ಬೆಂಗಳೂರು ಅಕ್ವೇರಿಯಂ
ಸರ್ಕಾರಿ ಅಕ್ವೇರಿಯಂ ಎಂದೂ ಕರೆಯಲ್ಪಡುವ ಬೆಂಗಳೂರು ಅಕ್ವೇರಿಯಂ ಭಾರತದ ಎರಡನೇ ಅತಿದೊಡ್ಡ ಅಕ್ವೇರಿಯಂ ಆಗಿದೆ. ಇದು ಭಾರತದ ಬೆಂಗಳೂರಿನ ಕಬ್ಬನ್ ಪಾರ್ಕ್ ಪ್ರವೇಶದ್ವಾರದಲ್ಲಿದೆ ಮತ್ತು ಇದನ್ನು ೧೯೮೩ ರಲ್ಲಿ ಸ್ಥಾಪಿಸಲಾಯಿತು. ಇದು ವೈವಿಧ್ಯಮಯ ವಿಲಕ್ಷಣ ಕೃಷಿಯೋಗ್ಯ ಹಾಗೂ ಅಲಂಕಾರಿಕ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹತ್ತಿರದಲ್ಲಿದೆ. ಅಕ್ವೇರಿಯಂ ಅನ್ನು ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆಯು ನಿರ್ವಹಿಸುತ್ತದೆ.
Date opened | ೧೯೮೩ |
---|---|
Location | ಬೆಂಗಳೂರು, ಕರ್ನಾಟಕ, ಭಾರತ |
Coordinates | 12°58′35″N 77°35′55″E / 12.9765°N 77.5986°E |
ಕಟ್ಟಡ
ಬದಲಾಯಿಸಿಸಾರ್ವಜನಿಕ ಪ್ರದರ್ಶನಕ್ಕಾಗಿ ಸರ್ಕಾರಿ ಅಕ್ವೇರಿಯಂ ಅನ್ನು ೧೯೭೨ ರಲ್ಲಿ ನಿರ್ಮಿಸಲಾಯಿತು ಮತ್ತು ಅಧಿಕೃತವಾಗಿ ೨೭.೦೮.೧೯೮೩ ರಂದು ಉದ್ಘಾಟಿಸಲಾಯಿತು. ಸರ್ಕಾರಿ ಅಕ್ವೇರಿಯಂ, ಕಬ್ಬನ್ ಪಾರ್ಕ್ ಅಷ್ಟಭುಜಾಕೃತಿಯ ಆಕಾರದಲ್ಲಿರುವ 'ಶುದ್ಧ ನೀರಿನ ಮೀನಿನ ಅಕ್ವೇರಿಯಂ' ಆಗಿದ್ದು ಇದೊಂದು ಮೂರು ಅಂತಸ್ತಿನ ಕಟ್ಟಡವಾಗಿದೆ. ಸರ್ಕಾರಿ ಅಕ್ವೇರಿಯಂನ ಒಟ್ಟು ವಿಸ್ತೀರ್ಣ ೨೭೦೦ಚ.ಮೀ. ನಿರ್ಮಿತ ಪ್ರದೇಶದ ಪೈಕಿ ೮೫೦ ಚ.ಮೀ. ಇದು ದೇಶದ ಎರಡನೇ ಅತಿದೊಡ್ಡ ಅಕ್ವೇರಿಯಂ ಆಗಿದೆ. ನೆಲ ಮಹಡಿ ಕಚೇರಿಯನ್ನು ಒಳಗೊಂಡಿದೆ. ಮೊದಲ ಮಹಡಿಯಲ್ಲಿ ೧೪ ದೊಡ್ಡ ಟ್ಯಾಂಕ್‌ಗಳಿವೆ. ಎರಡನೇ ಮಹಡಿಯಲ್ಲಿ, ಅಕ್ವೇರಿಯಂಗಳನ್ನು ಎರಡು ಸಾಲುಗಳಲ್ಲಿ ಜೋಡಿಸಲಾಗಿದೆ ಮತ್ತು ಮಧ್ಯಮದಿಂದ ಸಣ್ಣ ಗಾತ್ರದ ಒಟ್ಟು ೬೨ ಅಕ್ವೇರಿಯಗಳಿವೆ . ಇದು ಸುಮಾರು ೪೦-೫೦ ಪ್ರಭೇದಗಳ ಸ್ಥಳೀಯ ಮತ್ತು ವಿಲಕ್ಷಣ ಜಾತಿಯ ಸಿಹಿನೀರಿನ ಅಲಂಕಾರಿಕ ಮೀನುಗಳನ್ನು ಹೊಂದಿದೆ. ಸರ್ಕಾರಿ ಅಕ್ವೇರಿಯಂ ಮೀನುಗಾರಿಕೆ ನಿರ್ದೇಶನಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕ್ಯುರೇಟರ್ ಅಕ್ವೇರಿಯಂನ ಮುಖ್ಯಸ್ಥರಾಗಿರುತ್ತಾರೆ.
- ಅಕ್ವೇರಿಯಂನ ಕೆಲಸದ ದಿನಗಳು ಮತ್ತು ರಜಾದಿನಗಳು
- ಅಕ್ವೇರಿಯಂ ಈ ದಿನಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ:
- ಪ್ರತಿ ವರ್ಷ ಜನವರಿ ೨೬, ಆಗಸ್ಟ್ ೧೫ ಮತ್ತು ನವೆಂಬರ್೧ ರಂದು ಅಕ್ವೇರಿಯಂ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. (ಮುಂದಿನ ಕೆಲಸದ ದಿನದಂದು ಅಕ್ವೇರಿಯಂ ಮುಚ್ಚಲ್ಪಡುತ್ತದೆ)
- ಸಮಯ: ೧೦:೦೦ AM ನಿಂದ ೫:೩೦ PM
- ಪ್ರವೇಶ ಶುಲ್ಕ
- ಪ್ರವೇಶ ಶುಲ್ಕ ತಲಾ ೧೦ ರೂ.
- ಮಕ್ಕಳು ತಮ್ಮ ಶಾಲೆಗಳ ಮೂಲಕ ಅಕ್ವೇರಿಯಂಗೆ ಭೇಟಿ ನೀಡಿದರೆ, ಟಿಕೆಟ್ ದರ ತಲಾ ರೂ.೫.೦೦ (೨೦ ನೇ ತರಗತಿಯವರೆಗೆ).
- ೫ ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲ.
ಪ್ರದರ್ಶನದಲ್ಲಿ ಜಾತಿಗಳು
ಬದಲಾಯಿಸಿಅಕ್ವೇರಿಯಂನಲ್ಲಿ ಕಂಡುಬರುವ ಮೀನುಗಳಲ್ಲಿ ಈಲ್ಸ್, ಏಂಜೆಲ್ಫಿಶ್, ಗ್ಲೋಲೈಟ್ ಟೆಟ್ರಾ, ಹಾಕಿ ಸ್ಟಿಕ್ ಟೆಟ್ರಾ, ರೆಡ್-ಟೈಲ್ ಶಾರ್ಕ್, ಕ್ಯಾಟ್ಲಾ, ಇಂಡಿಯನ್ ಟೈಗರ್ ಬಾರ್ಬ್, ಮಹ್ಸೀರ್, ಸಿಹಿನೀರಿನ ಸೀಗಡಿಗಳು, ನೀಲಿ ಗೌರಾಮಿ, ಪರ್ಲ್ ಗೌರಾಮಿ, ಗೋಲ್ಡ್ ಫಿಶ್, ಮೂನ್ ಟೈಲ್ ಮತ್ತು ಹೆಚ್ಚಿನವು ಸೇರಿವೆ.[೧][೨]
ಆಡಳಿತ
ಬದಲಾಯಿಸಿಬೆಂಗಳೂರು ಅಕ್ವೇರಿಯಂ ರಾಜ್ಯ ಸರ್ಕಾರದ ಆಡಳಿತದಲ್ಲಿದೆ.[೩]
ಗ್ಯಾಲರಿ
ಬದಲಾಯಿಸಿಸಹ ನೋಡಿ
ಬದಲಾಯಿಸಿ- ಅಕ್ವಾಟಿಕ್ ಕಿಂಗ್ಡಮ್, ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ.
ಉಲ್ಲೇಖಗಳು
ಬದಲಾಯಿಸಿ