ಪ್ರಹ್ಲಾದ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಭಕ್ತ ಪ್ರಹ್ಲಾದ (೧೯೪೨) ಇಂದ ಪುನರ್ನಿರ್ದೇಶಿತ)

"ಪ್ರಹ್ಲಾದ" ೧೯೪೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ.[]

ಪ್ರಹ್ಲಾದ (ಚಲನಚಿತ್ರ)
ಭಕ್ತ ಪ್ರಹ್ಲಾದ
ನಿರ್ದೇಶನಕೆ. ಸುಬ್ರ್ಹಮಣ್ಯಂ ಮತ್ತು ಸಿ.ಎಸ್.ವಿ. ಅಯ್ಯರ್
ನಿರ್ಮಾಪಕಕೆ.ಸುಬ್ರ್ಹಮಣ್ಯಂ
ಚಿತ್ರಕಥೆಬೆಳ್ಳಾವೆ ನರಹರಿ ಶಾಸ್ತ್ರಿ
ಕಥೆಪೌರಾಣಿಕ ಕಥೆ
ಸಂಭಾಷಣೆಬೆಳ್ಳಾವೆ ನರಹರಿ ಶಾಸ್ತ್ರಿ
ಪಾತ್ರವರ್ಗಎ.ಎನ್.ಶೇಷಾಚಾರ್ ಎಂ.ವಿ.ರಾಜಮ್ಮ ಚಂದ್ರಮ್ಮ
ಸಂಗೀತಎಲ್.ಮಹೇಶ್ವರ
ಛಾಯಾಗ್ರಹಣಸ್ಟೂಡಿಯೋ ತಂತ್ರಜ್ಞರು
ಸಂಕಲನಸ್ಟೂಡಿಯೋ ತಂತ್ರಜ್ಞರು
ಬಿಡುಗಡೆಯಾಗಿದ್ದು೧೯೪೨
ಚಿತ್ರ ನಿರ್ಮಾಣ ಸಂಸ್ಥೆಕಲೈ ವಾಣಿ ಫಿಲಂಸ್ ಲಿಮಿಟೆಡ್
ಸಾಹಿತ್ಯಬೆಳ್ಳಾವೆ ನರಹರಿ ಶಾಸ್ತ್ರಿ
ಹಿನ್ನೆಲೆ ಗಾಯನಆಯಾ ಪಾತ್ರಧಾರಿಗಳು

ಕಥಾ ಸಾರಾಂಶ

ಬದಲಾಯಿಸಿ

ಹರಿ ಭಕ್ತನಾದ ಪ್ರಹ್ಲಾದ, ಹರಿಯ ಕಡು ವೈರಿಯಾದ ತಂದೆ ಹಿರಣ್ಯಕಶಿಪುವಿನ ನಡುವೆ ಸಂಘರ್ಷ. ಅಂತ್ಯದಲ್ಲಿ ಹರಿಯು ಬಾಲಕನ ಭಕ್ತಿಗೆ ಒಲಿದು ನರಸಿಂಹಾವತಾರದಲ್ಲಿ ಕಂಬದಿಂದ ಸೀಳಿ ಬಂದು ಹಿರಣ್ಯಕಶಿಪುವನ್ನು ಸಂಹರಿಸುವುದೇ ಈ ಚಿತ್ರದ ಕಥಾ ಹಂದರ. ಇದೊಂದು ಪೌರಾಣಿಕ ಕಥೆಯ ಆಧಾರಿತವಾಗಿದೆ.‌

ವಿಶೇಷತೆ

ಬದಲಾಯಿಸಿ

ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಡಾ.ರಾಜ್‌ಕುಮಾರ ತೆರಯಲ್ಲಿ ಕಂಡಿರುವ ಮೊದಲ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಇವರು ತಮ್ಮ ಸಹೋದರ ಎಸ್.ಪಿ.ವರದರಾಜ್‌ ಅವರೊಂದಿಗೆ ಗುರುಕುಲದ ವಿಧ್ಯಾರ್ಥಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಇವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಖಂಡಾಸುರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[]

ನಿರ್ಮಾಣ

ಬದಲಾಯಿಸಿ

ನ್ಯೂಟೋನ್‌ ಹಾಗೂ ನೆಪ್ಚೂನ್‌ ಸ್ಟೂಡಿಯೋ, ಮದರಾಸಿನಲ್ಲಿ ತಯಾರಾದ ಈ ಚಿತ್ರವನ್ನು ಕಲೈವಾಣಿ ಫಿಲಂಸ್‌ ಲಾಂಛನದಲ್ಲಿ ಕೆ.ಸುಬ್ರ್ಹಮಣ್ಯಂ ನಿರ್ಮಿಸಿದರು. ಚಲನಚಿತ್ರ ಸೆನ್ಸಾರ್‌ ಆದ ಬಳಿಕ ೧೧,೦೦೦ ಅಡಿಗಳಷ್ಟು ಉದ್ದವಿತ್ತು.

ಉಲ್ಲೇಖ

ಬದಲಾಯಿಸಿ
  1. "Bhakta Prahlada". chiloka.com. Retrieved 2015-02-09.
  2. "'ಬೇಡರ ಕಣ್ಣಪ್ಪ' ಚಿತ್ರಕ್ಕೂ ಮೊದಲು ಡಾ. ರಾಜ್‌ ನಟಿಸಿದ್ದ ಆ ಎರಡು ಸಿನಿಮಾಗಳು ಯಾವುವು?" [Before 'Bedara Kannappa' What were those two movies that Dr. Raj starred in?] (in Kannada). 5 May 2020. Archived from the original on 15 September 2020. Retrieved 12 April 2021.{{cite web}}: CS1 maint: unrecognized language (link)