ಬಿಫೋರ್‌ ಸನ್‌ಸೆಟ್‌ (ಚಲನಚಿತ್ರ)

ಬಿಫೋರ್‌ ಸನ್‌ಸೆಟ್‌ ಎಂಬುದು 2004ರಲ್ಲಿ ಬಂದ ಅಮೆರಿಕಾದ ಒಂದು ಚಲನಚಿತ್ರವಾಗಿದೆ ಮತ್ತು ಬಿಫೋರ್‌ ಸನ್‌ರೈಸ್‌ (1995) ಚಲನಚಿತ್ರದ ಉತ್ತರಭಾಗವಾಗಿದೆ. ಇದರ ಪೂರ್ವವರ್ತಿಯಂತೆ, ಈ ಚಲನಚಿತ್ರವನ್ನೂ ಸಹ ರಿಚರ್ಡ್‌ ಲಿಂಕ್ಲೇಟರ್‌‌ ನಿರ್ದೇಶಿಸಿದ. ಆದಾಗ್ಯೂ, ಸದರಿ ಚಲನಚಿತ್ರಗಳಲ್ಲಿ ನಟಿಸಿದ ಕಲಾವಿದರಾದ ಎಥಾನ್‌ ಹಾಕ್‌‌ ಮತ್ತು ಜ್ಯೂಲೀ ಡೆಲ್ಪಿ ಜೊತೆಯಲ್ಲಿ ಚಿತ್ರಕಥೆಗೆ ಸಂಬಂಧಿಸಿದ ಪ್ರಸಿದ್ಧಿ-ಮನ್ನಣೆಯನ್ನು ಈ ಬಾರಿ ಲಿಂಕ್ಲೇಟರ್‌ ಹಂಚಿಕೊಂಡ. ಅಷ್ಟೇ ಅಲ್ಲ, ಮೂಲ ಬಿಫೋರ್‌ ಸನ್‌ರೈಸ್‌ ಚಿತ್ರದ ಚಿತ್ರಕಥಾ ಲೇಖಕನಾದ ಕಿಮ್‌ ಕಿರ್ಜಾನ್‌‌ ಜೊತೆಯಲ್ಲಿಯೂ ಕಥೆಗೆ ಸಂಬಂಧಿಸಿದ ಪ್ರಸಿದ್ಧಿ-ಮನ್ನಣೆಯನ್ನು ಲಿಂಕ್ಲೇಟರ್‌ ಹಂಚಿಕೊಂಡ.

Before Sunset
ಚಿತ್ರ:Before Sunset movie.jpg
Theatrical release poster
ನಿರ್ದೇಶನRichard Linklater
ನಿರ್ಮಾಪಕRichard Linklater
ಲೇಖಕRichard Linklater
Ethan Hawke
Julie Delpy
Kim Krizan
ಪಾತ್ರವರ್ಗEthan Hawke
Julie Delpy
ಸಂಗೀತJulie Delpy
ಛಾಯಾಗ್ರಹಣLee Daniel
ವಿತರಕರುWarner Independent Pictures
ಬಿಡುಗಡೆಯಾಗಿದ್ದುಫೆಬ್ರವರಿ 10, 2004 (2004-02-10) (BIFF)
ಜುಲೈ 2, 2004 (limited)
ಅವಧಿ80 minutes
ದೇಶUnited States
ಭಾಷೆEnglish
French
ಬಂಡವಾಳ$2.7 million[]
ಬಾಕ್ಸ್ ಆಫೀಸ್$15,992,615

ಬಿಫೋರ್‌ ಸನ್‌ರೈಸ್‌ ಚಿತ್ರದಲ್ಲಿನ ಕಥೆಯನ್ನು ಈ ಚಲನಚಿತ್ರವು ಎತ್ತಿಕೊಳ್ಳುತ್ತದೆ; ಅಮೆರಿಕಾದ ಓರ್ವ ಯುವಕ ಮತ್ತು ಓರ್ವ ಫ್ರೆಂಚ್‌ ಯುವತಿ ಟ್ರೇನೊಂದರಲ್ಲಿ ಸಂಧಿಸುವುದನ್ನು ಹಾಗೂ ವಿಯೆನ್ನಾದಲ್ಲಿ ಒಂದು ರಾತ್ರಿಯನ್ನು ಕಳೆಯುವುದನ್ನು ಈ ಭಾಗವು ಒಳಗೊಂಡಿದೆ. ಒಂಬತ್ತು ವರ್ಷಗಳ ನಂತರ ಬಿಫೋರ್‌ ಸನ್‌ಸೆಟ್‌ ಚಿತ್ರದಲ್ಲಿ, ಅವರ ಹಾದಿಗಳು ಮತ್ತೊಮ್ಮೆ ಪರಸ್ಪರ ಅಡ್ಡಹಾಯುತ್ತವೆ. ಈ ಸನ್ನಿವೇಶವು ನಿಜಾವಧಿಯಲ್ಲಿ ಚಾಲನೆಗೊಳ್ಳುತ್ತದೆ ಹಾಗೂ ಅವರು ಪ್ಯಾರಿಸ್‌‌‌ನಲ್ಲಿ ಒಟ್ಟಾಗಿ ಒಂದು ಅಪರಾಹ್ನವನ್ನು ಕಳೆಯುತ್ತಾರೆ.

ಈ ಚಲನಚಿತ್ರವು ವ್ಯಾಪಾರೀ ಸ್ವರೂಪದಲ್ಲಿಯೂ ವಿಮರ್ಶಾತ್ಮಕವಾಗಿಯೂ ಯಶಸ್ಸು ಕಂಡಿತು ಹಾಗೂ ಇದರ ಚಿತ್ರಕಥೆಯು ಅತ್ಯುತ್ತಮ ರೂಪಾಂತರಿತ ಚಿತ್ರಕಥೆಗೆ ಸಂಬಂಧಿಸಿದಂತಿರುವ ಒಂದು ಅಕಾಡೆಮಿ ಪ್ರಶಸ್ತಿಯ ನಾಮನಿರ್ದೇಶನವನ್ನು ದಕ್ಕಿಸಿಕೊಂಡಿತು.

ಕಥಾ ಸಾರಾಂಶ

ಬದಲಾಯಿಸಿ

ವಿಯೆನ್ನಾದಲ್ಲಿ ಜೆಸ್ಸಿ (ಹಾಕ್‌‌) ಮತ್ತು ಸೆಲೀನ್‌‌ (ಡೆಲ್ಪಿ) ಇಬ್ಬರೂ ಭೇಟಿಯಾಗಿದ್ದಾಗಿನ ಬಿಫೋರ್‌ ಸನ್‌ರೈಸ್‌ ಚಿತ್ರದ ಘಟನೆಗಳು ನಡೆದ ನಂತರದ ಒಂಬತ್ತು ವರ್ಷಗಳು ಸರಿದುಹೋಗಿರುತ್ತವೆ. ಅಲ್ಲಿಂದೀಚೆಗೆ, ದಿಸ್‌ ಟೈಮ್‌‌ ಎಂಬ ಒಂದು ಕಾದಂಬರಿಯನ್ನು ಜೆಸ್ಸಿ ಬರೆದಿರುತ್ತಾನೆ. ಸೆಲೀನ್‌‌ ಜೊತೆಗೆ ಅವನು ಕಳೆದ ಕಾಲವು ಇದಕ್ಕೆ ಪ್ರೇರಣೆಯನ್ನು ನೀಡಿರುತ್ತದೆ, ಮತ್ತು ಈ ಪುಸ್ತಕವು ಅಮೆರಿಕಾದಲ್ಲಿ ಅತ್ಯುತ್ತಮ ಮಾರಾಟವನ್ನು ಕಂಡ ಒಂದು ಜನಪ್ರಿಯ ಕೃತಿಯೆನಿಸಿಕೊಂಡಿರುತ್ತದೆ. ಯುರೋಪ್‌‌ ವಲಯದಲ್ಲಿನ ಮಾರಾಟಕಾರ್ಯದಲ್ಲಿ ನೆರವಾಗಲು ಜೆಸ್ಸಿ ಒಂದು ಪುಸ್ತಕ ಪ್ರವಾಸವನ್ನು ಕೈಗೊಳ್ಳುತ್ತಾನೆ. ಪ್ಯಾರಿಸ್ ಈ ಪ್ರವಾಸದ ಕೊನೆಯ ನಿಲುಗಡೆಯಾಗಿರುತ್ತದೆ ಮತ್ತು ಅಲ್ಲಿನ ಷೇಕ್ಸ್‌‌ಪಿಯರ್‌ ಅಂಡ್‌ ಕಂಪನಿ ಎಂಬ ಹೆಸರಿನ ಪುಸ್ತಕದ ಮಳಿಗೆಯ ಆಶ್ರಯದಲ್ಲಿ ಜೆಸ್ಸಿ ಒಂದು ವಾಚನಗೋಷ್ಠಿಯನ್ನು ನಡೆಸುತ್ತಿರುತ್ತಾನೆ. ತನ್ನ ವಾಚನಗೋಷ್ಠಿಯ ಪ್ರೇಕ್ಷಕರೊಂದಿಗೆ ಜೆಸ್ಸಿಯು ಮಾತುಕತೆಗಳನ್ನು ನಡೆಸುತ್ತಿದ್ದಂತೆ, ವಿಯೆನ್ನಾದಲ್ಲಿ ಅವನ ಮತ್ತು ಸೆಲೀನ್‌‌ ನಡುವೆ ನಡೆದ ಹಿಂದಿನ ಘಟನೆಯ ಮರುಕಳಿಕೆಗಳು (ಫ್ಲಾಶ್‌‌ಬ್ಯಾಕ್‌‌ಗಳು) ತೋರಿಸಲ್ಪಡುತ್ತವೆ; ಒಂಬತ್ತು ವರ್ಷಗಳು ಕಳೆದುಹೋದ ನಂತರವೂ ತಾವಿಬ್ಬರೂ ಒಟ್ಟಾಗಿ ಕಳೆದ ರಾತ್ರಿಯ ಕುರಿತಾದ ನೆನಪುಗಳು ಅವನ ಮನದಲ್ಲಿ ಸ್ಪಷ್ಟವಾಗಿ ಉಳಿದಿರುತ್ತವೆ.

ಜೆಸ್ಸಿಯನ್ನು ಸಂದರ್ಶಿಸುತ್ತಿರುವ ಮೂವರು ಪತ್ರಕರ್ತರು ಆ ಪುಸ್ತಕದ ಮಳಿಗೆಯಲ್ಲಿ ಹಾಜರಿರುತ್ತಾರೆ: ಅವರಲ್ಲೊಬ್ಬ ಕಲ್ಪನಾಶೀಲ ವ್ಯಕ್ತಿಯಾಗಿದ್ದು, ಪುಸ್ತಕದ ಮುಖ್ಯ ಪಾತ್ರಗಳು ಮತ್ತೊಮ್ಮೆ ಸಂಧಿಸುತ್ತವೆ ಎಂಬುದು ಅವನಿಗೆ ಮನವರಿಕೆಯಾಗಿರುತ್ತದೆ; ಮತ್ತೊಬ್ಬ ಪತ್ರಕರ್ತ ಓರ್ವ ದೋಷದರ್ಶಿ ಅಥವಾ ಸಿನಿಕ ಪ್ರವೃತ್ತಿಯವನಾಗಿದ್ದು, ಮುಖ್ಯ ಪಾತ್ರಗಳು ಮತ್ತೊಮ್ಮೆ ಭೇಟಿಯಾಗುವುದಿಲ್ಲ ಎಂಬುದು ಅವನಿಗೆ ಮನವರಿಕೆಯಾಗಿರುತ್ತದೆ; ಮತ್ತು ಮೂರನೆಯ ಪತ್ರಕರ್ತನು ಈ ಪಾತ್ರಗಳು ಮತ್ತೊಮ್ಮೆ ಸಂಧಿಸಬೇಕು ಎಂದು ಬಯಸುತ್ತಿರುತ್ತಾನಾದರೂ, ವಾಸ್ತವವಾಗಿ ಅವರು ಸಂಧಿಸುವರೇ ಎಂಬ ಸಂದೇಹದೊಂದಿಗೇ ಉಳಿದಿರುತ್ತಾನೆ. ಅವನು ತನ್ನ ಗೋಷ್ಠಿಯ ಪ್ರೇಕ್ಷಕರೊಂದಿಗೆ ಮಾತನಾಡುತ್ತಿರುವಂತೆಯೇ, ಅವನ ಕಣ್ಣುಗಳು ಕಿಟಕಿಯ ಕಡೆಗೆ ಅಲೆದಾಡುತ್ತಿರುತ್ತವೆ, ಮತ್ತು ಅಲ್ಲಿ ಆತ ನಂಬಲು ಅಸಾಧ್ಯವಾದ ನೋಟವನ್ನು ಕಾಣುತ್ತಾನೆ: ಅಂದರೆ, ಸೆಲೀನ್‌ ಅವನೆಡೆಗೆ ನೋಡಿ ನಗುತ್ತಿರುವುದು ಅವನಿಗೆ ತೋರುತ್ತದೆ.

ವಾಚನದ ಪ್ರಸ್ತುತಿಯು ಮುಗಿಯುತ್ತಿದ್ದಂತೆ, ಜೆಸ್ಸಿಯು ವಿಮಾನವನ್ನು ಹಿಡಿಯಲಿಕ್ಕಿದೆ ಎಂಬುದಾಗಿ ಪುಸ್ತಕದ ಮಳಿಗೆಯ ವ್ಯವಸ್ಥಾಪಕನು ಅವನಿಗೆ ನೆನಪಿಸುತ್ತಾನೆ ಮತ್ತು ಒಂದು ಗಂಟೆಯ ಅಸುಪಾಸಿನೊಳಗಾಗಿ ಆತನು ವಿಮಾನ ನಿಲ್ದಾಣಕ್ಕೆ ತೆರಳಬೇಕಾಗುತ್ತದೆ ಎಂದು ತಿಳಿಸುತ್ತಾನೆ; ಹೀಗಾಗಿ ಬಿಫೋರ್‌ ಸನ್‌ರೈಸ್‌ ಚಿತ್ರದಲ್ಲಿರುವಂತೆಯೇ ಸೆಲೀನ್‌‌ ಮತ್ತು ಜೆಸ್ಸಿಯ ಮರುಸೇರ್ಪಡೆಯು ಸಮಯದಿಂದ ನಿರ್ಬಂಧಿಸಲ್ಪಡುತ್ತದೆ. ಹಿಂದಿನ ಚಲನಚಿತ್ರದಲ್ಲಿರುವಂತೆ, ಪಾತ್ರಗಳು ಇರುವ ಅಲ್ಪಸ್ವಲ್ಪ ಸಮಯವನ್ನೇ ಸದುಪಯೋಗಪಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುತ್ತವೆ; ಅವರಿಬ್ಬರ ನಡುವಿನ ಸಂಭಾಷಣೆಗಳು ಹಿಂದೆಂದಿಗಿಂತಲೂ ಹೆಚ್ಚು ವೈಯಕ್ತಿಕ ನೆಲೆಗಟ್ಟಿನಲ್ಲಿರುವಲ್ಲಿ ಇದು ನೆರವಾಗುತ್ತದೆ; ರಾಜಕೀಯ ಹಾಗೂ ಕೆಲಸಕ್ಕೆ ಸಂಬಂಧಿಸಿದ ವಾಡಿಕೆಯ ಮೂವತ್ತು-ಮತ್ತೊಂದು ವಿಷಯಗಳಿಂದ ಅದು ಪ್ರಾರಂಭವಾಗುತ್ತದೆ, ಮತ್ತು ನಂತರದಲ್ಲಿ ಹೆಚ್ಚುತ್ತಲೇ ಹೋಗುವ ಉತ್ಕಟಭಾವದೊಂದಿಗೆ ಮುಂದುವರಿದು, ಪರಸ್ಪರರೆಡೆಗಿನ ಪ್ರೀತಿಯೊಂದಿಗೆ ಅವರು ಸಮೀಪಿಸುತ್ತಾರೆ; ಈ ಭಾವಗಳ ಜೊತೆಗೇ ಸಮಯವೂ ಸರಿದುಹೋಗುತ್ತಿರುತ್ತದೆ.

ಭರವಸೆ ನೀಡಿದಂತೆ ತಮ್ಮ ಮೊದಲ ಮುಖಾಮುಖಿಯಾದ ಆರು ತಿಂಗಳುಗಳ ನಂತರ ತಾವಿಬ್ಬರೂ ಏಕೆ ಸಂಧಿಸಲಾಗಲಿಲ್ಲ ಎಂಬ ವಿಷಯವನ್ನು ಅವರು ತಮ್ಮ ಸಂಭಾಷಣೆಯ ಆರಂಭಿಕ ಹಂತದಲ್ಲಿ ಪ್ರಸ್ತಾಪಿಸುತ್ತಾರೆ. ಈ ಹಂತದಲ್ಲಿ ತಿಳಿದುಬರುವ ವಿಷಯವೇನೆಂದರೆ, ಭರವಸೆ ನೀಡಿದಂತೆ ಜೆಸ್ಸಿಯು ವಿಯೆನ್ನಾಗೆ ಹಿಂದಿರುಗಿರುತ್ತಾನೆ, ಆದರೆ ಸೆಲೀನ್‌ ಅಲ್ಲಿಗೆ ಬಂದಿರುವುದಿಲ್ಲ; ಏಕೆಂದರೆ, ಭೇಟಿಯ ನಿಗದಿತ ದಿನಾಂಕಕ್ಕೆ ಮುಂಚಿತವಾಗಿ ಅವಳ ಅಜ್ಜಿಯು ಹಠಾತ್ತನೆ ತೀರಿಕೊಂಡಿರುತ್ತಾಳೆ. ಜೆಸ್ಸಿ ಮತ್ತು ಸೆಲೀನ್‌ ಇಬ್ಬರೂ ತಂತಮ್ಮ ವಿಳಾಸಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿರುವುದಿಲ್ಲವಾದ್ದರಿಂದ, ಒಬ್ಬರನ್ನೊಬ್ಬರು ಸಂಪರ್ಕಿಸಲು ಅವರಿಗೆ ಯಾವ ದಾರಿಯೂ ಉಳಿದಿರುವುದಿಲ್ಲ; ಇದು ಅವರ ತಪ್ಪಿಹೋದ ಸಂಪರ್ಕಕ್ಕೆ ಕಾರಣವಾಗಿರುತ್ತದೆ.

ತಮ್ಮ ಮೊದಲ ಭೇಟಿಯಾದಾಗಿನಿಂದ ತಂತಮ್ಮ ಜೀವನಗಳಲ್ಲಿ ಏನೆಲ್ಲಾ ಸಂಭವಿಸಿತು ಎಂಬುದನ್ನು ತಮ್ಮ ಮಾತುಕತೆಯಲ್ಲಿ ಅವರು ಹೊರಗೆಡಹುತ್ತಾರೆ. ಅವರಿಬ್ಬರೂ ಈಗ ತಮ್ಮ ಮೂವತ್ತರ ಹರೆಯದ ಆರಂಭದಲ್ಲಿರುತ್ತಾರೆ. ಜೆಸ್ಸಿಯು ಈಗ ಓರ್ವ ಬರಹಗಾರನಾಗಿದ್ದು, ಅವನಿಗೆ ಮದುವೆಯಾಗಿರುತ್ತದೆ ಮತ್ತು ಅವನಿಗೊಬ್ಬ ಮಗನಿರುತ್ತಾನೆ. ಸೆಲೀನ್‌‌ ಪರಿಸರಕ್ಕೆ ಸಂಬಂಧಿಸಿದ ಓರ್ವ ಸಮರ್ಥಕಿಯಾಗಿದ್ದು, ಒಂದಷ್ಟು ಅವಧಿಗೆ ಅಮೆರಿಕಾದಲ್ಲಿ ವಾಸಮಾಡಿಕೊಂಡಿರುತ್ತಾಳೆ, ಮತ್ತು ಛಾಯಾಗ್ರಾಹಿ-ಪತ್ರಕರ್ತನು ಅವಳ ಸಂಗಾತಿಯಾಗಿರುತ್ತಾನೆ. ತಂತಮ್ಮ ಜೀವನದಲ್ಲಿ ಅವರಿಬ್ಬರೂ ವೈವಿಧ್ಯಮಯ ನೆಲೆಗಳಲ್ಲಿ ಅಸಂತೃಪ್ತರಾಗಿದ್ದಾರೆ ಎಂಬುದು ಅವರ ಮಾತುಕತೆಯ ಸಂದರ್ಭದಲ್ಲಿ ಸ್ಪಷ್ಟವಾಗುತ್ತದೆ. ಕೇವಲ ತನ್ನ ಮಗನ ಮೇಲಿನ ಪ್ರೀತಿಯ ಕಾರಣದಿಂದಾಗಿ ತನ್ನ ಹೆಂಡತಿಯೊಂದಿಗೆ ತಾನು ಬದುಕು ಸಾಗಿಸುತ್ತಿರುವುದಾಗಿ ಜೆಸ್ಸಿ ಹೇಳಿಕೊಳ್ಳುತ್ತಾನೆ. ತನ್ನ ಸಂಗಾತಿಯು ಬಹುಪಾಲು ಅವಧಿಗೆ ತನಗೆ ವಹಿಸಲ್ಪಟ್ಟ ಕಾರ್ಯನಿಯೋಜನೆಯ ಮೇಲೆಯೇ ತೆರಳುವುದರಿಂದ, ಆತನನ್ನು ತಾನು ನೋಡುವುದೇ ಅಪರೂಪ ಎಂಬುದಾಗಿ ಸೆಲೀನ್‌‌ ಹೇಳಿಕೊಳ್ಳುತ್ತಾಳೆ.

ಅವರು ಪ್ಯಾರಿಸ್‌ನಲ್ಲಿ ಸಂಚರಿಸುತ್ತಾ ಹೋದಂತೆ, ಹಲವಾರು ತಾಣಗಳಲ್ಲಿ ಅವರ ಸಂಭಾಷಣೆಯು ಮುಂದುವರಿಯುತ್ತಾ ಹೋಗುತ್ತದೆ; ಒಂದು ಕೆಫೆ, ಒಂದು ತೋಟ, ಒಂದು ಚಪ್ಪಟೆ ತಳದ ಬ್ಯಾಟೋ ದೋಣಿ, ಮತ್ತು ಪ್ಯಾರಿಸ್‌ನಲ್ಲಿ ಉಳಿಯುವುದಕ್ಕೆಂದು ಬಾಡಿಗೆಗೆ ತೆಗೆದುಕೊಳ್ಳಲ್ಪಟ್ಟ ಜೆಸ್ಸಿಯ ಕಾರು ಹೀಗೆ ಆ ತಾಣಗಳು ಬದಲಾಗುತ್ತಾಹೋಗುತ್ತವೆ. ಪರಸ್ಪರರೆಡೆಗೆ ಅವರು ಹೊಂದಿದ್ದ ಹಳೆಯ ಭಾವನೆಗಳು ನಿಧಾನವಾಗಿ ಪುನರುದ್ದೀಪಿಸಲ್ಪಡುತ್ತವೆ, ಹಿಂದೆ ತಾವು ಭೇಟಿಯಾಗುವುದು ತಪ್ಪಿಹೋದುದರ ಕುರಿತಾದ ಉದ್ವೇಗ ಮತ್ತು ವಿಷಾದವೂ ಅಲ್ಲಿ ಇಣುಕುಹಾಕುತ್ತದೆ; ತಾವಿಬ್ಬರೂ ವಿಯೆನ್ನಾದಲ್ಲಿ ಒಟ್ಟಾಗಿ ಹಿಂದೆ ಕಳೆದ ಒಂದು ರಾತ್ರಿಗೆ ತಮ್ಮ ಈಗಿನ ಜೀವನದ ಯಾವುದೇ ಘಟನೆಯನ್ನೂ ಹೋಲಿಸಲು ಆಗುವುದಿಲ್ಲ ಎಂಬುದು ಅವರಿಗೆ ಅರಿವಾಗುತ್ತದೆ. ಒಂದಲ್ಲಾ ಒಂದು ದಿನ ತಾನು ಸೆಲೀನ್‌‌ಳನ್ನು ಭೇಟಿಯಾಗುವ ಭರವಸೆಯು ಮನದ ಮೂಲೆಯಲ್ಲೆಲ್ಲೋ ಇದ್ದುದರಿಂದಲೇ ತಾನು ಸದರಿ ಪುಸ್ತಕವನ್ನು ಬರೆದುದಾಗಿ ಜೆಸ್ಸಿ ಅಂತಿಮವಾಗಿ ಒಪ್ಪಿಕೊಳ್ಳುತ್ತಾನೆ. ಈ ಪುಸ್ತಕವು ತನಗೆ ನೋವಿನಿಂದ ಕೂಡಿದ ನೆನಪುಗಳನ್ನು ಮರಳಿ ತಂದಿದೆ ಎಂಬುದಾಗಿ ಅವಳು ಉತ್ತರಿಸುತ್ತಾಳೆ. ಒಂದು ಹಂತದಲ್ಲಂತೂ, ಬಾಡಿಗೆಗೆ ತೆಗೆದುಕೊಂಡ ಕಾರಿನಲ್ಲಿ ತನ್ನ ಪ್ರೀತಿರಹಿತ, ಕಾಮರಹಿತ ಮದುವೆಯ ಕುರಿತು ಜೆಸ್ಸಿಯು ಒಪ್ಪಿಕೊಳ್ಳಲು ಮುಂದಾಗುವ ಬಿಕ್ಕಟ್ಟಿನ ಕ್ಷಣದ ಒಂದು ಸಂದರ್ಭದಲ್ಲಿ, ಜೆಸ್ಸಿಯನ್ನು ಸ್ಪರ್ಶಿಸಲೆಂದು ಸೆಲೀನ್‌‌ ತನ್ನ ಕೈಯನ್ನು ಮುಂದೆ ಚಾಚುತ್ತಾಳೆ, ಆದರೆ ಅವಳೆಡೆಗೆ ಅವನು ತಿರುಗಿದ ತಕ್ಷಣ ಕೈಯನ್ನು ಹಿಂದೆಳೆದುಕೊಳ್ಳುತ್ತಾಳೆ.

ನಿರ್ಣಾಯಕ ದೃಶ್ಯದಲ್ಲಿ, ಸೆಲೀನ್‌‌ ಮತ್ತು ಜೆಸ್ಸಿ ಇಬ್ಬರೂ ಸೆಲೀನ್‌‌ ವಾಸವಿರುವ ಗೃಹಸ್ತೋಮದೆಡೆಗೆ ಆಗಮಿಸುತ್ತಾರೆ. ಸೆಲೀನ್‌ ಗಿಟಾರ್‌‌‌ನ್ನು ನುಡಿಸಬಲ್ಲಳು ಎಂಬುದು ಜೆಸ್ಸಿಗೆ ಗೊತ್ತಾಗಿರುತ್ತದೆ; ತನಗಾಗಿ ಒಂದು ತ್ರಿಕಾಲದ ನೃತ್ಯಗೀತೆಯನ್ನು ನುಡಿಸುವಂತೆ ಅವನು ಅವಳ ಮನವೊಲಿಸುತ್ತಾನೆ. ತ್ರಿಕಾಲದ ನೃತ್ಯಗೀತೆಯು (ಡೆಲ್ಪಿಯಿಂದ ಬರೆಯಲ್ಪಟ್ಟ ಗೀತೆ) ಅವರ ಸಂಕ್ಷಿಪ್ತ ಮುಖಾಮುಖಿಯ ಕುರಿತಾದ ವಿಷಯಗಳನ್ನು ತನ್ನ ಸಾಹಿತ್ಯದ ಮೂಲಕ ಹೊರಗೆಡಹುತ್ತದೆ.

ಆಗ ಜೆಸ್ಸಿಯು ಸ್ಟೀರಿಯೋ ಸಂಗೀತ ಸಾಧನದಲ್ಲಿ ಒಂದು ನೀನಾ ಸಿಮೋನ್‌‌ CDಗೆ ಚಾಲನೆ ನೀಡುತ್ತಾನೆ. ಅದರಲ್ಲಿನ "ಜಸ್ಟ್‌ ಇನ್‌ ಟೈಮ್‌‌" ಎಂಬ ಗೀತೆಗೆ ಸೆಲೀನ್‌‌ ಸ್ವಯಂಪ್ರೇರಿತಳಾಗಿ ನೃತ್ಯಮಾಡಲು ಶುರುಮಾಡಿದರೆ, ಜೆಸ್ಸಿಯು ಅವಳನ್ನೇ ನೋಡತೊಡಗುತ್ತಾನೆ. ಸಿಮೋನ್‌‌ನ್ನು ಸೆಲೀನ್‌‌ ಅನುಕರಿಸುತ್ತಲೇ, ಜೆಸ್ಸಿಯ ಬಳಿ ಬಂದು "ಪುಟ್ಟಾ... ನೀನು ಆ ವಿಮಾನವನ್ನು ತಪ್ಪಿಸಿಕೊಳ್ಳಲಿದ್ದೀಯಾ" ಎಂಬುದಾಗಿ ಮೆಲುದನಿಯಲ್ಲಿ ಉಚ್ಚರಿಸುತ್ತಾಳೆ. ಕ್ಯಾಮರಾವು ನಿಧಾನವಾಗಿ ಅಡ್ಡಚಾಲನೆ ಮಾಡಿ ಕೇಂದ್ರೀಕರಿಸಿದಂತೆ, ಜೆಸ್ಸಿಯು ತನ್ನ ಮದುವೆ ಉಂಗುರವನ್ನು ಆಡಿಸುತ್ತಾ ಅಧೈರ್ಯದಿಂದ ಚಡಪಡಿಸುತ್ತಲೇ ನಗುತ್ತಾನೆ ಮತ್ತು "ನನಗೆ ಗೊತ್ತು" ಎಂದು ಹೇಳುವ ಮೂಲಕ ಅನಿಶ್ಚಿತವಾಗಿ ಪ್ರತಿಕ್ರಿಯಿಸುತ್ತಾನೆ. ಅವನು ಅಲ್ಲಿಯೇ ಉಳಿಯುತ್ತಾನೋ ಅಥವಾ ಅಲ್ಲಿಂದ ಬಿಟ್ಟು ತೆರಳುತ್ತಾನೋ ಎಂಬುದನ್ನು ವೀಕ್ಷಕರ ಊಹೆಗೇ ಬಿಡಲಾಗುತ್ತದೆ; ಒಂದು ರೀತಿಯಲ್ಲಿ ಇದು, ಚಲನಚಿತ್ರದ ಪ್ರಾರಂಭದಲ್ಲಿ ಜೆಸ್ಸಿಯನ್ನು ಸಂದರ್ಶಿಸಿದ ಮೂವರು ಪತ್ರಕರ್ತರ ಮನದಲ್ಲಿ ಯಾವಬಗೆಯ ಊಹೆಗಳಿದ್ದವೋ ಆ ರೀತಿಯಲ್ಲಿರುತ್ತದೆ.

ಪಾತ್ರವರ್ಗ

ಬದಲಾಯಿಸಿ
  • ಜೆಸ್ಸಿಯ ಪಾತ್ರದಲ್ಲಿ ಎಥಾನ್‌ ಹಾಕ್‌‌
  • ಸೆಲೀನ್‌‌ ಪಾತ್ರದಲ್ಲಿ ಜ್ಯೂಲೀ ಡೆಲ್ಪಿ
  • ಪುಸ್ತಕದ ಮಳಿಗೆಯ ವ್ಯವಸ್ಥಾಪಕನ ಪಾತ್ರದಲ್ಲಿ ವೆರ್ನಾನ್‌ ಡೊಬ್ಟ್‌ಚೆಫ್‌‌
  • ಮೊದಲನೇ ಪತ್ರಕರ್ತನ ಪಾತ್ರದಲ್ಲಿ ಲೂಯಿಸ್‌ ಲೆಮೋಯ್ನೆ ಟೋರೆಸ್‌‌
  • ಎರಡನೇ ಪತ್ರಕರ್ತನ ಪಾತ್ರದಲ್ಲಿ ರೊಡೊಲ್ಫೆ ಪೌಲಿ
  • ಪರಿಚಾರಿಕೆಯ ಪಾತ್ರದಲ್ಲಿ ಮೇರಿಯೇನ್‌ ಪ್ಲಾಸ್ಟೀಗ್‌‌
  • ಫಿಲಿಪ್‌‌ ಪಾತ್ರದಲ್ಲಿ ಡಿಯಾಬೊಲೊ
  • ದೋಣಿಯ ಪರಿಚಾರಕನ ಪಾತ್ರದಲ್ಲಿ ಡೆನಿಸ್‌ ಎವ್ರಾರ್ಡ್‌‌
  • ಸರಳು ಚೌಕಟ್ಟಿನ ಒಲೆಯ ಬಳಿಯಿರುವ ವ್ಯಕ್ತಿಯಾಗಿ ಆಲ್ಬರ್ಟ್‌ ಡೆಲ್ಪಿ
  • ಅಂಗಳದಲ್ಲಿನ ಮಹಿಳೆಯ ಪಾತ್ರದಲ್ಲಿ ಮೇರಿ ಪಿಲೆಟ್‌

ತಯಾರಿಕೆ

ಬದಲಾಯಿಸಿ

15 ದಿನಗಳ ಅವಧಿಯಲ್ಲಿ ಸುಮಾರು 2 ದಶಲಕ್ಷ US$ಗಳ ಒಂದು ಅಂದಾಜುವೆಚ್ಚದಲ್ಲಿ ಈ ಚಲನಚಿತ್ರವು ಚಿತ್ರೀಕರಿಸಲ್ಪಟ್ಟಿತು.[] ಸದರಿ ಚಲನಚಿತ್ರದ ತಯಾರಿಕೆಗೆ ಸಂಬಂಧಿಸಿದ ಕಾರಣದ ಕುರಿತಾಗಿ ಹಾಕ್‌‌ ಈ ರೀತಿ ವಿವರಣೆ ನೀಡಿದ:

It's not like anybody was begging us to make a second film. We obviously did it because we wanted to.[]

ದೃಶ್ಯಗಳ ಜಾಡುಹಿಡಿಯುವಿಕೆಗೆ ಸಂಬಂಧಿಸಿದಂತೆ, ಈ ಚಲನಚಿತ್ರದಲ್ಲಿ ಸ್ಟೆಡಿಕ್ಯಾಮ್‌‌ ಎಂದು ಕರೆಯಲ್ಪಡುವ ಉನ್ನತ ದರ್ಜೆಯ ಕ್ಯಾಮರಾದ ಬಳಕೆ ಮಾಡಿದ್ದು ಗಮನಾರ್ಹವಾಗಿತ್ತು; ಅಷ್ಟೇ ಅಲ್ಲ, ಸುದೀರ್ಘ ಟೇಕ್‌ಗಳನ್ನು ಚಿತ್ರದಲ್ಲಿ ಬಳಸಿರುವುದು ಈ ಚಿತ್ರದ ಗಮನಸೆಳೆಯುವ ಅಂಶವಾಗಿದ್ದು, ಸ್ಟೆಡಿಕ್ಯಾಮ್‌ ಬಳಸಿ ತೆಗೆಯಲಾದ 11 ನಿಮಿಷಗಳಷ್ಟು ಅವಧಿಯ ಅತಿ ಉದ್ದದ ಟೇಕ್‌ ಈ ಚಿತ್ರದಲ್ಲಿದೆ.[] ಈ ಚಿತ್ರದ ಇನ್ನೂ ಗಮನಾರ್ಹ ಅಂಶವೆಂದರೆ, ಈ ಚಲನಚಿತ್ರವು ಮೂಲಭೂತವಾಗಿ ನಿಜಾವಧಿಯಲ್ಲಿ ನಡೆಯುತ್ತದೆ, ಅಂದರೆ, ಕಥೆಯಲ್ಲಿ ಕಳೆದುಹೋಗುವ ಸಮಯವೂ ಸಹ ಚಲನಚಿತ್ರದ ಓಟದ ಸಮಯವಾಗಿರುತ್ತದೆ. ಮೇಲಾಗಿ, ಬಿಫೋರ್‌ ಸನ್‌ರೈಸ್‌ ಚಿತ್ರವು ಬಿಡುಗಡೆಯಾದ ಒಂಬತ್ತು ವರ್ಷಗಳ ನಂತರ ಅದರ ಉತ್ತರಭಾಗವೂ ಬಿಡುಗಡೆಯಾಯಿತು; ಇದು ಮೊದಲ ಚಲನಚಿತ್ರದ ಘಟನೆಗಳು ಆದಾಗಿನಿಂದ ಕಥಾವಸ್ತುವಿನಲ್ಲಿ ಸರಿದುಹೋದ ಅದೇ ಪ್ರಮಾಣದ ಸಮಯವೂ ಆಗಿತ್ತು.

ಇದೇ ಸರಣಿಯಲ್ಲಿ ಮತ್ತಷ್ಟು ಚಲನಚಿತ್ರಗಳು ಬರುವ ಸಾಧ್ಯತೆಯನ್ನು ಹಾಕ್‌‌ ಸೂಚಿಸಿದ್ದಾನೆ. ಅವರ ಸಂಬಂಧದ ಅವಧಿಯನ್ನು ಮತ್ತಷ್ಟು ಬೆಳೆಸಿದರೆ ಚೆನ್ನಾಗಿರುತ್ತದೆ ಎಂಬುದಾಗಿ ತಿಳಿಸಿದ.[] ಉಮಾ ಥರ್ಮಾನ್‌‌‌‌ಳಿಂದ ಹಾಕ್‌‌ ವಿಚ್ಛೇದನವನ್ನು ಪಡೆದುದನ್ನು ಅನುಸರಿಸಿ ಈ ಚಲನಚಿತ್ರ ಕಾಣಿಸಿಕೊಂಡಿತು. ಚಲನಚಿತ್ರದಲ್ಲಿನ ಜೆಸ್ಸಿಯ ಪಾತ್ರ ಹಾಗೂ ಹಾಕ್‌ನ ವೈಯಕ್ತಿಕ ಜೀವನದ ನಡುವೆ ಹೋಲಿಕೆಗಳಿವೆ ಎಂದು ಕೆಲವೊಂದು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟರು.[] ಇದಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡ ವಿವರಣೆಯೊಂದರ ಅನುಸಾರ, ಹಾಕ್‌‌ ಮತ್ತು ಡೆಲ್ಪಿ ಇಬ್ಬರೂ ಸಹ ತಂತಮ್ಮ ಖಾಸಗಿ ಜೀವನಗಳ ಅಂಶಗಳನ್ನು ಚಿತ್ರಕಥೆಯೊಳಗೆ[][] ಅಳವಡಿಸಿದ್ದಾರೆ, ಡೆಲ್ಪಿಯು ಹಲವಾರು ವರ್ಷಗಳವರೆಗೆ ನ್ಯೂಯಾರ್ಕ್‌‌‌ ನಗರದಲ್ಲಿ ನೆಲೆಸಿದ್ದು ಇದಕ್ಕೆ ಪುಷ್ಟಿನೀಡುತ್ತದೆ ಎಂಬ ಅಂಶವು ಗಮನ ಸೆಳೆಯುವಂತಿತ್ತು. ಡೆಲ್ಪಿಯೂ ಸಹ ಎರಡು ಗೀತೆಗಳನ್ನು ಬರೆದಿದ್ದು ಅವನ್ನು ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಮೂರನೆಯ ಹಾಡನ್ನು ಚಲನಚಿತ್ರದ ಮುಕ್ತಾಯ ಸ್ಮರಣೆಗಳಲ್ಲಿ ಹಾಗೂ ಧ್ವನಿಪಥದಲ್ಲಿ ಸೇರಿಸಲಾಯಿತು.

ಬಿಡುಗಡೆ

ಬದಲಾಯಿಸಿ

2004ರ ಫೆಬ್ರುವರಿಯಲ್ಲಿ ನಡೆದ ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಫೋರ್‌ ಸನ್‌ಸೆಟ್‌ ಚಿತ್ರದ ಪೂರ್ವಪ್ರದರ್ಶನ ನಡೆಯಿತು, 2004ರ ಜುಲೈ 2ರಂದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸೀಮಿತ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಅದು ಬಿಡುಗಡೆಯಾಯಿತು.

ಗಲ್ಲಾ ಪೆಟ್ಟಿಗೆ

ಬದಲಾಯಿಸಿ

ಚಲನಚಿತ್ರವು ತನ್ನ ಆರಂಭಿಕ ವಾರಾಂತ್ಯದಲ್ಲೇ, ಪ್ರತಿ ಚಿತ್ರಮಂದಿರಕ್ಕೆ ಸರಾಸರಿ 10,971 $ನಷ್ಟು ಮೊತ್ತದ ಅನುಪಾತದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ 20 ಚಿತ್ರಮಂದಿರಗಳಲ್ಲಿ 219,425 $ನಷ್ಟು ಮೊತ್ತದ ಹಣವನ್ನು ಸಂಗ್ರಹಿಸಿತು. ಚಿತ್ರಮಂದಿರಗಳಲ್ಲಿನ ತನ್ನ ಸಮಗ್ರ ಓಟದಲ್ಲಿ, ಈ ಚಲನಚಿತ್ರವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ 5.8 ದಶಲಕ್ಷ $ನಷ್ಟು ಹಣವನ್ನು ಸಂಗ್ರಹಿಸಿದರೆ, ವಿಶ್ವಾದ್ಯಂತ ಸುಮಾರು 16 ದಶಲಕ್ಷ $ನಷ್ಟು ಹಣವನ್ನು ಸಂಗ್ರಹಿಸಿತು.[]

ವಿಮರ್ಶಾ ಮನ್ನಣೆ

ಬದಲಾಯಿಸಿ

ಬಿಫೋರ್‌ ಸನ್‌ಸೆಟ್‌ ಚಿತ್ರವು ವಿಮರ್ಶಕರ ವಲಯದಿಂದ ಒಂದು ಅತೀವವಾದ ಗುಣಾತ್ಮಕ ಮನ್ನಣೆಯನ್ನು ಸ್ವೀಕರಿಸಿತು. 155 ವಿಮರ್ಶಾ-ಅಭಿಪ್ರಾಯಗಳನ್ನು[] ಆಧರಿಸಿ ರಾಟನ್‌‌ ಟೊಮೆಟೋಸ್‌‌ ವತಿಯಿಂದ ರೂಪಿಸಲಾಗಿರುವ ಕೋಷ್ಟಕದಲ್ಲಿ, ಈ ಚಲನಚಿತ್ರದ ಪರವಾಗಿ 95%ನಷ್ಟು ಶ್ರೇಯಾಂಕವು ದಾಖಲಾಗಿದೆ. ಅಷ್ಟೇ ಅಲ್ಲ, ಮುಖ್ಯವಾಹಿನಿಯ ಪ್ರಕಟಣೆಗಳಿಂದ ಪಡೆಯಲಾದ 39 ವಿಮರ್ಶಾ-ಅಭಿಪ್ರಾಯಗಳನ್ನು ಆಧರಿಸಿ ಮೆಟಾಕ್ರಿಟಿಕ್‌‌ ವತಿಯಿಂದ ರೂಪಿಸಲಾದ ಕೋಷ್ಟಕದಲ್ಲಿ 100 ಅಂಕಗಳ ಪೈಕಿ 90 ಅಂಕವನ್ನು ಗಳಿಸುವ ಮೂಲಕ, ಒಂದು ಯುಕ್ತವಾಗಿ ತೂಗಿದ ಸರಾಸರಿ ಅಂಕವನ್ನು ಇದು ಪಡೆದುಕೊಂಡಿದೆ.[] 28 ವಿಮರ್ಶಕರು ರೂಪಿಸಿರುವ 2004ರ ಅತ್ಯುತ್ತಮ ಚಲನಚಿತ್ರಗಳ ಪೈಕಿಯ ಅಗ್ರಗಣ್ಯ 10 ಚಿತ್ರಗಳ ಪಟ್ಟಿಗಳಲ್ಲಿಯೂ ಇದು ಕಾಣಿಸಿಕೊಂಡಿದೆ.[] 2008ರಲ್ಲಿ ನಡೆಸಲಾದ ಎಂಪೈರ್‌‌ ಜನಮತಸಂಗ್ರಹದ ಸಾರ್ವಕಾಲಿಕ ಮಹೋನ್ನತ ಚಲನಚಿತ್ರಗಳ ಪೈಕಿ, ಈ ಚಲನಚಿತ್ರವು 110ನೇ ಚಿತ್ರವಾಗಿ ಸ್ಥಾನವನ್ನು ಪಡೆದುಕೊಂಡಿತು.[೧೦]

ಈ ಚಲನಚಿತ್ರವನ್ನು ಮೂಲ ಚಿತ್ರದೊಂದಿಗೆ ಹೋಲಿಸುವಾಗ, ರೋಜರ್‌ ಎಬರ್ಟ್‌ ಎಂಬ ಚಲನಚಿತ್ರ ವಿಮರ್ಶಕ ಈ ರೀತಿಯಲ್ಲಿ ಬರೆದ: "ಒಳ್ಳೆಯ ಸಂಭಾಷಣೆಯು ಹೊಂದಿರುವ ಆಕರ್ಷಕ ಶಕ್ತಿಗೆ ಸಂಬಂಧಿಸಿ ಹೇಳುವುದಾದರೆ, ಬಿಫೋರ್‌ ಸನ್‌ರೈಸ್‌ ಚಿತ್ರವು ಒಂದು ಗಮನಾರ್ಹವಾದ ಸಂಭ್ರಮಾಚರಣೆಯಾಗಿತ್ತು. ಆದರೆ ಬಿಫೋರ್‌ ಸನ್‌ಸೆಟ್‌ ಚಿತ್ರವು ಈ ನಿಟ್ಟಿನಲ್ಲಿ ಉತ್ತಮವಾಗಿದೆ; ಪ್ರಾಯಶಃ, ಇದರಲ್ಲಿನ ಪಾತ್ರಗಳು ವಯಸ್ಸಾಗಿ ಪ್ರಬುದ್ಧತೆಯನ್ನು ಹಾಗೂ ವಿವೇಚನೆಯನ್ನು ಹೊಂದಿರುವುದು, ಪ್ರಾಯಶಃ ಕಳೆದುಕೊಳ್ಳುವ (ಅಥವಾ ಜಯಿಸುವ) ಅವಕಾಶಗಳನ್ನು ಅವು ಹೆಚ್ಚು ಹೊಂದಿರುವುದು, ಮತ್ತು ಪ್ರಾಯಶಃ ಹಾಕ್‌‌ ಮತ್ತು ಡೆಲ್ಪಿ ಸ್ವತಃ ಸಂಭಾಷಣೆಯನ್ನು ಬರೆದಿರುವುದು ಇದಕ್ಕೆ ಕಾರಣವಾಗಿದೆ ಎನಿಸುತ್ತದೆ."[೧೧] ಲಾಸ್‌ ಏಂಜಲೀಸ್‌ ಟೈಮ್ಸ್‌‌ ಪತ್ರಿಕೆಯ ಮನೋಹ್ಲಾ ಡರ್ಗಿಸ್‌ ಈ ಚಿತ್ರವನ್ನು ಹೊಗಳುತ್ತಾ, "ಇದು ಒಂದು ಆಳವಾದ, ನಿಜವಾದ ಕಲಾಕೃತಿಯಾಗಿದ್ದು, ಮೊದಲನೆಯದನ್ನು ಈ ನಿಟ್ಟಿನಲ್ಲಿ ಮೀರಿಸುತ್ತದೆ" ಎಂದು ಹೇಳಿದ್ದಲ್ಲದೆ, "ಅಮೆರಿಕಾದ ಚಿತ್ರರಂಗದ ಉತ್ತಮಿಕೆಯ ಮೇಲೆ ನಂಬಿಕೆಯಿರಿಸುವಂಥ" ಚಲನಚಿತ್ರವೊಂದನ್ನು ತಯಾರಿಸಿದ್ದಕ್ಕೆ ಸಂಬಂಧಿಸಿ ನಿರ್ದೇಶಕ ಲಿಂಕ್ಲೇಟರ್‌ಗೆ ಶ್ಲಾಘನೆಯನ್ನು ನೀಡಿದ್ದು ಗಮನಾರ್ಹವಾಗಿತ್ತು.[೧೨]

ಕಲಾವಿದರ ಅಭಿನಯವನ್ನು ವಿಮರ್ಶಿಸುವಾಗ, ರೋಲಿಂಗ್‌ ಸ್ಟೋನ್‌‌ ನಿಯತಕಾಲಿಕದ ಪೀಟರ್‌ ಟ್ರಾವರ್ಸ್‌‌ ಎಂಬಾತ ಹೀಗೆ ಬರೆದ: "ಹಾಕ್‌‌ ಮತ್ತು ಡೆಲ್ಪಿ ಇಬ್ಬರೂ ಸಹ ಮಾತನಾಡಿದ ಮತ್ತು ಮಾತನಾಡದ ಪದಗಳಲ್ಲಿ ಸೂಕ್ಷ್ಮ ವ್ಯತ್ಯಾಸ, ಕಲೆ ಮತ್ತು ಕಾಮಲಕ್ಷಣವನ್ನು ಕಂಡುಕೊಳ್ಳುತ್ತಾರೆ. ಈ ಕಲಾವಿದರು ಚಿತ್ರದಲ್ಲಿ ಮಿಂಚುತ್ತಾರೆ" ಎಂಬುದಾಗಿ ಬರೆದ.[೧೩] ದಿ ಅಬ್ಸರ್ವರ್‌‌ ಪತ್ರಿಕೆಯ ಫಿಲಿಪ್‌‌ ಫ್ರೆಂಚ್‌ ಎಂಬಾತ ಈ ಕುರಿತು ಬರೆಯುತ್ತಾ, "ಹಾಕ್‌‌ ಮತ್ತು ಡೆಲ್ಪಿ ಈ ಇಬ್ಬರ ಅಭಿನಯವೂ ಅಮೋಘವಾಗಿದ್ದು, ಅವರ ಪಾತ್ರ ನಿರ್ವಹಣೆಗಳು ನಿಜವಾದ ಆಳವನ್ನು ಹೊಂದಿವೆ. ಈ ಬಾರಿಯೂ ಸಹ‌‌, ರಿಚರ್ಡ್‌ ಲಿಂಕ್ಲೇಟರ್‌‌‌‌‌‌ ನ ಚಲನಚಿತ್ರವೊಂದರಲ್ಲಿನ ಕಾಲ್ಪನಿಕ ಸೃಷ್ಟಿಗಳಾಗಿ ಕಾಣಿಸಿಕೊಳ್ಳುವುದನ್ನೂ ಮೀರಿಸಿ, ಅವರಿಬ್ಬರೂ ಉತ್ತಮಿಕೆಯನ್ನು ಮೆರೆದಿದ್ದಾರೆ. ಅವರೀಗ ಸದರಿ ಬರಹಗಾರಿಕೆಗೆ ಸಂಬಂಧಿಸಿದ ಮನ್ನಣೆಯನ್ನೂ ಅವನೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಕಳೆದ ದಶಕದಲ್ಲಿ ತಾವು ಹೊಂದಿದ ಅನುಭವಗಳ ಬಹುಪಾಲನ್ನು ತಮ್ಮ ಪಾತ್ರಗಳೊಳಗೆ ಮಿಳಿತಗೊಳಿಸಿದ್ದಾರೆ" ಎಂದು ತಿಳಿಸಿದ.[೧೪]

ಚಿತ್ರಕಥೆಯ ಉತ್ತಮ ಗುಣಗಳ ಕುರಿತು ಬರೆಯುತ್ತಾ, ದಿ ನ್ಯೂಯಾರ್ಕ್‌‌‌ ಟೈಮ್ಸ್‌‌ ಪತ್ರಿಕೆಯ A.O. ಸ್ಕಾಟ್‌‌ ಎಂಬಾತ ಈ ರೀತಿ ಉಲ್ಲೇಖಿಸಿದ: "ಇದು ಕೆಲವೊಮ್ಮೆ ಹುಚ್ಚುಹಿಡಿಸುವ ರೀತಿಯಲ್ಲಿದ್ದರೂ, ಮೋಹಗೊಳಿಸುವ ಗುಣವನ್ನೂ ಹೊಂದಿದೆ. ಸಿನಿಮಾ ಬರಹಗಾರಿಕೆಯ ವಾಡಿಕೆಯ ಅಗತ್ಯಗಳಿಗೆ ಸಂಬಂಧಿಸಿದಂತಿರುವ ಪ್ರಾಸಂಗಿಕ ಉಪೇಕ್ಷೆಯನ್ನು ಇದು ಹೊಂದಿರುವುದರಿಂದ ಈ ಗುಣವನ್ನು ಅದು ಹೊರಹೊಮ್ಮಿಸುತ್ತದೆ." ಆತ ತನ್ನ ಅಭಿಪ್ರಾಯವನ್ನು ಮತ್ತಷ್ಟು ಮುಂದುವರೆಸುತ್ತಾ, "ತಮ್ಮ ಮಾತಿನ ಅರ್ಥವೇನು ಎಂಬುದನ್ನಷ್ಟೇ ಅವರು ಹೇಳಲಾರರೇ? ನೀವು ಹೇಳಬಲ್ಲಿರಾ? ಅಷ್ಟಕ್ಕೂ, ಭಾಷೆ ಎಂಬುದು ಕೇವಲ ಅಂಶಗಳು ಮತ್ತು ಅರ್ಥಗಳಿಗೆ ಮಾತ್ರವೇ ಸಂಬಂಧಿಸಿರುವಂಥದ್ದಲ್ಲ. ಹೌದು, ಇದು ಸಂವಹನದ ಒಂದು ಮಾಧ್ಯಮವಾಗಿದೆ; ಆದರೆ ಇದು ಬಿಟ್ಟುಬಿಡುವಿಕೆ, ತಪ್ಪು ನಿರ್ದೇಶನ, ಆತ್ಮ-ರಕ್ಷಣೆ ಮತ್ತು ಸಾಧಾರಣ ಗೊಂದಲದ ಮಾಧ್ಯಮವೂ ಆಗಿದೆ. ಇವುಗಳೆಲ್ಲವೂ ಈ ಚಲನಚಿತ್ರದ ವಿಷಯ-ವಸ್ತುವಿನಲ್ಲಿ ಅಡಕವಾಗಿದ್ದು, ಅದು ಬೆಳ್ಳಿತೆರೆಯ ಮೇಲೆ ಅಥವಾ ಪುಸ್ತಕಗಳಲ್ಲಿ ಅಪರೂಪವಾಗಿ ಮಾನ್ಯಮಾಡಲ್ಪಡುವ ಒಂದು ಆಳವಾದ ಸತ್ಯವನ್ನು ಸೆರೆಹಿಡಿಯುತ್ತದೆ" ಎಂದು ಉಲ್ಲೇಖಿಸಿದ.[೧೫]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
ಪ್ರಶಸ್ತಿಗಳು
  • 2004ರ ಬಾಸ್ಟನ್‌ ಸೊಸೈಟಿ ಆಫ್‌‌ ಫಿಲ್ಮ್‌ ಕ್ರಿಟಿಕ್ಸ್‌‌ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ (2ನೇ ಸ್ಥಾನ)
ನಾಮನಿರ್ದೇಶನಗಳು
  • 2004ರ 77ನೇ ಅಕಾಡೆಮಿ ಪ್ರಶಸ್ತಿಗಳು - ಅತ್ಯುತ್ತಮ ಬರಹಗಾರಿಕೆ (ರೂಪಾಂತರಿತ ಚಿತ್ರಕಥೆ); ರಿಚರ್ಡ್‌ ಲಿಂಕ್ಲೇಟರ್‌‌, ಎಥಾನ್‌ ಹಾಕ್‌‌, ಜ್ಯೂಲೀ ಡೆಲ್ಪಿ, ಮತ್ತು ಕಿಮ್‌ ಕಿರ್ಜಾನ್‌‌ ಮೊದಲಾದವರಿಗೆ ಇದು ದಕ್ಕಿತು.
  • 2004ರ ಇಂಡಿಪೆಂಡೆಂಟ್‌ ಸ್ಪಿರಿಟ್‌ ಪ್ರಶಸ್ತಿ - ಅತ್ಯುತ್ತಮ ಚಿತ್ರಕಥೆಗಾಗಿ ರಿಚರ್ಡ್‌ ಲಿಂಕ್ಲೇಟರ್‌‌, ಎಥಾನ್‌ ಹಾಕ್‌‌, ಮತ್ತು ಜ್ಯೂಲೀ ಡೆಲ್ಪಿ ಮೊದಲಾದವರಿಗೆ ದಕ್ಕಿತು.
  • 2005ರ ರೈಟರ್ಸ್‌ ಗಿಲ್ಡ್‌‌ ಆಫ್‌‌ ಅಮೆರಿಕಾ ಪ್ರಶಸ್ತಿ - ಅತ್ಯುತ್ತಮ ರೂಪಾಂತರಿತ ಚಿತ್ರಕಥೆಗಾಗಿ ರಿಚರ್ಡ್‌ ಲಿಂಕ್ಲೇಟರ್‌‌, ಎಥಾನ್‌ ಹಾಕ್‌‌, ಜ್ಯೂಲೀ ಡೆಲ್ಪಿ, ಮತ್ತು ಕಿಮ್‌ ಕಿರ್ಜಾನ್‌‌ ಮೊದಲಾದವರಿಗೆ ದಕ್ಕಿತು.
  • 2004ರ ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ - ಗೋಲ್ಡನ್‌ ಬೇರ್‌‌
  • 2004ರ ಗೋಥಾಮ್‌‌ ಪ್ರಶಸ್ತಿಗಳು - ಅತ್ಯುತ್ತಮ ಚಲನಚಿತ್ರ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Before Sunset (2004)". Box Office Mojo. Retrieved 2009-12-28. {{cite web}}: Italic or bold markup not allowed in: |publisher= (help)
  2. ೨.೦ ೨.೧ ೨.೨ Lee Marshall (2004-07-19). "Love that goes with the flow". London: Telegraph. Retrieved 2007-08-11. {{cite news}}: Italic or bold markup not allowed in: |publisher= (help)
  3. Geoffrey Macnab (2005-10-08). "Forget me not". London: The Guardian. Retrieved 2007-08-10. {{cite news}}: Italic or bold markup not allowed in: |publisher= (help)
  4. James Wood (2005-06-11). "The last word". London: The Guardian. Retrieved 2007-08-10. {{cite news}}: Italic or bold markup not allowed in: |publisher= (help)
  5. Dan Halpern (2005-10-08). "Another sunrise". London: The Guardian. Retrieved 2009-12-28. {{cite news}}: Italic or bold markup not allowed in: |publisher= (help)
  6. S.F. Said (2004-07-09). "Keeping the dream alive". London: Telegraph. Archived from the original on 2008-12-06. Retrieved 2007-08-11. {{cite news}}: Italic or bold markup not allowed in: |publisher= (help)
  7. "Before Sunset Movie Reviews, Pictures - Rotten Tomatoes". Rotten Tomatoes. Retrieved 2010-03-23.
  8. "Before Sunset reviews at Metacritic.com". Metacritic. Archived from the original on 2009-08-31. Retrieved 2009-11-19.
  9. "Metacritic: 2004 Film Critic Top Ten Lists". Metacritic. Archived from the original on 2008-05-27. Retrieved 2009-11-19.
  10. "Empire Features - 500 Greatest Movies of All Time". Empire. Retrieved 2010-01-25. {{cite web}}: Italic or bold markup not allowed in: |publisher= (help)
  11. "Before Sunset :: rogerebert.com :: Reviews". Chicago Sun-Times. Archived from the original on 2013-01-27. Retrieved 2009-12-28. {{cite web}}: Italic or bold markup not allowed in: |publisher= (help)
  12. "'Before Sunset' - Movie Review". Los Angeles Times. Retrieved 2009-12-28. {{cite web}}: Italic or bold markup not allowed in: |publisher= (help)
  13. "Before Sunset : Review : Rolling Stone". Rolling Stone. Archived from the original on 2008-12-04. Retrieved 2009-12-28. {{cite web}}: Italic or bold markup not allowed in: |publisher= (help)
  14. French, Philip (2004-07-25). "Brief re-encounter". London: The Observer. Retrieved 2009-12-28. {{cite news}}: Italic or bold markup not allowed in: |publisher= (help)
  15. Scott, A. O. (2004-07-02). "FILM REVIEW: Reunited, Still Talking, Still Uneasy". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-12-28. {{cite news}}: Italic or bold markup not allowed in: |publisher= (help)


ಬಾಹ್ಯ ಕೊಂಡಿಗಳು

ಬದಲಾಯಿಸಿ