೋಕೆಮಿಕಲ್ಸ್ ನಿಗಮ ಮಂಡಳಿ

ಇಂಡಿಯನ್ ಪೆಟ್ರೋಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್ (IPCL) ಎಂಬ ಸಂಸ್ಥೆಯು ಒಂದು ಪೆಟ್ರೋಕೆಮಿಕಲ್ಸ್ ಕಂಪನಿಯಾಗಿದ್ದು, ಭಾರತದ ಕೇಂದ್ರಿಯ ಸಾರ್ವಜನಿಕ ವಲಯದ ಘಟಕವಾಗಿದೆ. 2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಇದನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಭಾರತ ಸರ್ಕಾರವು ಮಾರಾಟ ಮಾಡಿತು. ಈ ಸಂಸ್ಥೆಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ, ಸದರಿ ಸಂಸ್ಥೆಯ ಸನ್ 2005-06ರ ಆರ್ಥಿಕ ವರ್ಷದ ವಹಿವಾಟು ಯುಎಸ್ $ 2 ಬಿಲಿಯನ್ ಗಡಿ ದಾಟಿತ್ತು.

ಇತಿಹಾಸ ಬದಲಾಯಿಸಿ

ಭಾರತದಲ್ಲಿ ಪೆಟ್ರೋಕೆಮಿಕಲ್ ಕ್ಷೇತ್ರದ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಭಾರತ ಸರ್ಕಾರದ ಅಧೀನ ಸಂಸ್ಥೆಯನ್ನಾಗಿ ಐಪಿಸಿಎಲ್ ಸಂಸ್ಥೆಯನ್ನು ಮಾರ್ಚ್ ೨೨, ೧೯೯೬ ರಂದು ಸ್ಥಾಪಿಸಲಾಯಿತು. ಸದರಿ ಕಂಪನಿಯು ೧೯೭೦ ರಲ್ಲಿ ತನ್ನ ಮೊದಲ ಪೆಟ್ರೋಕೆಮಿಕಲ್ಸ್ ಸಮುಚ್ಚಯವನ್ನು ವಡೋದರಾ ಎಂಬಲ್ಲಿ ನಿರ್ಮಿಸಲು ಪ್ರಾರಂಭಿಸಿತು. ೧೯೭೩ ರಲ್ಲಿ ಈ ಸಮುಚ್ಚಯದೊಳಗೆ ವಾಣಿಜ್ಯ ಉತ್ಪಾದನೆ ಪ್ರಾರಂಭವಾಯಿತು. ಕಂಪನಿಯ ತನ್ನ ಎರಡನೇ ಪೆಟ್ರೋಕೆಮಿಕಲ್ಸ್ ಸಮುಚ್ಚಯವನ್ನು ೧೯೯೨ ರಲ್ಲಿ ನಾಗೋಠಣಾ ಎಂಬಲ್ಲಿ ಪ್ರಾರಂಭಿಸಿತು ಮತ್ತು ೧೯೯೬ ರಲ್ಲಿ ತನ್ನ ಮೂರನೆಯ ಸಮುಚ್ಚಯವನ್ನು ಗಾಂಧಾರ್ ಎಂಬಲ್ಲಿ ಕಾರ್ಯಾರಂಭಗೊಳಿಸಿತು. ಆಗಸ್ಟ್ 1992 ರಲ್ಲಿ, ಕಂಪನಿಯ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಪಟ್ಟಿ ಮಾಡಲಾಯಿತು. [೧]

ಏಕೀಕರಣ ಬದಲಾಯಿಸಿ

1 ಏಪ್ರಿಲ್ 2005 ರಂದು, ಅಪೋಲೊ ಫೈಬರ್ ಲಿಮಿಟೆಡ್ (AFL), ಸೆಂಟ್ರಲ್ ಇಂಡಿಯಾ ಪಾಲಿಯೆಸ್ಟರ್ಸ್ ಲಿಮಿಟೆಡ್ (CIPL), ಇಂಡಿಯಾ ಪಾಲಿಫೈಬರ್ಸ್ ಲಿಮಿಟೆಡ್ (IPL), ಒರಿಸ್ಸಾ ಪಾಲಿಫೈಬರ್ಸ್ ಲಿಮಿಟೆಡ್ (OPL), ರೆಕ್ರಾನ್ ಸಿಂಥೆಟಿಕ್ಸ್ ಲಿಮಿಟೆಡ್ (RSL) ಮತ್ತು ಸಿಲ್ವಾಸ್ಸಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (SIPL), ಎಂಬ ಆರು ಪಾಲಿಯೆಸ್ಟರ್ ಕಂಪನಿಗಳನ್ನು IPCL ಸಂಸ್ಥೆಯೊಂದಿಗೆ ವಿಲೀನಗೊಳಿಸಲಾಯಿತು. ಈ ಪ್ರಕ್ರಿಯೆಯಿಂದ ಸಂಸ್ಥೆಯು ಪಾಲಿಯೆಸ್ಟರ್ ವಲಯದಲ್ಲಿ ಪ್ರವೇಶಿಸುವುದು ಕಂಡುಬರುತ್ತದೆ. ಈ ಪಾಲಿಯೆಸ್ಟರ್ ಘಟಕಗಳು ಹೊಶಿಯಾರ್‌ಪುರ ( ಪಂಜಾಬ್ ), ನಾಗ್ಪುರ ( ಮಹಾರಾಷ್ಟ್ರ ), ಬಾರಾಬಂಕಿ ( ಉತ್ತರ ಪ್ರದೇಶ ), ಬೌಲ್ಪುರ್ ( ಒರಿಸ್ಸಾ ), ಅಲಹಾಬಾದ್ ( ಉತ್ತರ ಪ್ರದೇಶ ) ಮತ್ತು ಸಿಲ್ವಾಸ್ಸಾ ( ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು) ಎಂಬಲ್ಲಿ ನೆಲೆಗೊಂಡಿವೆ.

ಮರುಹೂಡಿಕೆ ಬದಲಾಯಿಸಿ

ಜೂನ್ 2002 ರಲ್ಲಿ, ಭಾರತ ಸರ್ಕಾರವು ತನ್ನ ಬಂಡವಾಳ ಹೂಡಿಕೆಯ ಕಾರ್ಯಕ್ರಮದ ಒಂದು ಭಾಗವಾಗಿ ರಿಲಯನ್ಸ್ ಪೆಟ್ರೋಇನ್ವೆಸ್ಟ್ಮೆಂಟ್ ಲಿಮಿಟೆಡ್ (RPIL), ರಿಲಯನ್ಸ್ ಗ್ರೂಪ್ ಕಂಪನಿಯ ಪರವಾಗಿ ತನ್ನ ಶೇ. 26 ರಷ್ಟು ಷೇರುಗಳನ್ನು ಮರುಹೂಡಿಕೆ ಮಾಡಿತು. ಆರ್‌ಪಿಐಎಲ್ ಕಂಪನಿಯು ಸೆಬಿ (ಟೇಕ್‌ಓವರ್ ರೆಗ್ಯುಲೇಶನ್ಸ್) ಪ್ರಕಾರ ಹೆಚ್ಚುವರಿ 20% ಇಕ್ವಿಟಿ ಷೇರುಗಳನ್ನು ಮತ್ತು ಕಂಪನಿಯ ಶೇ. 46 ರಷ್ಟು ಇಕ್ವಿಟಿ ಷೇರುಗಳನ್ನು ಪಡೆದುಕೊಂಡಿತು. 2007 ರಲ್ಲಿ ಐಪಿಸಿಎಲ್ ಸಂಸ್ಥೆಯನ್ನು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನೊಂದಿಗೆ ವಿಲೀನಳಿಸಲಾಯಿತು. [೨]

ಉಲ್ಲೇಖಗಳು ಬದಲಾಯಿಸಿ

  1. "Preliminary Information Memorandum (PIM) for Bidders - INDIAN PETROCHEMICALS CORP.LTD. | Department of Investment and Public Asset Management | Ministry of Finance | Government of India". dipam.gov.in. Archived from the original on 2020-02-28. Retrieved 2020-02-28.
  2. "IPCL to merge with Reliance Industries". The Indian Express. 8 March 2007. Archived from the original on 5 ಮಾರ್ಚ್ 2016. Retrieved 7 July 2018.