ಬೆಂಗಳೂರು ದೂರದರ್ಶನ ಕೇಂದ್ರ
ದೂರದರ್ಶನ ಕೇಂದ್ರ - ಬೆಂಗಳೂರು
ಬದಲಾಯಿಸಿದೂರದರ್ಶನ ಕೇಂದ್ರ - ಬೆಂಗಳೂರು: ಭಾರತದ ಏಕೈಕ ಸಾರ್ವಜನಿಕ ಕಿರುತೆರೆ ಜಾಲವಾದ ದೂರದರ್ಶನದ ಬೆಂಗಳೂರು ಕೇಂದ್ರ.
ಇತಿಹಾಸ
ಬದಲಾಯಿಸಿಸ್ಥಾಪನೆ
ಬದಲಾಯಿಸಿ೧೯೮೨ರಲ್ಲಿ ದೂರದರ್ಶನ ರಾಷ್ಟ್ರೀಯ ವಾಹಿನಿಯ ಪ್ರಸಾರ ಕೇಂದ್ರವಾಗಿ ಸ್ಥಾಪನೆಗೊಂಡ ಬೆಂಗಳೂರು ದೂರದರ್ಶನ ಕೇಂದ್ರವು ಶಂಕರ್ ಗುರು ಚಲನಚಿತ್ರದ ಪ್ರಸಾರದೊಡನೆ ಚಾಲನೆಗೊಂಡಿತು. ನಂತರ ೧೯೮೪ರಲ್ಲಿ ಕನ್ನಡ ಕಾರ್ಯಕ್ರಮಗಳ ಪ್ರಸಾರದೊಡನೆ ಸ್ವತಂತ್ರವಾಹಿನಿ ಯಾಯಿತು.
ಪ್ರಾರಂಭದ ಹಂತ
ಬದಲಾಯಿಸಿಪ್ರತಿನಿತ್ಯ ಸಂಜೆ ಕೆಲವು ಗಂಟೆಗಳ ಕನ್ನಡ ಕಾರ್ಯಕ್ರಮಗಳ ಪ್ರಸಾರವಾಗಲು ತೊಡಗಿದವು ಹಾಗು ಹಂಸಗೀತೆ ಚಲನಚಿತ್ರದ ಪ್ರಸಾರದೊಡನೆ ವಾರಕ್ಕೊಮ್ಮೆ ಕನ್ನಡ ಚಲನಚಿತ್ರದ ಪ್ರಸಾರವಾಗಲು ಪ್ರಾರಂಭವಾಯಿತು. ಕನ್ನಡ ವಾರ್ತೆಗಳು, ಚಲನಚಿತ್ರ ಗೀತೆಗಳ ಕಾರ್ಯಕ್ರಮವಾದ ಚಿತ್ರಮಂಜರಿ, ನಾಟಕ, ಶಾಸ್ತ್ರೀಯ ಸಂಗೀತ/ಭಾವಗೀತೆ, ಶೈಕ್ಷಣಿಕ ಕಾರ್ಯಕ್ರಮಗಳು ಬಿತ್ತರಗೊಳ್ಳಲು ಶುರುವಾಯಿತು.
ಬೆಳವಣಿಗೆ
ಬದಲಾಯಿಸಿಸಿಹಿ ಕಹಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಧಾರಾವಾಹಿ. ಸಿಹಿ ಕಹಿಯ ಯಶಸ್ಸಿನ ಹಿಂದೆಯೇ ಅನೇಕ ಧಾರಾವಾಹಿಗಳ ನಿರ್ಮಾಣವಾದವು, ಹಾಗೆಯೇ ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ೯೦ರ ದಶಕದ ಮಧ್ಯದಲ್ಲಿ ಡಿ.ಡಿ.೯ ಎಂಬ ಇನ್ನೊಂದು ವಾಹಿನಿಯೂ ಪ್ರಾರಂಭವಾಯಿತು.
ಇಂದಿನ ಬೆಂಗಳೂರು ದೂರದರ್ಶನ ಕೇಂದ್ರ
ಬದಲಾಯಿಸಿಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಮಧ್ಯಾಹ್ನ ೩ರಿಂದ ರಾತ್ರಿ ೮ರವರೆಗೆ ಪ್ರಸಾರದಲ್ಲಿದ್ದು, ನಂತರದ ಸಮಯಗಳಲ್ಲಿ ದೂರದರ್ಶನ ರಾಷ್ಟ್ರೀಯ ಜಾಲದ ಕಾರ್ಯಕ್ರಮಗಳ ಪ್ರಸಾರವನ್ನು ಮುಂದುವರೆಸುತ್ತದೆ. ಡಿ.ಡಿ.೯ ವಾಹಿನಿಯು ೧೯೯೯ರಲ್ಲಿ ಚಂದನ ಎಂಬ ಹೆಸರಿಂದ ಅಧಿಕ ಅವಧಿಯ ಪ್ರಸಾರವನ್ನು ಮುಂದುವರೆಸಿ, ಸದ್ಯಕ್ಕೆ ಬೆಳಗ್ಗೆ ೫ರಿಂದ ರಾತ್ರಿ ೧೦ರವರೆಗೆ ಪ್ರಸಾರದಲ್ಲಿರುವ ವಾಹಿನಿಯಾಗಿದೆ.
ಧಾರಾವಾಹಿಗಳು
ಬದಲಾಯಿಸಿಪ್ರಸಾರದಲ್ಲಿರುವ ದೈನಂದಿನ ಧಾರಾವಾಹಿಗಳು
ಬದಲಾಯಿಸಿ- ಕಂಕಣ
- ಕಿರಣ
- ಶಿವ
- ಕಾದಂಬರಿ
- ವಿಶ್ವರೂಪ
- ಬಿಸಿಲು ಕುದುರೆ (ಹಳೆಯ ಧಾರಾವಾಹಿಯ ಮರುಪ್ರಸಾರ)
- ಭಗೀರಥ
- ಗಲಿ ಬಿಲಿ ಸಂಸಾರ
ಪ್ರಸಾರದಲ್ಲಿರುವ ವಾರಾಂತ್ಯದ ಧಾರಾವಾಹಿಗಳು
ಬದಲಾಯಿಸಿ- ವಿಕ್ರಮ ಮತ್ತು ಬೇತಾಳ
ಹಳೆಯ ಧಾರಾವಾಹಿಗಳು
ಬದಲಾಯಿಸಿ- ಅಜಿತನ ಸಾಹಸಗಳು
- ಆಸೆಗಳು ನೂರಾರು
- ಕಂಡಕ್ಟರ್ ಕರಿಯಪ್ಪ
- ಕಟ್ಟೆ
- ಕೇಳಿದಿರಾ ?
- ಕ್ರೇಜಿ ಕರ್ನಲ್
- ಗುಡ್ಡದ ಭೂತ
- ತಾಳೋ ನೋಡೋಣ
- ತಿರುಗುಬಾಣ
- ನಮ್ಮ ನಮ್ಮಲ್ಲಿ
- ಬದುಕು ಜಟಕಾಬಂಡಿ
- ಬಿಸಿಲು ಕುದುರೆ
- ಮಾಯಾಮೃಗ
- ರೀ ಮರೀಬೇಡಿ
- ವರ ಬೇಕಾಗಿದೆ
- ಶ್ರೀಮಾನ್ ಶ್ರೀ ಸಾಮಾನ್ಯ
- ಸಿಹಿ ಕಹಿ
ಕಾರ್ಯಕ್ರಮಗಳು
ಬದಲಾಯಿಸಿಪ್ರಸಾರದಲ್ಲಿರುವ ಕಾರ್ಯಕ್ರಮಗಳು
ಬದಲಾಯಿಸಿ- ವಾರ್ತೆಗಳು
- ಚಿತ್ರಮಂಜರಿ
- ಸೊಡರ ಸಿರಿ
- ತಾರೆಗಳ ತೋಟದಿಂದ
- ಕೃಷಿ ದರ್ಶನ
- ಗ್ರಾಮೀಣ ಭಾರತ
- ಹೊಸ ಮಿಂಚು
- ಸತ್ಯ ದರ್ಶನ
- ಮಧುರ ಮಧುರವೀ ಮಂಜುಳಗಾನ
- ಥಟ್ ಅಂತ ಹೇಳಿ!
ಹಳೆಯ ಕಾರ್ಯಕ್ರಮಗಳು
ಬದಲಾಯಿಸಿ- ಸುತ್ತ ಮುತ್ತ
- ಮುನ್ನೋಟ
- ಚಿತ್ರಾವಳಿ
- ಅವಲೋಕನ
- ಪರಿಚಯ
- ನೆಕ್ಟರ್ ಇನ್ ಸ್ಟೋನ್
ಹೊರಗಿನ ಸಂಪರ್ಕ
ಬದಲಾಯಿಸಿ- ಬೆಂಗಳೂರು ದೂರದರ್ಶನ ಕೇಂದ್ರ ಅಧಿಕೃತ ತಾಣ Archived 2006-09-02 ವೇಬ್ಯಾಕ್ ಮೆಷಿನ್ ನಲ್ಲಿ.
- ಬೆಂಗಳೂರು ದೂರದರ್ಶನ ಕೇಂದ್ರ ಅಧಿಕೃತ ತಾಣ ಕಾರ್ಯಕ್ರಮ ಪಟ್ಟಿ ಪುಟ Archived 2006-10-06 ವೇಬ್ಯಾಕ್ ಮೆಷಿನ್ ನಲ್ಲಿ.
- ಆಕಾಶವಾಣಿಯು ಈಗ ಇಟ್ಟಿರುವ ಕೆಟ್ಟ ಹೆಜ್ಜೆಗಳನ್ನು ಹಿಂಪಡೆಯುವುದು ಔಚಿತ್ಯಪೂರ್ಣ;;;ವಿಶ್ಲೇಷಣೆ: ಬಹುತ್ವಕ್ಕೆ ಮಾರಕವಾಗುತ್ತಿದೆ ಆಕಾಶವಾಣಿ;;;ಡಾ. ಬಸವರಾಜ ಸಾದರ Updated: 17 ಏಪ್ರಿಲ್ 2021,