ಬಾಲಮಣಿ ಅಮ್ಮ

ಭಾರತೀಯ ಬರಹಗಾರ ಮತ್ತು ಕವಿ

ನಲಪಾಟ್ ಬಾಲಮಣಿ ಅಮ್ಮ (೧೯ ಜುಲೈ ೧೯೦೯-೨೯ ಸೆಪ್ಟೆಂಬರ್ ೨೦೦೪) ಮಲಯಾಳಂ ಭಾಷೆಯ ಭಾರತೀಯ ಕವಯತ್ರಿ. ಅವರು ಸಮೃದ್ಧ ಬರಹಗಾರರಾಗಿದ್ದರು ಮತ್ತು "ಮಾತೃತ್ವದ ಕವಯತ್ರಿ" []ಎಂದು ಹೆಸರಾಗಿದ್ದಾರೆ. ತಾಯಿ, ಮುತಾಸ್ಸಿ (ಅಜ್ಜಿ) ಮತ್ತು ಮಝುವಿಂಟೆ ಕಥಾ (ಏಕ್ಸ್ ಕಥೆಗಳು) ಅವರ ಕೆಲವು ಪ್ರಸಿದ್ಧ ಕೃತಿಗಳಾಗಿವೆ[]. ಪದ್ಮಭೂಷಣ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎಜುಥಾಚನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮತ್ತು ಗೌರವಗಳನ್ನು ಅವರು ಸ್ವೀಕರಿಸಿದ್ದಾರೆ.[]

ಬಾಲಮಣಿ ಅಮ್ಮ
ಜನನ೧೯ ಜುಲೈ ೧೯೦೯
ಪುನ್ನಯೂರ್ಕುಲಂ, ಮಲಬಾರ್ ಜಿಲ್ಲೆ, ಮದ್ರಾಸ್ ಪ್ರೆಸಿಡೆನ್ಸಿ, ಭಾರತ
ಮರಣ೨೯ ಸೆಪ್ಟೆಂಬರ್ ೨೦೦೪
ಕೊಚ್ಚಿ, ಕೇರಳ, ಭಾರತ
ವೃತ್ತಿಕವಯತ್ರಿ
ಪ್ರಕಾರ/ಶೈಲಿಕವನ
ಪ್ರಮುಖ ಪ್ರಶಸ್ತಿ(ಗಳು)ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಆಸನ್ ಸ್ಮಾರಕ ಕವಿತಾ ಪುರಸ್ಕಾರಂ
ಬಾಳ ಸಂಗಾತಿವಿ.ಎಂ.ನಾಯರ್
ಮಕ್ಕಳುಕಮಲಾ ಸುರಯ್ಯ, ಸುಲೋಚನ, ಮೋಹನ್ದಾಸ್, ಶ್ಯಾಮ್ ಸುಂದರ್

ಜೀವನ ಚರಿತ್ರೆ

ಬದಲಾಯಿಸಿ

ಬಾಲಮಣಿ ಅಮ್ಮ ೧೯ ಜುಲೈ ೧೯೦೯ ರಂದು ಕೇರಳದ ತ್ರಿಸ್ಸೂರು ಜಿಲ್ಲೆಯ ಪುನ್ನಯೂರ್ಕುಲಂನಲ್ಲಿರುವ ತನ್ನ ಪೂರ್ವಜರ ಮನೆಯಾದ ನಲಪಾಟ್ನಲ್ಲಿ ಚಿತ್ತಾಂಜೂರ್ ಕುನ್ಹುನ್ನಿ ರಾಜ ಮತ್ತು ನಲಪಾಟ್ ಕೋಚುಕುಟ್ಟಿ ಅಮ್ಮಾ ಇವರಿಗೆ ಜನಿಸಿದರು. ಅವಳು ಯಾವುದೇ ಔಪಚಾರಿಕ ಶಿಕ್ಷಣವನ್ನು ಸ್ವೀಕರಿಸದಿದ್ದರೂ, ತನ್ನ ತಾಯಿಯ ಚಿಕ್ಕಪ್ಪ ಮತ್ತು ಕವಿ ನಲಪಾಟ್ ನಾರಾಯಣ ಮೆನನ್ ಮತ್ತು ಅವರ ಪುಸ್ತಕಗಳ ಸಂಗ್ರಹದಡಿಯಲ್ಲಿ ಆಕೆಯು ಕವಯತ್ರಿಯಾಗಲು ಸಹಾಯವಾಯಿತು. ಅವಳು ನಲಪಾತ್ ನಾರಾಯಣ ಮೆನನ್ ಮತ್ತು ಕವಿ ವಲ್ಲತೋಲ್ ನಾರಾಯಣ ಮೆನನ್ರಿಂದ ಪ್ರಭಾವಿತಳಾಗಿದ್ದಳು. ಬಾಲಮಣಿ ಅಮ್ಮ ಇವರಿಗೆ ವಿ.ಎಂ. ನಾಯರ್ ಜೊತೆ ವಿವಾಹವಾಯಿತು.[]

ಕೃತಿಗಳು

ಬದಲಾಯಿಸಿ

ಬಾಲಮಣಿ ಅಮ್ಮ ೨೦ ಕ್ಕೂ ಹೆಚ್ಚು ಕವನ ಸಂಕಲನಗಳನ್ನು, ಹಲವಾರು ಗದ್ಯ ಕೃತಿಗಳನ್ನು, ಮತ್ತು ಅನುವಾದಗಳನ್ನು ಪ್ರಕಟಿಸಿದ್ದಾರೆ. ಅವರು ಚಿಕ್ಕ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಆಸಕ್ತಿ ಹೊಂದಿದ್ದರು ಮತ್ತು ಅವರ ಮೊದಲ ಕವಿತೆ "ಕೂಪ್ಪುಕೈ" ೧೯೩೦ ರಲ್ಲಿ ಪ್ರಕಟವಾಯಿತು. ಕೊಚ್ಚಿನ್ ಸಾಮ್ರಾಜ್ಯದ ಮಾಜಿ ಆಡಳಿತಗಾರರಾದ ಪರಿಶಿತ್ ಥಾಂಪುರಾನ್ರಿಂದ ಪ್ರಶಸ್ತಿ ಸಾಹಿತ್ಯ ನಿಪುಣ ಪುರಸ್ಕಾರವನ್ನು ಪಡೆದ ನಂತರ ಅವರು ಗುರುತಿಸಲ್ಪಟ್ಟರು. ನಿವೇದಯಂ ಇದು ೧೯೫೯ ರಿಂದ ೧೯೮೬ ರವರೆಗಿನ ಬಾಲಮಣಿ ಅಮ್ಮನ ಕವಿತೆಗಳ ಸಂಗ್ರಹವಾಗಿದೆ.[]

ಪ್ರಶಸ್ತಿಗಳು ಮತ್ತು ಮಾನ್ಯತೆ

ಬದಲಾಯಿಸಿ
  • ಸರಸ್ವತಿ ಸಮ್ಮಾನ್[]
  • ಮುತಾಸ್ಸಿ ಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೩)
  • ಮುತಾಸ್ಸಿ ಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೫)
  • ಅಸನ್ ಪ್ರೈಜ್ (೧೯೮೯)
  • ವಲ್ಲತೋಲ್ ಅವಾರ್ಡ್ (೧೯೯೩)
  • ಲಲಿತಾಂಬಿಕ ಅಂಧರ್ಜನ್ ಪ್ರಶಸ್ತಿ (೧೯೯೩) ಸೇರಿದಂತೆ ಹಲವಾರು ಸಾಹಿತ್ಯಿಕ ಗೌರವಗಳು ಮತ್ತು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ನಿವೇದ್ಯಾಮ್ (೧೯೯೫),
  • ಎಜುಥಾಚನ್ ಅವಾರ್ಡ್ (೧೯೯೫)
  • ಎನ್.ವಿ. ಕೃಷ್ಣ ವಾರಿಯರ್ ಪ್ರಶಸ್ತಿ (೧೯೯೭)
  • ೧೯೮೭ರಲ್ಲಿ ಪದ್ಮಭೂಷಣ ಪ್ರಶಸ್ತಿ.[]

ಕವನ ಸಂಕಲನಗಳು

ಬದಲಾಯಿಸಿ
  • ಕುಡುಂಬಿನಿ (೧೯೩೬)
  • ಧರ್ಮಮಾರ್ಗತಲ್ (೧೯೩೮)
  • ಸ್ತ್ರೀ ಹೃದಯಂ (೧೯೩೯)
  • ಪ್ರಭಾನ್ಕುರಮ್ (೧೯೪೨)
  • ಭಾವನಾಯಲ್ (೧೯೪೨)
  • ಊನ್ಜಲಿನ್ಮೆಲ್ (೧೯೪೬)
  • ಕಲ್ಲಿಕೋಟ್ಟಾ (೧೯೪೯)
  • ವೆಲ್ಲಿಚತಿಲ್ (೧೯೫೧)
  • ಅವರ್ ಪಾದುನ್ನು (೧೯೫೨)
  • ಪ್ರಾಣಮ್ (೧೯೫೪)
  • ಲೋಕಂತರಂಗಲ್ಲ್ (೧೯೫೫)
  • ಸೋಪನಮ್ (೧೯೫೮)
  • ಮುತಾಸ್ಸಿ (೧೯೬೨)
  • ಮಝುವಿಂಟೆ ಕಥಾ (೧೯೬೬)
  • ಅಂಬಾತಥಿಲೇಕು (೧೯೬೭)
  • ನಾಗರಥಿಲ್ (೧೯೬೮)
  • ವೇಯ್ಲಾರಂಬಂಬೋಲ್ (೧೯೭೧)
  • ಅಮೃತಂಗಯಾಮ (೧೯೭೮)
  • ಸಂಧ್ಯಾ (೧೯೮೨)
  • ನಿವೇದ್ಯಾಮ್ (೧೯೮೭)
  • ೮ಮಾಥುರುದಿಯಾಮ್ (೧೯೮೮)
  • ನನ್ನ ಮಗಳು (ಮಲಯಾಳಂ) ಕುಲಕ್ಕಡವಿಲ್ಗೆ[] []

ಬಾಲಮಣಿ ಅಮ್ಮ ಸುಮಾರು ಐದು ವರ್ಷಗಳ ಕಾಲ ಅಲ್ಝೈಮರ್ನ ಕಾಯಿಲೆಯಿಂದ ಬಳಲುತ್ತಿದ್ದು ೨೯ ಸೆಪ್ಟೆಂಬರ್ ೨೦೦೪ ರಂದು ನಿಧನರಾದರು.[೧೦]

ಉಲ್ಲೇಖಗಳು

ಬದಲಾಯಿಸಿ
  1. http://mywordsnthoughts.com/myworld/all-about-kerala/balamani-amma-poetess-of-motherhood/
  2. https://en.wikipedia.org/wiki/K._M._George_(writer)(೧೯೯೮)books.google.co.in/books?id=MZqqyxVkufQC&printsec=frontcover&source=gbs_ge_summary_r&redir_esc=y#v=onepage&q&f=false https://en.wikipedia.org/wiki/Sahitya_Akademi
  3. www.google.com/search?q=ಬಾಲಮಣಿ+ಅಮ್ಮ&oq=ಬಾಲಮಣಿ+ಅಮ್ಮ&aqs=chrome..69i57j69i60.1730j0j7&client=tablet-android-samsung&sourceid=chrome-mobile&ie=UTF-8
  4. https://www.amritapuri.org/amma/life
  5. 3loOAAAAYAAJ&q=balamani+amma+got+padma+bhushan&dq=balamani+amma+got+padma+bhushan&hl=kn&sa=X&ved=0ahUKEwiOscasuaLhAhUA7nMBHYNBDxgQ6AEILjAC
  6. http://mahitivedhik.blogspot.com/2018/02/1991-2017.html
  7. http://mywordsnthoughts.com/myworld/tag/balamani-amma-awards/
  8. http://www.newindianexpress.com/states/kerala/2017/dec/06/balamani-amma-award-presented-to-mohanavarma-1719397.html
  9. http://www.paperbackswap.com/Balamani-Amma/author/
  10. search?client=tablet-android-samsung&ei=xoSbXOrJHNfTz7sPx9i_sAY&q=when+balamani+amma+died&oq=when+balamani+amma+died&gs_l=mobile-gws-wiz-serp.3..0i19j0i8i13i30i19l2.103.12087..12830...0.0..0.318.318.3-1......0....1.nF4PRRO3aCE