ಬೇಡರ ಕಣ್ಣಪ್ಪ
ಈ ಲೇಖನವು ಅಪೂರ್ಣವಾಗಿದೆ. |
'ಗುಣ ಸಾಗರಿ" ಚಿತ್ರದ ಯಶಸ್ಸಿನಿಂದ ಪುಳಕಿತಗೊಂಡ ಗುಬ್ಬಿವೀರಣ್ಣ (ಕರ್ನಾಟಕ ಗುಬ್ಬಿ ಫಿಲಂಸ್) 'ಬೇಡರ ಕಣ್ಣಪ್ಪ" ಚಿತ್ರ ತಯಾರಿಕೆಗೆ ಅಣಿಯಾಗುತ್ತಿದ್ದರು. ಚಿತ್ರದ ನಾಯಕ 'ಕಣ್ಣಪ್ಪ"ನ ಪಾತ್ರಕ್ಕೆ ಭಕ್ತಿ-ವಿನಯದ, ಗಟ್ಟಿ-ಮುಟ್ಟಾದ, ಸ್ಪುರದ್ರೂಪಿ ಯುವಕನನ್ನು ಹುಡುಕಿಕೊಡಲು ಸಿಂಹರಿಗೆ ಹೇಳಿದ್ದರಂತೆ. ಪಾತ್ರಧಾರಿಯ ಹುಡುಕಾಟದಲ್ಲಿದ್ದ ಸಿಂಹ ಅವರಿಗೆ ಬಸ್ಸಲ್ಲಿ ಸಿಕ್ಕ ರಾಜ್ ಮೇಲೆ ಮನಸ್ಸು ಹರಿಯಿತು. ಮೊದಲೇ ಸ್ನೇಹಿತನ ಪುತ್ರ. ಅಭಿನಯ ಕಣ್ಣಾರೆ ಕಂಡಾಗಿದೆ. ಬಾಕಿ ಉಳಿದದ್ದು ಸ್ಕಿೃೕನ್ ಟೆಸ್ಟ್ ಮಾತ್ರ
ಅದಕ್ಕಾಗಿ ರಾಜ್‌ಗೆ ಮದರಾಸಿಗೆ ಬುಲಾವು ಬಂತು. ರಾಜ್ ಪಾಸಾದರು. ಅಂದಿನ ಮುತ್ತುರಾಜ್, ಸಿಂಹ ಕೃಪೆಯಿಂದ ರಾಜ್‌ಕುಮಾರ್ ಆದರು. ಬೇಡರ ಕಣ್ಣಪ್ಪ ಚಿತ್ರ ಸೆಟ್ಟೇರಿತು. ಕಾಲಕ್ಕೆ ತಕ್ಕಂತೆ ಮೆಗಾಹಿಟ್ ಆಯಿತು. ಈ ರಾಜಕುಮಾರನನ್ನ 'ಸ್ಟಾರ್"ಪದವಿ ಬೆನ್ನು ಹತ್ತಿತು. ಭಕ್ತಿ, ಸಾಂಸಾರಿಕ, ಸಾಮಾಜಿಕ ಹೀಗೆ 50 ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. 1956ರಲ್ಲಿ 'ಮಹಿಷಾಸುರ ಮರ್ದಿನಿಯ" ಮೂಲಕ ಹಿನ್ನಲೆ ಗಾಯಕರೂ ಆದರು.
ಬೇಡರ ಕಣ್ಣಪ್ಪ | |
---|---|
ಬೇಡರ ಕಣ್ಣಪ್ಪ | |
ನಿರ್ದೇಶನ | ಹೆಚ್.ಎಲ್.ಎನ್. ಸಿಂಹ |
ನಿರ್ಮಾಪಕ | ಗುಬ್ಬಿ ವೀರಣ್ಣ |
ಪಾತ್ರವರ್ಗ | ರಾಜಕುಮಾರ್ ಪಂಡರೀಬಾಯಿ ಸಂಧ್ಯಾ, ರಾಜಾಸುಲೋಚನ, ಜಿ.ವಿ.ಅಯ್ಯರ್, ನರಸಿಂಹರಾಜು, ಹೆಚ್.ಆರ್.ಶಾಸ್ತ್ರಿ |
ಸಂಗೀತ | ಆರ್.ಸುದರ್ಶನಂ |
ಛಾಯಾಗ್ರಹಣ | ಎಸ್.ಮಾರ್ಕಂಡೇಯ |
ಬಿಡುಗಡೆಯಾಗಿದ್ದು | ೧೯೫೪ |
ಪ್ರಶಸ್ತಿಗಳು | ರಾಷ್ಟ್ರಪ್ರಶಸ್ತಿ |
ಚಿತ್ರ ನಿರ್ಮಾಣ ಸಂಸ್ಥೆ | ಗುಬ್ಬಿ ಕರ್ನಾಟಕ ಫಿಲಂಸ್ |
ಇತರೆ ಮಾಹಿತಿ | ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅವರ ಪ್ರಪ್ರಥಮ ಚಲನಚಿತ್ರ |