ಬ್ರೂಸ್ ಲೀ
ಬ್ರೂಸ್ ಲೀಯವರು (ಜುನ್ ಫಾನ್, 李振藩, 李小龍; ಪಿನ್‌ಯಿನ್: ಲಿ ಝೆನ್‌ಫಾನ್, ಲಿ ಕ್ಸಿಯೊಲಾಂಗ್; 27 ನವೆಂಬರ್ 1940 – 20 ಜುಲೈ 1973) ಅಮೆರಿಕಾದಲ್ಲಿ ಜನಿಸಿದ ಚೀನಾದ ಹಾಂಗ್ ಕಾಂಗ್‌ನಲ್ಲಿರುವ ನಟ, ಸಮರ ಕಲಾ ನಿಪುಣ, ತತ್ವಜ್ಞಾನಿ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ವಿಂಗ್ ಚುನ್ ವೃತ್ತಿಗಾರ ಮತ್ತು ಜೀತ್ ಕುನೆ ಡೊ ಎಂಬ ಕಲ್ಪನೆಯ ಸ್ಥಾಪಕರಾಗಿದ್ದಾರೆ. ಹಲವರು ಅವರನ್ನು 20ನೇ ಶತಮಾನದ ಹೆಚ್ಚು ವರ್ಚಸ್ಸುಳ್ಳ ಸಮರ ಕಲಾ ನಿಪುಣ ಮತ್ತು ಸಾಂಸ್ಕೃತಿಕ ಮುತ್ಸದ್ಧಿ ಎಂದೇ ಪರಿಗಣಿಸಿದ್ದಾರೆ.[೨] ನಟ ಬ್ರ್ಯಾಂಡನ್ ಲೀ ಮತ್ತು ನಟಿ ಶಾನನ್ ಲೀ ಇವರ ಮಕ್ಕಳು. ಸಂಗೀತಗಾರರು ಮತ್ತು ಹಾಂಗ್ ಕಾಂಗ್‌ನ ಥಂಡರ್‌ಬರ್ಡ್ಸ್ ಎನ್ನುವ ಜನಪ್ರಿಯ ಸಂಗೀತ ತಂಡದ ಸದಸ್ಯರಾದ ರಾಬರ್ಟ್ ಇವರ ತಮ್ಮ.[೩]
Bruce Lee | ||||||||||
---|---|---|---|---|---|---|---|---|---|---|
Bruce Lee | ||||||||||
Chinese name | 李小龍 (Traditional) | |||||||||
Chinese name | 李小龙 (Simplified) | |||||||||
Pinyin | Lǐ Xiǎolóng (Mandarin) | |||||||||
Jyutping | lei5 siu2 lung4 (Cantonese) | |||||||||
Birth name | Lee Jun-fan 李振藩 (Traditional) 李振藩 (Simplified) Lǐ Zhènfān (Mandarin) lei5 zan3 faan4 (Cantonese) | |||||||||
Ancestry | Shunde, Guangdong, China | |||||||||
Origin | Hong Kong | |||||||||
Born | San Francisco, California, USA | ೨೭ ನವೆಂಬರ್ ೧೯೪೦|||||||||
Died | 20 July 1973 Hong Kong | (aged 32)|||||||||
Years active | 1941–1973 | |||||||||
Spouse(s) | Linda Emery (born 1945) (1964-1973) | |||||||||
Children | Brandon Lee (1965–1993) Shannon Lee (born 1969) | |||||||||
Official Website | Bruce Lee Foundation The Official Website of Bruce Lee | |||||||||
|
ಲೀಯವರು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರ್ಯಾನ್ಸಿಸ್ಕೊದಲ್ಲಿ ಹುಟ್ಟಿ, ಹದಿಹರೆಯದವರೆಗೆ ಹಾಂಗ್ ಕಾಂಗ್‌ನಲ್ಲಿ ಬೆಳೆದರು. ಅವರ ನಿರ್ಮಾಣದ ಹಾಂಗ್ ಕಾಂಗ್ ಮತ್ತು ಹಾಲಿವುಡ್ ಚಿತ್ರಗಳು ಸಾಂಪ್ರದಾಯಿಕ ಹಾಂಗ್ ಕಾಂಗ್ ಸಮರ ಕಲೆಗಳ ಚಿತ್ರವನ್ನು ಜನಪ್ರಿಯತೆ ಮತ್ತು ಪ್ರಶಂಸೆಗಳ ಹೊಸ ಮಟ್ಟಕ್ಕೇರಿಸಿದವು ಮತ್ತು ಈ ಚಿತ್ರಗಳಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಚೀನಾದ ಸಮರ ಕಲೆಗಳ ಕುರಿತಾಗಿರುವ ಆಸಕ್ತಿಯಲ್ಲಿ ಎರಡನೇ ಭಾರಿ ಏರಿಕೆ ಕಂಡಿತು. ಅವರ ಚಿತ್ರಗಳ ನಿರ್ದೇಶನ ಮತ್ತು ಸ್ವರೂಪವು ಹಾಂಗ್ ಕಾಂಗ್ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಅವರ ಪ್ರಭಾವಕ್ಕೆ ಸಮರ ಕಲೆಗಳು ಮತ್ತು ಸಮರ ಕಲೆಗಳ ಚಿತ್ರಗಳ ನಿರ್ದೇಶನ ಮತ್ತು ಸ್ವರೂಪವು ಬದಲಾಯಿತು. ಲೊ ವೇರವರ ದ ಬಿಗ್ ಬಾಸ್ (1971), ಫಿಸ್ಟ್ ಆಫ್ ಫ್ಯೂರಿ (1972); ಬ್ರೂಸ್ ಲೀಯವರೇ ಬರೆದು ನಿರ್ದೇಶಿಸಿದ ವೇ ಆಫ್ ದ ಡ್ರ್ಯಾಗನ್ (1972); ರಾಬರ್ಟ್ ಕ್ಲೌಸ್‌ರವರು ನಿರ್ದೇಶಿಸಿದ ವಾರ್ನರ್ ಬ್ರದರ್'ಸ್ ಎಂಟರ್ ದ ಡ್ರ್ಯಾಗನ್ (1973) ಮತ್ತು ದ ಗೇಮ್ ಆಫ್ ಡೆತ್ (1978) ಈ ಐದು ಚಿತ್ರಗಳಲ್ಲಿ ಬ್ರೂಸ್ ಲೀಯವರ ಪಾತ್ರಗಳು ಪ್ರಮುಖವಾಗಿ ಗುರುತಿಸಲ್ಪಟ್ಟಿದೆ.
ಲೀಯವರು ತನ್ನ ಚಿತ್ರಗಳಲ್ಲಿ ಚೀನಾದ ಹಿರಿಮೆ ಮತ್ತು ಚೀನಾದ ರಾಷ್ಟ್ರೀಯತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದರಿಂದ ಅವರು ಜಗತ್ತಿನಾದ್ಯಂತ, ವಿಶೇಷವಾಗಿ ಚೀನಾದಲ್ಲಿ ಅಪ್ರತಿಮ ವ್ಯಕ್ತಿಯಾದರು.[೪] ಲೀಯವರು ಮೊದಲು ಚೀನಾದ ಸಮರ ಕಲೆಗಳನ್ನು, (ಜನಪ್ರಿಯ ಪಾಶ್ಚಿಮಾತ್ಯ ಪ್ರಕಾರದಲ್ಲಿ "ಕುಂಗ್ ಫೂ " ) [೫] ಅದರಲ್ಲೂ ವಿಶೇಷವಾಗಿ ವಿಂಗ್ ಚುನ್‌ನ್ನು ಅಭ್ಯಾಸ ನಡೆಸಿದರು.
ಆರಂಭಿಕ ಜೀವನ
ಬದಲಾಯಿಸಿಬ್ರೂಸ್ ಲೀ ಚೀನಾದ ರಾಶಿಚಕ್ರ ಕ್ಯಾಲೆಂಡರ್‌ನ ಪ್ರಕಾರ ಡ್ರ್ಯಾಗನ್ ವರ್ಷವಾಗಿರುವ 27 ನವೆಂಬರ್ 1940ರಲ್ಲಿ ಸ್ಯಾನ್ ಫ್ರ್ಯಾನ್ಸಿಸ್ಕೊದ ಚೈನಾಟೌನ್‌ನಲ್ಲಿರುವ ಚೀನೀ ಆಸ್ಪತ್ರೆಯಲ್ಲಿ ಜನಿಸಿದರು.[೬] ಅವರ ತಂದೆ ಲೀ ಹೊಯಿ-ಚುಯೆನ್ (李海泉) ಚೀನಾ ಮೂಲದವರು ಮತ್ತು ಅವರ ಕ್ಯಾಥೋಲಿಕ್ ತಾಯಿ ಗ್ರೇಸ್ ಹೊ (何愛瑜) ಚೀನಾದ ಪ್ರಜೆಯಾಗಿದ್ದು, ಜರ್ಮನ್ ಮೂಲಕ್ಕೆ ಸೇರಿದವರು.[೭][೮][೯][೧೦][೧೧][೧೨] ಲೀ ಮೂರು ತಿಂಗಳು ಮಗುವಾಗಿದ್ದಾಗ, ಅವರು ಮತ್ತು ಅವರ ಹೆತ್ತವರು ಹಾಂಗ್ ಕಾಂಗ್‌ಗೆ ಮರಳಿದರು.[೧೩][೧೪] ಅವರ ಪೌರತ್ವದ ಬಗ್ಗೆ ಯಾವುದೇ ನಿಶ್ಚಿತತೆ ಇಲ್ಲ; ಅವರು HK ಪೌರತ್ವ, US ಪೌರತ್ವ ಎರಡನ್ನೂ ಹೊಂದಿದ್ದರು ಮತ್ತು ಅವರು ಚೀನಾದ ಪ್ರಜೆಯು ಕೂಡ ಆಗಿರಬಹುದು.
ಆ ಸಮಯದಲ್ಲಿ ಲೀ ಹೂಯಿ ಚುಯಿನ್‌ರವರು ಪ್ರಮುಖ ಕ್ಯಾಂಟನೀಯ ಒಪೆರಾ ಮತ್ತು ಚಿತ್ರ ನಟರಲ್ಲಿ ಒಬ್ಬರಾಗಿದ್ದರು ಮತ್ತು ಅವರು ತನ್ನ ಕುಟುಂಬದೊಂದಿಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ಹಾಂಗ್ ಕಾಂಗ್‌ನ ಜಪಾನಿನ ಆಕ್ರಮಣ ಆಗುವುದಕ್ಕೆ ಮುಂಚೆ US ಚೀನಾ ಸಮುದಾಯಗಳಲ್ಲಿ ಕ್ಯಾಂಟನೀಯ ಒಪೆರಾವನ್ನು ಪ್ರದರ್ಶಿಸಲು ವರ್ಷಗಟ್ಟಲೆ ಕಾಲ ಪ್ರವಾಸವನ್ನು ಮಾಡಿದರು. ಆ ಸಮಯದಲ್ಲಿ ಪ್ರವಾಸೀ ಕಾರ್ಯಕ್ರಮವು ತುಂಬಾ ಲಾಭದಾಯಕವಾದ್ದರಿಂದ ಲೀ ನಂತರದ ಹಲವು ವರ್ಷಗಳು ಯುನೈಟೆಡ್ ಸ್ಟೇಟ್ಸ್ ಪ್ರವಾಸಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ ಅವರ ಹೆಚ್ಚಿನ ಸ್ನೇಹಿತರು ಬಿರುಗಾಳಿಯಿಂದ ರಕ್ಷಿಸಿಕೊಳ್ಳಲು USನಲ್ಲಿಯೇ ಇರಲು ನಿರ್ಧರಿಸಿದರು, ಆದರೆ ಲೀ ತನ್ನ ಪತ್ನಿ ನಾಲ್ಕನೇ ಮಗುವಿಗೆ ಜನ್ಮ ನೀಡಿರುವುದು, ಭಾಗಶಃ ಮನೆಗೀಳು ಮತ್ತು ಭಾಗಶಃ ತನ್ನ ತಪ್ಪು ಲೆಕ್ಕಾಚಾರದಿಂದ ಹಾಂಗ್ ಕಾಂಗ್‌ಗೆ ಮರಳಲು ನಿರ್ಧರಿಸಿದನು. ಕೆಲವೇ ತಿಂಗಳುಗಳಲ್ಲಿ ಹಾಂಗ್ ಕಾಂಗ್ ದಾಳಿಗೆ ಒಳಗಾಯಿತು (ಪರ್ಲ್ ಬಂದರು ದಾಳಿಯ ಸಮಯದಲ್ಲಿ) ಮತ್ತು ನಂತರ ಲೀ ಕುಟುಂಬ ನಿರ್ದಯ ಜಪಾನಿನ ಸ್ವಾಧೀನದಡಿಯಲ್ಲಿ 3 ವರ್ಷ 8 ತಿಂಗಳುಗಳು ಬದುಕಿದರು. ಯುದ್ಧದ ಸಮಯದಲ್ಲಿ ಲೀ ಕುಟುಂಬವು ಬದುಕುಳಿಯಲು ಮಾಡಿದ ಪ್ರಯತ್ನವು ಉತ್ತಮವಾಗಿತ್ತು. ಲೀ ಹೊಯಿ ಚುಯೆನ್ ತನ್ನ ನಟನೆ ವೃತ್ತಿಯನ್ನು ಪುನರಾರಂಭಿಸಿದರು ಮತ್ತು ಪುನರ್ನಿರ್ಮಾಣದ ನಂತರದ ವರ್ಷಗಳಲ್ಲಿ ಅವರು ದೊಡ್ಡ ತಾರೆಯಾದರು.
ಬ್ರೂಸ್ ಲೀಯವರ ತಾಯಿ ಗ್ರೇಸ್‌ರವರು ಸಹ ಪ್ರಭಾವಶಾಲಿ ಹಿನ್ನೆಲೆಯಿಂದ ಬಂದಿದ್ದರು. ಅವರು ಹಾಂಗ್ ಕಾಂಗ್‌ನ ಶ್ರೀಮಂತ ಮತ್ತು ಪ್ರಭಾವಿಯುತ ಮನೆತನವಾದ ರಾಕ್‌ಫೆಲ್ಲರ್ಸ್ ಮತ್ತು ಕೆನಡಿಸ್ ಮನೆತನಗಳಿಗೆ ಹಾಂಗ್ ಕಾಂಗ್‌ನಲ್ಲಿ ಸಮಾನವಾದ ಹೊ ತುಂಗ್ಸ್ ಮನೆತನಕ್ಕೆ ಸೇರಿದವರು. ಅವರು ಕುಟುಂಬದ ಹಿರಿಯ ಸರ್ ರಾಬರ್ಟ್ ಹೊ ತುಂಗ್‌ರವರ ಸೋದರ ಸೊಸೆಯಾಗಿದ್ದರು. ಆದ್ದರಿಂದ ಯುವ ಬ್ರೂಸ್ ಲೀ ಸಮೃದ್ಧ ಮತ್ತು ವಿಶೇಷ ಪರಿಸರದಲ್ಲಿ ಬೆಳೆದನು.
ಶಿಕ್ಷಣ ಮತ್ತು ಕುಟುಂಬ
ಬದಲಾಯಿಸಿಮನೆಯಿಂದ ಎರಡು ಬ್ಲಾಕ್ ನಂತರವಿರುವ 218 ನಥಾನ್ ರಸ್ತೆ, ಕೊವ್ಲೂನ್‌ನಲ್ಲಿರುವ ಟಕ್ ಸುನ್ ಶಾಲೆಯಲ್ಲಿ (德信學校) ಓದಿದ ನಂತರ 1950 ಅಥವಾ 1952ರಲ್ಲಿ ಲೀ (12ನೇ ವರ್ಷದಲ್ಲಿ) ಪ್ರತಿಷ್ಠೆಯ ಲಾ ಸಾಲ್ಲೆ ಕಾಲೇಜ್‌ನಲ್ಲಿ (喇沙書院) ಪ್ರಾಥಮಿಕ ಶಾಲಾ ವಿಭಾಗಕ್ಕೆ ಸೇರಿದನು. 1956ರ ಹೊತ್ತಿಗೆ ಶೈಕ್ಷಣಿಕ ಸಾಧನೆ ಕಳಪೆಯಾಗಿದ್ದರಿಂದ (ಮತ್ತು/ಅಥವಾ ಬಹುಶಃ ಕಳಪೆ ನಡತೆಯಿಂದ), ಕ್ಯಾಥೋಲಿಕ್ ಗುರು (ಜರ್ಮನಿ ಮೂಲದಿಂದ ಬಂದಿದ್ದ ಇವರು ಪೂರ್ಣ ವಯಸ್ಕ ಜೀವನವನ್ನು ಚೀನಾ, ನಂತರ ಹಾಂಗ್ ಕಾಂಗ್‌ನಲ್ಲಿ ಕಳೆದರು), ಶಿಕ್ಷಕ, ಮತ್ತು ಶಾಲೆಯ ಮುಷ್ಟಿಯುದ್ಧ ತಂಡದ ತರಬೇತುದಾರರಾಗಿದ್ದ ಅವರ ಸೋದರ ಎಡ್ವರ್ಡ್‌ರ ಸಲಹೆ ಸೂಚನೆಗಳನ್ನು ಪಾಲಿಸಲು ಅನುವಾಗುವಂತೆ ಅವರು St. ಫ್ರಾನ್ಸಿಸ್ ಕ್ಸೇವಿಯರ್'ಸ್ ಕಾಲೇಜ್‌ಗೆ (聖芳濟書院)(ಪ್ರೌಢ ಶಾಲೆ) ವರ್ಗಾವಣೆಯಾದರು. 1959ರ ವಸಂತ ಕಾಲದಲ್ಲಿ ಲೀಯವರು ಇನ್ನೊಮ್ಮೆ ಹಾದಿಜಗಳದಲ್ಲಿ ಪಾಲ್ಗೊಂಡ ಕಾರಣ ಪೋಲಿಸರು ಅವನನ್ನು ಠಾಣೆಗೆ ಕರೆಸಿದ್ದರು.[೧೫] ಈ ಬಾರಿ ಬ್ರೂಸ್ ಲೀಯೊಂದಿಗೆ ಹೋರಾಡಿದ ವ್ಯಕ್ತಿಯು ಅಪರಾಧದ ಹಿನ್ನೆಲೆಯನ್ನು ಹೊಂದಿರುವುದನ್ನು ಪೋಲಿಸರಿಂದ ದೃಢಪಟ್ಟಿರುವುದರಿಂದ ಇವರ ಜೀವಕ್ಕೆ ತೊಂದರೆಯಾಗಬಹುದೆಂದು ಭಾವಿಸಿ, ಅವರ ಹೆತ್ತವರು 1959ರ ಏಪ್ರಿಲ್‌ನಲ್ಲಿ ಅವನನ್ನು ಈಗಾಗಲೇ ಕುಟುಂಬದ ಸ್ನೇಹಿತರೊಂದಿಗೆ ಸ್ಯಾನ್ ಫ್ರ್ಯಾನ್ಸಿಸ್ಕೊನಲ್ಲಿ ವಾಸಿಸುತ್ತಿರುವ ಆತನ ಅಕ್ಕ ಆಗ್ನೇಸ್ (李秋鳳)ಳನ್ನು ಭೇಟಿ ಮಾಡಲು ಯುನೈಟೆಡ್ ಸ್ಟೇಟ್ಸ್‌ಗೆ ಕಳುಹಿಸಿದರು.
ಲೀ ತನ್ನ ವಯಸ್ಸು 18 ವರ್ಷ ಮತ್ತು ಆರು ತಿಂಗಳು ಇರುವಾಗ U.Sನಲ್ಲಿ ಹುಟ್ಟಿದ ನಂತರ ಮೊದಲ ಬಾರಿ ಪೌರತ್ವವನ್ನು ಕೋರಿ ಅಲ್ಲಿಗೆ ತನ್ನ ಬಳಿ ಇದ್ದ $100 ಮತ್ತು 1957ರ ಪ್ರೌಢ ಶಾಲೆ ಮುಷ್ಟಿಯುದ್ಧ ಚಾಂಪಿಯನ್ ಪ್ರಶಸ್ತಿ ಮತ್ತು ಹಾಂಗ್ ಕಾಂಗ್‌ನ[೬] 1958ರ ಕ್ರೌನ್ ಕಾಲೊನಿ ಛಾ ಛಾ ಚಾಂಪಿಯನ್ (ಅಥವಾ ಎರಡನೇ ಸ್ಥಾನ) ಪ್ರಶಸ್ತಿಗಳೊಂದಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಮರಳಿದನು. ಸ್ಯಾನ್ ಫ್ರ್ಯಾನ್ಸಿಸ್ಕೊನಲ್ಲಿ ಹಲವು ತಿಂಗಳಿದ್ದ ನಂತರ, ಅದೇ ವರ್ಷದ ಕೊನೆಯಲ್ಲಿ (1959) ಪ್ರೌಢ ಶಾಲಾ ಶಿಕ್ಷಣವನ್ನು ಮುಂದುವರಿಸಲು ಮತ್ತು ರೂಬಿ ಚೌರವರ ರೆಸ್ಟಾರೆಂಟ್‌ನಲ್ಲಿ ಪರಿಚಾರಕನಾಗಿ ಕೆಲಸಮಾಡುವುದಕ್ಕಾಗಿ ಬ್ರೂಸ್ ಲೀ ಸಿಯಾಟಲ್‌ಗೆ ಸ್ಥಳಾಂತರಗೊಂಡನು. ರೂಬಿಯವರ ಪತಿಯವರು ಲೀ ತಂದೆಯ ಸಹೋದ್ಯೋಗಿ ಮತ್ತು ಸ್ನೇಹಿತರಾಗಿದ್ದರು. ಬ್ರೂಸ್ ಲೀ ಕಾಲೇಜು ಸೇರುವುದಕ್ಕಾಗಿ ಮಿನ್ನೆಸೊಟಾಗೆ ಸ್ಥಳಾಂತರಗೊಳ್ಳುವ ಮೊದಲು ಅಣ್ಣ ಪೀಟರ್ (李忠琛) ಸಿಯಾಟಲ್‌ನಲ್ಲಿ ಲೀಯವರ ಜೊತೆಗೆ ಸ್ವಲ್ಪ ಸಮಯ ಇದ್ದರು. ಡಿಸೆಂಬರ್ 1960ರಲ್ಲಿ ಲೀ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದರು ಮತ್ತು ಎಡಿಸನ್ ತಾಂತ್ರಿಕ ಶಾಲೆಯಿಂದ ತನ್ನ ಡಿಪ್ಲೊಮಾವನ್ನು ಪಡೆದರು (ಈಗ ಸಿಯಾಟಲ್‌ನ ಕ್ಯಾಪಿಟೊಲ್ ಹಿಲ್‌ನಲ್ಲಿರುವ ಸಿಯಾಟಲ್ ಸೆಂಟ್ರಲ್ ಕಮ್ಯುನಿಟಿ ಕಾಲೇಜ್). ನಂತರ 1961 ಮಾರ್ಚ್‌ನಲ್ಲಿ ಅವರು ನಾಟಕ ವಿಷಯವನ್ನು ಪ್ರಧಾನವಾಗಿ ತೆಗೆದುಕೊಂಡು ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ನೋಂದಾಯಿಸಿಕೊಂಡರು (UWನ ಹಳೆ ವಿದ್ಯಾರ್ಥಿ ಸಂಘದ ಮಾಹಿತಿ[೧೬] ಪ್ರಕಾರ,ಬ್ರೂಸ್ ಲೀ ಮತ್ತು ಹಲವರು ಹೇಳಿಕೊಂಡ ಹಾಗೆ ತತ್ವಶಾಸ್ತ್ರ ತೆಗೆದುಕೊಂಡಿರಲಿಲ್ಲ) ಮತ್ತು ತತ್ವಶಾಸ್ತ್ರ, ಮನಶ್ಶಾಸ್ತ್ರ ಮತ್ತು ಇತರ ವಿಷಯಗಳನ್ನು ಕಲಿತಿರುವ ಸಾಧ್ಯತೆಗಳಿವೆ.[೧೭][೧೮][೧೯] ಲೀಯವರು ತನ್ನಭಾವಿ ಪತ್ನಿಯಾದ ಲಿಂಡಾ ಎಮರಿಯವರನ್ನು ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ಭೇಟಿಯಾಗಿದ್ದರು. ಲಿಂಡಾರವರನ್ನು ಅವರು 1964ರ ಆಗಸ್ಟ್‌ನಲ್ಲಿ ಮದುವೆಯಾದರು.
ಬ್ರೂಸ್ ಲೀ 1964ರ ವಸಂತಕಾಲದಲ್ಲಿ ತನ್ನ ವಿಶ್ವವಿದ್ಯಾಲಯ ಶಿಕ್ಷಣವನ್ನು (3 ವರ್ಷಗಳು ಓದಿದರೂ ಪದವಿ ಪಡೆಯಲಿಲ್ಲ) ತೊರೆದರು ಮತ್ತು ಆಕ್‌ಲೆಂಡ್‌ಗೆ ಸ್ಥಳಾಂತರಗೊಂಡು ಜೇಮ್ಸ್ ಯಿಮ್ ಲೀ ಜೊತೆಗಿದ್ದರು (嚴鏡海, ಜೇಮ್ಸ್ ಯಿಮ್ ಲೀಗೂ ಬ್ರೂಸ್ ಲೀಗೆ ಯಾವುದೇ ಸಂಬಂಧವಿರಲಿಲ್ಲ ಮತ್ತು ನಿಜವಾಗಲೂ ಆತನ ಚೀನಾದ ಕುಲನಾಮ "ಯಿಮ್". ಜೇಮ್ಸ್‌ನ ತಂದೆ ಮೊದಲು USಗೆ ವಲಸೆ ಬಂದಾಗ ವಲಸೆ ಅಧಿಕಾರಿಗಳಿಂದ ಈ ತಪ್ಪಾಗಿತ್ತು). ಅವರು ಬ್ರೂಸ್ ಲೀಗಿಂತ ಇಪ್ಪತ್ತು ವರ್ಷ ಹಿರಿಯರು ಮತ್ತು ಕೊಲ್ಲಿ ಪ್ರದೇಶದಲ್ಲಿ ಪ್ರಸಿದ್ಧ ಚೀನಾದ ಸಮರ ಕಲಾ ನಿಪುಣನಾಗಿದ್ದರು. ಜೇಮ್ಸ್ ಲೀ ಮತ್ತು ಬ್ರೂಸ್ ಲೀ ಜೊತೆಗೂಡಿ ಆಕ್‌ಲೆಂಡ್‌ನಲ್ಲಿ ಎರಡನೇ ಜುನ್ ಫಾನ್ ಸಮರ ಕಲೆ ಸ್ಟುಡಿಯೊವನ್ನು ಸ್ಥಾಪಿಸಿದರು (ಮೊದಲನೆಯದ್ದು ಸಿಯಾಟಲ್‌ನಲ್ಲಿದೆ). US ಸಮರ ಕಲೆ ಪ್ರಪಂಚದ ಪ್ರತಿನಿಧಿ ಮತ್ತು ನಂತರ ಹಾಲಿವುಡ್‌ಗಾಗಿ ಬ್ರೂಸ್ ಲೀಯನ್ನು ಅನ್ವೇಷಿಸಿದವರಾದ, (ಲಾಂಗ್ ಬೀಚ್ ) ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಗಳ ಸಂಘಟಕರಾಗಿರುವ ಎಡ್ ಪಾರ್ಕರ್‌ಗೆ ಬ್ರೂಸ್ ಲೀಯನ್ನು ಪರಿಚಯಿಸುವುದರಲ್ಲಿ ಜೇಮ್ಸ್ ಲೀಯ ಪಾತ್ರವಿದೆ.
ಬ್ರೂಸ್ ಲೀ ಮತ್ತು ಲಿಂಡಾರಿಗೆ ಬ್ರ್ಯಾಂಡನ್ ಲೀ (1965–1993) ಮತ್ತು ಶಾನನ್ ಲೀ (1969–) ಎಂಬ ಇಬ್ಬರು ಮಕ್ಕಳಿದ್ದರು. ತಂದೆಯಂತೆ ನಟನಾಗಿರುವ ಬ್ರ್ಯಾಂಡನ್ 1993ರಲ್ಲಿ ದ ಕ್ರೋವ್ ಚಿತ್ರವನ್ನು ಮಾಡುತ್ತಿರುವಾಗ ಆಕಸ್ಮಿಕವಾಗಿ ಮರಣ ಹೊಂದಿದರು. ಶಾನನ್ ಲೀ ಸಹ ಚಿತ್ರನಟಿಯಾದರು ಮತ್ತು 1990ರ ಮಧ್ಯಭಾಗದಲ್ಲಿ ಕೆಲವು ಕಡಿಮೆ ಬಜೆಟ್‌ನ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದ್ದರು. ಆದರೆ ಅದರ ತರುವಾಯ ಅವರು ನಟಿಸುವುದನ್ನು ತ್ಯಜಿಸಿದರು.
ಹೆಸರುಗಳು
ಬದಲಾಯಿಸಿThis article contains Chinese text. Without proper rendering support, you may see question marks, boxes, or other symbols instead of Chinese characters. |
ಬ್ರೂಸ್ ಲೀಗೆ ಲೀ ಜುನ್ ಫಾನ್ (振藩; ಮ್ಯಾಡರಿನ್ ಪಿನ್‌ಯಿನ್: ಝೆನ್‌ಫಾನ್) ಎಂಬ ಕ್ಯಾಂಟನೀಯ ಹೆಸರಿದೆ.[೨೦] ಲೀ ಹುಟ್ಟುವಾಗ ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಮೇರಿ ಗ್ಲೋವರ್ ಇಂಗ್ಲೀಷ್ ಹೆಸರಾದ "ಬ್ರೂಸ್"ನ್ನು ಅವರಿಗೆ ಇಟ್ಟಿರಬಹುದೆಂದು ಭಾವಿಸಲಾಗಿದೆ (ಅಥವಾ ಕೆಲವರು ಈ ಹೆಸರನ್ನು ದಾದಿಯೊಬ್ಬರು ಇಟ್ಟಿದ್ದು ಎಂದು ಹೇಳುತ್ತಾರೆ). ಅವರ ತಾಯಿ ಪ್ರಾರಂಭದಲ್ಲಿ ಇಂಗ್ಲೀಷ್ ಹೆಸರಿನ ಬಗ್ಗೆ ಯೋಚಿಸದ ಕಾರಣ, ಡಾ. ಗ್ಲೋವರ್‌ರವರು ಇಟ್ಟ ಹೆಸರೇ ಸರಿಯಾದುದೆಂದು ಭಾವಿಸಿ, ಅದನ್ನೇ ನಂತರ ಇಂಗ್ಲೀಷ್ ಹೆಸರಾಗಿ ಕರೆಯಲಾಯಿತು.[೨೧] ಆದರೂ ಅವನು 10 ಅಥವಾ 12 ವರ್ಷದಲ್ಲಿ ಲಾ ಸಾಲ್ಲೆ ಕಾಲೇಜ್‌ನಲ್ಲಿ (ಹಾಂಗ್ ಕಾಂಗ್ ಪ್ರೌಢ ಶಾಲೆ) ಪ್ರಾಥಮಿಕ ಶಾಲಾ ವಿಭಾಗಕ್ಕೆ ದಾಖಲಾಗುವವರೆಗೆ ಆತನ ಕುಟುಂಬದಲ್ಲಿ ಆತನ ಅಮೆರಿಕನ್ ಹೆಸರನ್ನು ಬಳಸುತ್ತಿರಲಿಲ್ಲ[೨೦] ಮತ್ತು ನಂತರ ಇನ್ನೊಂದು ಪ್ರೌಢ ಶಾಲೆಯಾದ (ಕೊವ್ಲೂನ್‌ನಲ್ಲಿರುವ St. ಫ್ರಾನ್ಸಿಸ್ ಕ್ಸೆವಿಯರ್‌ರವರ ಕಾಲೇಜ್) ಅಂತರ್ ಶಾಲಾ ಪಂದ್ಯಾಟದಲ್ಲಿ ಲೀ ಮುಷ್ಟಿಯುದ್ಧ ತಂಡವನ್ನು ಪ್ರತಿನಿಧಿಸಿದ್ದನು.
ಬ್ರೂಸ್ ಲೀ ಈ ಮುಂದಿನ ಮೂರು ಚೀನೀ ಹೆಸರುಗಳನ್ನು ಸಹ ಹೊಂದಿದ್ದನು: ಲಿ ಯಾನ್-ಕ್ಸಿನ್ [೪] [李源鑫; ಮ್ಯಾಂಡರಿನ್ ಪಿನ್‌ಯಿನ್: ಲಿ ಯುಯಾನ್-ಕ್ಸಿನ್, ಕುಟುಂಬ/ಮನೆತನದ ಹೆಸರಿನಂತೆ (族名)], ಲಿ ಯೇನ್ ಕಾಮ್ [李元鑒; ಮ್ಯಾಂಡರಿನ್ ಪಿನ್‌ಯಿನ್: ಲಿ ಯುಯಾನ್-ಜಿಯಾನ್, (學名) ಲಾ ಸಲ್ಲೆ ಕಾಲೇಜ್‌ನಲ್ಲಿರುವಾಗ ವಿದ್ಯಾರ್ಥಿಯ ಹೆಸರಾಗಿ], ಮತ್ತು ಅವರ ಚೀನೀ ವೇದಿಕೆ ಹೆಸರು 李小龍 [ಕ್ಯಾಂಟನೀಯ ಪೆನ್‌ಗ್ಯಾಮ್: ಲೇ5 ಸಿಯು² ಲಾಂಗ್4 (ಅಥವಾ ಲೀ ಸಿಯು ಲೂಂಗ್); ಮ್ಯಾಂಡರಿನ್ ಪಿನ್‌ಯಿನ್: ಲಿ ಕ್ಸಿಯೊಲಾಂಗ್]. ಜುನ್ ಫಾನ್ ಹೆಸರನ್ನು ಮೂಲವಾಗಿ ಚೈನೀಸ್ ಭಾಷೆಯಲ್ಲಿ 震藩ನಂತೆ ಬರೆಯಲಾಗುತ್ತದೆ ಆದರೆ ಈ ಜುನ್ (震) ಹೆಸರನ್ನು ಅಜ್ಜನ ಹೆಸರಿನ ಭಾಗವಾಗಿರುವ ಈ ಹೆಸರನ್ನು ಚೀನಾ ಸಂಪ್ರದಾಯದಲ್ಲಿ ನಿಷಿದ್ಧ ವಸ್ತು ಯಾ ವ್ಯಕ್ತಿ ಎಂಬರ್ಥದಲ್ಲಿ ಪರಿಗಣಿಸಲಾಗಿದೆ. ಆದ್ದರಿಂದ, ಬ್ರೂಸ್ ಲೀ ತನ್ನ ಹೆಸರನ್ನು 震 ನೊಂದಿಗೆ ಅದೇ ಉಚ್ಚಾರ ಮತ್ತು ವಾಸ್ತವಿಕವಾಗಿ ಅದೇ ಅರ್ಥವನ್ನು ನೀಡುವ 振 ಕ್ಕೆ ಬದಲಾಯಿಸಿದರು. ಸಾಂಪ್ರದಾಯಿಕವಾಗಿ ದುಷ್ಟಶಕ್ತಿಗಳಿಂದ ಗಂಡು ಮಕ್ಕಳನ್ನು ರಕ್ಷಿಸಲು ಅವರಿಗೆ ಮಾತೃಮೂಲದ ಅಡ್ಡಹೆಸರನ್ನಿಡುವುದು ಚೀನಾದ ರೂಢಿ. ಹಾಗೆಯೇ ಬ್ರೂಸ್ ಲೀಯ ಬಾಲ್ಯದಲ್ಲಿ ಮಾತೃಮೂಲದ ಅಡ್ಡಹೆಸರು ಸಾಯಿ ಫುಂಗ್ (細鳳, ಅದರರ್ಥ "ಚಿಕ್ಕ ಫೀನಿಕ್ಸ್") ಆಗಿತ್ತು ಎನ್ನುವುದನ್ನು ಸಹ ಗಮನಿಸಬೇಕು. ಲಿಂಡಾ ಲೀಯವರ ಪುಸ್ತಕಗಳಲ್ಲಿ, ಜುನ್ ಫಾನ್ ಅಂದರೆ "ಮರಳುವುದು" (U.S.ಗೆ ಮರಳುವುದು) ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ ಜುನ್ (振) ಎಂಬುವುದರ ನಿಜವಾದ ಅರ್ಥ "ಬಲಗೊಳಿಸುವುದು" ಅಥವಾ "ದಿಗಿಲು ಹುಟ್ಟಿಸುವುದು" ಮತ್ತು ಫಾನ್ (藩) ಸ್ಯಾನ್ ಫ್ರ್ಯಾನ್ಸಿಸ್ಕೊ ನಗರದ ಜನಪ್ರಿಯ ಚೀನೀ ಸಂಕ್ಷಿಪ್ತರೂಪವಾಗಿದೆ.(三藩市).
1950ರಲ್ಲಿ ಕ್ಯಾಂಟನೀಯ ಚಿತ್ರ 細路祥 ದಲ್ಲಿ ("ಕಿಡ್ ಚೆಯುಂಗ್") ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾಗ ಯುವಾನ್ ಬು ಯುನ್ (袁步雲) ಎಂಬುದು ಬ್ರೂಸ್ ಲೀಯ ಮೊದಲ ವೇದಿಕೆ ಹೆಸರಾಗಿತ್ತು 李小龍. ನಂತರ ಹಾಂಗ್ ಕಾಂಗ್‌ನಲ್ಲಿ ಲೀ ಆಗಲೇ ಎರಡು ವಿಶೇಷ ಚಿತ್ರಗಳ ಅನುಭವ ಹೊಂದಿದ 4 ವರ್ಷದ ಬಾಲನಟರಾಗಿದ್ದರು [ಅವನನ್ನು 1940ರಲ್ಲಿ US ನಿರ್ಮಾಣದ ಕ್ಯಾಂಟನೀಯ ಚಿತ್ರ "ಗೋಲ್ಡನ್ ಗೇಟ್ ಗರ್ಲ್"ನಲ್ಲಿ (金門女) ಅನಾಮಧೇಯ ಬಾಲಪ್ರತಿಭೆಯಾಗಿ ಬಳಸಿಕೊಳ್ಳಲಾಯಿತು]. 1959ರಲ್ಲಿ ಅವರು U.S.ಗೆ ಮರಳುವ ಮೊದಲು ಬ್ರೂಸ್ ಲೀ ತನ್ನ ಪೂರ್ಣ ಹದಿಹರೆಯ ಜೀವನದಲ್ಲಿ ಸರಾಸರಿ ವರ್ಷಕ್ಕೆ ಎರಡು ಚಿತ್ರಕ್ಕಿಂತ (10ವರ್ಷದಿಂದ 18ವರ್ಷದವರೆಗೆ) ಹೆಚ್ಚು ಚಿತ್ರದಲ್ಲಿ ನಟಿಸಿ 18 ವರ್ಷಗಳ ಗೌರವಯುತ ಬಾಲನಟ ವೃತ್ತಿ ಅನುಭವವನ್ನು ಹೊಂದಿದ್ದರು. ಈ ಅವಧಿಯಲ್ಲಿ ಕೆಲವು ಉತ್ತಮ ಕ್ಯಾಂಟನೀಯ ನಟರು ಮತ್ತು ನಟಿಯರೊಂದಿಗೆ ಸಹನಟನಾಗಿ ಮತ್ತು ಕೆಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಯುವಾನ್ ಜನಪ್ರಿಯ "ಕಿಡ್ ಚೆವುಂಗ್" ಹಾಸ್ಯಚಿತ್ರ ಮಾಲಿಕೆಯ ಸೃಷ್ಟಿಕರ್ತರಾಗಿದ್ದಾರೆ. ಇದು ಬ್ರೂಸ್ ಲೀಯ ನಿಜಜೀವನದ ತಂದೆ ಲೀ ಹೋಯಿ ಚುಯೆನ್‌ರವರನ್ನಾಧರಿಸಿ ಚಿತ್ರವಾಗಿದ್ದು ಇದರಲ್ಲಿ ಲೀ ಹೋಯಿ ಚುಯೆನ್‌ರವರ ಮಗನಾಗಿ ಬ್ರೂಸ್ ಲೀಯವರು ನಟಿಸಿದ್ದಾರೆ.
"ಲೀ ಚಿಕ್ಕ ಡ್ರ್ಯಾಗನ್ " ಎಂಬ ಹೆಸರು ಲೀಯವರ ಬಾಲ್ಯದ "ಚಿಕ್ಕ ಡ್ರ್ಯಾಗನ್ " ಹೆಸರಿನಿಂದ ಬಂದಿರುವ ಸಾಧ್ಯತೆ ಇದೆ. ಚೀನಾ ಸಂಪ್ರದಾಯದಂತೆ, ಡ್ರ್ಯಾಗನ್ ಮತ್ತು ಫೀನಿಕ್ಸ್ ಕ್ರಮವಾಗಿ ಪುರುಷ ಮತ್ತು ಸ್ತ್ರೀ ಲಿಂಗವನ್ನು ಪ್ರತಿನಿಧಿಸಿರುತ್ತವೆ. ಹೆಚ್ಚು ಸಂಭಾವ್ಯ ವಿವರಣೆಯಂತೆ ಚೀನಾದ ರಾಶಿಚಕ್ರದ ಪ್ರಕಾರ ಡ್ರ್ಯಾಗನ್‌ನ ವರ್ಷದಲ್ಲಿ ಹುಟ್ಟಿದ್ದರಿಂದ "ಚಿಕ್ಕ ಡ್ರ್ಯಾಗನ್ " ಎಂದು ಕರೆಯಲಾಗಿತ್ತು ಎಂದು ಹೇಳಲಾಗಿದೆ. ಆತನ ಪತ್ನಿ ಲಿಂಡಾ ಸೇರಿದಂತೆ ಹಲವರು ಲೀ "ಡ್ರ್ಯಾಗನ್ ಸಮಯ"(ಲಿಂಡಾರ ಪುಸ್ತಕಗಳು ಮತ್ತು ಇತರ ಹಲವರು ಹೇಳಿದಂತೆ 6–8 AM)ದಲ್ಲಿ ಜನಿಸಿದ್ದರಿಂದ ಹೇಳುವುದರೊಂದಿಗೆ ಸ್ವಲ್ಪ ಅತ್ಯುತ್ಸಾಹದಿಂದ ಆತನ "ಡ್ರ್ಯಾಗನ್" ಸಂಪರ್ಕವನ್ನು ವ್ಯಾಪಕವಾಗಿ ವಿಸ್ತರಿಸಿದ್ದಾರೆ. ಆದರೂ ಪ್ರಾಣಿ ರಾಶಿಚಕ್ರವು ಸಾಮಾನ್ಯವಾಗಿ ದಿನದ ಗಂಟೆಗಳಿಗೆ ಅನ್ವಯಿಸುವುದಿಲ್ಲ. ಆದರೆ ಒಂದು ವೇಳೆ ಹಾಗೆ ಅನ್ವಯಿಸಿದರೆ, ನಿಜವಾಗಲೂ 6ರಿಂದ 8 Am ವರೆಗಿನ ಸಮಯವು "ಮೊಲದ ಸಮಯ" (5–7 AM) ಮತ್ತು "ಡ್ರ್ಯಾಗನ್‌ನ ಸಮಯ" (7–9 AM) ಎರಡು ಸಮಯಗಳಲ್ಲಿ ವ್ಯಾಪಿಸಿರುವುದು. ಅಲ್ಲದೆ, ಚಿಕ್ಕ ಡ್ರ್ಯಾಗನ್ ಎಂಬ ಹೆಸರು ಅವರು ಹುಟ್ಟಿದ ಬಹಳ ಸಮಯದ ನಂತರ (10 ವರ್ಷಗಳು) ಬಂದಿರುತ್ತದೆ.
ನಟನಾ ವೃತ್ತಿ
ಬದಲಾಯಿಸಿಲೀರವರ ತಂದೆ ಹೊಯಿ ಚುಯೆನ್‌ರವರು ಪ್ರಸಿದ್ಧ ಕ್ಯಾಂಟನೀಯ ಒಪೆರಾ ತಾರೆಯಾಗಿದ್ದರು. ಹೀಗಾಗಿ ಬ್ರೂಸ್ ತನ್ನ ತಂದೆಯ ಮೂಲಕ ಚಿತ್ರರಂಗಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಪರಿಚಯಿಸಲ್ಪಟ್ಟನು ಮತ್ತು ಬಾಲನಟನಾಗಿ ಹಲವಾರು ಕಪ್ಪು-ಬಿಳುಪು ಚಿತ್ರದಲ್ಲಿ ಕಾಣಿಸಿಕೊಂಡನು. ವೇದಿಕೆಯನ್ನು ಹತ್ತುವ ಮಗುವಾಗಿ ಕಾಣಿಸಿಕೊಂಡಿದ್ದು ಲೀ ಅಭಿನಯಿಸಿದ ಮೊದಲ ಪಾತ್ರವಾಗಿತ್ತು. ಅವನು 18 ವರ್ಷದವನಾಗಿದ್ದಾಗಲೇ ಇಪ್ಪತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದನು.[೬]
1959-1964ವರೆಗಿನ ಸಮಯದಲ್ಲಿ ಲೀ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವಾಗ ಸಿನಿಮಾ ವೃತ್ತಿಯ ವಿಚಾರವನ್ನು ಸಮರ ಕಲೆಗಳನ್ನು ಕಲಿಯುವುದಕ್ಕಾಗಿ ಕೈಬಿಟ್ಟನು. ವಿಲಿಯಮ್ ಡಾಜಿಯರ್ ಅಭಿನಯ ಪ್ರದರ್ಶನ ಪರೀಕ್ಷೆಗೆ ಲೀಯವರನ್ನು ಆಹ್ವಾನಿಸಿದ್ದರು. ಅದರಲ್ಲಿ ಲೀ ತನ್ನ ಮಿಂಚಿನ ವೇಗದ ಚಲನೆಯಿಂದ ನಿರ್ಮಾಪಕರ ಮೇಲೆ ತುಂಬಾ ಪ್ರಭಾವ ಬೀರಿದ್ದರು. ಇದರಿಂದ ದ ಗ್ರೀನ್ ಹಾರ್ನ್‌ನೆಟ್ TV ಸರಣಿಯಲ್ಲಿ ವಾನ್ ವಿಲಿಯಮ್ಸ್‌ನೊಂದಿಗಿನ ಕ್ಯಾಟೊ ಪಾತ್ರವನ್ನು ತನ್ನದಾಗಿಸಿಕೊಂಡರು. 1966 ರಿಂದ 1967ವರೆಗಿನ ಕೇವಲ ಒಂದೇ ಕಾಲಾವಧಿಗೆ ಆ ಪ್ರದರ್ಶನವು ಕೊನೆಗೊಂಡಿತು. ಬ್ಯಾಟ್‌ಮನ್ ನ ಮೂರು ಅಂತರ್ಸಂಬಂಧಿ ಸಂಚಿಕೆಗಳಲ್ಲಿ ಸಹ ಕ್ಯಾಟೊ ಪಾತ್ರದಲ್ಲಿ ಲೀ ನಟಿಸಿದ್ದಾರೆ. ಐರನ್‌ಸೈಡ್ (1967) ಮತ್ತು ಹಿಯರ್ ಕಮ್ ದ ಬ್ರೈಡ್ಸ್ (1969) ಸೇರಿದಂತೆ ಕಿರುತೆರೆ ಸರಣಿಯಲ್ಲಿ ಅತಿಥಿ ನಟರಾಗಿ ಕಾಣಿಕೊಂಡ ನಂತರ ಇದರಲ್ಲಿ ಕಾಣಿಸಿಕೊಂಡರು.
1969ರಲ್ಲಿ ಲೀ ತನ್ನ ಮೊದಲ ಅಮೆರಿಕನ್ ಚಿತ್ರ ಮರ್ಲೊವ್ ನಲ್ಲಿ ಸ್ವಲ್ಪಕಾಲ ಕಾಣಿಸಿಕೊಂಡಿದ್ದರು. ಅದರಲ್ಲಿ ಹಾರಿ ಒದೆಯುವುದು, ಹೊಡೆಯುವುದರಿಂದ ಖಾಸಗಿ ಗುಪ್ತಚರ ಫೀಲಿಪ್ ಮಾರ್ಲೊವ್ (ಜೇಮ್ಸ್ ಗರ್ನರ್ ಅಭಿನಯಿಸಿದ) ಕಛೇರಿಯನ್ನು ಹಾಳು ಮಾಡಿ ಅವನನ್ನು ಹೆದರಿಸಲು ಬಾಡಿಗೆಗೆ ಗೊತ್ತುಮಾಡಿದ ಹಿಂಬಾಲಕನ ಪಾತ್ರದಲ್ಲಿ ಅಭಿನಯಿಸಿದ್ದರು ಮತ್ತು ಮಾರ್ಲೊವ್ ಹೊಡೆಯಲು ಪ್ರಯತ್ನಿಸುವಾಗ ದೊಡ್ಡ ಕಟ್ಟಡದಿಂದ ಆಕಸ್ಮಿಕವಾಗಿ ಹಾರಿದ್ದರು. 1971ರಲ್ಲಿ ಲಾಂಗ್‌ಸ್ಟ್ರೀಟ್ ಕಿರುತೆರೆ ಸರಣಿಯಲ್ಲಿ ಪ್ರಮುಖ ಪಾತ್ರವಾದ ಮೈಕ್ ಲಾಂಗ್‌ಸ್ಟ್ರೀಟ್‌ನ (ಜೇಮ್ಸ್ ಫ್ರಾನ್ಸಿಸ್ಕಸ್ ಅಭಿನಯಿಸಿದ) ಸಮರ ಕಲೆಗಳ ಶಿಕ್ಷಕನಂತೆ ಲೀ ನಾಲ್ಕು ಸಂಚಿಕೆಗಳಲ್ಲಿ ಕಾಣಿಸಿಕೊಂಡರು.
ಬ್ರೂಸ್ ಲೀ ಹಾಗೂ ಬ್ರೂಸ್‌ನ ಮರಣ ನಂತರ ಲಿಂಡಾ ಲೀ ಕ್ಯಾಡ್‌ವೆಲ್ ಹೇಳಿದ್ದಂತೆ 1971ರಲ್ಲಿ ಬ್ರೂಸ್‌ರವರು ದ ವಾರಿಯರ್ ಹೆಸರಿನ ಸ್ವಂತ ಕಿರುತೆರೆ ಸರಣಿ ನಿರೂಪಿಸಿದ್ದರು. ಇದಕ್ಕೆ ವಾರ್ನರ್ Bros. ಸಹ ಒಪ್ಪಿತ್ತು. ಕ್ಯಾಡ್‌ವೆಲ್‌ರ ಪ್ರಕಾರ ಲೀಯವರ ಕಲ್ಪನೆಯನ್ನು ಕುಂಗ್ ಫೂ ಎಂದು ಮರುರಚಿಸಲಾಯಿತು ಮತ್ತು ಮರುಹೆಸರಿಸಲಾಯಿತು. ಆದರೆ ವಾರ್ನರ್ Bros. ನಂತರ ಲೀಯವರಿಗೆ ಈ ಬಗ್ಗೆ ಯಾವುದೇ ಮನ್ನಣೆಯನ್ನು ನೀಡಲಿಲ್ಲ.[೨೨] ವೈಲ್ಡ್ ವೆಸ್ಟ್‌ನಲ್ಲಿ ಶಾವೊಲಿನ್ ಸನ್ಯಾಸಿಯ ಪಾತ್ರದ ಬದಲು ಸಮರ ಕಲಾ ನಿಪುಣನಲ್ಲದ ಡೇವಿಡ್ ಕ್ಯಾರೇಡಿನ್‌ಗೆ ಪ್ರಶಸ್ತಿ ನೀಡಲಾಯಿತು. ಏಕೆಂದರೆ ಚೀನೀಯ ಪ್ರಮುಖ ವ್ಯಕ್ತಿಯನ್ನು ಸಾರ್ವಜನಿಕರು ಆದರಿಸದಿರಬಹುದೆಂದು ಸ್ಟುಡಿಯೊ ಹೆದರಿತ್ತು.[೨೩] "ಕುಂಗ್ ಫೂ" ಪ್ರದರ್ಶನದ ಕುರಿತು ಇರುವ ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳು ಕ್ಯಾಡ್‌ವೆಲ್‌ರ ಅಭಿಮತವನ್ನು ಅಲ್ಲಗಳೆಯುತ್ತವೆ. ಈ ಮೂಲಗಳ ಪ್ರಕಾರ ಇಬ್ಬರು ಬರಹಗಾರರು ಮತ್ತು ನಿರ್ಮಾಪಕರಾದ ಎಡ್ ಸ್ಪೇಯಿಲ್‌ಮನ್ ಮತ್ತು ಹಾವರ್ಡ್ ಫ್ರೆಂಡ್ಲಂಡರ್ ನಿರ್ಮಿಸಿದ ಪ್ರದರ್ಶನದ ಪಾತ್ರವರ್ಗದಲ್ಲಿ ಲೀಯವರನ್ನು ಸೇರಿಸಿಕೊಳ್ಳದೇ ಇರಲು ಪ್ರಮುಖ ಕಾರಣ ಅವರ ಜನಾಂಗದ ಬದಲಾಗಿ, ಗಾಢವಾದ ಉಚ್ಚಾರಣಾ ಶೈಲಿಯಾಗಿತ್ತು.[೨೪]
9 ಡಿಸೆಂಬರ್ 1971ರಲ್ಲಿ ಪ್ರಸಾರವಾದ ಪಿಯೆರ್ರೆ ಬರ್ಟನ್ ಷೋ ಎಂಬ ಕಿರುತೆರೆ ಸಂದರ್ಶನದಲ್ಲಿ ಬ್ರೂಸ್ ಲೀಯವರು ವಾರ್ನರ್ ಬ್ರದರ್ಸ್ ಮತ್ತು ಪ್ಯಾರಾಮೌಂಟ್ ಸಂಸ್ಥೆಗಳು ತಮ್ಮದೊಂದು ಅಮೆರಿಕನ್ TV ಸರಣಿಯನ್ನು ಮಾಡಲು ಇಚ್ಛಿಸುತ್ತಿದ್ದಾರೆ ಎಂದು ಪ್ರಸ್ತಾಪಿಸಿದ್ದರು. ನಂತರ "ಸ್ಟೇಟ್ಸ್‌ನಲ್ಲಿ "ದ ವಾರಿಯರ್" ಎನ್ನುವ TV ಸರಣಿಯು ನಿಮಗೆ ದೊರೆತಿರುವುದು ಒಂದು ಉತ್ತಮ ಅವಕಾಶ. ಅದರಲ್ಲಿ ಪಾಶ್ಚಿಮಾತ್ಯ ಸನ್ನಿವೇಶದಲ್ಲಿ ಸಮರ ಕಲೆಗಳನ್ನು ಬಳಸುತ್ತೀರೇನು? ಬಳಸುತ್ತಿದ್ದರೆ ಎಲ್ಲಿ ಬಳಸುವಿರಿ" ಎಂದು ಪಿಯೆರ್ರೆ ಬರ್ಟನ್ ಕೇಳಿದಾಗ ಲೀ ಅದಕ್ಕೆ ಪ್ರತಿಕ್ರಿಯಿಸಿ ಹೀಗೆಂದನು, "ಅದು ಅವರಿಬ್ಬರ (ವಾರ್ನರ್ ಮತ್ತು ಪ್ಯಾರಾಮೌಂಟ್) ಮೂಲ ಕಲ್ಪನೆಯಾಗಿದೆ, ...ನನ್ನ ಪ್ರಕಾರ ಅವರು ನನ್ನಿಂದ ಆಧುನೀಕರಿಸಿದ ಪಾತ್ರವನ್ನು ಬಯಸುತ್ತಿದ್ದಾರೆ ಮತ್ತು ಅವರು "ಪಾಶ್ಚಿಮಾತ್ಯ" ಪ್ರಕಾರದ ವಿಷಯ ಹಳೆಯದಾಯಿತು ಎಂದು ಯೋಚಿಸುತ್ತಿದ್ದಾರೆ. ಆದರೆ ನಾನು ಪಾಶ್ಚಿಮಾತ್ಯ ರೀತಿಯನ್ನು ಮಾಡಲು ಬಯಸುತ್ತೇನೆ, ಏಕೆಂದರೆ, ನಿಮಗೇ ತಿಳಿದಂತೆ ಪಾಶ್ಚಿಮಾತ್ಯ ವ್ಯವಸ್ಥೆಯ ಬದಲಿಗೆ ಬೇರೆಲ್ಲಿ ನೀವು ಈ ಮುಷ್ಟಿ ಹೊಡೆತ, ಒದೆಯುವಿಕೆ ಮತ್ತು ಹಿಂಸೆಯನ್ನು ಸಮರ್ಥಿಸಲು ಸಾಧ್ಯ?" ನಂತರ ಸಂದರ್ಶನದಲ್ಲಿ ಬರ್ಟನ್ ಲೀಯವರನ್ನು "ಅಮೆರಿಕನ್ ಸರಣಿಗಳಲ್ಲಿ ಚೀನೀ ನಾಯಕರಾಗಿ ನೀವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿ. ಚಿತ್ರೋದ್ಯಮದ ವ್ಯಕ್ತಿಗಳು 'ಅಮೆರಿಕನ್‌ಏತರ ನಾಯಕನನ್ನು ಪ್ರೇಕ್ಷಕರು ಸ್ವೀಕರಿಸುವ ಬಗ್ಗೆ ನಮಗೆ ಗೊಂದಲವಿದೆ'" ಎಂದು ಯಾರೂ ಕೇಳಿಲ್ಲವೇ?. ಅದಕ್ಕೆ ಲೀ ಹೀಗೆ ಪ್ರತಿಕ್ರಿಯೆ ಹೀಗಿತ್ತು, "ಹೌದು ಅಂತಹ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ನಿಜವಾಗಿಯೂ, ಅಷ್ಟೇ ಅಲ್ಲದೇ ಇದನ್ನು ಚರ್ಚಿಸಲಾಗುತ್ತಿತ್ತು ಕೂಡಾ. ಅದಕ್ಕಾಗಿಯೇ ಬಹುಶಃ "ದ ವಾರಿಯರ್" ಪ್ರಾರಂಭವಾಗುತ್ತಾ ಇಲ್ಲ." ಲೀ ಮುಂದುವರಿಸಿ, "ಅವರು ವ್ಯಾವಹಾರಿಕವಾಗಿ ಪ್ರಕಾರ ಇದನ್ನು ನಷ್ಟದಾಯಕ ಎಂಬಂತೆ ಯೋಚಿಸುತ್ತಾರೆ. ನಾನು ಅವರನ್ನು ದೂರುವುದಿಲ್ಲ. ಒಂದು ವೇಳೆ ಸನ್ನಿವೇಶವು ತದ್ವಿರುದ್ಧವಾಗಿದ್ದರೆ, ಓರ್ವ ಅಮೇರಿಕನ್ ತಾರೆಯ ಚಿತ್ರವನ್ನು ಹಾಂಗ್ ಕಾಂಗ್‌ನಲ್ಲಿ ನಿರ್ಮಿಸುವ ಸಂದರ್ಭವಿದ್ದು ನಾನೇ ನಿರ್ಮಾಪಕನಾಗಿದ್ದರೆ ನನಗೆ ನನ್ನದೇ ಆದ ಹಿತಾಸಕ್ತಿಗಳಿದ್ದು ನಾನೂ ಸಹಾ ಜನರ ಸ್ವೀಕೃತಿಯ ಬಗ್ಗೆ ಯೋಚಿಸಬೇಕಾಗಿರುತ್ತಿತ್ತು." [೨೫]
U.S.ನಲ್ಲಿ ತಮ್ಮ ಪೋಷಕ ಪಾತ್ರಗಳಿಂದ ತೃಪ್ತನಾಗದೆ ಲೀ ಹಾಂಗ್ ಕಾಂಗ್‌ಗೆ ಹಿಂದಿರುಗಿದರು. ಅನಧಿಕೃತವಾಗಿ "ದ ಕ್ಯಾಟೊ ಷೋ"ಎಂದು ಕರೆಯಲಾಗುತ್ತಿದ್ದ ದ ಗ್ರೀನ್ ಹಾರ್ನೆಟ್ ಯಲ್ಲಿನ ನಟನೆ ಹಾಂಗ್ ಕಾಂಗ್‌ನಲ್ಲಿ ಯಶಸ್ವಿಯಾಗಿರುವುದರ ಬಗ್ಗೆ ಅರಿವಿರದ ಲೀ, ತಮ್ಮನ್ನು ಜನರು ಪ್ರದರ್ಶನದ "ತಾರೆ"ಯಂತೆ ಸಾರ್ವಜನಿಕವಾಗಿ ಗುರುತಿಸಿದಾಗ ಆಶ್ಚರ್ಯವಾಗಿತ್ತು. ಪ್ರಸಿದ್ಧ ನಿರ್ದೇಶಕ ರೇಮಂಡ್ ಚೌರವರು ಲೀಗೆ ಅವರ ಗೋಲ್ಡನ್ ಹಾರ್ವೆಸ್ಟ್ ಚಿತ್ರ ನಿರ್ಮಾಣ ಕಂಪನಿಯು ನಿರ್ಮಾಣ ಮಾಡುವ ಎರಡು ಚಿತ್ರಗಳ ನಟರಾಗಲು ಒಪ್ಪಂದದ ಅವಕಾಶ ನೀಡಿದರು. ಲೀ ಮೊದಲ ಬಾರಿಗೆ ದ ಬಿಗ್ ಬಾಸ್ ನಲ್ಲಿ (1971) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಆ ಚಿತ್ರವು ಏಷ್ಯಾದಾದ್ಯಂತ ಅದ್ಭುತ ಗಲ್ಲಾ ಪೆಟ್ಟಿಗೆ ಯಶಸ್ಸು ಕಂಡು ಅವರನ್ನು ತಾರಾಪಟ್ಟಕ್ಕೇರಿಸಿತು. ಕೂಡಲೇ ಅವರು ಫಿಸ್ಟ್ ಆಫ್ ಫ್ಯೂರಿ ನಲ್ಲಿ (1972) ಅಭಿನಯಿಸುವುದರೊಂದಿಗೆ ತನ್ನ ಯಶಸ್ಸನ್ನು ಮುಂದುವರಿಸಿದರು. ಈ ಚಿತ್ರವು ಹಿಂದೆ ದ ಬಿಗ್ ಬಾಸ್ ದಾಖಲಿಸಿದ ಗಲ್ಲಾ ಪೆಟ್ಟಿಗೆ ದಾಖಲೆಯನ್ನು ಮುರಿಯಿತು. ಮೊದಲ ಎರಡು ವರ್ಷದ ಒಪ್ಪಂದವನ್ನು ಪೂರ್ಣಗೊಂಡ ನಂತರ, ಲೀ ತಮ್ಮ ಮೂರನೇ ಚಿತ್ರವಾದ ವೇ ಆಫ್ ದ ಡ್ರ್ಯಾಗನ್ ಗಾಗಿ (1972) ಗೋಲ್ಡನ್ ಹಾರ್ವೆಸ್ಟ್‌ನೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದರು. ಅವರಿಗೆ ಬರಹಗಾರ, ನಿರ್ದೇಶಕ, ನಟ, ಮತ್ತು ಹೋರಾಟ ದೃಶ್ಯಗಳ ವ್ಯವಸ್ಥಾಪಕರಂತೆ ಚಿತ್ರ ನಿರ್ಮಾಣದಲ್ಲಿ ಸಂಪೂರ್ಣ ನಿಯಂತ್ರಣ ನೀಡಲಾಯಿತು. 1964ರಲ್ಲಿ ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ನೆಡೆದ ಪ್ರದರ್ಶನದಲ್ಲಿ ಲೀ ಕರಾಟೆ ಚಾಂಪಿಯನ್ ಚುಕ್ ನೋರಿಸ್‌ರನ್ನು ಭೇಟಿಮಾಡಿದರು. ವೇ ಆಫ್ ದ ಡ್ರ್ಯಾಗನ್ ನಲ್ಲಿ ರೋಮ್‌ನ ಬಯಲು ಕುಸ್ತಿ ಪ್ರಾಂಗಣದಲ್ಲಿ ನೆಡೆದ ಅಂತಿಮ ಮರಣ ಹೋರಾಟ ದೃಶ್ಯದಲ್ಲಿ ಲೀ ತನ್ನ ಎದುರಾಳಿಯಾಗಿ ನೋರಿಸ್‌ನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಇಂದು ಅದು ಲೀಯವರ ಹೆಚ್ಚು ಪ್ರಸಿದ್ಧ ಹೋರಾಟ ದೃಶ್ಯಗಳಲ್ಲಿ ಒಂದಾಗಿದೆ ಮತ್ತು ಸಮರ ಕಲೆಗಳ ಚಿತ್ರ ಇತಿಹಾಸದಲ್ಲಿ ಹೆಚ್ಚು ಸ್ಮರಣಾರ್ಹ ಹೋರಾಟ ದೃಶ್ಯಗಳಲ್ಲಿ ಒಂದಾಗಿದೆ.[೨೬]
1972ರ ಕೊನೆಯಲ್ಲಿ ಲೀ ತಮ್ಮ ನಾಲ್ಕನೇ ಗೋಲ್ಡನ್ ಹಾರ್ವೆಸ್ಟ್ ಚಿತ್ರವಾದ ಗೇಮ್ ಆಫ್ ಡೆತ್ ಗಾಗಿ ಕೆಲಸವನ್ನು ಆರಂಭಿಸಿದರು. ಅವರು 7'2"ನಷ್ಟು ಎತ್ತರವಿರುವ ಅಮೆರಿಕಾದ ಬಾಸ್ಕೆಟ್‌ಬಾಲ್ ತಾರೆ, ಹಳೆ ವಿದ್ಯಾರ್ಥಿಯಾದ ಕರೀಮ್ ಅಬ್ದುಲ್-ಜಬ್ಬಾರ್‌ರವರೊಂದಿಗೆ ತನ್ನ ಹೋರಾಟ ದೃಶ್ಯಗಳು ಸೇರಿದಂತೆ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಿದರು. ವಾರ್ನರ್ ಬ್ರದರ್ಸ್ ಎಂಟರ್ ದ ಡ್ರ್ಯಾಗನ್ ಚಿತ್ರದಲ್ಲಿ ಲೀಯವರಿಗೆ ನಟಿಸುವ ಅವಕಾಶ ನೀಡಿದಾಗ, ಗೇಮ್ ಆಫ್ ಡೆತ್ ಚಿತ್ರದ ನಿರ್ಮಾಣ ಕಾರ್ಯವನ್ನು ನಿಲ್ಲಿಸಲಾಯಿತು. ಎಂಟರ್ ದ ಡ್ರ್ಯಾಗನ್ ಚಿತ್ರವು ಗೋಲ್ಡನ್ ಹಾರ್ವೆಸ್ಟ್ ಮತ್ತು ವಾರ್ನರ್ ಬ್ರದರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದ ಮೊದಲ ಚಿತ್ರ. ಈ ಚಿತ್ರವು ಲೀ ಖ್ಯಾತಿಯನ್ನು U.S. ಮತ್ತು ಯುರೋಪ್‌ನಲ್ಲಿ ಎತ್ತರಕ್ಕೇರಿಸಿತು. ಆದರೆ, ಚಿತ್ರ ಪೂರ್ಣಗೊಂಡ ಕೆಲವೇ ತಿಂಗಳುಗಳಲ್ಲಿ ಅಂದರೆ 26 ಜುಲೈ 1973ರಲ್ಲಿ ಚಿತ್ರ ಬಿಡುಗಡೆಯಾಗುವ 6 ದಿನಗಳ ಮೊದಲು[೨೭] ಸುದೃಢವಾಗಿದ್ದ ಲೀ ನಿಗೂಢವಾಗಿ ಮರಣ ಹೊಂದಿದರು. ಎಂಟರ್ ದ ಡ್ರ್ಯಾಗನ್ ವರ್ಷದ ಹೆಚ್ಚು ಮೊತ್ತ ಗಳಿಸಿದ ಚಿತ್ರಗಳಲ್ಲಿ ಒಂದಾಗಿ ಪ್ರದರ್ಶನ ಕಂಡಿತು ಮತ್ತು ಸಮರ ಕಲೆಗಳ ದಂತಕಥೆಯಂತೆ ಲೀಯನ್ನು ವರ್ಣಿಸಲಾಯಿತು. ಚಿತ್ರವು 1973ರಲ್ಲಿ US$850,000ನಷ್ಟು ಗಳಿಸಿತು (2007ರ ಹಣದುಬ್ಬರಕ್ಕೆ ಹೊಂದಿಸಿದಾಗ ಅದು $4 ದಶಲಕ್ಷಕ್ಕೆ ಸಮನಾಗಿದೆ).[೨೮] ಇಲ್ಲಿಯವರೆಗೆ ಎಂಟರ್ ದ ಡ್ರ್ಯಾಗನ್ ಜಗತ್ತಿನಾದ್ಯಂತ $200 ದಶಲಕ್ಷಗಿಂತಲೂ ಹೆಚ್ಚು ಮೊತ್ತವನ್ನು ಗಳಿಸಿತ್ತು.[೨೯] ಈ ಚಿತ್ರವು ಸಮರ-ಕಲೆಗಳಲ್ಲಿ ಸ್ವಲ್ಪಕಾಲದ ಒಲವನ್ನು ಸೃಷ್ಟಿಸಿತು. ಇದರಿಂದಾಗಿ "ಕುಂಗ್ ಫೂ ಫೈಟಿಂಗ್"ನಂತಹ ಹಾಡುಗಳನ್ನು ಚಿತ್ರಗಳಲ್ಲಿ ಮತ್ತು ಕುಂಗ್ ಫೂ ನಂತಹ TV ಪ್ರದರ್ಶನದಲ್ಲಿ ಸಮರಕಲೆಗಳನ್ನು ಅಡಕಿಸಲಾಯಿತು.
ಲೀ ಬರೆದು ನಿರ್ದೇಶಿಸಲು ಬಯಸಿದ್ದ, ಅಪೂರ್ಣಗೊಂಡ ಗೇಮ್ ಆಫ್ ಡೆತ್ ಚಿತ್ರವನ್ನು ಎಂಟರ್ ದ ಡ್ರ್ಯಾಗನ್ ಚಿತ್ರದ ನಿರ್ದೇಶಕರಾದ ರಾಬರ್ಟ್ ಕ್ಲೌಸ್ ಮತ್ತು ರೇಮಂಡ್ ಚೋವ್‌ರವರು ಪೂರ್ಣಗೊಳಿಸಲು ಪ್ರಯತ್ನಿಸಿದರು. ಎಂಟರ್ ದ ಡ್ರ್ಯಾಗನ್ ನಲ್ಲಿ ನಟಿಸುವುದಕ್ಕಾಗಿ ಗೇಮ್ ಆಫ್ ಡೆತ್ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸುವ ಹೊತ್ತಿಗೆ ಲೀ ಆಗಲೇ ತಿರಸ್ಕೃತ ಭಾಗಗಳೂ ಸೇರಿದಂತೆ ಸುಮಾರು 100 ನಿಮಿಷಗಳಷ್ಟು ಚಿತ್ರೀಕರಣವನ್ನು ಮಾಡಿದ್ದರು. ಅಬ್ದುಲ್-ಜಬ್ಬರ್, ಜಾರ್ಜ್ ಲೇಜೆನ್‌ಬೈ, ಹ್ಯಾಪ್ಕಿಡೊ ಮಾಸ್ಟರ್ ಜಿ ಹಾನ್ ಜಾಯಿ ಮತ್ತು ಲೀಯ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ, ಡ್ಯಾನ್ ಇನೊಸ್ಯಾಂಟೊ ಸಹಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಹಾಯ್ ಟಿಯೆನ್ ಪಾತ್ರದಲ್ಲಿರುವ ಲೀಯವರನ್ನು ಎದ್ದುಕಾಣುವಂತೆ ಮಾಡುತ್ತದೆ. ಇದರಲ್ಲಿ ಐದು ಅಂತಸ್ತಿನ ಪಗೋಡದ ಪ್ರತಿಯೊಂದು ಅಂತಸ್ತಿನಲ್ಲಿ ಹಾಯ್ ಟಿಯೆನ್ (ಪ್ರಸಕ್ತ-ಜನಪ್ರಿಯ ಹಳದಿ ಟ್ರ್ಯಾಕ್ ಸೂಟ್‌ನ್ನು ಧರಿಸಿದ) ಅವರು ದಾರಿಯನ್ನು ಕಂಡುಕೊಳ್ಳಲು ವಿಭಿನ್ನ ಸವಾಲುಗಳನ್ನು ಎದುರಿಸುತ್ತಾರೆ. ವಿವಾದಾಸ್ಪದವೆನಿಸಿದ ಬೆಳವಣಿಗೆಯಲ್ಲಿ ರಾಬರ್ಟ್ ಕ್ಲೌಸ್‌ರವರು ಹೊಸ ಕಥೆ ಮತ್ತು ಪಾತ್ರವರ್ಗದೊಂದಿಗೆ ಲೀಯವರ ತದ್ರೂಪಿ ಮತ್ತು ಅವರ ಇತರ ಚಿತ್ರಗಳ ಹಳೆಯ ಚಿತ್ರೀಕರಣವನ್ನು ಬಳಸಿ ಚಿತ್ರವನ್ನು ಪೂರ್ಣಗೊಳಿಸಿದರು ಮತ್ತು 1979ರಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರು. ಆದಾಗ್ಯೂ, ಜೋಡಿಸಿ-ಹೊಂದಾಣಿಕೆ ಮಾಡಿದ ಈ ಚಿತ್ರದಲ್ಲಿ ಲೀಯವರ ನೈಜ ಚಿತ್ರಣವಿರುವುದು ಕೇವಲ ಹದಿನೈದು ನಿಮಿಷಗಳು ಮಾತ್ರ (ಅವರು ಹಲವು ನಿರುಪಯುಕ್ತವಾದ ದೃಶ್ಯಗಳನ್ನು ಪ್ರಿಂಟ್ ಮಾಡಿದ್ದರು[೩೦]). ಚಿತ್ರದ ಇನ್ನುಳಿದ ಭಾಗಗಳಲ್ಲಿ ಲೀ ತದ್ರೂಪಿಯಾದ ತೈ ಚುಂಗ್ ಕಿಮ್ ಮತ್ತು ಯುಯೆನ್ ಬಿಯೆವೊ ಸಾಹಸ ದೃಶ್ಯಗಳ ದ್ವಿಪಾತ್ರವಾಗಿ ನಟಿಸಿದ್ದಾರೆ. ಲೀ ಚಿತ್ರೀಕರಿಸಿದ ಬಳಸದೆ ಇರುವ ದೃಶ್ಯಗಳನ್ನು 22 ವರ್ಷಗಳ ನಂತರ ಮರು ಸಂಪಾದಿಸಲಾಯಿತು ಮತ್ತು ಅವುಗಳನ್ನು ಬ್ರೂಸ್ ಲೀ: ಎ ವಾರಿಯರ್ಸ್ ಜರ್ನಿ ಎಂಬ ಸಾಕ್ಷ್ಯಚಿತ್ರದಲ್ಲಿ ಸೇರಿಸಲಾಯಿತು.
ಹಾಂಗ್ ಕಾಂಗ್ ಪರಂಪರೆ
ಬದಲಾಯಿಸಿಲೀಯ ಸುತ್ತ ಇರುವ (ಪೊಳ್ಳು ಆಗಿರಬಹುದು) ಹಲವು ಕಥೆಗಳು ಹಾಂಗ್ ಕಾಂಗ್ ಸಂಸ್ಕೃತಿಯಲ್ಲಿ ಇಂದಿಗೂ ಹಾಸುಹೊಕ್ಕಾಗಿವೆ. 70ರ ಆದಿಯಲ್ಲಿ TVB ಪ್ರದರ್ಶನವಾದ ಎನ್‌ಜಾಯ್ ಯುವರ್‌ಸೆಲ್ಪ್ ಟುನೈಟ್‌ನಲ್ಲಿ ಅವರ ಸಂದರ್ಶನವನ್ನು ಎಲ್ಲರೂ ಮನೆಯಲ್ಲಿ ನೋಡುತ್ತಿದ್ದುದರಿಂದ ಹಾಂಗ್ ಕಾಂಗ್‌ನ ನಿಬಿಡ ರಸ್ತೆಗಳು ತೆರವಾಗಿದ್ದುದು ಇದಕ್ಕೆ ಒಂದು ಉದಾಹರಣೆ.
6 ಜನವರಿ 2009ರಲ್ಲಿ ಬ್ರೂಸ್‌ರವರ ಹಾಂಗ್ ಕಾಂಗ್ ಮನೆಯನ್ನು ಸಂರಕ್ಷಿಸಲಾಗುವುದು ಮತ್ತು ವಿಶ್ವಪ್ರೇಮಿಯಾದ ಯು ಪಾಂಗ್-ಲಿನ್‌ರವರು ಅದನ್ನು ಪ್ರವಾಸಿ ಸ್ಥಳವಾಗಿ ಬದಲಾಯಿಸುವರು ಎಂದು ಘೋಷಿಸಲಾಯಿತು.[೩೧]
ಸಮರ ಕಲೆಗಳ ತರಬೇತಿ ಮತ್ತು ಅಭಿವೃದ್ಧಿ
ಬದಲಾಯಿಸಿಲೀಯವರಿಗೆ ಮೊದಲ ಬಾರಿಗೆ ಸಮರ ಕಲೆಗಳನ್ನು ಅವರ ತಂದೆ ಲೀ ಹೊಯಿ ಚೆವುನ್‌ರವರು ಪರಿಚಯಿಸಿದರು. ಅವರಿಂದಲೇ ವು ಶೈಲಿಯ ತೈ ಚಿ ಚುನ್‌ನ ಮೂಲತತ್ವವನ್ನು ಕಲಿತರು.[೩೨] ಲೀರವರ ಸಿಫೂ, ವಿಂಗ್ ಚುನ್ ಗುರು ಯಿಪ್ ಮಾನ್‌ರವರು ಹಾಂಗ್ ಕಾಂಗ್‌ನ ವು ಶೈಲಿಯ ತೈ ಚಿ ಚಾನ್ ಗುರು ವು ತ-ಚಿರವರ ಸಹೋದ್ಯೋಗಿ ಮತ್ತು ಗೆಳೆಯರಾಗಿದ್ದರು.
ವಿಂಗ್ ಚುನ್
ಬದಲಾಯಿಸಿಚೀನಾದ ಸಮರ ಕಲೆ ವಿಂಗ್ ಚುನ್‌ನ ಅಭ್ಯಾಸವು ಬ್ರೂಸ್ ಲೀಯವರ ಸಮರ ಕಲೆ ಅಭಿವೃದ್ಧಿಯಲ್ಲಿ ಭಾರಿ ಪ್ರಮಾಣದಲ್ಲಿ ಪ್ರಭಾವ ಬೀರಿತು. 1954ರ ಬೇಸಿಗೆಯಲ್ಲಿ ಬ್ರೂಸ್ ಲೀ 13 ವರ್ಷವಿರುವಾಗ ಪ್ರಸಿದ್ಧ ವಿಂಗ್ ಚುನ್ ಗ್ರ್ಯಾಂಡ್‌ಮಾಸ್ಟರ್ ಯಿಪ್ ಮಾನ್ ಮಾರ್ಗದರ್ಶನದಲ್ಲಿ ವಿಂಗ್ ಚುನ್‌ನ್ನು ಅಭ್ಯಾಸಿಸಿದರು. ಆತ ವಿಂಗ್ ಚುನ್ ತರಬೇತಿಯನ್ನು ಒಂದು ವರ್ಷ ಪೂರ್ಣಗೊಳಿಸಿದ್ದಾಗ ಯಿಪ್ ಮಾನ್‌ರ ಕೆಲವು ವಿದ್ಯಾರ್ಥಿಗಳು ಲೀ ಜೊತೆ ತರಬೇತಿ ಪಡೆಯಲು ನಿರಾಕರಿಸಿದರು. ಚೀನಾದವರು ಸಮರ ಕಲೆಗಳ ತಂತ್ರಗಳ ಕಲಿಸುವಿಕೆಯನ್ನು ಉಳಿದವರಿಂದ ಅದರಲ್ಲೂ ವಿಶೇಷವಾಗಿ ವಿದೇಶೀಯರೊಂದಿಗೆ ರಹಸ್ಯವಾಗಿಡುತ್ತಿದ್ದುದರಿಂದ ಅವನ ಪೂರ್ವೇತಿಹಾಸ (ಅವನ ತಾಯಿ ಜರ್ಮನ್ ಮನೆತನದ ನೆಲೆಯಿಂದ ಬಂದವರು) ಇದಕ್ಕೆ ಮೂಲ ಕಾರಣ.[೩೩] ನಂತರ ಅವನೊಬ್ಬನೇ ಯಿಪ್ ಮಾನ್‌ನಿಂದ ಖಾಸಗಿಯಾಗಿ ಮತ್ತು ಶಾಲೆಯಿಂದ ಹೊರಗೆ ತನ್ನ ವಿಂಗ್ ಚುನ್ ಸ್ನೇಹಿತರಾದ ವಿಲಿಯಮ್ ಚೆವುಂಗ್ ಮತ್ತು ವೊಂಗ್ ಶುನ್ ಲಿವುಂಗ್‌ರೊಂದಿಗೆ ತರಬೇತಿಯನ್ನು ಪಡೆದನು.
ಜುನ್ ಫಾನ್ ಗುಂಗ್ ಫೂ
ಬದಲಾಯಿಸಿ1959ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಬಂದ ನಂತರ ಲೀಯವರು ಸಮರ ಕಲೆಗಳನ್ನು ಕಲಿಸಲು ಪ್ರಾರಂಭಿಸಿದರು. ತಾವು ಕಲಿಸುತ್ತಿದ್ದುದನ್ನು ಅವರು ಜುನ್ ಫಾನ್ ಗುಂಗ್ ಫೂ ಎಂದು ಕರೆಯುತ್ತಿದ್ದರು. ಜುನ್ ಫಾನ್ ಗುಂಗ್ ಫೂ (ಪದಶಃ ಬ್ರೂಸ್ ಲೀಯ ಕುಂಗ್ ಫೂ). ಅದು ಮೂಲತಃ ವಿಂಗ್ ಚುನ್‌ನ ಅವರದೇ ಆದ ಆವೃತ್ತಿಯಾಗಿತ್ತು/ಮಾರ್ಗವಾಗಿತ್ತು.[೩೪] ಜುಡೋ ಪರಿಣತ ಹಾಗೂ ನಂತರ ಲೀಯವರ ಮೊದಲ ಸಹಾಯಕ ತರಬೇತುದಾರರಾದ ಜೆಸ್ಸೆ ಗ್ಲೋವರ್‌ರವರೊಂದಿಗೆ ಲೀ ಸಿಯಾಟಲ್‌ನಲ್ಲಿ ಭೇಟಿಯಾದ ಸ್ನೇಹಿತರಿಗೆಲ್ಲಾ ಸಮರಕಲೆಗಳನನ್ನು ಕಲಿಸುತ್ತಿದ್ದರು. ಕ್ಯಾಲಿಫೋರ್ನಿಯಾಕ್ಕೆ ಹೋಗುವ ಮೊದಲು ಲೀ ಸಿಯಾಟಲ್‌ನಲ್ಲಿ ಲೀ ಜುನ್ ಫಾನ್ ಗುಂಗ್ ಫೂ ಇನ್‌ಸ್ಟಿಟ್ಯೂಟ್ ಹೆಸರಿನ ತಮ್ಮ ಮೊದಲ ಸಮರ ಕಲೆಗಳ ಶಾಲೆಯನ್ನು ತೆರೆದರು.
ವಿಂಗ್ ಚುನ್‌ನ ನೇರಗುರಿ ಮತ್ತು ಉತ್ತರದ ಶಾವೋಲಿನ್ ಕುಂಗ್ ಫೂವಿನ ಶಕ್ತಿಗಳನ್ನು ಒಂದುಗೂಡಿಸಿ ಲೀ ತಮ್ಮದೇ ಆದ ಒದೆಯುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ಕಾಲನ್ನು ಪೂರ್ಣವಾಗಿ ಬಿಡಿಸದೆ ತುಂಬಾ ಚುರುಕಾಗಿರುತ್ತಿದ್ದ ಲೀಯವರ ಒದೆಯು ಗುರಿಯನ್ನು ಶೀಘ್ರವಾಗಿ ತಲುಪುತಿತ್ತು.
ಜೀತ್ ಕುನೆ ಡೊ
ಬದಲಾಯಿಸಿಜೀತ್ ಕುನೆ ಡೊ 1965ರಲ್ಲಿ ಹುಟ್ಟಿಕೊಂಡಿತು. ಲೀಯವರ ಹೋರಾಟದ ತತ್ವವು ವಾಂಗ್ ಜ್ಯಾಕ್ ಮಾನ್‌ರೊಂದಿಗಿನ ಪಂದ್ಯವೊಂದರಿಂದ ಪ್ರಭಾವಿತವಾಗಿತ್ತು. ವಿಂಗ್ ಚುನ್ ತಂತ್ರಗಳ ಮೂಲಕ ಹೋರಾಟ ದೀರ್ಘವಾಗುವುದಲ್ಲದೇ ತಮ್ಮ ಸಾಮರ್ಥ್ಯದ ಪೂರ್ಣ ಪ್ರಮಾಣವನ್ನು ಬಳಸಲು ಅದರಿಂದ ತಮಗೆ ಸಾಧ್ಯವಾಗುವುದಿಲ್ಲವೆಂದು ಭಾವಿಸಿದ್ದರು. ಸಾಂಪ್ರದಾಯಿಕ ಸಮರ ಕಲೆಗಳ ತಂತ್ರಗಳು ತುಂಬಾ ಜಟಿಲ ಹಾಗೂ ಅವ್ಯವಸ್ಥಿತವಾದ ಬಯಲು ಕುಸ್ತಿಯ ಸಂದರ್ಭದಲ್ಲಿ ಸಂಪ್ರದಾಯಬದ್ಧತೆಗಳನ್ನು ಕಾರ್ಯತಃ ಪಾಲಿಸುವುದು ಉಚಿತವಾಗುವುದಿಲ್ಲ ಎಂಬ ನಿಲುವನ್ನು ಹೊಂದಿದ್ದರು. "ಸಾಧ್ಯತೆ , ನಮ್ಯತೆ , ವೇಗ , ಮತ್ತು ದಕ್ಷತೆ "ಗಳಿಗೆ ಹೆಚ್ಚಿನ ಒತ್ತನ್ನು ನೀಡುವುದರೊಂದಿಗೆ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಲೀ ನಿರ್ಧರಿಸಿದರು. ಬಲಕ್ಕಾಗಿ ತೂಕ ತರಬೇತಿ, ತಾಳ್ಮೆಗಾಗಿ ಓಟ, ನಮ್ಯತೆಗಾಗಿ ದೇಹವನ್ನು ಹಿಗ್ಗಿಸುವುದು ಮತ್ತು ಇನ್ನಿತರ ವಿವಿಧ ತರಬೇತಿ ವಿಧಾನಗಳನ್ನು ಬಳಸುತ್ತಾ ನಿರಂತರವಾಗಿ ಅಭಿವೃದ್ಧಿಪಡಿಸಿದರು.
ಲೀ ತಾವು ಹೇಳಿದ "ದ ಸ್ಟೈಲ್ ಆಫ್ ನೊ ಸ್ಟೈಲ್ "ಗೆ ಹೆಚ್ಚು ಪ್ರಾಶಸ್ತ್ಯ ನೀಡಿದರು. ಈ ಶೈಲಿಯು ಶಾಸ್ತ್ರೀಯ ಪ್ರಕಾರವನ್ನು ತೊಲಗಿಸುವುದು. ಇದು ಕೇವಲ ಸಾಂಪ್ರದಾಯಿಕ ಶೈಲಿಗಳ ಸೂಚಕವಾಗಿದೆ ಎಂದು ಲೀ ಹೇಳಿಕೊಂಡಿದ್ದಾರೆ. ಏಕೆಂದರೆ ಜುನ್ ಫಾನ್ ಗುಂಗ್ ಫೂ ವ್ಯವಸ್ಥೆಯಲ್ಲಿ ತುಂಬಾ ನಿರ್ಬಂಧಗಳಿವೆ ಎಂದು ಲೀಯವರು ಅಭಿಪ್ರಾಯಪಟ್ಟಿದ್ದರು. ಅದು ತತ್ವಶಾಸ್ತ್ರವಾಗಿ ಅಭಿವೃದ್ಧಿಯಾಯಿತು ಮತ್ತು ಸಮರ ಕಲೆಯನ್ನು ಅವರು (ಡ್ಯಾನ್ ಇನೊಸ್ಯಾಂಟೊರವರು ಸಲಹೆ ಮಾಡಿದ ಹೆಸರು) ಜೀತ್ ಕುನೆ ಡೊ ಅಥವಾ ಮುಷ್ಠಿಯನ್ನು ತಡೆಗಟ್ಟುವ ರೀತಿ ಎಂದು ಕರೆದರು. ಜೀತ್ ಕುನೆ ಡೊನಲ್ಲಿನ ಲೀಯವರ ಸಮರ ಕಲೆ ಕಲ್ಪನೆಯು ಪರಿಮಾಣಗಳು ಮತ್ತು ಮಿತಿಗಳಿಲ್ಲದಂತಹಾ ಉದ್ದೇಶ ಹೊಂದಿದ್ದರೂ ಶೈಲಿಗಳು ನಿರ್ದಿಷ್ಟ ಪರಿಮಾಣಗಳನ್ನು ಸೂಚಿಸುವುದರಿಂದ ನಂತರ ಅವರು ಇದರ ಬಗ್ಗೆ ವಿಷಾದಿಸಿರಬಹುದು.[೩೫]
ಲೀ ಕೇವಲ 4 ತರಬೇತುದಾರರನ್ನು ಮಾತ್ರ ಪ್ರಮಾಣೀಕರಿಸಿದರು. ಟಕಿ ಕಿಮುರಾ, ಜೇಮ್ಸ್ ಯಿಮ್ ಲೀ (ಬ್ರೂಸ್ ಲೀಗೆ ಯಾವುದೇ ಸಂಬಂಧವಿಲ್ಲ), ಟೆಡ್ ವೊಂಗ್ ಮತ್ತು ಡ್ಯಾನ್ ಇನೊಸ್ಯಾಂಟೊರವರು ಲೀಯವರಿಂದ ವೈಯಕ್ತಿಕವಾಗಿ ಪ್ರಮಾಣೀಕರಿಸಿದ ತರಬೇತಿದಾರರು. ಇನೊಸ್ಯಾಂಟೊರವರು ಜೀತ್ ಕುನೆ ಡೊ, ಜುನ್ ಫಾನ್ ಗುಂಗ್ ಫೂ, ಮತ್ತು ಬ್ರೂಸ್ ಲೀಯ ಟಾವೊ ಆಫ್ ಚೈನಿಸ್ ಗುಂಗ್ ಫೂನಲ್ಲಿ ನೇರವಾಗಿ ಬ್ರೂಸ್ ಲೀಯವರಿಂದ 3ನೇ ರ್ಯಾಂಕ್ (ತರಬೇತುದಾರ) ಹೊಂದಿದ್ದರು. ಟಕಿ ಕಿಮುರಾರವರು ಜುನ್ ಫಾನ್ ಗುಂಗ್ ಫೂನಲ್ಲಿ 5ನೇ ರ್ಯಾಂಕ್ ಹೊಂದಿದ್ದರು. ಜೇಮ್ಸ್ ಯಿಮ್ ಲೀ (ಈಗ ನಿಧನರಾಗಿದ್ದಾರೆ) ಜುನ್ ಫಾನ್ ಗುಂಗ್ ಫೂನಲ್ಲಿ 3ನೇ ರ್ಯಾಂಕ್ ಹೊಂದಿದ್ದರು. ಟೆಡ್ ವುಂಗ್‌ರವರು ನೇರವಾಗಿ ಬ್ರೂಸ್ ಲೀಯವರಿಂದ ಜೀತ್ ಕುನೆ ಡೊನಲ್ಲಿ 2ನೇ ರ್ಯಾಂಕ್‌ಗೆ ಪರಿಗಣಿಸಲ್ಪಟ್ಟಿದ್ದರು. ಜೇಮ್ಸ್ ಯಿಮ್ ಲೀ ಮತ್ತು ಟಕಿ ಕಿಮುರಾ ಜುನ್ ಫಾನ್ ಗುಂಗ್ ಫೂನಲ್ಲಿ ರ್ಯಾಂಕ್‌ನ್ನು ಹೊಂದಿದ್ದರು. ಜೀತ್ ಕುನೆ ಡೊನಲ್ಲಿ ಯಾವುದೇ ರ್ಯಾಂಕ್‌ನ್ನು ಹೊಂದಿಲ್ಲ. ಜೀತ್ ಕುನೆ ಡೊ ಎಂದು ಮರುನಾಮಕರಣವಾದ ನಂತರ ಜುನ್ ಫಾನ್ ಗುಂಗ್ ಫೂನಲ್ಲಿ ಟಾಕಿಯವರು 5ನೇ ರ್ಯಾಂಕ್‌ನ್ನು ಪಡೆದರು. ಹಾಗೆಯೇ ಒಂದೇ ದಿನ ಬ್ರೂಸ್ ಲೀ ಡ್ಯಾನ್ ಇನೊಸ್ಯಾಂಟೊರವರಿಗೆ ಎಲ್ಲಾ ಮೂರು ಡಿಪ್ಲೊಮಾಗಳನ್ನು ನೀಡಿದ್ದರು. ಲೀಯವರ ನಿಧನದ ನಂತರ ಡಾನ್ ಇನೊಸ್ಯಾಂಟೊ ಕೆಲವು ಜೀತ್ ಕುನೆ ಡೊ ತರಬೇತಿದಾರರನ್ನು ತಾವೇ ಪ್ರಮಾಣೀಕರಿಸಿದರೆ ಇನ್ನು ಹಲವರನ್ನು ಬ್ರೂಸ್ ಲೀ ಸಹಿ ಮಾಡಿದ್ದ ಪ್ರಮಾಣಪತ್ರಗಳ ಮೂಲಕ ಪ್ರಮಾಣೀಕರಿಸಿದರು.
ಲೀಯವರ ಆತ್ಮೀಯ ಗೆಳೆಯರಾಗಿದ್ದ ಜೇಮ್ಸ್ ಯಿಮ್ ಲೀ ಯಾವುದೇ ಹೊಸ ವಿದ್ಯಾರ್ಥಿಗಳನ್ನು ಪ್ರಮಾಣೀಕರಿಸಿದೆಯೇ ನಿಧನರಾದರು. ಇದಕ್ಕೆ ಏಕೈಕ ಅಪವಾದವೆಂದರೆ ಜೇಮ್ಸ್ ಗರಡಿಯಲ್ಲಿ ಜೀತ್ ಕುನೆ ಡೊವನ್ನು ಕಲಿತ ಹಾಗೂ 1972ರಲ್ಲಿ ಜೇಮ್ಸ್‌ರವರ ಖಾಸಗಿ ಪತ್ರದ ಮೂಲಕ ತನ್ನ JKDಯ ಕಲಿಕೆಯನ್ನು ಪ್ರಚುರಪಡಿಸಲು ಅನುಮತಿ ಪಡೆದಿದ್ದ ಗ್ಯಾರಿ ಡಿಲ್ ಎಂಬುವವರು. ಪ್ರಸಕ್ತ ದಿನಮಾನದವರೆಗೆ ಟಕಿ ಕಿಮುರಾ ಜುನ್ ಫಾನ್ ಗುಂಗ್ ಫೂನಲ್ಲಿ ಅವರ ಮಗ ಮತ್ತು ಉತ್ತರಾಧಿಕಾರಿಯಾದ ಆಂಡಿ ಕಿಮುರಾರವರನ್ನು ಮಾತ್ರ ಪ್ರಮಾಣೀಕರಿಸಿದ್ದರು. ಡಾನ್ ಇನೊಸ್ಯಾಂಟೊಯವರು ಬ್ರೂಸ್ ಲೀಯ ತಮ್ಮ ತರಬೇತಿ ಪರಂಪರೆಯನ್ನು ಬ್ರೂಸ್ ಲೀಯವರೊಂದಿಗೆ ಗುರುತಿಸಿಕೊಳ್ಳಲು ಅನುವಾಗುವಂತೆ 30ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಕಲಿಸುವುದು ಮತ್ತು ಆಯ್ದ ವಿದ್ಯಾರ್ಥಿಗಳನ್ನು ಪ್ರಮಾಣೀಕರಿಸುವುದನ್ನು ಮುಂದುವರಿಸುವುದರ ಮೂಲಕ ಸಾವಿರಾರು ಸಮರ ಕಲೆಗಳ ಪರಿಣತರಿಗೆ ತರಬೇತಿ ನೀಡಿದರು. ಲೀ ತಮ್ಮ ಮರಣಕ್ಕೂ ಮೊದಲು ಇಬ್ಬರೂ ತರಬೇತುದಾರರಾದ ಇನೊಸ್ಯಾಂಟೊ ಮತ್ತು ಕಿಮುರಾ (1972ರಲ್ಲಿ ಜೇಮ್ಸ್ ಯಿಮ್ ಲಿಯವರು ನಿಧನರಾದರು)ರಿಗೆ ತಮ್ಮ ಶಾಲೆಗಳನ್ನು ವಿಭಜಿಸಿ ಮುಂದುವರೆಸಲು ಹೇಳಿದ್ದರು. ನಂತರ ಟಕಿ ಕಿಮುರಾ ಮತ್ತು ಡಾನ್ ಇನೊಸ್ಯಾಂಟೊ ಇಬ್ಬರೂ "ಸಂಖ್ಯೆ ಕಡಿಮೆಯಿರಲಿ, ಆದರೆ ಗುಣಮಟ್ಟ ಉತ್ತಮವಿರಲಿ" ಎಂಬ ನಿಯಮದಡಿ ಚಿಕ್ಕ ತರಗತಿಗಳಲ್ಲಿ ಕಲಿಸುತ್ತಿದ್ದರು. ಚುಕ್ ನೊರಿಸ್, ಜೊಯಿ ಲೇವಿಸ್ ಮತ್ತು ಮೈಕ್ ಸ್ಟೋನ್‌ರಂತಹ ವಿಶ್ವ ಕರಾಟೆ ಚಾಂಪಿಯನ್‌ರಿಗೆ ಸಹ ಬ್ರೂಸ್ ಕಲಿಸಿದ್ದರು. ಈ 3ರಲ್ಲಿ ಎಲ್ಲರೂ ಬ್ರೂಸ್‌ನೊಂದಿಗೆ ತರಬೇತಿ ಪಡೆಯುತ್ತಿದ್ದ ಅವಧಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಪ್ರತಿ ಕರಾಟೆ ಪಂದ್ಯಾವಳಿಗಳನ್ನು ಗೆದ್ದಿದ್ದರು.[೩೬]
ಜೀತ್ ಕುನೆ ಡೊನ ವಿವಾದಗಳು
ಬದಲಾಯಿಸಿ"ಜುನ್ ಫಾನ್ ಜೀತ್ ಕುನೆ ಡೊ" ಎನ್ನುವ ಹೆಸರು ಕಾನೂನುಬದ್ಧವಾಗಿ ಟ್ರೇಡ್‌ಮಾರ್ಕ್‌ನಂತೆ ಪರಿಗಣಿಸಲಾಗಿದೆ ಮತ್ತು ಬ್ರೂಸ್ ಲೀಯ ಹೆಸರಿನ ಹಕ್ಕುಗಳು, ಹಾಗೆಯೇ ಜೀತ್ ಕುನೆ ಡೊ ಲೊಗೊ ಮತ್ತು ವೈಯಕ್ತಿಕ ಸಮರ ಕಲೆಗಳ ಆಸ್ತಿಯನ್ನು (ವೈಯಕ್ತಿಕ ಫೋಟೋಗಳು ಮತ್ತು ಅಸಂಖ್ಯಾತ ವೈಯಕ್ತಿಕ ವೈಶಿಷ್ಟ್ಯಗಳುಗಳು ಮತ್ತು ಸ್ಮರಣಿಕೆಗಳು ಸೇರಿದಂತೆ) ಕೃತಿಸ್ವಾಮ್ಯಗೊಂಡ ವಾಣಿಜ್ಯ ಬಳಕೆಗೆ ನೀಡುವ ಅಧಿಕಾರವನ್ನು ಲೀ ಎಸ್ಟೇಟ್‌ಗೆ ನೀಡಲಾಗಿದೆ. ಈ ಹೆಸರು ಎರಡು ಭಾಗಗಳಿಂದ ಕೂಡಿದೆ: 'ಜುನ್ ಫಾನ್' (ಲೀಯವರ ಚೀನೀಯ ಹೆಸರು) ಮತ್ತು 'ಜೀತ್ ಕುನೆ ಡೊ' (ಮುಷ್ಠಿಯನ್ನು ತಡೆಗಟ್ಟುವ ರೀತಿ).
1964ರ ಲಾಂಗ್ ಬೀಚ್ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಗಳ ಅತಿಥಿ
ಬದಲಾಯಿಸಿಎಡ್ ಪಾರ್ಕರ್‌ನ ಆಮಂತ್ರಣದ ಮೇರೆಗೆ ಲೀಯವರು 1964ರಲ್ಲಿ ನಡೆದ ಲಾಂಗ್ ಬೀಚ್ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು [೩೭] ಮತ್ತು ಸುಮಾರು ಭುಜದ ಅಗಲಕ್ಕೆ ಸರಿಯಾಗಿ ಕಾಲಿನೊಂದಿಗೆ ಎರಡು ಬೆರಳಿನ ಪುಷ್‌ಅಪ್‌ಗಳು (ಹೆಬ್ಬೆರಳು ಮತ್ತು ತೋರು ಬೆರಳು ಬಳಸಿ) ಪುನರಾವರ್ತನವಾಗಿ ಮಾಡಿದ್ದರು. ಅದೇ ಲಾಂಗ್ ಬೀಚ್ ಕಾರ್ಯಕ್ರಮದಲ್ಲಿ ಲೀಯವರು "ಒಂದಿಂಚು ಹೊಡೆತ "ವನ್ನು ಪ್ರದರ್ಶಿಸಿದ್ದರು [೩೮]. ಅದರ ವಿವರಣೆ ಹೀಗಿದೆ: ಸ್ಥಿರವಾಗಿ ನಿಂತಿರುವ ಜೊತೆಗಾರನ ಎದುರು ಲೀ ಸ್ವಲ್ಪ ಬಾಗಿದ ಬಲಮೊಣಕಾಲಿನೊಂದಿಗೆ ನೇರವಾಗಿ ನಿಂತಿದ್ದರು. ಲೀಯವರ ಬಲಗೈ ಭಾಗಶಃ ಚಾಚಿತ್ತು ಮತ್ತು ಅವರ ಬಲಗೈ ಮುಷ್ಠಿ ಜೊತೆಗಾರನ ಎದೆಯಿಂದ ಸುಮಾರು ಒಂದಿಂಚು ದೂರದಲ್ಲಿತ್ತು. ಸರಿಯಾದ ದೇಹ ಭಂಗಿಯಲ್ಲಿರುವಾಗ ಲೀಯವರು ತಮ್ಮ ಬಲಗೈಯನ್ನು ಹಿಂದೆಮುಂದೆ ಚಲಿಸದೆ ಜೊತೆಗಾರನನ್ನು ಹಿಂದೆ ಹೋಗಿ ನೆಲದ ಮೇಲೆ ಬೀಳುವುದನ್ನು ತಡೆಯಲು ಅವನ ಹಿಂದೆ ಇರಿಸಲಾದ ಕುರ್ಚಿಯಲ್ಲಿ ಬೀಳುವಂತೆ ಬಲವಾಗಿ ನೀಡಿದ ಹೊಡೆತ ಆತನ ದೇಹದ ಜಡತ್ವ ಆತನನ್ನು ನೆಲಕ್ಕೆ ಬೀಳುವ ಹಾಗೆ ಮಾಡಿತ್ತು .
ಲೀಯವರ ಆ ಸ್ವಯಂ ಸಹಾಯಕ ಕ್ಯಾಲಿಫೋರ್ನಿಯಾದ ಸ್ಟಾಕ್ಟನ್‌ನ ಬಾಬ್ ಬೇಕರ್ ಆಗಿದ್ದ."ನಾನು ಬ್ರೂಸ್ ಈ ತರಹದ ಪ್ರದರ್ಶನವನ್ನು ಮತ್ತೊಮ್ಮೆ ಮಾಡದಂತೆ ಹೇಳಿದ್ದೆನು", ಎನ್ನುವುದನ್ನು ಅವರು ಜ್ಞಾಪಿಸಿಕೊಂಡರು. ಹಾಗೆಯೇ ಮುಂದುವರಿಸಿ ಅವರು, "ನನಗೆ ಅವರು ಕಳೆದ ಬಾರಿ ಹೊಡೆದಾಗ, ತಾಳಲಾಗದ ನನ್ನ ಎದೆಯ ನೋವಿನಿಂದಾಗಿ ಕೆಲಸ ಬಿಟ್ಟು ಸಾಕಷ್ಟು ಕಾಲ ಮನೆಯಲ್ಲಿಯೇ ಇರಬೇಕಾಯಿತು." [೩೯]
1967ರ ಲಾಂಗ್ ಬೀಚ್ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಅತಿಥಿ
ಬದಲಾಯಿಸಿಲೀ 1967ರಲ್ಲಿ ನಡೆದ ಲಾಂಗ್ ಬೀಚ್ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಸಹ ಪಾಲ್ಗೊಂಡಿದ್ದರು.[೩೭] USKA ವಿಶ್ವ ಕರಾಟೆ ಚಾಂಪಿಯನ್ ಆಗಿರುವ ವಿಕ್ ಮೂರೆರವರ ಎದುರು ಪ್ರಸಿದ್ಧವಾದ "ನಿಲ್ಲಿಸಲಾಗದ ಹೊಡೆತ" ಸೇರಿದಂತೆ ವಿವಿಧ ಪ್ರದರ್ಶನಗಳನ್ನು ನೀಡಿದ್ದರು. ಲೀಯವರು ಮೂರೆಯವರಿಗೆ ತಾವು ನೇರವಾದ ಹೊಡೆತವನ್ನು ಹೊಡೆಯುವುದಾಗಿ ಮತ್ತು ನೀವು ಏನನ್ನಾದರೂ ಮಾಡಿ ಅದನ್ನು ತಡೆಯಲು ಪ್ರಯತ್ನಿಸಬೇಕೆಂದು ಹೇಳಿದರು. ಲೀ ಕೆಲವು ಹೆಜ್ಜೆ ಹಿಂದೆ ಹೋಗಿ ಮೂರೆಯವರನ್ನು ತಯಾರಾಗಿದ್ದೀರಾ ಎಂದು ಕೇಳಿದ ನಂತರ ಮೂರೆ ತಲೆ ಆಡಿಸಿ ದೃಢಪಡಿಸಿದಾಗ, ಹೊಡೆಯಲು ಸರಿಯಾದ ವ್ಯಾಪ್ತಿಗೆ ಬರುವವರೆಗೆ ಲೀ ಅವರೆಡೆಗೆ ಬರುತ್ತಿದ್ದರು. ಲೀಯವರು ಅವರ ಮುಖಕ್ಕೆ ನೇರವಾಗಿ ಹೊಡೆಯುತ್ತಿದ್ದರು ಮತ್ತು ಅದು ಮುಖವನ್ನು ತಲುಪುವ ಮೊದಲು ಕೈಯನ್ನು ನಿಲ್ಲಿಸುತ್ತಿದ್ದರು. ಮೂರೆ ಎಂಟು ಯತ್ನಗಳಲ್ಲಿ ಯಾವುದೇ ಹೊಡೆತವನ್ನು ತಡೆಯಲು ಸಫಲರಾಗಲಿಲ್ಲ.[೪೦]
ಹೋರಾಟಗಳು/ಮುಷ್ಟಿ ಯುದ್ಧಗಳು
ಬದಲಾಯಿಸಿಗೇರಿ ಎಲ್ಮ್ಸ್‌ನನ್ನು ಮೂರು 1 ನಿಮಿಷದ ಪಾಳಿಗಳಲ್ಲಿ ಸೋಲಿಸಿದ ಪಂದ್ಯದ ಮೂಲಕ ಹನ್ನೆರಡು ಹಾಂಗ್ ಕಾಂಗ್ ಶಾಲೆಗಳ ಮಧ್ಯೆ 1959ರಲ್ಲಿ ನಡೆದ ಹಾಂಗ್ ಕಾಂಗ್ ಅಂತರ ಶಾಲಾ ಮುಷ್ಟಿಯುದ್ಧ ಪಂದ್ಯಾವಳಿಗಳಿಗೆ ವಿಜಯರಥದೊಂದಿಗೆ ಲೀ ಪ್ರವೇಶಿಸಿದ.[೪೧]
ಲೀಯವರ ಅಂತಿಮ ಪ್ರಖ್ಯಾತಿ ಮತ್ತು ಸಮರ ಕಲೆಗಳಲ್ಲಿನ ಪರಾಕ್ರಮ, ಯಾವುದೇ ರೀತಿಯಲ್ಲಾದರೂ ಪ್ರಖ್ಯಾತಿ ಗಳಿಸಬೇಕೆಂಬ ಹಂಬಲದ ಅನೇಕ ಹಾದಿಬದಿಯ ಪುಂಡರು, ಸಾಹಸಿ ಕಲಾವಿದರು ಮತ್ತು ಸಮರ ಕಲೆಗಳ ಇತರೆ ನಟರೊಂದಿಗೆ ಘರ್ಷಣೆಗಳಾಗಲು ಕಾರಣವಾಗುತ್ತಿತ್ತು. USPK ಕರಾಟೆ ವಿಜೇತ ಮತ್ತು ಎಂಟರ್ ದ ಡ್ರ್ಯಾಗನ್ ನ ಸಹ-ತಾರೆ, ಬಾಬ್ ವಾಲ್ ಲೀಯವರನ್ನು ಹಂಗಿಸುತ್ತಲೇ ಇದ್ದ ಓರ್ವ ಚಲನಚಿತ್ರ ಇತರೆ ನಟನೊಂದಿಗಿನ ಮುಖಾಮುಖಿಯಲ್ಲಿ ಆ ಇತರೆ ನಟನ ನೀರಿಳಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಆ ಇತರೆ ನಟನು ಲೀಯವರ ಬಗ್ಗೆ "ಆತನು ಚಿತ್ರತಾರೆಯಷ್ಟೇ, ಆದರೆ ಸಮರ ಕಲಾ ನಿಪುಣರಲ್ಲ" ಮತ್ತು "ಯಾವುದೇ ರೀತಿಯಲ್ಲಿ ಹೋರಾಟಗಾರನಲ್ಲ" ಎಂದು ಹುಯಿಲೆಬ್ಬಿಸುತ್ತಿದ್ದನು. ಆ ನಟನ ಮೂದಲಿಸುವಿಕೆಗೆ ತಾನು ಕುಳಿತಿದ್ದ ಗೋಡೆಯ ಮೇಲಿಂದ ಕೆಳಗೆ ಹಾರಲು ಸವಾಲೆಸೆಯುವ ಮೂಲಕ ಲೀ ಉತ್ತರ ಹೇಳಿದ್ದರು. ಲೀಯವರ ಆ ವಿರೋಧಿ ನಟನನ್ನು ವಾಲ್‌ರು "ಹಾಂಗ್ ಕಾಂಗ್‌ನಲ್ಲಿನ ಪುಂಡರ ಪಟಾಲಂ ಮಾದರಿಯ ವ್ಯಕ್ತಿ ," "ಓರ್ವ ಉತ್ತಮ ಸಮರ ಕಲಾ ನಿಪುಣ," ಎಂದು ವರ್ಣಿಸಿದುದಲ್ಲದೇ ಆತನು "ಚುರುಕು, ಶಕ್ತಿಶಾಲಿ, ಮತ್ತು ಬ್ರೂಸ್‌ರಿಗಿಂತ ದೊಡ್ಡ ಗಾತ್ರದವನಾಗಿದ್ದನೆಂಬುದು ಗಮನಕ್ಕೆ ಬಂತೆಂದು ಹೇಳಿದ್ದರು.[೪೨]
"This kid was good. He was strong and fast, and he was really trying to punch Bruce's brains in. But Bruce just methodically took him apart."[೪೩]
"Bruce kept moving so well, this kid couldn't touch him...Then all of a sudden, Bruce got him and rammed his ass with the wall and swept him up, proceeding to drop him and plant his knee into his opponent's chest, locked his arm out straight, and nailed him in the face repeatedly."[೪೪] -- Bob Wall
"ಬ್ರೂಸ್ ಲೀ ವೃತ್ತಿಪರ ಮುಷ್ಟಿಯುದ್ಧದಲ್ಲಿ ಇಳಿದಿದ್ದರೆ, ಆತನು ಲೈಟ್-ವೇಯ್ಟ್ ವಿಭಾಗ ಅಥವಾ ಕಿರಿಯ-ವೆಲ್ಟರ್‌ವೇಯ್ಟ್ ವಿಭಾಗದಲ್ಲಿ ಸುಲಭವಾಗಿ ಪ್ರಥಮ ಮೂರು ಶ್ರೇಯಾಂಕಿತರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದರೆಂಬುದರಲ್ಲಿ ಯಾವುದೇ ಸಂದೇಹವೂ ಇಲ್ಲ" ಎಂಬ ಅಭಿಪ್ರಾಯವನ್ನು ಡಾನ್ ಇನೊಸ್ಯಾಂಟೊ ವ್ಯಕ್ತಪಡಿಸಿದರು.[೪೫]
ದೇಹದಾರ್ಢ್ಯ ಮತ್ತು ಪೌಷ್ಟಿಕತೆ
ಬದಲಾಯಿಸಿದೇಹದಾರ್ಢ್ಯ
ಬದಲಾಯಿಸಿತನ್ನ ಕಾಲದ ಅನೇಕ ಸಮರ ಕಲಾ ನಿಪುಣರು ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಹೆಚ್ಚು ಸಮಯ ವ್ಯಯಿಸುತ್ತಿರಲಿಲ್ಲವೆಂಬ ಅಭಿಪ್ರಾಯವನ್ನು ಲೀ ಹೊಂದಿದ್ದರು. ಬ್ರೂಸ್ ಸಂಪೂರ್ಣ ದೈಹಿತ ಕ್ಷಮತೆಗೆ ಅಗತ್ಯವಾದ ಎಲ್ಲಾ ಅಂಶಗಳನ್ನು ಎಂದರೆ —ಸ್ನಾಯು ಬಲ, ಸ್ನಾಯು ಕ್ಷಮತೆ, ಹೃದಯ ಮತ್ತು ರಕ್ತನಾಳಗಳ ಸಹಿಷ್ಣುತೆ , ಮತ್ತು ನಮ್ಯತೆಗಳನ್ನು ಗಣನೆಗೆ ತೆಗೆದುಕೊಂಡಿದ್ದರು. ಅವರು ಬೃಹತ್ ಗಾತ್ರದ ಸ್ನಾಯುಗಳನ್ನು ಅಥವಾ ಮಾಂಸಖಂಡಗಳನ್ನು ಬೆಳೆಸಲು ಸಾಂಪ್ರದಾಯಿಕ ದೇಹದಾರ್ಢ್ಯವರ್ಧನೆ ತಂತ್ರಗಳನ್ನು ಪ್ರಯತ್ನಿಸಿದರು. ಆದರೂ, ಲೀಯವರು ಸಮರ ಕಲೆ ನೈಪುಣ್ಯತೆ ಸಾಧಿಸಲು ನಡೆಸುವ ದೈಹಿಕ ತರಬೇತಿಗಳ ಯಶಸ್ಸಿನಲ್ಲಿ ಮಾನಸಿಕ ಮತ್ತು ಅಭೌತಿಕ ತಯಾರಿಗಳು ಮೂಲಭೂತ ಅಗತ್ಯವಾಗಿವೆ ಎಂದು ಒತ್ತಿಹೇಳುವುದನ್ನು ಮರೆಯುವುದಿಲ್ಲ. ದ ಟಾವೋ ಆಫ್ ಜೀತ್ ಕುನೆ ಡೋ ಎಂಬ ತನ್ನ ಪುಸ್ತಕದಲ್ಲಿ ಆತ ಹಾಗೆ ಹೇಳುತ್ತಾರೆ.
Training is one of the most neglected phases of athletics. Too much time is given to the development of skill and too little to the development of the individual for participation." "JKD, ultimately is not a matter of petty techniques but of highly developed spirituality and physique.[೪೬]
1965ರಲ್ಲಿ ಕೇವಲ 24 ವರ್ಷದವರಿದ್ದಾಗ ಹಾಂಗ್ ಕಾಂಗ್‌ನಲ್ಲಿ ಕೆಲ ದಿನದ ತಂಗಿದ್ದಾಗ ಲೀ ಪಡೆದ ತೂಕ ತರಬೇತಿಯು ಆತನ ತೋಳುಗಳ ಕ್ಷಮತೆ ಮೇಲೆ ಹೆಚ್ಚಿನ ಒತ್ತು ನೀಡುವ ಹಾಗೆ ಮಾಡಿತು. ಪದ್ಮಾಸನ, ಪುಷ್‌ಅಪ್‌ಗಳು, ತಿರುವುಮುರುವು ಸುರುಳಿಗಳು, ಕೇಂದ್ರೀಕೃತ ಸುರುಳಿಗಳು, ಫ್ರೆಂಚ್ ಪ್ರೆಸ್‌ಗಳು, ಮತ್ತು ಮಣಿಕಟ್ಟು ಸುರುಳಿ ಹಾಗೂ ಅದರ ತಿರುವುಮುರುವುಗಳೆರಡೂ ಸೇರಿದಂತೆ ಹಾಗೂ ಇನ್ನಿತರ ರೂಪದ ಕಸರತ್ತುಗಳ ಜೊತೆಗೆ ಎಂಟು ಪುನರಾವರ್ತನೆಗಳ ಮೂರು ಜೋಡಿಗಳಲ್ಲಿ 70ರಿಂದ 80 lbsಗಳಷ್ಟು (ಸುಮಾರು 32ರಿಂದ 36 kg) ತೂಕದ ರಟ್ಟೆ ಸುರುಳಿಯನ್ನು ಆ ಸಮಯದಲ್ಲಿ ಅವರು ನಿರ್ವಹಿಸಬಲ್ಲವರಾಗಿದ್ದರು.[೪೭] 6ರಿಂದ 12 ಆವರ್ತನೆಗಳವರೆಗೆ(ಒಮ್ಮೆಗೆ) ಅವರು ಪುನರಾವರ್ತನೆಗಳನ್ನು ಮಾಡುತ್ತಿದ್ದರು. ಈ ತರಬೇತಿಯ ವಿಧಾನವು ಆತನ ಸ್ನಾಯುಗಳ ಸೆಟೆಸುವಿಕೆಯನ್ನು ವೇಗವಾಗಿ ಮತ್ತು ನಿಧಾನವಾಗಿ ಮಾಡಲು ಉದ್ದೇಶಿಸಿದ್ದರೂ, ನಂತರದ ಪರಿಣಾಮವು ಬ್ರೂಸ್‌ರ ತೂಕ ವೃದ್ಧಿ ಅಥವಾ ಸದೃಢ ಮಾಂಸಖಂಡವೃದ್ಧಿಯು 160 lbsಗಳನ್ನು (ಸುಮಾರು 72 kg) ಮೀರುವ ಹಾಗೆ ಮಾಡಿತು. ಲೀಯವರು 2,500ಕ್ಕೂ ಪುಸ್ತಕಗಳನ್ನು ತನ್ನ ಖಾಸಗಿ ಗ್ರಂಥಭಂಡಾರದಲ್ಲಿ ಹೊಂದಿದ್ದರು ಎಂಬುದು ದಾಖಲಾಗಿದೆ. ನಂತರ ಅಲ್ಲಗಳೆಯಲಾದ "ಸ್ನಾಯುವಿನ ಗಾತ್ರ ಹಿರಿದಾದರೆ, ಶಕ್ತಿಯೂ ಹೆಚ್ಚುತ್ತದೆ" ಎಂಬ ತನ್ನ ಸಿದ್ಧಾಂತವನ್ನು ಪ್ರಚುರಪಡಿಸಿದರು. ಬ್ರೂಸ್‌ರವರು ತನ್ನ ದೈಹಿಕ ತರಬೇತಿಯ ದಿನಚರಿಯಲ್ಲಿ ತನ್ನ ದೈಹಿಕ ಸಾಮರ್ಥ್ಯವನ್ನು ಗರಿಷ್ಟ ಮಟ್ಟಕ್ಕೆ ಮುಟ್ಟಿಸಲು ಮಾನವ ಶರೀರದ ಗರಿಷ್ಟ ಮಿತಿಯನ್ನು ತಲುಪಿಸುವ ಉದ್ದೇಶದಿಂದ ನಿರಂತರವಾಗಿ ಪ್ರಯೋಗಗಳನ್ನು ಮಾಡಿದರು. ಅವರು ಹಗ್ಗ ಜಿಗಿದಾಟವೂ ಸೇರಿದಂತೆ, ತರಬೇತಿ ಹಾಗೂ ದೇಹದಾರ್ಢ್ಯಗೊಳಿಕೆಯ ಉದ್ದೇಶಗಳು ಪರಿಣಾಮಕಾರಿಯಾಗುವಂತೆ ವಿವಿಧ ಕಸರತ್ತುಗಳು ಮತ್ತು ಪದ್ಧತಿಗಳನ್ನು ಪಾಲಿಸಿದರು.[೪೮]
ವಾಸ್ತವವಾಗಿ ಪ್ರತಿ ಚಲನೆಯೂ ಕೆಲ ಮಟ್ಟಿಗೆ ಕಿಬ್ಬೊಟ್ಟೆಯ ಸಹಕಾರವನ್ನು ಅಪೇಕ್ಷಿಸುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ಸಮರ ಕಲಾ ನಿಪುಣರಿಗೆ ಪ್ರಮುಖ ಸ್ನಾಯು ಭಾಗಗಳಾಗಿವೆ ಎಂದು ಲೀಯವರು ನಂಬಿದ್ದರು. ಪ್ರಾಯಶಃ ಇನ್ನೂ ಮುಖ್ಯವಾಗಿ, "ಕಿಬ್ಬೊಟ್ಟೆಯು" ಪಕ್ಕೆಲಬುಗಳು ಮತ್ತು ಪ್ರಾಣಾಂಗಳನ್ನು ರಕ್ಷಿಸುವ ಕೋಶಗಳೆನ್ನಬಹುದು.
7 a.m.ರಿಂದ 9 a.m.ವರೆಗೆ ಜಠರ ಸ್ನಾಯುಗಳಿಗೆ ಬಲ ನೀಡುವ, ನಮ್ಯತೆ ನೀಡುವ ಕಸರತ್ತುಗಳಲ್ಲಿ ತೊಡಗಿಕೊಳ್ಳುತ್ತಿದ್ದರು ಹಾಗೂ ಓಡುತ್ತಿದ್ದರು ಹಾಗೂ 11 a.m.ರಿಂದ 12 p.m.ವರೆಗೆ ಅವರು ಭಾರ ಹೊರುವಿಕೆ ಹಾಗೂ ಸೈಕಲ್ ಚಾಲನೆಯಲ್ಲಿ ತೊಡಗುತ್ತಿದ್ದರು. ಲೀಯವರ ಸರ್ವೇಸಾಮಾನ್ಯ ಕಸರತ್ತೆಂದರೆ ಎರಡರಿಂದ ಆರು ಮೈಲಿಗಳವರೆಗಿನ ದೂರದ ಓಟವನ್ನು 15ರಿಂದ 45 ನಿಮಿಷಗಳಲ್ಲಿ ಮಾಡುವುದು, ಅದರಲ್ಲಿ 3–5 ನಿಮಿಷಗಳ ಅವಧಿಯಲ್ಲಿ ವೇಗವನ್ನು ಬದಲಾಯಿಸುತ್ತಿದ್ದರು. ಲೀ 10 ಮೈಲಿಗಳಿಗೆ ಸಮಾನವಾದ ದೂರವನ್ನು ಕ್ರಮಿಸುವ ಹಾಗೆ(ಸುಮಾರು 16 ಕಿಲೋಮೀಟರ್‌ಗಳು) 45 ನಿಮಿಷಗಳಲ್ಲಿ ನಿಶ್ಚಲ ಸೈಕಲ್‌ಅನ್ನು ತುಳಿಯುತ್ತಿದ್ದರು.[೪೯]
ಲೀ ಕೆಲವೊಮ್ಮೆ ಜಿಗಿದಾಡುವ ಹಗ್ಗದಲ್ಲಿ ಕಸರತ್ತು ನಡೆಸಿ ಸೈಕಲ್ ಚಾಲನೆಯಾದ ಮೇಲೆ 800 ಜಿಗಿತಗಳನ್ನು ಪೂರೈಸುತ್ತಿದ್ದರು. ಲೀ ತನ್ನ ಮುಷ್ಟಿಯ ಚರ್ಮವನ್ನು ಬಿರುಸುಗೊಳಿಸಲು ಗಡುಸಾದ ಕಲ್ಲು ಮತ್ತು ಜಲ್ಲಿಗಳಿಂದ ತುಂಬಿದ ಬಕೆಟ್‌ಗಳಿಗೆ ಮುಷ್ಟಿಯಿಂದ ಹೊಡೆಯುವುದೂ ಸೇರಿದಂತೆ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದರು. ಅವರು ಸಾಧಾರಣವಾಗಿ ಈ ರೀತಿಯ ಕಸರತ್ತುಗಳನ್ನು ದಿನಕ್ಕೆ 500ಕ್ಕೂ ಹೆಚ್ಚು ಬಾರಿ ಪುನರಾವರ್ತಿಸುತ್ತಿದ್ದರು.[೫೦]
ಪೌಷ್ಟಿಕತೆ
ಬದಲಾಯಿಸಿಲಿಂಡಾ ಲೀ ಯವರ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ಗೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ, ಲೀಯವರು ಪೌಷ್ಟಿಕತೆಯ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಲು ಆರಂಭಿಸಿದುದಲ್ಲದೇ, ಆರೋಗ್ಯಕಾರಿ ಆಹಾರಗಳು, ಅಧಿಕ-ಪ್ರೊಟೀನ್ ಪಾನೀಯಗಳು ಮತ್ತು ಜೀವಸತ್ವಗಳು ಮತ್ತು ಖನಿಜಯುಕ್ತ ಪೂರಕ ಆಹಾರಗಳ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡರು. ನಂತರ ಅವರು ಉನ್ನತ-ಸಾಮರ್ಥ್ಯದ ಶರೀರವನ್ನು ಪಡೆಯಲು ಕಳಪೆ ಗುಣಮಟ್ಟದ ಆಹಾರದ ಪಥ್ಯದಿಂದ ಸಾಧ್ಯವಿಲ್ಲ ಹಾಗೂ "ಅನುಚಿತ ಆಹಾರ"ದಿಂದ ಮನುಷ್ಯನ ಶರೀರವು ಗಲೀಜಾಗಿ ಅಥವಾ ಜಡವಾಗಿ ವರ್ತಿಸುತ್ತದೆ ಎಂಬ ನಿರ್ಣಯಕ್ಕೆ ಬಂದರು. ಲೀಯವರು ತನ್ನ ದೇಹಕ್ಕೆ ಅನಗತ್ಯವಾದ ಕ್ಯಾಲೊರಿಗಳನ್ನು ನೀಡುವವು ಎಂದು ಬೇಕರಿಯ ತಿನಿಸುಗಳನ್ನು ಸಹಾ ತ್ಯಜಿಸಿದರು. ಲೀಯವರ ಆಹಾರ ಪಥ್ಯದಲ್ಲಿ ಪ್ರೋಟೀನ್ ಪಾನೀಯಗಳಿದ್ದವು. ದಿನಕ್ಕೆ ಒಮ್ಮೆ ಇಲ್ಲವೇ ಎರಡು ಬಾರಿ ಸೇವಿಸಲು ಪ್ರಯತ್ನಿಸುತ್ತಿದ್ದರು, ಆದರೆ ನಂತರದ ಜೀವನದಲ್ಲಿ ಅವುಗಳ ಸೇವನೆಯನ್ನು ಮುಂದುವರೆಸಲಿಲ್ಲ.
ಲಿಂಡಾರವರು ಬ್ರೂಸ್‌ರ ಸೊಂಟದ ಸುತ್ತಳತೆಯು 26ರಿಂದ 28 ಇಂಚುಗಳವರೆಗೆ (66ರಿಂದ 71 ಸೆಂಟಿಮೀಟರುಗಳು) ಏರಿಳಿತವಾಗುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. "ಅವರು ತಮ್ಮದೇ ಆದ ತರಕಾರಿಗಳು ಮತ್ತು ಹಣ್ಣುಗಳು, ಸೇಬುಗಳು, ಸೆಲರಿ, ಗಜ್ಜರಿ/ಕ್ಯಾರೆಟ್‌ಗಳು ಹಾಗೂ ಇನ್ನಿತರ ಪದಾರ್ಥಗಳಿಂದ ಮಾಡಿದ, ವಿದ್ಯುಚ್ಛಾಲಿತ ಬ್ಲೆಂಡರ್‌ನಲ್ಲಿ ತಯಾರಿಸಿದ ಮಿಶ್ರಿತ ಪಾನೀಯಗಳನ್ನು ಸೇವಿಸುತ್ತಿದ್ದರು" , ಎಂದು ಆಕೆ ಹೇಳಿದರು.[೫೧] ಅವರು ತಾಜಾ ತರಕಾರಿಗಳು,ಹಣ್ಣುಗಳು ಮತ್ತು ತಾಜಾ ಹಾಲನ್ನು ಪ್ರತಿ ದಿನವೂ ಸೇವಿಸುತ್ತಿದ್ದರು. ಬ್ರೂಸ್‌ರವರು ಅವುಗಳು ಹೊಂದಿರುವ ವೈವಿಧ್ಯತೆಯನ್ನು ಇಷ್ಟಪಡುತ್ತಿದ್ದ ಕಾರಣದಿಂದ ಯಾವಾಗಲೂ ಚೀನೀಯ ಅಥವಾ ಇತರೆ ಏಷ್ಯಾದ ಆಹಾರಗಳನ್ನು ಸೇವಿಸಲು ಆದ್ಯತೆ ನೀಡುತ್ತಿದ್ದರು. ಅವರು ಈ ಕೆಳಕಂಡವೂ ಸೇರಿದಂತೆ ಪೂರಕ ಪಥ್ಯಾಹಾರಗಳ ಪ್ರಬಲ ಸಮರ್ಥಕರೂ ಆಗಿದ್ದರು:
- ಜೀವಸತ್ವ C
- ಲೆಸಿತಿನ್ ಹರಳುಗಳು
- ಜೇನುನೊಣ ಹರಡುವ ಪರಾಗಧೂಳಿ
- ಜೀವಸತ್ವ E
- ಗುಲಾಬಿ ಪಕಳೆ/ಕಾಯಿ/ಫಲಗಳು (ದ್ರವರೂಪದಲ್ಲಿ)
- ಗೋಧಿ ಮೊಳಕೆಯ ತೈಲ/ಎಣ್ಣೆ
- ಅಸೆರೋಲಾ — C
- B-ಫೊಲಿಯಾ
ಮೈಕಟ್ಟು
ಬದಲಾಯಿಸಿಲೀಯವರ ದೈಹಿಕ ಸಾಮರ್ಥ್ಯದ ಬಗೆಗಿನ ಶ್ರದ್ಧೆಯು ದೇಹದಾರ್ಢ್ಯವೃದ್ಧಿ ಸಾಧಕರ ಸಮುದಾಯದ ಕೆಲ ವಿಖ್ಯಾತರಿಂದಲೂ ಮೆಚ್ಚುಗೆ ಪಡೆಯುವಂತಹ ದೈಹಿಕ ಕ್ಷಮತೆಯನ್ನು ನೀಡಿತು. Mr. ಒಲಿಂಪಿಯಾದ ಸ್ಥಾಪಕರಾದ ಜೋ ವೇಡರ್‌ರವರು ಒಮ್ಮೆ ಲೀಯವರ ಮೈಕಟ್ಟನ್ನು ನೋಡಿ "ನಾನು ನೋಡಿದುದರಲ್ಲೇ ಅತ್ಯಂತ ಲಕ್ಷಣವಾದ ಮೈಕಟ್ಟು!" ಎಂದು ಉದ್ಗರಿಸಿದ್ದರು. ಫ್ಲೆಕ್ಸ್ ವ್ಹೀಲರ್, ಷಾನ್ ರೇ, ರಾಚೆಲ್ ಮೆಕ್‌ಲಿಷ್, ಲೌ ಫೆರ್ರಿಗ್ನೋ, ಲೆಂಡಾ ಮುರ್ರೆ, ಡೋರಿಯನ್ ಯೇಟ್ಸ್ ಮತ್ತು ಎಂಟು ಬಾರಿ Mr. ಒಲಿಂಪಿಯಾ ಆಗಿದ್ದ ಲೀ ಹಾನೆಯವರೂ ಸೇರಿದಂತೆ ಅನೇಕ ಉನ್ನತ ದೇಹದಾರ್ಢ್ಯ ಸ್ಪರ್ಧಿಗಳು ತಮ್ಮ ವೃತ್ತಿ ಜೀವನದ ಪ್ರಭಾವೀ ವ್ಯಕ್ತಿಗಳಲ್ಲಿ ಪ್ರಮುಖ ಸ್ಥಾನ ಲೀಯವರದು ಎಂದು ಪರಿಗಣಿಸಿದ್ದರು.[೫೨] ಅರ್ನಾಲ್ಡ್ ಸ್ಕ್ವಾರ್‌ಝೆನೆಗ್ಗರ್ & ಜೀನ್-ಕ್ಲಾಡೆ ವಾನ್ ಡಾಮ್ಮೆಗಳೂ ಸಹಾ ಲೀಯವರಿಂದ ಪ್ರಭಾವಿತರಾಗಿದ್ದರಲ್ಲದೇ, ಅರ್ನಾಲ್ಡ್‌ರವರು ಅವರ ದೈಹಿಕ ಕ್ಷಮತೆಯ ಬಗ್ಗೆ ಸಹಾ ಮೆಚ್ಚುಗೆ ವ್ಯಕ್ತಪಡಿಸಿದ್ದರು:
"Bruce Lee had a very—I mean a very defined physique. He had very little body fat. I mean, he probably had one of the lowest body fat counts of any athlete. And I think that's why he looked so unbelievable."[೫೩]
ಲೀಯವರ ಬಗ್ಗೆ ತಿಳಿದಿದ್ದ ವೈದ್ಯರೊಬ್ಬರು "ಅಳಿಲಿನ ಮಾದರಿಯ ಮಾಂಸಖಂಡವನ್ನು ಹೊಂದಿರುವವರು ಮತ್ತು ಕುದುರೆಯಷ್ಟು ಚೈತನ್ಯವುಳ್ಳವರು" ಎಂದೊಮ್ಮೆ ಪ್ರತಿಪಾದಿಸಿದ್ದರು ಮತ್ತು ತಾನು ನೋಡಿದವರಲ್ಲೆಲ್ಲಾ ಹೆಚ್ಚಿನ ಸಾಮರ್ಥ್ಯ ಹೊಂದಿದವರೆಂದು ಅವರ ಬಗ್ಗೆ ಹೇಳುತ್ತಿದ್ದರು.[೫೪] ಲೀಯವರು ತನ್ನ ಜೀವಿತಾವಧಿಯಲ್ಲಿ ದೇಹದಾರ್ಢ್ಯವೃದ್ಧಿ, ಭಾರ ಎತ್ತುವ ತರಬೇತಿ, ಶರೀರವಿಜ್ಞಾನ ಮತ್ತು ದೈಹಿಕಚಲನೆ ಶಾಸ್ತ್ರಗಳ ಬಗೆಗಿನ 140ಕ್ಕೂ ಹೆಚ್ಚಿನ ಗ್ರಂಥಗಳನ್ನು ಸಂಗ್ರಹಿಸಿದ್ದರೆಂದು ಹೇಳಲಾಗಿದೆ. ನಿರ್ದಿಷ್ಟ ಸ್ನಾಯು ಗುಂಪುಗಳನ್ನು ಉತ್ತಮ ರೀತಿಯಲ್ಲಿ ತರಬೇತಿಗೊಳಿಸಲು ಅವರು ತಮ್ಮದೇ ಆದ ಅನೇಕ ತರಬೇತಿ ಸಾಧನಗಳ ಮೂಲ ವಿನ್ಯಾಸಗಳನ್ನು ರಚಿಸಿದ್ದರು ಹಾಗೂ ತಮ್ಮ ಸ್ನೇಹಿತ ಜಾರ್ಜ್ ಲೀಯವರಿಗೆ ತಮ್ಮ ನಿರ್ದಿಷ್ಟತೆಗಳಿಗನುಸಾರವಾಗಿ ಅವುಗಳನ್ನು ತಯಾರಿಸಲು ಸೂಚಿಸುತ್ತಿದ್ದರು.[೫೫]
ದೈಹಿಕ ಸಾಹಸಕಾರ್ಯಗಳು
ಬದಲಾಯಿಸಿಲೀಯವರ ಅಪೂರ್ವ ದೈಹಿಕ ಕ್ಷಮತೆಯಿಂದಾಗಿ ಅವರು ಅನೇಕ ಅಸಾಧಾರಣ ದೈಹಿಕ ಸಾಹಸಕಾರ್ಯಗಳನ್ನು ಮಾಡಬಲ್ಲವರಾಗಿದ್ದರು.[೫೬][೫೭][೫೮][೫೯] ಬ್ರೂಸ್ ಲೀಯವರ ಸಾಧನೆಗಳೆಂದು ಹೇಳಲಾದ ದೈಹಿಕ ಸಾಹಸಕಾರ್ಯಗಳನ್ನು ವಾಸ್ತವ ಸಾಧನೆ ಯಾವುದು ಕಲ್ಪಿತ ಸಾಧನೆ ಯಾವುದು ಎಂದು ಪ್ರತ್ಯೇಕಿಸಲಾಗುವುದಿಲ್ಲವಾದರೂ ಕೆಳಗೆ ಪಟ್ಟಿಯ ರೂಪದಲ್ಲಿ ಕೊಡಲಾಗಿದೆ.
- ಮೂರು ಅಡಿಗಳ ದೂರದಿಂದ ಕೈಗಳನ್ನು ಬದಿಯಲ್ಲಿಟ್ಟುಕೊಂಡು ಪ್ರಹರಿಸುವಾಗ ಲೀಯವರ ವೇಗವು ಸೆಕೆಂಡಿನ ಐದುನೂರನೇ ಒಂದು ಭಾಗದಷ್ಟಿತ್ತು.[೬೦]
- ಲೀಯವರ ಹೋರಾಟದ ಚಲನೆಗಳು ಕೆಲವೊಮ್ಮೆ ಎಷ್ಟು ಕ್ಷಿಪ್ರವಾಗಿದ್ದವೆಂದರೆ, ಅವುಗಳನ್ನು ಆ ಕಾಲದ ಸಾಂಪ್ರದಾಯಿಕ ಪ್ರತಿ ಸೆಕೆಂಡಿಗೆ 24 ಫ್ರೇಂಗಳ ವೇಗದಲ್ಲಿ ಫಿಲ್ಮ್‌ನಲ್ಲಿ ಸ್ಪಷ್ಟವಾದ ನಿಧಾನ ವೇಗದ ಮರುಪ್ರದರ್ಶನ ಮಾಡುವ ಹಾಗೆ ಚಿತ್ರೀಕರಿಸಲು ಸಾಧ್ಯವಾಗದೇ, ಅನೇಕ ಸನ್ನಿವೇಶಗಳನ್ನು ಹೆಚ್ಚಿನ ಸ್ಪಷ್ಟತೆಗಾಗಿ ಪ್ರತಿ ಸೆಕೆಂಡಿಗೆ 32 ಫ್ರೇಂಗಳ ಹಾಗೆ ಚಿತ್ರೀಕರಿಸಲಾಯಿತು.[೬೧][೬೨][೬೩]
- ವೇಗದ ಬಗೆಗಿನ ಪ್ರಾತ್ಯಕ್ಷಿಕೆಯೊಂದರಲ್ಲಿ, ಲೀಯವರು ಓರ್ವ ವ್ಯಕ್ತಿಯ ತೆರೆದ ಹಸ್ತದಲ್ಲಿದ್ದ ಡೈಮ್ ಒಂದನ್ನು ಅವರು ಹಸ್ತವನ್ನು ಮುಚ್ಚುವಷ್ಟರಲ್ಲಿಯೇ ಹಠಾತ್ತಾಗಿ ಅಪಹರಿಸಿ ಅಲ್ಲಿ ಪೆನ್ನಿಯೊಂದನ್ನು ಉಳಿಸಿದ್ದರು.[೬೪]
- ಲೀಯವರು ಎತ್ತರಿಸಿದ ವಿ-ಸಿಟ್ ಪೊಸಿಷನ್ ಅನ್ನು 30 ನಿಮಿಷಗಳು ಅಥವಾ ಹೆಚ್ಚಿನ ಅವಧಿಯ ಮಟ್ಟಿಗೆ ಎತ್ತಿ ಹಿಡಿಯಲು ಶಕ್ತರಾಗಿದ್ದರು.[೫೮]
- ಲೀಯವರು ಭತ್ತದ ಕಾಳುಗಳನ್ನು ಗಾಳಿಯಲ್ಲಿ ಎಸೆದು ಅವುಗಳು ಕೆಳಕ್ಕೆ ಬೀಳುವ ಮುಂಚೆಯೇ ಅರ್ಧದಾರಿಯಲ್ಲಿ ಅವನ್ನು ಚಾಪ್‌ಸ್ಟಿಕ್‌ಗಳ ಸಹಾಯದಿಂದ ಹಿಡಿಯಬಲ್ಲವರಾಗಿದ್ದರು.[೫೨]
- ಲೀ Coca-Colaದ ತೆರೆಯದ ಡಬ್ಬಿಗಳ ಮೂಲಕ ತನ್ನ ಬೆರಳುಗಳನ್ನು ನುಗ್ಗಿಸಬಲ್ಲವರಾಗಿದ್ದರು. (ಇದು ಲಘು ಪಾನೀಯಗಳ ಡಬ್ಬಿಗಳನ್ನು ಪ್ರಸಕ್ತ ಅಲ್ಯುಮಿನಿಯಂ ಡಬ್ಬಿಗಳಿಗೆ ಬದಲಾಗಿ ದಪ್ಪದ ಉಕ್ಕಿನಿಂದ ಮಾಡುತ್ತಿದ್ದ ಸಮಯದ ವಿಚಾರ).[೬೩]
- ಲೀಯವರು ಕೇವಲ ಹೆಬ್ಬೆರಳು ಮತ್ತು ತೋರುಬೆರಳುಗಳ ಸಹಾಯದಿಂದ ಏಕ-ಹಸ್ತ ಪುಷ್-ಅಪ್‌ಗಳನ್ನು ಮಾಡಿ ತೋರಿಸಿದ್ದರು.[೫೨][೫೯][೬೫]
- ಲೀಯವರು ಒಂದೇ-ತೋಳಿನಿಂದ ಗದ್ದವನ್ನು ಮೇಲೆತ್ತುವ ಕ್ರಿಯೆಯ 50 ಪುನರಾವರ್ತನೆಗಳನ್ನು ಮಾಡಿದ್ದರು.[೬೬]
- ಲೀಯವರು 6 ಇಂಚುಗಳಷ್ಟು (15 cm) ದಪ್ಪದ ಮರದ ಫಲಕಗಳನ್ನು ಮುರಿದುಹಾಕಬಲ್ಲವರಾಗಿದ್ದರು.[೬೭]
- ಲೀಯವರು 200-lb (90.72 kg) ತೂಕದ ಚೀಲವೊಂದನ್ನು ಚಾವಣಿಯೆಡೆಗೆ ಹಾರಿ ಬಡಿಯುವ ಹಾಗೆ ಬದಿಹೊಡೆತ ನೀಡಬಲ್ಲವರಾಗಿದ್ದರು.[೫೯]
- ಲೀ ಜೇಮ್ಸ್ ಕೋಬರ್ನ್‌ರವರನ್ನು ತರಬೇತಿಗೊಳಿಸುವಾಗ ನೀಡಿದ ಬದಿಹೊಡೆತವೊಂದರ ಮೂಲಕ 150 lb (68 kg) ತೂಕದ ಗುದ್ದುವ ಚೀಲವೊಂದನ್ನು ವಿಚ್ಛಿನ್ನಗೊಳಿಸಿದರು.[೫೮][೬೮]
- "ಡ್ರ್ಯಾಗನ್ ಫ್ಲಾಗ್" ಎಂದು ಹೆಸರಾದ ಚಲನೆಯೊಂದರಲ್ಲಿ, ಲೀಯವರು ಭುಜದ ತುದಿಗಳನ್ನು ಕೇವಲ ಬೆಂಚ್‌ನ ತುದಿಯ ಮೇಲಿರುವಂತೆ ಮಾಡಿ ತನ್ನ ಕಾಲುಗಳನ್ನು ಹಾಗೂ ಮುಂಡವನ್ನು ಅಡ್ಡಡ್ಡವಾಗಿ ಗಾಳಿಯಲ್ಲಿ ತೂಗುವ ಹಾಗೆ ಕಾಲೆತ್ತಿ ಪ್ರದರ್ಶನ ನೀಡಿದ್ದರು.[೬೯]
ಜೀವನ ದೃಷ್ಟಿ
ಬದಲಾಯಿಸಿಲೀಯವರು ಸಮರ ಕಲಾ ನಿಪುಣ ಮತ್ತು ನಟರಾಗಿ ಪ್ರಸಿದ್ಧರಾಗಿದ್ದರೂ, ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ತತ್ವಶಾಸ್ತ್ರವನ್ನು ಸಹಾ ಅಭ್ಯಸಿಸಿದ್ದರು. ಅವರು ಚೆನ್ನಾಗಿ ಓದಿಕೊಂಡಿದ್ದರಲ್ಲದೇ ದೊಡ್ಡದಾದ ಗ್ರಂಥಾಲಯವನ್ನು ಹೊಂದಿದ್ದರು. ಸಮರ ಕಲೆಗಳು ಮತ್ತು ಮುಷ್ಟಿಯುದ್ಧದ ತತ್ವಗಳ ಬಗೆಗಿನ ಅವರ ಸ್ವಂತ ಕೃತಿಗಳು ಸಮರ ಕಲೆ ಹಾಗೂ ಹೊರಗಿನ ಸಮುದಾಯಗಳಲ್ಲಿ ಅದರಲ್ಲಿನ ತಾತ್ವಿಕ ಪ್ರತಿಪಾದನೆಗಳಿಗೆ ಹೆಸರಾಗಿವೆ. ಅವರ ಸಾರಸಂಗ್ರಹಿ ತಾತ್ವಿಕ ನಿಲುವು ಅವರ ಹೋರಾಟದ ಶ್ರದ್ಧೆಗಳಲ್ಲಿ ಬಿಂಬಿತವಾಗಿದ್ದರೂ, ಅವರು ತಕ್ಷಣವೇ ಸಮರ ಕಲೆಗಳು ಕೇವಲ ಆ ತರಹದ ಬೋಧನೆಗಳಿಗೆ ಕೇವಲ ರೂಪಕವಷ್ಟೇ ಎಂದು ಪ್ರತಿಪಾದಿಸುತ್ತಾರೆ. ಅವರು ಯಾವುದೇ ಅರಿವು ಅಂತಿಮವಾಗಿ ಆತ್ಮಜ್ಞಾನದೆಡೆಗೆ ಕೊಂಡೊಯ್ಯುತ್ತದೆ ಎಂದು ನಂಬಿದ್ದ ಅವರು ತಮ್ಮ ಆತ್ಮಾಭಿವ್ಯಕ್ತಿಯ ಮಾರ್ಗವಾಗಿ ಸಮರ ಕಲೆಗಳನ್ನು ಆರಿಸಿಕೊಂಡಿರುವುದಾಗಿ ಹೇಳಿದ್ದರು.[೭೦] ಟಾವೊಯಿಸಂ, ಜಿಡ್ಡು ಕೃಷ್ಣಮೂರ್ತಿಗಳು, ಮತ್ತು ಬೌದ್ಧಧರ್ಮ[೭೧] ಇವೆಲ್ಲದರಿಂದ ಅವರು ಪ್ರಭಾವಿತರಾಗಿದ್ದರು. ಜಾನ್ ಲಿಟಲ್‌ರವರ ಪ್ರಕಾರ ಲೀಯವರು ಓರ್ವ ನಿರೀಶ್ವರವಾದಿಯಾಗಿದ್ದರು. 1972ರಲ್ಲಿ ಅವರು ಯಾವ ಧರ್ಮವನ್ನು ಅನುಸರಿಸುತ್ತಾರೆ ಎಂದು ಕೇಳಿದಾಗ ಅವರಿಂದ ಬಂದ ಉತ್ತರ "ಯಾವುದೂ ಅಲ್ಲ." [೭೨] 1972ರಲ್ಲೇ ಮತ್ತೊಮ್ಮೆ, ಅವರು ದೇವರನ್ನು ನಂಬುತ್ತಾರೆಯೇ ಎಂಬ ಪ್ರಶ್ನೆಗೆ, ಅವರು ಹೇಳಿದ ಉತ್ತರ "ಮುಚ್ಚುಮರೆಯಿಲ್ಲದೇ ನೇರವಾಗಿ ಹೇಳಬೇಕೆಂದರೆ, ನಾನು ನಂಬುವುದಿಲ್ಲ." [೭೨]
ಕೆಳಕಂಡ ಉದ್ಧರಿತ ವಾಕ್ಯಗಳು ಅವರ ಹೋರಾಟದ ತತ್ವಗಳನ್ನು ಪ್ರತಿಫಲಿಸುತ್ತವೆ.
- "ರೂಪರಹಿತವಾಗಿ.... ಆಕಾರರಹಿತವಾಗಿ ನೀರಿನ ಹಾಗಿರು. ನೀರನ್ನು ಕಪ್‌ನಲ್ಲಿ ಹಾಕಿದರೆ ಅದು ಕಪ್‌ನ ರೂಪ ಪಡೆಯುತ್ತದೆ. ನೀರನ್ನು ಬಾಟಲ್‌ನಲ್ಲಿ ಹಾಕಿದರೆ ಅದು ಬಾಟಲ್‌ನ ರೂಪ ಪಡೆಯುತ್ತದೆ. ಅದನ್ನು ನೀವು ಟೀ ಪಾತ್ರೆಯೊಳಗೆ ಹಾಕಿದರೆ; ಅದು ಟೀ ಪಾತ್ರೆಯ ಆಕಾರ ತಾಳುತ್ತದೆ. ನೀರು ಹರಿಯಬಲ್ಲದು ಅಥವಾ ಅಪ್ಪಳಿಸಬಲ್ಲದು. ನನ್ನ ಸ್ನೇಹಿತನೇ ನೀರಿನ ಹಾಗಿರು..."
- "ಪ್ರತಿ ವಿಧವಾದ ಅರಿವು ಅಂತಿಮವಾಗಿ ಆತ್ಮಜ್ಞಾನವಾಗಿ ಪರಿಣಮಿಸುತತ್ದೆ"
- "ಯಾವುದು ಪ್ರಯೋಜನಕಾರಿಯೋ ಅದನ್ನು ಮಾತ್ರವೇ ಪಡೆದುಕೋ ಅಲ್ಲದೇ ಅದನ್ನು ಎಲ್ಲಿಂದ ಬೇಕಾದರೂ ಪಡೆದುಕೋ." [೭೩]
- "ಹಳೆಯ ವಿಧಾನಗಳನ್ನು ಸಾಮಾನ್ಯ ಪ್ರತಿಕ್ರಿಯೆಯಂತೆ ಅಲ್ಲಗಳೆಯಬೇಡಿ, ಇಲ್ಲವಾದರೆ ನೀವೇ ಇನ್ನೊಂದು ಮಾದರಿಯನ್ನು ರಚಿಸಿ ನೀವೇ ಅದರಲ್ಲಿ ಬಂಧಿತರಾಗುವಿರಿ." [೭೪]
- "ಶೀಘ್ರ ಕೋಪ ನಿಮ್ಮನ್ನು ಅತಿ ಶೀಘ್ರದಲ್ಲಿಯೇ ಮೂರ್ಖರನ್ನಾಗಿ ಮಾಡಬಲ್ಲದು."
- "ಯಾವಾಗಲೂ ನೀವು ನೀವೇ ಆಗಿರಿ, ನಿಮ್ಮ ಭಾವನೆಯನ್ನು ವ್ಯಕ್ತಪಡಿಸಿ, ನಿಮ್ಮ ಮೇಲೆ ನಿಮಗೆ ಭರವಸೆಯಿರಲಿ, ಬಾಹ್ಯ ಯಶಸ್ವಿ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಅವರನ್ನು ಅನುಕರಿಸಲು ಪ್ರಯತ್ನಿಸಬೇಡಿ."
- "ಇದು ದೈನಂದಿನ ಏರಿಕೆಯಲ್ಲ, ಆದರೆ ದೈನಂದಿನ ಇಳಿಕೆ. ಅನಗತ್ಯವಾದುದನ್ನು ಹೊರಗೆ ಹಾಕು."
ಪ್ರಶಸ್ತಿಗಳು ಮತ್ತು ಗೌರವಗಳು
ಬದಲಾಯಿಸಿ- ಚೀನಾದ (廣東順德均安, ಗುವಾಂಗ್‌ಡಾಂಗ್ ಷುಂಡೆ ಜುನಾನ್) ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿನ ಸ್ಯೂಂಡಕ್ ಭಾಗದ ಗ್ವಾನಾನ್ ಅವರ ಪೂರ್ವೀಕರ ಮೂಲಪ್ರದೇಶವಾಗಿದ್ದ ಕಾರಣ , ಅವರ ಪೂರ್ವೀಕರ ಮನೆಯಿರುವ ಆ ಹಳ್ಳಿಯಲ್ಲಿನ ರಸ್ತೆಯೊಂದಕ್ಕೆ ಆತನ ಹೆಸರನ್ನಿಡಲಾಗಿದೆ. ಈ ಮನೆಯನ್ನು ಸಾರ್ವಜನಿಕ ಪ್ರವೇಶಕ್ಕೆ ತೆರೆದಿಡಲಾಗಿದೆ.
- TIME ಪತ್ರಿಕೆ 'ಯ ಶತಮಾನದ 100 ಬಹು ಪ್ರಮುಖ ವ್ಯಕ್ತಿಗಳ ಪಟ್ಟಿಯಲ್ಲಿ ಮಹೋನ್ನತ ವೀರರು & ಅಪ್ರತಿಮರು ಗಳಲ್ಲಿ ಒಬ್ಬರಾಗಿ ಹಾಗೂ ದೈಹಿಕ ಕ್ಷಮತೆಯ ಮೂಲಕ ಭಾಗಶಃ ವೈಯಕ್ತಿಕ ಅಭಿವೃದ್ಧಿಗೊಳ್ಳುವವರಿಗೆ ಉದಾಹರಣೆಯಾಗಿ ಹಾಗೂ ಇಪ್ಪತ್ತನೇ ಶತಮಾನದ ಬಹು ಪ್ರಭಾವೀ ಸಮರ ಕಲಾ ನಿಪುಣರುಗಳಲ್ಲಿ ಒಬ್ಬರಾಗಿ ಲೀಯವರನ್ನು ಪ್ರಸ್ತಾಪಿಸಲಾಗಿದೆ.[೨]
- 31 ಮಾರ್ಚ್ 2007ರಂದು NTVಯಲ್ಲಿ ಪ್ರಸಾರವಾದ ಜಪಾನಿನ ರಾಷ್ಟ್ರೀಯ ಸಮೀಕ್ಷೆಯಲ್ಲಿ ಇತಿಹಾಸದ 100 ಬಹು ಪ್ರಭಾವೀ ವ್ಯಕ್ತಿಗಳಲ್ಲಿ ಒಬ್ಬರಾಗಿ ಲೀಯವರು ಹೊರಹೊಮ್ಮಿದರು.[೭೫]
- 2001ರಲ್ಲಿ LMF ಎಂಬ ಹಾಂಗ್ ಕಾಂಗ್‌ನಲ್ಲಿನ ಕ್ಯಾಂಟನೀಯ ಹಿಪ್-ಹಾಪ್ ಗುಂಪೊಂದು, "1127" ಎಂದು ಕರೆಯಲಾದ ಪ್ರಖ್ಯಾತ ಹಾಡೊಂದನ್ನು ಲೀಯವರಿಗೆ ಸಲ್ಲಿಸಲಾಗುವ ಗೌರವ ಸಮರ್ಪಣೆಯಾಗಿ ಬಿಡುಗಡೆ ಮಾಡಲಾಯಿತು.
- 2004ರಲ್ಲಿ, UFC ಅಧ್ಯಕ್ಷ ಡಾನಾ ವ್ಹೈಟ್‌ರವರು ಲೀಯವರಿಗೆ "ಸಮ್ಮಿಶ್ರ ಸಮರ ಕಲೆಗಳ ಪಿತಾಮಹ"ರೆಂಬ ಬಿರುದನ್ನು ನೀಡಿದರು.[೭೬]
- 26 ನವೆಂಬರ್ 2005ರಂದು ಬೋಸ್ನಿಯಾ ಮತ್ತು ಹರ್ಜೆಗೋವಿನಾ ಪ್ರದೇಶದ ಮೊಸ್ಟರ್ ಮಹಾನಗರವು ಏಕತೆಯ ದ್ಯೋತಕವಾಗಿ ಸ್ಪೇನ್‌ನ ಚೌಕದಲ್ಲಿ ಪ್ರತಿಮೆ ಸ್ಥಾಪಿಸುವ ಮೂಲಕ ಲೀಯವರನ್ನು ಗೌರವಿಸಿತು. ಅನೇಕ ವರ್ಷಗಳ ಯುದ್ಧ ಹಾಗೂ ಧಾರ್ಮಿಕ ವಿಭಜನೆಗಳ ನಂತರ, ಅವರ ಸೇವೆಗಳನ್ನು ಶ್ಲಾಘಿಸಲು: ವಿಶ್ವದ ಸಾಂಸ್ಕೃತಿಕ ಅಂತರಗಳನ್ನು ಸರಿಪಡಿಸಲು ಲೀಯವರ ಪ್ರತಿಕೃತಿಯು ಕಾರಣವಾಯಿತು. (ಹಾಂಗ್ ಕಾಂಗ್‌ನಲ್ಲಿ ಪ್ರತಿಮೆ ಅನಾವರಣದ ಹಿಂದಿನ ದಿನದ ದೃಶ್ಯ, ಕೆಳಗೆ).[೭೭]
- 2005ರಲ್ಲಿ, ಹಾಂಗ್ ಕಾಂಗ್‌ನಲ್ಲಿ ಕಂಚಿನ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಅವರ ಅರವತ್ತೈದನೇ ಜನ್ಮದಿನದಂದು ಲೀಯವರನ್ನು ನೆನಪಿಸಿಕೊಳ್ಳಲಾಯಿತು. 27 ನವೆಂಬರ್ 2005ರಂದು ಅನಾವರಣಗೊಂಡ ಕಂಚಿನ ಪುತ್ಥಳಿಯು ಲೀಯವರನ್ನು ಚೀನೀ ಚಲನಚಿತ್ರೋದ್ಯಮದ ಶತಮಾನದ ಉಜ್ವಲ ತಾರೆಯಾಗಿ ಗೌರವಿಸಿತು.[೭೮]
- ಚೀನಾದ ಷುಂಡೆಯಲ್ಲಿ ಅವರ ಸ್ಮಾರಕ ಪುತ್ಥಳಿ ಹಾಗೂ ಸ್ಮಾರಕ ಸಭಾಂಗಣದೊಂದಿಗಿನ ಬ್ರೂಸ್ ಲೀ ವಿಷಯೋದ್ಯಾನವನ್ನು ನಿರ್ಮಿಸುವ ಕಾರ್ಯಯೋಜನೆಯನ್ನು ಮಾಡಲಾಗಿದೆ. ಅದರ ನಿರ್ಮಾಣ ಕಾರ್ಯವು 2009ರಲ್ಲಿ ಮುಕ್ತಾಯಗೊಳ್ಲುವುದೆಂದು ನಿರೀಕ್ಷಿಸಲಾಗಿದೆ.[೭೯]
- As of 2007[update], ಅನೇಕ ಸಮರ ಕಲೆಗಳ ಅಭಿಮಾನಿಗಳು ಈಗಲೂ ಸಹಾ ಸಾರ್ವಕಾಲಿಕ ಮಹೋನ್ನತ ಸಮರ ಕಲಾ ನಿಪುಣರನ್ನಾಗಿ ಅವರನ್ನು ಪರಿಗಣಿಸುತ್ತಾರೆ.[೮೦]
- 10 ಏಪ್ರಿಲ್ 2007ರಂದು ಚೀನಾದ ರಾಷ್ಟ್ರೀಯ ಪ್ರಸಾರ ಸಂಸ್ಥೆಯು ಲೀಯವರ ಬಗ್ಗೆ 50-ಭಾಗಗಳ ಸಾಕ್ಷ್ಯಚಿತ್ರ ಸರಣಿಯನ್ನು ಚಿತ್ರೀಕರಿಸಲು ಆರಂಭಿಸಿರುವುದಾಗಿ ಘೋಷಿಸಿತು. ಕ್ಸಿನ್‌ಹುಆ ಸುದ್ದಿ ಸಂಸ್ಥೆಯು ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಷುಂಡೆಯಲ್ಲಿ "ಬ್ರೂಸ್ ಲೀ ಎಂಬ ದಂತಕಥೆ " ಎಂಬ ಕಾರ್ಯಕ್ರಮವನ್ನು ಚೀನಾದ ಕೇಂದ್ರೀಯ ದೂರದರ್ಶನವು ವಾರಾಂತ್ಯದಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದೆ ಎಂದು ಹೇಳಿತು. ಷುಂಡೆಯು ಸ್ಯಾನ್ ಫ್ರ್ಯಾನ್ಸಿಸ್ಕೊನಲ್ಲಿ ಜನಿಸಿದ ಲೀಯವರ ಪೂರ್ವಜರ ನೆಲೆಯಾಗಿತ್ತು. 50 ದಶಲಕ್ಷ ಯುವಾನ್ (US$6.4 ದಶಲಕ್ಷ; €4.8 ದಶಲಕ್ಷ) ಮೌಲ್ಯದ ಈ ನಿರ್ಮಾಣವು ಲೀಯವರು ವಿದ್ಯಾಭ್ಯಾಸ ನಡೆಸಿದ ಹಾಗೂ ನಟನಾ ವೃತ್ತಿ ಆರಂಭಿಸಿದ ಹಾಂಗ್ ಕಾಂಗ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳಲ್ಲಿ ಕೂಡಾ ಚಿತ್ರೀಕರಣ ನಡೆಸಲಿದೆ ಎಂದು ಅದು ಹೇಳಿತು. ಲೀಯವರ ಪಾತ್ರಧಾರಿ ಡ್ಯಾನ್ನಿ ಚಾನ್ ಕ್ವೊಕ್ ಕ್ವಾನ್‌ಯವರು ಅಪ್ರತಿಮ ಕಲಾವಿದನ ಪಾತ್ರವನ್ನು ಮಾಡುತ್ತಿರುವ ಬಗ್ಗೆ ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದರೆಂದು ಕ್ಸಿನ್‌ಹುಆ ವರದ ಮಾಡಿದೆ. "ನಾನು ತಳಮಳ ಹಾಗೂ ಉದ್ವೇಗದಲ್ಲಿದ್ದೇನೆ, ಆದರೂ ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ" ಎಂದು ಚಾನ್‌ರವರು ಹೇಳಿದರೆಂದು ವರದಿ ಮಾಡಲಾಗಿದೆ. ಸಾಹಸಭರಿತ ಹಾಸ್ಯಚಿತ್ರ "ಕುಂಗ್ ಫೂ ಹಸ್ಲೆ,"ನಲ್ಲಿನ ಪಾತ್ರದ ಮೂಲಕ ಹೆಸರಾಗಿರುವ ಚಾನ್‌ರವರು ಬಾಲ್ಯದಿಂದಲೇ ಲೀಯವರು ತಮಗೆ ಅನುಕರಣೀಯ ವ್ಯಕ್ತಿಯಾಗಿದ್ದರೆಂದು ಹಾಗೂ ತಾನು ಕುಂಗ್ ಫೂವನ್ನು ಅನೇಕ ವರ್ಷಗಳಿಂದ ಅಭ್ಯಸಿಸುತ್ತಿರುವುದಾಗಿ ಹೇಳುತ್ತಾರೆ. 2008ರ ಬೇಸಿಗೆ ಒಲಿಂಪಿಕ್ಸ್ ಕ್ರೀಡೆಗಳ ಆತಿಥ್ಯವನ್ನು ಬೀಜಿಂಗ್ ವಹಿಸಲಿರುವ ಪ್ರಮುಖ ಸಂದರ್ಭದ ಪೂರ್ವಾವಧಿಯ 2008ರಲ್ಲಿ ಪ್ರಸಾರವಾಗಬೇಕಿರುವ TV ಸರಣಿಯು ಚೀನೀ ಸಂಸ್ಕೃತಿಯನ್ನು ಎತ್ತಿ ತೋರಿಸುವ ಉದ್ದೇಶವನ್ನು ಹೊಂದಿದೆ.[೮೧]
- 2008ರಲ್ಲಿ ಲೀಯವರಿಗೆ ಸಮರ್ಪಿಸಲು ಹಾಂಗ್ ಕಾಂಗ್ ವಸ್ತುಸಂಗ್ರಹಾಲಯವನ್ನು ನಿರ್ಮಿಸುವ ಯೋಜನೆಯೂ ಚರ್ಚೆಯಲ್ಲಿದೆ. ಹಾಂಗ್ ಕಾಂಗ್‌ನಲ್ಲಿರುವ ಲೀಯವರ ಎರಡು-ಮಹಡಿಯ ಮನೆಯನ್ನು ಸಿಚುವಾನ್ ಭೂಕಂಪದ ಸಂತ್ರಸ್ತರಿಗೆ ಧನಸಹಾಯಾರ್ಥವಾಗಿ $13 ದಶಲಕ್ಷಗಳ ಮೊತ್ತಕ್ಕೆ ಜುಲೈನಲ್ಲಿ ಮಾರಾಟ ಮಾಡಿದರೂ, ಅದರ ವಿಶ್ವಪ್ರೇಮಿ ಮಾಲಿಕರು ಲೀಯವರ ಅಭಿಮಾನಿಗಳ ಕರೆಗೆ ಓಗೊಟ್ಟು ಮುಂದೊಮ್ಮೆ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಡಿಸಬಹುದೆಂಬ ಸದುದ್ದೇಶದಿಂದ ಅದನ್ನು ನಗರ ಸಂಸ್ಥೆಗೆ ಕೊಡುಗೆಯಾಗಿ ನೀಡಲು ನಿರ್ಧರಿಸಿದರು.[೮೨]
ಸಮರ ಕಲೆಗಳ ಪರಂಪರೆ
ಬದಲಾಯಿಸಿವಿಂಗ್ ಚುನ್ / ಜೀತ್ ಕುನೆ ಡೊಗಳ ಪರಂಪರೆ | |
ವಿಂಗ್ ಚುನ್‌ನಲ್ಲಿ ಸಿಫು | ಯಿಪ್ ಮಾನ್ (葉問) |
ಇತರೆ ತರಬೇತುದಾರರು | ಸಿಹಿಂಗ್ ವಾಂಗ್ ಷುನ್-ಲೆಂಗ್ (黃惇樑)ವಿಲಿಯಂ ಚೆಯುಂಗ್ |
ಗಮನಾರ್ಹ ಮುಷ್ಟಿಯುದ್ಧ ಜೊತೆಗಾರ | ಟೊ ಡೈ ಹಾಕಿನ್ಸ್ ಛೆಯುಂಗ್ ಸೂಚನೆ: ಆ ಸಮಯದಲ್ಲಿ ಅವರು ಲೀಯವರ ಸ್ನೇಹಿತರಾಗಿದ್ದರು. |
ಬ್ರೂಸ್ ಲೀ (李小龍) ಜೀತ್ ಕುನೆ ಡೊದ ನಿರ್ಮಾರ್ತೃ | |
ಲೀಯವರಿಂದ ಖಾಸಗಿಯಾಗಿ ಜೀತ್ ಕುನೆ ಡೊ ಕಲಿಸಲು ಪ್ರಮಾಣೀಕರಿಸಲ್ಪಟ್ಟ ತರಬೇತುದಾರರು | ಡಾನ್ ಇನೊಸ್ಯಾಂಟೊ ಟಕಿ ಕಿಮುರಾ ಜೇಮ್ಸ್ ಯಿಮ್ ಲೀ(1972ರಲ್ಲಿ ಮೃತರಾದರು) |
ಜುನ್ ಫಾನ್ ಜ್ಞಾತ ವಿದ್ಯಾರ್ಥಿಗಳು ಗುಂಗ್ ಫೂ/ಜೀತ್ ಕುನೆ ಡೊ |
ಬ್ರಾಂಡನ್ ಬ್ರೂಸ್ ಲೀ ಜೆಸ್ಸೆ ಗ್ಲೋವರ್ ಸ್ಟೀವ್ ಗೋಲ್ಡನ್ ಲ್ಯಾರ್ರಿ ಹಾರ್ಟ್‌ಸೆಲ್ ಡಾನ್ ಇನೊಸ್ಯಾಂಟೊ ಯೋರಿ ನಕಮುರಾ ಟಕಿ ಕಿಮುರಾ ರಿಚರ್ಡ್ ಬಸ್ಟಿಲ್ಲೊ ಜೆರ್ರಿ ಪೊಟೀಟ್ ಟೆಡ್ ವಾಂಗ್ ಜೇಮ್ಸ್ ಯಿಂ ಲೀ ರಸ್ಟಿ ಸ್ಟೀವನ್ಸ್ ಅಸಂಖ್ಯಾತ ಇನ್ನಿತರರು... |
ಕಲಿತ ಪ್ರಸಿದ್ಧ ಶಿಷ್ಯರು ಜುನ್ ಫಾನ್/ಜೀತ್ ಕುನೆ ಡೊ |
ಚಕ್ ನಾರ್ರಿಸ್ [೮೩] ಕರೀಂ ಅಬ್ದುಲ್-ಜಬ್ಬಾರ್ ಜೇಮ್ಸ್ ಕೋಬರ್ನ್ ಜೋ ಲೂಯಿಸ್ ರೋಮನ್ ಪೋಲನ್‌ಸ್ಕಿ ಲೀ ಮಾರ್ವಿನ್ ಸ್ಟಿರ್ಲಿಂಗ್ ಸಿಲ್ಲಿಫಾಂಟ್ ಸ್ಟೀವ್ ಮೆಕ್‌ಕ್ವೀನ್ ಮೈಕ್ ಸ್ಟೋನ್ ಅಸಂಖ್ಯಾತ ಇನ್ನಿತರರು... |
ಮರಣ
ಬದಲಾಯಿಸಿಈ articleಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2009) |
ಮೇ 10, 1973ರಂದು, ಎಂಟರ್ ದ ಡ್ರ್ಯಾಗನ್ ಚಿತ್ರದ ಡಬ್ಬಿಂಗ್ ಮಾಡುವ ಸಮಯದಲ್ಲಿ ಲೀಯವರು ಗೋಲ್ಡನ್ ಹಾರ್ವೆಸ್ಟ್ ಸ್ಟುಡಿಯೋದಲ್ಲಿ ಕುಸಿದುಬಿದ್ದಾಗ ಮುಂಬರುವ ಘಟನೆಗಳ ಮುನ್ಸೂಚನೆ ದೊರಕಿತು. ದೇಹದ ತುಂಬಾ ಹೊಡೆತಗಳ ಗುರುತುಗಳು ಮತ್ತು ಮೆದುಳಿನ ಊತದಿಂದ ನರಳುತ್ತಿದ್ದ ಅವರನ್ನು, ಹಾಂಗ್ ಕಾಂಗ್ ಬಾಪ್ಟಿಸ್ಟ್ ಆಸ್ಪತ್ರೆಗೆ ತುರ್ತಾಗಿ ದಾಖಲಿಸಲಾಯಿತು, ಅಲ್ಲಿ ಮನ್ನಿಟೊಲ್ ನೀಡಿಕೆಯಿಂದ ಊತಗಳನ್ನು ತಗ್ಗಿಸಿ ಅವರನ್ನು ಉಳಿಸಲು ವೈದ್ಯರು ಯಶಸ್ವಿಯಾದರು. ಅವರ ಆರೋಗ್ಯದಲ್ಲಿನ ಮೊದಲ ಕುಸಿತದಲ್ಲಿ ಕಂಡ ಈ ರೋಗಲಕ್ಷಣಗಳೇ ನಂತರ ಅವು ಮರಣ ಹೊಂದಿದ ದಿನವೂ ಮರುಕಳಿಸಿದವು.[೮೪]
ಜುಲೈ 20, 1973ರಂದು, ಲೀಯವರು, ತಾವು ಜೊತೆಗೂಡಿ ಚಿತ್ರ ತಯಾರಿಸಲುದ್ದೇಶಿಸಿದ್ದ ಮಾಜಿ ಜೇಮ್ಸ್ ಬಾಂಡ್ ತಾರೆ ಜಾರ್ಜ್ ಲೇಜೆನ್‌ಬೈಯವರೊಂದಿಗೆ ಸಹಭೋಜನ ನಡೆಸಲು ಹಾಂಗ್ ಕಾಂಗ್‌ನಲ್ಲಿದ್ದರು. ಲೀ ಪತ್ನಿ ಲಿಂಡಾರವರ ಪ್ರಕಾರ, ಲೀಯವರು ಗೇಂ ಆಫ್ ಡೆತ್ ಚಲನಚಿತ್ರದ ಬಗ್ಗೆ ಚರ್ಚಿಸಲು ನಿರ್ಮಾಪಕ ರೇಮಂಡ್ ಚೌರವರನ್ನು 2 p.m.ರ ಸಮಯದಲ್ಲಿ ಮನೆಯಲ್ಲಿ ಭೇಟಿಯಾದರು. 4 p.m.ವರೆಗೆ ಕಾರ್ಯಪ್ರವೃತ್ತರಾಗಿದ್ದ ಅವರು ನಂತರ ಒಟ್ಟಿಗೆ ಓರ್ವ ತೈವಾನೀ ನಟಿಯಾದ ಲೀಯವರ ಸಹನಟಿ ಬೆಟ್ಟಿ ಟಿಂಗ್‌ರ ಮನೆಗೆ ಹೋದರು. ಟಿಂಗ್‌ರ ಮನೆಯಲ್ಲಿ ಮೂವರು ಚಿತ್ರಸಾಹಿತ್ಯವನ್ನು ಪರಿಶೀಲಿಸುತ್ತಿದ್ದರು, ನಂತರ ಚೌರವರು ಒಂದು ಭೋಜನ ಭೇಟಿಯ ಸಲುವಾಗಿ ಹೊರಗೆ ಹೋದರು. [ಸಾಕ್ಷ್ಯಾಧಾರ ಬೇಕಾಗಿದೆ]
ಸ್ವಲ್ಪ ಸಮಯದ ನಂತರ, ಲೀಯವರು ತಲೆನೋವು ಎಂದ ಕಾರಣ ಟಿಂಗ್‌ರವರು ಆಸ್ಪಿರಿನ್ ಮತ್ತು ಸ್ನಾಯು ಶಾಮಕ/ವಿಶ್ರಾಂತಿಕಾರಕಗಳೆರಡನ್ನೂ ಹೊಂದಿದ್ದ ಈಕ್ವಾಜೆಸಿಕ್ ಎಂಬ ಯಾತನಾ ನಿವಾರಕ (ನೋವುನಿವಾರಕ)ವನ್ನು ನೀಡಿದರು. ಸುಮಾರು 7:30 p.m.ನ ಹೊತ್ತಿಗೆ, ಒಂದು ಕಿರು ನಿದ್ದೆ ಮಾಡಲು ಹೋದರು. ಲೀಯವರು ಭೋಜನಕ್ಕೆ ಎದ್ದು ಬರದ ಕಾರಣ, ಚೌ ಅಪಾರ್ಟ್‌ಮೆಂಟ್‌ಗೆ ಬಂದಾಗ ಅವರೂ ಸಹಾ ಲೀಯವರನ್ನು ಎಬ್ಬಿಸಲಾಗಲಿಲ್ಲ. ವೈದ್ಯರೋರ್ವರಿಗೆ ಕರೆ ನೀಡಲಾಯಿತು, ಪ್ರಜ್ಞೆ ಬರಿಸಲು ಹತ್ತು ನಿಮಿಷ ಆತ ಮಾಡಿದ ಪ್ರಯತ್ನ ಫಲ ಕೊಡದೇ ಇರಲು ಅವರನ್ನು ರಾಣಿ ಎಲಿಜಬೆತ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳಿಸಲಾಯಿತು. ಆದರೂ ಆಸ್ಪತ್ರೆ ತಲುಪುವ ಹೊತ್ತಿಗೆ ಲೀಯವರು ಕೊನೆಯುಸಿರೆಳೆದಿದ್ದರು. ಯಾವುದೇ ವ್ಯಕ್ತವಾಗಬಲ್ಲ ಬಾಹ್ಯ ಗಾಯಗಳಿರಲಿಲ್ಲ; ಆದರೂ, ಅವರ ಮಿದುಳು 1,400ರಿಂದ 1,575 ಗ್ರಾಂ(13% ಏರಿಕೆ)ಗಳಷ್ಟು ಗಮನಾರ್ಹ ಪ್ರಮಾಣದಲ್ಲಿ ಊದಿಕೊಂಡಿತ್ತು. ಲೀಯವರ ವಯಸ್ಸು 32 ವರ್ಷಗಳಾಗಿತ್ತು. ಶವಪರೀಕ್ಷೆಯಲ್ಲಿ ಕಂಡುಬಂದ ಎರಡೇ ಪದಾರ್ಥಗಳೆಂದರೆ ಈಕ್ವಜೆಸಿಕ್ ಮತ್ತು ಕ್ಯಾನಬೀಸ್ ಅಮಲು ಪದಾರ್ಥದ ಕುರುಹುಗಳು. ಅಕ್ಟೋಬರ್ 15 2005ರಂದು ನೀಡಿದ ಸಂದರ್ಶನವೊಂದರಲ್ಲಿ ಚೌರವರು ನೋವು ನಿವಾರಕಗಳಲ್ಲಿ ಸಾಮಾನ್ಯವೆಂದು ಅವರೇ ಹೇಳಿರುವ ಈಕ್ವಾಜೆಸಿಕ್‌ನಲ್ಲಿನ ಸ್ನಾಯುಶಾಮಕಕ್ಕೆ ಅವರ ದೇಹವು ನೀಡಿದ ಸೂಕ್ಷ್ಮಪ್ರತಿಕ್ರಿಯೆಯಿಂದಾಗಿ ಲೀಯವರು ಮೃತಪಟ್ಟರು ಎಂದು ಹೇಳಿಕೆ ಕೊಟ್ಟರು. ವೈದ್ಯರು ಲೀಯವರ ಸಾವನ್ನು ಅಧಿಕೃತವಾಗಿ ಘೋಷಿಸಿದಾಗ "ದುರ್ಘಟನೆಯಿಂದಾದ ಸಾವು" ಎಂಬ ನಿರ್ಣಯಕ್ಕೆ ಬರಲಾಗಿತ್ತು. [ಸಾಕ್ಷ್ಯಾಧಾರ ಬೇಕಾಗಿದೆ]
ಲೀಯವರ ಹಾಂಗ್ ಕಾಂಗ್‌ನಲ್ಲಿನ ಖಾಸಗಿ ವೈದ್ಯರಾಗಿದ್ದ ಹಾಗೂ ಲೀಯವರ ಮೊದಲ ಕುಸಿತದಲ್ಲಿ ಅವರನ್ನು ಉಪಚರಿಸಿದ್ದ Dr. ಡಾನ್ ಲಾಂಗ್‌ಫೋರ್ಡ್‌ರವರು ಆತನ ಸಾವಿನ ನಂತರ, "ಸಾವಿನ ಸಂಭಾವ್ಯ ಕಾರಣವು ಕ್ಯಾನ್ನಬೀಸ್ ಎಂದು ಘೋಷಿಸಬಹುದು ಎಂಬ ಬಗೆಗೆ ನನ್ನ ಮನಸ್ಸಿನಲ್ಲಿ ಯಾವುದೇ ಅನುಮಾನವಿರಲಿಲ್ಲ" ಎಂದು ಹೇಳಿಕೆ ಕೊಟ್ಟರು.[೮೫] "ಬ್ರೂಸ್‌ರ ಮೊದಲ ಕುಸಿತದ ಸಮಯದಲ್ಲಿ ಈಕ್ವಾಜೆಸಿಕ್‌ನ ಯಾವ ಅಂಶವೂ ಇರಲಿಲ್ಲ" ಎಂದೇ ಅವರು ನಂಬಿದ್ದರು. 1000ಕ್ಕೂ ಮೀರಿದ ಶವಪರೀಕ್ಷೆಗಳ ಮೇಲ್ವಿಚಾರಣೆ ಮಾಡಿದ ಅನುಭವವಿದ್ದ [೮೬] ಪ್ರೊಫೆಸರ್ R.D. ಟಿಯರೆಯವರನ್ನು ಲೀಯವರ ತಪಾಸಣಾ ಸಂದರ್ಭದಲ್ಲಿ ವಿಶೇಷ ತಜ್ಞರನ್ನಾಗಿ ನೇಮಿಸಲಾಗಿತ್ತು. Dr. ಟಿಯರೆಯವರು ಕ್ಯಾನ್ನಬೀಸ್‌ನ ಇರವು ಕೇವಲ ಕಾಕತಾಳೀಯವಾಗಿದ್ದು ಎಂದು ಘೋಷಿಸಿದರಲ್ಲದೇ, ಅದೇ ಲೀಯವರ ಸಾವಿಗೆ ಕಾರಣವಾಯಿತು ಎಂದು ಹೇಳಿದರೆ ಅದು "ಬೇಜವಾಬ್ದಾರಿಯ ಮತ್ತು ಅಸಂಬದ್ಧ/ಅಸಂಗತ" ಹೇಳಿಕೆಯಾಗುತ್ತದೆ ಎಂದೂ ಹೇಳಿದರು. ನಿರ್ದೇಶಿತ ನೋವು ನಿವಾರಕ ಔಷಧಿ ಈಕ್ವಾಜೆಸಿಕ್‌ನಿಂದ ಉಂಟಾದ ಸೂಕ್ಷ್ಮ ಪ್ರತಿಕ್ರಿಯೆಯಿಂದಾಗಿ ತೀವ್ರ ಉಲ್ಬಣಗೊಂಡ ಮೆದುಳಿನ ಊತವೇ ಸಾವಿಗೆ ಕಾರಣ ಎಂಬುದು ಅವರ ಅಂತಿಮ ನಿರ್ಣಯವಾಗಿತ್ತು.[೮೭] ಮೇ ತಿಂಗಳಿನಲ್ಲಿ ಲೀಯವರ ಜೀವ ಉಳಿಯಲು ಕಾರಣವಾಗಿದ್ದ ಪೀಟರ್ ವೂ ಎಂಬ ನರ ಶಸ್ತ್ರಚಿಕಿತ್ಸಾತಜ್ಞರ ಪೂರ್ವಭಾವಿ ಅಭಿಮತದ ಪ್ರಕಾರ ಕ್ಯಾನ್ನಬೀಸ್ OR/ಇಲ್ಲವೇ ಈಕ್ವಾಜೆಸಿಕ್ ಎರಡರಲ್ಲಿ ಒಂದಕ್ಕೆ ಆದ ಪ್ರತಿಕ್ರಿಯೆಯೇ ಸಾವಿಗೆ ಕಾರಣವಾಗಿರಬಹುದು ಎಂಬುದಾಗಿತ್ತು. ಆದರೂ, Dr. ವೂ ನಂತರ ತಮ್ಮ ಈ ನಿಲುವಿನಿಂದ ಹಿಂತೆಗೆದರು:
- "ಪ್ರೊಫೆಸರ್ ಟಿಯರೆಯವರು ಸ್ಕಾಟ್‌ಲೆಂಡ್ ಯಾರ್ಡ್‌ನಿಂದ ಶಿಫಾರಸು ಮಾಡಲ್ಪಟ್ಟ ಅಪರಾಧ ನ್ಯಾಯ ತಜ್ಞರು; ಅವರನ್ನು ಇಲ್ಲಿಗೆ ಕ್ಯಾನ್ನಬೀಸ್ ತಜ್ಞರನ್ನಾಗಿ ಕರೆಸಲಾಗಿರುವದರಿಂದ ಅವರ ಪ್ರಮಾಣೀಕರಿಸುವಿಕೆಯನ್ನು ನಾವು ನಿರಾಕರಿಸುವಂತಿಲ್ಲ. ಕ್ಯಾನ್ನಬೀಸ್‌ನ ಪ್ರಮಾಣವು ನಿಖರವಾಗಿ ಇಲ್ಲವೇ ನಿರ್ಣಯಿಸುವಂತೆ ಹೇಳಲು ಸಾಧ್ಯವಿಲ್ಲ, ಆದರೆ ಕೇವಲ ಅದನ್ನು ಸೇವಿಸಿದ ಮಾತ್ರಕ್ಕೆ ಮರಣ ಹೊಂದಿದ ಯಾರನ್ನೂ ನಾ ಕಾಣೆ." [೮೬]
ಲೀಯವರ ಸಾವಿನ ನಿಖರ ವಿವರಗಳು ವಿವಾದಾತ್ಮಕ ವಿಷಯವಾಗಿದೆ.
ಆತನ ಪತ್ನಿ ಲಿಂಡಾರವರು ತಮ್ಮ ತವರಾದ ಸಿಯಾಟಲ್ ನಗರಕ್ಕೆ ಹಿಂದಿರುಗಿ, ಲೇಕ್‌ವ್ಯೂ ರುದ್ರಭೂಮಿಯ 276ನೇ ವಿಭಾಗದಲ್ಲಿ ಅವರ ದೇಹವನ್ನು ಹೂಳಿದರು. ಜುಲೈ 31, 1973ರಲ್ಲಿ ನಡೆದ ಅವರ ಶವಸಂಸ್ಕಾರದಲ್ಲಿ ಸ್ಟೀವ್ ಮೆಕ್‌ಕ್ವೀನ್, ಜೇಮ್ಸ್ ಕೋಬರ್ನ್, ಚಕ್ ನೊರ್ರಿಸ್, ಜಾರ್ಜ್ ಲೇಜೆನ್‌ಬೈ, ಡಾನ್ ಇನೊಸ್ಯಾಂಟೊ, ಟಕಿ ಕಿಮುರಾ, ಪೀಟರ್ ಚಿನ್, ಮತ್ತು ಅವರ ಸಹೋದರ, ರಾಬರ್ಟ್ ಲೀರವರುಗಳೆಲ್ಲಾ ಶವವಾಹಕರಾಗಿ ಪಾಲುಗೊಂಡಿದ್ದರು.
ಅವರ ಅಪ್ರತಿಮ ಸ್ಥಾನಮಾನ ಮತ್ತು ಅಕಾಲಿಕ ಮರಣಗಳು ಭೂಗತ ಜಗತ್ತಿಗೆ [೮೮] ಆತನ ಮತ್ತು ಆತನ ಕುಟುಂಬದ ಬಗೆಗಿರಬಹುದಾಗಿದ್ದ ದ್ವೇಷದಿಂದಾಗಿ ಆತನ ಕೊಲೆಯಾಗಿರಬಹುದು ಎಂಬ ಊಹೆಯೂ ಸೇರಿದಂತೆ ಆತನ ಸಾವಿನ ಬಗೆಗೆ ಅನೇಕ ಸಿದ್ಧಾಂತ/ಕಲ್ಪನೆಗಳನ್ನು ಹುಟ್ಟುಹಾಕಿವೆ.
ದ್ವೇಷದ ಊಹೆಯು ತನ್ನ 28ನೇ ವಯಸ್ಸಿನಲ್ಲಿ ತಂದೆಯ ಸಾವಿನ 20 ವರ್ಷಗಳ ನಂತರ ದ ಕ್ರೌ ಚಲನಚಿತ್ರದ ಚಿತ್ರೀಕರಣದ ವೇಳೆ ನಡೆದ ವಿಲಕ್ಷಣ ಅಪಘಾತವೊಂದರಲ್ಲಿ ಮೃತರಾದ ಅವರ ಪುತ್ರ ಹಾಗೂ ನಟ ಬ್ರ್ಯಾಂಡನ್ ಲೀಯವರ ಮೇಲೂ ವ್ಯಾಪಿಸಿದೆ. ಆ ಚಿತ್ರವು ಆತನ ಮರಣಾ ನಂತರ ಬಿಡುಗಡೆಯಾದುದಲ್ಲದೇ ಆತನ ತಂದೆಯ ಕೊನೆಯ ಚಿತ್ರದ ಹಾಗೆ ಅದೂ ಸಹಾ ಆರಾಧಕ ಪ್ರಾಮುಖ್ಯತೆ ಗಳಿಸಿತು. ಚಿತ್ರೀಕರಿಸಲಾಗಿರದಿದ್ದ ಕೆಲವೇ ಪ್ರಮುಖ ದೃಶ್ಯಗಳನ್ನು ಗಣಕ-ನಿರ್ಮಿತ ಬಿಂಬಗಳನ್ನು ಹಾಗೂ ನಕಲಿ ಸಾಹಸ ಕಲಾವಿದರನ್ನು ಬಳಸಿ ಚಿತ್ರೀಕರಣ ನಡೆಸಿ (ದ ಕ್ರೌ ಚಲನಚಿತ್ರವನ್ನು ಪೂರೈಸಲಾಯಿತು.) ಬ್ರ್ಯಾಂಡನ್ ಲೀಯವರನ್ನು ಅವರ ತಂದೆಯ ಸನಿಹದಲ್ಲಿಯೇ/ಪಕ್ಕದಲ್ಲಿಯೇ ಹೂಳಲಾಯಿತು.
ಮಾಧ್ಯಮ
ಬದಲಾಯಿಸಿವ್ಯಕ್ತಿಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳು
ಬದಲಾಯಿಸಿ1976ರಲ್ಲಿ, ಹಾಂಗ್ ಕಾಂಗ್ ಚಲನಚಿತ್ರೋದ್ಯಮವು ಬಹಳಷ್ಟು ಮಟ್ಟಿಗೆ ಕಾಲ್ಪನಿಕವಾದ ವ್ಯಕ್ತಿಚಿತ್ರ-ಚಲನಚಿತ್ರ ಬ್ರೂಸ್ ಲಿ ಎಂಬ ಹೆಸರಿನಲ್ಲಿ ಪ್ರಚಾರ ನೀಡಲಾದ ಲೀಯವರ "ತದ್ರೂಪಿ" ಹೊ ಚುಂಗ್ ಟಾವೊರ ಮೇಲೆ ಚಿತ್ರಿತವಾದ ಬ್ರೂಸ್ ಲೀ: ದ ಮ್ಯಾನ್, ದ ಮಿಥ್ ಎಂಬ ಚಲನಚಿತ್ರವನ್ನು ಬಿಡುಗಡೆ ಮಾಡಿತು.
1993ರಲ್ಲಿ ಲೀಯವರ ಜೀವನ ವೃತ್ತಾಂತ ಆಧರಿತ ಜೇಸನ್ ಸ್ಕಾಟ್ ಲೀ(ಸಂಬಂಧಿಕನಲ್ಲ) ಎಂಬುವರು ಲೀಯವರ ಪಾತ್ರ ವಹಿಸಿದ್ದ ಡ್ರ್ಯಾಗನ್ : ದ ಬ್ರೂಸ್ ಲೀ ಸ್ಟೋರಿ ಎಂಬ ಹೆಸರಿನ ಚಲನಚಿತ್ರ ಬಿಡುಗಡೆಯಾಯಿತು.
ಏಪ್ರಿಲ್ 2007ರಲ್ಲಿ, ಚೀನೀ ರಾಷ್ಟ್ರೀಯ ಮಾಧ್ಯಮವು ತನ್ನ ರಾಷ್ಟ್ರೀಯ ಪ್ರಸಾರ ವಾಹಿನಿಯು 2008ರ ಬೀಜಿಂಗ್ ಬೇಸಿಗೆ ಒಲಿಂಪಿಕ್ಸ್ ಕ್ರೀಡೆಗಳ ಸಮಯದಲ್ಲಿ ಚೀನೀ ಸಂಸ್ಕೃತಿಯನ್ನು ಪ್ರಚುರಪಡಿಸಲು ದ ಲೆಜೆಂಡ್ ಆಫ್ ಬ್ರೂಸ್ ಲೀ ಎಂಬ ಹೆಸರಿನ ಲೀಯವರ ಬಗೆಗಿನ 50-ಭಾಗಗಳ TV ಸರಣಿಯನ್ನು ಚಿತ್ರೀಕರಿಸಲು ಆರಂಭಿಸಿದೆ ಎಂದು ಘೋಷಿಸಿತು.[೮೯]
ಆಗಸ್ಟ್ 22 2007ರಂದು, ಫ್ರೂಟ್ ಚಾನ್‌ರವರು ಜಾನ್ ವೂನ ನಿರ್ಮಾಪಕ ಟೆರೆನ್ಸ್ ಚಾಂಗ್‌ರಿಂದ ನಿರ್ಮಾಣವಾಗುವ, 1950ರ ಹಾಂಗ್ ಕಾಂಗ್‌ನ್ನು ತೋರಿಸುವ ಬ್ರೂಸ್ ಲೀಯ ಆರಂಭದ ವರ್ಷಗಳ ಮೇಲೆ ಆಧಾರಿತ ಕೊವ್ಲೂನ್ ಸಿಟಿ ಎಂಬ ಹೆಸರಿನ ಚೀನೀ ಭಾಷೆಯ ಚಿತ್ರವನ್ನು ನಿರ್ಮಿಸುವುದಾಗಿ ಘೋಷಿಸಿದರು.
ಏಪ್ರಿಲ್ 2009ರಲ್ಲಿ ಹಿಸ್ಟರಿ ವಾಹಿನಿಯು "ಹೌ ಬ್ರೂಸ್ ಲೀ ಚೇಂಜ್‌ಡ್ ದ ವರ್ಲ್ಡ್" ಎಂಬ ಹೆಸರಿನ ಸಾಕ್ಷ್ಯಚಿತ್ರವನ್ನು ನಿರ್ಮಿಸಿತು
ಸ್ಟ್ಯಾನ್ಲಿ ಕ್ವಾನ್ ಎಂಬುವವರು ಲೀಯವರ ವ್ಯಕ್ತಿಚಿತ್ರದ ಚಲನಚಿತ್ರ ನಿರ್ಮಿಸಲು ಲೀಯವರ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಬ್ರೂಸ್ ಲೀಯವರು ತಮ್ಮ ತಂದೆಯಿಲ್ಲದೆ ಪಟ್ಟ ಬವಣೆಗಳನ್ನು ಹಾಗೂ ಅವರು ತಮ್ಮ ಮಗ ಬ್ರ್ಯಾಂಡನ್ ಲೀಯವರನ್ನು ಹೇಗೆ ಬೆಳೆಸಿದರು ಎಂಬುದನ್ನು ತಮ್ಮ ಚಿತ್ರ ತೋರಿಸಲಿದೆ ಎಂದು ಕ್ವಾನ್‌ರವರು ಹೇಳಿದರು.[೯೦]
ರಚಿಸಿದ ಪುಸ್ತಕಗಳು/ಗ್ರಂಥಗಳು
ಬದಲಾಯಿಸಿ- ಚೀನೀ ಗುಂಗ್-ಫೂ: ದ ಫಿಲಾಸಫಿಕಲ್ ಆರ್ಟ್ ಆಫ್ ಸೆಲ್ಫ್ ಡಿಫೆನ್ಸ್ (ಬ್ರೂಸ್ ಲೀಯವರ ಮೊದಲ ಗ್ರಂಥ) – 1963
- ಟಾವೊ ಆಫ್ ಜೀತ್ ಕುನೆ ಡೊ (ಮರಣಾನಂತರ ಪ್ರಕಟಿಸಲಾಯಿತು) – 1973
- ಬ್ರೂಸ್ ಲೀಯ ಹೋರಾಟದ ವಿಧಾನ (ಮರಣಾನಂತರ ಪ್ರಕಟಿಸಲಾಯಿತು) – 1978
ಬ್ರೂಸ್ ಲೀ, ಜೀತ್ ಕುನೆ ಡೊ ಅಥವಾ ಇವೆರಡರ ಬಗೆಗಿನ ಗ್ರಂಥಗಳು
ಬದಲಾಯಿಸಿ- ಬ್ರೂಸ್ ಲೀ: ದ ಮಾನ್ ಓನ್ಲೀ ಐ ನ್ಯೂ – ಆತನ ವಿಧವೆ ಲಿಂಡಾ ಲೀ ಕ್ಯಾಡ್‌ವೆಲ್‌ರಿಂದ ರಚಿತ. ಈ ಪುಸ್ತಕವು ಆತನ ಜೀವನದ ಮೇಲೆ ಆಧರಿಸಿ ನಿರ್ಮಿತವಾದ ಚಲನಚಿತ್ರ ಡ್ರ್ಯಾಗನ್ : ದ ಬ್ರೂಸ್ ಲೀ ಸ್ಟೋರಿ ಯ ಮೂಲವಾಗಿದೆ.
- ಬ್ರೂಸ್ ಲೀ: ವರ್ಡ್ಸ್ ಆಫ್ ದ ಡ್ರ್ಯಾಗನ್ : ಇಂಟರ್‌ವ್ಯೂಸ್ 1958-1973 – ಜಾನ್ ಲಿಟಲ್‌ರಿಂದ ರಚಿತ
- ಬ್ರೂಸ್ ಲೀ: ದ ಆರ್ಟ್ ಆಫ್ ಎಕ್ಸ್‌ಪ್ರೆಸ್ಸಿಂಗ್ ದ ಹ್ಯೂಮನ್ ಬಾಡಿ – ಜಾನ್ ಲಿಟಲ್‌ರಿಂದ ರಚಿತ
- ದ ಡ್ರ್ಯಾಗನ್ ಅಂಡ್ ದ ಟೈಗರ್: ದ ಬರ್ತ್ ಆಫ್ ಬ್ರೂಸ್ ಲೀ'ಸ್ ಜೀತ್ ಕುನೆ ಡೊ, ದ ಓಕ್‌ಲ್ಯಾಂಡ್ ಇಯರ್ಸ್. ಸಿಡ್ ಕ್ಯಾಂಪ್‌ಬೆಲ್‌ರಿಂದ ರಚಿತ
- ಬ್ರೂಸ್ ಲೀ ಬಿಟ್ವೀನ್ ವಿಂಗ್ ಚುನ್ ಅಂಡ್ JKD – ಜೆಸ್ಸೆ ಗ್ಲೋವರ್‌ರಿಂದ ರಚಿತ
- ಬ್ರೂಸ್ ಲೀ: ಡೈನಮಿಕ್ ಬಿಕಮಿಂಗ್ – ಬ್ರೂಸ್ ಲೀಯವರ ಜೀವನದೃಷ್ಟಿಯ ಬಗೆಗಿನ ಪುಸ್ತಕ
- ಬ್ರೂಸ್ ಲೀ: ಫೈಟಿಂಗ್ ಸ್ಪಿರಿಟ್ – ಬ್ರೂಸ್ ಥಾಮಸ್‌ರಿಂದ ರಚಿತ ವ್ಯಕ್ತಿಚಿತ್ರ
- ಸ್ಟ್ರೈಕಿಂಗ್ ಥಾಟ್ಸ್ – ಬ್ರೂಸ್ ಲೀಯವ ಆಲೋಚನೆಗಳು ಮತ್ತು ಉದ್ಧರಣಗಳು
- ದ ಟಾವೊ ಆಫ್ ಜೀತ್ ಕುನೆ ಡೊ – ಬ್ರೂಸ್ ಲೀಯವರ ಮರಣಾನಂತರ ಸಂಗ್ರಹಿಸಿ ಪ್ರಕಟಿಸಲಾದ ಅವರ ಸಮರ ಕಲೆಗಳು ಮತ್ತು ತತ್ವಶಾಸ್ತ್ರಗಳ ಬಗೆಗಿನ ಟಿಪ್ಪಣಿಗಳ ಪುಸ್ತಕ.
- "ಆನ್ ದ ವಾರಿಯರ್ಸ್ ಪಾತ್" ಡೇನಿಯೆಲ್ ಬೊಲೆಲ್ಲಿಯವರಿಂದ ರಚಿತ (2003). ಬ್ರೂಸ್ ಲೀಯವರ ತಾತ್ವಿಕ ಆಲೋಚನಾ ಧಾಟಿಯ ಬಗೆಗೆ ಚರ್ಚಿಸಿದ ಸಮರ ಕಲೆಗಳ ತಾತ್ವಿಕತೆಗಳ ಅಧ್ಯಾಯವೇ ಈ ಪುಸ್ತಕದ ದೀರ್ಘ ಅಧ್ಯಾಯ.
- ಅನ್‌ಸೆಟಲ್ಡ್ ಮ್ಯಾಟರ್ಸ್: ದ ಲೈಫ್ & ಡೆತ್ ಆಫ್ ಬ್ರೂಸ್ ಲೀ – ಟಾಮ್ ಬ್ಲೀಕರ್‌ರಿಂದ ರಚಿತ.
- ಬೀ ವಾಟರ್, ಮೈ ಫ್ರೆಂಡ್: ದ ಅರ್ಲಿ ಇಯರ್ಸ್ ಆಫ್ ಬ್ರೂಸ್ ಲೀ – ಮಕ್ಕಳಿಗೆಂದು ಬರೆದ ಸಚಿತ್ರ ಪುಸ್ತಕ ಡಾಂ ಲೀಯವರಿಂದ ಚಿತ್ರಿಸಲ್ಪಟ್ಟ ಲೇಖಕರ ಪ್ರಕಾರ ವಾಸ್ತವಿಕವೆಂದೇ ಹೇಳಲ್ಪಟ್ಟಿರುವ ಬ್ರೂಸ್ ಲೀಯವರ ಬಾಲ್ಯ ಹಾಗೂ ಪ್ರಾರಂಭಿಕ ಪ್ರೌಢಾವಸ್ಥೆಯನ್ನು ತೋರಿಸುವ ಚಿತ್ರಗಳನ್ನು ಹೊಂದಿರುವ ಮತ್ತು ಕೆನ್ ಮೊಚಿಜುಕಿಯವರಿಂದ ರಚಿತ ಪುಸ್ತಕ.[೯೧]
ಬ್ರೂಸ್ ಲೀಯವರ ಬಗೆಗಿನ ಸಾಕ್ಷ್ಯಚಿತ್ರಗಳು
ಬದಲಾಯಿಸಿ- ಹೌ ಬ್ರೂಸ್ ಲೀ ಚೇಂಜ್‌ಡ್ ದ ವರ್ಲ್ಡ್ (2009)
- ದ ಇಂಟರ್‌ಸೆಪ್ಟಿಂಗ್ ಫಿಸ್ಟ್ (2001)
- ದ ಅನ್‌ಬೀಟಬಲ್ ಬ್ರೂಸ್ ಲೀ (2001)
- ಬ್ರೂಸ್ ಲೀ: ಎ ವಾರಿಯರ್'ಸ್ ಜರ್ನಿ (2000)
- ಬ್ರೂಸ್ ಲೀ: ದ ಪಾತ್ ಆಫ್ ದ ಡ್ರ್ಯಾಗನ್ (1998)
- ದ ಇಮ್ಮಾರ್ಟಲ್ ಡ್ರ್ಯಾಗನ್ (A&E) (1996)
- ಕರ್ಸ್ ಆಫ್ ದ ಡ್ರ್ಯಾಗನ್ (1993)
- ಡೆತ್ ಬೈ ಮಿಸ್‌ಅಡ್ವೆಂಚರ್ (1993)
- ಮಾರ್ಷಲ್ ಆರ್ಟ್ಸ್ ಮಾಸ್ಟರ್ (1993)
- ಬ್ರೂಸ್ ಲೀ, ದ ಲೆಜೆಂಡ್ (1977)
- ಬ್ರೂಸ್ ಲೀ: ದ ಮಾನ್ ಅಂಡ್ ದ ಲೆಜೆಂಡ್ ಅಕಾ ಲೈಫ್ ಅಂಡ್ ಲೆಜೆಂಡ್ ಆಫ್ ಬ್ರೂಸ್ ಲೀ (1973)
ಆಯ್ದ ಚಲನಚಿತ್ರಗಳ ಪಟ್ಟಿ
ಬದಲಾಯಿಸಿಬ್ರೂಸ್ ಲೀಯವರ ಸಂಪೂರ್ಣ ಚಲನಚಿತ್ರಗಳ ಪಟ್ಟಿಗೆ
ನೋಡಿ
- ದ ಬಿಗ್ ಬಾಸ್ (1971) (US ಶೀರ್ಷಿಕೆ:ಫಿಸ್ಟ್ಸ್ ಆಫ್ ಫ್ಯೂರಿ )
- ಫಿಸ್ಟ್ ಆಫ್ ಫ್ಯೂರಿ (1972) (US ಶೀರ್ಷಿಕೆ:ದ ಚೈನೀಸ್ ಕನೆಕ್ಷನ್)
- ವೇ ಆಫ್ ದ ಡ್ರ್ಯಾಗನ್ (1972) (US ಶೀರ್ಷಿಕೆಗಳು:ರಿಟರ್ನ್ ಆಫ್ ದ ಡ್ರ್ಯಾಗನ್ , ರಿವೆಂಜ್ ಆಫ್ ದ ಡ್ರ್ಯಾಗನ್ )
- ಎಂಟರ್ ದ ಡ್ರ್ಯಾಗನ್ (1973)
- ಗೇಂ ಆಫ್ ಡೆತ್ (1979)
- ಗೇಂ ಆಫ್ ಡೆತ್ II (1981) (ಸಂಗ್ರಹ ದೃಶ್ಯಗಳು/ ಸಂಗ್ರಹ ವಿಡಿಯೋ)
ಕಿರುಪರದೆಯ ಮೇಲೆ ಕಾಣಿಸಿಕೊಂಡ ಕಾರ್ಯಕ್ರಮಗಳು
ಬದಲಾಯಿಸಿ- ದ ಗ್ರೀನ್ ಹಾರ್ನೆಟ್ (26 ಪ್ರಸಂಗಗಳು, 1966–1967) .... ಕಾಟೊ
- ಬ್ಯಾಟ್ಮಾನ್ (ಪ್ರಸಂಗಗಳು: "ದ ಸ್ಪೆಲ್ ಆಫ್ ದ ಟುಟ್" 28 ಸೆಪ್ಟೆಂಬರ್ 1966, "ಎ ಪೀಸ್ ಆಫ್ ದ ಆಕ್ಷನ್" 1 ಮಾರ್ಚ್ 1967, "ಬ್ಯಾಟ್ಮ್ಯಾನ್'ಸ್ ಸ್ಯಾಟಿಸ್ಫ್ಯಾಕ್ಷನ್" 2 ಮಾರ್ಚ್ 1967) .... ಕಾಟೊ
- ಐರನ್‌ಸೈಡ್ (ಪ್ರಸಂಗ : "ಟ್ಯಾಗ್ಡ್ ಫಾರ್ ಮರ್ಡರ್" 26 ಅಕ್ಟೋಬರ್ 1967) .... ಲಿಯಾನ್ ಸೂ
- ಬ್ಲಾಂಡೀ (ಪ್ರಸಂಗ: "ಪಿಕ್ ಆನ್ ಸಮ್ಒನ್ ಯುವರ್ ಓನ್ ಸೈಜ್", 1968)
- ಹಿಯರ್ ಕಮ್ ದ ಬ್ರೈಡ್ಸ್ (ಪ್ರಸಂಗ: "ಮ್ಯಾರೇಜ್ ಚೈನೀಸ್ ಸ್ಟೈಲ್" 9 ಏಪ್ರಿಲ್ 1969) .... ಲಿನ್
- ಲಾಂಗ್‌ಸ್ಟ್ರೀಟ್ (4 ಪ್ರಸಂಗಗಳು, 1971) .... ಲಿ ಟ್ಸುಂಗ್
- ದ ಪಿಯೆರೆ ಬರ್ಟನ್ ಷೋ (1971) .... ಸ್ವಯಂ/ಸ್ವತಃ/ತಮ್ಮದೇ ಚಿತ್ರೀಕರಣ
ಇತರೆ ಮಾಧ್ಯಮಗಳು
ಬದಲಾಯಿಸಿ- ತಮ್ಮ ಕರ್ಟಿಸ್ ನಿಯತಕಾಲಿಕಗಳ ಅಂಕಿತದಡಿ ಕಪ್ಪು ಬಿಳುಪು ನಿಯತಕಾಲಿಕೆಗಳ ಸರಣಿಯಲ್ಲಿ 35 ಪುಟಗಳ ಹಾಸ್ಯ ಚಿತ್ರಮಾಲೆ-ಶೈಲಿಯ ಬ್ರೂಸ್ ಲೀಯವರ ವ್ಯಕ್ತಿಚಿತ್ರವನ್ನು ಡೆಡ್ಲಿ ಹ್ಯಾಂಡ್ಸ್ ಆಫ್ ಕುಂಗ್ ಫೂ ಎಂಬ ಹೆಸರಿನಲ್ಲಿ #28, ಸೆಪ್ಟೆಂಬರ್ 1976ರಂದು ಮಾರ್ವೆಲ್ ಕಾಮಿಕ್ಸ್ನವರು ಪ್ರಕಟಿಸಿದರು. ಇದು ಜೋ ಸ್ಟಾಟನ್ ಮತ್ತು ಟೋನಿ ಡೆಜುನಿಗಾ ಅವರುಗಳ ಚಿತ್ರಕಲೆಯೊಂದಿಗೆ ಮಾರ್ಟಿನ್ ಸ್ಯಾಂಡ್ಸ್ ರವರು ರಚಿಸಿದ ಪುಸ್ತಕವಾಗಿತ್ತು.
- ಬ್ರೂಸ್ ಲೀ – ವಿಡಿಯೋ ಆಟ ಪರವಾನಗಿಯೊಂದಿಗೆ 1984ರಲ್ಲಿ ಡಾಟಾಸಾಫ್ಟ್ ಇಂಕ್ ಪ್ರಕಟಿಸಿದರು.
- ವರ್ಲ್ಡ್ ಹೀರೋಸ್ ವಿಡಿಯೋ ಆಟಗಳ ಸರಣಿಯ ಕಿಂ ಡ್ರ್ಯಾಗನ್ ಬ್ರೂಸ್ ಲೀಯವರ ಮೇಲೆ ಆಧಾರಿತವಾಗಿದೆ.
- ಡ್ರ್ಯಾಗನ್ : ದ ಬ್ರೂಸ್ ಲೀ ಸ್ಟೋರಿ – 1993ರಲ್ಲಿ ಅಕ್ಲೈಂ ಎಂಟರ್ಟೈನ್ಮೆಂಟ್ನವರು ಪ್ರಕಟಿಸಿದ ವಿಡಿಯೋ ಆಟ.
- ನಿಜ-ಜೀವನದ ಬ್ರೂಸ್ ಲೀಯೊಂದಿಗೆ ಅಲ್ಪ ಮಟ್ಟದ ಸಾಮ್ಯತೆ ಮಾತ್ರ ಹೊಂದಿದ್ದ ಅಚ್ಚ ಕಾಲ್ಪನಿಕ ಸಾಹಸೀ ಮತ್ತು ಮಿಥ್ಯಾ ಪಾತ್ರದ ಮೇಲೆ ಆಧರಿತವಾಗಿದ್ದ 6-ಸಂಚಿಕೆಗಳ ಬ್ರೂಸ್ ಲೀ ಚಿತ್ರಮಾಲೆ ಪುಸ್ತಕಗಳ ಕಿರುಸರಣಿಯನ್ನು 1995ರಲ್ಲಿ ಮಾಲಿಬು ಕಾಮಿಕ್ಸ್ ಸಂಸ್ಥೆಯು ಪ್ರಕಟಿಸಿತು. ಇದು (ಈ ಹಿಂದೆ ಗ್ರೀನ್ ಹಾರ್ಮೆಟ್ ಚಿತ್ರಮಾಲೆ ಪುಸ್ತಕಗಳಡಿ NOW ಕಾಮಿಕ್ಸ್' ಪುಸ್ತಕಮಾಲೆಯಲ್ಲಿ 1966ರ ಕಿರುತೆರೆ ಸರಣಿಯಲ್ಲಿ ಲೀಯವರು ಪಾತ್ರ ವಹಿಸಿದ ಕಾಟೊನ ರೂಪಾಂತರ ಆಧಾರಿತವಾದ ಮೂರು ಕಥಾಚಿತ್ರಮಾಲೆಗಳನ್ನು ರಚಿಸಿದ್ದ) ಮೈಕ್ ಬಾರನ್ ರಿಂದ ರಚಿತವಾಗಿ (ಎರಡನೇ ಕಾಟೊ ಕಿರುಸರಣಿಯನ್ನು ಚಿತ್ರಿಸಿದ) ವಾಲ್ ಮೇಯರಿಕ್ರಿಂದ ಚಿತ್ರಿತವಾಗಿತ್ತು.
- ಬ್ರೂಸ್ ಲೀ: ಕ್ವೆಸ್ಟ್ ಆಫ್ ದ ಡ್ರ್ಯಾಗನ್ – 2002ರಲ್ಲಿ ಯೂನಿವರ್ಸಲ್ ಇಂಟರ್ಆಕ್ಟೀವ್ Inc.ರಿಂದ ಪ್ರಕಟಿತವಾದ ವಿಡಿಯೊ ಆಟ.
- ಬ್ರೂಸ್ ಲೀ: ರಿಟರ್ನ್ ಆಫ್ ದ ಲೆಜೆಂಡ್ - ಯೂನಿವರ್ಸಲ್ ಇಂಟರ್ಆಕ್ಟೀವ್ರಿಂದ 2002ರಲ್ಲಿ ಪ್ರಕಟಿತವಾದ ಗೇಂ ಬಾಯ್ ಅಡ್ವಾನ್ಸ್ ವಿಡಿಯೋ ಆಟ.
- ಬೀ ಲೀಕ್ ವಾಟರ್ – 2008ರಲ್ಲಿ ಈಸ್ಟ್ ವೆಸ್ಟ್ ಪ್ಲೇಯರ್ಸ್ರಿಂದ ಪ್ರಾಯೋಜಿತವಾದ ಮುಖ್ಯ ಭೂಮಿಕೆಯಲ್ಲಿ ಬ್ರೂಸ್ ಲೀಯ ಪ್ರೇತ/ಭೂತವಿರುವ ಡಾನ್ ಕ್ವಾಂಗ್ ವಿರಚಿತ ನಾಟಕ.
- ಟೆಕ್ಕೆನ್ ವಿಡಿಯೋ ಆಟಗಳು ಸಂಸ್ಥೆಯಿಂದ ಬ್ರೂಸ್ ಲೀಯವರ ಮೇಲೆ ಆಧಾರಿತವಾದ ಮಾರ್ಷಲ್ ಲಾಮತ್ತು ಫಾರೆಸ್ಟ್ ಲಾ ಆಟಗಳು.
- ಸ್ಟ್ರೀಟ್ ಫೈಟರ್ ವಿಡಿಯೋ ಆಟಗಳ ಸರಣಿಯ ಫೆ-ಲಾಂಗ್ ಬ್ರೂಸ್ ಲೀಯವರ ಮೇಲೆ ಆಧಾರಿತವಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ]
- ಫಿಸ್ಟ್ ಆಫ್ ದ ನಾರ್ತ್ ಸ್ಟಾರ್ನ ಕೆನ್ಷಿರೋ ಬ್ರೂಸ್ ಲೀ'ಯವರ ಹೋರಾಟದ ಸಾಕಷ್ಟು ಶೈಲಿಗಳು ಹಾಗೂ ಶಸ್ತ್ರಗಳ ಆಯ್ಕೆಗಳನ್ನು ಪ್ರದರ್ಶಿಸುತ್ತಾನೆ. ಇದರಲ್ಲಿನ ಗೋಲನ್ ಸೇನೆಯ ಮತಿಗೆಟ್ಟ ಸಾರ್ಜಂಟ್ನ ಸೈನಿಕರೊಂದಿಗೆ ಕೆನ್ ಕಾದಾಡುವ ಎಂಟರ್ ದ ಡ್ರ್ಯಾಗನ್ನಲ್ಲಿನ ನೆಲದಡಿಯ ಹೋರಾಟದ ಹಾಗೆ ಕಾಣಿಸುವ ದೃಶ್ಯವೊಂದಿದೆ.[ಸಾಕ್ಷ್ಯಾಧಾರ ಬೇಕಾಗಿದೆ]
- ಜಾನ್ ಲೀ, ಡೆಡ್ ಆರ್ ಅಲೈವ್ನ ಜೀತ್ ಕುನೆ ಡೊ ಬೆಂಬಲಿಗ ಪಾತ್ರವು ಹೋರಾಟದ ಕೇಕೆ, ವಸ್ತ್ರ ವಿನ್ಯಾಸ ಹಾಗೂ ಹೋರಾಟ ಶೈಲಿಗಳಲ್ಲಿ ಬ್ರೂಸ್ ಲೀಯನ್ನು ಬಲವಾಗಿ ಹೋಲುತ್ತದೆ. ಇದರಲ್ಲಿನ ಕಿರು ದೃಶ್ಯವೊಂದು ಜಾನ್ ಲೀ ಬಾಲಕನಾಗಿದ್ದಾಗ ಬ್ರೂಸ್ ಲೀಯ ಚಲನಚಿತ್ರವೊಂದನ್ನು ವೀಕ್ಷಿಸುತ್ತಿರುವುದನ್ನು ಸಹಾ ತೋರಿಸುತ್ತದೆ.
- ಮಾರ್ಟಲ್ ಕಾಂಬ್ಯಾಟ್ನ ಲಿಯು ಕಾಂಗ್ ಸಹಾ ಬ್ರೂಸ್ ಲೀ ಆಧಾರಿತ ಪಾತ್ರ.
- ಷಮನ್ ಕಿಂಗ್ನಲ್ಲಿನ ಲೀ ಬೈಲಂಗ್ ಬ್ರೂಸ್ ಲೀಯವರಿಂದ ಬಹಳ ಪ್ರಭಾವಿತವಾದ ಪಾತ್ರ. ಮಂಗ ಮಾದರಿಯ ಷಾಮನ್ ಕಿಂಗ್ ಕಥಾಹಂದರದಲ್ಲಿ "ಫಿಸ್ಟ್ಸ್ ಆಫ್ ಫ್ಯೂರಿ"ಯ ಚಲನಚಿತ್ರ ರೂಪಾಂತರದ ಉದಾಹರಣೆಯಂತೆ ಆತ ನೋಟದಲ್ಲಿ ಬ್ರೂಸ್ ಲೀ ಹೋಲುವುದು ಮಾತ್ರವಲ್ಲ ಅನೇಕ ಚಾರಿತ್ರಿಕ ಲಕ್ಷಣ ಹಾಗೂ ಹಿನ್ನೆಲೆಗಳನ್ನು ಸಹಾ ಹೊಂದಿದ್ದಾನೆ.
- ನರುಟೋನ ರಾಕ್ ಲೀ ಸಹಾ ಬ್ರೂಸ್ ಲೀ ಆಧಾರಿತ.
- ಪಕ್ಕಾ ಚಿತ್ರಮಾಲೆ ಸರಣಿಯ ಅಬ್ಯೋ ಸಹಾ ಬ್ರೂಸ್ ಲೀಯವರ ಮೇಲೆ ಆಧಾರಿತವಾದ ಪಾತ್ರ.
- ಮೂಲ ಪೋಕ್ಮನ್ ಸರಣಿಯ ಒದೆತವನ್ನು ಹೋರಾಟದ ಶೈಲಿಯನ್ನಾಗಿ ಹೊಂದಿದ್ದ ಹಿಟ್ಮನ್ಲೀ ಪಾತ್ರವು ಬ್ರೂಸ್ ಲೀಯವರ ಸೂಚ್ಯ ಪಾತ್ರವಾಗಿತ್ತು.
ಇದನ್ನು ನೋಡಿರಿ
ಬದಲಾಯಿಸಿಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ Bruce Lee Foundation Awards, Honors, Achievements, and Activities Archived 2009-08-20 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೨.೦ ೨.೧ Stein, Joel (1999). "TIME 100: Bruce Lee". Time. Archived from the original on 2009-12-02. Retrieved 2008-05-30.
- ↑ ವೆಬ್ UK ಆನ್‌ಲೈನ್, ಸ್ಟೀವ್ ರೂಬಿನ್ಸ್ಟೇನ್ ವಿರಚಿತ ಬ್ರೂಸ್ ಲೀಯವರ ಬಗೆಗಿನ ಲೇಖನಗಳು [೧] Archived 2009-03-30 ವೇಬ್ಯಾಕ್ ಮೆಷಿನ್ ನಲ್ಲಿ. ಇನ್ ದ ಷಾಡೋ ಆಫ್ ಎ ಲೆಜೆಂಡ್ - ರಾಬರ್ಟ್ ಲೀ ರಿಮೆಂಬರ್ಸ್ ಬ್ರೂಸ್ ಲೀ
- ↑ ೪.೦ ೪.೧ Dennis, Felix; Atyeo, Don (1974). Bruce Lee King of Kung-Fu. United States: Straight Arrow Books. ISBN 0-87932-088-5.
{{cite book}}
: CS1 maint: multiple names: authors list (link) - ↑ ಲೀಯವರ ಸ್ವಂತ ನುಡಿಗಳಲ್ಲಿ ಗುಂಗ್ ಫೂ , ಅಥವಾ ಉಚ್ಚರಣಾಪೂರ್ವಕವಾಗಿ ಸರಿಪಡಿಸಿದ ಗಾಂಗ್/ಗೊಂಗ್ ಫೂ
- ↑ ೬.೦ ೬.೧ ೬.೨ "Bruce Lee Bio" (PDF). Kevin Taing Foundation. 2006. Archived from the original (PDF) on 2006-11-16. Retrieved 2007-07-06.
- ↑ Little 1997
- ↑ Vaughn 1986
- ↑ Prashad, Vijay (2001). Everybody Was Kung Fu Fighting: Afro-Asian Connections to the Post-Racial World. Beacon Press. p. 127. ISBN 0807050113.
- ↑ Little 1997, p. 73
- ↑ Yang, Jeff (1997). Eastern Standard Time: A Guide to Asian Influence on American Culture. Boston, New York: Meridian, Houghton Mifflin.
- ↑ "Lee, Bruce, (1920-1960) Martial Arts Master and Film Maker". HistoryLink. Retrieved 2008-05-30.
- ↑ http://www.bruce-lee.ws/about_bruce_lee.html
- ↑ http://everything2.com/e2node/Bruce %2520Lee
- ↑ Burrows, Alyssa (2002). "Bruce Lee". HistoryLink. Retrieved 2008-05-30.
- ↑ ವಾಷಿಂಗ್ಟನ್ U.ನ ಹಳೆಯ ವಿದ್ಯಾರ್ಥಿ ದಾಖಲೆಗಳು
- ↑ "100 Alumni of the Century". University of Washington. Retrieved 2007-08-06.
- ↑ Little 2001, p. 32
- ↑ Thomas 1994, p. 42
- ↑ ೨೦.೦ ೨೦.೧ Lee 1989
- ↑ Lee, Grace (1980). Bruce Lee The Untold Story. United States: CFW Enterprise.
- ↑ ಲೀ (ಕ್ಯಾಡ್‌ವೆಲ್), ಲಿಂಡಾ, ಬ್ರೂಸ್ ಲೀ: ದ ಮಾನ್ ಓನ್ಲೀ ಐ ನ್ಯೂ , ವಾರ್ನರ್ ಬುಕ್ಸ್, 1975.
- ↑ ಬ್ರೂಸ್ ಲೀ: ಎ ವಾರ್ರಿಯರ್'ಸ್ ಜರ್ನಿ , ವಿಶೇಷ ಸಾಕ್ಷ್ಯಚಿತ್ರ, 2000.
- ↑ "ಫ್ರಂ ಗ್ರಾಸ್‌ಶಾಪರ್ ಟು ಕೈನೆ, https://www.youtube.com/watch?v=PlYdp1BVOlw
- ↑ "ಫ್ರಂ ದ ಪಿಯೆರೆ ಬರ್ಟನ್ ಷೋ 9 ಡಿಸೆಂಬರ್ 1971 https://www.youtube.com/watch?v=uXOtmhA6Nvw&feature=PlayList&p=9E42117F3D1A8008&index=0&playnext=1 (ಭಾಗ 2ರ ಕೊನೆಗೆ & ಭಾಗ 3ರ ಮೊದಲಿನಲ್ಲಿ ಟಿಪ್ಪಣಿಗಳನ್ನು ನೋಡಿ)
- ↑ "ದ ಬ್ರೂಸ್ ಲೀ ಸ್ಟೋರಿ|ಮೊದಲಹೆಸರು=ಲಿಂಡಾ |ಕೊನೆಯಹೆಸರು=ಲೀ |ಸಹಲೇಖಕರು=ಬ್ಲೀಕರ್, ಟಾಂ|ಪ್ರಕಾಶಕರು=ಓಹಾರಾ ಪಬ್ಲಿಕೇಶನ್ಸ್|ಸ್ಥಳ=ಯುನೈಟೆಡ್ ಸ್ಟೇಟ್ಸ್|ವರ್ಷ=1989
- ↑ ಟೆಂಪ್ಲೇಟು:CiteIMDBProfile=http://www.imdb.com/title/tt0070034/
- ↑ "Inflation Calculator". Bureau of Labor Statistics. Retrieved 2008-05-30.
- ↑ "Heroes & Icons". Time. Archived from the original on 2009-04-30. Retrieved 2008-05-30.
- ↑ ಬ್ರೂಸ್ ಲೀ, ದ ಲೆಜೆಂಡ್ , 1977, ಪ್ಯಾರಾಗಾನ್ ಫಿಲ್ಮ್ಸ್, Ltd., 20ಯತ್ ಸೆಂಚುರಿ ಫಾಕ್ಸ್ ಹೋಂ ಎಂಟರ್‌ಟೈನ್‌ಮೆಂಟ್
- ↑ https://news.yahoo.com/s/nm/20090106/en_nm/us_hongkong_brucelee[ಶಾಶ್ವತವಾಗಿ ಮಡಿದ ಕೊಂಡಿ] ;_ylt=Ai_I4gyAqL99r8xboPbRUPVb.nQA
- ↑ Thomas 1994, p. 14
- ↑ "Interesting Questions, Facts, and Information". Fun Trivia. Archived from the original on 2009-04-15. Retrieved 2008-05-30.
- ↑ "WING CHUN GUNG FU". Hardcore JKD. Retrieved 2008-05-30.
- ↑ Thomas 1994, p. 81
- ↑ Little 2001, p. 211
- ↑ ೩೭.೦ ೩೭.೧ "2007 Long Beach International Karate Championship". Long Beach International Karate Championship. Archived from the original on 2009-11-06. Retrieved 2008-05-30.
- ↑ "Two Finger Pushup". Maniac World. Archived from the original on 2008-05-21. Retrieved 2008-05-30.
- ↑ Vaughn 1986, p. 21
- ↑ Uyehara, Mitoshi (1991). Bruce Lee: The Incomparable Fighter. Santa Clarita, California: Ohara Publications. p. 27.
- ↑ "ಆರ್ಕೈವ್ ನಕಲು". Archived from the original on 2013-10-24. Retrieved 2009-11-12.
- ↑ Little 1997, p. 167
- ↑ Vaughn 1986, p. 153
- ↑ Little 1997, p. 168
- ↑ Birchland, Bob (November 2007), ""The Truth of Boxing: A Critical Look at Bruce Lee's Hand Skills"", Black Belt Magazine, p. 93
- ↑ "Martial Art Disciplines at Hybrid Martial Arts Academy". Hybrid Martial Art. Archived from the original on 2008-04-30. Retrieved 2008-05-30.
- ↑ Lee 1989, p. 70
- ↑ Hatfield, Fredrick C. (1993). Fitness: The Complete Guide. ಕ್ಯಾಲಿಫೊರ್ನಿಯ: International Sport Sciences Association. p. 119.
- ↑ Uhera, Mito. "Feats". Bruce Lee: The Divine Wind. Retrieved 2008-05-30.
- ↑ Campbell, Sid (2003). The Dragon and the Tiger: The Birth of Bruce Lee's Jeet Kune Do, the Oakland Years. ಕ್ಯಾಲಿಫೊರ್ನಿಯ: Frog LTD. p. 58.
- ↑ Seal, Jack (2007). "How Did Bruce Lee Get Those Washboard Abs?". All Bruce Lee. Retrieved 2008-05-30.
- ↑ ೫೨.೦ ೫೨.೧ ೫೨.೨ Little, John. ""WARM MARBLE" The Lethal Physique of Bruce Lee". Mike Mentzer. Archived from the original on 2011-09-03. Retrieved 2008-05-30.
- ↑ Little 1998, p. 18
- ↑ "Bruce Lee Death". JKD Street Defense. 2007. Archived from the original on 2010-02-27. Retrieved 2008-05-30.
- ↑ Lee, George. "The Equipment Manager". All Bruce Lee. Retrieved 2008-05-30.
- ↑ DM. "Feats". Bruce Lee: The Divine Wind. Retrieved 2008-05-30.
- ↑ "Bruce Lee — Two Finger Pushup". Maniac World. Archived from the original on 2008-05-21. Retrieved 2008-05-30.
- ↑ ೫೮.೦ ೫೮.೧ ೫೮.೨ The Intercepting Fist (DVD). Sterling Ent. 2001-05-31.
{{cite AV media}}
:|access-date=
requires|url=
(help) - ↑ ೫೯.೦ ೫೯.೧ ೫೯.೨ Little 1998, p. 22
- ↑ Little 1998, p. 21
- ↑ Vaughn 1986, p. 110
- ↑ "Bruce Lee answers a challenge". Bruce Lee Divine Wind. 2007. Retrieved 2008-05-30.[ಶಾಶ್ವತವಾಗಿ ಮಡಿದ ಕೊಂಡಿ]
- ↑ ೬೩.೦ ೬೩.೧ Little 1997, p. 66–67
- ↑ Little 1997, p. 71
- ↑ Little 1997, p. 82
- ↑ Little 1998, p. 108
- ↑ Little 1997, p. 87
- ↑ Little 1998, p. 150
- ↑ Seal, Jack (2007). "How Did Bruce Lee Get Those Washboard Abs?". All Bruce Lee. Retrieved 2008-05-30.
- ↑ Little, John (1996). The Warrior Within - The philosophies of Bruce Lee to better understand the world around you and achieve a rewarding life. Contemporary Books. p. 122. ISBN 0809231948.
- ↑ ಬ್ರೂಸ್ ಲೀ: ಎ ವಾರ್ರಿಯರ್'ಸ್ ಜರ್ನಿ 31m45s ಅವಧಿಯಲ್ಲಿ
- ↑ ೭೨.೦ ೭೨.೧ Little, John (1996). The Warrior Within - The philosophies of Bruce Lee to better understand the world around you and achieve a rewarding life. Contemporary Books. p. 128. ISBN 0809231948.
- ↑ Thomas 1994, p. 44
- ↑ Lee, Bruce (1975). Tao of Jeet Kune Do. Ohara Publications. p. 25.
- ↑ "[100 Most Influential people: Hero Edition]". 2007-04-01.
- ↑ Wickert, Marc (2004). Dana White and the future of UFC.
- ↑ "Bruce Lee statue for Bosnian city". BBC. 2004-09-02. Retrieved 2008-05-30.
- ↑ "Hong Kong's honour for Bruce Lee". BBC. 2005-07-24. Retrieved 2008-05-30.
- ↑ "Bruce Lee theme park to be built in China". Associated Press. 2006-11-26. Archived from the original on 2009-09-07. Retrieved 2009-11-12.
- ↑ Chao, Arnold (2006-11-27). "The Greatest Martial Artist of All Time". Yahoo!. Archived from the original on 2008-05-17. Retrieved 2008-05-30.
- ↑ "Chinese state TV begins filming 40-part series on Bruce Lee". International Herald Tribune. 2007-04-10. Archived from the original on 2007-09-19. Retrieved 2008-05-30.
- ↑ ಫೆಂಗ್, ರೆಕ್ಸ್ (2008-08-04). "ದ ಲೆಜೆಂಡ್ ಲಿವ್ಸ್ ಆನ್: ಎ ಜನರೇಷನ್ ಲೇಟರ್, ಬ್ರೂಸ್ ಲೀ'ಸ್ ಲೆಗಸಿ ಈಸ್ ಸ್ಟಿಲ್ ಕಿಕ್ಕಿಂಗ್" Archived 2008-08-06 ವೇಬ್ಯಾಕ್ ಮೆಷಿನ್ ನಲ್ಲಿ.. ಏಷ್ಯನ್‌ವೀಕ್. ಮರುಕಳಿಸಲಾದ ದಿನಾಂಕ 2008-08-04.
- ↑ Lee 1989, p. 83
- ↑ Thomas 1994
- ↑ Thomas 1994, p. 229
- ↑ ೮೬.೦ ೮೬.೧ Thomas 1994, p. 228
- ↑ Thomas 1994, p. 209
- ↑ Bishop 2004, p. 157
- ↑ "Report: Hong Kong director plans Bruce Lee biopic". International Herald Tribune. 2007-08-22. Archived from the original on 2008-01-18. Retrieved 2008-05-30.
- ↑ "Stanley Kwan talks Bruce Lee film". Film Stalker. Archived from the original on 2009-09-08. Retrieved 2008-05-30.
- ↑ Mochizuki, Ken (2006). Be Water, My Friend: The Early Years of Bruce Lee. New York: Lee & Low Books. pp. Author's Note. ISBN 1-58430-265-8.
{{cite book}}
: Unknown parameter|coauthors=
ignored (|author=
suggested) (help)
ಆಕರಗಳು
ಬದಲಾಯಿಸಿ- Bishop, James (2004), Bruce Lee: Dynamic Becoming, Dallas: Promethean Press, ISBN 0-9734054-0-6.
- Lee, Linda (1989), The Bruce Lee Story, United States: Ohara Publications
{{citation}}
: Unknown parameter|coauthors=
ignored (|author=
suggested) (help). - Little, John (2001), Bruce Lee: Artist of Life, Tuttle Publishing.
- Little, John (1998), Bruce Lee: The Art of Expressing the Human Body, Tuttle Publishing.
- Little, John (1997), Words of the Dragon : Interviews 1958–1973 (Bruce Lee).
- Thomas, Bruce (1994), Bruce Lee: Fighting Spirit : a Biography, Berkeley, California: Frog, Ltd..
- Vaughn, Jack (1986), The Legendary Bruce Lee, Ohara.
- ಡಾರ್ಗನ್, ಮೈಕೇಲ್. ಬ್ರೂಸ್ ಲೀ'ಸ್ ಟಫ್ಫೆಸ್ಟ್ ಫೈಟ್ http://www.kungfu.net/brucelee.html. 1980 ಜುಲೈ. ಅಧಿಕೃತ ಕರಾಟೆ
ಹೊರಗಿನ ಕೊಂಡಿಗಳು
ಬದಲಾಯಿಸಿ- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ Lee
- ಬ್ರೂಸ್ ಲೀ ಪ್ರತಿಷ್ಠಾನ
- ಸಿಜೊ ಬ್ರೂಸ್ ಲೀ
- ಬ್ರೂಸ್ ಲೀ ಸಂದರ್ಶನ Archived 2010-01-11 ವೇಬ್ಯಾಕ್ ಮೆಷಿನ್ ನಲ್ಲಿ.
- ಲೈಟ್ ಎ ಪಿಕ್ಸೆಲ್ - ದ ಡಿಜಿಟಲ್ ಮೆಮೊರಿಯಲ್: ಬ್ರೂಸ್ ಲೀ Archived 2010-03-26 ವೇಬ್ಯಾಕ್ ಮೆಷಿನ್ ನಲ್ಲಿ.