ಬೇಕರಿ ಎಂದರೆ ಅವನ್‍ನಲ್ಲಿ ಬೇಕ್ ಮಾಡಿದ, ಬ್ರೆಡ್, ಕುಕಿಗಳು, ಕೇಕ್‍ಗಳು, ಪೇಸ್ಟ್ರಿಗಳು, ಮತ್ತು ಪೈಗಳಂತಹ ಹಿಟ್ಟು ಆಧಾರಿತ ಆಹಾರವನ್ನು ಉತ್ಪಾದಿಸಿ ಮಾರಾಟಮಾಡುವ ಸಂಸ್ಥೆ.[೧] ಕೆಲವು ಚಿಲ್ಲರೆ ಬೇಕರಿಗಳು ಕ್ಯಾಫ಼ೆಗಳು ಕೂಡ ಆಗಿದ್ದು, ಅದೇ ಸ್ಥಳದಲ್ಲಿ ಬೇಕ್ ಮಾಡಿದ ಆಹಾರಗಳನ್ನು ಸೇವಿಸಲು ಬಯಸುವ ಗ್ರಾಹಕರಿಗೆ ಕಾಫಿ ಮತ್ತು ಚಹಾವನ್ನು ನೀಡುತ್ತವೆ.

ಬೇಕರಿ

ವೈಶಿಷ್ಟ್ಯಗಳುಸಂಪಾದಿಸಿ

ಕೆಲವು ಬೇಕರಿಗಳು (ಮದುವೆಗಳು, ಜನ್ಮದಿನದ ಪಾರ್ಟಿಗಳು, ವಾರ್ಷಿಕೋತ್ಸವಗಳು, ಅಥವಾ ವ್ಯವಹಾರ ಸಂದರ್ಭಗಳಂತಹ) ವಿಶೇಷ ಸಂದರ್ಭಗಳಿಗೆ ಮತ್ತು (ನಟ್‍ಗಳು, ಕಡಲೇಕಾಯಿ, ಕ್ಷೀರೋತ್ಪನ್ನಗಳು ಅಥವಾ ಗ್ಲೂಟನ್‍ನಂತಹ) ಕೆಲವು ಆಹಾರಗಳಿಗೆ ಅಲರ್ಜಿಕ ಅಥವಾ ಸೂಕ್ಷ್ಮವಾಗಿರುವ ಜನರಿಗೆ ಸೇವೆಗಳನ್ನು ಒದಗಿಸುತ್ತವೆ. ಬೇಕರಿಗಳು ಹಾಳೆ ಕೇಕ್‍ಗಳು, ಪದರ ಕೇಕ್‍ಗಳು, ಶ್ರೇಣೀಕೃತ ಕೇಕ್‍ಗಳು, ಮತ್ತು ಮದುವೆ ಕೇಕ್‍ಗಳಂತಹ ವ್ಯಾಪಕ ಶ್ರೇಣಿಯ ಕೇಕ್ ವಿನ್ಯಾಸಗಳನ್ನು ಒದಗಿಸಬಲ್ಲವು.

ಉಲ್ಲೇಖಗಳುಸಂಪಾದಿಸಿ

  1. Yogambal Ashokkumar (2009), Theory of Bakery and Confectionary, ISBN 978-81-203-3954-5

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಬೇಕರಿ&oldid=959130" ಇಂದ ಪಡೆಯಲ್ಪಟ್ಟಿದೆ