ಭಾರತದಲ್ಲಿ ಕಾಲಾ ಅಜ಼ಾರ್
ಕಾಲಾ ಅಜ಼ಾರ್ ( ವಸಿರೆಲ್ ಲೀಶ್ಮೇನಿಯಾಸಿಸ್ ) ರೋಗವು ಭಾರತದಲ್ಲಿ ಸಹಾ ಕಂಡುಬರುತ್ತದೆ. ಕಾಲಾ ಅಜ಼ಾರ್ ಭಾರತದ ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ೨೦೧೨ರ ಹೊತ್ತಿಗೆ ವರ್ಷಕ್ಕೆ ೧,೪೬,೦೦೦ ಪ್ರಕರಣಗಳಿದ್ದವು. [೧] ಈ ರೋಗದಲ್ಲಿ ಪರಾವಲಂಬಿಯು ಯಕೃತ್ತು, ಗುಲ್ಮ ಮತ್ತು ಮೂಳೆ ಮಜ್ಜೆಯಂತಹ ಆಂತರಿಕ ಅಂಗಗಳಿಗೆ ವಲಸೆ ಬಂದ ನಂತರ ಕಾಯಿಲೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಹೋದರೆ ರೋಗದಿಂದ ಸಾಯುವ ಸಾಧ್ಯತೆಯಿದೆ. ಜ್ವರ, ತೂಕ ಇಳಿಕೆ, ಆಯಾಸ, ರಕ್ತಹೀನತೆ ಹಾಗೂ ಯಕೃತ್ತು ಮತ್ತು ಗುಲ್ಮದ ಊತವು ರೋಗ ಸೂಚನೆ ಹಾಗೂ ಲಕ್ಷಣಗಳಾಗಿವೆ.
ಸ್ಯಾಂಡ್‌ಫ್ಲೈಗಳ ಕಚ್ಚುವಿಕೆಯಿಂದ ಜನರು ಈ ರೋಗವನ್ನು ಪಡೆಯುತ್ತಾರೆ, ಸ್ಯಾಂಡ್‌ಫ್ಲೈಗಳು ಪರಾವಲಂಬಿ ಸೋಂಕಿತ ಇನ್ನೊಬ್ಬ ವ್ಯಕ್ತಿಯ ರಕ್ತವನ್ನು ಕುಡಿಯುವುದರಿಂದ ಅವು ಸ್ವತಃ ಪರಾವಲಂಬಿಗಳಾಗಿ ಮಾರ್ಪಾಡಾಗುತ್ತವೆ. ಜಾಗತಿಕವಾಗಿ ೨೦ ಕ್ಕೂ ಹೆಚ್ಚು ವಿಭಿನ್ನ ಲೀಷ್‌ಮೇನಿಯಾ ಪರಾವಲಂಬಿಗಳು ರೋಗವನ್ನು ಉಂಟುಮಾಡುತ್ತವೆ ಮತ್ತು ೯೦ ಜಾತಿಯ ಸ್ಯಾಂಡ್‌ಫ್ಲೈ ಆ ಪರಾವಲಂಬಿಗಳನ್ನು ಹರಡುತ್ತವೆ. [೨] ಆದಾಗ್ಯೂ, ಭಾರತೀಯ ಉಪಖಂಡದಲ್ಲಿ, ಒಂದು ಸಾಮಾನ್ಯ ಜಾತಿಯ ಪರಾವಲಂಬಿ ಇದೆ ಅದು- ಲೀಶ್ಮೇನಿಯಾ ಡೊನೊವಾನಿ ಮತ್ತು ಕೇವಲ ಒಂದು ಜಾತಿಯ ಸ್ಯಾಂಡ್‌ಫ್ಲೈ, ಅದೇ ಫ್ಲೆಬೋಟೊಮಸ್ ಅರ್ಜೆಂಟಿಪ್ಸ್, ಇದು ರೋಗವನ್ನು ಹರಡುತ್ತವೆ. [೩] ರೋಗದ ರೂಪ, ಪರಾವಲಂಬಿಯನ್ನು ತೊಡೆದುಹಾಕುವ ಔಷಧಿ ಮತ್ತು ಕೀಟಗಳ ಕಡಿತವನ್ನು ತಡೆಯುವ ಕೀಟನಾಶಕದ ಪ್ರಕಾರವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತದೆ ಮತ್ತು ಭಾರತಕ್ಕೆ ಶಿಫಾರಸುಗಳಿವೆ.
ವೈಯಕ್ತಿಕ ವೆಚ್ಚದ ಹೊರತಾಗಿ, ಈ ರೋಗವು ಪೀಡಿತ ಸಮುದಾಯಗಳಿಗೆ ಮತ್ತು ಸಾಮಾನ್ಯವಾಗಿ ಭಾರತಕ್ಕೆ ಹೆಚ್ಚಿನ ಆರ್ಥಿಕ ವೆಚ್ಚವನ್ನು ಹೊಂದಿದೆ.
ವಿಧಗಳು/ ಪ್ರಕಾರಗಳು
ಬದಲಾಯಿಸಿ೨೦೦೪-೦೮ರ ಅಂಕಿಅಂಶಗಳ ಆಧಾರದ ಮೇಲೆ ೨೦೧೨ ರ ವರದಿಯ ಪ್ರಕಾರ, ಕಾಲಾ ಅಜರ್‌ನ ವಾರ್ಷಿಕ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಕನಿಷ್ಠ ೧,೪೬,೦೦೦, ಬಾಂಗ್ಲಾದೇಶದಲ್ಲಿ ೧೨,೦೦೦ ಮತ್ತು ನೇಪಾಳದಲ್ಲಿ ೩,೦೦೦. [೧] ಉಪಖಂಡದ ಸೋಂಕನ್ನು ಹೊತ್ತಿರುವ ಎಲ್ಲ ಜನರಲ್ಲಿ, ೧೦% ರಷ್ಟು ಕಾಲಾ ಅಜ಼ಾರ್, ೧೦% ಪಿಕೆಡಿಎಲ್, ಮತ್ತು ೮೦% ಲಕ್ಷಣರಹಿತರಾಗಿರುತ್ತಾರೆ. [೪]
ಕಾಲಾ ಅಜ಼ಾರ್
ಬದಲಾಯಿಸಿಕಾಲಾ ಅಜ಼ಾರ್ ಅನ್ನು ಒಳಾಂಗಗಳ ಲೀಶ್ಮೇನಿಯಾಸಿಸ್ (ವಸಿರೆಲ್ ಲೀಶ್ಮೇನಿಯಾಸಿಸ್) ಎಂದೂ ಕರೆಯುತ್ತಾರೆ, ಇದರಲ್ಲಿ ಪರಾವಲಂಬಿಯು ಯಕೃತ್ತು, ಗುಲ್ಮ (ಆದ್ದರಿಂದ " ಒಳಾಂಗ ") ಮತ್ತು ಮೂಳೆ ಮಜ್ಜೆಯಂತಹ ಆಂತರಿಕ ಅಂಗಗಳಿಗೆ ವಲಸೆ ಹೋಗುತ್ತವೆ. ಚಿಕಿತ್ಸೆ ನೀಡದೆ ಬಿಟ್ಟರೆ, ಸಾವಿಗೆ ಕಾರಣವಾಗುತ್ತದೆ. ಜ್ವರ, ತೂಕ ಇಳಿಕೆ, ಆಯಾಸ, ರಕ್ತಹೀನತೆ ಹಾಗೂ ಯಕೃತ್ತು ಮತ್ತು ಗುಲ್ಮದ ಊತವು ರೋಗ ಸೂಚನೆ ಹಾಗೂ ಲಕ್ಷಣಗಳಾಗಿವೆ.
ಕಾಲಾ ಅಜ಼ಾರ್ ಇರುವ ಜನರಲ್ಲಿ, ರೋಗಲಕ್ಷಣಗಳ ವ್ಯತ್ಯಾಸವಿರುತ್ತದೆ ಮತ್ತು ಕೆಲವು ಜನರು ಅಸಾಮಾನ್ಯ ಲಕ್ಷಣಗಳನ್ನು ಹೊಂದಬಹುದು. [೫]
ಲಕ್ಷಣರಹಿತ ಕಾಲಾ ಅಜ಼ಾರ್
ಬದಲಾಯಿಸಿಯಾರಾದರೂ ಸೋಂಕನ್ನು ಹೊಂದಿರುವಾಗ ರೋಗಲಕ್ಷಣಗಳನ್ನು ತೋರಿಸದಿದ್ದಾಗ ಲಕ್ಷಣರಹಿತ ಕಾಲಾ ಅಜ಼ಾರ್ (ಲಕ್ಷಣರಹಿತ ಲೆಷ್ಮಾನಿಯಾಸಿಸ್ ಸೋಂಕು ಎಂದೂ ಕರೆಯುತ್ತಾರೆ) ಸಂಭವಿಸುತ್ತದೆ. [೬]
ಕಾಲಾ ಅಜ಼ಾರ್ ರೋಗಲಕ್ಷಣಗಳನ್ನು ಹೊಂದಿರುವ ಪ್ರತಿ ೧ ವ್ಯಕ್ತಿಗೆ, ೪-೧೭ ಜನರಿಗೆ ಲಕ್ಷಣರಹಿತ ಕಾಲಾ ಅಜ಼ಾರ್ ಇರಬಹುದು. [೬] ಕಾಲಾ ಅಜ಼ಾರ್ ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿರುವ ವ್ಯಕ್ತಿಗೆ ಲಕ್ಷಣರಹಿತ ಕಾಲಾ ಅಜ಼ಾರ್ ನ ಅಪಾಯ ಹೆಚ್ಚು. ಲಕ್ಷಣರಹಿತ ಕಾಲಾ ಅಜ಼ಾರ್‌ಗೆ ಧನಾತ್ಮಕತೆಯನ್ನು ಹೊಂದಿರುವ ಹೆಚ್ಚಿನ ಜನರು ಸೋಂಕನ್ನು ನೈಸರ್ಗಿಕವಾಗಿ ತೆರವುಗೊಳಿಸುತ್ತಾರೆ. ೧-೨೩% ರಷ್ಟು ರೋಗಲಕ್ಷಣವಿಲ್ಲದ ಜನರು ೧ ವರ್ಷದೊಳಗೆ ಕಾಲಾ ಅಜ಼ಾರ್ ಅನ್ನು ಅಭಿವೃದ್ಧಿಪಡಿಸುತ್ತಾರೆ.
ಪೋಸ್ಟ್-ಕಾಲಾ ಅಜ಼ಾರ್ ಡರ್ಮಲ್ ಲೀಶ್ಮೇನಿಯಾಸಿಸ್
ಬದಲಾಯಿಸಿಪೋಸ್ಟ್-ಕಲಾ-ಅಜರ್ ಡರ್ಮಲ್ ಲೀಶ್ಮೇನಿಯಾಸಿಸ್ (ಪಿಕೆಡಿಎಲ್) ಒಳಾಂಗಗಳ ಲೀಶ್ಮೇನಿಯಾಸಿಸ್ (ವಿಎಲ್) ನ ಒಂದು ತೊಡಕು; ವಿಎಲ್‌ನಿಂದ ಚೇತರಿಸಿಕೊಂಡ ರೋಗಿಯಲ್ಲಿ ಇದು ಮ್ಯಾಕ್ಯುಲರ್, ಮ್ಯಾಕ್ಯುಲೋಪಾಪ್ಯುಲರ್ ಮತ್ತು ನೋಡ್ಯುಲರ್ ರಾಶ್‌ನಂತಹ ಗುಣಲಕ್ಷಣಗಳಿಂದ ನಿರೂಪಿಸಲ್ಪಟ್ಟಿದೆ. "ಪೋಸ್ಟ್-ಕಾಲಾ ಅಜ಼ಾರ್" ಎಂದು ಕರೆಯಲ್ಪಟ್ಟಿದ್ದರೂ, ೨೯% ಪ್ರಕರಣಗಳು ಎಂದಿಗೂ ಕಾಲಾ ಅಜ಼ಾರ್ ಹೊಂದಿಲ್ಲದ ಜನರಿಂದ ಮತ್ತು ಈ ಹಿಂದೆ ರೋಗಲಕ್ಷಣವಿಲ್ಲದ ಸೋಂಕನ್ನು ಹೊಂದಿರುತ್ತವೆ. [೬]
ವಾಹಕ
ಬದಲಾಯಿಸಿಪ್ರಪಂಚದ ವಿವಿಧ ಸ್ಥಳಗಳಲ್ಲಿ ವಿಭಿನ್ನ ಸ್ಯಾಂಡ್‌ಫ್ಲೈಗಳು ವಿಭಿನ್ನ ಲೀಶ್‌ಮೇನಿಯಾ ಪರಾವಲಂಬಿಗಳನ್ನು ಹರಡುತ್ತವೆ, ಇದು ಕಾಲಾ ಅಜ಼ಾರ್ನ ವಿಭಿನ್ನ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಭಾರತೀಯ ಉಪಖಂಡದಲ್ಲಿ ನಿರ್ದಿಷ್ಟ ಸ್ಯಾಂಡ್‌ಫ್ಲೈ ಫ್ಲೆಬೋಟೊಮಸ್ ಅರ್ಜೆಂಟಿಪ್ಸ್ ಮತ್ತು ಇದು ಲೀಶ್ಮೇನಿಯಾ ಡೊನೊವಾನಿ ಯನ್ನು ಹರಡುತ್ತದೆ. ಭಾರತದಲ್ಲಿ ರೋಗವನ್ನು ತಡೆಗಟ್ಟುವ ಒಂದು ಪ್ರಮುಕ ಭಾಗವೆಂದರೆ ಕೀಟಗಳ ಕಡಿತವನ್ನು ತಡೆಯುವುದು. [೩]
ಪರಿಸರ ದತ್ತಾಂಶದ ಕೊರತೆ ಮತ್ತು ಕೀಟಗಳ ಜೀವನದ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಕೀಟಗಳ ಕಡಿತವನ್ನು ತಡೆಗಟ್ಟಲು ಸವಾಲಾಗಿದೆ. ಮರಳು ನೊಣಗಳು ಯಾವಾಗ ಮತ್ತು ಎಲ್ಲಿ ವಾಸಿಸುತ್ತವೆ ಎಂದು ಊಹಿಸಲು ಪರಿಸರ ಮಾಹಿತಿಯಾದ ತಾಪಮಾನ, ಮಳೆ, ಗಾಳಿಯ ವೇಗ, ಸಾಪೇಕ್ಷ ಆರ್ದ್ರತೆ, ಮಣ್ಣಿನ ತೇವಾಂಶ, ಪಿಹೆಚ್ ಮತ್ತು ಒಟ್ಟು ಸಾವಯವ ಇಂಗಾಲವನ್ನು ಒಳಗೊಂಡಿದೆ ಎಂದು ತಿಳಿಯಬೇಕಾಗಿದೆ. [೭] ಆ ಮಾಹಿತಿಯು ಲಭ್ಯವಿದ್ದರೆ, ಕೀಟಗಳು ಕಚ್ಚಿದಾಗ, ಪ್ರಾಣಿಗಳು ಅಥವಾ ಮನುಷ್ಯರನ್ನು ಹೇಗೆ ಕಚ್ಚುವುದು ಮತ್ತು ಅವು ಎಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಎಂಬುದನ್ನು ಅಧ್ಯಯನ ಮಾಡುವುದು ಸುಲಭ. ಕೀಟಗಳ ಜೀವನ ಮತ್ತು ನಡವಳಿಕೆಯ ಬಗ್ಗೆ ತಿಳಿದುಕೊಳ್ಳುವುದರಿಂದ ಕಾಲಾ ಅಜ಼ಾರ್ ಅನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ದಕ್ಷತೆ ಮತ್ತು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಕಾಲಾ ಅಜ಼ಾರ್ ಹೊಂದಿರುವ ಜಿಲ್ಲೆಗಳಲ್ಲಿ ೯೦% ಮನೆಗಳಲ್ಲಿ ಕೀಟನಾಶಕ ಸಂಸ್ಕರಿಸಿದ ಪರದೆಗಳನ್ನು ಬಳಸುವುದರಿಂದ ರೋಗ ಹರಡುವಿಕೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ಪರಿಣಾಮಕಾರಿ ಭಾಗವಾಗಿದೆ.. [೩]
ಕಾಲಾ ಅಜ಼ಾರ್ ಹರಡಲು ಪ್ರಾಣಿಗಳ ಸಂಬಂಧ ಪ್ರಮುಖ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. [೮] ಜಾನುವಾರು, ಎಮ್ಮೆ, ಕೋಳಿಗಳು, ಕಾಡು ಇಲಿಗಳು ಮತ್ತು ನಾಯಿಗಳ ಪರೀಕ್ಷೆಗಳಲ್ಲಿ ಕಡಿಮೆ ಅಥವಾ ಯಾವುದೇ ಸೋಂಕು ಕಂಡುಬಂದಿಲ್ಲ. ಆಡುಗಳು ಸೋಂಕಿಗೆ ಕಾರಣ ಎಂಬುದಕ್ಕೆ ಕೆಲವು ಪುರಾವೆಗಳಿವೆ.
ಚಿಕಿತ್ಸೆ
ಬದಲಾಯಿಸಿಕಾಲಾ ಅಜ಼ಾರ್ ಸಮುದಾಯದ ಸಮಸ್ಯೆಯಾಗಿದ್ದು, ಚಿಕಿತ್ಸೆಯಲ್ಲಿ ವೈಯಕ್ತಿಕ ಮತ್ತು ಸಮುದಾಯದ ಸಹಭಾಗಿತ್ವದ ಅಗತ್ಯವಿದೆ. ಆರೋಗ್ಯ ಸೇವಕರು ರೋಗದ ಜನರನ್ನು ಹುಡುಕುವುದರೊಂದಿಗೆ ಚಿಕಿತ್ಸೆಯು ಪ್ರಾರಂಭವಾಗುತ್ತದೆ. ಚಿಕಿತ್ಸಾಲಯಗಳಲ್ಲಿ ಅಲ್ಲದೇ, ಇತರ ಕ್ಷೇತ್ರದಲ್ಲಿಯೂ ಪರೀಕ್ಷೆ ಇದೆ. ಪರೀಕ್ಷೆ ಮತ್ತು ರೋಗನಿರ್ಣಯದ ಅದೇ ದಿನ ಕ್ಲಿನಿಕ್ನಲ್ಲಿ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಯ ಏಕೈಕ ಚುಚ್ಚುಮದ್ದು ಆದ್ಯತೆಯ ಚಿಕಿತ್ಸೆಯಾಗಿದೆ. ಎಲ್ಲವನ್ನೂ ಒಂದೇ ಭೇಟಿಯಲ್ಲಿ ಮಾಡುವ ಮೂಲಕ, ಜನರು ಸುಲಭವಾಗಿ ಚಿಕಿತ್ಸೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಚಿಕಿತ್ಸೆಯ ನಂತರವೂ, ಜನರಿಗೆ ಕೆಲವು ಸಂಯೋಜನೆಯ ಚಿಕಿತ್ಸೆಯನ್ನು ಸ್ವಲ್ಪ ಕಾಲದವರೆಗು ಅನುಸರಿಸುವುದು ಅಗತ್ಯವಿರುತ್ತದೆ. ಕೆಲವು ಜನರಿಗೆ ಪರ್ಯಾಯ ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ಇತರ ಔಷಧಗಳು/ ಡ್ರಗ್ಸ್ ಪರಿಣಾಮಕಾರಿಗಳಾಗಿರುತ್ತವೆ.
ವಿಎಲ್ ಮತ್ತು ಪಿಕೆಡಿಎಲ್‌ಗೆ ಲಭ್ಯವಿರುವ ಏಕೈಕ ಮೌಖಿಕ ಔಷಧಿಯೆಂದರೆ ಮಿಲ್ಟೆಫೋಸಿನ್ (Miltefosine) . [೯] ವಿಎಲ್‌ನ ಅಲ್ಪಾವಧಿಯ ಚಿಕಿತ್ಸೆಗಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಪಿಕೆಡಿಎಲ್‌ಗೆ ಈ .ಔಷಧಿಯೊಂದಿಗೆ ೨೮ ದಿನಗಳಿಗಿಂತ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುತ್ತದೆ. ಪಿಕೆಡಿಎಲ್‌ಗೆ ಚಿಕಿತ್ಸೆ ನೀಡಲು ಮೊನೊಥೆರಪಿಯಾಗಿ ಬಳಸಲು ಮಿಲ್ಟೆಫೋಸಿನ್ ಅನ್ನು ಶಿಫಾರಸು ಮಾಡುವುದಿಲ್ಲ.
ರೋಗದ ನಿರ್ಮೂಲನೆ
ಬದಲಾಯಿಸಿಭಾರತದಲ್ಲಿ ಕಾಲಾ ಅಜ಼ಾರ್ ನಿರ್ಮೂಲನೆ ಸಾಧಿಸಬಹುದಾಗಿದೆ ಮತ್ತು ಹಾಗೆ ಮಾಡಲು ಅನುಕೂಲಕರ ಸಂದರ್ಭಗಳಿವೆ. [೩] ರೋಗವನ್ನು ಉಂಟುಮಾಡುವ ಪರಾವಲಂಬಿಗೆ ಈ ಪ್ರದೇಶದಲ್ಲಿ ಮಾನವರು ಮಾತ್ರ ಜಲಾಶಯದ ಆತಿಥೇಯರಾಗಿದ್ದಾರೆ. ಈ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ಏಕೈಕ ಮಾರ್ಗವೆಂದರೆ ಈ ಪ್ರದೇಶದ ಒಂದು ಕೀಟ, ಫ್ಲೆಬೋಟೊಮಸ್ ಅರ್ಜೆಂಟಿಪ್ಸ್ . ೨೦೦೯ ರ ಹೊತ್ತಿಗೆ, ಈ ರೋಗವು ಭಾರತ, ಬಾಂಗ್ಲಾದೇಶ ಮತ್ತು ನೇಪಾಳದ ೧೦೯ ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ರೋಗದ ರೋಗನಿರ್ಣಯ ಮಾಡುವುದು ಸುಲಭ, ಕ್ಷೇತ್ರದ ಹೊರಗಡೆ ಮತ್ತು ಕ್ಲಿನಿಕ್‌ನ ಹೊರಗಡೆ. ಪರೀಕ್ಷೆಯು ರೋಗಿಯನ್ನು ಸೋಂಕಿನ ಸ್ಥಿತಿಯೊಂದಿಗೆ ಗುರುತಿಸಿದಾಗ, ಲಭ್ಯವಿರುವ ಔಷಧಿಗಳು ಪರಾವಲಂಬಿಯನ್ನು ತೆಗೆದುಹಾಕುವಲ್ಲಿ ಸಂಪೂರ್ಣವಾಗಿ ಪರಿಣಾಮಕಾರಿಯಾಗಿರುತ್ತವೆ.
೨೦೨೦ ರ ವೇಳೆಗೆ ೧೦,೦೦೦ ಜನರಲ್ಲಿ ೧ ಕ್ಕಿಂತ ಕಡಿಮೆ ಪ್ರಮಾಣ ಮಾಡುವುದು ರೋಗವನ್ನು ನಿರ್ಮೂಲನೆ ಮಾಡುವ ಪ್ರಸ್ತುತ ಗುರಿಯಾಗಿದೆ. [೧೦]
ಎಲಿಮಿನೇಷನ್ ತಂತ್ರದ ಒಂದು ಭಾಗವೆಂದರೆ ಸ್ಯಾಂಡ್‌ಫ್ಲೈಗಳನ್ನು ವಾಹಕವಾಗಿ ಕಡಿಮೆ ಮಾಡುವುದು, ಆರಂಭಿಕ ಪ್ರಕರಣ ಪತ್ತೆಯಾದಾಗ ಡಿಡಿಟಿಯೊಂದಿಗೆ ಚಿಕಿತ್ಸೆ ಪಡೆದ ಸೊಳ್ಳೆ ಪರದೆಗಳನ್ನು ಚಿಕಿತ್ಸೆಯ ಕಾರ್ಯಕ್ರಮಗಳೊಂದಿಗೆ ನೀಡುವುದಾಗಿದೆ. [೧೧] [೧೨]
ಸವಾಲುಗಳು
ಬದಲಾಯಿಸಿಕಾಲಾ ಅಜ಼ಾರ್ ಅನ್ನು ತೆಗೆದುಹಾಕುವಲ್ಲಿ ಪ್ರಮುಖ ಸವಾಲುಗಳೆಂದರೆ ಆರೋಗ್ಯ ರಕ್ಷಣೆಯ ಪ್ರವೇಶದ ಕೊರತೆ, ಔಷಧ ನಿರೋಧಕತೆಯ ಯೋಜನೆ, ಕಾಲಾ ಅಜ಼ಾರ್ ಲಸಿಕೆ ಇಲ್ಲದಿರುವುದು ಮತ್ತು ಸೋಂಕನ್ನು ಹರಡುವ ಕೀಟವನ್ನು ನಿಯಂತ್ರಿಸುವಲ್ಲಿನ ತೊಂದರೆ. [೧೩] ರೋಗನಿರ್ಣಯ, ಚಿಕಿತ್ಸೆ ಮತ್ತು ಲಸಿಕೆಯ ಬೆಳವಣಿಗೆಯಲ್ಲಿ ಪ್ರಗತಿ ಗಮನಾರ್ಹವಾಗಿದೆ ಮತ್ತು ನಿರ್ಮೂಲನ ಯೋಜನೆಗೆ ಮಾರ್ಗದರ್ಶನ ನೀಡುತ್ತಿದೆ. ಕಾಲಾ ಅಜ಼ಾರ್ ಅನ್ನು ತೊಡೆದುಹಾಕುವ ಕಾರ್ಯಕ್ರಮವು ಸ್ಥಳೀಯ ಸಮುದಾಯಗಳ ಬಲವಾದ ಬೆಂಬಲದೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಚಿಕಿತ್ಸೆಗೆ ಸಾಧ್ಯವಾದಷ್ಟು ಬೇಗ ಪ್ರಕರಣಗಳನ್ನು ಗುರುತಿಸಲು ಮತ್ತು ಹರಡುವುದನ್ನು ತಡೆಯಲು ಸಾರ್ವಜನಿಕ ಆರೋಗ್ಯದ ಕಣ್ಗಾವಲು ವರ್ಷಗಳವರೆಗೆ ಅಗತ್ಯವಾಗಿರುತ್ತದೆ.
ಪರಾವಲಂಬಿ ಹೊಂದಿರುವ ಮಾನವರು ಸೋಂಕಿನ ಜಲಾಶಯಗಳಾಗಿದ್ದು, ಇದು ರೋಗವನ್ನು ತೆಗೆದುಹಾಕಿದಂತೆ ತೋರುತ್ತದೆಯಾದರೂ ಅದನ್ನು ಪುನರುಜ್ಜೀವನಗೊಳಿಸುತ್ತದೆ. [೬] ಲಕ್ಷಣರಹಿತ ಕಾಲಾ ಅಜ಼ಾರ್ ಹೊಂದಿರುವ ಜನರು ಇನ್ನೂ ರೋಗವನ್ನು ಹರಡಬಹುದು ಮತ್ತು ಜನರು ಕಾಲಾ ಅಜ಼ಾರ್‌ನಿಂದ ಗುಣಮುಖರಾದಂತೆ ಕಾಣಿಸಿದರು ಸಹಾ, ನಂತರದ ದಿನಗಳಲ್ಲಿ ಪಿಕೆಡಿಎಲ್ ಅನ್ನು ಅಭಿವೃದ್ಧಿಪಡಿಸುತ್ತಾರೆ.
ನಿರ್ಮೂಲನೆಗೆ ಸಂಭವನೀಯ ದೊಡ್ಡ ಅಪಾಯಗಳೆಂದರೆ ಔಷಧ ನಿರೋಧಕತೆ ಮತ್ತು ಕೀಟನಾಶಕ ನಿರೋಧಕತೆ ಮತ್ತು ಔಷಧಿಗಳನ್ನು ಬಳಸುವುದಕ್ಕಾಗಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಫಾರ್ಮಾಕೊವಿಜಿಲೆನ್ಸ್‌ನ ಅಗತ್ಯ. [೧೪]
ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು
ಬದಲಾಯಿಸಿಇಂಡಿಯಾ ನ್ಯಾಷನಲ್ ಹೆಲ್ತ್ ಪಾಲಿಸಿ ೨೦೦೨, ೨೦೧೦ರ ಹೊತ್ತಿಗೆ ಕಾಲಾ ಅಜ಼ಾರ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. [೧೫] ಕೇಂದ್ರ ಸರ್ಕಾರವು ೨೦೦೩ ರಲ್ಲಿ ಕೇಸ್ ನೋಂದಣಿಯೊಂದಿಗೆ ರಾಜ್ಯಗಳನ್ನು ಬೆಂಬಲಿಸಲು ಪ್ರಾರಂಭಿಸಿತು. [೧೬] ೨೦೦೫ ರಲ್ಲಿ ಭಾರತ, ನೇಪಾಳ ಮತ್ತು ಬಾಂಗ್ಲಾದೇಶ ಸರ್ಕಾರಗಳು ಈ ಪ್ರದೇಶದಲ್ಲಿನ ಕಾಲಾ ಅಜ಼ಾರ್ ಅನ್ನು ನಿರ್ಮೂಲನೆ ಮಾಡಲು ಸಹಕರಿಸಲು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಒಂದು ಉಪಕ್ರಮವನ್ನು ಪ್ರಾರಂಭಿಸಿದವು.
ಭಾರತವು ೨೦೧೦ರ ಹೊತ್ತಿಗೆ ಕಾಲಾ ಅಜ಼ಾರ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಗುರಿ ವರ್ಷವನ್ನು ೨೦೧೫ ಕ್ಕೆ ಬದಲಾಯಿಸಿತು. [೧೫] ವರ್ಷ ಬಂದಾಗ ಗುರಿ ಸಾಧಿಸಲಾಗುವುದು ಎಂಬ ಅನಿಶ್ಚಿತತೆ ಇತ್ತು. [೧೭] ಫೆಬ್ರವರಿ ೨೦೧೫ ರಲ್ಲಿ ಭಾರತ, ಬಾಂಗ್ಲಾದೇಶ ಮತ್ತು ನೇಪಾಳದ ಆರೋಗ್ಯ ಮಂತ್ರಿಗಳು ಥೈಲ್ಯಾಂಡ್ ಮತ್ತು ಭೂತಾನ್ ಆರೋಗ್ಯ ಸಚಿವರೊಂದಿಗೆ ಸೇರಿ ೨೦೪೭ ರ ವೇಳೆಗೆ ಕಾಲಾ ಅಜ಼ಾರ್ ಅನ್ನು ತೊಡೆದುಹಾಕಲು ಹೊಸ ಗುರಿ ದಿನಾಂಕವನ್ನು ನಿಗದಿಪಡಿಸಿದರು.
ಇತಿಹಾಸ
ಬದಲಾಯಿಸಿಕಾಲಾ ಅಜ಼ಾರ್ ಗಾಗಿ ಔಷಧ ಅಭಿವೃದ್ಧಿಯಲ್ಲಿ ಬಹಳ ಹಿಂದಿನಿಂದಲೂ ಭಾರತವು ತನ್ನನ್ನು ತೊಡಗಿಸಿಕೊಂಡಿದೆ. [೧೮]
ಈಸ್ಟ್ ಇಂಡಿಯಾ ಕಂಪನಿಯ ಮಿಲಿಟರಿ ವೈದ್ಯ ವಿಲಿಯಂ ಟ್ವಿನಿಂಗ್ ೧೮೩೫ ರಲ್ಲಿ ಕಾಲಾ ಅಜ಼ಾರ್ ಬಗ್ಗೆ ಆಧುನಿಕ ವೈದ್ಯಕೀಯ ವಿವರಣೆಯನ್ನು ಬರೆದಿದ್ದಾರೆ. [೧೯]
೧೯೦೩ ರಲ್ಲಿ, ಬ್ರಿಟಿಷ್ ಸೈನ್ಯದ ವೈದ್ಯಕೀಯ ಅಧಿಕಾರಿಯಾಗಿದ್ದ ವಿಲಿಯಂ ಬೂಗ್ ಲೀಶ್ಮನ್, ಕಲ್ಕತ್ತಾದ ಡಮ್ ದಮ್‌ನಿಂದ ಕಾಲಾ ಅಜ಼ಾರ್‌ಗೆ ಕಾರಣವಾಗುವ ಪರಾವಲಂಬಿಗಳನ್ನು ಗುರುತಿಸಿದ್ದಾರೆ. [೨೦] [೨೧] ಅವರ ವರದಿ ಸರಿಯಾಗಿತ್ತು, ಮತ್ತು ವಿಜ್ಞಾನಿಗಳು ಅವರ ಹೆಸರನ್ನು ಪರಾವಲಂಬಿ ಲೀಶ್ಮೇನಿಯಾ ಮತ್ತು ಪಾಶ್ಚಿಮಾತ್ಯ ಹೆಸರಿನ ಲೀಶ್ಮೇನಿಯಾಸಿಸ್ಗೆ ನೀಡಿದರು .
ಬಂಗಾಳಿ ವೈದ್ಯ ಮತ್ತು ವಿಜ್ಞಾನಿ ಉಪೇಂದ್ರನಾಥ್ ಬ್ರಹ್ಮಚಾರಿ ಅವರು ೧೬೪೬ ರಲ್ಲಿ ಸಾಯುವವರೆಗೂ ಕಾಲಾ ಅಜ಼ಾರ್‌ಗೆ ಚಿಕಿತ್ಸೆ, ಸಂಶೋಧನೆಯನ್ನು ಪ್ರಕಟಿಸಿದರು. [೨೨]
ಭಾರತದ ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮವು ಮಲೇರಿಯಾವನ್ನು ತಡೆಗಟ್ಟಲು ೧೯೫೩ ಮತ್ತು ೧೯೬೪ ರ ನಡುವೆ ಡಿಡಿಟಿಯನ್ನು ಕೀಟನಾಶಕವಾಗಿ ಬಳಸುತ್ತಿತ್ತು. [೨೩] ಡಿಡಿಟಿಯು ಮಾನವರು ಮತ್ತು ಪರಿಸರಕ್ಕೆ ವಿಷಕಾರಿಯಾಗಿದ್ದದ್ದು, ಹೆಚ್ಚು ಪರಿಣಾಮಕಾರಿಯಾಗಿದ್ದರಿಂದ ಡಿಡಿಟಿಯನ್ನು ನಿಷೇಧಿಸಲಾಯಿತು. ಭಾರತ ಡಿಡಿಟಿಯನ್ನು ಬಳಸುತ್ತಿದ್ದಾಗ, ಮಲೇರಿಯಾವನ್ನು ಕಡಿಮೆ ಮಾಡುವ ಪ್ರಯತ್ನವು ಸ್ಯಾಂಡ್‌ಫ್ಲೈಸ್‌ಗಳನ್ನು ಕೊಂದು ಕಾಲಾ ಅಜ಼ಾರ್ ಅನ್ನು ತಡೆಯಲು ಸಹಾಯಕಾರಿಯಾಯಿತು. [೨೪] ೧೯೬೪ ರ ನಂತರ ಮತ್ತು ಡಿಡಿಟಿ ಬಳಕೆಯನ್ನು ನಿಲ್ಲಿಸಿದ ನಂತರ, ಕಾಲಾ ಅಜ಼ಾರ್ ಮರಳಿದರು, ಆದರೆ ವೈದ್ಯರು ಈ ಕಾಯಿಲೆಯ ಅನುಪಸ್ಥಿತಿಯ ನಂತರ ಅದನ್ನು ಗುರುತಿಸಲಿಲ್ಲ.
ಸುಮಾರು ೧೯೬೦-೧೯೭೫ ರವರೆಗೆ, ಉಪಖಂಡದಲ್ಲಿ ಕಾಲಾ ಅಜ಼ಾರ್ ಬಗ್ಗೆ ಯಾವುದೇ ದಾಖಲೆಗಳಿಲ್ಲ. [೨೫] ೧೯೭೮ ರಲ್ಲಿ ನೇಪಾಳದಲ್ಲಿ ಜನರು ಈ ರೋಗವನ್ನು ವರದಿ ಮಾಡಿದರು. ೧೯೮೦ ರಿಂದ ಈ ರೋಗವು ಅನೇಕ ಜನರಲ್ಲಿ ಹರಡಿತು.
ವಿಶೇಷ ಜನಸಂಖ್ಯೆ
ಬದಲಾಯಿಸಿರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಕ್ವಾಕರಿ (Quackery) ಗಮನಾರ್ಹ ಸಮಸ್ಯೆಯಾಗಿದೆ. ಸರ್ಕಾರವು ಅಧಿಕೃತ ಚಿಕಿತ್ಸಾಲಯಗಳ ಸೌಲಭ್ಯವನ್ನು ಒದಗಿಸಿದರು ಸಹಾ, ಹಲವು ಜನರು ಲೈಸನ್ಸ್ ಪಡೆಯದ ವೈದ್ಯರಿಂದ ಚಿಕಿತ್ಸೆ/ ಸೇವೆ ಪಡೆಯುತ್ತಾರೆ. [೧೪] [೨೬]
.
ಕಾಲಾ ಅಜ಼ಾರ್ ಸೋಂಕು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. [೨೭]
ಕಾಲಾ ಅಜ಼ಾರ್ ಹೊಂದಿರುವ ಮಕ್ಕಳು ವಯಸ್ಕರಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. [೨೮] ಮಕ್ಕಳಲ್ಲಿ, ಮಿಲ್ಟೆಫೋಸಿನ್ ವಯಸ್ಕರಿಗೆ ನೀಡುವ ಚಿಕಿತ್ಸೆಯಷ್ಟೇ ಪರಿಣಾಮಕಾರಿಯಾಗಿದೆ ಮತ್ತು ಇದು ಮೊದಲ ಸಾಲಿನ ಚಿಕಿತ್ಸೆಯಾಗಿದೆ. [೨೯] ೯೦% ರಷ್ಟು ಕಾಲಾ ಅಜ಼ಾರ್ ಪ್ರಕರಣಗಳು ಬಿಹಾರದಲ್ಲಿವೆ.
ಎಚ್ಐವಿ-ಪಾಸಿಟಿವ್ ಜನರಿಗೆ ಕಾಲಾ ಅಜ಼ಾರ್‌ನಿಂದ ಹೆಚ್ಚಿನ ಅಪಾಯವಿದೆ. [೩೦] [೩೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Alvar, Jorge; Vélez, Iván D.; Bern, Caryn; Herrero, Mercé; Desjeux, Philippe; Cano, Jorge; Jannin, Jean; Boer, Margriet den; Kirk, Martyn (31 May 2012). "Leishmaniasis Worldwide and Global Estimates of Its Incidence". PLoS ONE. 7 (5): e35671. Bibcode:2012PLoSO...735671A. doi:10.1371/journal.pone.0035671. PMC 3365071. PMID 22693548.
{{cite journal}}
: CS1 maint: unflagged free DOI (link) - ↑ World Health Organization (14 March 2019). "Leishmaniasis Fact Sheet". www.who.int (in ಇಂಗ್ಲಿಷ್). World Health Organization.
- ↑ ೩.೦ ೩.೧ ೩.೨ ೩.೩ Joshi, AB; Das, ML; Akhter, S; Chowdhury, R; Mondal, D; Kumar, V; Das, P; Kroeger, A; Boelaert, M (5 October 2009). "Chemical and environmental vector control as a contribution to the elimination of visceral leishmaniasis on the Indian subcontinent: cluster randomized controlled trials in Bangladesh, India and Nepal". BMC Medicine. 7: 54. doi:10.1186/1741-7015-7-54. PMC 2763005. PMID 19804620.
{{cite journal}}
: CS1 maint: unflagged free DOI (link) - ↑ Le Rutte, Epke A.; Coffeng, Luc E.; Bontje, Daniel M.; Hasker, Epco C.; Ruiz Postigo, José A.; Argaw, Daniel; Boelaert, Marleen C.; De Vlas, Sake J. (2016). "Feasibility of eliminating visceral leishmaniasis from the Indian subcontinent: explorations with a set of deterministic age-structured transmission models". Parasites & Vectors. 9 (1): 24. doi:10.1186/s13071-016-1292-0. ISSN 1756-3305. PMC 4717541. PMID 26787302.
{{cite journal}}
: CS1 maint: unflagged free DOI (link) - ↑ Thakur, L; Singh, KK; Shanker, V; Negi, A; Jain, A; Matlashewski, G; Jain, M (September 2018). "Atypical leishmaniasis: A global perspective with emphasis on the Indian subcontinent". PLoS Neglected Tropical Diseases. 12 (9): e0006659. doi:10.1371/journal.pntd.0006659. PMC 6159859. PMID 30260957.
{{cite journal}}
: CS1 maint: unflagged free DOI (link) - ↑ ೬.೦ ೬.೧ ೬.೨ ೬.೩ Hirve, S; Boelaert, M; Matlashewski, G; Mondal, D; Arana, B; Kroeger, A; Olliaro, P (August 2016). "Transmission Dynamics of Visceral Leishmaniasis in the Indian Subcontinent - A Systematic Literature Review". PLoS Neglected Tropical Diseases. 10 (8): e0004896. doi:10.1371/journal.pntd.0004896. PMC 4973965. PMID 27490264.
{{cite journal}}
: CS1 maint: unflagged free DOI (link) - ↑ Chowdhury, R; Kumar, V; Mondal, D; Das, ML; Das, P; Dash, AP; Kroeger, A (May 2016). "Implication of vector characteristics of Phlebotomus argentipes in the kala-azar elimination programme in the Indian sub-continent". Pathogens and Global Health. 110 (3): 87–96. doi:10.1080/20477724.2016.1180775. PMC 4940889. PMID 27376500.
- ↑ Singh, Niti; Mishra, Jyotsna; Singh, Ram; Singh, Sarman (2013). "Animal Reservoirs of Visceral Leishmaniasis in India". The Journal of Parasitology. 99 (1): 64–67. doi:10.1645/GE-3085.1. ISSN 0022-3395. JSTOR 23355018. PMID 22765517.
- ↑ Pijpers, J; den Boer, ML; Essink, DR; Ritmeijer, K (February 2019). "The safety and efficacy of miltefosine in the long-term treatment of post-kala-azar dermal leishmaniasis in South Asia - A review and meta-analysis". PLoS Neglected Tropical Diseases. 13 (2): e0007173. doi:10.1371/journal.pntd.0007173. PMC 6386412. PMID 30742620.
{{cite journal}}
: CS1 maint: unflagged free DOI (link) - ↑ Sundar, S; Singh, OP; Chakravarty, J (November 2018). "Visceral leishmaniasis elimination targets in India, strategies for preventing resurgence". Expert Review of Anti-infective Therapy. 16 (11): 805–812. doi:10.1080/14787210.2018.1532790. PMC 6345646. PMID 30289007.
- ↑ Ostyn, B; Vanlerberghe, V; Picado, A; Dinesh, DS; Sundar, S; Chappuis, F; Rijal, S; Dujardin, JC; Coosemans, M (August 2008). "Vector control by insecticide-treated nets in the fight against visceral leishmaniasis in the Indian subcontinent, what is the evidence?". Tropical Medicine & International Health. 13 (8): 1073–85. doi:10.1111/j.1365-3156.2008.02110.x. PMID 18564350.
- ↑ Rijal, Suman; Sundar, Shyam; Mondal, Dinesh; Das, Pradeep; Alvar, Jorge; Boelaert, Marleen (22 January 2019). "Eliminating visceral leishmaniasis in South Asia: the road ahead". BMJ. 364: k5224. doi:10.1136/bmj.k5224. PMC 6340338. PMID 30670453.
- ↑ Singh, OP; Hasker, E; Boelaert, M; Sundar, S (December 2016). "Elimination of visceral leishmaniasis on the Indian subcontinent". The Lancet. Infectious Diseases. 16 (12): e304–e309. doi:10.1016/S1473-3099(16)30140-2. PMC 5177523. PMID 27692643.
- ↑ ೧೪.೦ ೧೪.೧ Bhattacharya, SK; Dash, AP (April 2017). "Elimination of Kala-Azar from the Southeast Asia Region". The American Journal of Tropical Medicine and Hygiene. 96 (4): 802–804. doi:10.4269/ajtmh.16-0279. PMC 5392624. PMID 28115678.
- ↑ ೧೫.೦ ೧೫.೧ Thakur, C. P. (1 December 2016). "Is elimination of kala-azar feasible by 2017?". Indian Journal of Medical Research (in ಇಂಗ್ಲಿಷ್). 144 (6): 799–802. doi:10.4103/ijmr.IJMR_335_16. ISSN 0971-5916. PMC 5433271. PMID 28474615.
{{cite journal}}
: CS1 maint: unflagged free DOI (link) - ↑ Dhillon, GP; Sharma, SN; Nair, B (October 2008). "Kala-azar elimination programme in India". Journal of the Indian Medical Association. 106 (10): 664, 666–8. PMID 19552101.
- ↑ Cousins, Sophie (28 July 2015). "India unlikely to meet goal of eliminating kala-azar by 2015, say experts". BMJ. 351: h4117. doi:10.1136/bmj.h4117. PMID 26220177.
- ↑ Alves, F; Bilbe, G; Blesson, S; Goyal, V; Monnerat, S; Mowbray, C; Muthoni Ouattara, G; Pécoul, B; Rijal, S (October 2018). "Recent Development of Visceral Leishmaniasis Treatments: Successes, Pitfalls, and Perspectives". Clinical Microbiology Reviews. 31 (4). doi:10.1128/CMR.00048-18. PMC 6148188. PMID 30158301.
- ↑ Gupta, PCS (May 1947). "History of Kala-Azar in India". The Indian Medical Gazette. 82 (5): 281–286. PMC 5196405. PMID 29015274.
- ↑ Leishman, WB (1903). "On the possibility of the occurrence of trypanosomiasis in India. 1903". The Indian Journal of Medical Research. 123 (3): 1252–4, discussion 79. PMID 16789342.
- ↑ Steverding, D (15 February 2017). "The history of leishmaniasis". Parasites & Vectors. 10 (1): 82. doi:10.1186/s13071-017-2028-5. PMC 5312593. PMID 28202044.
{{cite journal}}
: CS1 maint: unflagged free DOI (link) - ↑ Singh, Rajinder; Roy, Syamal (1 March 2019). "U N Brahmachari: Scientific Achievements and Nomination for the Nobel Prize and the Fellowship of the Royal Society of London". Indian Journal of History of Science. 54 (1). doi:10.16943/ijhs/2019/v54i1/49596.
- ↑ Rao, Menaka (27 October 2016). "India has been talking about defeating kala azar since 1947 – and now has a good chance of doing so". Scroll.in.
- ↑ Bublitz, DC; Poché, RM; Garlapati, R (June 2016). "Measures to Control Phlebotomus argentipes and Visceral Leishmaniasis in India". Journal of Arthropod-borne Diseases. 10 (2): 113–26. PMC 4906751. PMID 27308270.
- ↑ Joshi, AB; Banjara, MR; Pokhrel, S; Jimba, M; Singhasivanon, P; Ashford, RW (2006). "Elimination of visceral leishmaniasis in Nepal: pipe-dreams and possibilities". Kathmandu University Medical Journal (KUMJ). 4 (4): 488–96. PMID 18603960.
- ↑ Boettcher, Jan P; Siwakoti, Yubaraj; Milojkovic, Ana; Siddiqui, Niyamat A; Gurung, Chitra K; Rijal, Suman; Das, Pradeep; Kroeger, Axel; Banjara, Megha R (6 February 2015). "Visceral leishmaniasis diagnosis and reporting delays as an obstacle to timely response actions in Nepal and India". BMC Infectious Diseases. 15 (1): 43. doi:10.1186/s12879-015-0767-5. PMC 4335691. PMID 25656298.
{{cite journal}}
: CS1 maint: unflagged free DOI (link) - ↑ Cloots, K; Burza, S; Malaviya, P; Hasker, E; Kansal, S; Mollett, G; Chakravarty, J; Roy, N; Lal, BK (29 January 2020). "Male predominance in reported Visceral Leishmaniasis cases: Nature or nurture? A comparison of population-based with health facility-reported data". PLoS Neglected Tropical Diseases. 14 (1): e0007995. doi:10.1371/journal.pntd.0007995. PMC 7010295. PMID 31995564.
{{cite journal}}
: CS1 maint: unflagged free DOI (link) - ↑ Bhattacharya, S.K.; Sur, Dipika; Karbwang, Juntra (March 2006). "Childhood visceral leishmaniasis" (PDF). Indian Journal of Medical Research (123): 353–356. Archived from the original (PDF) on 2018-11-23. Retrieved 2020-05-23.
- ↑ Bhattacharya, SK; Jha, TK; Sundar, S; Thakur, CP; Engel, J; Sindermann, H; Junge, K; Karbwang, J; Bryceson, AD (15 January 2004). "Efficacy and tolerability of miltefosine for childhood visceral leishmaniasis in India". Clinical Infectious Diseases. 38 (2): 217–21. doi:10.1086/380638. PMID 14699453.
- ↑ Cota, Gláucia F.; de Sousa, Marcos R.; Rabello, Ana; Jaffe, Charles L. (7 June 2011). "Predictors of Visceral Leishmaniasis Relapse in HIV-Infected Patients: A Systematic Review". PLoS Neglected Tropical Diseases. 5 (6): e1153. doi:10.1371/journal.pntd.0001153. PMC 3110161. PMID 21666786.
{{cite journal}}
: CS1 maint: unflagged free DOI (link) - ↑ Singh, Sarman (December 2014). "Changing trends in the epidemiology, clinical presentation, and diagnosis of Leishmania–HIV co-infection in India". International Journal of Infectious Diseases. 29: 103–112. doi:10.1016/j.ijid.2014.07.011. PMID 25449244.
ಹೆಚ್ಚಿನ ಪರಿಗಣನೆ
ಬದಲಾಯಿಸಿ- National Vector Borne Disease Control Programme. "National Kala-azar Elimination Programme". nvbdcp.gov.in. Ministry of Health and Family Welfare.
- Regional Office for South-East Asia (2012), Regional strategic framework for elimination of kala-azar from the South-East Asia Region (2011-2015), New Delhi: World Health Organization, hdl:10665/205826
- National Vector Bourne Disease Control Programme (February 2017), Accelerated Plan for Kala-azar Elimination 2017 (PDF), Ministry of Health and Family Welfare
ಬಾಹ್ಯ ಲಿಂಕ್‌ಗಳು
ಬದಲಾಯಿಸಿ- ಭಾರತದಲ್ಲಿ ಲೀಶ್ಮೇನಿಯಾಸಿಸ್ Archived 2018-09-18 ವೇಬ್ಯಾಕ್ ಮೆಷಿನ್ ನಲ್ಲಿ., ವಿಶ್ವ ಆರೋಗ್ಯ ಸಂಸ್ಥೆಯ ವಿವರ