ಭಾರತೀಯ ನೈಸರ್ಗಿಕ ಇತಿಹಾಸ
ಭಾರತ ದಲ್ಲಿ ನೈಸರ್ಗಿಕ ಇತಿಹಾಸ ವು ಬಹಳ ಹಿಂದಿನ ದಾಖಲಿತ ಇತಿಹಾಸವನ್ನು ಹೊಂದಿದ್ದು, ವೇದಗಳ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಮೊದಲೆಲ್ಲ ನೈಸರ್ಗಿಕ ಇತಿಹಾಸ ಸಂಶೋಧನೆಯು ಪ್ರಾಗ್ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ವಿಸ್ತೃತ ಕ್ಷೇತ್ರವನ್ನು ಒಳಗೊಂಡಿತ್ತು. ಇಂದು ಈ ಅಧ್ಯಯನಗಳನ್ನು ಪರಿಸರವಿಜ್ಞಾನದ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಇಂತಹ ಸಂಶೋಧನೆಗಳನ್ನು ಮುಖ್ಯವಾಗಿ ಹವ್ಯಾಸಿಗಳು, ಹೆಚ್ಚಾಗಿ ವೈದ್ಯರು, ನಾಗರಿಕ ಸೇವೆಯಲ್ಲಿರುವವರು ಮತ್ತು ಸೇನಾ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದರು.
ಭಾರತದಲ್ಲಿ ಆಧುನಿಕ ನೈಸರ್ಗಿಕ ಇತಿಹಾಸದ ಬೆಳವಣಿಗೆಗೆ ಮೂಲಕಾರಣರು ಬ್ರಿಟಿಶ್ ವಸಾಹತುಶಾಹಿಗಳು ಮತ್ತು ಬ್ರಿಟನ್ನಿನಲ್ಲಿ ನಡೆದ ನೈಸರ್ಗಿಕ ಇತಿಹಾಸದ ಬೆಳವಣಿಗೆ ಎನ್ನಬಹುದು. ಆದರೂ ಭಾರತವು ಅಪಾರ ವೈವಿಧ್ಯತೆಯುಳ್ಳ ಭೂಲಕ್ಷಣ, ಸಸ್ಯಗಳು ಮತ್ತು ಪ್ರಾಣಿಗಳನ್ನು ಹೊಂದಿದ್ದು, ಇನ್ನಿತರ ಉಷ್ಣವಲಯದ ವಸಾಹತುಗಳಂತೆ ಬ್ರಿಟನ್ನಿನಲ್ಲಿ ಮತ್ತು ವಿಶ್ವದ ಬೇರೆಡೆಗಳಲ್ಲಿ ನೈಸರ್ಗಿಕ ಇತಿಹಾಸದ ಕುರಿತು ಆಸಕ್ತಿಯನ್ನು ಹೆಚ್ಚಿಸಿತು ಎನ್ನಲು ಹಲವಾರು ಪುರಾವೆಗಳಿವೆ.[೧] ಭಾರತದಲ್ಲಿ ನೈಸರ್ಗಿಕ ಇತಿಹಾಸವು ಹಳೆಯ ಸಂರಕ್ಷಣಾ ಪರಂಪರೆಗಳು, ಜನಪದ ಮತ್ತು ಕಲೆಯಿಂದಲೂ ಶ್ರೀಮಂತಗೊಂಡಿದೆ.[೨]
ವೇದ ಕಾಲ
ಬದಲಾಯಿಸಿವೇದಗಳು ಲಭ್ಯವಿರುವ ಕೆಲವು ಅತಿ ಪುರಾತನ ಐತಿಹಾಸಿಕ ದಾಖಲೆಗಳನ್ನು ಪ್ರತಿನಿಧಿಸುತ್ತವೆ (ಕ್ರಿ.ಪೂ.1500 – 500). ವೇದಗಳಲ್ಲಿ ಸುಮಾರು 250 ರೀತಿಯ ಹಕ್ಕಿಗಳ ಹೆಸರು ಕಂಡುಬಂದಿವೆ, ಜೊತೆಗೆ ಬೇರೆ ಪ್ರಾಣಿಗಳು ಮತ್ತು ಸಸ್ಯಗಳ ಕುರಿತು ಟಿಪ್ಪಣಿಗಳನ್ನು ಹೊಂದಿವೆ.[೩] ವೇದ ಗ್ರಂಥಗಳಲ್ಲಿ, ಆರ್ಯಾವರ್ತ , ಆರ್ಯರಭೂಮಿಯು ವಿವಿಧ ಕೃಷ್ಣಮೃಗಗಳೊಂದಿಗೆ ಸಮಾನವ್ಯಾಪಿಯಾಗಿತ್ತು ಎಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ, ಇವು ವಿಂದ್ಯ ಪರ್ವತಗಳ ಉತ್ತರಕ್ಕಿರುವ ಪ್ರದೇಶ ಎಂದು ಉಲ್ಲೇಖಿಸಲಾಗಿದೆ; ಮತ್ತೆ ಕೆಲವೊಮ್ಮೆ ಇವು ದಕ್ಷಿಣಕ್ಕಿರುವ ಪ್ರದೇಶವನ್ನೂ ಒಳಗೊಂಡು ಉಲ್ಲೇಖಿಸಿವೆ.[೪] ವೇದಗಳಲ್ಲಿ ಹೇಳಲಾದ ಬಹಳಷ್ಟು ಮಾಹಿತಿಗಳು ಭಾರತೀಯ ಕೋಗಿಲೆಗಳಲ್ಲಿ ಕಂಡುಬರುವ ಪರಾವಲಂಬಿ ಕಾವುಕೊಡುವಿಕೆ ಯ ಕುರಿತ ಜ್ಞಾನವನ್ನು ಹೊಂದಿವೆ. ಕೋಗಿಲೆಗಳ ಈ ಪ್ರವೃತ್ತಿಯು ಅರಿಸ್ಟಾಟಲ್ (ಕ್ರಿ.ಪೂ.384 – 322)ಗಿಂತ ಮೊದಲೇ ಇಲ್ಲಿಯವರಿಗೆ ಗೊತ್ತಿತ್ತು ಎಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಾಯಶಃ ಭಾರತೀಯ ಕೋಗಿಲೆಗಳು ಮತ್ತು ಅವುಗಳ ಪರಪೋಷಿಯಾದ ಮನೆ ಕಾಗೆಯು ಇಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುತ್ತಿದ್ದವು ಮತ್ತು ಅವುಗಳನ್ನು ಗಮನಿಸುವುದು ಬಹಳ ಸುಲಭವಾಗಿದ್ದರಿಂದ ಅಷ್ಟೊಂದು ಮಾಹಿತಿಗಳಿವೆ.[೩]
ಚರಕ ಮತ್ತು ಸುಶ್ರುತರ ವೈದ್ಯಕೀಯ ವನ್ಯಜೀವಿಗಳನ್ನು ಗ್ರಂಥಗಳು ಮಾಂಸದ ದೃಷ್ಟಿಯಿಂದ ಮತ್ತು ಅವುಗಳು ಇರುವ ಅರಣ್ಯವನ್ನು ಮತ್ತು ಸಂಬಂಧಿತ ಗುಣಲಕ್ಷಣಗಳನ್ನು ಉಲ್ಲೇಖಿಸಿವೆ. ಹಿಂದೂ ಸಮಾಜವನ್ನು ವರ್ಣ ವ್ಯವಸ್ಥೆಯಾಗಿ ಶ್ರೇಣೀಕರಣಗೊಳಿಸಲಾಗಿದ್ದು, ಯೋಧ ವರ್ಗ ಅಥವಾ ಕ್ಷತ್ರಿಯ ರು ಹುಟ್ಟಿನಿಂದಲೇ ಪ್ರತ್ಯೇಕವಾಗಿರುತ್ತಿದ್ದರು; ವರ್ಣವ್ಯವಸ್ಥೆಯು ಯಾವ ಪ್ರಾಣಿಗಳನ್ನು ತಿನ್ನಲು ಹಕ್ಕಿದೆ ಎಂಬುದನ್ನು ಒತ್ತಿಹೇಳಿದೆ. ಯಾರು, ಯಾವಾಗ ನಿರ್ದಿಷ್ಟ ಪ್ರಾಣಿಗಳ ಮಾಂಸವನ್ನು ತಿನ್ನಬಹುದು ಅಥವಾ ತಿನ್ನಬಾರದು ಎಂದು ನಿಯಮಗಳನ್ನು ಗ್ರಂಥಗಳು ಹೇರಿವೆ; ಉದಾಹರಣೆಗೆ ಹುಲಿ ಮತ್ತು ಸಿಂಹದ ಮಾಂಸವನ್ನು ರಾಜಪ್ರತಿನಿಧಿಗಳು ಮಾತ್ರವೇ ತಿನ್ನಬಹುದು, ಅದೂ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ತಿನ್ನಬೇಕು ಎಂಬ ನಿರ್ಬಂಧ ಹೇರಲಾಗಿದೆ.[೫]
ತುಂಬ ವ್ಯಾಪಕವಾಗಿ ಅಧ್ಯಯನ ಮಾಡಲಾದ ಇನ್ನೊಂದು ವನ್ಯಜೀವಿ ಎಂದರೆ ಆನೆ. ಆನೆಯನ್ನು ಹಿಡಿಯುವುದು, ತರಬೇತಿ ನೀಡುವುದು ಮತ್ತು ನಿರ್ವಹಣೆಯ ಕುರಿತು ೨೦೦೦ ವರ್ಷಗಳಷ್ಟು ಹಳೆಯದಾದ ಗಜಶಾಸ್ತ್ರ ವನ್ನು ಪಾಲಿ ಲಿಪಿಯಲ್ಲಿ ಬರೆಯಲಾಗಿದೆ.[೬]
ಶಂಗಂ ಕಾಲಘಟ್ಟದ ತಮಿಳು ಸಾಹಿತ್ಯ ವು ಭೂಮಿಯನ್ನು ೫ ರೀತಿಯ ಪರಿಸರವಾಗಿ ವರ್ಗೀಕರಿಸಿದೆ; ತೀರಪ್ರದೇಶದಿಂದ ಜೌಗು ಗದ್ದೆ ನೆಲದವರೆಗೆ ಒಟ್ಟು 5 ಬಗೆಯ ಪ್ರದೇಶಗಳನ್ನು ವರ್ಣಿಸಿದೆ.[೪]
ಸಿಂಧೂ ಕಣಿವೆ ನಾಗರೀಕತೆ
ಬದಲಾಯಿಸಿವಾಯವ್ಯ ಭಾರತದಲ್ಲಿಕ್ರಿ.ಪೂ. 1700ಗೂ ಹಿಂದಿನ ಸಿಂಧೂ ನದಿ ನಾಗರೀಕತೆಯ ಸುಮಾರು ಸಾವಿರಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಅಧ್ಯಯನ ಮಾಡಲಾಗಿದೆ. ಈ ಸ್ಥಳಗಳಲ್ಲಿ ಅಪಾರ ಸಂಖ್ಯೆಯ ಪ್ರಾಣಿಗಳ ಮೂಳೆಗಳು ಕಂಡುಬಂದಿವೆ; ಈ ಮೂಳೆಗಳಲ್ಲಿ ಐದನೇ ಒಂದು ಭಾಗದಷ್ಟು ಕಾಡು ಪ್ರಾಣಿಗಳ ಮೂಳೆಗಳು; ಗುಳ್ಳೆನರಿ, ಮೊಲ, ಚಿರತೆ, ಘೇಂಡಾಮೃಗ ಮತ್ತು ಆನೆ ಇತ್ಯಾದಿ ಪ್ರಾಣಿಗಳ ಮೂಳೆಗಳಾಗಿವೆ. ಪಶ್ಚಿಮ ಭಾರತದ ಹಲವು ನೆಲೆಗಳ ಸ್ಥಳಗಳಲ್ಲಿ ಕಂಡುಬಂದ ಹೆಚ್ಚಿನ ಬೀಜಗಳು ಇಂದು ಆ ಪ್ರದೇಶದಲ್ಲಿ ನಿರ್ನಾಮವಾಗಿರುವ ಕಾಡು ಸಸ್ಯಗಳ ಬೀಜಗಳಾಗಿವೆ.[೭]
ಈ ಸ್ಥಳಗಳಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ಜೇಡಿಮಣ್ಣಿನ ಮಡಕೆಗಳು ಮತ್ತು ಫಲಕಗಳು ಆ ಕಾಲದ ಪ್ರಾಣಿಗಳು ಮತ್ತು ಸಸ್ಯಗಳನ್ನು ಅಪಾರವಾಗಿ ಪ್ರತಿಬಿಂಬಿಸುತ್ತವೆ. ಮಣ್ಣಿನ ಫಲಕಗಳು ಘೇಂಡಾಮೃಗಗಳು ಮತ್ತು ಆನೆಯೂ ಸೇರಿದಂತೆ ಈಗ ಸ್ಥಳೀಯವಾಗಿ ನಿರ್ನಾಮವಾಗಿರುವ ವನ್ಯಜೀವಿಗಳ ಹಲವು ಪ್ರಭೇದಗಳನ್ನು ದಾಖಲಿಸಿವೆ.ಹರಪ್ಪಾದಲ್ಲಿ ಕಂಡುಬಂದಿರುವ ಒಂದು ಹುಲಿ ಮುದ್ರೆಯು ಕ್ರಿ.ಪೂ. 3000 ವರ್ಷಗಳಷ್ಟು ಹಳೆಯದು.[೭]
ಬಲೂಚಿಸ್ತಾನದ ಮೆಹರ್‌ಗರ್ ಪ್ರದೇಶದಲ್ಲಿ ಕ್ರಿ.ಪೂ. 300ರವರೆಗೂ ಜೌಗುಪ್ರದೇಶದ ಜಿಂಕೆ ಅಥವಾ ಬರಸಿಂಘ ಗಳು ಇದ್ದವು. ಪ್ರಾಯಶಃ ನಂತರ ಅತಿಯಾದ ಬೇಟೆ ಮತ್ತು ಕೃಷಿಗಾಗಿ ನದೀ ನೆಲೆಗಳನ್ನು ಕಳೆದುಕೊಂಡಿದ್ದರಿಂದ ಇವು ನಿರ್ನಾಮಗೊಂಡಿರಬಹುದು.[೭] ಒಂದು ಜಾತಿಯ ಕಾಡು ದನ, ಬಾಸ್ ಪ್ರಿಮೆಜೆನಿಯಸ್ ನೊಮಡಿಕಸ್ ಅಥವಾ ಜೇಬು ಸಿಂದೂ/2}ಕಣಿವೆಯಿಂದ ಮತ್ತು ಪಶ್ಚಿಮ ಭಾರತದಿಂದ ಕ್ರಮೇಣ ಕಣ್ಮರೆಯಾಗಿಯಿತು. ಪ್ರಾಯಶಃ ಸಾಕು ದನಗಳ ಜೊತೆ ಅಂತರ-ಸಂತಾನಾಭಿವೃದ್ಧಿಯಾಗಿದ್ದರಿಂದ ಮತ್ತು ಇನ್ನುಳಿದ ಕಾಡು ದನಗಳು ಅರಣ್ಯ ನೆಲೆಯನ್ನು ಕಳೆದುಕೊಂಡು ಚದುರಿದಂತಾಗಿದ್ದರಿಂದ ಕ್ರಮೇಣ ಮರೆಯಾಗಿವೆ.[೭]
ಆನೆಯನ್ನು ಪಳಗಿಸಿದ ಮೊದಲ ದಾಖಲೆಯು ಹರಪ್ಪಾ ಕಾಲದಲ್ಲಿ ದೊರೆಯುತ್ತದೆ. ಕ್ರಮೇಣ ಆನೆಯನ್ನು ಮುತ್ತಿಗೆ ಹಾಕಲು, ಯುದ್ಧದ ಮುಂಚೂಣಿಯಲ್ಲಿ, ದಿಮ್ಮಿಗಳನ್ನು ಎಳೆಯುವ ಇನ್ನಿತರ ಕೆಲಸ ಮಾಡಿಸಲು, ಪ್ರತಿಷ್ಠೆಯ ಸಂಕೇತವಾಗಿ ಮತ್ತು ಬೇಟೆಯಾಡಲು ಎತ್ತರದ ವೇದಿಕೆಯ ಹಾಗೆ ಬಳಸಿಕೊಳ್ಳಲಾಯಿತು.[೮]
ಮಯೂರ ಅರಸರ ಕಾಲ
ಬದಲಾಯಿಸಿಪ್ರಾಣಿಗಳ ಸಂರಕ್ಷಣೆಯು ಕ್ರಿ.ಪೂ.4 ಮತ್ತು 3ನೇ ಶತಮಾನದ ಮಯೂರ ರಾಜವಂಶದವರ ಕಾಲದಲ್ಲಿ ಒಂದು ಗಂಭೀರ ವ್ಯವಹಾರವಾಯಿತು. ಭಾರತದಲ್ಲಿ ಮೊಟ್ಟಮೊದಲ ಒಂದು ಏಕೀಕೃತ ರಾಜಕೀಯ ಆಳ್ವಿಕೆಯನ್ನು ಒದಗಿಸಿದ ಮಯೂರ ಅರಸರುಗಳು ಅರಣ್ಯ, ಅಲ್ಲಿಯ ಸಸ್ಯ, ಪ್ರಾಣಿಗಳ ಕುರಿತು ಹೊಂದಿದ್ದ ಮನೋಭಾವವು ಆಸಕ್ತಿದಾಯಕ.
ಮಯೂರ ಅರಸರು ಅರಣ್ಯವನ್ನು ಮೊದಲನೆದಾಗಿ ಒಂದು ಸಂಪನ್ಮೂಲ ಎಂದು ನೋಡಿದ್ದಾರೆ. ಅವರಿಗೆ ಅತ್ಯಂತ ಮಹತ್ವದ ಅರಣ್ಯ ಉತ್ಪನ್ನ ಎಂದರೆ ಆನೆ. ಆ ಕಾಲದಲ್ಲಿ ಸೈನ್ಯವು ಕೇವಲ ಕುದುರೆಗಳು ಮತ್ತು ಯೋಧರನ್ನು ಅವಲಂಬಿಸಿರುತ್ತಿರಲಿಲ್ಲ, ಯುದ್ಧದ ಆನೆಗಳನ್ನೂ ಒಳಗೊಂಡಿರುತ್ತಿತ್ತು. ಸೆಲೆಕಸ್ , ಅಲೆಕ್ಸಾಂಡರ್ ಅವರನ್ನು ಪಂಜಾಬ್ ಮಾಂಡಳಿಕ ಸೋಲಿಸುವಲ್ಲಿ ಆನೆಗಳು ಮಹತ್ವದ ಪಾತ್ರ ವಹಿಸಿದ್ದವು. ಆನೆಗಳನ್ನು ಹಿಡಿಯುವುದು, ಪಳಗಿಸುವುದು ಮತ್ತು ತರಬೇತಿ ನೀಡುವುದಕ್ಕೆ ಅವುಗಳನ್ನು ಸಾಕುವುದಕ್ಕಿಂತ ಹೆಚ್ಚು ಸಮಯ ಮತ್ತು ಹಣ ಬೇಕಾಗುತ್ತಿತ್ತು. ಹೀಗಾಗಿ ಮಯೂರ ಅರಸರು ಆನೆಗಳ ಪೂರೈಕೆಯನ್ನು ಸಂರಕ್ಷಿಸಲು ಪ್ರಯತ್ನಿಸಿದರು. ಕೌಟಿಲ್ಯನ ಅರ್ಥಶಾಸ್ತ್ರ ವು ಪುರಾತನ ರಾಜತಾಂತ್ರಿಕತೆ ಕುರಿತು ಸೂತ್ರಗಳನ್ನು ಮಾತ್ರವೇ ಒಳಗೊಂಡಿಲ್ಲ. ಬದಲಿಗೆ ಆನೆ ಕಾಡುಗಳ ರಕ್ಷಕ ರಂತಹ ಅಧಿಕಾರಿಗಳ ಜವಾಬ್ದಾರಿಗಳು ಏನೆಂಬುದನ್ನು ಗೊಂದಲಕ್ಕೆ ಒಂದಿಷ್ಟೂ ಆಸ್ಪದವಿಲ್ಲದಂತೆ ಸ್ಪಷ್ಟವಾಗಿ ಸೂಚಿಸಿದೆ:[೯] ಕಾಡಿನ ಗಡಿಗಳಲ್ಲಿ ಅಧಿಕಾರಿಯು ಆನೆಗಳಿಗಾಗಿ ಅರಣ್ಯರಕ್ಷಕರಿಂದ ರಕ್ಷಿಸಲಾಗುವ ಒಂದು ಕಾಡನ್ನು ಇಡಬೇಕು. ರಕ್ಷಕರ ಸಹಾಯದಿಂದ ಮೇಲಾಧಿಕಾರಿಯು ಆನೆಗಳನ್ನು ಪರ್ವತಗಳು, ನದಿಗಳು, ಸರೋವರಗಳಲ್ಲಿ ರಕ್ಷಿಸಬೇಕು. ಆನೆಯನ್ನು ಹತ್ಯೆ ಮಾಡುವ ಯಾರನ್ನೇ ಆದರೂ ಅವರು ಕೊಲ್ಲಬೇಕು. - ಅರ್ಥಶಾಸ್ತ್ರ
On the border of the forest, he should establish a forest for elephants guarded by foresters. The Superintendent should with the help of guards...protect the elephants whether along on the mountain, along a river, along lakes or in marshy tracts...They should kill anyone slaying an elephant.
ಮರಮಟ್ಟುಗಳ ಪೂರೈಕೆಯನ್ನು ಕಾಯ್ದುಕೊಳ್ಳಲು ಮತ್ತು ಚರ್ಮಕ್ಕಾಗಿ ಸಿಂಹಗಳು, ಹುಲಿಗಳ ಪೂರೈಕೆ ನಿರಂತರವಾಗಿರಲೆಂದು ಪ್ರತ್ಯೇಕ ಕಾಡುಗಳನ್ನು ಮಯೂರ ಅರಸರು ವಿನ್ಯಾಸಪಡಿಸಿದ್ದರು. ಪ್ರಾಣಿಗಳ ರಕ್ಷಕ ರು ಎಲ್ಲೆಡೆ ಇದ್ದು, ಅವರು ಕಳ್ಳಕಾಕರು, ಹುಲಿಗಳು ಮತ್ತು ಇನ್ನಿತರ ಪರಭಕ್ಷಕ ಪ್ರಾಣಿಗಳಿಂದ ಹುಲ್ಲುಮೇಯುವ ದನಗಳಿಗೆ ಸುರಕ್ಷಿತವಾಗಿಡುವ ಕೆಲಸ ಮಾಡುತ್ತಿದ್ದರು.
ಮಯೂರ ಅರಸರು ಕೆಲವು ಅರಣ್ಯ ಪ್ರದೇಶಗಳಿಗೆ ರಕ್ಷಣೆ ಅಥವಾ ಆರ್ಥಿಕ ಅರ್ಥದಲ್ಲಿ ಬಹಳ ಬೆಲೆ ಕೊಡುತ್ತಿದ್ದರು. ಜೊತೆಗೆ ಅವರು ಅವುಗಳ ಮೇಲೆ ಕೆಲವು ನಿಯಂತ್ರಣಾ ಕ್ರಮಗಳನ್ನು ಮತ್ತು ನಿರ್ಬಂಧಗಳನ್ನು ವಿಧಿಸಿದ್ದರು. ಅವರು ಎಲ್ಲ ಅರಣ್ಯ ಬುಡಕಟ್ಟುವಾಸಿಗಳನ್ನು ಅವಿಶ್ವಾಸದಿಂದ ಕಾಣುತ್ತಿದ್ದರು ಮತ್ತು ಅವರಿಗೆ ಲಂಚ ನೀಡುವ ಮೂಲಕ, ರಾಜಕೀಯವಾಗಿ ವಶಪಡಿಸಿಕೊಳ್ಲುವ ಮೂಲಕ ಅವರನ್ನು ನಿಯಂತ್ರಿಸಿದ್ದರು. ಬುಡಕಟ್ಟು ಜನರಲ್ಲಿ ಕೆಲವರನ್ನು ಗಡಿಗಳನ್ನು ಕಾಯಲು ಮತ್ತು ಪ್ರಾಣಿಗಳನ್ನು ಸೆರೆ ಹಿಡಿಯಲುಅರಣ್ಯಕ ರೆಂದು ಅವರು ನೇಮಿಸಿಕೊಂಡಿದ್ದರು. ಕೆಲವೊಮ್ಮೆ ಅತಿ ಒತ್ತಡದ ಮತ್ತು ಸಂಘರ್ಷದಿಂದ ಕೂಡಿದ ಸಂಬಂಧವಿದ್ದರೂ, ಇದು ಮಯೂರ ಅರಸರಿಗೆ ತಮ್ಮ ವಿಶಾಲ ಸಾಮ್ರಾಜ್ಯವನ್ನು ರಕ್ಷಿಸಲು ಸಾಧ್ಯಗೊಳಿಸಿತ್ತು.[೧೦]
ಮಯೂರ ಅರಸನಾಗಿದ್ದ ಅಶೋಕ (ಕ್ರಿ.ಪೂ. 304 – 232 ) ಚಕ್ರವರ್ತಿಯು, ಬೌದ್ಧ ಮತಕ್ಕೆ ಪರಿವರ್ತನೆ ಹೊಂದಿದ ನಂತರ, ತನ್ನ ಆಳ್ವಿಕೆಯ ಕಡೆಯ ಭಾಗದಲ್ಲಿ ಆಡಳಿತದ ಶೈಲಿಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಜಾರಿಗೆ ತಂದನು. ಆತ ವನ್ಯಜೀವಿಗಳಿಗೆ ರಕ್ಷಣೆ ಒದಗಿಸಿದನು ಮತ್ತು ರಾಜ ಬೇಟೆಯನ್ನೂ ತ್ಯಜಿಸಿದನು. ಪ್ರಾಯಶಃ ಆತ ವನ್ಯಜೀವಿಗಳನ್ನು ಸಂರಕ್ಷಿಸುವ ಕ್ರಮಗಳನ್ನು ಪ್ರತಿಪಾದಿಸಿದ ಪ್ರಪ್ರಥಮ ರಾಜನಾಗಿದ್ದ. ಅಷ್ಟೇ ಅಲ್ಲದೇ ಕೆಲವು ನಿಯಮಗಳನ್ನು ಕಲ್ಲಿನ ಸ್ತೂಪಗಳಲ್ಲಿಯೂ ಕೆತ್ತಿಸಿದ್ದಾನೆ. ಪ್ರಾಣಿ ಹತ್ಯೆಯನ್ನು ತ್ಯಜಿಸಿದ ರಾಜನ ಉದಾಹರಣೆಯನ್ನು ರಾಜಶಾಸನವು ಘೋಷಿಸುತ್ತದೆ; ಅವುಗಳಲ್ಲಿ ಒಂದರಲ್ಲಿ ಹೆಮ್ಮೆಯಿಂದ ಹೀಗೆ ಹೇಳಲಾಗಿದೆ :[೧೦]. ನಮ್ಮ ರಾಜ ಕೇವಲ ಕೆಲವೇ ಪ್ರಾಣಿಗಳನ್ನು ಕೊಂದಿದ್ದಾರೆ. - ಐದನೇ ಸ್ತೂಪದ ಮೇಲಿನ ರಾಜಶಾಸನ
Our king killed very few animals.
— Edict on Fifth Pillar
ಆದಾಗ್ಯೂ, ಅಶೋಕನ ಶಾಸನಗಳು ಮತ್ತು ಅರ್ಥಶಾಸ್ತ್ರದಲ್ಲಿ ಬರೆದಿರುವ ವಿಚಾರಗಳು ನಿಜವಾದ ಸನ್ನಿವೇಶಗಳಿಗಿಂತ ಆಳುವವರ ಆಶಯವನ್ನು ಪ್ರತಿಬಿಂಬಿಸುತ್ತವೆ; ರಾಜರಿಗೆಂದು ಮೀಸಲಾಗಿಟ್ಟದ್ದ ಬೇಟೆ ಪ್ರದೇಶದಲ್ಲಿ ಜಿಂಕೆ ಬೇಟೆಯಾಡುವರಿಗೆ 100 'ಪಣಗಳ' ದಂಡ ಎಂಬ ಉಲ್ಲೇಖವಿರುವುದನ್ನು ಗಮನಿಸಿದರೆ ಆಗಲೂ ಕಾನೂನು ಮುರಿಯುವವರು ಇದ್ದರು ಎಂಬುದು ವಿದಿತವಾಗುತ್ತದೆ. ಸಾಮಾನ್ಯ ಜನರ ಬೇಟೆ, ನಾಟಾ ಉರುಳಿಸುವುದು, ಮೀನುಗಾರಿಕೆ ಮತ್ತು ಅರಣ್ಯದಲ್ಲಿ ಬೆಂಕಿ ಹಾಕುವ ಸ್ವಾತಂತ್ರ್ಯಕ್ಕೆ ಮತ್ತು ಕಾನೂನು ನಿರ್ಬಂಧಗಳ ಮಧ್ಯೆ ಸಂಘರ್ಷವಿತ್ತು.[೧೦]
ಚಾಲುಕ್ಯರ ಕಾಲ
ಬದಲಾಯಿಸಿಬೇಟೆಯ ಕುರಿತು ಸಂಸ್ಕೃತದಲ್ಲಿ ಅತ್ಯುತ್ತಮ ಗ್ರಂಥವೆಂದರೆ ದಖನ್ ಪ್ರದೇಶದಲ್ಲಿ 12ನೇ ಶತಮಾನದಲ್ಲಿ ಆಳುತ್ತಿದ್ದ ಚಾಲುಕ್ಯರ ಕಾಲದಲ್ಲಿ ರಚಿತವಾದ ಮನಸೋಲ್ಲಾಸ ಕೃತಿ.[೧೧] ಇದೇ ಕಾಲಘಟ್ಟಕ್ಕೆ ಸೇರಿದ ಇನ್ನೊಂದು ಕೃತಿ ಎಂದರೆ ಮೃಗ ಪಕ್ಷಿ ಶಾಸ್ತ್ರ . ಜೈನ ಕವಿ ಹಂಸದೇವನು 13ನೇ ಶತಮಾನದಲ್ಲಿ ಹಕ್ಕಿಗಳು ಮತ್ತು ಸಸ್ತನಿಗಳ ಕುರಿತು ಈ ಕೃತಿ ರಚಿಸಿದ್ದಾನೆ. ಸಲೀಂ ಆಲಿಯವರಿಂದ ಹಿಡಿದು ಅನೇಕರು ಇದರ ವಸ್ತುವಿನ ನಿಖರತೆಯ ಕುರಿತು ಟೀಕಿಸಿದ್ದಾರೆ.[೩][೧೨][೧೩]
ಮೊಘಲರ ಕಾಲ
ಬದಲಾಯಿಸಿಮೊಘಲರು ತುಂಬ ಆರಾಮದಾಯಕ ಬದುಕು ನಡೆಸಿದ್ದು ಮಾತ್ರವಲ್ಲದೇ ಹೂದೋಟ ನಿರ್ಮಾಣ ಮತ್ತು ಕಲೆಗೆ ಒತ್ತು ನೀಡಿದ್ದರು. ಅವರು ತಮ್ಮ ಹೂದೋಟಗಳಲ್ಲಿ ಖಾಸಗಿ ಪ್ರಾಣಿಸಂಗ್ರಹಾಲಯವನ್ನೂ ಇಟ್ಟುಕೊಂಡಿದ್ದರು. ಜೊತೆಗೆ ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಚಿತ್ರ ರಚನೆ ಮಾಡಲು ಕಲಾವಿದರನ್ನು ನೇಮಿಸಿಕೊಂಡಿದ್ದರು. ಬೇಟೆ ಮತ್ತು ಡೇಗೆ ಬೇಟೆ (ಗಿಡುಗಗಳ ಸಹಾಯದಿಂದ ಬೇಟೆಯಾಡುವ ಆಟ)ಯು ವ್ಯಾಪಕವಾಗಿ ಪ್ರಚಲಿತದಲ್ಲಿತ್ತು.[೧೪] ಅವರು ಬರಹಗಾರರನ್ನು ನೇಂಮಿಸಿಕೊಂಡಿದ್ದರು ಮತ್ತು ಭಾರತದಲ್ಲಿ ನಿಸರ್ಗದ ಕುರಿತು ತಾವು ಗಮನಿಸಿದ್ದನ್ನು ದಾಖಲಿಸಿದವರಲ್ಲಿ ಅವರು ಮೊದಲಿಗರು. ಅತ್ಯಂತ ಒಳ್ಳೆಯ ವೀಕ್ಷಕರೆಂದರೆ ಜಹಾಂಗೀರ್ (1569–1627) ಮತ್ತು ಬಾಬರ್ (1483–1530) (ಬಾಬರ್‌ನಾಮಾವನ್ನೂ ನೋಡಿ).[೧೫]
ಬಾಬರ್
ಬದಲಾಯಿಸಿಬಾಬರ್ನ ಟಿಪ್ಪಣಿಗಳು ಸಿಂಧೂ ಕಣಿವೆಯಂತೆಯೇ ದೂರದ ಪಶ್ಚಿಮದಲ್ಲಿಯೂ ಘೇಂಡಾಮೃಗಗಳು ಇದ್ದವು ಎಂಬುದನ್ನು ಸೂಚಿಸುತ್ತವೆ.
The Lesser Rhinoceros is found at present in the Bengal Sunderbuns, and a very few individuals are stated to occur in the forest tract along the Mahanuddy river, and extending northwards towards Midnapore; and also on the northern edge of the Rajmahal hills near the Ganges. It occurs also more abundantly in Burmah, and thence through the Malayan peninsula to Java and Borneo. Several have been killed quite recently within a few miles of Calcutta. One of these species formerly existed on the banks of the Indus, where it was hunted by the Emperor Baber. Individuals of this species are not unfrequently taken about the country as a show.
— Thomas C. Jerdon, 1874. Mammals of India
ಸಲೀಂ ಅಲಿಯವರು ಈ ವಿದ್ಯಮಾನದ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸುತ್ತಾರೆ.[೧೬]
We continued our march till we came near Bekram (Peshawar) and then halted. Next morning we continued halting in the same station, and I went out to hunt the Rhinoceros. We crossed the Siah-Ab (i.e. Black River perhaps another name tor the Bara) in front of Bekram, and formed our ring lower down the river. When we had gone a short way, a man came after us with notice that a rhinoceros had entered a little wood near Bekram and that they had surrounded the wood and were waiting lot us. We immediately proceeded towards the wood at full gallop and east a ring round it. Instantly on our raising the shout the rhinoceros issued out into the plain. Humayun and those who had come from the same quarter (i.e. from Turkestan) never having seen a rhinoceros before, were greatly amused. They followed it for nearly a kos, shot many arrows at it and finally brought it down. The rhinoceros did not make a good set at any person or any horse. They afterwards killed another rhinoceros. I had often amused myself by conjecturing how an elephant and rhinoceros would behave it brought to face each other; on this occasion the elephant keepers brought out the elephants so that one elephant fell right in with the rhinoceros. As soon as the drivers put their beasts In motion, the rhinoceros would not come up but immediately ran off in another direction.
ಜಹಾಂಗೀರ್
ಬದಲಾಯಿಸಿಜಹಾಂಗೀರ್ಕೂಡ ಬೇಟೆಗಳ ಕುರಿತು ವಿವರವಾದ ದಾಖಲೆಗಳನ್ನು ಇಟ್ಟಿದ್ದಾನೆ. ತನ್ನ 12ನೇ ವಯಸ್ಸಿನಿಂದ (1580) 48ನೇ ವಯಸ್ಸಿನವರೆಗೆ ಆತ 28,532 ಪ್ರಾಣಿಗಳನ್ನು ಬೇಟೆಯಲ್ಲಿ ಭಾಗಿಯಾಗಿದ್ದು, ಅದರಲ್ಲಿ ಅವನೊಬ್ಬನೇ 17,167 ಪ್ರಾಣಿಗಳನ್ನು ಬೇಟೆಯಾಡಿದ್ದಾನೆ. ಇವುಗಳಲ್ಲಿ 86 ಹುಲಿಗಳು ಹುಲಿಗಳು (ಮತ್ತು ಸಿಂಹಗಳು), 9 ಕರಡಿಗಳು, ಚಿರತೆಗಳು, ನರಿಗಳು, ನೀರುಬೆಕ್ಕು(ಉಬ್ದಿಲೊ ) ಮತ್ತು ಕತ್ತೆಕಿರುಬಗಳು, 889 – ನೀಲಿಹೋರಿ (ನೀಲಗಾಯ್) ಮತ್ತು 35 ಮ್ಹಕ ಗಳು. ಮ್ಹಕ ಎಂದರೆ ಪ್ರಾಯಶಃ ಜೌಗು ಪ್ರದೇಶದ ಜಿಂಕೆ ಇರಬೇಕು ಎಂದು ಸಲೀಂ ಅಲಿಯವರು ಅಭಿಪ್ರಾಯಪಡುತ್ತಾರೆ.[೧೬]
ಸಲೀಂ ಅಲಿಯವರು 1927ರಲ್ಲಿ ಬರೆದ ದಿ ಮೊಗಲ್ ಎಂಪರರ್ಸ್ ಆಫ್ ಇಂಡಿಯಾ ಆಂಡ್ ನ್ಯಚ್ಯುರಲಿಸ್ಟ್‌ಸ್ ಆಂಡ್ ಸ್ಪೋರ್ಟ್ಸ್‌ಮನ್ ಲೇಖನದಲ್ಲಿ ಈ ಕುರಿತು ಬರೆದಿದ್ದಾರೆ.
The Emperor Jehangir mentions that one day he was hunting the rhinoceros from an elephant in the Kul Nuh Ban (Forest) in the neighbourhood of Aligarh. He says 'A rhinoceros appeared and I struck it with a bullet on the face (mana) near the lobe of the year. The bullet penetrated for about a span. From the bullet it fell and gave up its life. It has often happened in my presence that powerful men (jawanan) good shots with the bow, have shot 20 or 30 arrows at them and not killed.' This took place about the year 1622 AD. It has been stated that the animal was a wolf, but this is obviously incorrect. In Persian Gurg is a wolf and Kurg a rhinoceros. A wolf certainly would not require 20 or 30 arrows to kill it.
17ನೇ ಶತಮಾನದಲ್ಲಿ ಜಹಾಂಗೀರನ ಆಸ್ಥಾನದಲ್ಲಿ ಕಲಾವಿದರಾಗಿದ್ದ ಉಸ್ತಾದ್ ಮನ್ಸೂರ್,[೧೭] ಸೈಬೀರಿಯದ ಕೊಕ್ಕರೆಗಳನ್ನು ಅಷ್ಟೇ ನಿಖರವಾಗಿ ಚಿತ್ರಬಿಡಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.[೧೮] ಡೋಡೋವನ್ನು (ಸೈಬೀರಿಯಾದ ಕೊಕ್ಕರೆ) ಜಹಾಂಗೀರನ ಆಸ್ಥಾನಕ್ಕೆ ಗೋವಾವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಪೋರ್ಚುಗೀಸರ ಮೂಲಕ ತರಿಸಲಾಗಿತ್ತು ಮತ್ತು ಇದರ ಒಂದು ಕಲಾಕೃತಿಯು ಹೆರ್ಮಿಟೇಟ್ ಮ್ಯೂಸಿಯಂನಲ್ಲಿದೆ. ಸಹಿ ಇಲ್ಲದ ಈ ಕಲಾಕೃತಿಯು ಮನ್ಸೂರ್ ಅವರದು ಎನ್ನಲಾಗಿದೆ.[೧೯][೨೦][೨೧]
ವಸಾಹತುಶಾಹಿ-ಪೂರ್ವ
ಬದಲಾಯಿಸಿವಿಶ್ವದ ಯಾವುದೇ ಭಾಗದಲ್ಲಿ ಕಂಡುಬರುವ ಅತ್ಯಂತ ಹಳೆಯ ಪ್ರಾದೇಶಿಕ ಸಸ್ಯ ಎಂದರೆ ಹೊರ್ಟಸ್ ಇಂಡಿಕಸ್ ಮಲಬಾರಿಕಸ್ . ಈ ಕುರಿತು 18ನೇ ಶತಮಾನದಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯ ಹೆನ್ಡ್ರಿಕ್ ವ್ಯಾನ್ ರ್ಹೀಡ್ (1636–1691) ತನ್ನ ಬರಹದಲ್ಲಿ ಪ್ರಕಟಿಸಿದ್ದಾನೆ.
ವಸಾಹತು ಭಾರತ
ಬದಲಾಯಿಸಿ...;and, secondly, that as Great Britain possesses such vast territories in Asia, colonies in Africa and the West Indies, and is now cultivating extensive connections with both North and South America, (not to mention the entire possession of that extensive and interesting country New Holland), a fine opportunity is afforded for forming Collections of rare and beautiful Insects, as well as enriching those already made ; and especially as these objects of Natural History are admitted into this country free of all duty. Many persons, therefore, who have been hitherto deterred from consigning to their friends valuable Collections of Insects, may now gratify them at a trifling cost; and we would anxiously impress upon our readers who may visit or reside in foreign countries, the great importance of attending to this subject, as we are persuaded that some of the choicest Collections in England have received their most rare and novel specimens from such well-timed and pleasing donations.
— Preface in Samouelle's 1826 guide to collection
ಈಸ್ಟ್ ಇಂಡಿಯಾ ಕಂಪನಿಯು ನೈಸರ್ಗಿಕ ಕುತೂಹಲಗಳನ್ನು ಗಮನಿಸುವಲ್ಲಿ ತ್ವರಿತವಾಗಿ ತೊಡಗಿಕೊಂಡಿತ್ತು ಮತ್ತು ತನ್ನ ಮೊದಲ ಮ್ಯೂಸಿಯಂ ಸ್ಥಾಪಿಸಿತ್ತು. ಇದರಲ್ಲಿರುವ ಸಂಗ್ರಹಗಳು ಶೀಘ್ರವಾಗಿ ವೃದ್ಧಿಸಿದವು. ಉದಾಹರಣೆಗೆ ಥಾಮಸ್ ಹಾರ್ಸ್‌ಫೀಲ್ಡ್ 1851ರಲ್ಲಿ ಮ್ಯೂಸಿಯಂಗೆ ಅಧಿಕ ಸಂಖ್ಯೆಯ ವಸ್ತುಗಳು ಸೇರ್ಪಡೆಯಾಗುತ್ತಿದ್ದನ್ನು ಗಮನಿಸಿದನು.[೨೨]
- 1801. ಜಾನ್ ಕೊರ್ಸ್ ಸ್ಕಾಟ್, Esq. ಭಾರತದ ಆನೆಯ ತಲೆಬುರುಡೆಗಳು
- 1802. ಯುಡೆಲಿನ್ ಡೆ ಜಾನ್‌ವಿಲ್ಲೆ. ಶ್ರೀಲಂಕಾದ ಪ್ರಾಣಿಶಾಸ್ತ್ರೀಯ ಮಾದರಿಗಳು, ಮುಖ್ಯವಾಗಿ ಕೀಟಗಳು ಮತ್ತು ಕೋಶಗಳು; ರೇಖಾಚಿತ್ರಗಳು ಮತ್ತು ವಿವರಣೆಗಳ ಸಹಿತ, ಮೂರು ಸಂಪಟಗಳು.
- 1804. ವಿಲಿಯಂ ರಾಕ್ಸ್‌ಬರ್ಗ್ , ಎಂ.ಡಿ. ಎಫ್. ಆರ್. ಎಸ್. ಬಬಿರುಸ ಅಲ್‌ಫರಸ್ ನ ತಲೆಬುರುಡೆ. ಕ್ಲಾಡ್ ರಸ್ಸೆಲ್, Esq. ಭಾರತದ ಹಾವುಗಳು
- 1808. ಫ್ರಾನ್ಸಿನ್ ಬುಚನನ್ ಹ್ಯಾಮಿಲ್ಟನ್ , ಎಂ.ಡಿ. ಸಸ್ತನಿಗಳು, ಹಕ್ಕಿಗಳು ಮತ್ತು ಆಮೆಗಳ ರೇಖಾಚಿತ್ರಗಳು. ಜಾನ್ ಫ್ಲೆಮಿಂಗ್, Esq. ಹಕ್ಕಿಗಳು ಮತ್ತು ಆಮೆಗಳ ರೇಖಾಚಿತ್ರಗಳು.
- 1810. ಕ್ಯಾಪ್ಟನ್ ಜೆ ಸ್ಟೀವನ್ಸ್. ಬಾಬಿರುಸ ಅಲ್‌ಫರಸ್ ನ ತಲೆ.
- 1811. ಜಾನ್ ಗ್ರಿಫಿತ್, Esq. ಫರ್ಸೆಲ್ಲ ಗೈಗಂಟಿಯ ದ ಮಾದರಿ(ಸುಮಾತ್ರಾ ಕರಾವಳಿ).
- 1812. ರಿಚರ್ಡ್ ಪ್ಯಾರಿ, Esq. ಸುಮಾತ್ರಾದ ಸಸ್ತನಿಗಳು ಮತ್ತು ಹಕ್ಕಿಗಳ ರೇಖಾಚಿತ್ರಗಳು ದಕ್ಷಿಣ ಭಾರತದ ಸಸ್ತನಿಗಳು ಮತ್ತು ಹಕ್ಕಿಗಳ ತಂಜಾವೂರು ರಾಜರ ರೇಖಾಚಿತ್ರಗಳು, ಜಾನ್ ಟೊರಿನ್ ಅವರಿಂದ ಪ್ರಸ್ತುತಪಡಿಸಲಾಗಿದೆ. Esq.[೨೩]
- 1813. ಆನರಬಲ್ ಥಾಮಸ್ ಎಸ್ ರಾಫೆಲ್ಸ್, ಲೆಫ್ಟಿನೆಂಟ್ ಗರ್ವನರ್ ಆಫ್ ಜಾವಾ. ಸ್ಪೆಸಿಮನ್ಸ್ ಆಫ್ ಮ್ಯಾಮೇಲಿಯ, ಬರ್ಡ್ಸ್ ಆಂಡ್ ಇನ್‌ಸೆಕ್ಟ್ಸ್ ಫ್ರಮ್ ಜಾವಾ. ಹಾರ್ಸ್‌ಫೀಲ್ಡ್ಸ್ ಸಂಗ್ರಹ. ಬೆಂಜಮಿನ್ ಹೈನ್, ಎಂ.ಡಿ. ಡ್ರಾಯಿಂಗ್ಸ್ ಆಫ್ ಇಂಡಿಯನ್ ಬರ್ಡ್ಸ್.
- 1817. ಆನರಬಲ್ ಟಿ. ಎಸ್. ರಾಫೆಲ್ಸ್ ಮ್ಯಾಮೇಲಿಯಾ ಆಂಡ್ ಬರ್ಡ್ಸ್ ಫ್ರಮ್ ಜಾವಾ. ಹಾರ್ಸ್‌ಫೀಲ್ಡ್ಸ್ ಸಂಗ್ರಹ. ಫ್ರಾನ್ಸಿಸ್ (ಬುಕಾನನ್) ಹ್ಯಾಮಿಲ್ಟನ್, ಎಂ.ಡಿ. ಡ್ರಾಯಿಂಗ್ಸ್ ಆಪ್ ಮ್ಯಾಮೇಲಿಯ ಮತ್ತು ಬರ್ಡ್ಸ್.
- 1819. ಫ್ರಾನ್ಸಿಸ್ (ಬುಕಾನನ್) ಹ್ಯಾಮಿಲ್ಟನ್, ಎಂ.ಡಿ. ಡ್ರಾಯಿಂಗ್ಸ್ ಆಫ್ ಮ್ಯಾಮೇಲಿಯ, ಬರ್ಡ್ಸ್ ಆಂಡ್ ರೆಪ್ಟೈಲ್ಸ್ ಥಾಮಸ್ ಹಾರ್ರ್ಸ್‌ಫೀಲ್ಡ್, ಎಂ.ಡಿ. ಕಲೆಕ್ಷನ್ಸ್ ಆಫ್ ಮ್ಯಾಮೇಲಿಯ, ಬರ್ಡ್ಸ್, ರೆಪ್ಟೈಲ್ಸ್, ಫಿಶಸ್ ಆಂಡ್ ಇನ್‌ಸೆಕ್ಟ್ಸ್ ಫ್ರಮ್ ಜಾವಾ.
- 1820. ಸರ್ ಥಾಮಸ್ ಎಸ್. ರಾಫೆಲ್ಸ್ , ಲೆಫ್ಟಿನೆಂಟ್. -ಗವರ್ನರ್. ಆಫ್ ಫೋರ್ಟ್ ಮಾರ್ಲ್‌ಬರೋ. ಕಲೆಕ್ಷನ್ಸ್ ಆಫ್ ಮ್ಯಾಮೇಲಿಯ, ಬರ್ಡ್ಸ್, ಮತ್ತು ರೆಪ್ಟೈಲ್ಸ್ ಫ್ರಮ್ ಸುಮಾತ್ರಾ.
- 1821. ಸರ್ ಥಾಮಸ್ ಎಸ್ ರಾಫೆಲ್ಸ್ ಡ್ರಾಯಿಂಗ್ಸ್ ಆಫ್ ಮ್ಯಾಮೇಲಿಯ ಮತ್ತು ಬರ್ಡ್ಸ್ ಫ್ರಮ್ ಸುಮಾತ್ರಾ
- 1823. ಜಾರ್ಜ್ ಫಿನ್ಲಿಸನ್, Esq., ಜಾನ್ ಕ್ರಾಫರ್ಡ್ Esq. ಮಿಶನ್‌ಗೆ ಮತ್ತು , ಸಿಯಮ್ ಆಂಡ್ ಹ್ಯು, ಕೊಚಿಂಚಿನದ ರಾಜಧಾನಿಗೆ ಸರ್ಜನ್ ಮತ್ತು ಪೃಕೃತಿಶಾಸ್ತ್ರಜ್ಞ. ಮಿಶನ್ ಜಾರಿಯಲ್ಲಿದ್ದ ಸಮಯದಲ್ಲಿ ಮಾಡಿದ ಸಸ್ತನಿಗಳು, ಹಕ್ಕಿಗಳು, ಮೀನುಗಳು,ಸರೀಸೃಪಗಳು ಮತ್ತು ಅಸ್ಥಿಶಾಸ್ತ್ರೀಯ ಮಾದರಿಗಳು
- 1824. ಜಾನ್ ಪ್ಯಾಟಿಸನ್, Esq. ಹಲವಾರು ಸಸ್ತಿನಿಗಳು. ಲೆಫ್ಟಿನೆಂಟ್.-ಜನರಲ್ ಥಾಮಸ್ ಹಾರ್ಡ್‌ವಿಕ್. ಎ ಕಲೆಕ್ಷನ್ ಆಫ್ ಮ್ಯಾಮೇಲಿಯ, ಬರ್ಡ್ಸ್ ಆಂಡ್ ಮಿಸ್‌ಲೇನಿಯಸ್ ಜೂವಾಲಾಜಿಕಲ್ ಸ್ಪೆಸಿಮನ್ಸ್.
- 1827. ವಿಲಿಯಂ ಮೂರ್‌ಕ್ರಾಫ್ಟ್ , Esq. ಸೆವರಲ್ ಇನ್‌ಸೆಕ್ಟ್ಸ್. ಕ್ಯಾ. ಜೆ. ಡಿ. ಹರ್ಬರ್ಟ್. ಹಿಮಾಲಯದ ಹಕ್ಕಿಗಳ ಮಾದರಿಗಳು, ಅವರು ಹಿಮಾಲಯ ಪರ್ವತಗಳ ಸಮೀಕ್ಷೆ ಸಮಯದಲ್ಲಿ ಸಂಗ್ರಹಿಸಿದ ಮಾದರಿಗಳು
- 1829. ಮದ್ರಾಸ್ ಸರ್ಕಾರ. ಸಸ್ತನಿಗಳು, ಹಕ್ಕಿಗಳು ಮತ್ತು ಕೀಟಗಳನ್ನು ಒಳಗೊಂಡಂತೆ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ಕಂಪನಿಯ ಪೃಕೃತಿಶಾಸ್ತ್ರಜ್ಞಗಳು ಮಾಡಿದ ಸಂಗ್ರಹಗಳು
- 1881. ಎ.ಟಿ. ಕ್ರಿಸ್ಟೀ, ಎಂ.ಡಿ. ಕೆನರಾ ಅರಣ್ಯದಿಂದ ಸಂಗ್ರಹಿಸಿದ ಬಿಬೋಸ್ ಕವಿಫ್ರಾನ್ಸ್ ನ ತಲೆಬುರುಡೆ. ಕರ್ನಲ್ ಡಬ್ಲ್ಯು.. ಎಚ್. ಸೈಕ್ಸ್ ದುಕುನ್ ಪ್ರದೇಶದ ಅಂಕಿಸಂಖ್ಯಾತ್ಮಕ ಸಮೀಕ್ಷೆ ಸಮಯದಲ್ಲಿ ಮಾಡಿದ ನೈಸರ್ಗಿಕ ಇತಿಹಾಸದ ಸಂಗ್ರಹ, ಸಸ್ತನಿಗಳು, ಹಕ್ಕಿಗಳು, ಮೀನುಗಳು, ಸರೀಸೃಪಗಳು, ಮತ್ತು ಕೀಟಗಳ ಮಾದರಿಗಳು ಮತ್ತು ವಿವರಗಳನ್ನು ಒಳಗೊಂಡಿದೆ.
- 1832. ಜಾನ್ ಜಾರ್ಜ್ ಚಿಲ್ಡ್ರನ್ , Esq. ಕೀಟಗಳ ಮಾದರಿಗಳು. ನಥೇನಿಯಲ್ ವ್ಯಾಲಿಚ್ , Esq. ನೇಪಾಳದ ಸಸ್ತನಿಗಳು ಮತ್ತು ಹಕ್ಕಿಗಳ ಚರ್ಮಗಳು.
- 1833. ಜಾನ್ ರೀವ್ಸ್, Esq. ಒರ್ನಿತ್ರೋಸಿಂಕಸ್ ಪಾರಡಾಕ್ಸ್‌ಸ್ ಮಾದರಿ; ಚೀನಾದ ಹಕ್ಕಿಗಳ ಚರ್ಮದ ಸಂಗ್ರಹ; ಚೀನಾದಿಂದ ಎರಡು ತಿನ್ನಬಹುದಾದ ಹಕ್ಕಿಗಳ ಗೂಡುಗಳ ಮಾದರಿಗಳು ಮದ್ರಾಸ್ ಸರ್ಕಾರ ದಿ. ಎ.ಟಿ. ಕ್ರಿಸ್ಟೀ ಎಂ.ಡಿ. ಮಾಡಿರುವ ಪ್ರಾಣಿಶಾಸ್ತ್ರಿಯ ಸಂಗ್ರಹಗಳು, ಪ್ರಾಣಿಶಾಸ್ತ್ರದ ಎಲ್ಲ ವರ್ಗಗಳಲ್ಲಿರುವ ಮಾದರಿಗಳನ್ನು ಒಳಗೊಂಡಿದೆ.
- 1837. ಜಾನ್ ಮೆಕ್‌ಕ್ಲೆಲ್ಲೆಂಡ್ , Esq., ಟೀ ಗಿಡದ ಬೆಳೆಸುವಿಕೆ ಪರಿಶೀಲಿಸುವ ಉದ್ದೇಶದಿಂದ ಅಸ್ಸಾಂಗೆ ಕಳುಹಿಸಿದ ನಿಯೋಗದ ಸದಸ್ಯ : ಸ್ಪೆಸಿಮನ್ಸ್ ಆಫ್ ಮ್ಯಾಮೇಲಿಯ, ಬರ್ಡ್ಸ್, ಆಂಡ್ ಅದರ್ ಆಬ್ಜೆಕ್ಟ್ಸ್ ಆಫ್ ನ್ಯಾಚುರಲ್ ಹಿಸ್ಟರಿ, ರೇಖಾಚಿತ್ರಗಳು ಮತ್ತು ವಿವರಣೆಯೊಂದಿಗೆ.
- 1838. ಶ್ರೀಮತಿ ಇಂಪೀ . ಇಂಡಿಯನ್ ರೆಪ್ಟೈಲ್ಸ್ ಇನ್ ಸ್ಪಿರಿಟ್
- 1840. ಜಾನ್ ವಿಲಿಯಂ ಹೈಫರ್, ಎಂ.ಡಿ. ಎ ಕಲೆಕ್ಷನ್ ಆಫ್ ಮ್ಯಾಮೇಲಿಯ ಮತ್ತು ಬರ್ಡ್ಸ್ ಫ್ರಮ್ ದಿ ಕೋಸ್ಟ್ ಆಫ್ ಟೆನಸ್ಸೆರಿಯಂ. ಮೇಜರ್ ಆರ್ ಬೊಲಿಯು ಪೆಂಬರ್‌ಟನ್. 1837–38ರಲ್ಲಿ ಭೂತಾನ್‌ಗೆ ಭೇಟಿ ನೀಡಿದ ಅವಧಿಯಲ್ಲಿ ಸಂಗ್ರಹಿಸಿದ ಮಾದರಿಗಳು.
- 1841. ಜೆ.ಟಿ. ಪಿಯರ್‌ಸನ್, Esq. ಎ ಕಲೆಕ್ಷನ್ ಆಫ್ ಇನ್‌ಸೆಕ್ಟ್ಸ್ ಫ್ರಮ್ ಡಾರ್ಜಿಲಿಂಗ್. ಸಿ.ಡಬ್ಲ್ಯು.. ಸ್ಮಿತ್, Esq. ಎ ಕಲೆಕ್ಷನ್ ಆಫ್ ಇನ್‌ಸೆಕ್ಟ್ಸ್ ಫ್ರಮ್ ಚಿತ್ತಗಾಂಗ್. ಬೆಂಗಾಲ್ ಏಷಿಯಾಟಿಕ್ ಸೊಸೈಟಿ. ಎ ಕಲೆಕ್ಷನ್ ಆಫ್ ಮ್ಯಾಮೇಲಿಯ, ಬರ್ಡ್ಸ್, ಆಂಡ್ ಇನ್‌ಸೆಕ್ಟ್ಸ್ ಜಾನ್ ಮೆಕ್‌ಕ್ಲೆಲ್ಲಂಡ್, Esq. ಸ್ಪೆಸಿಮನ್ಸ್ ಆಫ್ ಮ್ಯಾಮೇಲಿಯ, ಬರ್ಡ್ಸ್, ಆಂಡ್ ಇನ್‌ಸೆಕ್ಟ್ಸ್
ಭಾರತೀಯ ನಾಗರಿಕ ಸೇವೆಯವರು ಹಲವರು ಬ್ರಿಟಿಶ್ ಪೃಕೃತಿಶಾಸ್ತ್ರಜ್ಞರನ್ನು ಭಾರತಕ್ಕೆ ಕರೆತಂದರು. ಕೆಲವರು ಬ್ರಿಟನ್ನಿನ ಪರವಾಗಿ ಮತ್ತು ಇನ್ನು ಕೆಲವರು ಐರೋಪ್ಯ ಪೃಕೃತಿಶಾಸ್ತ್ರಜ್ಞರು ಮತ್ತು ವಸ್ತುಸಂಗ್ರಹಾಲಯಗಳ ಪರವಾಗಿ ಮಾದರಿಗಳನ್ನು ಸಂಗ್ರಹಿಸಿದರು. ಇನ್ನು ಕೆಲವರು ಸ್ವಂತವಾಗಿ ಅಧ್ಯಯನವನ್ನು ಮಾಡಿದರು. ಇತಿಹಾಸತಜ್ಞರು ವಸ್ತುಸಂಗ್ರಹಾಲಯಗಳು ರೂಪುಗೊಂಡಿದ್ದನ್ನು ವಸಾಹತುಶಾಹಿಗೆ ಕೊಂಡಿಯಾಗಿಸಿದ್ದಾರೆ.[೨೪][೨೫] ಈ ಬೃಹತ್ ಸಂಗ್ರಹಗಳು ಮತ್ತು ಅವುಗಳ ದಾಖಲೀಕರಣವು ಫಾನಾ ಆಫ್ ಬ್ರಿಟಿಶ್ ಇಂಡಿಯಾ ಸರಣಿಗಳನ್ನೂ ಒಳಗೊಂಡಂತೆ ಹಲವಾರು ಕೃತಿಗಳು ಸಿದ್ಧಗೊಳ್ಳಲು ಕಾರಣವಾಯಿತು.
ಭಾರತದ ಪ್ರಾಣಿಗಳು ಕುರಿತು ಮೊಟ್ಟಮೊದಲು ದಾಖಲಿಸುವ ಪ್ರಯತ್ನ ಮಾಡಿದ್ದು ಪ್ರಾಯಶಃ ಥಾಮಸ್ ಹಾರ್ಡ್‌ವಿಕ್ (1755–1835). ಆತ ಭಾರತದಲ್ಲಿ ಸೇನಾಧಿಕಾರಿಯಾಗಿದ್ದು, ಭಾರತದ ಪ್ರಾಣಿಗಳ ಚಿತ್ರಗಳ ಅಗಾಧ ಸಂಗ್ರಹವನ್ನು ಸಿದ್ಧಪಡಿಸಲು ಸ್ಥಳೀಯ ಕಲಾವಿದರನ್ನು ನೇಮಿಸಿಕೊಂಡಿದ್ದನು. ಇದನ್ನು ತದನಂತರದಲ್ಲಿ ಜಾನ್ ಎಡ್ವರ್ಡ್ ಗ್ರೇ (1800–1875) ಅಧ್ಯಯನ ಮಾಡಿದನು ಮತ್ತು ಇಲ್ಲಸ್ಟೇಶನ್ಸ್ ಆಫ್ ಇಂಡಿಯನ್ ಜೂವಾಲಜಿ : ಚೀಫ್‌ಲಿ ಸೆಲೆಕ್ಟೆಡ್ ಫ್ರಮ್ ಮೇಜರ್ ಜನರಲ್ ಹಾರ್ಡ್‌ವಿಕ್ ಕೃತಿಯನ್ನು ಪ್ರಕಟಿಸಿದನು. ಇದು ಒಟ್ಟು 202 ಬಣ್ಣದ ಚಿತ್ರಗಳನ್ನು ಹೊಂದಿತ್ತು.[೨೬][೨೭][೨೮][೨೯][೩೦][೩೧]
ಪೃಕೃತಿಶಾಸ್ತ್ರಜ್ಞರ ಸಂಖ್ಯೆ ಹೆಚ್ಚತೊಡಗಿ, ತಾವು ಗಮನಿಸಿದ್ದನ್ನು ಹಂಚಿಕೊಳ್ಳುವ ಆಸಕ್ತಿಯು ಅವರಲ್ಲಿ ಅಧಿಕಗೊಳ್ಳತೊಡಗಿ, 1883ರಲ್ಲಿ ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ ಯನ್ನು ಸ್ಥಾಪಿಸಲು ಕಾರಣವಾಯಿತು.[೩೨]
ಈ ಕಾಲಘಟ್ಟದಲ್ಲಿ ಅನೇಕ ಭಾರತೀಯ ರಾಜಕುಮಾರರು ಬ್ರಿಟಿಶ್ ಬೇಟೆಗಾರರನ್ನೂ ಸೇರಿಸಿಕೊಂಡು, ಬೃಹತ್ ಪ್ರಮಾಣದಲ್ಲಿ ಬೇಟೆಗೆ ತೊಡಗಿಕೊಂಡಿದ್ದು, ಇದರಿಂದಾಗಿ ಹಲವಾರು ವನ್ಯಜೀವಿಗಳು ನಿರ್ನಾಮದಂಚಿಗೆ ಬಂದವು ಮತ್ತು ಚೀತಾದಂತಹ ಇನ್ನು ಕೆಲವು ಪ್ರಾಣಿಗಳು ನಿರ್ನಾಮಗೊಂಡವು.
ಪ್ರಾಗ್ಜೀವಶಾಸ್ತ್ರ
ಬದಲಾಯಿಸಿವಸಾಹತುಶಾಹಿ ಕಾಲದಲ್ಲಿ ಭೂಗೋಳಶಾಸ್ತ್ರದ ಅಧ್ಯಯನವು ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ಬಹಳಷ್ಟು ಶೋಧ ಮಾಡಿದ ಸಂಪನ್ಮೂಲಗಳು ಎಂದರೆ ಅತ್ಯುತ್ತಮ ಕಲ್ಲಿದ್ದಿಲಿನ ಸ್ತರಗಳು, ಚಿನ್ನ ಮತ್ತು ಇನ್ನಿತರ ಖನಿಜಗಳು. ಇದು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸ್ಥಾಪನೆಗೆ ಕಾರಣವಾಯಿತು. ಥಾಮಸ್ ಓಲ್ಡ್‌ಹಾಮ್ (1816–1878) ಇದರ ಮೊದಲ ಸೂಪರಿಂಟೆಂಡೆಂಟ್ ಆಗಿದ್ದರು. ಪಳೆಯುಳಿಕೆಗಳಲ್ಲಿ ಅವರಿಗಿದ್ದ ಆಸಕ್ತಿಯಿಂದಾಗಿ, ವಿಶೇಷವಾಗಿ ಓಲ್ಡ್‌ಹ್ಯಾಮಿಯಾ ವನ್ನು ಅವರು ಶೋಧ ಮಾಡಿದ ನಂತರ, ಭಾರತದ ಪ್ರಾಗ್ಜೀವಶಾಸ್ತ್ರದ ವಿಚಾರದ ಕುರಿತು ಅವರು ಸಾಕಷ್ಟು ಆಸಕ್ತಿಯನ್ನು ವಹಿಸಿದರು. ಫರ್ಡಿನಂಡ್ ಸ್ಟೊಲಿಜ್ಕ ಅವರನ್ನು ಕಚ್‌ನ ಜುರಾಸಿಕ್ ಪದರಗಳ ಕುರಿತು ಕೆಲಸ ಮಾಡಲು ನೇಮಿಸಿದರು. ಈ ತಲೆಮಾರಿನ ಭೂಗೋಳಶಾಸ್ತ್ರಜ್ಞರ ಕಾರ್ಯವು ಜಾಗತಿಕ ಮಹತ್ವದ ಶೋಧಗಳಿಗೆ ಕಾರಣವಾಯಿತು. ಕಾಂಟಿನೆಂಟಲ್ ಡ್ರಿಫ್ಟ್ (ಖಂಡಾಂತರ ದಿಕ್ಚ್ಯುತಿ) ಮತ್ತು ಗೊಂಡ್ವಾನ ಸೂಪರ್‌ಕಾಂಟಿನೆಂಟ್ ಕಲ್ಪನೆಗೆ ಬೆಂಬಲವೂ ದೊರೆಯಿತು.[೩೩]
ಪಕ್ಷಿಗಳು
ಬದಲಾಯಿಸಿವಸಾಹತುಶಾಹಿ ಕಾಲದಲ್ಲಿ ಭಾರತದಲ್ಲಿ ಪಕ್ಷಿಗಳ ಅಧ್ಯಯನವು ಬೇಟೆಯೊಂದಿಗೆ ಆರಂಭಗೊಂಡಿತು ಮತ್ತು ನಂತರವೇ ಗಮನವಿಟ್ಟು ಕೆಲವು ವೀಕ್ಷಣೆಗಳನ್ನು ಮಾಡಲಾಯಿತು. ಅನೇಕ ನಾಗರಿಕ ಸೇವಾ ಅಧಿಕಾರಿಗಳು ಮತ್ತು ಸೇನಾಧಿಕಾರಿಗಳು ಮೋಜಿಗಾಗಿ ಬೇಟೆಯಲ್ಲಿ ಆಸಕ್ತಿವಹಿಸಿದ್ದರು. ಅವರು ತಾವು ಹೊಡೆದುರುಳಿಸಿದ ಹಕ್ಕಿಗಳ ಕುರಿತು ಟಿಪ್ಪಣಿ ಮಾಡಿಡುತ್ತಿದ್ದರು. ತುಂಬ ಆಸಕ್ತಿಯೆನ್ನಿಸಿದ ಹಕ್ಕಿಗಳ ಚರ್ಮತೆಗೆದು, ಇಂಗ್ಲೆಂಡ್‌ನಲ್ಲಿರುವ ವಸ್ತುಸಂಗ್ರಹಾಲಯಗಳಿಗೆ ಅದನ್ನು ಗುರುತಿಸಲಿಕ್ಕಾಗಿ ಕಳುಹಿಸುತ್ತಿದ್ದರು.
1831ರಲ್ಲಿ ಮೇಜರ್ ಫ್ರಾಂಕ್ಲಿನ್ ಆರಂಭಿಕ ಅಧ್ಯಯನವನ್ನು ಮಾಡಿದ್ದರು. (ಪ್ರೊಸೀಡಿಂಗ್ಸ್ ಜುವಾಲಾಜಿಕಲ್ ಸೊಸೈಟಿ, 1831) ನಂತರ ಕರ್ನಲ್ ಡಬ್ಲ್ಯು.ಎಚ್. ಸೈಕ್ಸ್ ಅವರು ಮುಂಬಯಿ ದಖನ್ ಪ್ರಾಂತ್ಯದ ಹಕ್ಕಿಗಳ ಒಂದು ವರ್ಗೀಕರಣ (ಕೆಟಲಾಗ್) ಮಾಡಿದ್ದರು. (ಪ್ರೊಸೀಡಿಂಗ್ಸ್ ಜೂವಾಲಾಜಿಕಲ್ ಸೊಸೈಟಿ, 1832) ನಂತರದಲ್ಲಿ ಸಾಮ್ಯುಯೆಲ್ ಟಿಕ್ಕೆಲ್ ಬೊರಭುಮ್ ಮತ್ತು ಧೊಲಾಭುಮ್ ಪ್ರದೇಶದ ಹಕ್ಕಿಗಳ ಒಂದು ಪಟ್ಟಿಯನ್ನು ಮಾಡಿದ್ದರು. (ಜರ್ನಲ್. ಏಷಿಯಾಟಿಕ್. ಸೊಸೈಟಿ, 1833). ಆದರೆ ನಿಜಕ್ಕೂ ಇವುಗಳನ್ನು ಗುರುತಿಸುವ ಕೆಲಸವನ್ನು ಪುನಾ ಇಂಗ್ಲೆಂಡ್‌ನಲ್ಲಿ ಮಾಡಲಾಗುತ್ತಿತ್ತು.[೩೪]
ನಿಜವಾದ ಪಕ್ಷಿವಿಜ್ಞಾನವು ದಕ್ಷಿಣ ಭಾರತದಲ್ಲಿ ಥಾಮಸ್ ಸಿ ಜೆರ್ಡನ್ (1811–1872) ಅವರಿಂದ ಆರಂಭಗೊಂಡಿತು. ಇದಾಗಿ ಬಹಳ ನಂತರದಲ್ಲಿ ಅಲಾನ್ ಆಕ್ಟೇವಿಯನ್ ಹ್ಯುಮ್ (1829–1912) ಭಾರತದಲ್ಲಿರುವ ಎಲ್ಲ ಪಕ್ಷಿವಿಜ್ಞಾನಿಗಳ ಒಂದು ಜಾಲವನ್ನು ರೂಪಿಸಿದರು. ಅವರು ಸ್ಟ್ರೇ ಫೆದರ್ಸ್ ಎಂಬ ಮೊದಲ ಪಕ್ಷಿಶಾಸ್ತ್ರೀಯ ನಿಯತಕಾಲಿಕವನ್ನು ಆರಂಭಿಸಿದರು. ಅದರಲ್ಲಿ ಅವರು ಪಕ್ಷಿಗಳ ಹೊಸ ಪ್ರಭೇದಗಳನ್ನು ವಿವರಿಸಿದರು ಮತ್ತು ಆ ಎಲ್ಲ ಪ್ರದೇಶದಿಂದ ಬರಹಗಳನ್ನು ನೀಡಿದವರ ಟಿಪ್ಪಣಿಗಳನ್ನು ಪರಿಷ್ಕರಿಸಿ, ಸಂಪಾದಿಸಿದರು.
ಪಕ್ಷಿವಿಜ್ಞಾನಿಗಳ ಬೃಹತ್ ಮತ್ತು ವ್ಯಾಪಕವಾದ ಸಂಗ್ರಹಣಾ ಪ್ರಯತ್ನಗಳು ಎಲ್ಲೆಡೆ ಹರಡಿತು ಮತ್ತು ಅವುಗಳನ್ನು ಬ್ರಿಟಿಶ್ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾಯಿತು. ನಂತರ 1889ರಲ್ಲಿ ಬ್ಲಾನ್‌ಫೋರ್ಡ್ ಭಾರತೀಯ ಪಕ್ಷಿವಿಜ್ಞಾನದ ಸಂಗ್ರಹದ ಮಹತ್ವದ ಕುರಿತು ವ್ಯಾಖ್ಯಾನಿಸಿದ್ದಾನೆ.
...But, above all, Mr. Hume brought together, chiefly in about ten years (from 1872 to 1882), a collection of Indian birds from all parts of the country far superior to any ever before accumulated ; indeed it is doubtful whether an equally complete collection has ever before been made, from a similar area, in any branch of Zoology or Botany. The whole of this collection, amounting to 60,000 skins, besides a very large number of nests and eggs, has now been presented by Mr. Hume to the British Museum ; and as the same building contains the collections of Colonel Sykes, the Marquis of Tweeddale (Viscount Walden), Mr. Gould, and, above all, of Mr. Hodgson, the opportunities now offered for the study of Indian birds in London are far superior to those that have ever been presented to students in India.
— W. T. Blanford in the preface to the Fauna of British India, Birds volume 1, by E. W. Oates, 1889
ಭಾರತೀಯ ಉಪಖಂಡದಲ್ಲಿ ಆ ಕಾಲಘಟ್ಟದ್ದಲ್ಲಿದ್ದ ಕೆಲವು ಪ್ರಸಿದ್ಧ ಪಕ್ಷಿವಿಜ್ಞಾನಿಗಳ ಹೆಸರುಗಳು ಹೀಗಿವೆ : ಆಂಡ್ರ್ಯೂ ಲೀತ್ ಆಡಮ್ಸ್ (1827–1882), ಎಡ್ವರ್ಡ್ ಬ್ಲೈತ್ (1810–1873), ಎಡ್ವರ್ಡ್ ಆರ್ಥರ್ ಬಟ್ಲರ್ (1843–1916), ಡೌಗ್ಲಾಸ್ ಡೆವರ್ (1875–1957), ಎನ್. ಎಫ್. ಫ್ರೋಮ್ (1899–1982),[೩೫] ಹ್ಯು ವಿಸ್ಲರ್ (1889–1943), ಎಚ್. ಎಚ್. ಗೊಡ್ವಿನ್ -ಆಸ್ಟೆನ್ (1834–1923), ಕರ್ನಲ್. ಡಬ್ಲ್ಯು. ಎಚ್. ಸೈಕ್ಸ್ (1790–1872), ಸಿ. ಎಂ. ಇಂಗ್ಲಿಸ್ (1870–1954), ಫ್ರಾಂಕ್ ಲಡ್ಲೊ (1885–1972), ಇ. ಸಿ. ಸ್ಟ್ಯುವರ್ಟ್ ಬೆಕರ್ (1864–1944), ಹೆನ್ರಿ ಎಡ್ವಿನ್ ಬಾರ್ನ್ಸ್ (1848–1896), ಎಫ್. ಎನ್. ಬೆಟ್ಸ್ (1906–1973), ಎಚ್. ಆರ್. ಬೆಕರ್ , ಡಬ್ಲ್ಯು. ಇ. ಬ್ರೂಕ್ಸ್ (1828–1899), ಮಾರ್ಗರೆಟ್ ಕಾಕ್‌ಬರ್ನ್ (1829–1928), ಜೇಮ್ಸ್ ಎ. ಮರ್ರೆ , ಇ. ಡಬ್ಲ್ಯು. ಓಟ್ಸ್ (1845–1911), ಫರ್ಡಿನಾಂಡ್ ಸ್ಟೊಲಿಜ್ಕ (1838–1874), ವೆಲೆಂಟೈನ್ ಬಾಲ್ (1843–1894), ಡಬ್ಲ್ಯು. ಟಿ. ಬ್ಲಾನ್‌ಫೋರ್ಡ್ (1832–1905), ಜೆ.ಕೆ. ಸ್ಟಾನ್‌ಫೋರ್ಡ್ (1892–1971), ಚಾರ್ಲ್ಸ್ ಸ್ವಿನ್‌ಹೊ (1836–1923), ರಾಬರ್ಟ್ ಸ್ವಿನ್‌ಹೊ (1836–1877) , ಸಿ. ಎಚ್. ಟಿ. ಮಾರ್ಶಲ್ (1841–1927) , ಜಿ.ಎಫ್.ಎಲ್. ಮಾರ್ಶಲ್ (1843–1934), ಆರ್.ಎಸ್.ಪಿ. ಬೇಟ್ಸ್ , ಜೇಮ್ಸ್ ಫ್ರಾಂಕ್ಲಿನ್ (1783–1834), ಸತ್ಯ ಚರ್ನ್ ಲಾ , ಆರ್ಥರ್ ಎಡ್ವರ್ಡ್ ಓಸ್ಮಸ್‌ಟನ್ (1885–1961), ಬರ್ಟ್ರಾಮ್ ಬರೆಸ್‌ಫೊರ್ಡ್ ಓಸ್ಮಸ್‌ಟನ್ (1868–1961), ವಾರ್ಡ್ಲಾ ರಾಮ್ಸೆ (1852–1921) ಮತ್ತು ಸಾಮ್ಯುಯೆಲ್ ಟಿಕ್ಕೆಲ್ (1811–1875) ಹಾಗೂ ಇನ್ನಿತರರು. ಜೆರ್ಡನ್, ಹ್ಯುಮ್, ಮಾರ್ಶಲ್ ಮತ್ತು ಇ.ಡಿ.ಎಸ್. ಬೆಕರ್ ಅವರು ಹಲವಾರು ಸಮಗ್ರ ಕೃತಿಗಳನ್ನು ರಚಿಸಿದರು. ಫ್ರಾಂಕ್ ಫಿನ್, ಡೌಗ್ಲಾಸ್ ಡೆವರ್ ಮತ್ತು ಹ್ಯು ವಿಸ್ಲರ್ ಅವರು ಜನಪ್ರಿಯ ಕೃತಿಗಳನ್ನೂ ರಚಿಸಿದರು. ನಂತರದಲ್ಲಿ ಭಾರತೀಯ ನಾಗರಿಕ ಸೇವೆಯನ್ನು ಸೇರಿದವರಿಗೆ ಈ ಎಲ್ಲರ ಕೃತಿಗಳು ಲಭ್ಯವಿದ್ದವು. ಈ ಕಾಲಘಟ್ಟವು ಬಿಎನ್‌ಎಸ್‌ಎಸ್, ಏಷಿಯಾಟಿಕ್ ಸೊಸೈಟಿ ಮತ್ತು ದಿ ಬಿಒಯು ಇನ್ನಿತರ ಸಂಸ್ಥೆಗಳು ಪ್ರಕಟಿಸಿದ ನಿಯತಕಾಲಿಕಗಳಲ್ಲಿ ಇವರ ಅಡಿಟಿಪ್ಪಣಿಗಳೇ ರಾರಾಜಿಸುತ್ತಿದ್ದವು.
-
ಟಿ. ಸಿ. ಜೆರ್ಡನ್ (1811–1872)
-
ಎ. ಒ. ಹ್ಯುಮ್ (1829–1912)
-
ಫರ್ಡಿನಾಂಡ್ ಸ್ಟೊಲಿಜ್ಕ (1838–1874)
-
ವೆಲೆಂಟೈನ್ ಬಾಲ್ (1843–1894)
-
ಡಬ್ಲ್ಯು. ಎಚ್. ಸೈಕ್ಸ್ (1790–1872)
-
ಡಬ್ಲ್ಯು.ಇ. ಬ್ರೂಕ್ಸ್ (1828–1899)
-
ಎಚ್. ಎಚ್. ಗಾಡ್ವಿನ್ ಆಸ್ಟೆನ್ (1834–1923)
-
ವಾರ್ಡ್ಲಾ ರಾಮ್ಸೆ (1852–1921)
-
ಡಬ್ಲ್ಯು. ಟಿ .ಬ್ಲಾನ್‌ಫೋರ್ಡ್ (1832–1905)
-
ಇ.ಸಿ. ಸ್ಟುವರ್ಟ್ ಬೇಕರ್ (1864–1944)
ಸಸ್ತನಿಗಳು
ಬದಲಾಯಿಸಿಹಕ್ಕಿಗಳ ಹಾಗೆಯೇ, ಸಸ್ತನಿಗಳ ಅಧ್ಯಯನವನ್ನೂ ಹೆಚ್ಚಿನ ವೇಳೆ ಬೇಟೆಗಾರರು ಮಾಡಿದ್ದರು ಮತ್ತು ಕೆಲಕಾಲದವರೆಗೆ ಅದು ಟ್ರೋಫಿ ಹಂಟಿಂಗ್ (ಪದಕ ಬೇಟೆ)ಗೆ ಸೀಮಿತವಾಗಿತ್ತು. ಆರ್.ಸಿ. ರಫ್‌ಟನ್ ಎಂಬ ಅರಣ್ಯ ಅಧಿಕಾರಿಯು ಭಾರತದ ಸಣ್ಣಗಾತ್ರದ ಸಸ್ತನಿಗಳ ಕುರಿತು ಅಧ್ಯಯನ ಮಾಡುವತ್ತ ಗಮನ ಕೇಂದ್ರೀಕರಿಸಿದನು. ಈ ಅಧ್ಯಯನಕ್ಕೆ ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯರ ಜಾಲವನ್ನು ಬಳಸಿಕೊಂಡನು. ಆಗ ಭಾರತದಲ್ಲಿ ಸಸ್ತನಿಗಳ ವಿಜ್ಞಾನವು ನಿಜವಾದ ಶ್ರದ್ಧೆಯಿಂದ ಆರಂಭಗೊಂಡಿತು. ಆತ ಮೊದಲು ಹಿಮೆನೊಪ್ಟೆರ ವರ್ಗದ ಜೀವಿಗಳಲ್ಲಿ, ವಿಶೇಷವಾಗಿ ಇರುವೆಗಳು ಮತ್ತು ನಂತರ ಚೇಳುಗಳ ಕುರಿತು ಆಸಕ್ತಿ ಹೊಂದಿದ್ದನು. ಆತನಿಗೆ ಚೇಳುಗಳಲ್ಲಿದ್ದ ಆಸಕ್ತಿಯಿಂದಾಗಿ ಆರ್.ಐ. ಪೊಕೊಕ್ ಅವರ ಸಂಪರ್ಕಕ್ಕೆ ಬರುವಂತಾಯಿತು. ಆ ಸಮಯದಲ್ಲಿ, ಪೊಕಾಕ್ ಅವರಿಗೆ ಸಸ್ತನಿಗಳಲ್ಲಿ ಬಹಳ ಆಸಕ್ತಿ ಇದ್ದರೂ, ಅವರು ಅರಚಿಂಡದ ಉಸ್ತುವಾರಿ ವಹಿಸಿಕೊಂಡಿದ್ದರು. ಬೃಹತ್ ಪ್ರಮಾಣದಲ್ಲಿ ಸಂಗ್ರಹಕಾರ್ಯ ನಡೆಸುವ ಪ್ರಯತ್ನಕ್ಕೆ ಕೈಹಾಕಿದರೂ ಅದು ಆರಂಭಗೊಳ್ಳಲಿಲ್ಲ. 1904ರಲ್ಲಿ ಭಾರತೀಯ ವೈದ್ಯಕೀಯ ಸೇವೆಯ ಕ್ಯಾಪ್ಟನ್ ಗ್ಲೆನ್ ಲಿಸನ್ ಪ್ಲೇಗ್, ರಾಟ್ಸ್ ಆಂಡ್ ಫ್ಲೀಸ್ (ಪ್ಲೇಗ್, ಇಲಿಗಳು ಮತ್ತು ಚಿಗಟಗಳು) ಎಂಬ ಲೇಖನವನ್ನು ಪ್ರಸ್ತುತಪಡಿಸಿದರು. ಅದರಲ್ಲಿ ದಂಶಕಗಳ ಕುರಿತು ಮಾಹಿತಿಯ ಕೊರತೆ ಇರುವುದನ್ನು ಗಮನಿಸಿ, ಪ್ರಸ್ತಾಪಿಸಿದ್ದರು. ಪ್ಲೇಗ್ ಇಲಾಖೆಯ ಡಾ. ಹೊಸ್ಸಕ್ ಅವರು ಇನ್ನೊಂದು ಲೇಖನವನ್ನು ಪ್ರಸ್ತುತಪಡಿಸಿದ್ದರು. ಪ್ಲೇಗ್‌ನಲ್ಲಿಯ ಈ ಆಸಕ್ತಿಯು ಬಿಎನ್‌ಎಸ್‌ಎಸ್‌ಗೆ ತಕ್ಷಣವೇ ಸಣ್ಣ ಸಸ್ತನಿಗಳ ಸಂಗ್ರಹಕ್ಕಾಗಿ ನಿಧಿ ಸಂಗ್ರಹ ಮಾಡಲು ಸಾಧ್ಯಗೊಳಿಸಿತು.[೩೬] ಬೇಟೆಗಾರರು ಅನೇಕ ಮಾದರಿಗಳನ್ನು ಗುರುತಿಸಲಿಕ್ಕೆಂದು ಕಳುಹಿಸಿದರು, ಆದರೆ ಕಾಡಿನಲ್ಲಿ ಈ ಜೀವಿವರ್ಗಗಳ ಪ್ರವೃತ್ತಿಗಳನ್ನು ಅಧ್ಯಯನ ಮಾಡಿದವರು ಕೆಲವೇ ಕೆಲವರಿದ್ದರು. ದಂಶಕಗಳ ಮತ್ತು ಬಾವಲಿಗಳ ಒಂದು ಪ್ರಮುಖ ಅದ್ಯಯನವನ್ನು ವೃತ್ತಿಯಿಂದ ವೈದ್ಯರಾಗಿದ್ದ ಜಾರ್ಜ್ ಎಡ್ವರ್ಡ್ ಡಾಬ್ಸನ್ (1848–1895) ನಡೆಸಿದರು. ಇನ್ನಿತರ ಗಮನಾರ್ಹರಾದ ಸಸ್ತನಿಶಾಸ್ತ್ರಜ್ಞರು ಎಂದರೆ ರಿಚರ್ಡ್ ಲೈಡೆಕ್ಕರ್ (1849–1915) , ರಾಬರ್ಟ್ ಅರ್ಮಿಟೇಜ್ ಸ್ಟ್ರೆಂಡಲ್ , ಸ್ಟ್ಯಾನ್ಲಿ ಹೆನ್ರಿ ಪ್ರೇಟರ್ (1890–1960) ಮತ್ತು ಬ್ರಿಯಾನ್ ಹಫ್‌ಟನ್ ಹಾಗ್‌ಸನ್ (1800–1894). ರಿಚರ್ಡ್ ಲೈಡೆಕ್ಕರ್ ಇಂಡಿಯನ್ ಜಿಯಾಲಾಜಿಕಲ್ ಸರ್ವೇ ಇಲಾಖೆಯೊಂದಿಗೆ ಕೆಲಸ ಮಾಡಿದರು. ಆ ಅವಧಿಯಲ್ಲಿ ಅವರ ಮುಖ್ಯ ಗಮನವು ಭಾರತದ ಸಸ್ತನಿಗಳ ಪಳೆಯುಳಿಕೆಗಳ ಮೇಲೆ ಇದ್ದಿತು.[೩೭]
ಭಾರತದಿಂದ ಪ್ರಾಣಿಗಳನ್ನು ಸಜೀವವಾಗಿ ಬ್ರಿಟನ್ನಿನಲ್ಲಿರುವ ಸಂಗ್ರಹಾಲಯಗಳಿಗೆ ಕಳುಹಿಸಲಾಯಿತು. 1,250 ಪೌಂಡ್ ವೆಚ್ಚದಲ್ಲಿ ಚಿತ್ತಗಾಂಗ್‌ನಿಂದ ಎರಡು ಘೇಂಡಾಮೃಗಗಳನ್ನು 1872ರಲ್ಲಿ ಬ್ರಿಟನ್ನಿಗೆ ಕಳುಹಿಸಲಾಯಿತು. ಸ್ವಂತ ಮ್ಯಾನೇಜರ್‌ಗಳನ್ನು ಇಟ್ಟುಕೊಂಡಿದ್ದ ಭಾರತೀಯ ಬೂರ್ಜ್ವಾವರ್ಗವು ಇಂತಹ ಕಲೆಕ್ಷನ್‌ಗಳಿಗೆ ಕೊಡುಗೆ ನೀಡುವವರಾದರು. ಕಲ್ಕತ್ತದ ರಾಜಾ ರಾಜೇಂದ್ರ ಮಲ್ಲಿಕ್ ಅವರನ್ನು 1860ರ ಸುಮಾರಿಗೆ ಜೂವಾಲಾಜಿಕಲ್ ಸೊಸೈಟಿ ಆಫ್ ಲಂಡನ್‌ನ ಸಂಪರ್ಕ ಸದಸ್ಯರಾಗಿ ಮಾಡಲಾಯಿತು. 1901ರಲ್ಲಿ ವಾರಣಾಸಿಯ ಮಹಾರಾಜ, ಸನ್ಮಾನ್ಯ ಸರ್ ಪ್ರಭು ನರಾನಿ ಸಿಂಗ್, ಬಹಾದುರ್, ಜಿ.ಸಿ.ಐ.ಇ., ಭಾರತದ ಆನೆಗಳನ್ನು ಅಗತ್ಯವಿದ್ದಾಗ ಪೂರೈಸುವಾಗಿ ವಾಗ್ದಾನ ಮಾಡಿ, ಲಂಡನ್ ಜೂವಾಲಾಜಿಕಲ್ ಸೊಸೈಟಿಯ ಗೌರವ ಸದಸ್ಯರಾಗಿ ಆಯ್ಕೆಗೊಂಡರು.[೩೮]
ಆ ಕಾಲದ ಕೆಲವು ಪ್ರಾಣಿಸಂಗ್ರಹಾಲಯದಲ್ಲಿ ಬಂಧನದಲ್ಲಿದ್ದ ಪ್ರಾಣಿಗಳ ಕುರಿತು ಸ್ವಲ್ಪಮಟ್ಟಿನ ಕೆಲಸಗಳು ನಡೆದವು. ಈ ಪ್ರಾಣಿಸಂಗ್ರಹಾಲಯಗಳಲ್ಲಿ ಅಗ್ರಗಣ್ಯವಾಗಿದ್ದದ್ದು ಎಂದರೆ ಅಲಿಪುರ ಜೂವಾಲಾಜಿಕಲ್ ಗಾರ್ಡನ್ಸ್. ಪ್ರಾಣಿಸಂಗ್ರಹಾಲಯದ ಮೊದಲ ಸೂಪರಿಂಟೆಂಡೆಂಟ್ ಆಗಿದ್ದ ರಾಮ್ ಬ್ರಹ್ಮ ಸನ್ಯಾಲ್ (1858–1908) ಅವರಿಂದ ಪ್ರಾಣಿಗಳನ್ನು ಸೆರೆಹಿಡಿದು, ನಿಯಂತ್ರಿತ ಪರಿಸರದಲ್ಲಿ ಸಂತಾನೋತ್ಪತ್ತಿ ಮಾಡುವ (ಕ್ಯಾಪ್ಟಿವ್ ಬ್ರೀಡಿಂಗ್) ಪ್ರಕ್ರಿಯೆಯಲ್ಲಿ ಗಮನಾರ್ಹ ಕೆಲಸ ನಡೆಯಿತು.
-
ರಾಮ್ ಬ್ರಹ್ಮ ಸನ್ಯಾಲ್ (1858–1908)
ಸರೀಸೃಪಗಳು ಮತ್ತು ಉಭಯಚರಗಳು
ಬದಲಾಯಿಸಿಸರೀಸೃಪಗಳು ಮತ್ತು ಉಭಯಚರಗಳ ಅಧ್ಯಯನವು ಸಸ್ತನಿಗಳು ಮತ್ತು ಹಕ್ಕಿಗಳ ಅಧ್ಯಯನದಷ್ಟು ಪ್ರಗತಿಯಾಗಿರಲಿಲ್ಲ. ವಿಷಪೂರಿತ ಸರೀಸೃಪಗಳು ಮಾತ್ರ ಬ್ರಿಟಿಶ್ ಸೈನ್ಯ ಮತ್ತು ಅದರೊಂದಿಗೆ ಇದ್ದ ವೈದ್ಯರಿಗೆ ಆಸಕ್ತಿಯ ವಿಚಾರವಾಗಿತ್ತು. ಈ ವರ್ಗದ ಜೀವಿಗಳ ಕುರಿತ ಮತ್ತು ಅವುಗಳ ಹಂಚಿಕೆ ಕುರಿತು ಅಧ್ಯಯನದ ಮಹತ್ವದ ಕೊಡುಗೆ ಸಲ್ಲಿಸಿದವರು ಎಂದರೆ ಪ್ಯಾಟ್ರಿಕ್ ರಸ್ಸಲ್ (1726–1805). ಇವರನ್ನು ಭಾರತೀಯ ಸರ್ಪಶಸ್ತ್ರದ ತಂದೆ (ಫಾದರ್ ಆಫ್ ಇಂಡಿಯನ್ ಓಫಿಯಾಲಜಿ) ಎನ್ನಲಾಗುತ್ತದೆ. ಕರ್ನಲ್ ಆರ್. ಎಚ್. ಬೆಡ್ಡೊಮ್ (1830–1911), ಫ್ರಾಂಕ್ ವಾಲ್ (1868–1950), ಜೋಸೆಫ್ ಫೇರೆರ್ (1824–1907) ಮತ್ತು ಎಚ್. ಎಸ್. ಫರ್ಗ್ಯುಸನ್ (1852–1921).
-
ಪ್ಯಾಟ್ರಿಕ್ ರಸೆಲ್ (1726–1805)
-
ಫ್ರಾಂಕ್ ವಾಲ್ (1868–1950)
ಆಕಶೇರುಕಗಳು (ಇನ್‌ವರ್ಟಿಬ್ರೇಟ್)
ಬದಲಾಯಿಸಿಭಾರತದ ಕೀಟಗಳ ಅದ್ಯಯನವು ಆರಂಭದಲ್ಲಿ ಚಿಟ್ಟೆಗಳಿಗೆ ಮಾತ್ರವೇ ಸೀಮಿತವಾಗಿದ್ದಿತು, ಇದಕ್ಕೆ ಕಾರಣ ಎಂದರೆ ಇಂಗ್ಲೆಂಡ್‌ನಲ್ಲಿ ಆ ಕಾಲದಲ್ಲಿ ಚಿಟ್ಟೆಗಳನ್ನು ಸಂಗ್ರಹಿಸುವ ಹುಚ್ಚಿತ್ತು. ಹಲವಾರು ಸೇನಾಧಿಕಾರಿಗಳು ಮತ್ತು ನಾಗರಿಕಾ ಸೇವಾ ಅಧಿಕಾರಿಗಳು ಸಂಗ್ರಹವನ್ನು ಇಟ್ಟುಕೊಂಡಿದ್ದರು. ಉದಾಹರಣೆಗೆ ಸರ್ ವಿನ್ಸಟನ್ ಚರ್ಚಿಲ್ ಬೆಂಗಳೂರು ನಗರಕ್ಕೆ ನೀಡಿದ ಕಿರುಭೇಟಿಯಲ್ಲಿ 65 ಚಿಟ್ಟೆಗಳ ಪ್ರಭೇದಗಳನ್ನು ಸಂಗ್ರಹಿಸಿದ್ದರು. [೩೯] ಆದರೆ ಕ್ರಮೇಣ ಕೃಷಿಯ ಆರ್ಥಿಕ ಮಹತ್ವ ಅಧೀಕಗೊಳ್ಳತೊಡಗಿದಂತೆ ಕೀಟಶಾಸ್ತ್ರವು ಚಿಟ್ಟೆಗಳ ಸಂಗ್ರಹಣೆಯನ್ನೂ ಮೀರಿ ಬೆಳೆಯತೊಡಗಿತು. ಇಂಪಿರಿಯಲ್ ಎಂಟಮಾಲಜಿಸ್ಟ್ ಎಂಬ ಒಂದು ಹುದ್ದೆಯನ್ನು ಇಂಪಿರಿಯಲ್ ಅಗ್ರಿಕಲ್ಚರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ನಂತರ ಇದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಎಂದು ಹೆಸರಾಯಿತು)ನಲ್ಲಿ ಹುಟ್ಟುಹಾಕಲಾಯಿತು. ಮರೆಯಲಾರದ ಗುರುತನ್ನು ಉಳಿಸಿಹೋದ ಕೀಟಶಾಸ್ತ್ರಜ್ಞರಲ್ಲಿ ಕೆಲವರ ಹೆಸರುಗಳು ಹೀಗಿವೆ : ಮಿಲಿಯಂ ಸ್ಟೀಫನ್ ಅಟ್ಕಿನ್‌ಸನ್ (1820–1876), ಟಿ. ಆರ್. ಬೆಲ್ (1863–1948), ಇ. ಬ್ರುನೆಟ್ಟಿ (1862–1927), ಥಾಮಸ್ ಬೈನ್‌ಬ್ರಿಜ್ ಫ್ಲೆಚರ್ (1878–1950), ಸರ್ ಜಾರ್ಜ್ ಹ್ಯಾಂಪ್ಸನ್ (1860–1936), ಎಚ್. ಇ. ಆಂಡ್ರ್ಯೂಸ್ (1863–1950), ಜಿ.ಎಂ. ಹೆನ್ರಿ (1891–1983), ಕರ್ನಲ್ ಸಿ. ಟಿ. ಬಿಂಗ್‌ಹ್ಯಾಮ್ (1848–1908), ವಿಲಿಯಂ ಮೊನಡ್ ಕ್ರಾಫರ್ಡ್ (1872–1941), ಡಬ್ಲ್ಯು. ಎಚ್. ಇವಾನ್ಸ್ (1876–1956), ಮೈಕೆಲ್ ಲಾಯ್ಡ್ ಫೆರರ್ , ಎಫ್. ಸಿ. ಫ್ರೇಸರ್ (1880–1963), ಹೆರಾಲ್ಡ್ ಮ್ಯಾಕ್ಸ್‌ವೆಲ್ - ಲೆಫ್ಯಾಯ್ (1877–1925), ಫ್ರೆಡ್ರಿಕ್ ಮೂರೆ (1830–1907), ಸಮರೇಂದ್ರ ಮೌಲಿಕ್ (1881–1950), ಲಿಯೊನೆಲ್ ಡೆ ನಿಶೆವಿಲ್ಲೆ (1852–1901), ರೊನಾಲ್ಡ್ ಎ. ಸೀನಿಯರ್ ವೈಟ್ ( 1891–1954), ಎಡ್ವಿನ್ ಫೆಲಿಕ್ಸ್ ಥಾಮಸ್ ಅಟ್ಕಿನ್‌ಸನ್ (1840–1890) ಮತ್ತು ಚಾರ್ಲ್ಸ್ ಸ್ವಿನ್‌ಹೊ (1836–1923). ಅರಣ್ಯಗಳು ಪ್ರಮುಖವಾದ ಆರ್ಥಿಕ ಮೌಲ್ಯವುಳ್ಳದ್ದಾಗಿದ್ದರಿಂದ, ಅರಣ್ಯ ಕೀಟಶಾಸ್ತ್ರದಲ್ಲಿ ಆಸಕ್ತಿ ಹೆಚ್ಚುತ್ತಿತ್ತು. ಅರಣ್ಯ ಕೀಟಶಾಸ್ತ್ರವನ್ನು ಇ. ಪಿ. ಸ್ಟೆಬ್ಬಿಂಗ್ (1870–1960) ಆರಂಭಿಸಿದನು ಮತ್ತು ಈತನನ್ನು ಇನ್ನೂ ಅನೇಕರು ಹಿಂಬಾಲಿಸಿದರು. ಅವರಲ್ಲಿ ಎ.ಡಿ. ಇಮ್ಸ್ ಕೂಡ ಒಬ್ಬ, (1880–1949), ಈತ ತನ್ನ ಕೀಟಶಾಸ್ತ್ರದ ಪಠ್ಯಪುಸ್ತಕದಿಂದ ಹೆಚ್ಚು ಪ್ರಸಿದ್ಧಿ ಪಡೆದ. ಹೊಸ ಪರಿಷ್ಕರಣೆಗಳು ಆಗಿದ್ದರೂ, ಅದಿನ್ನೂ ಒಂದು ಉತ್ತಮ ಗುಣಮಟ್ಟದ ಉಲ್ಲೇಖಪಠ್ಯವಾಗಿ ಮುಂದುವರೆದಿದೆ. ಅರಣ್ಯ ಕೀಟಶಾಸ್ತ್ರದೊಂದಿಗೆ ಗುರುತಿಸಿಕೊಂಡಿದ್ದ ಇನ್ನಿತರ ಕೀಟಶಾಸ್ತ್ರಜ್ಞರಲ್ಲಿ ಸಿ.ಎಫ್.ಸಿ. ಬೀಸನ್ ಕೂಡ ಒಬ್ಬ. ಆಗ ಮಲೇರಿಯಾ ಬಹಳ ವ್ಯಾಪಕವಾಗಿದ್ದ ರೋಗವಾಗಿತ್ತು ಮತ್ತು ಸೊಳ್ಳೆಗಳ ಕುರಿತ ಅಧ್ಯಯನಕ್ಕೆ ವಿಶೇಷ ಮಹತ್ವ ದೊರೆಯಿತು. ರೊನಾಲ್ಡ್ ರಾಸ್ (1857–1932) ಸೊಳ್ಳೆಗಳಿಗೆ ಮತ್ತು ಮಲೇರಿಯಾಗೆ ಸಂಬಂಧವಿರುವುದನ್ನು ನಿರೂಪಿಸಿದನು. ಆತನ ಸಂಶೋಧನೆಗಳು ಬೆಂಗಳೂರು, ಉದಕಮಂಡಲ (ಊಟಕಮಂಡ್) ಮತ್ತು ಸಿಕಂದರಾಬಾದ್ ನಲ್ಲಿ ನಡೆದಿದ್ದವು. ಸರ್ ಎಸ್. ಆರ್. ಕ್ರಿಸ್ಟೋಫರ್ಸ್ (1873–1978) ಸೊಳ್ಳೆಗಳ ಅಧ್ಯಯನದಲ್ಲಿ ಅಗ್ರಗಣ್ಯನಾಗಿದ್ದನು ಮತ್ತು ಭಾರತದ ಮಲೇರಿಯಾ ಸಮೀಕ್ಷೆ (ಮಲೇರಿಯಾ ಸರ್ವೆ ಆಫ್ ಇಂಡಿಯಾ) ಹುಟ್ಟುಹಾಕುವಲ್ಲಿ ತೊಡಗಿಸಿಕೊಂಡಿದ್ದನು. ಜೆ.ಎ. ಸಿಂಟನ್ (1884–1956)ಸೇರಿದಂತೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಇನ್ನೂ ಬೇರೆಯವರು ಇದ್ದರು.[೪೦]
ಬಸವನಹುಳು (ಮೊಲಸ್ಕಸ್) ಕುರಿತು ಸಾಕಷ್ಟು ಆಸಕ್ತಿ ಇದ್ದಿತು. ಇದಕ್ಕೆ ಒಂದು ಕಾರಣ ಪ್ರಾಗ್ಜೀವಶಾಸ್ತ್ರದಲ್ಲಿ ಅವಕ್ಕಿದ್ದ ಮಹತ್ವ ಮತ್ತು ಇನ್ನೊಂದು ಕಾರಣವೆಂದರೆ ಅವು ಹಡಗುಗಳಿಗೆ ಉಂಟುಮಾಡುತ್ತಿದ್ದ ಆರ್ಥಿಕ ಹಾನಿ. ಬೈನಿ ಪ್ರಸಾದ್ರನ್ನೂ ಸೇರಿದಂತೆ ಹಲವಾರು ಬಸವನಹುಳುಶಾಸ್ತ್ರಜ್ಞರು ಈ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು.
ಮೀನುಗಳು
ಬದಲಾಯಿಸಿಭಾರತದಲ್ಲಿ ಮೀನುಗಳ ಅಧ್ಯಯನವು ಆರಂಭದಲ್ಲಿ ವಾಣಿಜ್ಯಕ ಮೌಲ್ಯಕ್ಕೆ ಮಾತ್ರವೇ ಸೀಮಿತವಾಗಿದ್ದಿತು. ಮೋಜಿನ ಮೀನುಗಾರಿಕೆ (ಸ್ಪೋರ್ಟ್ ಫಿಶಿಂಗ್) ಕೂಡ ಜನಪ್ರಿಯವಿತ್ತು, ಪ್ರಮುಖ ಪರ್ವತ ಪ್ರದೇಶಗಳಿಗೆ ಮಾತ್ರವೇ ಸೀಮಿತವಿತ್ತು. ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ನಿಯತಕಾಲಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಹಿಡಿದಿದ್ದು ಪ್ರಕಟವಾಗಿದ್ದು ಹೊರತುಪಡಿಸಿದರೆ ಸ್ಪೋರ್ಟ್ ಫಿಶಿಂಗ್ ಕುರಿತು ಹೆಚ್ಚೇನೂ ದಾಖಲಾಗಿಲ್ಲ. ಸರ್ ಫ್ರಾನ್ಸಿಸ್ ಡೇ (1829–1889), ಕ್ಯಾಪ್ಟನ್ ರಾಬರ್ಟ್ ಸೆಸಿಲ್ ಬೀವನ್ (1841–1870) ಮತ್ತು ಫ್ರಾನ್ಸಿಸ್ ಬುಕಾನನ್ - ಹ್ಯಾಮಿಲ್ಟನ್ (1762–1829) ಭಾರತದ ಮೀನುಗಳ ಕುರಿತು ಗಮನಾರ್ಹ ರೀತಿಯಲ್ಲಿ ಬರಹಗಳನ್ನು ಪ್ರಕಟಿಸಿದ್ದಾರೆ. ಹೆನ್ರಿ ಸುಲ್ಲಿವನ್ ಥಾಮಸ್ ತಮ್ಮ ಕೆಲವು ಗಮನಾರ್ಹ ಕೃತಿಗಳಲ್ಲಿ ಸ್ಪೋರ್ಟ್ ಫಿಶಿಂಗ್ ಕುರಿತು ಪ್ರಕಟಿಸಿದ್ದಾರೆ.
ಸಸ್ಯಗಳು ಮತ್ತು ಅರಣ್ಯಗಳು
ಬದಲಾಯಿಸಿಭಾರತದ ಅರಣ್ಯಗಳು ಬ್ರಿಟಿಶ್ ವಸಾಹತುಗಳಲ್ಲಿ ಅತ್ಯಂತ ಶ್ರೀಮಂತ ಸಂಪನ್ಮೂಲಗಳಲ್ಲಿ ಒಂದಾಗಿತ್ತು. ಅರಣ್ಯಗಳ ಮೌಲ್ಯವನ್ನು ಬಹಳ ಬೇಗನೆ ಅರಿತುಕೊಳ್ಳಲಾಗಿತ್ತು ಮತ್ತು ಅರಣ್ಯ ನಿರ್ವಹಣೆಯನ್ನು ಬೇಗನೆ ಉಪಖಂಡದಲ್ಲಿ ಪರಿಚಯಿಸಲಾಗಿತ್ತು. ನೀರು, ಹವಾಮಾನ ಮತ್ತು ಅರಣ್ಯದ ನಡುವಣ ಸಂಬಂಧಗಳನ್ನು ಮೊದಲೇ ಗಮನಿಸಲಾಗಿತ್ತು ಮತ್ತು 1840ರಲ್ಲಿಯೇ ಈಸ್ಟ್ ಇಂಡಿಯಾ ಕಂಪನಿಯಲ್ಲಿದ್ದ ಎಡ್ವರ್ಡ್ ಬಾಲ್ಫರ್ ಅವರಂತಹ ವೈದ್ಯರು ಅರಣ್ಯ ನಾಶದ ಕುರಿತು ಎಚ್ಚರಿಕೆಗಳನ್ನು ನೀಡಿದ್ದರು.[೪೧] ಇದು ಅರಣ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ದಾರಿಯಾಯಿತು. ಆದರೆ ತದನಂತರದಲ್ಲಿ ಅರಣ್ಯ ನಿರ್ವಹಣೆಯ ನೀತಿಗಳು ಮರಮಟ್ಟಿಗಾಗಿ ತೇಗದಂತಹ ವಾಣಿಜ್ಯಕ ಉತ್ಪನ್ನಗಳ ಉತ್ಪಾದನೆಯ ಗುರಿ ಹೊಂದಿದ್ದವು. ಸಂರಕ್ಷಕ ಹುದ್ದೆಯನ್ನು ಹುಟ್ಟುಹಾಕಲಾಯಿತು ಮತ್ತು ಈ ಪದವು ಕನ್ಸ್‌ರ್‌ವನ್ಸೀಸ್ ಎಂದು ಕರೆಯಲಾಗುತ್ತಿದ್ದ ಅವರು ನಿರ್ವಹಣೆ ಮಾಡುತ್ತಿದ್ದ ಅರಣ್ಯದ ತುಂಡುಭಾಗಗಳಿಗೆ ಮಾತ್ರವೇ ಸೀಮಿತವಿದ್ದಿತು. ಇದಕ್ಕೂ ಜೀವವೈವಿಧ್ಯತೆ ಸಂರಕ್ಷಣೆ ಗೂ ಏನೇನೂ ಸಂಬಂಧವಿರಲಿಲ್ಲ. ಇಂದಿಗೂ, ತೇಗದ ನೆಡುತೋಪುಗಳನ್ನು (ಟೀಕ್ ಪ್ಲಾಂಟೇಶನ್) ಒಳಗೊಂಡಿರುವ ಭಾರತದ ಅರಣ್ಯಗಳು ಜೀವವೈವಿಧ್ಯತೆಯಲ್ಲಿ ಕಳಪೆಯಾಗಿವೆ ಮತ್ತು ಆಗೀಗ ಕಾಡ್ಗಿಚ್ಚಿಗೆ ಬಲಿಯಾಗುತ್ತಿವೆ. ಭಾರತದ ಮೊದಲ ಫಾರೆಸ್ಟರ್‌ಗಳು ಜರ್ಮನಿಯಲ್ಲಿದ್ದ ಅರಣ್ಯ ನಿರ್ವಹಣೆಯಿಂದ ಬಹಳ ಪ್ರಭಾವಿತರಾಗಿದ್ದರು. ಭಾರತದಲ್ಲಿದ್ದ ಅನೇಕ ಅಧಿಕಾರಿಗಳನ್ನು ಅಧಿಕಾರಿಗಳನ್ನು ಜರ್ಮನಿಯ ಅರಣ್ಯ ಸಿದ್ಧಾಂತದಲ್ಲಿ (ಜರ್ಮನ್ ಸ್ಕೂಲ್ ಆಫ್ ಥಾಟ್) ತರಬೇತಿಗೊಳಿಸಲಾಗಿತ್ತು. ಉಷ್ಣವಲಯದ ಅರಣ್ಯಗಳ ತಂದೆ (ದಿ ಫಾದರ್ ಆಫ್ ಟ್ರಾಫಿಕಲ್ ಫಾರೆಸ್ಟ್ರಿ) ಎಂದೇ ಹೆಸರಾಗಿದ್ದ ಡೈಟ್ರಿಚ್ ಬ್ರಾಂಡಿಸ್ (1824–1907) ತರಬೇತಿ ನೀಡಿದ್ದರು.[೪೨] ಜೇಮ್ಸ್ ಸೈಕ್ಸ್ ಗ್ಯಾಂಬಲ್ /0} (1847–1925), ಅಲೆಕ್ಸಾಂಡರ್ ಗಿಬ್ಸನ್ ಮತ್ತು ಹ್ಯು ಫ್ರಾನ್ಸಿಸ್ ಕ್ಲೆಹ್ರಾನ್ ಸೇರಿದಂತೆ ಭಾರತೀಯ ಅರಣ್ಯ ಸೇವೆಯಲ್ಲಿದ್ದ ಹಲವಾರು ಅಧಿಕಾರಿಗಳು ಭಾರತದ ಸಸ್ಯಸಂಪತ್ತಿನ ಕುರಿತು ಹೆಚ್ಚುವರಿ ಮಾಹಿತಿ ಹೊಂದಿದ್ದರು. ಅನೇಕ ಹವ್ಯಾಸಿಗಳು ಕೂಡ ಬೇರೆ ನಾಗರಿಕ ಸೇವಾ ಅಧಿಕಾರಿಗಳ ಜೊತೆಗೂಡಿ ಕೆಲಸ ಮಾಡಿದರು. ಅವರಿಗೆ ಜೋಸೆಫ್ ಡಾಲ್ಟನ್ ಹೂಕರ್ (1817–1911), ಜಾನ್ ಗೆರಾಲ್ಡ್ ಕೊಯಿಂಗ್ (1728–1785), ರಾಬರ್ಟ್ ವೈಟ್ (1796–1872),[೪೩] ನಥನೀಲ್ ವ್ಯಾಲಿಚ್ (1786–1854) ಮತ್ತು ಫಾದರ್ ಆಫ್ ಇಂಡಿಯನ್ ಬಾಟನಿ ಎಂದು ಹೆಸರಾದ ವಿಲಿಯಂ ರಾಕ್ಸ್‌ಬರ್ಗ್ (1751–1815) ಇನ್ನಿತರ ವೃತ್ತಿಪರ ಸಸ್ಯಶಾಸ್ತ್ರಜ್ಞರ ಸಹಾಯವಿತ್ತು.[೪೪] ಭಾರತಕ್ಕೆ ಆರ್ಥಿಕ ಮಹತ್ವವಿದ್ದ ಗಿಡಗಳನ್ನು ಪರಿಚಯಿಸುವುದು ಮತ್ತೊಂದು ಆಸಕ್ತಿಯ ಕ್ಷೇತ್ರವಾಗಿತ್ತು. ಸಿಬ್‌ಪುರ್, ಪೂನ, ಮದ್ರಾಸ್ ಮತ್ತು ಸಹರಾನ್‌ಪುರ್ ನಗರಗಳಲ್ಲಿದ್ದ ಸಸ್ಯೋದ್ಯಾನಗಳಲ್ಲಿ ಹೀಗೆ ಅನೇಕ ಗಿಡಗಳನ್ನು ಪರಿಚಯಿಸಲು ಪ್ರಯತ್ನಿಸಲಾಯಿತು.[೪೫] ರಾಬರ್ಟ್ ಫಾರ್ಚ್ಯೂನ್ (1812–1880) ಮಾಡಿದ ಕೆಲಸಗಳ ಮೂಲಕ ಡಾರ್ಜಿಲಿಂಗ್ ಮತ್ತು ಶ್ರೀಲಂಕಾದಲ್ಲಿ ಟೀ ಪರಿಚಯಿಸಲಾಯಿತು. ಆನಂತರ ಟೀ ಮೇಲೆ ಇದ್ದ ಚೀನೀಯರ ಏಕಸ್ವಾಮ್ಯವು ಕೊನೆಗೊಂಡಿತು. ಕಲ್ಕತ್ತದಲ್ಲಿದ್ದ ಸಿಬ್‌ಪುರ್‌ನಲ್ಲಿದ್ದ ಸಸ್ಯೋದ್ಯಾನವನ್ನು 1787ರಲ್ಲಿ ಕರ್ನಲ್ ರಾಬರ್ಟ್ ಕಿಡ್(1746–1793) ಆರಂಭಿಸಿದನು. ಸರ್‌ಜಾರ್ಜ್ ಕಿಂಗ್ (1840–1904) 1871ರಿಂದ ಈ ಉದ್ಯಾನದ ಮೇಲುಸ್ತುವಾರಿ ವಹಿಸಿಕೊಂಡಿದ್ದು, ಆತ ಉದ್ಯಾನದಲ್ಲಿ ಹರ್ಬೇರಿಯಂ ಹುಟ್ಟುಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದನು. ಈತನೇ ಮುಂದೆ 1890ರಲ್ಲಿ ಬಟಾನಿಕಲ್ ಸರ್ವೇ ಆಫ್ ಇಂಡಿಯಾ ಸ್ಥಾಪಿಸಿದನು. ನಂತರದ ಸಸ್ಯಶಾಸ್ತ್ರಜ್ಞರಲ್ಲಿ ಪುರಾತನಸಸ್ಯಶಾಸ್ತ್ರಜ್ಞ ಬೀರಬಲ್ ಸಹಾನಿ(1891–1949)ಯವರೂ ಸೇರಿದ್ದರು.
ಭಾರತದ ಸಸ್ಯಶಾಸ್ತ್ರ ಮತ್ತು ಅರಣ್ಯಗಳೊಂದಿಗೆ ಸಂಬಂಧಿಸಿದ ಇನ್ನಿತರ ಪ್ರಸಿದ್ಧರ ಹೆಸರುಗಳು ಹೀಗಿವೆ ; ವಿಲಿಯಂ ಕ್ಯಾರೆ (1761–1834), ಸರ್ ಹೆನ್ರಿ ಕೊಲ್ಲೆಟ್ (1836–1901), ಎಥೆಲ್‌ಬರ್ಟ್ ಬ್ಲಟ್ಟರ್ (1877—1934), ಟಿ. ಎಫ್. ಬೌರ್ಡಿಲ್ಲನ್ , ಸರ್ ಹ್ಯಾರಿ ಚಾಂಪಿಯನ್ ಮತ್ತು ಅವರ ಸಹೋದರ ಎಫ್. ಡಬ್ಲ್ಯು. ಚಾಂಪಿಯನ್ (1893–1970), ಎ.ಎ. ಡನ್‌ಬರ್-ಬ್ರಾಂಡರ್ (ಕೇಂದ್ರ ಪ್ರಾಂತ್ಯಗಳಲ್ಲಿ ಅರಣ್ಯಗಳ ಸಂರಕ್ಷಕ), ಸರ್ ವಾಲ್ಟರ್ ಎಲಿಯಟ್ (1803–1887), ಹೆನ್ರಿ ಥಾಮಸ್ ಕೊಲ್‌ಬ್ರೂಕ್ (1765–1837), ಚಾರ್ಲ್ಸ್ ಮೆಕ್ಕನ್ (1899–1980), ಹ್ಯು ಫಾಲ್ಕನರ್ ( 1808–1865), ಫಿಲಿಪ್ ಫರ್ಲೆ ಫಿಸನ್ (1877–1947), ಲೆಫ್ಟಿನೆಂಟ್ ಕರ್ನಲ್ ಹೆಬರ್ ಡ್ರುರಿ , ವಿಲಿಯಂ ಗ್ರಿಫಿತ್ (1810–1845), ಸರ್ ಡೇವಿಡ್ ಪ್ರೈನ್ (1857–1944), ಜೆ.ಎಫ್. ಡ್ಯುಥೀ ಪಿ. ಡಿ. ಸ್ಟ್ರಾಸೆ , ರಿಚರ್ಡ್ ಸ್ಟ್ರಾಸೆ (1817–1908), ಥಾಮಸ್ ಥಾಮ್ಸನ್ (1817–1878), ಜೆ.ಇ. ವಿಂಟರ್‌ಬಾಟಮ್ , ಡಬ್ಲ್ಯು.ಮೂರ್‌ಕ್ರಾಫ್ಟ್ ಮತ್ತು ಜೆ.ಎಫ್. ರಾಯ್ಲ್ (1799–1858). ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿಯೊಂದಿಗೆ ಸಂಬಂಧ ಹೊಂದಿದ್ದ ಪೃಕೃತಿಶಾಸ್ತ್ರಜ್ಞರಲ್ಲಿ ಡಬ್ಲ್ಯು.ಎಸ್. ಮಿಲ್ಲರ್ಡ್ (1864–1952) ಕೂಡ ಒಬ್ಬರು. ಇವರು ತಮ್ಮ ಸಮ್ ಬ್ಯೂಟಿಫುಲ್ ಇಂಡಿಯನ್ ಟ್ರೀಸ್ (ಎಥಲ್‌ಬರ್ಟ್ ಬ್ಲಟ್ಟರ್ ಸಹಲೇಖಕ)ಇನ್ನಿತರ ಪುಸ್ತಕಗಳ ಮೂಲಕ ಮರಗಳ ಕುರಿತ ಅಧ್ಯಯನವನ್ನು ಜನಪ್ರಿಯಗೊಳಿಸಲು ಸಹಾಯ ಮಾಡಿದರು. ಅಲೆಕ್ಸಾಂಡರ್ ಕಿಡ್ ನರೀನ್ ತಮ್ಮಫ್ಲವರಿಂಗ್ ಪ್ಲಾಂಟ್ಸ್ ಆಫ್ ವೆಸ್ಟರ್ನ ಇಂಡಿಯಾ (1894) ಕೃತಿಯ ಮೂಲಕ, ಹೀಗೆಯೇ ಇನ್ನಿತರರ ನಾಗರಿಕ ಸೇವೆ ಅಧಿಕಾರಿಗಳಿಂದ ಇಂತಹುದೇ ಪ್ರಯತ್ನಗಳು ನಡೆದವು.
ಆ ಕಾಲಘಟ್ಟದಲ್ಲಿ ಹಲವಾರು ಹರ್ಬೇರಿಯಾ (ಒಣಸಸ್ಯ ಸಂಗ್ರಹ)ಗಳನ್ನು ಸ್ಥಾಪಿಸಲಾಯಿತು. ಇವುಗಳಲ್ಲಿ ಅತಿದೊಡ್ಡದು ಮತ್ತು ಇನ್ನೂ ಉಳಿದಿರುವುದು ಎಂದರೆ ಬ್ಲಟ್ಟರ್ ಹಬೇರಿಯಂ.
-
ಸರ್ ವಾಲ್ಟರ್ ಎಲ್ಲಿಯಟ್ (1803–1887)
-
ಚಾರ್ಲ್ಸ್ ಮೆಕ್ಕನ್ (1899–1980)
-
ರಾಬರ್ಟ್ ವೈಟ್ (1796–1872)
-
ವಿಲಿಯಂ ರಾಕ್ಸ್‌ಬರ್ಗ್ (1751–1815)
ಬೇಟೆಗಾರ -ಪೃಕೃತಿಶಾಸ್ತ್ರಜ್ಞರು
ಬದಲಾಯಿಸಿವಸಾಹತುಶಾಹಿ ಭಾರತದಲ್ಲಿ ಬೇಟೆ ಒಂದು ಜೀವನವಿಧಾನವಾಗಿತ್ತು. ಬೇರೆ ಬೇರೆ ರಂಗಗಳ ಜನರು ತಮ್ಮ ಬೇಟೆಗಳ ಕುರಿತು ಮತ್ತು ಕಾಡಿನಲ್ಲಿ ತಾವು ಗಮನಿಸಿದ್ದರ ಕುರಿತು ಬರೆದಿದ್ದಾರೆ. ಅವರಲ್ಲಿ ಅನೇಕ ಪ್ರತಿಭಾನ್ವಿತ ಬರಹಗಾರರು ವಿವಿಧ ಕೃತಿಗಳಲ್ಲಿ ತಮ್ಮ ಬೇಟೆಯ ಕುರಿತ ಪಾಂಡಿತ್ಯವನ್ನು ನಿರೂಪಿಸಿದ್ದಾರೆ. ಇವರೆಂದರೆ : ದಕ್ಷಿಣ ಭಾರತದಲ್ಲಿ ಕೆನ್ನೆತ್ ಆಂಡರ್‌ಸನ್ (1910–1974) ಮತ್ತು ಡೌಗ್ಲಾಸ್ ಹ್ಯಾಮಿಲ್ಟನ್ (1818–1892), ಹಿಮಾಲಯಗಳಲ್ಲಿ ಎಫ್.ಎಂ. ಬೈಲೆ (1882–1967) ಮತ್ತು ಮೇಜರ್ ಆರ್. ಡಬ್ಲ್ಯು. ಜಿ. ಹಿಂಗ್‌ಸ್ಟನ್ (1887–1966), ಹಿಮಾಲಯದ ತಪ್ಪಲಿನಲ್ಲಿ ಜಿಮ್ ಕಾರ್ಬೆಟ್ (1875–1955), ಬಿಳಿಗಿರಿರಂಗನ ಬೆಟ್ಟದಲ್ಲಿ ಆರ್.ಸಿ. ಮೊರಿಸ್ (1894–1977) ಮತ್ತು ಮಧ್ಯ ಭಾರತದಲ್ಲಿ ಜಾರ್ಜ್ ಪಿ. ಸ್ಯಾಂಡರ್‌ಸನ್ . ಕರ್ನಲ್ ಆರ್.ಸಿ. ಮೋರಿಸ್ ಅವರೊಂದಿಗೆ ಸೇರಿ ಲೆಫ್ಟಿನೆಂಟ್ ಕರ್ನಲ್ ಆರ್. ಡಬ್ಲ್ಯು. ಬರ್ಟನ್ ನಂತರದಲ್ಲಿ ಸಂರಕ್ಷಣೆಯಲ್ಲಿ ತೊಡಗಿಕೊಂಡರು ಮತ್ತು ಭಾರತೀಯ ವನ್ಯಜೀವಿಗಳ ಮಂಡಳಿಯ ಆರಂಭಿಕ ಚರ್ಚೆಗಳಲ್ಲಿ ಭಾಗವಹಿಸಿದರು. ರಿಚರ್ಡ್ ಮೈನರ್ಟಜ್‌ಹಗೆನ್ (1878–1967)ಅವರಂತೆ ಅಪಾರವಾಗಿ ಪ್ರಯಾಣ ಮಾಡಿದ ಬೇಟೆಗಾರರು ಇದ್ದಾರೆ. ಅವರು ಪಕ್ಷಿಶಾಸ್ತ್ರವೂ ಸೇರಿದಂತೆ ಬೇರೆ ಕ್ಷೇತ್ರಗಳಿಗೂ ಕೊಡುಗೆ ನೀಡಿದ್ದಾರೆ. ಬಿಎನ್‌ಎಚ್‌ಎಸ್ ಜರ್ನಲ್‌ಗೆ ಅನೇಕ ಬೇಟೆಗಾರರು ಬರೆದಿದ್ದಾರೆ ಮತ್ತು ಅವರ ಎಲ್ಲ ವೀಕ್ಷಣೆಗಳೂ ನಿಖರ ಎನ್ನಲಾಗದು.
ಪ್ರವಾಸೀ ಪೃಕೃತಿಶಾಸ್ತ್ರಜ್ಞರು ಮತ್ತು ಸಂಗ್ರಹಕಾರರು
ಬದಲಾಯಿಸಿಭಾರತವು ಈ ಪ್ರದೇಶದ ಅನೇಕ ಶೋಧಕರಿಗೆ ಮತ್ತು ಪ್ರವಾಸಿಗರಿಗೆ ಅವರ ಮಾರ್ಗಮಧ್ಯದಲ್ಲಿ ಸಿಗುತ್ತಿತ್ತು. ಹೀಗಾಗಿ ವಿವಿಧ ದೇಶಗಳ ಅನೇಕ ಸಂಗ್ರಾಹಕರು ಭಾರತದ ಮೂಲಕ ಪ್ರಯಾಣ ಮಾಡಿದ್ದಾರೆ. ಪೃಕೃತಿಶಾಸ್ತ್ರಜ್ಞರಾದ ಈ ಕೆಲವರು ಅವರಲ್ಲಿ ಪ್ರಮುಖರು : ಜೇನ್ ಡೆ ತೆವನಾಟ್ (1633–1667), ಪಿಯರೆ ಸೊನ್ನರಟ್ (1748–1814), ಜೇಣ್ ಬ್ಯಾಪ್ಟೈಸ್ ಲೆಶೆನಾಲ್ಟ್ ಡೆ ಲ ಟೂರ್ (1773–1826), ಆಲ್ಫ್ರೆಡ್ ಡ್ಯುವಸೆಲ್ (1793–1825), ವಿಲಿಯಂ ಡೊಹೆರ್ಟಿ (1857–1901) ಮತ್ತು ಫ್ರಾಂಕ್ ಕಿಂಗ್‌ಡನ್ ವಾರ್ಡ್ (1885–1958).
ಜನಪ್ರಿಯಗೊಳಿಸಿದವರು
ಬದಲಾಯಿಸಿಕೆಲವೇ ಕೆಲವರು ಪೃಕೃತಿಶಾಸ್ತ್ರಜ್ಞರು ನಿಜಕ್ಕೂ ಉತ್ತಮ ಬರಹಗಾರರಾಗಿದ್ದರು ಮತ್ತು ಅವರು ನೈಸರ್ಗಿಕ ಇತಿಹಾಸದ ಅಧ್ಯಯನವನ್ನು ಅತ್ಯಂತ ಜನಪ್ರಿಯಗೊಳಿಸಿದರು. ಈ ಬರಹಗಾರರಲ್ಲಿ ಅಗ್ರಗಣ್ಯರಾಗಿದ್ದವರು ಎಂದರೆ ಎಡ್ವರ್ಡ್ ಹ್ಯಾಮಿಲ್ಟನ್ ಏಟ್ಕೆನ್ (1851–1909), ಇವರು ಎಹಾ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಕಾದಂಬರಿಕಾರ ರುಡ್ಯಾರ್ಡ್ ಕಿಪ್ಲಿಂಗ್ (1865–1936) ಕೂಡ ದಿ ಜಂಗಲ್ ಬುಕ್ ಇನ್ನಿತರ ಮನಸೂರೆಗೊಳ್ಳುವ ಕೃತಿಗಳನ್ನು ರಚಿಸಿದ್ದಾರೆ. ಎಚ್.ಎಂ. ಫಿಪ್ಸನ್ (1850–1936) ಬಿಎನ್‌ಎಚ್‌ಎಸ್ ಮತ್ತು ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಆಫ್ ವೆಸ್ಟರ್ನ್ ಇಂಡಿಯಾ ದಂತಹ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲು ಸಹಾಯ ಮಾಡಿದರು.
-
ಎಡ್ವರ್ಡ್ ಹ್ಯಾಮಿಲ್ಟನ್ ಐಟ್ಕೆನ್ (1851–1909)
-
ಹರ್ಬರ್ಟ್ ಮಸ್ಗ್ರವ್ ಫಿಪ್ಸನ್ (1850–1936)
ವಸ್ತುಸಂಗ್ರಹಾಲಯದ ಕೆಲಸಗಾರರು
ಬದಲಾಯಿಸಿಕಲ್ಕತ್ತದಲ್ಲಿ ಏಷಿಯಾಟಿಕ್ ಸೊಸೈಟಿಯೂ ಸೇರಿದಂತೆ ಹಲವಾರು ವಸ್ತುಸಂಗ್ರಹಾಲಯಗಳನ್ನು ಭಾರತದಲ್ಲಿ ಆರಂಭಿಸಲಾಯಿತು. ಲಂಡನ್ನಿನಲ್ಲಿರುವ ಬ್ರಿಟಿಶ್ ಮ್ಯೂಸಿಯಂನಲ್ಲಿ ಕೆಲಸ ಮಾಡಿದ ಅನೇಕರು ಭಾರತದಲ್ಲಿ ಸಂಗ್ರಹಿಸಿದ ಮಾದರಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ತಮ್ಮ ಪ್ರಕಟಣೆಗಳ ಮೂಲಕ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಎಡ್ವರ್ಡ್ ಬ್ಲೈತ್ (1810–1873) ಮತ್ತು ನೆಲ್ಸನ್ ಅನ್ನಂಡೇಲ್ (1876–1924) ಏಷಿಯಾಟಿಕ್ ಸೊಸೈಟಿಯ ಹೊರಗಿದ್ದುಕೊಂಡೇ ಮಹತ್ವದ ಕೊಡುಗೆ ನೀಡಿದ್ದಾರೆ. ಸರ್ ನಾರ್ಮನ್ ಬಾಯ್ಡ್ ಕಿನ್ನಿಯರ್ (1882–1957) ಬಿಎನ್‌ಎಚ್‌ಎಸ್‌ನಲ್ಲಿ ಕೆಲಸ ಮಾಡುತ್ತ, ಉತ್ತಮ ಕೊಡುಗೆ ನೀಡಿದ್ದಾರೆ. ವಸ್ತುಸಂಗ್ರಹಾಲಯದ ಕ್ಯೂರೇಟರ್ ಕೆಲಸ ಮಾಡಿದ ಇನ್ನಿತರ ಗಮನಾರ್ಹ ವ್ಯಕ್ತಿಗಳು ಎಂದರೆ : ಅಲ್ಫ್ರೆಡ್ ವಿಲಿಯಂ ಅಲ್ಕಾಕ್ (1859–1933), ಜಾನ್ ಆಂಡರ್‌ಸನ್ (1833–1900), ಜಾರ್ಜ್ ಆಲ್ಬರ್ಟ್ ಬೌಲೆಂಗರ್ (1858–1937), ಡಬ್ಲ್ಯು. ಎಲ್. ಡಿಸ್ಟಂಟ್ (1845–1922), ಫ್ರೆಡ್ರಿಕ್ ಹೆನ್ರಿ ಗ್ರಾವೆಲಿ (1885–?), (ಜಾನ್ ಗೌಲ್ಡ್ (1804–1881), ಆಲ್ಬರ್ಟ್ ಸಿ.ಎಲ್.ಜಿ. ಗುಂತರ್ (1830–1914), ಫ್ರಾಂಕ್ ಫಿನ್ (1868–1932), ಚಾರ್ಲ್ಸ್ ಮೆಕ್‌ಫರ್ಲೇನ್ ಇಂಗಿಸ್ (1870–1954), ಸ್ಟ್ಯಾನ್ಲಿ ವೆಲ್ಸ್ ಕೆಂಪ್ (1882–1945), ಜೇಮ್ಸ್ ವುಡ್-ಮೆಸನ್ (1846–1893), ರೆಗಿನಾಲ್ಡ್ ಪೊಕೊಕ್ (1863–1947), ರಿಚರ್ಡ್ ಬೌಲ್ಡರ್ ಶಾರ್ಪ್ (1847–1909), ಮಾಲ್ಕಮ್ ಎ ಸ್ಮಿತ್ (1875–1958) ಮತ್ತು ನಥನೀಲ್ ವ್ಯಾಲಿಚ್ (1786–1854).
-
ನೆಲ್ಸನ್ ಅನ್ನಂಡೇಲ್ (1876–1924)
-
ಎಡ್ವರ್ಡ್ ಬ್ಲಿತ್ (1810–1873)
-
ಜಾನ್ ಆಂಡರ್‌ಸನ್ (1833–1900)
-
ಜಾರ್ಜ್ ಅಲ್ಬರ್ಟ್ ಬೌಲೆಂಗರ್ (1858–1937)
ಸ್ವಾತಂತ್ರ್ಯೋತ್ತರ (1947–1970)
ಬದಲಾಯಿಸಿಪಕ್ಷಿಶಾಸ್ತ್ರಜ್ಞರು
ಬದಲಾಯಿಸಿಸ್ವಾತಂತ್ರ್ಯೋತ್ತರ ಪಕ್ಷಿಶಾಸ್ತ್ರದಲ್ಲಿ ಅತ್ಯಂತ ಪ್ರಮುಖರು ಎಂದರೆ ಸಲೀಂ ಅಲಿ ಮತ್ತು ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿಯೊಂದಿಗೆ ಕೆಲಸ ಮಾಡಿದ ಅವರ ಸಹೋದರಬಂಧು ಹುಮಾಯುನ್ ಅಬ್ದುಲ್‌ಅಲಿ. ಸಲೀಂ ಅಲಿಯವರು ಅಮೆರಿಕನ್ ಸಹಭಾಗೀದಾರರಾದ ಸಿಡ್ನಿ ಡಿಲನ್ ರಿಪ್ಲೆ ಮತ್ತು ವಾಲ್ಟರ್ ನಾರ್ಮನ್ ಕೋಲ್ಜ್ ರೊಂದಿಗೆ ಕೆಲಸ ಮಾಡಿದ್ದು, ಇಂದಿಗೂ ಭಾರತದ ಪಕ್ಷಿಶಾಸ್ತ್ರದ ಅತ್ಯಂತ ಸಮಗ್ರವಾಗಿರುವ ಕೈಪಿಡಿಗಳಾಗಿವೆ. ಇನ್ನೊಂದು ಮಹತ್ವದ ಕೊಡುಗೆ ಎಂದರೆ ಕ್ಷೇತ್ರ ಪಕ್ಷಿಶಾಸ್ತ್ರವನ್ನು ಪರಿಚಯಿಸಿದ್ದು ಮತ್ತು ಇದರಲ್ಲಿ ಅಗ್ರಗಣ್ಯರು ಎಂದರೆ ಹೊರೇಸ್ ಅಲೆಕ್ಸಾಂಡರ್. ಜೂವಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸ್ವಂತ ಸಂಗ್ರಹ ಸಮೀಕ್ಷೆಗಳನ್ನು ಆಯೋಜಿಸಿತ್ತು ಮತ್ತು ಬಿಸ್ವಮೊಯ್ ಬಿಸ್ವಾಸ್ ಇವುಗಳ ನೇತೃತ್ವ ವಹಿಸಿದ್ದರು. ಈಸ್ಟರ್ನ್ ಇಂಡಿಯಾ ಮತ್ತು ಬರ್ಮಾದಲ್ಲಿ ಬರ್ಟ್ರಾಮ್ ಇ ಸ್ಮಿತಿಸ್ ರಂತಹ ಪಕ್ಷಿಶಾಸ್ತ್ರಜ್ಞರಿದ್ದರು.[೪೬]
ಕೀಟಶಾಸ್ತ್ರಜ್ಞರು
ಬದಲಾಯಿಸಿಕೀಟಶಾಸ್ತ್ರದ ಪರಂಪರೆಯು ವಸಾಹತುಶಾಹಿ ಕಾಲಘಟ್ಟದಲ್ಲಿ ಆಂಭಗೊಂಡಿತು. ನಂತರ ಹಲವಾರು ಕೀಟಶಾಸ್ತ್ರಜ್ಞರು ಆರ್ಥಿಕವಾಗಿ ಮುಖ್ಯವಾಗಿರುವ ಕೀಟಗಳ ಕುರಿತು (ಹೆಚ್ಚಾಗಿ ಬೆಳೆನಾಶ ಮಾಡುವ ಕ್ರಿಮಿಕೀಟಗಳ ಕುರಿತು) ತಜ್ಞತೆ ಪಡೆಯಲಾರಂಭಿಸಿದರು. ಈ ಕಾಲಘಟ್ಟದ ಗಮನಾರ್ಹ ಕೀಟಶಾಸ್ತ್ರಜ್ಞರು ಎಂದರೆ ಎಂ.ಎಸ್. ಮಣಿ ಮತ್ತು ಬಿ.ಕೆ. ಟಿಕಡರ್. ಬಿ.ಕೆ. ಟಿಕಡರ್ ಅವರು ಭಾರತೀಯ ಜೇಡಶಾಸ್ತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಮತ್ಸ್ಯಶಾಸ್ತ್ರಜ್ಞರು
ಬದಲಾಯಿಸಿಭಾರತದ ಅಗ್ರಗಣ್ಯ ಮತ್ಸ್ಯಶಾಸ್ತ್ರಜ್ಞರಲ್ಲಿ ಒಬ್ಬರು ಎಂದರೆ ಸುಂದರ್‌ಲಾಲ್ ಹೋರಾ. ಅವರು ತಮ್ಮ ಸತ್ಪುರ ಸಿದ್ಧಾಂತ ಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಈ ಸಿದ್ಧಾಂತವು ಬೆಟ್ಟದ ಝರಿಗಳ ಮೀನುಗಳ ಮಾರ್ಪಾಡುವಿಕೆಯ ಕುರಿತು ಅವರು ಗಮನಿಸಿದ ಅಂಶಗಳನ್ನು ಆಧರಿಸಿದೆ. ಇನ್ನಿತರ ಪ್ರಮುಖ ಮತ್ಸ್ಯಶಾಸ್ತ್ರಜ್ಞರಲ್ಲಿ ಸಿ.ವಿ. ಕುಲಕರ್ಣಿ ಮತ್ತು ಎಸ್.ಬಿ.ಸೆತ್ನಾ ಸೇರಿದ್ದಾರೆ.
ಸರೀಸೃಪಶಾಸ್ತ್ರಜ್ಞರು
ಬದಲಾಯಿಸಿಸಿ. ಆರ್. ನಾರಾಯಣ್ ರಾವ್ ದಕ್ಷಿಣ ಭಾರತದ ಕಪ್ಪೆಗಳ ಕುರಿತು ಕೆಲಸ ಮಾಡಿದ್ದಾರೆ. ರೊಮುಲಸ್ ವ್ಹಿಟೇಕರ್ ಮತ್ತು ಜೆ.ಸಿ. ಡೇನಿಯಲ್ ಭಾರತದ ಸರೀಸೃಪ ಪ್ರಾಣಿಗಳ ವಿವಿಧ ಅಂಶಗಳನ್ನು ಅಧ್ಯಯನ ಮಾಡಿದ್ದಾರೆ.
ಬೇರೆ ಶಿಸ್ತುಗಳ ವಿಜ್ಞಾನಿಗಳು
ಬದಲಾಯಿಸಿಬೇರೆ ಬೇರೆ ಕ್ಷೇತ್ರಗಳ ಅಸಂಖ್ಯಾತ ವಿಜ್ಞಾನಿಗಳು ಭಾರತದ ಸಸ್ಯಗಳು ಮತ್ತು ಪ್ರಾಣಿಗಳ ಅಧ್ಯಯನಕ್ಕೆ ಕೊಡುಗೆ ನೀಡಿದ್ದಾರೆ. ಇವರಲ್ಲಿ ಕೆಲವರು ಅಂತರ-ಶಿಸ್ತೀಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಇವರಲ್ಲಿ ಅತ್ಯಂತ ಪ್ರಮುಖರು ಎಂದರೆ ಬ್ರಿಟಿಶ್ ವಿಜ್ಞಾನಿಜೆ.ಬಿ.ಎಸ್. ಹಲ್ಡೇನ್. ಅವರು ಭಾರತದಲ್ಲಿ ಕ್ಷೇತ್ರ ಸಸ್ಯಶಾಸ್ತ್ರವು ಉಪಯುಕ್ತ, ಜೊತೆಗೆ ವಿಜ್ಞಾನದ ಬೇರೆ ಶಾಖೆಗಳಿಗಿಂತ ಅದು ಕಡಿಮೆ ಖರ್ಚಿನದು ಎಂಬ ದೃಷ್ಟಿಯಿಂದಲೂ ಪ್ರೋತ್ಸಾಹಿಸಿದರು. ಭಾರತದಲ್ಲಿ ಸಸ್ಯಶಾಸ್ತ್ರದ ಪರಿಮಾಣಾತ್ಮಕ ದೃಷ್ಟಿಕೋನವನ್ನು (ಕ್ವಾಂಟಿಟೇಟಿವ್ ಅಪ್ರೋಚ್)ಜನಪ್ರಿಯಗೊಳಿಸಿದವರಲ್ಲಿ ಅವರು ಮೊದಲಿಗರು.
ಜನಪ್ರಿಯಗೊಳಿಸಿದವರು
ಬದಲಾಯಿಸಿಭಾರತದಲ್ಲಿ ನೈಸರ್ಗಿಕ ಇತಿಹಾಸವನ್ನು ಸಮೂಹ ಮಾಧ್ಯಮದ ಪ್ರಕಟಣೆಗಳ ಮೂಲಕ ಜನಪ್ರಿಯಗೊಳಿಸಲಾಗಿದೆ. ದಕ್ಷಿಣ ಭಾರತದಲ್ಲಿ ಎಂ. ಕೃಷ್ಣನ್ ಕಪ್ಪು-ಬಿಳುಪು ವನ್ಯಜೀವಿ ಛಾಯಾಗ್ರಾಹಕರಲ್ಲಿ ಅಗ್ರಗಣ್ಯರು. ಕಲಾವಿದರೂ ಆಗಿದ್ದ ಅವರು ನೈಸರ್ಗಿಕ ಇತಿಹಾಸದ ಅನೇಕ ವಿಷಯಗಳ ಕುರಿತು ಇಂಗ್ಲಿಶ್ ಮತ್ತು ತಮಿಳಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಲೇಖನಗಳಲ್ಲಿ ಅವರದೇ ಛಾಯಾಚಿತ್ರಗಳು ಮತ್ತು ರೇಖಾಚಿತ್ರಗಳೂ ಇರುತ್ತಿದ್ದವು. ಅವರಿಗಿಂತ ಮೊದಲು ಎಹಾ ಬರೆಯುತ್ತಿದ್ದ ಹಾಗೆ ಸ್ವಲ್ಪ ಹಾಸ್ಯಮಯ ಶೈಲಿಯಲ್ಲಿ ಬರೆದಿದ್ದಾರೆ. ಪ್ರೊಫೆಸರ್ ಕೆ. ಕೆ. ನೀಲಕಂಠನ್ ಕೇರಳದಲ್ಲಿ ಮಲೆಯಾಳದಲ್ಲಿ ಪುಸ್ತಕಗಳು ಮತ್ತು ಲೇಖನಗಳನ್ನು ಬರೆದು ಹಕ್ಕಿಗಳ ಅಧ್ಯಯನವನ್ನು ಜನಪ್ರಿಯಗೊಳಿಸಿದ ಇನ್ನೊಬ್ಬ ಲೇಖಕರು. ಹ್ಯಾರಿ ಮಿಲ್ಲರ್ ಹಾಗೆ ಇನ್ನೂ ಕೆಲವರು ಸ್ಥಳೀಯ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಇನ್ನು ಕೆಲವರು ರಸ್ಕಿನ್ ಬಾಂಡ್ ಹಾಗೆ ಕಾಡಿನ ಗಮ್ಯತೆ, ಬೆಟ್ಟಗುಡ್ಡಗಳು ಮತ್ತು ವನ್ಯಜೀವಿಗಳ ಕುರಿತು ರಮ್ಯ ಶೈಲಿಯಲ್ಲಿ ಬರೆದಿದ್ದಾರೆ.
ಜಫಾರ್ ಫ್ಯುಟ್‌ಹ್ಯಾಲಿ ಮೊಟ್ಟಮೊದಲ ಪಕ್ಷಿವೀಕ್ಷಕರ ಸುದ್ದಿಪತ್ರಿಕೆಯನ್ನು 1950ರಲ್ಲಿ ಆರಂಭಿಸಿದರು. ಇದು ಭಾರತದೆಲ್ಲೆಡೆ ಪಕ್ಷಿವೀಕ್ಷಕರ ಸಮುದಾಯ ಹರಡಲು ಸಹಾಯ ಮಾಡಿತು. ಈ ಪತ್ರಿಕೆಯಲ್ಲಿ ಹೊರೇಸ್ ಅಲೆಕ್ಸಾಂಡರ್ ಕೂಡ ಬರೆದಿದ್ದಾರೆ.[೪೭]
Now, twenty-five years after independence, the delightful Bulletin for Birdwatchers, produced each month by Zafar Futehally is mainly written by Indian ornithologists: and the western names that appear among its contributors are not all British.
ನೈಸರ್ಗಿಕ ಇತಿಹಾಸವನ್ನು ಜನಪ್ರಿಯಗೊಳಿಸುವಲ್ಲಿ ವನ್ಯಜೀವಿ ಛಾಯಾಗ್ರಹಣ ಕೂಡ ಬಹಳ ಸಹಾಯ ಮಾಡಿದೆ. ಅನೇಕ ಜನ ಛಾಯಾಗ್ರಾಹಕರು ಇದಕ್ಕೆ ಕೊಡುಗೆ ನೀಡಿದ್ದಾರೆ. ಅವರಲ್ಲಿ ಪ್ರಮುಖರಾದವರು ಎಂದರೆ ಲೊಕೆ ವಾನ್ ತೊ, ಇ. ಹನುಮಂತ ರಾವ್ , ಎಂ. ಕೃಷ್ಣನ್ ಮತ್ತು ಟಿ. ಎನ್.ಎ. ಪೆರುಮಾಳ್ . ಅವರು ಆರಂಭದ ಅಗ್ರಗಣ್ಯ ಛಾಯಾಗ್ರಾಹಕರಾದ ಇ. ಎಚ್. ಎನ್. ಲೋಥರ್ , ಒ. ಸಿ. ಎಡ್ವರ್ಡ್ಸ್ ಮತ್ತು ಎಫ್. ಡಬ್ಲ್ಯು. ಚಾಂಪಿಯನ್ ಇನ್ನಿತರರ ಹೆಜ್ಜೆಯಲ್ಲಿಯೇ ಸಾಗಿದರು.[೪೮]
ಸಂರಕ್ಷಣಾಕಾರರು
ಬದಲಾಯಿಸಿಸ್ವಾತಂತ್ರ್ಯೋತ್ತರ ಕಾಲದಲ್ಲಿ ಅಳಿದುಳಿದ ವನ್ಯಜೀವಿಗಳನ್ನು ರಕ್ಷಿಸುವ ತುರ್ತು ಅಗತ್ಯವನ್ನು ಆ ಕಾಲದ ರಾಜಕಾರಣಿಗಳು ಮನಗಂಡರು. ಇ.ಪಿ. ಗೀ(1904–1968) ಅವರೂ ಸೇರಿದಂತೆ ಹಲವಾರು ಪ್ರಸಿದ್ಧ ಸಂರಕ್ಷಣಕಾರರು ಭಾರತೀಯ ವನ್ಯಜೀವಿ ಮಂಡಳಿಯಲ್ಲಿ ಕೆಲಸಮಾಡಿದ್ದಾರೆ. ನಂತರದ ವರ್ಷಗಳಲ್ಲಿ, ಅಸಂಖ್ಯಾತ ಜನರು ಸಂರಕ್ಷಣೆಯಲ್ಲಿ ಮತ್ತು ವೈಜ್ಞಾನಿಕ, ಸಾಮಾಜಿಕ ಮತ್ತು ಕಾನೂನಾತ್ಮಕ ಹಾಗೂ ರಾಜಕೀಯ ಅಂಶಗಳಲ್ಲಿ ತೊಡಗಿಸಿಕೊಂಡರು. (ಸಂರಕ್ಷಣಾ ಆಂದೋಲನವನ್ನೂ ನೋಡಿ)
ಉಲ್ಲೇಖಗಳು
ಬದಲಾಯಿಸಿ- ↑ ಶೀಬಿಂಗರ್, ಲೊಂಡ ಮತ್ತು ಕ್ಲೌಡಿಯ ಸ್ವಾನ್ (ಎಡಿಎಸ್.) 2004 ಕಲೋನಿಯಲ್ ಬಾಟನಿ ಸೈನ್ಸ್, ಕಾಮರ್ರ್ಸ್, ಆಂಡ್ ಪಾಲಿಟಿಕ್ಸ್ ಇನ ದಿ ಅರ್ಲಿ ಮಾಡರ್ನ್ ವರ್ಲ್ಡ್. 352 ಪುಟಗಳು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ
- ↑ ಆರ್ಚರ್ ಮಿಲ್ಡ್ರೆಡ್ & ಡಬ್ಲ್ಯು. ಜಿ. ಆರ್ಚರ್ (1955) ನ್ಯಾಚುರಲ್ ಹಿಸ್ಟರಿ ಪೇಂಟಿಂಗ್ಸ್. ಇನ್ ಇಂಡಿಯನ್ ಪೈಂಟಿಂಗ್ ಫಾರ್ ದಿ ಬ್ರಿಟಿಶ್ 1770–1880, ಪುಟಗಳು. 91–98. ಆಕ್ಸ್‌ಫರ್ಡ್:ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.
- ↑ ೩.೦ ೩.೧ ೩.೨ Ali, S. (1979). Bird study in India : its history and its importance. ICCR, New Delhi.
- ↑ ೪.೦ ೪.೧ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 2.
- ↑ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ, ಪುಟಗಳು. 3.
- ↑ ಕ್ರಮ್ರಿಶ್ ಎಸ್. ದಿ ರೆಪ್ರೆಸೆಂಟೇಶನ್ ಆಫ್ ನೇಚರ್ ಇನ್ ಅರ್ಲಿ ಬುದ್ಧಿಸ್ಟ್ ಸ್ಕಲ್ಪಚರ್. ರೂಪಂ 8. 1921.
- ↑ ೭.೦ ೭.೧ ೭.೨ ೭.೩ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 4.
- ↑ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 6.
- ↑ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 7.
- ↑ ೧೦.೦ ೧೦.೧ ೧೦.೨ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 8.
- ↑ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 13.
- ↑ Sundaracharya, H. (1927). Mriga Pakshi Shastra by Hamsadeva (English translation).
- ↑ Shankar, Darshan (2009). Current Science. 96 (2): 292 http://www.ias.ac.in/currsci/jan252009/292.pdf.
{{cite journal}}
: Missing or empty|title=
(help) - ↑ ಡೆಲ್ಮೆ-ರಾಡ್‌ಕ್ಲಿಫ್, ಲೆ.ಕರ್ನಲ್. ಇ. (1871) ನೋಟ್ಸ್ ಆನ್ ದಿ ಫಾಲ್ಕೊನಿಡೇ ಯೂಸ್ಡ್ ಇನ್ ಇಂಡಿಯಾ ಇನ್ ಫಾಲ್ಕೊನ್ರಿ (ಮರುಮದ್ರಣ) ಸ್ಟಾಂಡ್‌ಫಾಸ್ಟ್ ಪ್ರೆಸ್, 1971.
- ↑ ಬ್ಲಂಟ್ ವಿಲ್‌ಫ್ರಿಡ್. 1948. ದಿ ಮುಘಲ್ ಪೈಂಟರ್ಸ್ ಆಫ್ ನ್ಯಾಚುರಲ್ ಹಿಸ್ಟರಿ. ಬರ್ಲಿಂಗ್ಟನ್ ಮ್ಯಾಗಜಿನ್ 90 (539): 49–50.
- ↑ ೧೬.೦ ೧೬.೧ Ali, S. (1927). "The Moghul emperors of India and naturalists and sportsmen. Part 1". J. Bombay Nat. Hist. Soc. 31 (4): 833–861.
- ↑ ವರ್ಮಾ ಎಸ್.ಪಿ. 1999. ಮುಘಲ್ ಪೈಂಟರ್ಸ್ ಆಫ್ ಫ್ಲೋರಾ ಆಂಡ್ ಫಾನಾ ಉಸ್ತಾದ್ ಮನ್ಸೂರ್. ಅಭಿನಮ್ ಪಬ್ಲಿಕೇಶನ್ಸ್.
- ↑ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ ಪುಟಗಳು. 14.
- ↑ ದಾಸ್ ಎ.ಕೆ. 1974. "ಉಸ್ತಾದ್ ಮನ್ಸೂರ್, ಲಲಿತ್ , 17, 1974. p. 37.
- ↑ ರಂಗರಾಜನ್ ಎಂ. (2001) ಇಂಡಿಯಾ'ಸ್ ವೈಲ್ಡ್‌ಲೈಫ್ ಹಿಸ್ಟರಿ p. 19.
- ↑ "ಉಸ್ತಾದ್ ಮನ್ಸೂರ್ ಪೈಂಟಿಂಗ್ಸ್". Archived from the original on 2009-02-10. Retrieved 2011-01-17.
- ↑ ಹಾರ್ಸ್‌ಫೀಲ್ಡ್, ಟಿ. (1851) ಕೆಟಲಾಗ್ ಆಫ್ ದಿ ಮ್ಯಾಮೇಲಿಯ ಇನ್ ದಿ ಮ್ಯೂಸಿಯಂ ಆಫ್ ದಿ ಈಸ್ಟ್ ಇಂಡಿಯಾ ಕಂಪನಿ. ಆನ್‌ಲೈನ್
- ↑ ಹಾರ್ಸ್‌ಫೀಲ್ಡ್, ಟಿ. & ಫ್ರೆಡ್ರಿಕ್ ಮೂರೆ (1856–8) ದಿ ಬರ್ಡ್ಸ್ ಇನ್ ದಿ ಮ್ಯೂಸಿಯಂ ಆಫ್ ಹಾನ್. ಈಸ್ಟ್ ಇಂಡಿಯಾ ಕಂಪನಿ. ಸಂ. 1. ಡಬ್ಲ್ಯು. ಎಚ್.ಅಲ್ಲೆನ್ ಮತ್ತು ಕೋ. ಸ್ಕ್ಯಾನ್ ಮಾಡಿದ ಪುಸ್ತಕ
- ↑ ಬ್ಯಾರಿಂಗರ್, ಟಿ. ಮತ್ತು ಫ್ಲಿನ್, ಟಿ. (ಇಡಿಎಸ್) (1988) ಕಲೋನೈಸೇಶನ್ ಆಂಡ್ ದಿ ಆಬ್ಜೆಕ್ಟ್: ಎಂಪೈರ್, ಮಟಿರಿಯಲ್ ಕಲ್ಚರ್ ಆಂಡ್ ದಿ ಮ್ಯೂಸಿಯಂ, ಮ್ಯೂಸಿಯಂ ಮೀನಿಂಗ್ ಸೀರೀಸ್, ಲಂಡನ್: ರೂಟ್ಲೆಜ್.
- ↑ ಬೆನೆಟ್, ಟಿ. (1995) ದಿ ಬರ್ತ್ ಆಪ್ ದಿ ಮ್ಯೂಸಿಯಂ: ಹಿಸ್ಟರಿ, ಥಿಯರಿ ಪಾಲಿಟಿಕ್ಸ್, ಲಂಡನ್: ರೂಟ್ಲೆಜ್.
- ↑ ಇರ್ವಿನ್, ಜಾನ್ . 1952. ಎ ನೋಟ್ ಆನ್ ಟು ರೆಪ್ರೊಡಕ್ಷನ್ಸ್ [ಪೈಂಟಿಂಗ್ಸ್ ಆಫ್ ಬರ್ಡ್ಸ್ ಬೈ ಉಸ್ತಾದ್ ಮನ್ಸೂರ್ ಮತ್ತು ಆನ್ ಅನ್‌ನೋನ್ ಆರ್ಟಿಸ್ಟ್ ಆಫ್ ಸಿರ್ಕಾ. 1790]. ಮಾರ್ಗ್ 5 (4): 35–36
- ↑ ನೊಲ್ಟೀ, ಎಚ್. ಜೆ(1999) ಇಂಡಿಯನ್ ಬಟಾನಿಕಲ್ ಡ್ರಾಯಿಂಗ್ಸ್ 1793–1868 ಫ್ರಮ್ ದೊ ರಾಯಲ್ ಬಟಾನಿಕ್ ಗಾರ್ಡನ್ ಎಡಿನ್‌ಬರ್ಗ್. ರಾಯಲ್ ಬಟಾನಿಕ್ ಗಾರ್ಡನ್ ಎಡಿನ್‌ಬರ್ಗ್ : ಎಡಿನ್‌ಬರ್ಗ್. ಪುಟಗಳು 100.
- ↑ ವೈಟ್ ಜೆ.ಜೆ. ಮತ್ತು ಫರೋಲ್ ಎ.ಎಂ. (1994) ನವೆಂಬರ್ 17ರಿಂದ 1994ರಿಂದ ಫೆಬ್ರವರಿ 1995ರವರೆಗೆ ನಡೆದ ಪ್ರದರ್ಶನದ ರಾಜಾಸ್ತಾನ್ ಕೆಟಲಾಗ್‌ನಲ್ಲಿದ್ದ ನೈಸರ್ಗಿಕ ಇತಿಹಾಸದ ಪೈಂಟಿಂಗ್ಸ್. ಹಂಟ್ ಇನ್‌ಸ್ಟಿಟ್ಯೂಟ್ ಫಾರ್ ಬಟಾನಿಕಲ್ ಡಾಕ್ಯುಮೆಂಟೇಶನ್, ಕಾರ್ನೆಗೀ-ಮೆಲಾನ್ ವಿಶ್ವವಿದ್ಯಾಲಯ, ಪಿಟ್ಸ್‌ಬರ್ಗ್, 43ಪುಟಗಳು.
- ↑ ನೊಲ್ಟೀ, ಎಚ್. ಜೆ. (2002) ದಿ ಡಾಪುರಿ ಡ್ರಾಯಿಂಗ್ಸ್ : ಅಲೆಕ್ಸಾಂಡರ್ ಗಿಬ್ಸನ್ ಆಂಡ್ ದಿ ಮುಂಬಯಿ ಬಟಾನಿಕ್ ಗಾರ್ಡನ್ಸ್. ದಿ ಆಂಟಿಕ್ ಕಲೆಕ್ಟರ್ಸ್ ಕ್ಲಬ್ ಇನ್ ಅಸೋಸಿಯೇಶನ್ ವಿತ್ ದಿ ರಾಯಲ್ ಬಟಾನಿಕ್ ಗಾರ್ಡನ್ ಎಡಿನ್‌ಬರ್ಗ್. 240ಪುಟಗಳು.
- ↑ ಮೆಹ್ತಾ, ನನಲಾಲ್, ಸಿ. 1926. "ಸಮ್ ಫ್ಲೋರಲ್ ಸ್ಟಡೀಸ್." ಇನ್ : ಸ್ಟಡೀಸ್ ಇನ್ ಇಂಡಿಯನ್ ಪೈಂಟಿಂಗ್ : VIIನೇ ಶತಮಾನದಿಂದ ಕ್ರಿ.ಶ. 1870ರವರೆಗೆ ಕೆಲವು ಹೊಸ ವಸ್ತುಗಳ ಒಂದು ಸಮೀಕ್ಷೆ, ಪುಟಗಳು. 75–84. ಮುಂಬಯಿ, ಡಿ.ಬಿ. ತಾರಾಪುರವಾಲಾ ಸನ್ಸ್ ಆಂಡ್ ಕೋ.
- ↑ ಸಿನ್‌ಕ್ಲೈರ್ ಡಬ್ಲ್ಯು ಎಫ್ (1890) ಸಮ್ ನ್ಯೂ ಬುಕ್ಸ್ ಆಫ್ ಇಂಡಿಯನ್ ಜೂವಾಲಜಿ . ಜೆ. ಮುಂಬಯಿ ನ್ಯಾಚುರಲ್ ಹಿಸ್ಟರಿ. ಸೊಸೈಟಿ. 5(2–3):176–184
- ↑ ನ್ಯೂಟನ್, ಪೌಲ್, & ಮ್ಯಾಟ್ ರಿಡ್ಲೆ. ಬಯಾಲಜಿ ಅಂಡರ್ ರಾಜ್. ನ್ಯೂ ಸೈಂಟಿಸ್ಟ್. (22 ಸೆಪ್ಟೆಂಬರ್ 1983) ಪುಟಗಳು. 857–867
- ↑ ಪ್ಯಾಟ್ರಿಕ್ ಎನ್ ವಿಸೆ ಜ್ಯಾಕ್ಸನ್ , 2005 ಥಾಮಸ್ ಓಲ್ಡ್‌ಹಾಮ್. ಅರ್ಥ್ ಸೈನ್ಸ್‌ಸ್ 2000 ಸಂಚಿಕೆ 12 [೧] Archived 2012-03-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಜೆರ್ಡನ್ ಟಿ. ಸಿ. 1864. ಬರ್ಡ್ಸ್ ಆಫ್ ಇಂಡಿಯಾ. ಸಂಪುಟ 1.
- ↑ ಫ್ರೋಮ್, ಎನ್.ಎಫ್. (1922–1969) ನೋಟ್ಸ್ ಆನ್ ಬರ್ಡ್ಸ್ ಸೀನ್ ಇನ್ ಇಂಡಿಯಾ, ಇನ್ ದಿ ಬ್ರಿಟಿಶ್ ಐಸ್ಲಸ್ ಆಂಡ್ ಎಲ್ಸ್‌ವೇರ್.
- ↑ ಕಿನ್ನಿಯರ್ ಎನ್.ಬಿ. (1951) ದಿ ಹಿಸ್ಟರಿ ಆಫ್ ಇಂಡಿಯನ್ ಮ್ಯಾಮಲಜಿ ಆಂಡ್ ಆರ್ನಿತಾಲಜಿ. ಪಾರ್ಟ್ 1. ಜೆಬಿಎನ್‌ಎಸ್‌ಎಸ್ 50:766–778
- ↑ ಲಿಡೆಕ್ಕರ್, ಆರ್. (1886). ದಿ ಫಾನಾ ಆಫ್ ಕರ್ನೂಲ್ ಕೇವ್ಸ್. ಪೆಲಿಯಂಟಾಲೊಜಿಕಾ ಇಂಡಿಕಾ ಸೀರೀಸ್ ಸಿ. 4(2): 23–58.
- ↑ Scherren, Henry (1905). The Zoological Society of London. Cassell & Co.
- ↑ ಗುಹಾ ರಾಮಚಂದ್ರ 2003. ಚರ್ಚಿಲ್ ಇನ್ ಬೆಂಗಳೂರು. ದಿ ಹಿಂದೂ, ಸಂಡೇ ಡಿಸೆಂಬರ್, 21, 2003.[೨] Archived 2004-01-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ರಾವ್, ಬಿಆರ್ ಸುಬ್ಬ, (1998) ಹಿಸ್ಟರಿ ಆಫ್ ಎಂಟಮಾಲೊಜಿ ಇನ್ ಇಂಡಿಯಾ. ಇನ್‌ಸ್ಟಿಟ್ಯೂಶನ್ ಆಫ್ ಅಗ್ರಿಕಲ್ಚರ್ ಟೆಕ್ನಾಲಜೀಸ್, ಬೆಂಗಳೂರು.
- ↑ ಗ್ರೋವ್, ರಿಚರ್ಡ್. 1995 ಗ್ರೀನ್ ಇಂಪೆರಿಯಲಿಸಮ್: ಕಲೊನಿಯಲ್ ಎಕ್ಸ್‌ಪ್ಯಾನ್ಷನ್, ಟ್ರಾಫಿಕಲ್ ಐಲ್ಯಾಂಡ್ ಈಡನ್ಸ್ ಆಂಡ್ ದಿ ಒರಿಜಿನ್ಸ್ ಆಫ್ ಎನ್‌ವಿರಾನ್‌ಮೆಂಟಲಿಸಮ್, 1600–1860. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್ 0-521-56513-8
- ↑ ಬಾರ್ಟನ್, ಗ್ರಿಗೊರಿ ಅಲೆನ್, (2002) ಎಂಪೈರ್ ಫಾರೆಸ್ಟ್ರಿ ಆಂಡ್ ದಿ ಒರಿಜಿನ್ಸ್ ಆಫ್ ಎನ್‌ವಿರಾನ್‌ಮೆಂಟಲಿಸಮ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್ 0-521-81417-0
- ↑ ಕೆಟಲಾಗ್ ಆಫ್ ವೈಟ್ ಡ್ರಾಯಿಂಗ್ಸ್. 2006ರ ಅಕ್ಟೋಬರ್‌ರಂದು ಪಡೆಯಲಾಗಿದೆ
- ↑ ಬೋಲ್, ಪಿ.ವಿ. 1976. ರಿವ್ಯೂ ಆಫ್ ಫ್ಲೋರಾ ಇಂಡಿಕಾ ಆರ್ ಡಿಸ್ಕ್ರಿಪ್ಷನ್ಸ್ ಆಫ್ ಇಂಡಿಯನ್ ಪ್ಲಾಂಟ್ಸ್, ಲೇಖಕರು - ವಿಲಿಯಂ ರಾಕ್ಸ್‌ಬರ್ಗ್,ವಿಲಿಯಂ ಕೆರೆ ದಿ ಕ್ವಾರ್ಟರ್ಲಿ ರಿವ್ಯೂ ಆಫ್ ಬಯಾಲಜಿ. 51(3):442–443
- ↑ ಶರ್ಮಾ, ಜಯೀತ, (2006) ಬ್ರಿಟಿಶ್ ಸೈನ್ಸ್, ಚೀನೀಸ್ ಸ್ಕಲ್ ಆಂಡ್ ಅಸ್ಸಾಂ ಟೀ: ಮೇಕಿಂಗ್ ಎಂಪೈರ್ಸ್ ಗಾರ್ಡನ್. ಇಂಡಿಯನ್ ಎಕಾನಾಮಿಕ್ ಸೋಶಿಯಲ್ ರಿವ್ಯೂ 43; 429
- ↑ ಕಿನ್ನಿರ್, ಎನ್. ಬಿ. (1952) ದಿ ಇಂಡಿಯನ್ ಹಿಸ್ಟರಿ ಆಫ್ ಇಂಡಿಯನ್ ಮ್ಯಾಮಲೊಜಿ ಆಂಡ್ ಆರ್ನಿತಾಲಜಿ. ಪಾರ್ಟ್ II. ಬರ್ಡ್ಸ್. ಜೆ. ಮುಂಬಯಿ. ನ್ಯಾಚುರಲ್ ಹಿಸ್ಟರಿ ಸೊಸೈಟಿ 51 (1): 104–110
- ↑ ವುಡ್, ಜೆ. ಡಂಕನ್ (2003). ಹೊರೇಸ್ ಅಲೆಕ್ಸಾಂಡರ್ : : ಬರ್ಡ್ಸ್ ಆಂಡ್ ಬೈನಾಕ್ಯುಲರ್ಸ್. ಸೆಶನ್ಸ್ ಆಫ್ ಯಾರ್ಕ್. ಐಎಸ್‌ಬಿಎನ್ 1-85072-289-7
- ↑ ಬೇಟ್ಸ್, ಆರ್. ಎಸ್.ಪಿ. , & ಇ. ಎಚ್. ಎನ್. ಲೊಥರ್ 1952. ದಿ ಹಿಸ್ಟರಿ ಆಫ್ ಬರ್ಡ್ ಫೋಟೋಗ್ರಫಿ ಇನ್ ಇಂಡಿಯಾ. ಜರ್ನಲ್, ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ, 50:779–784
ಬಾಹ್ಯ ಕೊಂಡಿಗಳು
ಬದಲಾಯಿಸಿ- ಸಹರನ್ಪುರ್ ಗಾರ್ಡನ್ಸ್
- ಬಟಾನಿಕಲ್ ಆರ್ಟ್ ಇನ್ ಇಂಡಿಯಾ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.