ಬೋರಿಸ್ ಪಾಸ್ಟರ್ನಾಕ್
ಬೋರಿಸ್ ಪಾಸ್ಟರ್ನಾಕ್ (10 ಫೆಬ್ರವರಿ [O.S. 29 January] 1890 – 30 ಮೇ 1960) ರಶ್ಯಾದೇಶದ ಕವಿ,ಕಾದಂಬರಿಕಾರ,ಅನುವಾದಕ. ಇವರ ಪ್ರಥಮ ಕವನ ಸಂಕಲನ ಮೈ ಸಿಸ್ಟರ್,ಲೈಫ್ (೧೯೧೭),ರಷಿಯನ್ ಭಾಷೆಯ ಅತ್ಯುತ್ತಮ ಕವನ ಸಂಕಲನ ಎಂದು ಪರಿಗಣಿತವಾಗಿದೆ.ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ,ಫ್ರೆಡ್ರಿಕ್ ಸ್ಚಿಲ್ಲರ್,ಪೆಡ್ರೋ ಕಾಲ್ಡೆರೋನ್ ಮತ್ತು ವಿಲಿಯಂ ಷೇಕ್ಸ್‌ಪಿಯರ್ ರವರ ನಾಟಕಗಳ ಅನುವಾದಗಳು ರಶ್ಯಾದ ಪ್ರೇಕ್ಷಕರಲ್ಲಿ ಬಹು ಪ್ರಸಿದ್ಧವಾಗಿವೆ. ರಶ್ಯಾ ದೇಶದ ಹೊರಗಡೆ ಪಾಸ್ಟರ್ನಾಕ್ ಅವರ ಕಾದಂಬರಿ ಡಾಕ್ಟರ್ ಜಿವಾಗೋ (೧೯೫೭)ಕ್ಕಾಗಿ ಪ್ರಸಿದ್ಧರು.ಇದು ರಶ್ಯಾದ ೧೯೦೫ ಕ್ರಾಂತಿ ಸಮಯದಿಂದ ಪ್ರಥಮ ಮಹಾಯುದ್ಧದ ನಡುವಿನ ಅವಧಿಯನ್ನು ಚಿತ್ರಿಸುತ್ತದೆ. ಸಮಾಜವಾದಿ ಸಾಮ್ರಾಜ್ಯದ ಬಗ್ಗೆ ಸ್ವತಂತ್ರ ನಿಲುವನ್ನು ಹೊಂದಿದುಕ್ಕಾಗಿ ರಶ್ಯಾದಲ್ಲಿ ಇದನ್ನು ಪ್ರಕಟಿಸಲು ಅಸಾದ್ಯವಾಯಿತು.ಇದನ್ನು ಮಿಲಾನ್‍ಗೆ ಕಳ್ಳಸಾಗಣೆ ಮಾಡಿ ೧೯೫೭ರಲ್ಲಿ ಪ್ರಕಟಿಸಲಾಯಿತು.೧೯೫೮ರಲ್ಲಿ ಪಾಸ್ಟರ್ನಾಕ್‍ಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಘೋಷಿಸಲಾಯಿತು.ಇದರಿಂದ ಅಪಮಾನಕ್ಕೆ ಒಳಗಾದ ರಶ್ಯಾದ ಕಮ್ಯುನಿಸ್ಟ್ ಪಕ್ಷ,ಇದನ್ನು ತಿರಸ್ಕರಿಸುವಂತೆ ಪಾಸ್ಟರ್ನಾಕ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರೂ ನಂತರ ಅವರ ವಂಶಸ್ಥರು ೧೯೮೮ರಲ್ಲಿ ಇದನ್ನು ಪಡೆದರು.
ಬೋರಿಸ್ ಪಾಸ್ಟರ್ನಾಕ್ | |
---|---|
ಚಿತ್ರ:Ilya-ilf-pasternak-1.jpg | |
ಜನನ | Boris Leonidovich Pasternak 10 February [O.S. 29 January] 1890 Moscow, Russian Empire |
ಮರಣ | 30 May 1960 Peredelkino, USSR | (aged 70)
ವೃತ್ತಿ | ಕವಿ,ಲೇಖಕ |
ರಾಷ್ಟ್ರೀಯತೆ | ರಶಿಯನ್ |
ಜನಾಂಗೀಯತೆ | Jewish |
ಪ್ರಮುಖ ಕೆಲಸ(ಗಳು) | My Sister, Life, The Second Birth, Doctor Zhivago |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1958 |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Read Pasternak's interview with The Paris Review Summer-Fall 1960 No. 24
- 1958 Nobel Prize in Literature
- Pasternak profile at Poets.org
- PBS biography of Pasternak Archived 2016-06-05 ವೇಬ್ಯಾಕ್ ಮೆಷಿನ್ ನಲ್ಲಿ.
- Register of the Pasternak Family Papers at the Hoover Institution Archives
- profile and images at the Pasternak Trust Archived 2019-03-29 ವೇಬ್ಯಾಕ್ ಮೆಷಿನ್ ನಲ್ಲಿ.
- pp. 36–39: Pasternak as a student at Marburg University, Germany