ಬೃಹದ್ಬಲನು (ಸಂಸ್ಕೃತ:बृहद्बल) ಹಿಂದೂ ಧಮ೯ದಲ್ಲಿ ಕಾಣಿಸಿಕೂಂಡಿರುವ ರಾಜ. ಅವನು ಹಿಂದೂ ಮಹಾಕಾವ್ಯವಾದ ಮಹಾಭಾರತದ ಪಾತ್ರ. ಅವನನ್ನು ಕೋಸಲ ಸಾಮ್ರಾಜ್ಯದ ಕೊನೆಯ ರಾಜ ಎಂದು ವಿವರಿಸಲಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಬೃಹದ್ಬಲನು ಕೌರವರ ಪರವಾಗಿ ಹೋರಾಡಿದ್ದನು. ಅವನು ಅಭಿಮನ್ಯುವಿನಿಂದ ಕೊಲ್ಲಲ್ಪಟ್ಟನು.[]

ಬೃಹದ್ಬಲ
ಮಕ್ಕಳುಬರ್ಹಿನಮನ
ಗ್ರಂಥಗಳುಮಹಾಭಾರತ
ಪ್ರದೇಶಕೋಸಲ
ತಂದೆತಾಯಿಯರು
  • ವಿಶ್ರುವತನ (ತಂದೆ)

ದಂತಕಥೆ

ಬದಲಾಯಿಸಿ

ವಿಷ್ಣು ಪುರಾಣ ಮತ್ತು ಭಾಗವತ ಪುರಾಣ ಪ್ರಕಾರ, ಬೃಹದ್ಬಲನು ಕುಶನ ಮಗ ಮತ್ತು ರಾಮನ ವಂಶಸ್ಥ. ಇವನು ಸೂರ್ಯವಂಶಕ್ಕೆ ಸೇರಿದವನಾಗಿದ್ದಾನೆ. ಮಖನ್ ಝಾ, ತನ್ನ ಆಂಥ್ರೊಪೊಲಜಿ ಆಫ್ ಏನ್ಷಿಯಂಟ್ ಹಿಂದೂ ಕಿಂಗ್ಡಮ್ಸ್ ಎ ಸ್ಟಡಿ ಇನ್ ಸಿವಿಲೈಸೇಷನಲ್ ಪರ್ಸ್ಪೆಕ್ಟಿವ್ ನಲ್ಲಿ ಬೃಹದ್ಬಲನು ರಾಮನ ನಂತರ ಹದಿನೈದನೇ ರಾಜನೆಂದು ಹೇಳುತ್ತಾನೆ.[] ಬೃಹದ್ಬಲನನ್ನು ಇಕ್ಷ್ವಾಕು ವಂಶದ ಕೊನೆಯ ರಾಜನೆಂದು ಪರಿಗಣಿಸಲಾಗಿದೆ. ಈ ರಾಜವಂಶವು ರಾಮ ಮತ್ತು ಅವನ ನಂತರದ ತಲೆಮಾರುಗಳವರೆಗೆ ವ್ಯಾಪಿಸಿತ್ತು.[]

ಮಹಾಭಾರತ ಬೃಹದ್ಬಲನನ್ನು ಕೋಸಲ ರಾಜ್ಯದ ದೊರೆ ಎಂದು ವರ್ಣಿಸುತ್ತದೆ. ಅವನು ರಾಜಸೂಯ ಯಜ್ಞದ ಸಮಯದಲ್ಲಿ ಭೀಮನ ವಶದಲ್ಲಿದ್ದನು ಮತ್ತು ನಂತರದ ದಿಗ್ವಿಜಯ ಯಾತ್ರೆಯ ಸಮಯದಲ್ಲಿ ಕರ್ಣ ಅವನನ್ನು ವಶಪಡಿಸಿಕೊಂಡ ಕಾರಣ ಕುರುಕ್ಷೇತ್ರ ಯುದ್ಧ ಸಮಯದಲ್ಲಿ ಅವನು ಕೌರವರ ಪರವಾಗಿದ್ದನು.[] ಯುದ್ಧದ ಹದಿಮೂರನೇ ದಿನದಂದು ಅರ್ಜುನನ ಮಗ ಅಭಿಮನ್ಯು ಪದ್ಮವ್ಯೂಹಕ್ಕೆ ನುಗ್ಗಿದಾಗ, ಬೃಹದ್ಬಲನು ದ್ರೋಣ, ಕೃಪಾ, ಕರ್ಣ, ಅಶ್ವತ್ಥಾಮ ಮತ್ತು ಕೃತವರ್ಮ ಸೇರಿದಂತೆ ಹಲವಾರು ಕೌರವ ಯೋಧರೊಂದಿಗೆ ಅವನೊಂದಿಗೆ ಹೋರಾಡುತ್ತಾನೆ. ಅವನ ಮತ್ತು ಅಭಿಮನ್ಯುವಿನ ನಡುವೆ ಖಚಿತವಾದ ಭೀಕರ ದ್ವಂದ್ವಯುದ್ಧದಲ್ಲಿ, ಅಭಿಮನ್ಯುವಿನ ಬಾಣಗಳಿಂದ ಅವನು ಸಾವನ್ನಪ್ಪುತ್ತಾನೆ.[]

ಉಲ್ಲೇಖಗಳು

ಬದಲಾಯಿಸಿ
  1. Debroy, Bibek (2017-10-25). The Valmiki Ramayana: Vol. 3 (in ಇಂಗ್ಲಿಷ್). Penguin Random House India Private Limited. p. 13. ISBN 978-93-87326-28-6.
  2. Jha, Makhan (1997). Anthropology of Ancient Hindu Kingdoms: A Study in Civilizational Perspective. M.D. Publications Pvt. Ltd. p. 177. ISBN 978-81-7533-034-4.
  3. Agarwal, M. K. (2013). The Vedic Core of Human History: And Truth will be the Savior. iUniverse. p. 14. ISBN 978-1-4917-1595-6.
  4. Pruthi, Raj (2004). Vedic Civilization. Discovery Publishing House. p. 75. ISBN 978-81-7141-875-6.
  5. Menon, Ramesh (2006). The Mahabharata: A Modern Rendering. iUniverse. p. 246. ISBN 978-0-595-40188-8.
"https://kn.wikipedia.org/w/index.php?title=ಬೃಹದ್ಬಲ&oldid=1229628" ಇಂದ ಪಡೆಯಲ್ಪಟ್ಟಿದೆ