Sterculia foetida
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮಾಲ್ವೇಲೀಸ್
ಕುಟುಂಬ: ಮಾಲ್ವೇಸೀ
ಕುಲ: ಸ್ಟರ್‌ಕ್ಯೂಲಿಯಾ
ಪ್ರಜಾತಿ:
S. foetida
Binomial name
Sterculia foetida
Synonyms[೧]
  • Clompanus foetida (L.) Kuntze
  • Clompanus foetidus (L.) Kuntze
  • Sterculia mexicana var. guianensis Sagot

ಭಟಲ ಪಿನಾರಿ ಸ್ಟರ್‌ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಸ್ವರ್‌ಕ್ಯೂಲಿಯ ಫೀಟಿಡ ಇದರ ಸಸ್ಯವೈಜ್ಞಾನಿಕ ಹೆಸರು.

ಉಷ್ಣವಲಯದ ಮೂಲನಿವಾಸಿಯಾದ ಇದು ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ, ಮಲಕಾ ದ್ವೀಪಗಳು ಹಾಗೂ ಭಾರತದಲ್ಲಿ ಸಮೃದ್ಧವಾಗಿ ಹರಡಿದೆ.[೨][೩]

ವಿವರ ಬದಲಾಯಿಸಿ

ಇದು 7-15 ಮೀ ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಸಂಯುಕ್ತ ಮಾದರಿಯವು. ಫೆಬ್ರುವರಿ-ಮಾರ್ಚ್ ಹೂಬಿಡುವ ಕಾಲ. ಆಗ ಹೂಗಳಿಂದ ದುರ್ವಾಸನೆ ಹೊರಡುತ್ತದೆ. ಕಾಯಿ ದೋಣಿಯಾಕಾರದ್ದು. ಭಟಲ ಪಿನಾರಿಯ ವೃದ್ಧಿ ಬೀಜದ ಮೂಲಕ.

ಉಪಯೋಗಗಳು ಬದಲಾಯಿಸಿ

ಕ್ಷಾಮಕಾಲದಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವುದಿದೆ. ಬೀಜದಿಂದ ಎಣ್ಣೆಯೂ ಒದಗುತ್ತದೆ. ತೊಗಟೆಯಿಂದ ನಾರನ್ನು ತೆಗೆದು ಹಗ್ಗಗಳನ್ನು ಹೊಸೆಯುವುದುಂಟು. ಚೌಬೀನೆಯಿಂದ ಹಗುರವಾದ ಉಪಕರಣಗಳನ್ನು ತಯಾರಿಸಬಹುದು.

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Sterculia foetida L. — the Plant List". Archived from the original on 2012-11-06. Retrieved 2023-04-19.
  2. "Kalumpang, Sterculia foetida, wild almond, Xiang ping po: Philippine Herbal Medicine / Philippine Alternative Medicine". www.stuartxchange.org. Retrieved 2017-03-10.
  3. "Sterculia foetida L. - Checklist View". Gbif.org. Retrieved 2013-12-10.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: