ಬೆಳಗಿನ ಬೇನೆ ಎಂಬುದು ಗರ್ಭಿಣಿಯಾದಾಗ ಬೆಳಗ್ಗೆ ಹೊತ್ತು ಬರುವ ಓಕರಿಕೆ , ಗರ್ಭಿಣಿಸ್ಥಿತಿಯಲ್ಲಿನ ವಾಂತಿಮಾಡುವಿಕೆ ಓಕರಿಕೆ , (ಗರ್ಭಿಣಿಸ್ಥಿತಿಗೆ ಸಂಬಂಧಿಸಿದ ವಮನ ಅಥವಾ NVP ), ಅಥವಾ ಗರ್ಭಿಣಿಸ್ಥಿತಿಯಲ್ಲಿನ ವಾಂತಿ ಬರುವ ಸೂಚನೆ ಎಂಬ ಹೆಸರುಗಳಿಂದ ಕರೆಯಲ್ಪಡುವ ಒಂದು ಅಸ್ವಸ್ಥತೆಯ ಸ್ಥಿತಿಯಾಗಿದ್ದು, ಎಲ್ಲಾ ಗರ್ಭಿಣಿ ಮಹಿಳೆಯರ ಪೈಕಿ ಅರ್ಧಕ್ಕಿಂತಲೂ[] ಹೆಚ್ಚುಮಂದಿಯ ಮೇಲೆ ಇದು ಪರಿಣಾಮ ಬೀರುತ್ತದೆ. ಹಾರ್ಮೋನಿಗೆ ಸಂಬಂಧಿಸಿದ ಗರ್ಭನಿರೋಧಕ ಅಥವಾ ಹಾರ್ಮೋನು ಬದಲಿ ಚಿಕಿತ್ಸೆಯನ್ನು ಬಳಸುತ್ತಿರುವ ಕೆಲವೊಂದು ಮಹಿಳೆಯರಲ್ಲಿ, ಹೆಚ್ಚಳಗೊಂಡ ಈಸ್ಟ್ರೋಜೆನ್‌‌ ಮಟ್ಟಗಳಿಗೆ ಸಂಬಂಧಿಸಿದಂತೆ, ಓಕರಿಕೆ ಬರುವಂತಿರುವಿಕೆಯ ಇದೇ ರೀತಿಯ ಸ್ವರೂಪವೂ ಸಹ ಕಂಡುಬರುತ್ತದೆ. ಸಾಮಾನ್ಯವಾಗಿ, ಇದು ಬೆಳಗ್ಗೆಯ ಆರಂಭಿಕ ಅವಧಿಗಳಲ್ಲಿ ಕಂಡುಬರುತ್ತದೆ ಹಾಗೂ ದಿನವು ಮುಂದುವರಿದಂತೆ ಕಡಿಮೆಯಾಗುತ್ತದೆ. ಓಕರಿಕೆಯು ಲಘುವಾಗಿರಬಹುದು ಅಥವಾ ನಿಜವಾದ ವಾಂತಿಮಾಡುವಿಕೆಯನ್ನು ಪ್ರೇರೇಪಿಸಬಹುದು; ಆದಾಗ್ಯೂ, ಚಯಾಪಚಯ ಕ್ರಿಯೆಯನ್ನು ಅವ್ಯವಸ್ಥೆಗೊಳಿಸುವಷ್ಟರ ಮಟ್ಟಿನ ತೀವ್ರತೆಯನ್ನು ಅದು ಹೊಂದಿರುವುದಿಲ್ಲ. ತೀರಾ ತೀವ್ರವಾದ ಪ್ರಕರಣಗಳಲ್ಲಿ, ವಾಂತಿಮಾಡುವಿಕೆಯು ನಿರ್ಜಲೀಕರಣ, ತೂಕದ ನಷ್ಟ, ಕ್ಷಾರತೆ ಮತ್ತು ಹೈಪೊಕ್ಯಾಲೆಮಿಯಾ (ರಕ್ತದಲ್ಲಿನ ಪೊಟಾಷಿಯಂ ಸಾಂದ್ರತೆಯು ಕಡಿಮೆಯಾಗುವ ಸ್ಥಿತಿ) ಇವೇ ಮೊದಲಾದ ಸ್ಥಿತಿಗಳನ್ನು ಉಂಟುಮಾಡಬಹುದು. ಈ ಸ್ಥಿತಿಯನ್ನು ಗರ್ಭಿಣಿಸ್ಥಿತಿಗೆ ಸಂಬಂಧಿಸಿದ ಅಧಿಕ-ವಮನ ಎಂದು ಕರೆಯಲಾಗುತ್ತದೆ ಮತ್ತು ಇದು ಎಲ್ಲಾ ಗರ್ಭಸ್ಥ ಸ್ಥಿತಿಗಳ ಪೈಕಿ ಸುಮಾರು 1%ನಷ್ಟು ಪ್ರಕರಣಗಳಲ್ಲಿ ಸಂಭವಿಸುತ್ತದೆ. ಓಕರಿಕೆ ಮತ್ತು ವಾಂತಿಮಾಡುವಿಕೆಯು ಗರ್ಭಿಣಿಸ್ಥಿತಿಯ ಮೊದಲ ಚಿಹ್ನೆಗಳ ಪೈಕಿ ಒಂದಾಗಿರಬಹುದು ಮತ್ತು ಇದು ಗರ್ಭಿಣಿಸ್ಥಿತಿಯ 6ನೇ ವಾರದ ಆಸುಪಾಸಿನಲ್ಲಿ (ಬಸಿರಾಗುವಿಕೆಗೆ ಮುಂಚಿನ 14 ದಿನಗಳಿಂದ ಗರ್ಭಧಾರಣೆಯ ಅವಧಿಯನ್ನು ಲೆಕ್ಕಹಾಕುವುದು) ಸಾಮಾನ್ಯವಾಗಿ ಆರಂಭವಾಗುತ್ತದೆ. ಇದು ದಿನದ ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ಬಹುತೇಕ ಮಹಿಳೆಯರಿಗೆ ಸಂಬಂಧಿಸಿದಂತೆ, ಗರ್ಭಿಣಿಸ್ಥಿತಿಯ 12ನೇ ವಾರದ ಆಸುಪಾಸಿನಲ್ಲಿ ಇದು ನಿಲ್ಲುವಂತೆ ತೋರುತ್ತದೆ.[]

Mild hyperemesis gravidarum (no metabolic derangement)
Classification and external resources
ICD-10O21.0
ICD-9643.0

ಕಾರಣಗಳು

ಬದಲಾಯಿಸಿ

ಗರ್ಭಿಣಿಸ್ಥಿತಿಯ ವಾಂತಿ ಬರುವ ಸೂಚನೆಯ ಸಮೀಪದ ಕಾರಣಗಳಲ್ಲಿ ಇವು ಸೇರಿವೆ:

  • ಈಸ್ಟ್ರೋಜೆನ್‌‌ ಹಾರ್ಮೋನಿನ ಪ್ರವಹಿಸುತ್ತಿರುವ ಮಟ್ಟದಲ್ಲಿನ ಒಂದು ಹೆಚ್ಚಳ. ಗರ್ಭಿಣಿಸ್ಥಿತಿಯ ಅವಧಿಯಲ್ಲಿ ಈಸ್ಟ್ರೋಜೆನ್‌‌ ಮಟ್ಟಗಳು ನೂರ್ಮಡಿಯಷ್ಟರವರೆಗೆ ಹೆಚ್ಚಳವಾಗಬಹುದು.[] ಆದಾಗ್ಯೂ, ವಾಂತಿ ಬರುವ ಸೂಚನೆಯನ್ನು ಅನುಭವಿಸುವ ಮಹಿಳೆಯರು ಹಾಗೂ ಅದನ್ನು ಅನುಭವಿಸದ ಮಹಿಳೆಯರ ನಡುವಿನ ಈಸ್ಟ್ರೋಜೆನ್‌‌ ಮಟ್ಟಗಳಲ್ಲಿನ ವ್ಯತ್ಯಾಸಗಳ ಕುರಿತು ಯಾವುದೇ ಸುಸಂಗತ ಪುರಾವೆಯು ಲಭ್ಯವಿಲ್ಲ.[]
  • ಗರ್ಭವೇಷ್ಟನವು ತಾಯಿಯಿಂದ ಶಕ್ತಿಯನ್ನು ಹೀರಿಹಾಕುವುದರಿಂದಾಗಿ ರಕ್ತದ ಸಕ್ಕರೆಯ ಪ್ರಮಾಣವು ಕಡಿಮೆಯಾಗುವಿಕೆ; ಆದೇನೇ ಇದ್ದರೂ, ಅಧ್ಯಯನಗಳು ಈ ಕಾರಣವನ್ನು ದೃಢೀಕರಿಸಿಲ್ಲ.[]
  • ಪ್ರೊಜೆಸ್ಟಿರಾನ್‌‌‌ನಲ್ಲಿನ ಒಂದು ಹೆಚ್ಚಳವು ಗರ್ಭಕೋಶದಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ; ಇದು ಅವಧಿಪೂರ್ವ ಶಿಶುಜನನವನ್ನು ತಡೆಗಟ್ಟುತ್ತದೆಯಾದರೂ, ಜಠರ ಮತ್ತು ಕರುಳುಗಳನ್ನೂ ಅದು ಸಡಿಲಗೊಳಿಸಬಹುದು; ಇದರಿಂದಾಗಿ ಹೆಚ್ಚುವರಿ ಜಠರಾಮ್ಲಗಳು ಮತ್ತು ಜಠರಾನ್ನನಾಳದ ಹಿನ್‌ಸರಿತದ ಕಾಯಿಲೆಯು ಕಂಡುಬರುತ್ತದೆ.
  • ಮಾನವ ಭ್ರೂಣದ ಹೊರಪೊರೆಯ ಗೊನ್ಯಾಡೊಟ್ರೋಪಿನ್‌‌ನಲ್ಲಿನ ಒಂದು ಹೆಚ್ಚಳ. ಓಕರಿಕೆಯು ಉಂಟಾಗಲು ಮಾನವ ಭ್ರೂಣದ ಹೊರಪೊರೆಯ ಗೊನ್ಯಾಡೊಟ್ರೋಪಿನ್‌‌ ಒಂದೇ ಪ್ರಾಯಶಃ ಕಾರಣವಿರಲಾರದು. ಮಾನವ ಭ್ರೂಣದ ಹೊರಪೊರೆಯ ಗೊನ್ಯಾಡೊಟ್ರೋಪಿನ್‌ ಬಹುತೇಕವಾಗಿ, ಈಸ್ಟ್ರೋಜೆನ್‌‌ನ್ನು ಸ್ರವಿಸುವಂತೆ ಬಸುರಿಯ ಅಂಡಾಶಯಗಳನ್ನು ಉತ್ತೇಜಿಸುತ್ತದೆ ಮತ್ತು ಸದರಿ ಈಸ್ಟ್ರೋಜೆನ್‌ ಮುಂದುವರಿದು ಓಕರಿಕೆಯನ್ನು ಉಂಟುಮಾಡುತ್ತದೆ.[]
  • ವಾಸನೆಗಳೆಡೆಗಿನ ಸೂಕ್ಷ್ಮತೆಯಲ್ಲಿನ ಒಂದು ಹೆಚ್ಚಳ; ಇದು ಸಾಮಾನ್ಯ ಓಕರಿಕೆಯು ಪ್ರಾರಂಭವಾಗುವಂತಾಗಲು ಮಿತಿಮೀರಿ ಉತ್ತೇಜಿಸುತ್ತದೆ.

ಒಂದು ರಕ್ಷಣಾ ಕಾರ್ಯವಿಧಾನವಾಗಿ ಬೆಳಗಿನ ಬೇನೆ

ಬದಲಾಯಿಸಿ

ಬೆಳಗಿನ ಬೇನೆಯು ಒಂದು ವಿಕಸನಗೊಂಡ ವಿಶೇಷ ಲಕ್ಷಣವಾಗಿ ಪ್ರಸಕ್ತವಾಗಿ ಅರ್ಥೈಸಿಕೊಳ್ಳಲ್ಪಟ್ಟಿದ್ದು, ಅದು ತಾಯಿಯಿಂದ ಸೇವಿಸಲ್ಪಟ್ಟ ಜೀವಾಣು ವಿಷಗಳಿಗೆ ಪ್ರತಿಯಾಗಿ ಭ್ರೂಣವನ್ನು ಸಂರಕ್ಷಿಸುತ್ತದೆ.[] [] ತಿನ್ನಲ್ಪಡುವುದಕ್ಕೆ ಒಂದು ನಿರೋಧಕವಾಗಿ ಕಾರ್ಯನಿರ್ವಹಿಸುವ ರಾಸಾಯನಿಕ ಜೀವಾಣು ವಿಷಗಳನ್ನು ಅನೇಕ ಸಸ್ಯಗಳು ಒಳಗೊಂಡಿರುತ್ತವೆ. ಇತರ ಪ್ರಾಣಿಗಳ ರೀತಿಯಲ್ಲಿ, ವಯಸ್ಕ ಮಾನವರು ಸಸ್ಯದ ಜೀವಾಣು ವಿಷಗಳಿಗೆ ಪ್ರತಿಯಾಗಿರುವ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತಾರೆ; ಪಿತ್ತಜನಕಾಂಗ ಹಾಗೂ ಹಲವಾರು ಇತರ ಅಂಗಗಳ ಮೇಲ್ಮೈ ಅಂಗಾಂಶಗಳಿಂದ ತಯಾರಿಸಲ್ಪಟ್ಟ ನಿರ್ವಿಷೀಕರಣ ಕಿಣ್ವಗಳ ವ್ಯಾಪಕ ಶ್ರೇಣಿಗಳು ಇದರಲ್ಲಿ ಸೇರಿವೆ. ಭ್ರೂಣದಲ್ಲಿ ಈ ರಕ್ಷಣಾ ವ್ಯವಸ್ಥೆಗಳು ಇನ್ನೂ ಸಂಪೂರ್ಣವಾಗಿ ಬೆಳವಣಿಗೆ ಕಂಡಿರುವುದಿಲ್ಲ ಮತ್ತು ವಯಸ್ಕರ ಮೇಲೆ ಉಪೇಕ್ಷಿಸಬಹುದಾದ ಪರಿಣಾಮಗಳನ್ನು ಬೀರಬಲ್ಲ ಸಸ್ಯದ ಜೀವಾಣು ವಿಷಗಳು ಭ್ರೂಣಕ್ಕೆ ಅಪಾಯಕಾರಿ ಅಥವಾ ಮಾರಕವಾಗಿ ಪರಿಣಮಿಸಬಹುದು.[] ಗರ್ಭಿಣಿಗೆ ನಿರುಪದ್ರವಿಯಾಗಿದ್ದರೂ, ಭ್ರೂಣಕ್ಕೆ ಹಾನಿಕಾರಕವಾಗಿ ಪರಿಣಮಿಸಬಲ್ಲ ಜೀವಾಣು ವಿಷಗಳನ್ನು ಒಳಗೊಂಡಿರುವ ಸಂಭವವಿರುವ ಆಹಾರಗಳ ವಾಸನೆ ಅಥವಾ ರುಚಿಗೆ ಗರ್ಭಿಣಿ ಮಹಿಳೆಯರು ಒಡ್ಡಿಕೊಂಡಾಗ, ಗರ್ಭಿಣಿಸ್ಥಿತಿಯ ವಾಂತಿ ಬರುವ ಸೂಚನೆಯು ಅವರಿಗೆ ಓಕರಿಕೆಯ ಅನುಭವವನ್ನು ಉಂಟುಮಾಡುತ್ತದೆ.

ಈ ಸಿದ್ಧಾಂತಕ್ಕೆ ಬೆಂಬಲವಾಗಿ ನಿಲ್ಲುವ ಪರಿಗಣನಾರ್ಹ ಪುರಾವೆಯು ಲಭ್ಯವಿದ್ದು, ಅದರಲ್ಲಿ ಈ ಅಂಶಗಳು ಸೇರಿವೆ:[೧೦] [೧೧]

  • ಬೆಳಗಿನ ಬೇನೆಯು ಗರ್ಭಿಣಿ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿದ್ದು, ಒಂದು ಕಾರ್ಯಾತ್ಮಕ ರೂಪಾಂತರವಾಗಿರುವುದರ ಪರವಾಗಿ ಹಾಗೂ ಅದೊಂದು ರೋಗಲಕ್ಷಣ ಎಂಬ ಪರಿಕಲ್ಪನೆಯ ವಿರೋಧವಾಗಿ ಅದು ವಾದಿಸುತ್ತದೆ.
  • ಜೀವಾಣು ವಿಷಗಳಿಗೆ ಭ್ರೂಣದ ಈಡಾಗುವಿಕೆಯು 3 ತಿಂಗಳುಗಳ ಆಸುಪಾಸಿನಲ್ಲಿ ಉತ್ತುಂಗಕ್ಕೇರುತ್ತದೆ, ಮತ್ತು ಇದು ಬೆಳಗಿನ ಬೇನೆಯ ಉನ್ನತ ಪ್ರಭಾವಕ್ಕೆ ಒಳಗಾಗುವುದರ ಸಮಯವೂ ಆಗಿದೆ.
  • ಆಹಾರಗಳಲ್ಲಿರುವ ಜೀವಾಣು ವಿಷದ ಸಾಂದ್ರತೆಗಳು ಹಾಗೂ ಹೇವರಿಕೆಯನ್ನು ಉಂಟುಮಾಡುವ ರುಚಿಗಳು ಮತ್ತು ವಾಸನೆಗಳ ನಡುವೆ ಒಂದು ಉತ್ತಮವಾದ ಪರಸ್ಪರ ಅವಲಂಬನೆಯು ಕಂಡುಬರುತ್ತದೆ.

ಯಾವುದೇ ರೀತಿಯ ಬೆಳಗಿನ ಬೇನೆಯನ್ನು ಹೊಂದಿಲ್ಲದ ಮಹಿಳೆಯರು ಗರ್ಭಸ್ರಾವಕ್ಕೆ ಈಡಾಗುವ ಅಥವಾ ಜನನ ದೋಷಗಳೊಂದಿಗಿನ ಮಕ್ಕಳನ್ನು ಹೊಂದುವ ಸಾಧ್ಯತೆ ಹೆಚ್ಚು.[೧೨] ಇದು ಸಂಭಾವ್ಯವಾಗಿರುವುದು ಏಕೆಂದರೆ, ಇಂಥ ಮಹಿಳೆಯರು ಭ್ರೂಣಕ್ಕೆ ಅಪಾಯಕಾರಿಯಾಗಿರುವ ವಸ್ತುಗಳನ್ನು ಸೇವಿಸುವ ಸಾಧ್ಯತೆ ಹೆಚ್ಚು.[೧೩]

ಭ್ರೂಣವನ್ನು ಸಂರಕ್ಷಿಸುವುದರ ಜೊತೆಜೊತೆಗೆ, ಬೆಳಗಿನ ಬೇನೆಯು ತಾಯಿಯನ್ನೂ ಸಹ ಸಂರಕ್ಷಿಸಬಹುದು. ತಮ್ಮದೇ ಆದ ಸಂತತಿಯ ಅಂಗಾಂಶಗಳನ್ನು ಮೈಗೂಡಿಸದಿರುವ ಅಥವಾ ಉಳಿಯಗೊಡದಿರುವ ಸಾಧ್ಯತೆಗಳನ್ನು ಸಂಭಾವ್ಯವಾಗಿ ತಗ್ಗಿಸುವ ಸಲುವಾಗಿ, ಗರ್ಭಿಣಿ ಮಹಿಳೆಯರ ಪ್ರತಿರಕ್ಷಣಾ ವ್ಯವಸ್ಥೆಗಳು ಗರ್ಭಿಣಿಸ್ಥಿತಿಯ ಅವಧಿಯಲ್ಲಿ ನಿಗ್ರಹಿಸಲ್ಪಟ್ಟಿರುತ್ತವೆ.[೧೪] ಈ ಕಾರಣದಿಂದಾಗಿ, ಪರೋಪಜೀವಿಗಳು ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಒಳಗೊಂಡಿರುವ ಪ್ರಾಣಿ ಉತ್ಪನ್ನಗಳು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಅಪಾಯಕರವಾಗಿ ಪರಿಣಮಿಸಬಹುದು. ಮಾಂಸ ಮತ್ತು ಮೀನನ್ನು ಒಳಗೊಂಡಂತೆ, ಪ್ರಾಣಿ ಉತ್ಪನ್ನಗಳಿಂದ ಬೆಳಗಿನ ಬೇನೆಯು ಅನೇಕ ಸಲ ಪ್ರಾರಂಭಿಸಲ್ಪಡುತ್ತದೆ ಎಂಬುದಕ್ಕೆ ಪುರಾವೆಯಿದೆ.[೧೫]

ಒಂದು ವೇಳೆ ಬೆಳಗಿನ ಬೇನೆಯು ಜೀವಾಣು ವಿಷಗಳ ಸೇವಿಸುವಿಕೆಗೆ ಪ್ರತಿಯಾಗಿರುವ ಒಂದು ರಕ್ಷಣಾ ಕಾರ್ಯವಿಧಾನವಾಗಿದ್ದಲ್ಲಿ, ಗರ್ಭಿಣಿ ಮಹಿಳೆಯರಿಗೆ ಓಕರಿಕೆ-ನಿರೋಧಕ ಔಷಧಿದ ಶಿಫಾರಸು ಮಾಡುವಿಕೆಯು ಅನಪೇಕ್ಷಿತ ಪಾರ್ಶ್ವ ಪರಿಣಾಮವನ್ನು ಉಂಟುಮಾಡಬಹುದು, ಅಂದರೆ, ಅಪಾಯಕಾರಿಯಾಗಿರುವ ಆಹಾರಕ್ರಮದ ಆಯ್ಕೆಗಳನ್ನು ಉತ್ತೇಜಿಸುವ ಮೂಲಕ ಇದು ಜನನ ದೋಷಗಳು ಅಥವಾ ಗರ್ಭಸ್ರಾವಗಳನ್ನು ಉಂಟುಮಾಡಬಹುದು.[೧೦] ಮತ್ತೊಂದೆಡೆ, ದೂರದ ಗತಕಾಲದಲ್ಲಿ ಇದ್ದುದಕ್ಕಿಂತ ಕಡಿಮೆಯಿರುವ ಮಟ್ಟಗಳಲ್ಲಿ ಜೀವಾಣು ವಿಷಗಳನ್ನು ಒಳಗೊಂಡಿರುವ ಅನೇಕ ಸ್ಥಳೀಯ ತರಕಾರಿಗಳು ಉದ್ದೇಶಪೂರ್ವಕವಾಗಿ ಸಂಕರಿಸಲ್ಪಟ್ಟಿವೆ, ಮತ್ತು ಇದರಿಂದಾಗಿ ಭ್ರೂಣಕ್ಕೆ ಒದಗಬಹುದಾದ ಅಪಾಯದ ಮಟ್ಟವು, ರಕ್ಷಣಾ ಕಾರ್ಯವಿಧಾನ ಮೊದಲು ವಿಕಸನಗೊಂಡಾಗ ಇದ್ದಷ್ಟು ಹೆಚ್ಚಿನ ಮಟ್ಟದಲ್ಲಿ ಇರದಿರಬಹುದು.[೧೬]

ಚಿಕಿತ್ಸೆಗಳು

ಬದಲಾಯಿಸಿ

ವಿಶಿಷ್ಟವೆಂಬಂತೆ, ಬೆಳಗಿನ ಬೇನೆಗೆ ಸಂಬಂಧಿಸಿದಂತಿರುವ ಚಿಕಿತ್ಸೆಗಳು ಓಕರಿಕೆಯ ಮೂಲಕಾರಣಗಳ ಮೇಲೆ ದಾಳಿಮಾಡುವುದಕ್ಕಿಂತ ಹೆಚ್ಚಾಗಿ, ಓಕರಿಕೆಯ ಚಿಹ್ನೆಗಳನ್ನು ತಗ್ಗಿಸುವುದರ ಕಡೆಗೆ ಗುರಿಯಿಟ್ಟಿವೆ. ಚಿಕಿತ್ಸೆಗಳಲ್ಲಿ ಇವು ಸೇರಿವೆ:

  • ನಿಂಬೆಹಣ್ಣುಗಳು: ನಿರ್ದಿಷ್ಟವಾಗಿ ಹೇಳುವುದಾದರೆ ಆಗಷ್ಟೇ ಕತ್ತರಿಸಿದ ನಿಂಬೆಹಣ್ಣುಗಳ ವಾಸನೆ ನೋಡುವುದು.
  • ಖಾಲಿ ಹೊಟ್ಟೆಯಲ್ಲಿರುವುದನ್ನು ತಪ್ಪಿಸುವುದು.
  • ಆಹಾರದ ಕಡುಬಯಕೆಗಳು ಮತ್ತು ಹೇವರಿಕೆಗಳನ್ನು ಸರಿಹೊಂದಿಸುವುದು.
  • ದಿನಕ್ಕೆ ಮೂರು ದೊಡ್ಡ ಊಟಗಳನ್ನು ಸೇವಿಸುವುದಕ್ಕೆ ಬದಲಿಗೆ, ಐದು ಅಥವಾ ಆರು ಸಣ್ಣ ಊಟಗಳನ್ನು ಸೇವಿಸುವುದು.
  • ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು. (ಟೊಮ್ಯಾಟೋಗಳು, ಕಲ್ಲಂಗಡಿ, ಖರಬೂಜ, ಚಕ್ಕೋತದ ಬಗೆಯ ಹಣ್ಣು, ಸ್ಟ್ರಾಬೆರಿಗಳು, ಲೆಟಿಸ್‌ ಸೊಪ್ಪು, ಬಸಲೆ ಸೊಪ್ಪು, ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ, ದ್ರಾಕ್ಷಿಗಳು, ಇತ್ಯಾದಿ.)[೧೭]
  • ಎಲೆಕೋಸನ್ನು ತಿನ್ನುವುದು.[೧೮]
  • BRAT ಪಥ್ಯವನ್ನು ಪ್ರಯತ್ನಿಸುವುದು: ಬಾಳೆಹಣ್ಣುಗಳು, ಅನ್ನ, ಸೇಬಿನ ಸಿಹಿಭಕ್ಷ್ಯ, ಟೋಸ್ಟ್‌‌ ಮತ್ತು ಚಹಾ.[೧೯]
  • ಶುಂಠಿ: ಜಿಲೆಟಿನ್‌ ಕೋಶಗಳು (ಕ್ಯಾಸ್ಯೂಲ್‌ಗಳು), ಚಹಾ, ಶುಂಠಿ ಏಲ್‌ ಪಾನೀಯ, ಅಥವಾ ಶುಂಠಿಯ ರುಚಿಕಟ್ಟಿದ ಬಿಸ್ಕತ್ತುಗಳ ಸ್ವರೂಪದಲ್ಲಿ ಸೇವಿಸುವುದು.[೨೦]
  • ಬೆಳಗ್ಗೆಯ ಸಮಯದಲ್ಲಿ ಶುಷ್ಕ ಗರಿಗರಿ ಬಿಸ್ಕತ್ತುಗಳನ್ನು ತಿನ್ನುವುದು.
  • ಘನ ಆಹಾರವನ್ನು ಸೇವಿಸಿದ 30 ರಿಂದ 45 ನಿಮಿಷಗಳ ನಂತರ ದ್ರವ ಪದಾರ್ಥಗಳನ್ನು ಕುಡಿಯುವುದು.
  • ಒಂದುವೇಳೆ ದ್ರವ ಪದಾರ್ಥಗಳು ವಾಂತಿಯಾದರೆ, ನೀರು ಅಥವಾ ಹಣ್ಣಿನ ರಸದಿಂದ ತಯಾರಿಸಿದ ಮಂಜುಗಡ್ಡೆಯ ಸಣ್ಣ ತುಂಡುಗಳನ್ನು ಹೀರುವುದು ಅಥವಾ ಲಾಲಿಪಾಪ್‌ಗಳನ್ನು ಪ್ರಯತ್ನಿಸುವುದು.
  • ಜೀವಸತ್ವ B6 (ಪಿರಿಡಾಕ್ಸಿನ್‌ ಅಥವಾ ಪಿರಿಡಾಕ್ಸಮೈನ್‌): ಆಂಟಿಹಿಸ್ಟಮೀನ್‌ ಡಾಕ್ಸೈಲಮೈನ್‌ ಜೊತೆಯಲ್ಲಿನ ಒಂದು ಸಂಯೋಜನೆಯಾಗಿ ಸಾಮಾನ್ಯವಾಗಿ ತೆಗೆದುಕೊಳ್ಳಲಾಗುತ್ತದೆ.ಕೆನಡಾದಲ್ಲಿ ಈ ಸಂಯೋಜನೆಯು ಡಿಕ್ಲೆಕ್ಟಿನ್‌ ಎಂಬ ಶಿಫಾರಿತ ಔಷಧಿಯಾಗಿ ಲಭ್ಯವಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ರೂಢಿಯಂತೆ ಅಂಗಡಿಯಲ್ಲಿ ಖರೀದಿಸಿದ ಯೂನಿಸಾಮ್‌ ಸ್ಲೀಪ್‌ ಟ್ಯಾಬ್ಸ್‌‌ (ಸ್ಲೀಪ್‌ ಜೆಲ್ಸ್‌ ಅಥವಾ ಸ್ಲೀಪ್‌ಮೆಲ್ಟ್ಸ್‌ ಅಲ್ಲ) ಜೊತೆಯಲ್ಲಿ B6 ಜೀವಸತ್ವವನ್ನು ಬಳಸಿಕೊಂಡು ಈ ಸಂಯೋಜನೆಯನ್ನು ಮರುಸೃಷ್ಟಿಸಬಹುದು.
  • ಆಕ್ಯುಪ್ರೆಷರ್‌ ಪಟ್ಟಿಗಳು ಆಕ್ಯುಪಂಕ್ಚರ್‌‌ ಕುರಿತಾದ ಚೀನಿಯರ ಸಾಂಪ್ರದಾಯಿಕ ಔಷಧಿ ತತ್ತ್ವಗಳನ್ನು ಆಧರಿಸಿವೆ ಮತ್ತು ಬೆಳಗಿನ ಬೇನೆಯನ್ನು ಉಪಶಮನಗೊಳಿಸುವಲ್ಲಿ ಅವು ಪರಿಣಾಮಕಾರಿಯಾಗಿವೆ ಎಂಬುದಾಗಿ ಅನೇಕ ಪ್ರಯೋಗಗಳು ಸಾಬೀತು ಮಾಡಿವೆ. ಅವುಗಳನ್ನು ಮೇಲೆ ನಮೂದಿಸಿದ ಇತರ ಅಂಶಗಳ ಪೈಕಿ ಯಾವುದರ ಜೊತೆಗಾದರೂ ಸಂಯೋಜಿಸಿ ಬಳಸಬಹುದು.[೨೧][೨೨][೨೩][೨೪]

ಬಸುರಿಯು ತನ್ನ ಬೆಳಗಿನ ಬೇನೆಯ ಒಂದು ಫಲವಾಗಿ, ಗರ್ಭಿಣಿಸ್ಥಿತಿಗೆ ಸಂಬಂಧಿಸಿದ ಅಧಿಕ-ವಮನ ಎಂದು ಕರೆಯಲ್ಪಡುವ ನಿರ್ಜಲೀಕರಣ ಅಥವಾ ಅಪೌಷ್ಟಿಕತೆಯಿಂದ ಒಂದು ವೇಳೆ ಬಳಲುತ್ತಿದ್ದರೆ, ಓರ್ವ ವೈದ್ಯರು ಓಕರಿಕೆ-ನಿರೋಧಕ ಔಷಧಿಗಳನ್ನು ಶಿಫಾರಸು ಮಾಡಬಹುದು. USನಲ್ಲಿ, ಝೊಫ್ರಾನ್‌ (ಓಂಡಾನ್‌ಸೆಟ್ರಾನ್‌) ಎಂಬುದು ಆಯ್ಕೆಯ ವಾಡಿಕೆಯ ಔಷಧಿಯಾಗಿದೆಯಾದರೂ, ಇದರ ಹೆಚ್ಚಿನ ಬೆಲೆಯು ಕೆಲವೊಂದು ಮಹಿಳೆಯರಿಗೆ ದುಬಾರಿ ಬೆಲೆಯಾಗಿ ಪರಿಣಮಿಸಿದೆ; UKಯಲ್ಲಿ, ಗರ್ಭಿಣಿಸ್ಥಿತಿಯಲ್ಲಿನ ಬಳಕೆಯ ಒಂದು ಮಹತ್ತರ ಅನುಭವವನ್ನು ಹೊಂದಿರುವ ಹಳೆಯದಾದ ಔಷಧಿಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ; ಇವುಗಳ ಪೈಕಿ ಪ್ರೋಮೆಥಾಝೀನ್‌ ಎಂಬುದು ಮೊದಲ ಆಯ್ಕೆಯಾಗಿದ್ದು, ಅದಿಲ್ಲವಾದರೆ ಮೆಟೊಕ್ಲೋಪ್ರಮೈಡ್‌, ಅಥವಾ ಪ್ರೋಕ್ಲೋರ್‌ಪೆರಾಜೈನ್‌ ಎರಡನೇ ಆಯ್ಕೆಯಾಗಿವೆ.[೨೫]

ಥ್ಯಾಲಿಡೋಮೈಡ್‌

ಬದಲಾಯಿಸಿ

ಥ್ಯಾಲಿಡೋಮೈಡ್‌ ಔಷಧಿಯನ್ನು ಪಶ್ಚಿಮ ಜರ್ಮನಿಯಲ್ಲಿ ಬೆಳಗಿನ ಬೇನೆಗೆ ಸಂಬಂಧಿಸಿದ ಒಂದು ಶಮನಕಾರಿಯಾಗಿ ಮೂಲತಃ ಅಭಿವೃದ್ಧಿಪಡಿಸಲಾಯಿತು ಮತ್ತು ಶಿಫಾರಸು ಮಾಡಲಾಯಿತು; ಆದರೆ ಔಷಧಿಯ ಭ್ರೂಣವನ್ನು ವಿರೂಪಗೊಳಿಸಬಲ್ಲ ಲಕ್ಷಣಗಳು ಬೆಳಕಿಗೆ ಬಂದಾಗ ಅದರ ಬಳಕೆಯನ್ನು ನಿಲ್ಲಿಸಲಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಇಲಾಖೆಯು ಥ್ಯಾಲಿಡೋಮೈಡ್‌ ಔಷಧಿಯನ್ನು ಬೆಳಗಿನ ಬೇನೆಗಾಗಿರುವ ಒಂದು ಶಮನಕಾರಿಯಾಗಿ ಬಳಸುವುದಕ್ಕೆ ಸಂಬಂಧಿಸಿದಂತೆ ಎಂದಿಗೂ ಅನುಮೋದಿಸಲಿಲ್ಲ.

ಉಲ್ಲೇಖಗಳು

ಬದಲಾಯಿಸಿ
  • ಮಾರ್ನಿಂಗ್‌ ಸಿಕ್‌ನೆಸ್‌: ಎ ಕಾಂಪ್ರಹೆನ್ಸಿವ್‌ ಗೈಡ್‌ ಟು ದಿ ಕಾಸಸ್‌ ಅಂಡ್‌ ಟ್ರೀಟ್‌ಮೆಂಟ್ಸ್ , ನಿಕಿ ವೆಸ್ಸಾನ್‌, ವೆರ್ಮಿಲಿಯನ್‌ (1997), ISBN 009181538X
  • ಮಾರ್ನಿಂಗ್‌‌ ಸಿಕ್‌ನೆಸ್‌ - ಎ ಮೆಡಿಕಲ್‌ ಡಿಕ್ಷ್‌ನರಿ, ಬೈಬ್ಲಿಯೋಗ್ರಫಿ, ಅಂಡ್‌ ಅನ್ನೊಟೇಟೆಡ್‌ ರಿಸರ್ಚ್‌ ಗೈಡ್‌ ಟು ಇಂಟರ್‌ನೆಟ್‌ ರೆಫರೆನ್ಸಸ್‌ , ಐಕಾನ್‌ ಹೆಲ್ತ್‌ ಪಬ್ಲಿಕೇಷನ್ಸ್‌ (2004), ISBN 0597840431

ಟಿಪ್ಪಣಿಗಳು

ಬದಲಾಯಿಸಿ
  1. "Morning Sickness". American Pregnancy Association. 03/2007. Retrieved 2007-04-08. {{cite web}}: Check date values in: |date= (help)
  2. ಅಮೆರಿಕನ್‌ ಪ್ರೆಗ್ನನ್ಸಿ ಅಸೋಸಿಯೇಷನ್‌, http://www.americanpregnancy.org/pregnancyhealth/morningsickness.html
  3. "First Trimester Pregnancy". The Visible Embryo. Retrieved 2008-07-06.
  4. n Elizabeth Bauchner; Wendy Marquez. "Morning Sickness: Coping With The Worst". NY Metro Parents Magazine. Archived from the original on 2008-12-04. Retrieved 2008-07-06.
  5. Erick, Miriam (2004). Managing Morning Sickness: A Survival Guide for Pregnant Women. Bull Publishing Company. ISBN 0923521828. Retrieved 2008-07-06.
  6. ನೀಬೈಲ್‌‌, ಜೆನ್ನಿಫರ್‌‌ R. ನಾಸಿಯಾ ಅಂಡ್‌ ವೊಮಿಟಿಂಗ್‌ ಇನ್‌ ಪ್ರೆಗ್ನನ್ಸಿ. ನ್ಯೂ ಇಂಗ್ಲಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌, 363 (16), 1544-1550
  7. Hook, E. B. (1976). "Changes in tobacco smoking and ingestion of alcohol and caffeinated beverages during early pregnancy: are these consequences, in part, of feto-protective mechanisms diminishing maternal exposure to embryotoxins?". In Kelly, S. (ed.). Birth Defects: Risks and Consequences. Academic Press. pp. 173–181.
  8. Profet, Margie (1992). "Pregnancy Sickness as Adaptation: A Deterrent to Maternal Ingestion of Teratogens". In Barkow, Jerome; Cosmides; Tooby, Leda (eds.). The Adapted Mind: Evolutionary Psychology and the Generation of Culture. Oxford University Press. pp. 327–365. {{cite book}}: More than one of |editor1-first= and |editor-first= specified (help)
  9. Beck, F. (1973). Human Embryology and Genetics. Blackwell Scientific.
  10. ೧೦.೦ ೧೦.೧ Nesse, Randolphe M; Williams, George C. Why We Get Sick (First ed.). New York: Vintage Books. p. 290. {{cite book}}: Cite has empty unknown parameters: |origmonth=, |month=, and |chapterurl= (help); Unknown parameter |origdate= ignored (|orig-year= suggested) (help)
  11. Pepper; Roberts, S. Craig (2006). "Rates of nausea and vomiting in pregnancy and dietary characteristics across populations". Proceedings of the Royal Society B. 273 (1601): 2675–2679. doi:10.1098/rsbp.2006.3633. PMC 1635459. PMID 17002954.
  12. Chan, Ronna L.; Olshan, A. F.; Savitz, D. A.; Herring, A. H.; Daniels, J. L.; Peterson, H. B.; Martin, S. L.; et al. (Sept. 22, 2010). "Severity and duration of nausea and vomiting symptoms in pregnancy and spontaneous abortion". Human Reproduction. 25: 2907. doi:10.1093/humrep/deq260. {{cite journal}}: Check date values in: |date= (help); Explicit use of et al. in: |first= (help)
  13. Sherman, Paul W.; Flaxman, Samuel M. (2002). "Nausea and vomiting of pregnancy in an evolutionary perspective". Am J Obstet Gynecol volume = 186 (5): S190–S197. {{cite journal}}: Missing pipe in: |journal= (help)
  14. Haig, David (October 1993). "Genetic conflicts in human pregnancy". Quarterly Review of Biology. 68 (4): 495–532. PMID 8115596.
  15. Flaxman, Samuel M.; Sherman, Paul W. (June 2000). "Morning sickness: a mechanism for protecting mother and embryo". Quarterly Review of Biology. 75 (2): 113–148. PMID 10858967.
  16. Martin, Mike (June 29, 2009). "Margie Profet's Unfinished Symphony". Weekly Scientist.
  17. http://www.askdrsears.com/html/1/T010102.asp
  18. Akhtar MS, Munir M (1989). "Evaluation of the gastric anti-ulcerogenic effects of Solanum nigrum, Brassica oleracea and Ocimum basilicum in rats". Journal of ethnopharmacology. 27 (1–2): 163–176. doi:10.1016/0378-8741(89)90088-3. PMID 2515396. Brassica oleracea (leaf) powder did not affect the ulcer index significantly but its aqueous extract lowered the index and increased hexosamine levels, suggesting gastric mucosal protection.
  19. Warhus, Susan. "Tips to ease pregnancy's morning sickness". PregnancyAndBaby.com. Archived from the original on 2007-05-20. Retrieved 2007-03-05.
  20. Borrelli F, Capasso R, Aviello G, Pittler MH, Izzo AA (2005). "Effectiveness and safety of ginger in the treatment of pregnancy-induced nausea and vomiting". Obstetrics and gynecology. 105 (4): 849–56. doi:10.1097/01.AOG.0000154890.47642.23. PMID 15802416. {{cite journal}}: Unknown parameter |doi_brokendate= ignored (help)CS1 maint: multiple names: authors list (link)
  21. ‌‌ವೆರ್ನ್‌ಟೋಫ್ಟ್ E, ಡೈಕ್ಸ್‌ AK. ಎಫೆಕ್ಟ್‌ ಆಫ್‌ ಆಕ್ಯುಪ್ರೆಷರ್‌ ಆನ್‌ ನಾಸಿಯಾ ಅಂಡ್‌ ವೊಮಿಟಿಂಗ್‌ ಡ್ಯೂರಿಂಗ್‌ ಪ್ರೆಗ್ನೆನ್ಸಿ. ಎ ರ್ಯಾಂಡಮೈಸ್ಡ್‌, ಪ್ಲೇಸಿಬೊ-ಕಂಟ್ರೋಲ್ಡ್‌ ಪೈಲಟ್‌ ಸ್ಟಡಿ. ಜರ್ನಲ್‌ ಆಪ್‌ ರಿಪ್ರೊಡಕ್ಟಿವ್‌ ಮೆಡಿಸಿನ್‌ 2001 ಸೆಪ್ಟೆಂಬರ್‌; 46(9):835-9
  22. ಸ್ಟೀಲೆ NM, ಫ್ರೆಂಚ್‌ J, ಗ್ಯಾಥೆರರ್‌-ಬಾಯ್ಲ್ಸ್‌‌ J, ನ್ಯೂಮನ್‌‌ S, ಲೆಕ್ಲೇರ್‌‌ S. ಎಫೆಕ್ಟ್‌ ಆಫ್‌ ಸೀ-ಬ್ಯಾಂಡ್ಸ್‌ ಆನ್‌ ನಾಸಿಯಾ ಅಂಡ್‌ ವೊಮಿಟಿಂಗ್‌ ಆಫ್‌ ಪ್ರೆಗ್ನನ್ಸಿ. ಜರ್ನಲ್‌ ಆಫ್‌ ಆಬ್ಸ್‌ಟೆಟ್ರಿಕ್‌, ಗೈನೆಕಾಲಜಿಕ್‌ ಅಂಡ್‌ ನಿಯೋನೇಟಲ್‌ ನರ್ಸಿಂಗ್‌ 2001 ಜನವರಿ-ಫೆಬ್ರುವರಿ;30(1):61-70
  23. ‌‌ಸ್ಮಿತ್ C, ಕ್ರೌಥರ್‌ C, ಬೆಯಿಲ್‌ಬಿ J. ಆಕ್ಯುಪಂಕ್ಚರ್‌‌ ಟು ಟ್ರೀಟ್‌ ನಾಸಿಯಾ ಅಂಡ್‌ ವೊಮಿಟಿಂಗ್‌ ಇನ್‌ ಅರ್ಲಿ ಪ್ರೆಗ್ನನ್ಸಿ: ಎ ರ್ಯಾಂಡಮೈಸ್ಡ್‌ ಕಂಟ್ರೋಲ್ಡ್‌ ಟ್ರಯಲ್‌. ಬರ್ತ್‌ ಮಾರ್ಚ್‌ 2002; 29(1):1-9
  24. ಸ್ಮಿತ್‌‌ C, ಕ್ರೌಥರ್‌ C, ಬೆಯಿಲ್‌ಬಿ J. ಪ್ರೆಗ್ನನ್ಸಿ ಔಟ್‌ಕಮ್‌ ಫಾಲೋಯಿಂಗ್‌ ವುಮೆನ್'ಸ್‌ ಪಾರ್ಟಿಸಿಪೇಷನ್‌ ಇನ್‌ ಎ ರ್ಯಾಂಡಮೈಸ್ಡ್‌ ಕಂಟ್ರೋಲ್ಡ್ ಟ್ರಯಲ್‌ ಆಫ್‌ ಆಕ್ಯುಪಂಕ್ಚರ್‌ ಟು ಟ್ರೀಟ್‌ ನಾಸಿಯಾ ಅಂಡ್‌ ವೊಮಿಟಿಂಗ್‌ ಇನ್‌ ಅರ್ಲಿ ಪ್ರೆಗ್ನನ್ಸಿ.
  25. British National Formulary (2003). "4.6 Drugs used in nausea and vertigo - Vomiting of pregnancy". BNF (45 ed.). ISBN 0853694168. {{cite book}}: Unknown parameter |month= ignored (help)

ಬಾಹ್ಯ ಕೊಂಡಿಗಳು

ಬದಲಾಯಿಸಿ