ಚಂದನ (ಕಿರುತೆರೆ ವಾಹಿನಿ)

(ದೂರದರ್ಶನ (ಚಂದನ) ಇಂದ ಪುನರ್ನಿರ್ದೇಶಿತ)

ದೂರದರ್ಶನ - ಚಂದನ (ಡಿ.ಡಿ.೯) - ಬೆಂಗಳೂರು ದೂರದರ್ಶನ ಕೇಂದ್ರದ ೨೪/೭ ಕಿರುತೆರೆಯ ಕನ್ನಡ ವಾಹಿನಿ. ಭಾರತದಲ್ಲಿ 'ದೂರದರ್ಶನ' ಬಿತ್ತರಿಸುವ ಕಾರ್ಯಕ್ರಮಗಳು ಯಾವುದೇ ಭಾಷೆಯದಾದರೂ ಅವು ಮುಟ್ಟುವ ಜನಸಮುದಾಯ ಅಪಾರ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸಮರ್ಥ ತಾಂತ್ರಿಕ ವರ್ಗ, ಹಾಗೂ ಅದಕ್ಕೆ ಸರಿಹೊಂದುವ ಪರಿಣಿತರನ್ನು ತಯಾರುಮಾಡಿ ಖಾಸಗೀ ವಲಯಗಳ ಜೊತೆಗೆ ಭುಜಕ್ಕೆ ಭುಜ ಕೊಟ್ಟು ಮುನ್ನಡೆಯಬೇಕಾಗಿದೆ. ಅದಕ್ಕೆ ಉಪಾಯವೆಂದರೆ, ಕಾರ್ಯಕ್ರಮಗಳ ತಾಂತ್ರಿಕತೆ, ಹಾಗೂ ಬೇರೆ ಬೇರೆ ಮಜಲುಗಳಲ್ಲಿ ಸಾಕಷ್ಟು ಅನುಸಂಧಾನ ಮಾಡಿ ಕಾರ್ಯಕ್ರಮಗಳನ್ನು ಬಿತ್ತರಿಸಬೇಕು.ಈ ವಾಹಿನಿಯಲ್ಲಿ ವಿಧ್ಯಾರ್ಥಿ‍ಗಳಿಗೆ ಉಪಯುಕ್ತವಾಗುವಂತ ಅನೇಕ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

Doordarshan Bhawan, Copernicus Marg, Delhi.jpg

ಚಂದನ ವಾಹಿನಿಯ‌ನ್ನು ಸ್ಮಾರ್ಟ್‌ಫೋನಿನ‌ಲ್ಲಿ ವೀಕ್ಷಿಸ‌ಬ‌ಹುದು. ಲಿಂಕ್ : http://tv.ddchandana.in[permanent dead link]