ಬಾರ್ಡರ್-ಗವಾಸ್ಕರ್ ಟ್ರೋಫಿ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿ. ಭಾರತದ ಸುನಿಲ್ ಗವಾಸ್ಕರ್ ಹಾಗೂ ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಅವರ ಹೆಸರನ್ನು ಈ ಸರಣಿಗೆ ಇಡಲಾಗಿದೆ. ಇವರಿಬ್ಬರೂ ತಮ್ಮ ತಂಡಗಳ ನಾಯಕರಾಗಿದ್ದವರು ಮತ್ತು ಇಬ್ಬರೂ ಟೆಸ್ಟ್ ಕ್ರಿಕೆಟ್ನಲ್ಲಿ ೧೦೦೦೦ ರನ್ನುಗಳನ್ನು ಗಳಿಸಿದ್ದಾರೆ. ಈ ಸರಣಿಯು ವಿಶ್ವದಲ್ಲಿಯೇ ಅತ್ಯಂತ ಪೈಪೋಟಿಯಿಂದ ಕೂಡಿರುವ ಸರಣಿಯೆಂಬ ಖ್ಯಾತಿ ಹೊಂದಿದೆ.
Border-Gavaskar Trophy | |
---|---|
ಚಿತ್ರ:Border–Gavaskar Trophy.jpg | |
ನಿರ್ವಾಹಣೆ | Cricket Australia and BCCI |
ಫಾರ್ಮ್ಯಾಟ್ | ಟೆಸ್ಟ್ |
ಮೊದಲ ಪಂದ್ಯಾವಳಿ | 1996 |
ಕೊನೆಯ ಪಂದ್ಯಾವಳಿ | 2016-17 |
ಮುಂದಿನ ಪಂದ್ಯಾವಳಿ | 2018-19 |
ಟೂರ್ನಮೆಂಟ್ ರೂಪ | series |
ತಂಡಗಳ ಸಂಖ್ಯೆ | 2 |
ಪ್ರಸ್ತುತ ಚಾಂಪಿಯನ್ | India (7th title) |
ಅತ್ಯಂತ ಯಶಸ್ವಿ | ಭಾರತ (7 titles)[೧] |
ಹೆಚ್ಚಿನ ರನ್ಗಳು | Sachin Tendulkar (2,380) |
ಹೆಚ್ಚಿನ ವಿಕೆಟ್ಗಳು | Anil Kumble (111) |
Australia tour of India in 2016–17 | |
ಸರಣಿಯ ಪ್ರಮುಖ ಪಂದ್ಯಗಳು
ಬದಲಾಯಿಸಿ- ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ೨೦೦೧ರಲ್ಲಿ ನಡೆದ ಎರಡನೆಯ ಟೆಸ್ಟ್.
- ಭಾರತಕ್ಕೆ ೧೭೧ ರನ್ನುಗಳಿಂದ ವಿಜಯ.
- ಹರಭಜನ್ ಸಿಂಗ್ಗೆ ಹ್ಯಾಟ್ರಿಕ್. ಹ್ಯಾಟ್ರಿಕ್ ಗಳಿಸಿದ ಭಾರತದ ಮೊದಲ ಬೌಲರ್.
- ವಿ ವಿ ಎಸ್ ಲಕ್ಷ್ಮಣ್ ೨೮೧ ರನ್. ಭಾರತದ ಬ್ಯಾಟ್ಸ್ಮನ್ ಒಬ್ಬರಿಂದ ಅತಿ ಹೆಚ್ಚು ರನ್ (ಅಂದಿಗೆ).
- ಭಾರತ ಫಾಲೋ ಆನ್ ಹೇರಿಸಿಕೊಂಡ ನಂತರವೂ ಪಂದ್ಯ ಗೆದ್ದ ಮೂರನೆಯ ತಂಡ.
- ೧೬ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಓಟಕ್ಕೆ ತಡೆ.
- ಮುಂಬೈಯ ವಾನಖೇಡೆ ಕ್ರೀಡಾಂಗಣದಲ್ಲಿ ೨೦೦೪ರಲ್ಲಿ ನಡೆದ ನಾಲ್ಕನೆಯ ಟೆಸ್ಟ್.
- ಭಾರತಕ್ಕೆ ೧೩ ರನ್ನುಗಳಿಂದ ಜಯ.
- ಎರಡು ದಿನಗಳಲ್ಲಿ ಪಂದ್ಯ ಮುಕ್ತಾಯ. ಅತಿ ಕಡಿಮೆ ಅವಧಿಯಲ್ಲಿ ಮುಗಿದ ಪಂದ್ಯಗಳಲ್ಲೊಂದು.
- ಸಿಡ್ನಿಯಲ್ಲಿ ೨೦೦೭ರಲ್ಲಿ ನಡೆದ ಎರಡನೆಯ ಟೆಸ್ಟ್.
- ಕೇವಲ ೧೩ ನಿಮಿಷಗಳ ಆಟ (ಎರಡು ಓವರ್) ಬಾಕಿ ಇರುವಾಗ ಆಸ್ಟ್ರೇಲಿಯಾಗೆ ಜಯ.
- ಪ್ರಸಿದ್ಧ ತೀರ್ಪುದಾರರಾದ ಸ್ಟೀವ್ ಬಕ್ನರ್ ಅವರ ವಿವಾದಾತ್ಮಕ ತೀರ್ಪುಗಳಿಗಾಗಿ ಕುಖ್ಯಾತ.
- ಹರಭಜನ್ ಸಿಂಗ್ ಅವರ ಮೇಲೆ ಜನಾಂಗೀಯ ನಿಂದನೆಯ ಆರೋಪ.
- ಪರ್ತ್ನಲ್ಲಿ ೨೦೦೭ರಲ್ಲಿ ನಡೆದ ಮೂರನೆಯ ಟೆಸ್ಟ್.
- ಭಾರತಕ್ಕೆ ೭೨ ರನ್ನುಗಳ ಜಯ.
- ೧೬ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಓಟಕ್ಕೆ ಎರಡನೆಯ ಬಾರಿಗೆ ಭಾರತದಿಂದ ಅಡ್ಡಿ.
- ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೨೦೧೦ರಲ್ಲಿ ನಡೆದ ಎರಡನೆಯ ಟೆಸ್ಟ್.
- ಭಾರತಕ್ಕೆ ೭ ವಿಕೆಟ್ಗಳ ಜಯ.
- ಸಚಿನ್ ತೆಂಡೂಲ್ಕರ್ ೧೪೦೦೦ ರನ್, ೬ನೇ ದ್ವಿಶತಕ.
ಉಲ್ಲೇಖಗಳು
ಬದಲಾಯಿಸಿ- ↑ "Records / Border-Gavaskar Trophy / Series results". espncricinfo.com.